ಮಾರುತಿಗೆ ತಾಕತ್ತು ಹೆಚ್ಚಿಸಿದ ಕಾರಿದು.. 26 Km ಮೈಲೇಜ್..
ಆಟೋಮೊಬೈಲ್ಸ್
- 8 month, 23 days ago
ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಜನಪ್ರಿಯ ಫ್ಯಾಮಿಲಿ ಎಂಪಿವಿ ಎಂದೇ ಮನೆ ಮಾತಾಗಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಡಿಸೆಂಬರ್ - 2025) ಸಹ ಅದು ಮುಂದುವರಿದೆ. ಒಟ್ಟು 16,300 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. ಹಾಗೆಯೇ ನವೆಂಬರ್‌ನಲ್ಲಿ 16,197 ಯುನಿಟ್, ಅಕ್ಟೋಬರ್‌ನಲ್ಲಿ 20,087 ಯುನಿಟ್, ಸೆಪ್ಟೆಂಬರ್‌ನಲ್ಲಿ 12,115 ಯುನಿಟ್ ಮತ್ತು ಆಗಸ್ಟ್‌ನಲ್ಲಿ 18,445 ಯುನಿಟ್‌ಗಳನ್ನು ಮಾರಲಾಗಿದೆ. ಈ ಅಂಕಿಅಂಶವನ್ನು ಲೆಕ್ಕಹಾಕಿದಾಗ ಪ್ರತಿ ತಿಂಗಳು ಸರಾಸರಿ 16,628 ಯುನಿಟ್ 'ಎರ್ಟಿಗಾ' ಎಂಪಿವಿಗಳು ಮಾರಾಟಗೊಂಡಿವೆ.