ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೆ ಬಿಡುಗಡೆ
ಆಟೋಮೊಬೈಲ್ಸ್
- 9 month, 23 days ago
ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ SUV ಇ-ವಿಟಾರಾ (e VITARA) ವನ್ನು ಭಾರತದಲ್ಲಿ ಶೀಘ್ರದಲ್ಲೆ ಬಿಡುಗಡೆ ಮಾಡಲಿದೆ. ಅದಕ್ಕೂ ಮುನ್ನ ಮಾರುತಿ ಭಾರತದಾದ್ಯಂತ 1,500 ವಿದ್ಯುತ್ ವಾಹನ-ಸಿದ್ಧ ಸೇವಾ ಕಾರ್ಯಾಗಾರಗಳನ್ನು ಸಿದ್ಧಪಡಿಸಿದೆ. 2030ರ ವೇಳೆಗೆ, ವಿಶಾಲವಾದ, ರಾಷ್ಟ್ರವ್ಯಾಪಿ ಚಾರ್ಜಿಂಗ್ ನೆಟ್‌ವರ್ಕ್ ಮೂಲಕ ಗ್ರಾಹಕರಿಗೆ ಅನುಕೂಲಕರವಾಗಿಸುವ ಗುರಿಯನ್ನು ಮಾರುತಿ ಹೊಂದಿದೆ. ಅಲ್ಲದೆ ಎಲಕ್ಟ್ರಿಕ್ ವಾಹನಗಳ ಮಾಲೀಕತ್ವವನ್ನು ಸರಳಗೊಳಿಸಲು ಎಲ್ಲಾ ಮುಂಜಾಗ್ರತೆ ವಹಿಸುತ್ತಿದೆ. ಮಾರುತಿಯ ಮೊದಲ ಎಲೆಕ್ಟ್ರಿಕ್ SUV ಬಗ್ಗೆ ನಮಗೆ ಲಭ್ಯವಿರುವ ಪ್ರಮುಖ ಅಂಶಗಳು ಇಲ್ಲಿವೆ.