ನಿನ್ನೆಯಷ್ಟೇ ಪರಿಚಯ.. 500+ Km ರೇಂಜ್, ನೂತನ ಟೊಯೊಟಾ SUV..

ನಿನ್ನೆ ಹೊಚ್ಚ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಎಬೆಲ್ಲಾ (Toyota Urban Cruiser Ebella) ಕಾರನ್ನು ಪರಿಚಯಿಸಲಾಗಿದೆ. ಈಗಾಗಲೇ, ಬುಕ್ಕಿಂಗ್‌ ಶುರುವಾಗಿದ್ದು, ಆಸಕ್ತ ಗ್ರಾಹಕರು ರೂ.25,000 ಮುಂಗಡ ಹಣ ಪಾವತಿಸುವ ಮೂಲಕ ಕಾಯ್ದಿರಿಸಬಹುದು. ನೀವು ನೂತನ ಎಲೆಕ್ಟ್ರಿಕ್ ಎಸ್‌ಯುವಿಯೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, ಇದೇ 'ಅರ್ಬನ್ ಕ್ರೂಸರ್ ಎಬೆಲ್ಲಾ' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಕಾರಿನ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.

Tata: ಟಾಟಾ ಪಂಚ್ ಫೇಸ್‌ಲಿಫ್ಟ್ ಖರೀದಿಸುವ ಪ್ಲಾನ್ ಇದೆಯೇ?

Explore the Tata Punch Facelift review: price, specs, engine details, driving impressions, and more. Is it the right choice? Find out here. ಟಾಟಾ ಪಂಚ್ ಫೇಸ್‌ಲಿಫ್ಟ್ ವಿಮರ್ಶೆಯನ್ನು ಅನ್ವೇಷಿಸಿ: ಬೆಲೆ, ವಿಶೇಷಣಗಳು, ಎಂಜಿನ್ ವಿವರಗಳು, ಚಾಲನಾ ಅನಿಸಿಕೆಗಳು ಮತ್ತು ಇನ್ನಷ್ಟು. ಇದು ಸರಿಯಾದ ಆಯ್ಕೆಯಾಗಿದೆಯೇ? ಇಲ್ಲಿ ಕಂಡುಕೊಳ್ಳಿ.

Maruti: 543 ಕಿಲೋಮೀಟರ್‌ ರೇಂಜ್.. ಅತಿ ಶೀಘ್ರದಲ್ಲೇ ಹೊಸ ಮಾರುತಿ..

ನೂತನ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಕಾರಿನ ಬಿಡುಗಡೆಗಾಗಿ ಗ್ರಾಹಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ನೋಡಲು ಕೂಡ ತುಂಬಾ ಚೆನ್ನಾಗಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಈ ಕಾರು ಕೆಲವೇ ದಿನಗಳಲ್ಲಿ ಮಾರಾಟಕ್ಕೂ ಬರಲಿದೆ. ಅಧಿಕೃತ ದಿನಾಂಕದ ಬಗ್ಗೆ ಕಂಪನಿಯು ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಶೀಘ್ರದಲ್ಲೇ ಖರೀದಿದಾರರಿಗೆ ಸಿಹಿಸುದ್ದಿ ಸಿಗುವ ನಿರೀಕ್ಷೆಯಿದೆ.

Toyota: ಇದೆ ನೋಡಿ ಟೊಯೋಟಾ ಎಲೆಕ್ಟ್ರಿಕ್ ಎಸ್‌ಯುವಿ

ಜಪಾನ್‌ ಮೂಲದ ಅತಿದೊಡ್ಡ ವಾಹನ ತಯಾರಕ ಕಂಪನಿ ಟೊಯೋಟಾ (Toyota), ಮಾರುತಿ ಸುಜುಕಿದೊಂದಿಗಿನ ಪಾಲುದಾರಿಕೆಯನ್ನು ಬಳಸಿಕೊಂಡು ಭಾರತಕ್ಕೆ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದೆ. ಮಾರುತಿ ಸುಜುಕಿಯ ಇ-ವಿಟಾರಾದ ಕ್ರಾಸ್-ಬ್ಯಾಡ್ಜ್ಡ್ ಆವೃತ್ತಿಯಾಗಿರುವ ಟೊಯೋಟಾ ಅರ್ಬನ್ ಕ್ರೂಸರ್ ಎಬೆಲ್ಲಾ (Toyota Urban Cruiser Ebella) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಇಂದು ಭಾರತದಲ್ಲಿ ಅನಾವರಣಗೊಳಿಸಲಾಗಿದೆ. ಬುಕಿಂಗ್‌ಗಳು ಇಂದಿನಿಂದ (ಜನವರಿ 20) ಪ್ರಾರಂಭವಾಗಿವೆ. ಆದರೆ ಬೆಲೆಗಳನ್ನು ಹಾಗೂ ಕಾರನ್ನು ಖರೀದಿದಾರರಿಗೆ ಯಾವಾಗ ಡಲಿವರಿ ನೀಡುತ್ತದೆ ಎಂಬುದರ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ.
Advertisement

Tata: ಪವರ್ ತೋರಿಸಿದ ಟಾಟಾ.. ಅಗ್ಗದ ಹೊಸ ಕಾರಿಗೆ 5-ಸ್ಟಾರ್ ಸೇಫ್ಟಿ..

ಇತ್ತೀಚೆಗೆ 2026ರ ನೂತನ ಟಾಟಾ ಪಂಚ್ ಫೇಸ್‌ಲಿಫ್ಟ್ (Tata Punch Facelift) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಕಾರು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅದಕ್ಕೆ ತಕ್ಕಂತೆ ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದೆ. ಸದ್ಯ ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಭಾರತ್ ಎನ್‌ಸಿಎಪಿ (Bharat NCAP) 'ಪಂಚ್ ಫೇಸ್‌ಲಿಫ್ಟ್'ನ್ನು ಅತ್ಯಂತ ಸುರಕ್ಷಿತ ಕಾರೆಂದು ತೀರ್ಮಾನಿಸಿದೆ.

Bajaj: ಬಡವರು ಕೂಡ ಖರೀದಿಸುವ ಬೆಲೆಯಲ್ಲಿ ಸ್ಟೈಲಿಷ್ ಬಜಾಜ್ ಬೈಕ್

ಪ್ರಮುಖ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಪಲ್ಸರ್ (Bajaj Pulsar), ಇಂದು ತನ್ನ ಜನಪ್ರಿಯ ಪಲ್ಸರ್ 125 (Pulsar 125) ಅನ್ನು ಹೊಸ ಅಪ್‌ಡೇಟ್‌ನೊಂದಿಗೆ ಬಿಡುಗಡೆ ಮಾಡಿದೆ. ಹೊಸ LED ಹೆಡ್‌ಲ್ಯಾಂಪ್ ಮತ್ತು LED ಬ್ಲಿಂಕರ್‌ಗಳನ್ನು ಪರಿಚಯಿಸಿದೆ. ಜೊತೆಗೆ ರಿಫ್ರೆಶ್ ಮಾಡಿದ ಬಣ್ಣಗಳು ಮತ್ತು ಗ್ರಾಫಿಕ್ಸ್ ಜೊತೆಗೆ ಬೈಕ್ ಇನ್ನಷ್ಟು ಸ್ಪೋರ್ಟಿ ಲುಕ್ ಪಡೆದುಕೊಂಡಿದೆ. ಒಟ್ಟಾರೆ ನವೀಕರಿಸಿದ ಪಲ್ಸರ್ 125 ಅತ್ಯುತ್ತಮವಾದ ವಿನ್ಯಾಸವನ್ನು ಪಡೆದುಕೊಂಡಿದ್ದು, ತನ್ನ ವಿಭಾಗದಲ್ಲಿಯೇ ಸ್ಟೈಲಿಷ್ ಮೋಟಾರ್‌ಸೈಕಲ್ ಆಗಿ ಹೊರಹೊಮ್ಮಿದೆ.

Bajaj: ಬಿಡುಗಡೆಗೂ ಮೊದಲೇ ಶೋರೂಂಗೆ ಬಂತು ಹೊಸ ಬಜಾಜ್ ಪಲ್ಸರ್..

ಬಜಾಜ್ ಪಲ್ಸರ್ (Bajaj Pulsar) ಪ್ರಖ್ಯಾತ ಮೋಟಾರ್‌ಸೈಕಲ್‌ ಆಗಿ ಹೊರಹೊಮ್ಮಿದೆ. ಇದು ವಿವಿಧ ರೂಪದಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಸದ್ಯ ಈ ಬೈಕ್‌ನ ಲೈನ್ಅಪ್‌ನ್ನು ವಿಸ್ತರಿಸಲು ಕಂಪನಿಯು ಮುಂದಾಗಿದೆ. ಅತಿ ಶೀಘ್ರದಲ್ಲೇ ನವೀಕರಿಸಿದ 'ಪಲ್ಸರ್ 125'ನ್ನು ಬಿಡುಗಡೆಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಹೊಸ ಮೋಟಾರ್‌ಸೈಕಲ್‌ ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿರಲಿದ್ದು, ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿರುವ ನಿರೀಕ್ಷೆಯಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Ampere: ಹೊಸ ಸ್ಕೂಟರ್ ಬಿಡುಗಡೆ: ಖರ್ಚಿಲ್ಲದೆ 100 ಕಿ.ಮೀ ಓಡಿಸಬಹುದು

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹೊಸ ಬ್ರಾಂಡ್‌ಗಳಿಂದ ಸಾಲು ಸಾಲು ಇವಿ ದ್ವಿಚಕ್ರ ವಾಹನಗಳು ದೇಶದಲ್ಲಿ ಬಿಡುಗಡೆಯಾಗುತ್ತಿವೆ. ಉತ್ತಮ ಡಿಸೈನ್, ಆಕರ್ಷಕ ಫೀಚರ್ಸ್ ಹಾಗೂ ಅತ್ಯುತ್ತಮ ರೇಂಜ್ ನೀಡುವ ಮೂಲಕ ಪ್ರಸ್ತುತ ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರತದಲ್ಲಿ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳಿಗೆ ಪೈಪೋಟಿ ನೀಡುತ್ತಿವೆ. ಮೊನ್ನೆಯಷ್ಟೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಆಂಪಿಯರ್, ತನ್ನ ಆಂಪಿಯರ್ ಮ್ಯಾಗ್ನಸ್ ಜಿ ಮ್ಯಾಕ್ಸ್ (Ampere Magnus G Max) ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದು ಕೂಡ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಸ್ಕೂಟರ್‌ನ ಪ್ರಮುಖ ವಿಶೇಷತೆಗಳು ಇಲ್ಲಿವೆ.

Skoda: ಹೊಸ ಸ್ಕೋಡಾ ಕಾರು ಅನಾವರಣ: ಕ್ರೆಟಾಗೆ ಸರಿಯಾದ ಪೈಪೋಟಿ!

ಪ್ರಮುಖ ಕಾರು ತಯಾರಕರಾದ ಸ್ಕೋಡಾ, ಭಾರತೀಯ ಮಾರುಕಟ್ಟೆಗೆ ಹೊಚ್ಚ ಹೊಸ 2026 ಸ್ಕೋಡಾ ಕುಶಾಕ್ ಫೇಸ್‌ಲಿಫ್ಟ್ (2026 Skoda Kushaq facelift) ಅನ್ನು ಅನಾವರಣಗೊಳಿಸಿದೆ. ಈಗ ರೂ. 15,000 ಪಾವತಿಸಿ ಹೊಸ ಕುಶಾಕ್ ಎಸ್‌ಯುವಿಯ ಪ್ರೀ-ಬುಕಿಂಗ್ ಮಾಡಬಹುದು. ಮಾರ್ಚ್ 2026 ರಲ್ಲಿ ಬೆಲೆಗಳನ್ನು ಘೋಷಿಸಿ, ಅದೇ ತಿಂಗಳಾಂತ್ಯದ ವೇಳೆಗೆ ಡೆಲಿವರಿಗಳನ್ನು ಪ್ರಾರಂಭಿಸಿಲಿದ್ದಾರೆ. ನವೀಕರಿಸಿದ ಕುಶಾಕ್ ಅನ್ನು ಈಗ ಶಿಮ್ಲಾ ಗ್ರೀನ್, ಸ್ಟೀಲ್ ಗ್ರೇ ಮತ್ತು ಚೆರ್ರಿ ರೆಡ್ ಎಂಬ ಮೂರು ಹೊಸ ಬಣ್ಣಗಳಲ್ಲಿ ನೀಡಲಾಗುವುದು.

Toyota: 543 Km ಓಡುತ್ತೆ.. ಟೊಯೊಟಾದ ಮೊದಲ ಎಲೆಕ್ಟ್ರಿಕ್ ಕಾರು..

ಬಹುನಿರೀಕ್ಷಿತ ಟೊಯೊಟಾ ಅರ್ಬನ್ ಕ್ರೂಸರ್ ಎಬೆಲ್ಲಾ ಇವಿ (Toyota Urban Cruiser Ebella EV) ಅದ್ದೂರಿಯಾಗಿ ಅನಾವರಣಗೊಂಡಿದೆ. ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅತಿ ಶೀಘ್ರದಲ್ಲೇ ಬಿಡುಗಡೆಗೂ ಆಗಲಿದೆ. ಬನ್ನಿ.. ನೂತನ 'ಅರ್ಬನ್ ಕ್ರೂಸರ್ ಎಬೆಲ್ಲಾ' ಯಾವೆಲ್ಲ ವಿಶೇಷತೆಗಳನ್ನು ಒಳಗೊಂಡಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Hero: ಆಫೀಸ್‌ಗೆ ಹೋಗುವವರಿಗೆ ಬೆಸ್ಟ್ ಚಾಯ್ಸ್.. 76,000 ರೂಪಾಯಿ..

ಹೀರೋ ಜೂಮ್ 110 (Hero Xoom 110) ಜನಪ್ರಿಯ ಸ್ಕೂಟರ್ ಆಗಿದೆ. ಇದು ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಆಫೀಸ್‌ಗೆ ಹೋಗುವವರು ಸುಲಭವಾಗಿ ಬಳಕೆ ಮಾಡಬಹುದು. ನೀವು ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ ' ಜೂಮ್ 110' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ನೂತನ ಸ್ಕೂಟರ್‌ನ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Bajaj Chetak: ಬೆಲೆ ಇಳಿಕೆ: ಈಗ ಬಡವರು ಖರೀದಿಸಬಹುದು

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ಲಿಮಿಟೆಡ್, ಕಳೆದ ವಾರ ಬಿಡುಗಡೆ ಮಾಡಿರುವ ಹೊಸ ಬಜಾಜ್ ಚೇತಕ್ C25 (Bajaj Chetak C25) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಶೋರೂಂಗಳಿಗೆ ತಲುಪಿಸಿದ್ದು, ಮಾರಾಟಕ್ಕೆ ಸಿದ್ಧವಾಗಿವೆ ಎಂದು ಘೋಷಿಸಿದೆ. ಈ ಹೊಸ ಸ್ಕೂಟರ್‌ಗೆ ಬಲವಾದ ಮತ್ತು ಉತ್ಸಾಹಭರಿತ ಪ್ರತಿಕ್ರಿಯೆ ಸಿಕ್ಕಿದ್ದು, ಮಾರುಕಟ್ಟೆಗಳಲ್ಲಿ ಗಮನಾರ್ಹ ಗ್ರಾಹಕರ ಆಸಕ್ತಿಯನ್ನು ಹುಟ್ಟುಹಾಕಿದೆ. ರೂ. 91,399 (ಎಕ್ಸ್-ಶೋರೂಂ) ಬೆಲೆಯ ಚೇತಕ್ C25 ಈಗ ರೂ. 87,100 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಮೊದಲ 10,000 ಗ್ರಾಹಕರಿಗೆ ಮಾತ್ರ ನೀಡಲಾಗುತ್ತಿದೆ.
Advertisement

ಬಡವರಿಗೆ ಪರ್ಫೆಕ್ಟ್ ಬೈಕ್‌ಗಳಿವು.. ಬೆಲೆ ಇಷ್ಟೇನಾ, ರೂ.69,000..

ದಿನಬಳಕೆಗೆ ಮೋಟಾರ್‌ಸೈಕಲ್‌ಗಳು ಬೇಕೇ ಬೇಕು. ಇವುಗಳನ್ನು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸುಲಭವಾಗಿ ಬಳಕೆ ಮಾಡಬಹುದು. ನೀವು ಹೊಚ್ಚ ಹೊಸ ಬೈಕ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ '110 ಸಿಸಿ' ಮೋಟಾರ್‌ಸೈಕಲ್‌ಗಳಾದ ಬಜಾಜ್ ಪ್ಲಾಟಿನಾ 110, ಟಿವಿಎಸ್ ಸ್ಟಾರ್ ಸಿಟಿ ಪ್ಲಸ್, ಟಿವಿಎಸ್ ರೇಡಿಯನ್, ಬಜಾಜ್ ಸಿಟಿ 110ಎಕ್ಸ್ ಹಾಗೂ ಹೋಂಡಾ ಲಿಯೋಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

Tata Punch: 2026 ಟಾಟಾ ಪಂಚ್ ಫೇಸ್‌ಲಿಫ್ಟ್ ಖರೀದಿಸುತ್ತಿದ್ದೀರಾ?

ಟಾಟಾ ಮೋಟಾರ್ಸ್ (Tata Motors) ಇತ್ತೀಚೆಗೆ ಭಾರತದಲ್ಲಿ ತನ್ನ ಪಂಚ್ ಫೇಸ್‌ಲಿಫ್ಟ್ (Tata Punch Facelift) ಅನ್ನು ರೂ.5.59 ಲಕ್ಷದಿಂದ (ಎಕ್ಸ್ - ಶೋರೂಂ) ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾಗಿದೆ. ಹಳೆಯ ಮಾಡೆಲ್‌ಗಿಂತ ಗಮನಾರ್ಹವಾದ ಸ್ಟೈಲಿಂಗ್, ಫೀಚರ್ಸ್ ಮತ್ತು ಪವರ್‌ ಟ್ರೇನ್ ನವೀಕರಣಗಳನ್ನು ಪಡೆದುಕೊಂಡಿದೆ. ನೀವು ಹೊಸ ಪಂಚ್ ಫೇಸ್‌ ಲಿಫ್ಟ್ ಕಾರನ್ನು ಖರೀದಿಸಲು ನೋಡುತ್ತಿದ್ದರೆ, ಖಂಡಿತ ತಿಳಿದಿರಬೇಕಾದ 2026 ಟಾಟಾ ಪಂಚ್ ಫೇಸ್‌ ಲಿಫ್ಟ್‌ನ ಐದು ಪ್ರಮುಖ ಮುಖ್ಯಾಂಶಗಳು ಇಲ್ಲಿವೆ.

Tata: 9.66 ಲಕ್ಷ ರೂಪಾಯಿ.. ಭೀಮ ಬಲದ ಟಾಟಾ ಕಾರಿದು, ಆದರೂ..

ಟಾಟಾ ಕರ್ವ್ (Tata Curvv) ಪ್ರಖ್ಯಾತ ಕೂಪೆ ಎಸ್‌ಯುವಿಯಾಗಿದೆ. ಆದರೂ ಈ ಕಾರನ್ನು ಕೊಂಡುಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದು, ದಿನದಿಂದ ದಿನಕ್ಕೆ ಮಾರಾಟ ಸಂಖ್ಯೆಯೂ ಕುಸಿತವಾಗುತ್ತಿದೆ. ಕಳೆದ ತಿಂಗಳು (ಡಿಸೆಂಬರ್ - 2025) ಅದು ಮುಂದುವರಿದಿದೆ. ಒಟ್ಟು 1,104 ಯುನಿಟ್‌ಗಳನ್ನು ಮಾತ್ರ ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 4,994 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 77.89% ಇಳಿಕೆಯಾಗಿದೆ.

Renault Duster: ಇನ್ನೊಂದೇ ವಾರದಲ್ಲಿ ಅಚ್ಚರಿಗೊಳಿಸಲಿದೆ ರೆನಾಲ್ಟ್

ಹೊಸ ರೆನಾಲ್ಟ್ ಡಸ್ಟರ್ (Renault Duster) 2026 ಜನವರಿ 26 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಈಗಾಗಲೇ ದೃಢಪಡಿಸಲಾಗಿದೆ. ಮೂಲತಃ ಡಸ್ಟರ್ ಅನ್ನು 2012 ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು, ನಂತರ ಇದನ್ನು 2022 ರಲ್ಲಿ ಸ್ಥಗಿತಗೊಳಿಸಲಾಯಿತು. ಬ್ರ್ಯಾಂಡ್ ಇತ್ತೀಚೆಗೆ ಮುಂಬರುವ ರೆನಾಲ್ಟ್ ಡಸ್ಟರ್ 2026ರ ಮೊದಲ ಟೀಸರ್ ಅನ್ನು ಹಂಚಿಕೊಂಡಿದೆ. ಡಸ್ಟರ್‌ನ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಪವರ್‌ಟ್ರೇನ್ ಬಗೆಗಿನ ಪ್ರಮುಖ ವಿವರಗಳು ಇಲ್ಲಿವೆ.

Toyota: ನಾಳೆ ಟೊಯೊಟಾದ ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆ..

ನಾಳೆ (ಜ.20) ಬಹುನಿರೀಕ್ಷಿತ ಟೊಯೊಟಾ ಅರ್ಬನ್ ಕ್ರೂಸರ್ ಇವಿ (Toyota Urban Cruiser EV) ಬಿಡುಗಡೆಯಾಗಲಿದೆ. ಇದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದ್ದು, ನೋಡಲು ತುಂಬಾ ಚೆನ್ನಾಗಿರಲಿದೆ. ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿರಲಿದೆ. ಕೈಗೆಟುಕುವ ದರದಲ್ಲೂ ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ. ಬನ್ನಿ, ಈ 'ಅರ್ಬನ್ ಕ್ರೂಸರ್ ಇವಿ'ಯ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Ampere: 1 ಲಕ್ಷಕ್ಕಿಂತ ಕಮ್ಮಿ ಬೆಲೆಯ ಸ್ಕೂಟರ್ ಬಿಡುಗಡೆ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಆಂಪಿಯರ್, ಇಂದು ತನ್ನ ಆಂಪಿಯರ್ ಮ್ಯಾಗ್ನಸ್ ಜಿ ಮ್ಯಾಕ್ಸ್ (Ampere Magnus G Max) ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಹೊಸ ಮ್ಯಾಗ್ನಸ್ ಜಿ ಮ್ಯಾಕ್ಸ್ ಸ್ಕೂಟರ್ ಅನ್ನು ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿ ಇಕೊ ಮೋಡ್‌ನಲ್ಲಿ 100 ಕಿ.ಮೀಗಿಂತ ಹೆಚ್ಚು ದೂರ ಓಡಿಸಬಹುದು. ದೊಡ್ಡ ಬೂಟ್ ಸಂಗ್ರಹಣೆ ಮತ್ತು ವಿಶ್ವಾಸಾರ್ಹ ಎಲ್‌ಎಫ್‌ಪಿ ಬ್ಯಾಟರಿಯೊಂದಿಗೆ ಈ ಸ್ಕೂಟರ್ ಅನ್ನು ನಿರ್ಮಿಸಲಾಗಿದೆ. 1 ಲಕ್ಷಕ್ಕಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಹುಡುಕುತ್ತಿರುವವರಿಗೆ ಇದು ಬೆಸ್ಟ್ ಆಯ್ಕೆಯಾಗಲಿದೆ ಎಂದು ಕಂಪನಿ ಭರವಸೆ ನೀಡಿದೆ.

ಕರ್ನಾಟಕ ಇಂಧನ ದರಗಳ ನವೀಕರಣವು ಸ್ಥಳೀಯ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ತೋರಿಸುತ್ತದೆ

ಜನವರಿ 19 ರಂದು ಕರ್ನಾಟಕ ಇಂಧನ ದರಗಳ ಬಗ್ಗೆ ಮಾಹಿತಿ ಪಡೆಯಿರಿ, ಬೆಂಗಳೂರು ಮತ್ತು ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಬದಲಾಗುತ್ತವೆ, ಪ್ರಾದೇಶಿಕ ನವೀಕರಣಗಳು ಮತ್ತು ಪ್ರಮುಖ ಸನ್ನಿವೇಶದೊಂದಿಗೆ.

Honda: ಸ್ಟೈಲಿಶ್ ಸ್ಕೂಟರ್‌ಯಿದು.. ಯುವಕರು ಮೆಚ್ಚಿದ್ದಾರೆ..

ಹೋಂಡಾ ಡಿಯೋ 110 (Honda Dio 110) ಜನಪ್ರಿಯ ಸ್ಕೂಟರ್ ಎಂದೇ ಹೆಸರುವಾಸಿಯಾಯಾಗಿದೆ. ಇದು ಸಖತ್ ಸ್ಟೈಲಿಶ್ ಲುಕ್ ಹೊಂದಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ ಯುವ ಗ್ರಾಹಕರು ಕೂಡ ಮೆಚ್ಚಿಕೊಂಡಿದ್ದಾರೆ. ನೀವು ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ಡಿಯೋ 110' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ನೂತನ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
Advertisement

VinFast: ಭಾರತೀಯರಿಗೆ ಬೇಕಾಗಿರೋದು ಇಷ್ಟೇನಾ? 7-ಸೀಟರ್ ಕೊಡಲು ರೆಡಿ

ವಿಯೆಟ್ನಾಂ ಮೂಲದ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ ವಿನ್‌ಫಾಸ್ಟ್ (VinFast), ಭಾರತದಲ್ಲಿ ತನ್ನ ಹೊಸ ಮಾಡಲ್‌ಗಳಾದ ವಿನ್‌ಫಾಸ್ಟ್ VF6 ಮತ್ತು VF7 ಕಾರುಗಳನ್ನು ಭರ್ಜರಿಯಾಗಿ ಮಾರಾಟ ಮಾಡುತ್ತಿದೆ. ದೇಶದಲ್ಲಿ ಈ ಕಾರುಗಳಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಇದೀಗ ಕಂಪನಿಯ ಸಿಇಒ 'ತಪನ್ ಘೋಷ್' ಹೊಸ ಮಾಡಲ್‌ಗಳ ಬಿಡುಗಡೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವಿನ್‌ಫಾಸ್ಟ್ ಇಂಡಿಯಾ ಈ ವರ್ಷ ದೇಶದಲ್ಲಿ ಮೂರು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ, ಅವುಗಳ ಮಾರಾಟ ಮೂಲಸೌಕರ್ಯವನ್ನು ದ್ವಿಗುಣಗೊಳಿಸಲು ಯೋಜಿಸುತ್ತಿದೆ ಎಂದು ಸಿಇಒ ತಪನ್ ಘೋಷ್ ತಿಳಿಸಿದ್ದಾರೆ. ಮುಂಬರಲಿರುವ ಹೊಸ ಕಾರುಗಳನ್ನು ಪ್ರೀಮಿಯಂ ಆಗಿ ವಿನ್ಯಾಸಗೊಳಿಸಲಾಗಿದ್ದು, ಬೆಲೆ ಪ್ರಜ್ಞೆಯ ಭಾರತೀಯ ಗ್ರಾಹಕರಿಗೆ ಬಲವಾದ ಮೌಲ್ಯವನ್ನು ನೀಡುವ ಗುರಿಯನ್ನು ಹೊಂದಿದ್ದೇವೆ. "ನಾವು ಮೊದಲು 7-ಸೀಟರ್ MPV ಅನ್ನು ಬಿಡುಗಡೆ ಮಾಡುವ ಮೂಲಕ ಪ್ರಾರಂಭಿಸುತ್ತೇವೆ. ಇದು ಕುಟುಂಬ ಮತ್ತು ವಾಣಿಜ್ಯ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾದ ಪ್ರೀಮಿಯಂ ಎಲೆಕ್ಟ್ರಿಕ್ ವಿದ್ಯುತ್ MPV ಆಗಿದೆ" ಎಂದು ಘೋಷ್ ಹೇಳಿದ್ದಾರೆ.

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನಿಗೆ ಸಿಕ್ತು ಜನಪ್ರಿಯ ಮಾರುತಿ..

ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 12ಕ್ಕೆ ಭಾನುವಾರ ಅದ್ದೂರಿ ತೆರೆ ಬಿದ್ದಿದೆ. ಗಿಲ್ಲಿ ನಟ (Gilli Nata) ಜಯಶಾಲಿಯಾಗಿದ್ದಾರೆ. ರಕ್ಷಿತಾ ಮೊದಲ ರನ್ನರ್ ಅಪ್ ಆಗಿದ್ದು, ಅಶ್ವಿನಿ ಗೌಡ ಎರಡನೇ ರನ್ನರ್ ಅಪ್ ಆಗಿದ್ದಾರೆ. ಗಿಲ್ಲಿಗೆ ಬಿಗ್ ಬಾಸ್ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ನಗದು ಲಭಿಸಿದೆ. ಇದರೊಂದಿಗೆ ಜನಪ್ರಿಯ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಕಾರು ಸಹ ಬಹುಮಾನವಾಗಿ ಸಿಕ್ಕಿದೆ.

Tata Punch Facelift: ಬೇರೆ ಕಂಪನಿಗಳು ಕನಸಲ್ಲೂ ಊಹಿಸಿರಲಿಲ್ಲ

ಭಾರತದಲ್ಲಿ ಸಣ್ಣ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬಹುತೇಕ ಎಲ್ಲಾ ಬ್ರಾಂಡ್‌ಗಳು ಒಂದೊಂದು ಮೈಕ್ರೋ ಎಸ್‌ಯುವಿಗಳನ್ನು ಮರಾಟ ಮಾಡುತ್ತಿವೆ. ಈ ವಿಭಾಗದಲ್ಲಿ ಮೊದಲಿನಿಂದಲ್ಲೂ ಟಾಟಾ ಪಂಚ್ ಉತ್ತಮ ಮಾರಾಟ ಕಾಣುವ ಎಸ್‌ಯುವಿಯಾಗಿ ಹೆಸರು ಮಾಡಿದೆ. ಆದರೆ ಪ್ರತಿಸ್ಪರ್ಧಿಗಳಿಂದ ಪೈಪೋಟಿ ಹೆಚ್ಚಾಗಿರುವ ಕಾರಣ ಟಾಟಾ ಮೋಟಾರ್ಸ್ ಈ ಬಾರಿ ಪಂಚ್‌ಗೆ ಹೊಸ ಫೇಸ್‌ಲಿಫ್ಟ್ (Tata Punch Facelift) ಪರಿಚಯಿಸಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ 2026ರ ಟಾಟಾ ಪಂಚ್ ಫೇಸ್‌ಲಿಫ್ಟ್ ಹಳೆಯ ಮಾಡೆಲ್‌ಗಿಂತ ಗಮನಾರ್ಹವಾದ ಸ್ಟೈಲಿಂಗ್, ಫೀಚರ್ಸ್ ಮತ್ತು ಪವರ್‌ಟ್ರೇನ್ ನವೀಕರಣಗಳನ್ನು ಪಡೆದುಕೊಂಡಿದೆ. ಬನ್ನಿ ಎರಡನ್ನು ಹೋಲಿಕೆ ಮಾಡೋಣ.

Hero: 275 Km ಓಡುತ್ತೆ? ಸದ್ದಿಲ್ಲದೇ ಹೀರೋದಿಂದ ಹೊಸ ಎಲೆಕ್ಟ್ರಿಕ್..

ಹೀರೋ ಮೋಟೋಕಾರ್ಪ್‌ನ ಎಲೆಕ್ಟ್ರಿಕ್ ಮೊಬಿಲಿಟಿ ಬ್ರ್ಯಾಂಡ್ ಆಗಿ 'ವಿಡಾ' ಮನೆ ಮಾತಾಗಿದೆ. ದೇಶೀಯವಾಗಿ ವಿಡಾ ವಿ2 ಹಾಗೂ ವಿಡಾ ವಿಎಕ್ಸ್2 ಹೆಸರಿನ ಇ-ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಇವು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿವೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ 'ಹೀರೋ' ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾರುಕಟ್ಟೆಯನ್ನು ಪ್ರವೇಶಿಸಲು ಸರ್ವ ಸನ್ನದವಾಗಿದೆ. ಭಾರತದಲ್ಲಿ ಮುಂಬರುವ 'ವಿಡಾ ವಿಎಕ್ಸ್‌ಝಡ್' ಇ-ಬೈಕ್ ವಿನ್ಯಾಸಕ್ಕಾಗಿ ಪೇಟೆಂಟ್‌ನ್ನು ಪಡೆದಿದೆ.

ಜನ ಸಾಲು ಕಟ್ಟುವರು.. ರೂ.7 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ 5..

ಭಾರತದ ಕಾರು ಮಾರುಕಟ್ಟೆಯಲ್ಲಿ ಎಸ್‌ಯುವಿಗಳಿಗೆ ಭಾರೀ ಬೇಡಿಕೆಯಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿವೆ. ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ನೀವು ರೂ.7 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಹೊಚ್ಚ ಹೊಸ ಎಸ್‌ಯುವಿಯೊಂದನ್ನು ಖರೀದಿಯಲು ಆಲೋಚಿಸಿದ್ದೀರಾ.. ಹಾಗಾದರೆ, ಟಾಟಾ ಪಂಚ್, ಮಾರುತಿ ಸುಜುಕಿ ಫ್ರಾಂಕ್ಸ್, ಹ್ಯುಂಡೈ ಎಕ್ಸ್‌ಟರ್, ನಿಸ್ಸಾನ್ ಮ್ಯಾಗ್ನೈಟ್ ಹಾಗೂ ರೆನಾಲ್ಟ್ ಕೈಗರ್‌ಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ, ಇವುಗಳ ದರವೆಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.