Hyundai: 28.40 ಕಿ.ಮೀ ಮೈಲೇಜ್... ಹ್ಯುಂಡೈ ಟ್ಯಾಕ್ಸಿ ಕಾರು ಬಿಡುಗಡೆ
ಆಟೋಮೊಬೈಲ್ಸ್
- 8 month, 24 days ago
ಹ್ಯುಂಡೈ (Hyundai) ಕಂಪನಿಯು ವಾಣಿಜ್ಯ ವಾಹನ ವಿಭಾಗಕ್ಕೆ ಎರಡು ಸೆಡಾನ್‌ಗಳನ್ನು ಪರಿಚಯಿಸುವ ಮೂಲಕ ಟ್ಯಾಕ್ಸಿ ರಂಗಕ್ಕೆ ಎಂಟ್ರಿ ಕೊಟ್ಟಿದೆ. ಹೊಸ ಕೈಗೆಟುಕುವ ಕಾರುಗಳು ಟ್ಯಾಕ್ಸಿ ನಿರ್ವಾಹಕರಿಗೆ ತಮ್ಮ ಕಾರ್ಯಾಚರಣೆ ಮತ್ತು ಆದಾಯವನ್ನು ಹೆಚ್ಚಿಸಲಿವೆ. ನಂಬಿಕೆ, ವಿಶ್ವಾಸಾರ್ಹತೆ, ಕಡಿಮೆ ಮಾಲೀಕತ್ವದ ವೆಚ್ಚ ಮತ್ತು ಬಲವಾದ ಗಳಿಕೆಯ ಸಾಮರ್ಥ್ಯದೊಂದಿಗೆ ಉತ್ತಮ ಸೌಕರ್ಯವನ್ನು ನೀಡುತ್ತವೆ ಎಂದು ಹ್ಯುಂಡೈ ಹೇಳಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ( 30 ಡಿಸೆಂಬರ್ 2025) ಹ್ಯುಂಡೈ ಪ್ರೈಮ್ HB (ಹ್ಯಾಚ್‌ಬ್ಯಾಕ್) ಮತ್ತು ಪ್ರೈಮ್ SD (ಸೆಡಾನ್) ಟ್ಯಾಕ್ಸಿ ಕಾರುಗಳ ಮುಖ್ಯಾಂಶಗಳು ಇಲ್ಲಿವೆ.