Tejas Jet: ದುಬೈ ಏರ್ ಶೋನಲ್ಲಿ ಅಪಘಾತಕ್ಕೀಡಾದ ತೇಜಸ್ ಫೈಟರ್ ಜೆಟ್!

ದುಬೈ ವಾಯು ಪ್ರದರ್ಶನದಲ್ಲಿ ಭಾರತೀಯ ವಾಯುಪಡೆಯ ತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಗಿದ್ದು, ಸುರಕ್ಷತಾ ಕಾಳಜಿಯನ್ನು ಹೆಚ್ಚಿಸಿ ತನಿಖೆಗೆ ಆದೇಶಿಸಲಾಗಿದೆ.

Ather: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಫ್ಯಾಮಿಲಿ ಸ್ಕೂಟರ್ ಬಿಡುಗಡೆ

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಾದ ಎಥರ್ ಎನರ್ಜಿ ಲಿಮಿಟೆಡ್ (Ather Energy Ltd), ಇಂದು ಕೊಲಂಬೊ ಮೋಟಾರ್ ಶೋ 2025 ರಲ್ಲಿ ಶ್ರೀಲಂಕಾದಲ್ಲಿ ರಿಜ್ಟಾವನ್ನು ಬಿಡುಗಡೆ ಮಾಡಿದೆ. ಶ್ರೀಲಂಕಾದಲ್ಲಿ ಎಥರ್‌ನ ಅಧಿಕೃತ ವಿತರಕರಾದ ಎವಲ್ಯೂಷನ್ ಆಟೋ ಪ್ರೈವೇಟ್ ಲಿಮಿಟೆಡ್‌ನ ಸಹಭಾಗಿತ್ವದಲ್ಲಿ ರಿಜ್ಟಾವನ್ನು ಬಿಡುಗಡೆ ಮಾಡಲಾಗಿದೆ. ಇದು ಎಥರ್‌ನ ಅಂತರರಾಷ್ಟ್ರೀಯ ಬೆಳವಣಿಗೆಯ ಕಾರ್ಯತಂತ್ರದಲ್ಲಿ ಮುಂದಿನ ಹೆಜ್ಜೆಯನ್ನು ಗುರುತಿಸುತ್ತದೆ, ಬ್ರಾಂಡ್ ತನ್ನ ಉತ್ಪನ್ನ ಪೋರ್ಟ್‌ಫೋಲಿಯೊವನ್ನು ವಿಸ್ತರಿಸುವ ಮತ್ತು ಪ್ರಮುಖ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅದರ ಪರಿಸರ ವ್ಯವಸ್ಥೆಯನ್ನು ಬಲಪಡಿಸುವತ್ತ ಗಮನಹರಿಸಿದೆ.

ಭಾರತದಲ್ಲಿ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಹೊಸ ಮೈಲಿಗಲ್ಲು

ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SAVWIPL) 2 ಮಿಲಿಯನ್ (20 ಲಕ್ಷ) ಕಾರುಗಳ ಉತ್ಪಾದನೆಯನ್ನು ದಾಟಿದೆ ಎಂದು ಕಂಪನಿ ಘೋಷಿಸಿದೆ. ಭಾರತದಲ್ಲಿ ತನ್ನ 25 ವರ್ಷಗಳ ಪ್ರಯಾಣದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಿನ ಹೆಗ್ಗುರುತು ಕ್ಷಣವಾಗಿದೆ. ಈ ಮೈಲಿಗಲ್ಲಿನಲ್ಲಿ MQB- A0 -IN ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ 5,00,000 ಕ್ಕೂ ಹೆಚ್ಚು ವಾಹನಗಳನ್ನು ಒಳಗೊಂಡಿದೆ, ಇದನ್ನು ಸ್ಥಳೀಯ ಎಂಜಿನಿಯರಿಂಗ್ ತಂಡಗಳು ಭಾರತದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿವೆ ಎಂದು ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೇಳಿದೆ. ಎರಡು ಮಿಲಿಯನ್ ವಾಹನಗಳ ಉತ್ಪಾದನೆಯು ಚಕನ್, ಪುಣೆ ಮತ್ತು ಔರಂಗಾಬಾದ್‌ನ ಶೆಂಡ್ರಾದಲ್ಲಿನ ಬ್ರಾಂಡ್‌ನ ಉತ್ಪಾದನಾ ಸೌಲಭ್ಯಗಳಿಂದ ನಿರ್ಮಾಣವಾಗಿ ಹೊರಬಂದಿವೆ. ಈ ವಾಹನಗಳಲ್ಲಿ 500,000 ಕ್ಕೂ ಹೆಚ್ಚು ವಾಹನಗಳನ್ನು ಭಾರತದಲ್ಲಿ ತಯಾರಿಸಿದ MQB- A0 -IN ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಇದು ಸ್ಕೋಡಾ ಕುಶಾಕ್, ಸ್ಲಾವಿಯಾ, ಕೈಲಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ವರ್ಟಸ್ ‌ನಂತಹ ಮಾದರಿಗಳನ್ನು ಒಳಗೊಂಡಿದೆ.

ಬೈಕ್‌ನಂತೆ ಮೈಲೇಜ್.. 5-ಸೀಟರ್, ಅಗ್ಗದ ದರದಲ್ಲಿ ಈ 8 ಸಣ್ಣ..

ಹೊಸ ಕಾರು ಖರಿದಿಸಬೇಕೆಂದು ಬಹುತೇಕರ ಜೀವನಮಾನದ ಆಸೆಯಾಗಿರುತ್ತದೆ. ಅದಕ್ಕಾಗಿ ತಮ್ಮ ಕುಟುಂಬಕ್ಕೆ ಹೆಚ್ಚು ಸೂಕ್ತವಾಗಬಲ್ಲ ಕಾರನ್ನು ಖರೀದಿಸಲು ಹುಡುಕಾಟ ನಡೆಸುತ್ತಿರುತ್ತಾರೆ. ನೀವು ಅಗ್ಗದ ದರದಲ್ಲಿ ಹೊಚ್ಚ ಹೊಸ ಕಾರೊಂದನ್ನು ಕೊಂಡುಕೊಳ್ಳಬೇಕೇ.. ಹಾಗಾದರೆ ಈ 8 ಹ್ಯಾಚ್‌ಬ್ಯಾಕ್‌ಗಳಾದ ಮಾರುತಿ ಸುಜುಕಿ ಎಸ್-ಪ್ರೆಸ್ಸೊ, ಮಾರುತಿ ಸುಜುಕಿ ಆಲ್ಟೊ ಕೆ10, ರೆನಾಲ್ಟ್ ಕ್ವಿಡ್, ಮಾರುತಿ ಸುಜುಕಿ ವ್ಯಾಗನ್ಆರ್, ಟಾಟಾ ಟಿಯಾಗೊ, ಮಾರುತಿ ಸುಜುಕಿ ಸೆಲೆರಿಯೊ, ಟಾಟಾ ಆಲ್ಟ್ರೋಜ್ ಹಾಗೂ ಸಿಟ್ರನ್ ಸಿ3ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ, ಇವುಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.
Advertisement

ಭಾರತದಲ್ಲಿ ಹೊಸ ಬ್ರ್ಯಾಂಡ್‌ನ ಅಬ್ಬರ! ಮತ್ತೆರಡು ಕಾರು..

ವಿಯೆಟ್ನಾಂ ಮೂಲದ ವಿನ್‌ಫಾಸ್ಟ್‌ (VinFast) ಪ್ರಮುಖ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯವಾಗಿ ಇದೇ ಸೆಪ್ಟೆಂಬರ್‌ನಲ್ಲಿ ನೂತನ ವಿಎಫ್6 & ವಿಎಫ್7 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಮಾರಾಟಕ್ಕೂ ತಂದಿದೆ. ಮೊದಲ ಬ್ಯಾಚ್‍ನ ಕಾರುಗಳ ವಿತರಣೆಯನ್ನು ಶುರು ಮಾಡಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಸರಿ ಸುಮಾರು 131 ಯುನಿಟ್‌ಗಳನ್ನು ಮಾರಾಟಗೊಳಿಸಿದೆ. ಸದ್ಯ ಕಂಪನಿಯು ಮತ್ತೆರೆಡು ಹೊಚ್ಚ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಅಕ್ಟೋಬರ್‌ನಲ್ಲಿ ಜನ ಮುಗಿಬಿದ್ದು ಖರೀದಿಸಿದ ಎಸ್‌ಯುವಿಗಳಿವು!

ಭಾರತೀಯ ಕಾರು ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ, ಕಳೆದ ಕೆಲವು ವರ್ಷಗಳಿಂದ ಎಸ್‌ಯುವಿಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಕಳೆದ ಅಕ್ಟೋಬರ್‌ ತಿಂಗಳಲ್ಲಿ ಎಸ್‌ಯುವಿಗಳು ಬಲವಾದ ಮಾರಾಟವನ್ನು ಗಳಿಸಿವೆ, ಅಕ್ಟೋಬರ್ 2025 ರಲ್ಲಿ ನಾವು ಟಾಪ್ 5 ಅತ್ಯುತ್ತಮ ಮಾರಾಟವಾದ ಸಬ್-ಕಾಂಪ್ಯಾಕ್ಟ್ ಎಸ್‌ಯುವಿಗಳ ವಿವರಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಈ ಕಾರುಗಳು ಸದ್ಯ ಭಾರತದಲ್ಲಿ ಟ್ರೆಂಡಿಂಗ್‌ನಲ್ಲಿವೆ, ಅಲ್ಲದೆ ಅಕ್ಟೋಬರ್ 2025 ರಲ್ಲಿ ದೇಶದಲ್ಲಿ ಪ್ರಯಾಣಿಕ ವಾಹನಗಳ ಮಾರಾಟಕ್ಕೆ ಇವೆಲ್ಲವು ಆಕರ್ಷಕ ಹಬ್ಬದ ಕೊಡುಗೆಗಳು ಹಾಗೂ ಜಿಎಸ್‌ಟಿ 2.0 ಉತ್ತೇಜನವನ್ನು ಪಡೆದು ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗಿವೆ.

ಮೈಲೇಜ್‌ನಲ್ಲಿ ರಾಜಿಯಿಲ್ಲ! ಕೈಗೆಟುಕುವ ಬೆಲೆಯಲ್ಲಿ ಸಿಗುವ..

ಭಾರತವು ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಹ್ಯಾಚ್‌ಬ್ಯಾಕ್, ಸೆಡಾನ್ ಹಾಗೂ ಎಂಪಿವಿಗಳಿಗೆ ಹೋಲಿಕೆ ಮಾಡಿದರೆ, ಎಸ್‌ಯುವಿ (ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ವಿಭಾಗವು ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ಮೈಕ್ರೋ ಮತ್ತು ಫುಲ್-ಸೈಜ್ ಎಸ್‌ಯುವಿಗಳಿಗಿಂತ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಭಾರೀ ಬೇಡಿಕೆಯಿದೆ. ಇವು ನೋಡಲು ತುಂಬಾ ಚೆನ್ನಾಗಿದ್ದು, ಹತ್ತಾರು ಆಕರ್ಷಕವಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಜೊತೆಗೆ ಉತ್ತಮವಾದ ಕಾರ್ಯಕ್ಷಮತೆಯಿಂದಲೂ ಹೆಸರುವಾಸಿಯಾಗಿವೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಮಾರುತಿ ಸುಜುಕಿ ವಿಕ್ಟೋರಿಸ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ, ಈ ಕಾಂಪ್ಯಾಕ್ಟ್ ಎಸ್‌ಯುವಿಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಕಳಪೆ ಕಾರುಗಳನ್ನು ಖರೀದಿಸಬೇಡಿ: ಭಾರತದ ಇತ್ತೀಚಿನ ಸುರಕ್ಷಿತ ಕಾರುಗಳು

ಭಾರತದಲ್ಲಿ ಕಾರುಗಳನ್ನು ಕ್ರ್ಯಾಶ್ ಟೆಸ್ಟ್ ಮಾಡುವ ಮೂಲಕ ಅವುಗಳ ನಿರ್ಮಾಣ ಗುಣಮಟ್ಟವನ್ನು ನಿರ್ಧರಿಸುವ ಭಾರತ್ ಎನ್‌ಸಿಎಪಿ (Bharat New Car Assessment Program), ಭಾರತೀಯ ಖರೀದಿದಾರರಿಗೆ ಯಾವ ಕಾರು ಎಷ್ಟು ಸುರಕ್ಷಿತ ಎಂಬುದರ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ಪ್ರಯಾಣಿಕರ ರಕ್ಷಣೆಯ ದೃಷ್ಟಿಯಿಂದ ಇತ್ತೀಚಿನ ಕಾರು ಮಾದರಿಗಳನ್ನು ಹೆಚ್ಚಿನ ಕಂಪನಿಗಳು ಮೌಲ್ಯಮಾಪನಕ್ಕಾಗಿ ಭಾರತ್ ಎನ್‌ಸಿಎಪಿಗೆ ಕಳುಹಿಸಿವೆ. ಫಲಿತಾಂಶವನ್ನು ಕೂಡ ಬಂದಿದೆ, ಹಾಗಾದ್ರೆ ಭಾರತ್ ಎನ್‌ಸಿಎಪಿ ನಡೆಸಿದ ಪರೀಕ್ಷೆಯಲ್ಲಿ ಯಾವ ಕಾರು ಎಷ್ಟು ಸ್ಕೋರ್ ಮಾಡಿದೆ ಬನ್ನಿ ನೋಡೋಣ.

Tata: 26.99 ಕಿ.ಮೀ ಮೈಲೇಜ್.. ಬರೀ 5.50 ಲಕ್ಷ, ಈ ಟಾಟಾ ಎಸ್‌ಯುವಿ..

ಟಾಟಾ ಪಂಚ್ (Tata Punch) ಪ್ರಮುಖ ಮೈಕ್ರೋ ಎಸ್‌ಯುವಿಯಾಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈ ಅಕ್ಟೋಬರ್ ತಿಂಗಳಲ್ಲೂ 'ಪಂಚ್' ದೊಡ್ಡ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಸರಿ ಸುಮಾರು 16,810 ಯುನಿಟ್‌ಗಳನ್ನು ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 15,740 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 7% ಬೆಳವಣಿಗೆಯಾಗಿದೆ.

TATA: 489 ಕಿ.ಮೀ ರೇಂಜ್.. ಈ ಜನಪ್ರಿಯ ಟಾಟಾ SUV ಕುರಿತ..

ಟಾಟಾ ನೆಕ್ಸಾನ್ ಇವಿ (Tata Nexon EV) ಜಗಮೆಚ್ಚಿದ ಎಸ್‌ಯುವಿಯಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದೆ. ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ನೀವು ಹೊಸ ಎಲೆಕ್ಟ್ರಿಕ್ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, 'ನೆಕ್ಸಾನ್ ಇವಿ' ಅತ್ಯುತ್ತಮವಾದ ಆಯ್ಕೆಯಾಗಲಿದೆ. ಬನ್ನಿ, ಈ ಎಸ್‌ಯುವಿಯ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

ಇತ್ತೀಚೆಗೆ ಬಿಡುಗಡೆಯಾದ ಹೊಸ ಯಮಹಾ FZ-Rave ವಿಶೇಷತೆಗಳು!

ದ್ವಿಚಕ್ರ ವಾಹನ ತಯಾರಕರಾದ ಯಮಹಾ, ಇತ್ತೀಚೆಗೆ ಭಾರತದಲ್ಲಿ ತನ್ನ ಹೊಸ FZ-Rave ಬೈಕ್ ಅನ್ನು ಬಿಡುಗಡೆ ಮಾಡಿದೆ. ಗ್ರಾಹಕರ ಆಸಕ್ತಿಗಳನ್ನು ಆಧರಿಸಿ ಈ ಬಾರಿ ಡಿಸೈನ್ ಮಾಡಲಾಗಿರುವ ಯಮಹಾ FZ-RAVE ಉತ್ತಮ ಪ್ರತಿಕ್ರಿಯೆ ಪಡೆಯಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ. ಇದರ ಬೆಲೆ 1.17 ಲಕ್ಷ ರೂ. (ಎಕ್ಸ್ ಶೋರೂಂ) ಇದೆ. ಹೊಸ ಯಮಹಾ FZ-RAVE ಭಾರತದಲ್ಲಿ 150cc ವಿಭಾಗದಲ್ಲಿ ಹೊಸ ಅಲೆ ಎಬ್ಬಿಸಲು ಸಜ್ಜಾಗಿದ್ದು, ಯುವ ಸವಾರರಿಗೆ ಆಕ್ರಮಣಕಾರಿ ಡಿಸೈನ್ ಮತ್ತು ಉತ್ತಮ ಪರ್ಫಾಮೆನ್ಸ್ ನೀಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

ಟೊಯೋಟಾದ ಪ್ರಮುಖ ಎಸ್‌ಯುವಿ ಹಿಂಪಡೆಯುವಿಕೆ ಘೋಷಣೆ

ಟೊಯೋಟಾ ಭಾರತದಲ್ಲಿ ಡಿಸೆಂಬರ್ 9, 2024 ರಿಂದ ಏಪ್ರಿಲ್ 29, 2025 ರ ನಡುವೆ ತಯಾರಿಸಲಾದ 11,529 ಅರ್ಬನ್ ಕ್ರೂಸರ್ ಹೈರೈಡರ್ ಕಾರುಗಳನ್ನು ಗ್ರಾಹಕರಿಂದ ಹಿಂಪಡೆಯುವುದಾಗಿ ಘೋಷಿಸಿದೆ. ಕಂಪನಿ ನಿರ್ಮಿಸಿದ ಈ ಕಾರುಗಳಲ್ಲಿನ ಇಂಧನ ಮಟ್ಟದ ಸೂಚಕದಲ್ಲಿನ (ಅನಲಾಗ್ ಟೈಪ್) ದೋಷದಿಂದಾಗಿ ತನ್ನ ಅರ್ಬನ್ ಕ್ರೂಸರ್ ಹೈರೈಡರ್ ಕಾರುಗಳನ್ನು ಸ್ವಯಂಪ್ರೇರಿತವಾಗಿ ಹಿಂಪಡೆಯುತ್ತಿರುವುದಾಗಿ ಘೋಷಿಸಿದೆ. ವಾಹನಗಳಿಗೆ ಉಚಿತವಾಗಿ ದುರಸ್ತಿ ಮಾಡಲಾಗುವುದು, ಇದಕ್ಕಾಗಿ ಅರ್ಬನ್ ಕ್ರೂಸರ್ ಹೈರೈಡರ್ ಮಾಲೀಕರನ್ನು ಕಂಪನಿ ಸಂಪರ್ಕಿಸಲಿದೆ, ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಅಗತ್ಯ ಬದಲಿಗಳನ್ನು ಒದಗಿಸಲಾಗುವುದು ಎಂದು ವರದಿಯಾಗಿದೆ.
Advertisement

ನೀವೂ ಫ್ರೀಲ್ಯಾನ್ಸರ್‌ ಆಗಿದ್ದೀರಾ? ಹಾಗಿದ್ರೆ ಸಾಲ ಪಡೆಯೋದು ಏಕೆ?

ಡಿಜಿಟಲ್ ಬ್ಯಾಂಕಿಂಗ್ ಮೂಲಕ ಫ್ರೀಲ್ಯಾನ್ಸರ್‌ಗಳು ಸಾಲಗಳನ್ನು ಹೇಗೆ ಪಡೆಯಬಹುದು ಎಂಬುದನ್ನು ಕಂಡುಕೊಳ್ಳಿ. ವೈಯಕ್ತಿಕ ಸಾಲಗಳಿಗೆ ಅರ್ಹತಾ ಮಾನದಂಡಗಳು ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ತಿಳಿಯಿರಿ.

SIR: ವೋಟರ್‌ ಐಡಿ ಇದ್ದವರು ಓದಲೇಬೇಕಾದ ಸುದ್ದಿ!

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ, ಮತದಾರರ ನೋಂದಣಿಗೆ ಆಯ್ಕೆಗಳು ಮತ್ತು ನಿಮ್ಮ ವಿವರಗಳಲ್ಲಿನ ದೋಷಗಳನ್ನು ಹೇಗೆ ಸರಿಪಡಿಸುವುದು ಎಂಬುದರ ಕುರಿತು ತಿಳಿಯಿರಿ.

ಸ್ಪೆಷಲ್ ಎಡಿಷನ್ BE 6 ಎಸ್‌ಯುವಿ ಬಿಡುಗಡೆಗೆ ಸಜ್ಜಾಗಿದೆ ಮಹೀಂದ್ರಾ!

ಮಹೀಂದ್ರಾ ಕಂಪನಿಯ ಪ್ರಮುಖ ಎಲೆಕ್ಟ್ರಿಕ್ ಮಾಡಲ್‌ BE 6 ಇವಿ ಎಸ್‌ಯುವಿಯ ಬ್ಯಾಟ್‌ಮ್ಯಾನ್ ಎಡಿಷನ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು, ಇದೀಗ ಬ್ಯಾಟ್‌ಮ್ಯಾನ್ ಎಡಿಷನ್ ಭಾರಿ ಯಶಸ್ಸಿನ ನಂತರ ಮಹೀಂದ್ರಾ BE 6 ಎಲೆಕ್ಟ್ರಿಕ್ SUV ಯ ಮತ್ತೊಂದು ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲು ಕಂಪನಿ ಯೋಜಿಸುತ್ತಿದೆ ಎಂದು ವರದಿಯಾಗಿದೆ. ಮಹೀಂದ್ರಾ ಬಿಇ 6 ಮತ್ತು ಮಹೀಂದ್ರಾ ಎಕ್ಸ್ ಇವಿ 9 ಇ ನಂತರ ಕಂಪನಿಯ ಮೂರನೇ ಇಂಗ್ಲೋ ಸ್ಕೇಟ್ ಬೋರ್ಡ್ ಆರ್ಕಿಟೆಕ್ಚರ್ ಆಧಾರಿತ ಬ್ಯಾಟರಿ ಎಲೆಕ್ಟ್ರಿಕ್ ವಾಹನ (ಬಿಇವಿ) ಇದಾಗಿದೆ.

26 ಕಿ.ಮೀ ಮೈಲೇಜ್.. 6-ಸೀಟರ್, 11 ಲಕ್ಷ.. ಈ ಮಾರುತಿ ಕಾರಿನ..

ಮಾರುತಿ ಸುಜುಕಿ ಎಕ್ಸ್ಎಲ್6 (Maruti Suzuki XL6) ಪ್ರಮುಖ ಎಂಪಿವಿಯಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಹಲವು ನವೀನ ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಅಕ್ಟೋಬರ್ ತಿಂಗಳಲ್ಲೂ 'ಎಕ್ಸ್ಎಲ್6' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 3,611 ಯುನಿಟ್‌ಗಳನ್ನು ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 3,285 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 10% ಪ್ರಗತಿಯಾಗಿದೆ.

Tesla: ಎಲಾನ್ ಮಸ್ಕ್‌ ಮಾಲೀಕತ್ವದ ಈ ಜನಪ್ರಿಯ ಕಾರಿಗೆ 5-ಸ್ಟಾರ್..

ವಿಶ್ವದ ನಂಬರ್ 1 ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಮಾಲೀಕತ್ವದ ಟೆಸ್ಲಾ (Tesla) ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಮಾಡೆಲ್ ವೈ (Model Y) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಯಶಸ್ವಿಯಾಗಿ ಮಾರಾಟಗೊಳಿಸಲಾಗುತ್ತಿದೆ. ಇದೇ ಸೆಪ್ಟೆಂಬರ್ ತಿಂಗಳಲ್ಲಿ ವಿತರಣೆಯನ್ನು ಶುರು ಮಾಡಲಾಗಿತ್ತು. ಸದ್ಯ, ಯೂರೋಪ್‌ನಲ್ಲಿ ಮಾರಾಟವಾಗುವ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಯುರೋ ಎನ್‌ಸಿಎಪಿ (Euro NCAP), 'ಟೆಸ್ಲಾ ಮಾಡೆಲ್ ವೈ'ನ್ನು ಅತ್ಯಂತ ಸುರಕ್ಷಿತ ಕಾರೆಂದು ನಿರ್ಣಯಿಸಿದೆ.

CNG ಕಾರು ಚಾಲಕರೇ ನಿಮಗಿದು ಗೊತ್ತೇ? ತಯಾರಕರು ಕೂಡ ಹೇಳುವುದಿಲ್ಲ

ಅನುಸರಿಸಬೇಕಾದ ಮುನ್ನೆಚ್ಚರಿಕೆಗಳನ್ನು ನಿರ್ಲಕ್ಷಿಸಿದರೆ ಸಿಎನ್‌ಜಿ ವಾಹನ ಬಳಕೆದಾರರು ಗಂಭೀರ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಸಂಕುಚಿತ ನೈಸರ್ಗಿಕ ಅನಿಲವು (Compressed natural gas) ಹೆಚ್ಚಿನ ಒತ್ತಡದಲ್ಲಿರುತ್ತದೆ, ಸಣ್ಣ ಅಜಾಗರೂಕತೆಯು ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಆದ್ದರಿಂದ, ಸಿಎನ್‌ಜಿ ಕಾರು ಮಾಲೀಕರು ಕೆಲವು ಸುರಕ್ಷತಾ ಕ್ರಮಗಳು ಮತ್ತು ನಿರ್ವಹಣಾ ದಿನಚರಿಗಳನ್ನು ಅನುಸರಿಸುವುದು ಅವಶ್ಯಕ. ಸಿಎನ್‌ಜಿಯಿಂದ ಉಂಟಾಗಬಹುದಾದ ಸ್ಫೋಟಗಳು ಅಥವಾ ಬೆಂಕಿ ಅಪಘಾತಗಳನ್ನು ತಡೆಗಟ್ಟಲು ಪಾಲಿಸಬಹುದಾದ ಪ್ರಮುಖ ಸುರಕ್ಷತಾ ಸಲಹೆಗಳು ಇಲ್ಲಿವೆ.

ವಾಹನಗಳ ಫಿಟ್‌ನೆಸ್ ಪರೀಕ್ಷಾ ಶುಲ್ಕದಲ್ಲಿ ಭಾರೀ ಬದಲಾವಣೆ..

ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರವು ಬಿಗ್ ಶಾಕ್ ಕೊಟ್ಟಿದೆ. ದೇಶಾದ್ಯಂತ ವಾಹನಗಳ ಫಿಟ್‌ನೆಸ್ ಪರೀಕ್ಷಾ ಶುಲ್ಕ (Fitness Test Fees Hike) ಹೆಚ್ಚಿದೆ. ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಇದರನ್ವಯ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಸರಿ ಸುಮಾರು 10 ಪಟ್ಟು ಏರಿಕೆಯಾಗಿದೆ. ಹಳೆಯ ಹಾಗೂ ಅಸುರಕ್ಷಿತ ವಾಹನಗಳ ಬಳಕೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದಾಗಿ ಸರ್ಕಾರವು ಈ ಕ್ರಮವನ್ನು ಕೈಗೊಂಡಿದೆ.

ಭಾರತದಲ್ಲಿ ಚೀನಾ ಕಾರಿಗಾಗಿ ಮುಗಿಬಿದ್ದ ಜನ: 50,000 ಕಾರುಗಳ ಮಾರಾಟ

MG ವಿಂಡ್ಸರ್ ಕೇವಲ 400 ದಿನಗಳಲ್ಲಿ 50,000 ಕಾರುಗಳ ಮಾರಾಟವನ್ನು ತಲುಪುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಇದು ಭಾರತದಲ್ಲಿ ಇಲ್ಲಿಯವರೆಗೆ ವೇಗವಾಗಿ ಮಾರಾಟವಾದ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ತ್ವರಿತ ಸಾಧನೆಯು ಉತ್ತಮ ವಿನ್ಯಾಸ, ವೈಶಿಷ್ಟ್ಯ - ಭರಿತ ಇವಿಗಳಿಗೆ ಹೆಚ್ಚುತ್ತಿರುವ ಗ್ರಾಹಕರ ಆದ್ಯತೆಯ ಸ್ಪಷ್ಟ ಸಂಕೇತವಾಗಿದೆ. ಇದು ದೇಶಾದ್ಯಂತ ವ್ಯಾಪಕ ಮಾರುಕಟ್ಟೆ ಸ್ವೀಕಾರವನ್ನು ಪ್ರತಿಬಿಂಬಿಸುತ್ತದೆ. ಈ ಕಾರನ್ನು ಭಾರತದಲ್ಲಿ ಮುಗಿಬಿದ್ದು ಖರೀದಿಸಲು ಕಾರಣವಾಗಿರುವ ಪ್ರಮುಖ ಅಂಶಗಳನ್ನು ಇಲ್ಲಿ ನೋಡೋಣ.
Advertisement

7 ಆಸನಗಳಿರುವ 5 ಪ್ರಮುಖ ಕಾರುಗಳಿವು.. ಬೆಲೆಯೂ ಕಮ್ಮಿ! ವಿಶೇಷತೆಗಳೇನು?

ಸದ್ಯ, ಬಹುತೇಕರು 7 ಆಸನಗಳನ್ನು ಹೊಂದಿರುವ ಹೊಸ ಕಾರನ್ನು ಖರೀದಿಸಲು ಬಯಸುತ್ತಾರೆ. ವಿಶೇಷವಾಗಿ ಕೆಲವು ದೊಡ್ಡ ಗಾತ್ರದ ಎಸ್‌ಯುವಿ ಹಾಗೂ ಎಂಪಿವಿಗಳು ಮಾತ್ರವೇ ದೂರದ ಊರುಗಳಿಗೆ ತೆರಳುವಾಗ ಆರಾಮದಾಯಕವಾದ ಪ್ರಯಾಣವನ್ನು ಒದಗಿಸಬಲ್ಲವು. ನೀವು ಕೂಡ ತುಂಬು ಕುಟುಂಬಕ್ಕೆ ಹೆಚ್ಚು ಸೂಕ್ತವಾಗಬಲ್ಲ ನೂತನ ಕಾರೊಂದನ್ನು ಕೊಂಡುಕೊಳ್ಳಲು ಹುಡುಕಾಟ ನಡೆಸುತ್ತಿದ್ದೀರಾ.. ಹಾಗಾದರೆ ರೆನಾಲ್ಟ್ ಟ್ರೈಬರ್, ಮಹೀಂದ್ರಾ ಬೊಲೆರೊ, ಮಾರುತಿ ಸುಜುಕಿ ಎರ್ಟಿಗಾ, ಟೊಯೊಟಾ ರೂಮಿಯಾನ್ ಹಾಗೂ ಕಿಯಾ ಕ್ಯಾರೆನ್ಸ್ ಕ್ಲಾವಿಸ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ, ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಟಾಟಾ ಸಿಯೆರಾ SUV ಬಿಡುಗಡೆಗೆ ಕೇವಲ 5 ದಿನ ಬಾಕಿ: ಪ್ರಮುಖ ಮುಖ್ಯಾಂಶ

ಟಾಟಾ ಸಿಯೆರಾ ಅಂತಿಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಇತ್ತೀಚೆಗೆ ಅನಾವರಣಗೊಂಡ ಈ SUV ವಿಶಿಷ್ಟ ವಿನ್ಯಾಸ, ಪ್ರೀಮಿಯಂ ಇಂಟೀರಿಯರ್ ಮತ್ತು ಆಕರ್ಷಕ ಫೀಚರ್ಸ್ ಒಳಗೊಂಡಿದೆ. ಕಂಪನಿಯು ಇನ್ನೂ ಬಿಡುಗಡೆ ಮಾಡಿ SUV ಯ ಅಧಿಕೃತ ಬೆಲೆ ವಿವರಗಳನ್ನು ಘೋಷಿಸಬೇಕಿದೆ. ನವೆಂಬರ್ 25 ರಂದು ಬಿಡುಗಡೆಗೆ ಸಜ್ಜಾಗಿದ್ದು, ಬೆಲೆ ಸುಮಾರು 11 ಲಕ್ಷ ರೂ.ಗಳಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಪ್ರಸ್ತುತ ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಕಾರು ಯಾವೆಲ್ಲಾ ಹೊಸ ವಿಷಯಗಳೊಂದಿಗೆ ಬರುತ್ತಿದೆ ನೋಡೋಣ ಬನ್ನಿ.

50 Km ಮೈಲೇಜ್.. 70,000 ಬೆಲೆ, ಜನಪ್ರಿಯ 'ಟಿವಿಎಸ್ ಜೆಸ್ಟ್'ಗೆ..

ಟಿವಿಎಸ್ ಜೆಸ್ಟ್ 110 (TVS Zest 110) ಪ್ರಮುಖ ಸ್ಕೂಟರ್ ಆಗಿದ್ದು, ಮಹಿಳೆಯರಿಗೆ ಹೆಚ್ಚು ಸೂಕ್ತವಾಗಿದೆ. ಇದು ರೂ.70,600 ರಿಂದ ರೂ.75,500 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಬೋಲ್ಡ್ ಬ್ಲ್ಯಾಕ್, ಮ್ಯಾಟ್ ಬ್ಲ್ಯಾಕ್, ಪರ್ಲ್ ವೈಟ್ ಹಾಗೂ ಟರ್ಕೋಯಿಸ್ ಬ್ಲೂ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 109.7-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 45 ರಿಂದ 50 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್‌, ಲಗೇಜ್ ಹುಕ್‌, ಕಿಕ್ & ಸೆಲ್ಫ್ ಸ್ಟಾರ್ಟ್‌ನಂತಹ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

400 ದಿನಗಳಲ್ಲಿ 50,000 ಕಾರುಗಳನ್ನು ಮಾರಾಟ ಮಾಡಿದ ಚೀನಾ ಬ್ರಾಂಡ್

ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ (JSW MG Motor) ಇಂಡಿಯಾ, ತನ್ನ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಕಾರಾಗಿರುವ 'ವಿಂಡ್ಸರ್' ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ದಾಖಲೆಯ ಮಾರಾಟವನ್ನು ಕಂಡಿರುವುದಾಗಿ ಹೇಳಿದೆ. ಕೇವಲ ಒಂದು ವರ್ಷದಲ್ಲಿ 50,000 ಮಾರಾಟದ ಮೈಲಿಗಲ್ಲನ್ನು ದಾಟಿದೆ ಎಂದು ಘೋಷಿಸಿದ್ದು, ಇದು ಕಂಪನಿಯ ಐತಿಹಾಸಿಕ ಸಾಧನೆಯಾಗಿದೆ. ಇದರೊಂದಿಗೆ, ಎಂಜಿ ವಿಂಡ್ಸರ್ ಇಷ್ಟು ಕಡಿಮೆ ಸಮಯದಲ್ಲಿ 50,000 ಮಾರಾಟದ ಮೈಲಿಗಲ್ಲನ್ನು ದಾಟಿದ ಭಾರತದ ಮೊದಲ ಇವಿ ಎನಿಸಿಕೊಂಡಿದೆ ಎಂದು ಎಂಜಿ ಮೋಟಾರ್ ಪ್ರಕಟಣೆಯಲ್ಲಿ ತಿಳಿಸಿದೆ.

28 Km ಮೈಲೇಜ್.. ಬರೀ 6.85 ಲಕ್ಷ, ಸಾಲು ಕಟ್ಟಿದ ಗ್ರಾಹಕರು..

ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಜನಪ್ರಿಯ ಎಸ್‌ಯುವಿ ಎಂದೇ ಹೆಸರುವಾಸಿಯಾಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಆಕರ್ಷಕವಾದ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. ಈ ಅಕ್ಟೋಬರ್ ತಿಂಗಳಲ್ಲೂ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಬರೋಬ್ಬರಿ 17,003 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 13,874 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 3.56% ಬೆಳವಣಿಗೆಯಾಗಿದೆ.