Tesla: ಎಲಾನ್ ಮಸ್ಕ್‌ ಮಾಲೀಕತ್ವದ ಈ ಜನಪ್ರಿಯ ಕಾರಿಗೆ 5-ಸ್ಟಾರ್..

ವಿಶ್ವದ ನಂಬರ್ 1 ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಮಾಲೀಕತ್ವದ ಟೆಸ್ಲಾ (Tesla) ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಮಾಡೆಲ್ ವೈ (Model Y) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಯಶಸ್ವಿಯಾಗಿ ಮಾರಾಟಗೊಳಿಸಲಾಗುತ್ತಿದೆ. ಇದೇ ಸೆಪ್ಟೆಂಬರ್ ತಿಂಗಳಲ್ಲಿ ವಿತರಣೆಯನ್ನು ಶುರು ಮಾಡಲಾಗಿತ್ತು. ಸದ್ಯ, ಯೂರೋಪ್‌ನಲ್ಲಿ ಮಾರಾಟವಾಗುವ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಯುರೋ ಎನ್‌ಸಿಎಪಿ (Euro NCAP), 'ಟೆಸ್ಲಾ ಮಾಡೆಲ್ ವೈ'ನ್ನು ಅತ್ಯಂತ ಸುರಕ್ಷಿತ ಕಾರೆಂದು ನಿರ್ಣಯಿಸಿದೆ.

CNG ಕಾರು ಚಾಲಕರೇ ನಿಮಗಿದು ಗೊತ್ತೇ? ತಯಾರಕರು ಕೂಡ ಹೇಳುವುದಿಲ್ಲ

ಅನುಸರಿಸಬೇಕಾದ ಮುನ್ನೆಚ್ಚರಿಕೆಗಳನ್ನು ನಿರ್ಲಕ್ಷಿಸಿದರೆ ಸಿಎನ್‌ಜಿ ವಾಹನ ಬಳಕೆದಾರರು ಗಂಭೀರ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಸಂಕುಚಿತ ನೈಸರ್ಗಿಕ ಅನಿಲವು (Compressed natural gas) ಹೆಚ್ಚಿನ ಒತ್ತಡದಲ್ಲಿರುತ್ತದೆ, ಸಣ್ಣ ಅಜಾಗರೂಕತೆಯು ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಆದ್ದರಿಂದ, ಸಿಎನ್‌ಜಿ ಕಾರು ಮಾಲೀಕರು ಕೆಲವು ಸುರಕ್ಷತಾ ಕ್ರಮಗಳು ಮತ್ತು ನಿರ್ವಹಣಾ ದಿನಚರಿಗಳನ್ನು ಅನುಸರಿಸುವುದು ಅವಶ್ಯಕ. ಸಿಎನ್‌ಜಿಯಿಂದ ಉಂಟಾಗಬಹುದಾದ ಸ್ಫೋಟಗಳು ಅಥವಾ ಬೆಂಕಿ ಅಪಘಾತಗಳನ್ನು ತಡೆಗಟ್ಟಲು ಪಾಲಿಸಬಹುದಾದ ಪ್ರಮುಖ ಸುರಕ್ಷತಾ ಸಲಹೆಗಳು ಇಲ್ಲಿವೆ.

ವಾಹನಗಳ ಫಿಟ್‌ನೆಸ್ ಪರೀಕ್ಷಾ ಶುಲ್ಕದಲ್ಲಿ ಭಾರೀ ಬದಲಾವಣೆ..

ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರವು ಬಿಗ್ ಶಾಕ್ ಕೊಟ್ಟಿದೆ. ದೇಶಾದ್ಯಂತ ವಾಹನಗಳ ಫಿಟ್‌ನೆಸ್ ಪರೀಕ್ಷಾ ಶುಲ್ಕ (Fitness Test Fees Hike) ಹೆಚ್ಚಿದೆ. ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಇದರನ್ವಯ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಸರಿ ಸುಮಾರು 10 ಪಟ್ಟು ಏರಿಕೆಯಾಗಿದೆ. ಹಳೆಯ ಹಾಗೂ ಅಸುರಕ್ಷಿತ ವಾಹನಗಳ ಬಳಕೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದಾಗಿ ಸರ್ಕಾರವು ಈ ಕ್ರಮವನ್ನು ಕೈಗೊಂಡಿದೆ.

ಭಾರತದಲ್ಲಿ ಚೀನಾ ಕಾರಿಗಾಗಿ ಮುಗಿಬಿದ್ದ ಜನ: 50,000 ಕಾರುಗಳ ಮಾರಾಟ

MG ವಿಂಡ್ಸರ್ ಕೇವಲ 400 ದಿನಗಳಲ್ಲಿ 50,000 ಕಾರುಗಳ ಮಾರಾಟವನ್ನು ತಲುಪುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಇದು ಭಾರತದಲ್ಲಿ ಇಲ್ಲಿಯವರೆಗೆ ವೇಗವಾಗಿ ಮಾರಾಟವಾದ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ತ್ವರಿತ ಸಾಧನೆಯು ಉತ್ತಮ ವಿನ್ಯಾಸ, ವೈಶಿಷ್ಟ್ಯ - ಭರಿತ ಇವಿಗಳಿಗೆ ಹೆಚ್ಚುತ್ತಿರುವ ಗ್ರಾಹಕರ ಆದ್ಯತೆಯ ಸ್ಪಷ್ಟ ಸಂಕೇತವಾಗಿದೆ. ಇದು ದೇಶಾದ್ಯಂತ ವ್ಯಾಪಕ ಮಾರುಕಟ್ಟೆ ಸ್ವೀಕಾರವನ್ನು ಪ್ರತಿಬಿಂಬಿಸುತ್ತದೆ. ಈ ಕಾರನ್ನು ಭಾರತದಲ್ಲಿ ಮುಗಿಬಿದ್ದು ಖರೀದಿಸಲು ಕಾರಣವಾಗಿರುವ ಪ್ರಮುಖ ಅಂಶಗಳನ್ನು ಇಲ್ಲಿ ನೋಡೋಣ.
Advertisement

7 ಆಸನಗಳಿರುವ 5 ಪ್ರಮುಖ ಕಾರುಗಳಿವು.. ಬೆಲೆಯೂ ಕಮ್ಮಿ! ವಿಶೇಷತೆಗಳೇನು?

ಸದ್ಯ, ಬಹುತೇಕರು 7 ಆಸನಗಳನ್ನು ಹೊಂದಿರುವ ಹೊಸ ಕಾರನ್ನು ಖರೀದಿಸಲು ಬಯಸುತ್ತಾರೆ. ವಿಶೇಷವಾಗಿ ಕೆಲವು ದೊಡ್ಡ ಗಾತ್ರದ ಎಸ್‌ಯುವಿ ಹಾಗೂ ಎಂಪಿವಿಗಳು ಮಾತ್ರವೇ ದೂರದ ಊರುಗಳಿಗೆ ತೆರಳುವಾಗ ಆರಾಮದಾಯಕವಾದ ಪ್ರಯಾಣವನ್ನು ಒದಗಿಸಬಲ್ಲವು. ನೀವು ಕೂಡ ತುಂಬು ಕುಟುಂಬಕ್ಕೆ ಹೆಚ್ಚು ಸೂಕ್ತವಾಗಬಲ್ಲ ನೂತನ ಕಾರೊಂದನ್ನು ಕೊಂಡುಕೊಳ್ಳಲು ಹುಡುಕಾಟ ನಡೆಸುತ್ತಿದ್ದೀರಾ.. ಹಾಗಾದರೆ ರೆನಾಲ್ಟ್ ಟ್ರೈಬರ್, ಮಹೀಂದ್ರಾ ಬೊಲೆರೊ, ಮಾರುತಿ ಸುಜುಕಿ ಎರ್ಟಿಗಾ, ಟೊಯೊಟಾ ರೂಮಿಯಾನ್ ಹಾಗೂ ಕಿಯಾ ಕ್ಯಾರೆನ್ಸ್ ಕ್ಲಾವಿಸ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ, ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಟಾಟಾ ಸಿಯೆರಾ SUV ಬಿಡುಗಡೆಗೆ ಕೇವಲ 5 ದಿನ ಬಾಕಿ: ಪ್ರಮುಖ ಮುಖ್ಯಾಂಶ

ಟಾಟಾ ಸಿಯೆರಾ ಅಂತಿಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಇತ್ತೀಚೆಗೆ ಅನಾವರಣಗೊಂಡ ಈ SUV ವಿಶಿಷ್ಟ ವಿನ್ಯಾಸ, ಪ್ರೀಮಿಯಂ ಇಂಟೀರಿಯರ್ ಮತ್ತು ಆಕರ್ಷಕ ಫೀಚರ್ಸ್ ಒಳಗೊಂಡಿದೆ. ಕಂಪನಿಯು ಇನ್ನೂ ಬಿಡುಗಡೆ ಮಾಡಿ SUV ಯ ಅಧಿಕೃತ ಬೆಲೆ ವಿವರಗಳನ್ನು ಘೋಷಿಸಬೇಕಿದೆ. ನವೆಂಬರ್ 25 ರಂದು ಬಿಡುಗಡೆಗೆ ಸಜ್ಜಾಗಿದ್ದು, ಬೆಲೆ ಸುಮಾರು 11 ಲಕ್ಷ ರೂ.ಗಳಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಪ್ರಸ್ತುತ ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಕಾರು ಯಾವೆಲ್ಲಾ ಹೊಸ ವಿಷಯಗಳೊಂದಿಗೆ ಬರುತ್ತಿದೆ ನೋಡೋಣ ಬನ್ನಿ.

50 Km ಮೈಲೇಜ್.. 70,000 ಬೆಲೆ, ಜನಪ್ರಿಯ 'ಟಿವಿಎಸ್ ಜೆಸ್ಟ್'ಗೆ..

ಟಿವಿಎಸ್ ಜೆಸ್ಟ್ 110 (TVS Zest 110) ಪ್ರಮುಖ ಸ್ಕೂಟರ್ ಆಗಿದ್ದು, ಮಹಿಳೆಯರಿಗೆ ಹೆಚ್ಚು ಸೂಕ್ತವಾಗಿದೆ. ಇದು ರೂ.70,600 ರಿಂದ ರೂ.75,500 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಬೋಲ್ಡ್ ಬ್ಲ್ಯಾಕ್, ಮ್ಯಾಟ್ ಬ್ಲ್ಯಾಕ್, ಪರ್ಲ್ ವೈಟ್ ಹಾಗೂ ಟರ್ಕೋಯಿಸ್ ಬ್ಲೂ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 109.7-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 45 ರಿಂದ 50 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್‌, ಲಗೇಜ್ ಹುಕ್‌, ಕಿಕ್ & ಸೆಲ್ಫ್ ಸ್ಟಾರ್ಟ್‌ನಂತಹ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

400 ದಿನಗಳಲ್ಲಿ 50,000 ಕಾರುಗಳನ್ನು ಮಾರಾಟ ಮಾಡಿದ ಚೀನಾ ಬ್ರಾಂಡ್

ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ (JSW MG Motor) ಇಂಡಿಯಾ, ತನ್ನ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಕಾರಾಗಿರುವ 'ವಿಂಡ್ಸರ್' ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ದಾಖಲೆಯ ಮಾರಾಟವನ್ನು ಕಂಡಿರುವುದಾಗಿ ಹೇಳಿದೆ. ಕೇವಲ ಒಂದು ವರ್ಷದಲ್ಲಿ 50,000 ಮಾರಾಟದ ಮೈಲಿಗಲ್ಲನ್ನು ದಾಟಿದೆ ಎಂದು ಘೋಷಿಸಿದ್ದು, ಇದು ಕಂಪನಿಯ ಐತಿಹಾಸಿಕ ಸಾಧನೆಯಾಗಿದೆ. ಇದರೊಂದಿಗೆ, ಎಂಜಿ ವಿಂಡ್ಸರ್ ಇಷ್ಟು ಕಡಿಮೆ ಸಮಯದಲ್ಲಿ 50,000 ಮಾರಾಟದ ಮೈಲಿಗಲ್ಲನ್ನು ದಾಟಿದ ಭಾರತದ ಮೊದಲ ಇವಿ ಎನಿಸಿಕೊಂಡಿದೆ ಎಂದು ಎಂಜಿ ಮೋಟಾರ್ ಪ್ರಕಟಣೆಯಲ್ಲಿ ತಿಳಿಸಿದೆ.

28 Km ಮೈಲೇಜ್.. ಬರೀ 6.85 ಲಕ್ಷ, ಸಾಲು ಕಟ್ಟಿದ ಗ್ರಾಹಕರು..

ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಜನಪ್ರಿಯ ಎಸ್‌ಯುವಿ ಎಂದೇ ಹೆಸರುವಾಸಿಯಾಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಆಕರ್ಷಕವಾದ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. ಈ ಅಕ್ಟೋಬರ್ ತಿಂಗಳಲ್ಲೂ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಬರೋಬ್ಬರಿ 17,003 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 13,874 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 3.56% ಬೆಳವಣಿಗೆಯಾಗಿದೆ.

Maruti Suzuki: ಭರ್ಜರಿ ಯಶಸ್ಸು ಕಂಡ ವಿಕ್ಟೋರಿಸ್.. ಹೊಸ ರೂಪದಲ್ಲಿ..

ಮಾರುತಿ ಸುಜುಕಿ ಬ್ರೆಝಾ (Maruti Suzuki Brezza), ಪ್ರಖ್ಯಾತ ಎಸ್‌ಯುವಿಯಾಗಿದೆ. ರೂ.8.26 ಲಕ್ಷದಿಂದ ರೂ.13 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಸಹ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಎಲ್ಲವು ಅಂದುಕೊಂಡಂತೆ ನಡೆದರೆ, 2026ರಲ್ಲಿ ಇದೇ 'ಬ್ರೆಝಾ' ಹೊಸ ರೂಪದಲ್ಲೂ ಮಾರಾಟಕ್ಕೆ ಬರಲಿದೆ. ಅದಕ್ಕಾಗಿ ಕಂಪನಿಯು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಟಾಟಾ ಹೈಬ್ರಿಡ್ ಕಾರುಗಳ ಪರೀಕ್ಷೆ ಜೋರು: ದೊಡ್ಡ ಎಸ್‌ಯುವಿಗಳಲ್ಲಿ CNG

ಟಾಟಾ ಮೋಟಾರ್ಸ್ ತನ್ನ ದೊಡ್ಡ ಎಸ್‌ಯುವಿಗಳಿಗೆ CNG ಮತ್ತು ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಗಳನ್ನು ನೀಡಲು ಜೋರು ಪರೀಕ್ಷೆಗಳನ್ನು ನಡೆಸುಡುತ್ತಿದೆ. ಈಗಾಗಲೇ ಎಲೆಕ್ಟ್ರಿಕ್ ವಾಹನಗಳು ಮತ್ತು ಸಿಎನ್‌ಜಿ ಕಾರುಗಳ ಪ್ರಬಲ ಉಪಸ್ಥಿತಿಯನ್ನು ಹೊಂದಿರುವ ಟಾಟಾ ಮೋಟಾರ್ಸ್, ಈಗ 4 - ಮೀಟರ್ ಗಿಂತ ದೊಡ್ಡ ಎಸ್‌ಯುವಿಗಳಿಗೆ ಸಿಎನ್‌ಜಿ ಆಯ್ಕೆಯನ್ನು ಪರಿಗಣಿಸುತ್ತಿದೆ. ಇದಕ್ಕಾಗಿ ಕಂಪನಿಯ 4 ಮೀಟರ್ ಗಿಂತ ಹೆಚ್ಚು ಉದ್ದದ ಎಸ್‌ಯುವಿಗಳನ್ನು ನೋಡುವುದಾದ್ರೆ ಕರ್ವ್, ಹ್ಯಾರಿಯರ್, ಸಫಾರಿ ಮತ್ತು ಮುಂಬರುವ ಸಿಯೆರಾ ಕಾರುಗಳಿವೆ.

Mahesh Babu: ನಟ ಮಹೇಶ್ ಬಾಬು ಟ್ರಾಫಿಕ್ ನಿಯಮ ಉಲ್ಲಂಘನೆ

ಚಿತ್ರರಂಗದಲ್ಲಿ ಹೀರೋಗಳನ್ನು ಅಭಿಮಾನಿಗಳು ಎಷ್ಟು ಹೆಚ್ಚಾಗಿ ಪ್ರೀತಿಸುತ್ತಾರೆ ಎಂಬುದನ್ನು ಹೇಳಬೇಕಿಲ್ಲ. ತಮ್ಮ ನೆಚ್ಚಿನ ನಟರಿಗಾಗಿ ರಕ್ತದಾನ ಮಾಡುವುದು, ಹುಟ್ಟು ಹಬ್ಬ ಬಂದರೆ ಬಡವರಿಗೆ - ರೋಗಿಗಳಿಗೆ ಅನ್ನದಾನ ಮಾಡುವುದನ್ನು ನೋಡುತ್ತಲೇ ಇರುತ್ತೇವೆ. ತಮ್ಮ ಹೀರೋಗಳ ಹೆಸರು ಪ್ರತಿಷ್ಟಗಳಿಗೆ ಯಾವುದೇ ಧಕ್ಕೆ ಬಾರದಂತೆ ಎಚ್ಚರ ವಹಿಸುತ್ತಾರೆ. ಇತ್ತೀಚೆಗಷ್ಟೆ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್‌ಬಾಬು (Actor Mahesh Babu) ವಿಷಯದಲ್ಲಿ ಅಭಿಮಾನಿಯೊಬ್ಬ ಮಾಡಿದ ಕೆಲಸಕ್ಕೆ ನೆಟ್ಟಿಗರು ಹುಬ್ಬೇರಿಸುವಂತಾಗಿದೆ. ನೆಚ್ಚಿನ ನಟ ಎಂದರೆ ಇಷ್ಟು ಪ್ರೀತಿಯೇ ಎಂದು ಚರ್ಚಿಸುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಬನ್ನಿ ನೋಡೋಣ.
Advertisement

TVS: ನಿಮ್ಮ ಹೆಂಡ್ತಿಗೆ ಹೊಸ ಸ್ಕೂಟರ್ ಕೊಡಿಸಬೇಕೇ..

ಟಿವಿಎಸ್ ಜೆಸ್ಟ್ 110 (TVS Zest 110) ಜನಪ್ರಿಯ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಇದು ಕಡಿಮೆ ತೂಕವನ್ನು ಹೊಂದಿದ್ದು, ಮಹಿಳೆಯರು ಸುಲಭವಾಗಿ ಬಳಕೆ ಮಾಡಲು ಸಾಧ್ಯವಾಗಲಿದೆ. ನಿಮ್ಮ ಪತ್ನಿಗೆ ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಉಡೊಗೊರೆಯಾಗಿ ನೀಡಲು ಆಲೋಚಿಸಿದ್ದೀರಾ.. ಹಾಗಾದರೆ, 'ಜೆಸ್ಟ್ 110' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ, ಈ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಕೇವಲ 6 ಲಕ್ಷದೊಳಗೆ ಸಿಗುವ ಟಾಟಾ ಕಾರು: 5 ಮಂದಿಗೆ ಆರಾಮ ಪ್ರಯಾಣ

ಸೆಡಾನ್‌ಗಳನ್ನು ಇಷ್ಟಪಡುವವರು ಮತ್ತು ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಕಾರನ್ನು ಹುಡುಕುತ್ತಿರುವವರು 2025ರ ಟಾಟಾ ಟಿಗೋರ್ ಅನ್ನು ಪರಿಗಣಿಸಬಹುದು. ಹೊಸ 2025ರ ಟಾಟಾ ಟಿಗೋರ್ ಸೆಡಾನ್ ಭಾರತದಲ್ಲಿ ರೂ.5.49 ಲಕ್ಷದಿಂದ ರೂ.8.74 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಬಹು ವೇರಿಯೆಂಟ್‌ಗಳು ಮತ್ತು ಫೀಚರ್ ಸೆಟ್‌ಗಳಲ್ಲಿ ಮೌಲ್ಯವನ್ನು ನೀಡುತ್ತದೆ. ಇದು ದೃಢವಾದ ನಿರ್ಮಾಣ ಗುಣಮಟ್ಟ, ನವೀಕರಿಸಿದ ಇಂಟೀರಿಯರ್, ಆಧುನಿಕ ಇನ್ಫೋಟೈನ್‌ಮೆಂಟ್ ಮತ್ತು ಬಹು ಪವರ್‌ಟ್ರೇನ್ ಆಯ್ಕೆಗಳು ನಿಮ್ಮ ಆದ್ಯತೆಗೆ ಅನುಗುಣವಾಗಿ ಸಿಗಲಿವೆ.

Nayanthara: ಲೇಡಿ ಸೂಪರ್ ಸ್ಟಾರ್ ನಯನತಾರಾಗೆ ದುಬಾರಿ..

ನಿನ್ನೆಯಷ್ಟೇ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara), 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಿಕೊಂಡಿದ್ದಾರೆ. ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನಟಿ ನಯನತಾರಾ ಬಹುಭಾಷಾ ಕಲಾವಿದೆಯಾಗಿದ್ದು, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಲೂ ಫುಲ್ ಆಕ್ಟಿವ್ ಇದ್ದು, ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಲ್ಲಿವೆ. ಪ್ರಮುಖವಾಗಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ 'ಟಾಕ್ಸಿಕ್'ನಲ್ಲೂ ಬಣ್ಣ ಹಚ್ಚಿದ್ದಾರೆ.

ಬೆಂಗಳೂರಿನ ಸೌಲಭ್ಯ ವಿಸ್ತರಣೆ ಪೂರ್ಣಗೊಳಿಸಿದ ಮುಸಾಶಿ ಇಂಡಿಯಾ

ಜಪಾನ್‌ನ ಮುಸಾಶಿ ಸೀಮಿಟ್ಸು ಇಂಡಸ್ಟ್ರೀ ಸ್ವಾಮ್ಯದ ಅಂಗಸಂಸ್ಥೆ ಮತ್ತು ಭಾರತದಲ್ಲಿ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರ ವಾಹನಗಳ ಪ್ರಸರಣ ಘಟಕಗಳ (transmission components) ಪ್ರಮುಖ ತಯಾರಕರಾದ ಮುಸಾಶಿ ಇಂಡಿಯಾ, ಬೆಂಗಳೂರಿನ ತನ್ನ ಉತ್ಪಾದನಾ ಸೌಲಭ್ಯದ 2ನೇ ಹಂತದ ವಿಸ್ತರಣೆಯನ್ನು ಪೂರ್ಣಗೊಳಿಸುವುದಾಗಿ ಘೋಷಿಸಿದೆ. ಈ ಮೈಲಿಗಲ್ಲು ವಿಶ್ವ ದರ್ಜೆಯ ಉತ್ಪಾದನಾ ಶ್ರೇಷ್ಠತೆ, ನಾವೀನ್ಯತೆ ಮತ್ತು ಸುಸ್ಥಿರತೆಯ ಮೂಲಕ ಭಾರತದ ಆಟೋಮೋಟಿವ್ ಮತ್ತು ವಿದ್ಯುತ್ ಚಲನಶೀಲ ಪರಿಸರ ವ್ಯವಸ್ಥೆಯನ್ನು ಮುನ್ನಡೆಸುವ ಮುಸಾಶಿಯ ಬದ್ಧತೆಯನ್ನು ಬಲಪಡಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Toyota: 8-ಸೀಟರ್, ಈ ಜನಪ್ರಿಯ ಟೊಯೊಟಾ MPVಗೆ ಫುಲ್ ಡಿಮ್ಯಾಂಡ್..

ಟೊಯೊಟಾ ಇನ್ನೋವಾ (Toyota Innova) ಜಗಮೆಚ್ಚಿದ ಎಂಪಿವಿಯಾಗಿದೆ. ಇದು ಇನ್ನೋವಾ ಹೈಕ್ರಾಸ್ ಹಾಗೂ ಇನ್ನೋವಾ ಕ್ರಿಸ್ಟಾ ಎಂಬ ಎರಡು ವಿಧದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ಈ ಅಕ್ಟೋಬರ್ ತಿಂಗಳು ಭಾರೀ ಸಂಖ್ಯೆಯಲ್ಲಿಯೂ ಮಾರಾಟಗೊಂಡಿದೆ. ಒಟ್ಟು 11,089 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 8,838 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 25% ಪ್ರಗತಿಯಾಗಿದೆ.

30 Km ಮೈಲೇಜ್.. 6.39 ಲಕ್ಷ, ಜನಪ್ರಿಯ ಟೊಯೊಟಾ ಗ್ಲಾನ್ಜಾಗೆ 5..

ಟೊಯೊಟಾ ಗ್ಲಾನ್ಜಾ (Toyota Glanza) ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್‌ ಆಗಿದೆ. ಇದು ರೂ.6.39 ಲಕ್ಷದಿಂದ ರೂ.9.15 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಸ್ಪೋರ್ಟಿನ್ ರೆಡ್, ಎಂಟೈಸಿಂಗ್ ಸಿಲ್ವರ್, ಗೇಮಿಂಗ್ ಗ್ರೇ ಹಾಗೂ ಕೆಫೆ ವೈಟ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ಕೊಂಡೊಯ್ಯಲು ಸಾಧ್ಯವಾಗುವಂತೆ 318 ಲೀ. ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕರ್ನಾಟಕ ಮೂಲದ ಮೋಟಾರ್‌ಸೈಕಲ್ ಬಿಡುಗಡ

ಎಲೆಕ್ಟ್ರಿಕ್ ವಾಹನ ಮತ್ತು ಬ್ಯಾಟರಿ ತಂತ್ರಜ್ಞಾನದಲ್ಲಿ ನಾವೀನ್ಯತೆಯನ್ನು ಹೊಂದಿರುವ ಕರ್ನಾಟಕದ ಬೆಂಗಳೂರು ಮೂಲದ ಅಲ್ಟ್ರಾವೈಲೆಟ್ ಕಂಪನಿಯು, ಯುನೈಟೆಡ್ ಕಿಂಗ್‌ಡಮ್‌ನಲ್ಲಿ ತನ್ನ ಪ್ರಮುಖ ಪರ್ಫಾಮೆನ್ಸ್ ಮೋಟಾರ್‌ಸೈಕಲ್‌ಗಳಾದ F77 MACH 2 RECON ಮತ್ತು F77 ಸೂಪರ್‌ಸ್ಟ್ರೀಟ್ RECON ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಕಾರ್ಯತಂತ್ರದ ವಿಸ್ತರಣೆಯು ಆ ದೇಶದಲ್ಲಿ ಅಲ್ಟ್ರಾವೈಲೆಟ್‌ನ ವಿಶೇಷ ವಿತರಣಾ ಪಾಲುದಾರರಾದ MotoMondo ಜೊತೆಗಿನ ಸಹಯೋಗದಲ್ಲಿದೆ, ಇದು ಕಂಪನಿಯ ಅಂತರರಾಷ್ಟ್ರೀಯ ಬೆಳವಣಿಗೆಯ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ.

ಹೈ-ಸ್ಪೀಡ್ ಚಾರ್ಜಿಂಗ್ ಸ್ಟೇಷನ್ ಪರಿಚಯಿಸಿದ ಕೈನೆಟಿಕ್ ಗ್ರೀನ್

ಭಾರತದ ಪ್ರಮುಖ ಎಲೆಕ್ಟ್ರಿಕ್ ತ್ರಿಚಕ್ರ ವಾಹನ (e3W) ಮತ್ತು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ (e2W) ತಯಾರಕರಾದ ಕೈನೆಟಿಕ್ ಗ್ರೀನ್ ಎನರ್ಜಿ, ಇಂದು ಕ್ಷಿಪ್ರ ಚಾರ್ಜಿಂಗ್ ತಂತ್ರಜ್ಞಾನದ ಪ್ರವರ್ತಕ ಎಕ್ಸ್‌ಪೋನೆಂಟ್ ಎನರ್ಜಿಯೊಂದಿಗೆ ಕಾರ್ಯತಂತ್ರದ ಮೈತ್ರಿಯನ್ನು ಘೋಷಿಸಿದೆ. ಭಾರತದ ಎಲೆಕ್ಟ್ರಿಕ್ ಮೊಬಿಲಿಟಿ ಕ್ಷೇತ್ರಕ್ಕೆ ಒಂದು ಹೆಗ್ಗುರುತು ಪ್ರಗತಿಯಲ್ಲಿ, ಕಂಪನಿಗಳು L5 & L3 ತ್ರಿಚಕ್ರ ವಾಹನ ವರ್ಗಕ್ಕೆ ದೇಶದ ಅತ್ಯಂತ ವೇಗದ ಚಾರ್ಜಿಂಗ್ ಪರಿಹಾರವನ್ನು ಪರಿಚಯಿಸುತ್ತಿವೆ. ಇದು ಇ-ರಿಕ್ಷಾಗಳು ಮತ್ತು ಇ-ಕಾರ್ಗೋ ವಾಹನಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಕಂಪನಿಗಳು ಪ್ರಕಟಣೆಯಲ್ಲಿ ತಿಳಿಸಿವೆ.
Advertisement

682 Km ರೇಂಜ್.. 5-ಸೀಟರ್, ಬಿಡುಗಡೆಯಾಗಿ ವರುಷ.. ಈ ಮಹೀಂದ್ರಾ..

ಮಹೀಂದ್ರಾ & ಮಹೀಂದ್ರಾ (Mahindra & Mahindra) ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯವಾಗಿ ಎಕ್ಸ್ಇವಿ 9ಇ (XEV 9e) ಮತ್ತು ಬಿಇ 6 (BE 6) ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಇವೆರೆಡು ಕಾರುಗಳು ಬಿಡುಗಡೆಯಾಗಿ ವರ್ಷ ತುಂಬಿದೆ. ಮೊದಲ ವಾರ್ಷಿಕೋತ್ಸವದ ಸವಿನೆನಪಿಗಾಗಿ ಕಂಪನಿಯು ಬಹುದೊಡ್ಡ ಘೋಷಣೆಯೊಂದನ್ನು ಮಾಡಿದೆ. ಈ ಬಗ್ಗೆ ವಿವಿಧ ಮಾಧ್ಯಮಗಳಲ್ಲೂ ವರದಿಯಾಗಿದೆ.

7-ಸೀಟರ್ ವಿಭಾಗದ ನಂ.1 ಕಾರು: 26.11 ಕಿ.ಮೀ ಮೈಲೇಜ್... ಕಮ್ಮಿ ಬೆಲೆ

2025 ರಲ್ಲಿ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಭಾರತದಲ್ಲಿ ಅತ್ಯುತ್ತಮ ಆಯ್ಕೆಯ ಫ್ಯಾಮಿಲಿ MPV ಆಗಿ ಮುಂದುವರಿಯುತ್ತಿದೆ. ಇದು ಬಜೆಟ್ ಬೆಲೆಯಲ್ಲಿ ಉತ್ತಮ ಕ್ಯಾಬಿನ್, ಸುರಕ್ಷತೆ ಮತ್ತು ಬಹು ಪವರ್‌ಟ್ರೇನ್ ಆಯ್ಕೆ‌ಗಳ ಪ್ರಾಯೋಗಿಕ ಮಿಶ್ರಣವನ್ನು ನೀಡುತ್ತದೆ. ಹಾಗಾಗಿಯೇ ಮಾರುತಿ ಸುಜುಕಿ ಎರ್ಟಿಗಾ ಭಾರತದ ಅತ್ಯಂತ ಜನಪ್ರಿಯ 7 - ಸೀಟರ್ ವಾಹನಗಳಲ್ಲಿ ಒಂದಾಗಿದೆ. ಪ್ರಾಯೋಗಿಕತೆ, ಮೈಲೇಜ್ ಮತ್ತು ಸುಲಭವಾಗಿ ಚಾಲನೆ ಅನುಭವ ನೀಡುತ್ತದೆ. ಪ್ರಸ್ತುತ ಈ ಕಾರನ್ನು ಖರೀದಿಸಲು ನೋಡುತ್ತಿರುವವರಿಗಾಗಿ ಬೆಲೆ, ವೇರಿಯೆಂಟ್‌ಗಳು, ಎಂಜಿನ್ ಆಯ್ಕೆ, ಮೈಲೇಜ್ ಮತ್ತು ಸುರಕ್ಷತಾ ವೈಶಿಷ್ಟ್ಯಗಳ ವಿವರವಾದ ಮಾಹಿತಿ ಇಲ್ಲಿದೆ.

ಅಂತರಾಷ್ಟ್ರೀಯ ಗುಣಮಟ್ಟದ IGN-16 ಹೆಲ್ಮೆಟ್ ಬಿಡುಗಡೆ

ಹೆಲ್ಮೆಟ್ ತಾಯರಕರಾದ ಸ್ಟೀಲ್‌ಬರ್ಡ್ ಹೈ - ಟೆಕ್ ಇಂಡಿಯಾ ಲಿಮಿಟೆಡ್‌ನ ಪ್ರೀಮಿಯಂ ಬ್ರ್ಯಾಂಡ್ ಆಗಿರುವ ಇಗ್‌ನೈಟ್ (IGNYTE), ತನ್ನ ಇತ್ತೀಚಿನ ಹೈ - ಪ್ರೊಟೆಕ್ಷನ್ ಹೆಲ್ಮೆಟ್ ಆದ 'IGN-16' ಅನ್ನು ಬಿಡುಗಡೆ ಮಾಡಿದೆ. ಇದನ್ನು EPP ಮಲ್ಟಿ - ಇಂಪ್ಯಾಕ್ಟ್ ತಂತ್ರಜ್ಞಾನ ಮತ್ತು ವರ್ಧಿತ ಸುರಕ್ಷತೆಗಾಗಿ ಕೆವ್ಲರ್ ಬಲವರ್ಧನೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಬುಲೆಟ್ ಪ್ರೂಫ್ ಜಾಕೆಟ್‌ಗಳು ಮತ್ತು ಬ್ಯಾಲಿಸ್ಟಿಕ್ ಹೆಲ್ಮೆಟ್‌ಗಳಲ್ಲಿ ವಿಶ್ವಾಸಾರ್ಹವಾಗಿರುವ ಅದೇ ವಸ್ತುವಾದ ಕೆವ್ಲರ್, ನುಗ್ಗುವಿಕೆ ಮತ್ತು ತೀಕ್ಷ್ಣ - ವಸ್ತು ಪ್ರಭಾವದ ವಿರುದ್ಧ ಹೆಚ್ಚುವರಿ ಶಕ್ತಿಯನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿದೆ.

TATA: ಇದು ಸಿಯೆರಾ ಅಲ್ಲ.. 8 ಲಕ್ಷ ರೂಪಾಯಿ? ಸದ್ದಿಲ್ಲದೇ ಮತ್ತೊಂದು..

ಮುಂಬೈನಲ್ಲಿ ಶನಿವಾರ ಜರುಗಿದ ಅದ್ದೂರಿ ಕಾರ್ಯಕ್ರಮದಲ್ಲಿ ಟಾಟಾ ಮೋಟಾರ್ಸ್ (Tata Motors), ಹೊಚ್ಚ ಹೊಸ ಇಂಧನ ಚಾಲಿತ ಸಿಯೆರಾ (Sierra) ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಇದೇ 25ರಂದು ಮಾರಾಟಕ್ಕೂ ತರಲಿದೆ. ಸದ್ಯ, ಕಂಪನಿಯು 'ಸ್ಕಾರ್ಲೆಟ್' ಬ್ಯಾಡ್ಜ್‌ನಡಿ ಮತ್ತೊಂದು ನೂತನ ಕಾರೊಂದನ್ನು ಸಿದ್ಧಗೊಳಿಸುತ್ತಿದೆ ಎಂದು ಈ ಹಿಂದೆ ವರದಿಯಾಗಿತ್ತು. ಇದು ನೆಕ್ಸಾನ್‌ನಂತೆ ಸಬ್-4 ಮೀಟರ್ ಎಸ್‌ಯುವಿಯಾಗಿರಬಹುದು ಎನ್ನಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಸ್ಥಗಿತಗೊಂಡಿದ್ದ SUV 2026 ಜನವರಿಯಲ್ಲಿ ಬಿಡುಗಡೆಗೆ ಸಜ್ಜು!

ಹೊಸ ರೆನಾಲ್ಟ್ ಡಸ್ಟರ್ (Renault Duster) 2026 ಜನವರಿ 26 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ, ಇದು ಗಮನಾರ್ಹ ಮರುವಿನ್ಯಾಸ, ವರ್ಧಿತ ವೈಶಿಷ್ಟ್ಯಗಳು ಮತ್ತು ಆಧುನಿಕ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿರಲಿದ್ದು, ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಹೆಚ್ಚು ಪೈಪೋಟಿ ನೀಡಲು ಸಜ್ಜಾಗುತ್ತಿದೆ. ಭಾರತೀಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಈಗಾಗಲೇ ದೃಢಪಡಿಸಲಾಗಿದೆ. ಮುಂಬರುವ 2026ರ ರೆನಾಲ್ಟ್ ಡಸ್ಟರ್ ವೈಶಿಷ್ಟ್ಯಗಳು, ವಿನ್ಯಾಸ ಮತ್ತು ಪವರ್ ಟ್ರೇನ್ ಅನ್ನು ನೋಡೋಣ.