Tata Sierra: ಲಕ್ಷುರಿ ಫೀಚರ್ಸ್.. 5-ಸೀಟರ್! ಇಂದು ಹೊಸ ಟಾಟಾ..

ನೂತನ ಟಾಟಾ ಸಿಯೆರಾ (Tata Sierra) ಎಸ್‌ಯುವಿ ಅನಾವರಣಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ ಮುಂಬೈನಲ್ಲಿ ನಡೆಯುವ ಅದ್ದೂರಿಯಾಗಿ ಸಮಾರಂಭದಲ್ಲಿ ಪರಿಚಯಗೊಳ್ಳಲಿದೆ. ನೂತನ ಕಾರಿನ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಇದೇ 'ಸಿಯೆರಾ'ವನ್ನು 1991 ರಿಂದ 2003ರವರೆಗೆ ಮಾರಾಟ ಮಾಡಲಾಗಿತ್ತು. ಸದ್ಯ, ಹೊಸ ರೂಪದಲ್ಲಿ ಪಾದಾರ್ಪಣೆಗೆ ಸಿದ್ದಗೊಂಡಿರುವ ಈ ಎಸ್‌ಯುವಿಯ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ದಸರಾ, ದೀಪಾವಳಿಗೆ ಮಾರಾಟವಾದ ಕಾರು, ಸ್ಕೂಟರ್‌ಗಳೆಷ್ಟು ಗೊತ್ತಾ?

ಭಾರತೀಯ ಆಟೋ ಉದ್ಯಮಕ್ಕೆ 2025 ರ ಅಕ್ಟೋಬರ್ ತಿಂಗಳು ಭರ್ಜರಿ ಲಾಭ ತಂದುಕೊಟ್ಟಿದೆ. ಅಕ್ಟೋಬರ್ ತಿಂಗಳಿನಲ್ಲಿ ಬಂದ ಸಾಲು ಸಾಲು ಹಬ್ಬಗಳು ಹಾಗೂ ಹಬ್ಬಗಳಿಗೂ ಮುನ್ನ ಘೋಷಣೆಯಾಗಿದ್ದ GST ಕಡಿತದ ಘೋಷಣೆಯು ಗ್ರಾಹಕರಲ್ಲಿ ವಾಹನ ಖರೀದಿಯ ಉತ್ಸಾಹವನ್ನು ಹೆಚ್ಚಿಸಿತ್ತು. ಭಾರತೀಯ ಆಟೋಮೊಬೈಲ್ ತಯಾರಕರ ಸಂಘ (SIAM)ದ ಪ್ರಕಾರ, ಅಕ್ಟೋಬರ್ ತಿಂಗಳಿನಲ್ಲಿ ಬರೋಬ್ಬರಿ 28,01,412 ವಾಹನಗಳು ಭಾರತದಲ್ಲಿ ಮಾರಾಟವಾಗಿರುವುದಾಗಿ ವರದಿಯಾಗಿದೆ. ಇದರಲ್ಲಿ ಪ್ಯಾಸೆಂಜರ್ ಕಾರುಗಳು, ತ್ರಿಚಕ್ರ ವಾಹನಗಳು, ಸ್ಕೂಟರ್, ಬೈಕ್ ‌ಗಳು ಸೇರಿವೆ.

ಕಿಯಾ ಕಾರು ಮಾಲೀಕರಿಗೆ ಶುಭಸುದ್ದಿ: ನಾಳೆಯಿಂದ ಸರ್ವಿಸ್ ಕ್ಯಾಂಪ್

ಭಾರತದಲ್ಲಿ ಪ್ರಮುಖ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಕಿಯಾ, ನವೆಂಬರ್ 15 ರಿಂದ 23 ರವರೆಗೆ ದಕ್ಷಿಣ ಭಾರತದಾದ್ಯಂತ ಸೇವಾ ಶಿಬಿರ (Service Camp)ವನ್ನು ಆಯೋಜಿಸಿರುವುದಾಗಿ ಘೋಷಿಸಿದೆ. ಗ್ರಾಹಕರಿಗೆ ಕಾರುಗಳನ್ನು ಮಾರಾಟ ಮಾಡಿದ ನಂತರ ಕಾರುಗಳೊಂದಿಗೆ ಅವರ ಅನುಭವವನ್ನು ಹೆಚ್ಚಿಸಲು ಮತ್ತು ಕಂಪನಿಯೊಂದಿಗೆ ಬಾಂಧವ್ಯ ಬೆಳೆಸಲು ಇದು ಬ್ರ್ಯಾಂಡ್‌ನ ಪ್ರಯತ್ನವಾಗಿದೆ. ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಪುದುಚೇರಿಯಲ್ಲಿ 122 ಕಿಯಾ ಅಧಿಕೃತ ಕಾರ್ಯಾಗಾರಗಳಲ್ಲಿ 9 ದಿನಗಳ ಕಾಲ ಈ ಸೇವಾ ಶಿಬಿರವನ್ನು ನಡೆಸಲಾಗುವುದು ಎಂದು ಕಂಪನಿ ತಿಳಿಸಿದೆ.

Toyota: 7-ಸೀಟರ್.. ಈ ಗಜ ಗಾತ್ರದ ಟೊಯೊಟಾ SUV ಕುರಿತ ಪ್ರಮುಖಾಂಶಗಳು!

ಟೊಯೊಟಾ ಫಾರ್ಚುನರ್ (Toyota Fortuner) ಜನಪ್ರಿಯ ಫುಲ್-ಸೈಜ್ ಎಸ್‌ಯುವಿಯಾಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸೆಲೆಬ್ರಿಟಿಗಳು ಹಾಗೂ ಶ್ರೀಮಂತ ವರ್ಗದ ಗ್ರಾಹಕರ ನೆಚ್ಚಿನ ಕಾರಾಗಿಯೂ ಹೊರಹೊಮ್ಮಿದೆ. ನೀವು ಹೊಚ್ಚ ಹೊಸ ಎಸ್‌ಯುವಿಯೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ 'ಫಾರ್ಚುನರ್' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ, ಈ ಕಾರಿನ ಬೆಲೆ, ವಿನ್ಯಾಸ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.
Advertisement

ಪೊಲೀಸರಿಗೆ ಯುವಕ ಸವಾಲ್... ನಿಮ್ಮ ಕೈಯಲ್ಲಾದರೆ ಹಿಡಿಯಿರಿ ಎಂದ!

ಪುಣೆಯ ಯುವಕನೊಬ್ಬ ಪೊಲೀಸರಿಗೆ X (ಈ ಹಿಂದೆ ಟ್ವಿಟ್ಟರ್‌)ನಲ್ಲಿ ನೀಡಿದ "ಕ್ಯಾಚ್ ಮಿ ಇಫ್ ಯು ಕ್ಯಾನ್" (ನಿಮ್ಮ ಕೈಯಲ್ಲಾದರೆ ಹಿಡಿದು ತೋರಿಸಿ) ಎಂಬ ಪದಗಳು ಪುಣೆ ಪೊಲೀಸರ ತಾಳ್ಮೆಯನ್ನು ಪರೀಕ್ಷಿಸಿವೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದ್ದು, ಯುವಕನ ವಿರುದ್ಧ ಪೊಲೀಸರ ಕ್ರಮವು ಡಿಜಿಟಲ್ ಯುಗದ ಕಾನೂನು ಜಾರಿಯಲ್ಲಿ ತೀಕ್ಷ್ಣವಾದ ಪಾಠವಾಗಿ ಮಾರ್ಪಟ್ಟಿದೆ. ಈ ಘಟನೆಯು ಆನ್‌ಲೈನ್‌ನಲ್ಲಿ ಪೊಲೀಸ್ ವ್ಯವಸ್ಥೆಯು ಎಷ್ಟು ತ್ವರಿತವಾಗಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ತೋರಿಸಿದೆ. ಸಾಮಾಜಿಕ ವೇದಿಕೆಗಳಲ್ಲಿ ಪೊಲೀಸ್ ಇಲಾಖೆಗಳ ಬೆಳೆಯುತ್ತಿರುವ ಚಾತುರ್ಯವನ್ನು ಒತ್ತಿಹೇಳುತ್ತದೆ.

ಮಂಗಳವಾರವಷ್ಟೇ ಬಿಡುಗಡೆ.. 49 Km ಮೈಲೇಜ್, ಹೊಸ ಯಮಹಾ XSR 155ಗೆ...

ಹೊಚ್ಚ ಹೊಸ ಯಮಹಾ ಎಕ್ಸ್ಎಸ್ಆರ್ 155 (Yamaha XSR 155) ಮೋಟಾರ್‌ಸೈಕಲ್, ಮಂಗಳವಾರ ಬಿಡುಗಡೆಗೊಂಡಿತ್ತು. ಇದು ರೂ.1.50 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 155-ಸಿಸಿ ಲಿಕ್ವಿಡ್-ಕೂಲ್ಡ್, 4-ವಾಲ್ವ್ ಪೆಟ್ರೋಲ್ ಎಂಜಿನ್‌ ಹಾಗೂ 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 49 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಮೆಟಾಲಿಕ್ ಗ್ರೇ, ವಿವಿಡ್ ರೆಡ್, ಗ್ರೇಯಿಶ್ ಗ್ರೀನ್ ಮೆಟಾಲಿಕ್ ಹಾಗೂ ಮೆಟಾಲಿಕ್ ಬ್ಲೂ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್‌ ಮತ್ತು ಬ್ಲ್ಯೂಟೂತ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ. ನೀವು ಇದೇ 'ಯಮಹಾ ಎಕ್ಸ್ಎಸ್ಆರ್ 155'ಗೆ ಬದಲಾಗಿ ಟಿವಿಎಸ್ ರೋನಿನ್, ಬಜಾಜ್ ಪಲ್ಸರ್ 150 ಹಾಗೂ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್‌ಗಳನ್ನು ಖರೀದಿ ಮಾಡಬಹುದು. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಅತಿ ಶೀಘ್ರದಲ್ಲೇ 3 ಎಸ್‌ಯುವಿಗಳು ಭಾರತದಲ್ಲಿ ಬಿಡುಗಡೆ

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ, ಅದರಲ್ಲೂ ಮಿಡ್‌ಸೈಜ್ ಎಲೆಕ್ಟ್ರಿಕ್ ಎಸ್‌ಯುವಿಗಳು ಮಾರುಕಟ್ಟೆಯಲ್ಲಿ ಭಾರೀ ಮಾರಾಟ ಕಾಣುತ್ತಿವೆ. ಪ್ರಮುಖ ಬ್ರಾಂಡ್‌ಗಳಾದ ಟಾಟಾ ಮೋಟಾರ್ಸ್, ಮಹೀಂದ್ರಾ, ಹ್ಯುಂಡೈನಂತಹ ಕಂಪನಿಗಳು ತಮ್ಮ ಮಿಡ್‌ಸೈಜ್ ಎಲೆಕ್ಟ್ರಿಕ್ ಎಸ್‌ಯುವಿಗಳೊಂದಿಗೆ ಗ್ರಾಹಕರ ಮನಗೆದ್ದಿವೆ. ಇದನ್ನೇ ಲಾಭವಾಗಿಸಿಕೊಳ್ಳಲು ನೋಡುತ್ತಿರುವ ಬ್ರಾಂಡ್‌ಗಳು ಹೊಸ ಎಲೆಕ್ಟ್ರಿಕ್ ಎಸ್‌ಯುವಿಗಳ ಬಿಡುಗಡೆಗೆ ಸಜ್ಜಾಗುತ್ತಿವೆ. ಅತಿ ಶೀಘ್ರದಲ್ಲೆ ಮೂರು ಪ್ರಮುಖ ಬ್ರಾಂಡ್‌ಗಳು ಮುಂದಿನ ಕೆಲವೇ ವಾರಗಳಲ್ಲಿ ಹೊಸ ಇವಿಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿವೆ, ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಬಡವರಿಗೆ ಬೆಸ್ಟ್.. 33 Km ಮೈಲೇಜ್, 3.50 ಲಕ್ಷ.. ಈ ಮಾರುತಿ ಕಾರಿಗೆ..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso), ಅತಿ ಕಡಿಮೆ ಬೆಲೆಗೆ ದೊರೆಯುವ ಹ್ಯಾಚ್‌ಬ್ಯಾಕ್ ಆಗಿದೆ. ಇದು ನೋಡಲು ತುಂಬಾ ಸರಳವಾಗಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈ ಅಕ್ಟೋಬರ್ ತಿಂಗಳಲ್ಲೂ 'ಎಸ್-ಪ್ರೆಸ್ಸೊ' ದೊಡ್ಡ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 2,857 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 2,139 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ಶೇಕಡ 33.57% ಬೆಳವಣಿಗೆಯಾಗಿದೆ.

ದುಬಾರಿ ಕಾರಿನಲ್ಲಿ ಬಂದು ಹೀಗಾ ಮಾಡೋದು... ಬೇರೇನು ಸಿಗಲಿಲ್ಲವೆ?

ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ, ರೂ. 8 ಲಕ್ಷ ಬೆಲೆಬಾಳುವ ಮಾರುತಿ ಡಿಜೈರ್ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಕೇವಲ 8 ರೂಪಾಯಿ ಮೌಲ್ಯದ ದಿನಪತ್ರಿಕೆಯನ್ನು ಕದಿಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಹಲ್ ರಸ್ತೆಯ ಮಹಾರಾಣಾ ಪ್ರತಾಪ್ ಕಾಲೋನಿಯಲ್ಲಿರುವ ವಕೀಲ ಸಂಜೀವ್ ಬಿಲ್ಗೈಯಾ ಅವರ ಕಾನೂನು ಕೊಠಡಿಯ ಹೊರಗೆ ಬೆಳಿಗ್ಗೆ 9:55 ರ ಸುಮಾರಿಗೆ ಈ ಕಳ್ಳತನ ನಡೆದಿದೆ. ಆ ವ್ಯಕ್ತಿಯ ಕೃತ್ಯ ಸಿಸಿಟಿವಿಯಲ್ಲಿ ಸಂಪೂರ್ಣವಾಗಿ ಸೆರೆಯಾಗಿದೆ, ದುಬಾರಿ ಕಾರು ಮತ್ತು ಸಣ್ಣ ಕಳ್ಳತನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.

TATA: ಜನ ಸಾಲು ಕಟ್ಟುವರು.. ಡಿ.9ಕ್ಕೆ ಈ ಜನಪ್ರಿಯ ಟಾಟಾ ಕಾರುಗಳು..

ಟಾಟಾ ಮೋಟಾರ್ಸ್ (Tata Motors) ನಂಬಿಕಾರ್ಹ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಫಾರಿ ಹಾಗೂ ಹ್ಯಾರಿಯರ್ ಎಸ್‌ಯುವಿಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಆದರೂ ಮಾರಾಟ ಪ್ರಮಾಣವು ಸಾಧಾರಣ ಮಟ್ಟದಲ್ಲಿದೆ. ಅದಕ್ಕೆ ಇವೆರಡು ಕಾರುಗಳು 'ಡೀಸೆಲ್' ಪವರ್‌ಟ್ರೇನ್ ಆಯ್ಕೆಯಲ್ಲಿ ದೊರೆಯುತ್ತಿರುವುದು ಬಹುಮುಖ್ಯವಾದ ಕಾರಣವಾಗಿದೆ. ಸದ್ಯ, ಕಂಪನಿಯು ಈ ಎಸ್‌ಯುವಿಗಳನ್ನು ಹೊಸ ರೂಪದಲ್ಲಿ ಬಿಡುಗಡೆಗೊಳಿಸಲು ಹಣಿಯಾಗಿದೆ.

ಕಡಿಮೆ ಬೆಲೆಯ ಬೊಂಬಾಟ್ ಬೈಕ್... ಆದರೂ ಮಾರಾಟ ನಿಲ್ಲಿಸಿದ ಕಂಪನಿ: ಯಾಕೆ

ಹೋಂಡಾ CB300R (Honda CB300R) ಬೈಕ್ ಅನ್ನು ಹೋಂಡಾ ಇಂಡಿಯಾ ವೆಬ್‌ಸೈಟ್‌ನಿಂದ ಅಧಿಕೃತವಾಗಿ ತೆಗೆದುಹಾಕಲಾಗಿದೆ ಮತ್ತು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಭಾರತದಾದ್ಯಂತ ಡೀಲರ್‌ಗಳು ಮೋಟಾರ್ ಸೈಕಲ್‌ನ ಸ್ಟಾಕ್ ಅನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದಾರೆ. ಜೊತೆಗೆ ಬೈಕ್ ಬುಕಿಂಗ್ ಅನ್ನು ಸದ್ಯಕ್ಕೆ ತೆಗೆದುಕೊಳ್ಳಲಾಗುತ್ತಿಲ್ಲ. ಉತ್ಪಾದನೆ ಮತ್ತು ಮಾರಾಟ ಸ್ಥಗಿತಗೊಂಡಿದ್ದು, ಡೀಲರ್‌ಗಳು ರಿಯಾಯಿತಿಯೊಂದಿಗೆ ಉಳಿದ ಸ್ಟಾಕ್‌ಗಳನ್ನು ತೆರವುಗೊಳಿಸುತ್ತಿದ್ದಾರೆ ಎಂದು ಸುದ್ದಿಯಾಗಿದೆ. ಇದು ತಾತ್ಕಾಲಿಕ ಉತ್ಪಾದನೆ ಸ್ಥಗಿತವೇ ಅಥವಾ ಶಾಶ್ವತ ಸ್ಥಗಿತವೇ ಎಂಬುದು ಇನ್ನೂ ತಿಳಿದಿಲ್ಲ.

ಡಾಕ್ಟರ್ & ಎಂಜಿನಿಯರ್‌ಗಳ ನೆಚ್ಚಿನ ಕಾರಿದು

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಈ ಕಾರನ್ನು ಡಾಕ್ಟರ್ ಹಾಗೂ ಎಂಜಿನಿಯರ್‌ಗಳು ಮಾತ್ರವಲ್ಲದೆ, ಎಲ್ಲ ವರ್ಗದ ವರ್ಗದ ಗ್ರಾಹಕರು ಮೆಚ್ಚಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಅಕ್ಟೋಬರ್ ತಿಂಗಳಲ್ಲೂ 'ವ್ಯಾಗನ್ಆರ್' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 18,970 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 13,922 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಿಸಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 36.26% ಬೆಳವಣಿಗೆಯಾಗಿದೆ.
Advertisement

ಹ್ಯುಂಡೈ ವೆನ್ಯೂ VS ಕಿಯಾ ಸೋನೆಟ್ ಯಾವುದು ಬೆಸ್ಟ್?

ಭಾರತದಲ್ಲಿ ಇತ್ತೀಚೆಗೆ ಹ್ಯುಂಡೈ ಕಂಪನಿಯು 2025ರ ವೆನ್ಯೂ ಫೆಸ್‌ಲಿಫ್ಟ್ ಮಾಡಲ್ ಅನ್ನು ಬಿಡುಗಡೆ ಮಾಡಿದೆ. ಇದು ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಿಯಾ ಸೊನೆಟ್‌ಗೆ ಸರಿಯಾದ ಪೈಪೋಟಿ ನೀಡುತ್ತಿದೆ. ಎರಡೂ ಮಾಡಲ್‌ಗಳು ಹೊಸ ನವೀಕರಣಗಳು, ವೈಶಿಷ್ಟ್ಯ-ಸಮೃದ್ಧ ಕ್ಯಾಬಿನ್ ಗಳು ಮತ್ತು ವೈವಿಧ್ಯಮಯ ಎಂಜಿನ್ ಆಯ್ಕೆಗಳನ್ನು ನೀಡುವುದರೊಂದಿಗೆ ಈಗ ಬಲವಾದ ಆಯ್ಕೆಗಳನ್ನು ನೀಡುತ್ತಿವೆ. ಆದರೆ ಖರೀದಿಗೆ ಯಾವುದು ಬೆಸ್ಟ್ ಎಂಬ ವಿಷಯಕ್ಕೆ ಬಂದರೆ ಬೆಲೆ, ಮೈಲೇಜ್ ಮತ್ತು ಪವರ್ ಟ್ರೇನ್ ಆಯ್ಕೆಗಳ ವಿಷಯದಲ್ಲಿ ಇವೆರಡನ್ನು ಹೋಲಿಕೆ ಮಾಡಿ ನೋಡಬೇಕು.

ಟಾಟಾ ಬ್ರಹ್ಮಾಸ್ತ್ರ ಬರ್ತಿದೆ... ಕೇವಲ 2 ದಿನ ಬಾಕಿ

ಹೊಸ ಟಾಟಾ ಸಿಯೆರಾ (Tata Sierra) ನವೆಂಬರ್ 15 ರಂದು ಅನಾವರಣಕ್ಕೆ ಸಜ್ಜಾಗಿದ್ದು, ಇದೇ ನವೆಂಬರ್ 25 ರಂದು ಬಿಡುಗಡೆಗೊಳ್ಳಲಿದೆ. ಟಾಟಾ ಮೋಟಾರ್ಸ್ ತನ್ನ ಐಕಾನಿಕ್ ಸಿಯೆರಾ ಎಸ್‌ಯುವಿಯನ್ನು 1990ರ ದಶಕದ ಮೊದಲ ಮಾಡಲ್‌ನಿಂದ ಪ್ರೇರಿತವಾಗಿ ಆಧುನಿಕ ವಿನ್ಯಾಸದೊಂದಿಗೆ ಮತ್ತೆ ಬಿಡುಗಡೆಯಾಗುತ್ತಿದೆ. ಇದು ಬಾಕ್ಸೀ ಸಿಲೂಯೆಟ್ ಮತ್ತು ಸುಧಾರಿತ ತಂತ್ರಜ್ಞಾನವನ್ನು ಒಳಗೊಂಡಿದೆ. ಪೆಟ್ರೋಲ್ ಚಾಲಿತ ವಾಹನ (ICE) ಮತ್ತು ಎಲೆಕ್ಟ್ರಿಕ್ ವಾಹನ (EV) ಆವೃತ್ತಿಗಳನ್ನು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಬಿಡುಗಡೆಯಾದ ಟಾಟಾ ಕರ್ವ್ ಎಕ್ಸಿಕ್ಯೂಟಿವ್ ಎಡಿಷನ್ ವಿಶೇಷತೆ

ಟಾಟಾ ಮೋಟಾರ್ಸ್ (Tata Motors), ವಿಶೇಷವಾಗಿ ಹಿಂಬದಿ ಸೀಟಿನ ಪ್ರಯಾಣಿಕರಿಗೆ ಸೌಕರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹೊಸ ಕಾರ್ಯನಿರ್ವಾಹಕ ವೈಶಿಷ್ಟ್ಯಗಳೊಂದಿಗೆ ಟಾಟಾ ಕರ್ವ್‌ನ ನವೀಕರಿಸಿದ ಆವೃತ್ತಿಯನ್ನು ಮೊನ್ನೆಯಷ್ಟೆ ಬಿಡುಗಡೆ ಮಾಡಿದೆ. ಈ ನವೀಕರಣವು ಕರ್ವ್‌ನ ಇಂಧನ ಚಾಲಿತ ವಾಹನ (ICE) ಮತ್ತು ಎಲೆಕ್ಟ್ರಿಕ್ ವಾಹನ (EV) ಆವೃತ್ತಿಗಳಿಗೆ ಲಭ್ಯವಿದೆ. ಅಲ್ಲದೆ ಕಂಪನಿಯ ಹೆಮ್ಮೆಯ ಸುರಕ್ಷತೆಯ ಪರಂಪರೆಯನ್ನು ಮುಂದುವರೆಸುತ್ತಾ ಲೆವೆಲ್ 2 ADAS ನೊಂದಿಗೆ ಸುಸಜ್ಜಿತವಾಗಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.

ಗ್ರಾಹಕರ ಪ್ರತಿಕ್ರಿಯೆ ನೋಡಿ ಮನಸೋತ ಟಾಟಾ

ಅಕ್ಟೋಬರ್ 2025 ರಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರು ಟಾಟಾ ನೆಕ್ಸಾನ್ ಆಗಿದ್ದು, ಇದು ತನ್ನ ಎಲೆಕ್ಟ್ರಿಕ್ ಮಾಡಲ್‌ಗಳು ಸೇರಿದಂತೆ 22,083 ಯುನಿಟ್‌ ಕಾರುಗಳು ಮಾರಾಟವಾಗಿವೆ. ನೆಕ್ಸಾನ್ ಮಾರಾಟ ಪಟ್ಟಿಯಲ್ಲಿ ಗಮನಾರ್ಹ ಅಂತರದಿಂದ ಮುನ್ನಡೆ ಸಾಧಿಸಿದೆ, ಕಳೆದ ವರ್ಷದ ಇದೇ ಅವಧಿಗಿಂತ ಶೇ 50 ರಷ್ಟು ಹೆಚ್ಚಾಗಿದೆ, ಹಬ್ಬದ ಋತುವಿನಲ್ಲಿ ಖರೀದಿದಾರರಲ್ಲಿ ಇದು ಅಗ್ರ ಆಯ್ಕೆಯಾಗಿದೆ. ಒಟ್ಟಾರೆಯಾಗಿ, ಹಬ್ಬದ ಋತು ಮತ್ತು ಇತ್ತೀಚಿನ GST ಕಡಿತಗಳು ಈ ಕಾರಿನ ಬಲವಾದ ಮಾರಾಟಕ್ಕೆ ಕಾರಣವಾಗಿವೆ, ಅಕ್ಟೋಬರ್ 2025 ರಲ್ಲಿ ಈ SUV ಪ್ರಾಬಲ್ಯ ಸಾಧಿಸಿದೆ.

ಹೊಸ ಯಮಹಾ FZ-Rave ಬಿಡುಗಡೆ: ಕೇವಲ 1.17 ಲಕ್ಷಕ್ಕೆ ಸ್ಪೋರ್ಟಿ ಡಿಸೈನ್

ಯಮಹಾ ಕಂಪನಿಯು ಭಾರತದಲ್ಲಿ ತನ್ನ ಹೊಸ FZ-Rave ಬೈಕ್ ಅನ್ನು ಬಿಡುಗಡೆ ಮಾಡಿದೆ, ಇದರ ಬೆಲೆ 1.17 ಲಕ್ಷ ರೂ. (ಎಕ್ಸ್ ಶೋರೂಂ) ಇದೆ. ಹೊಸ ಯಮಹಾ FZ-RAVE ಭಾರತದಲ್ಲಿ 150cc ವಿಭಾಗದಲ್ಲಿ ಹೊಸ ಅಲೆ ಎಬ್ಬಿಸಲು ಸಜ್ಜಾಗಿದೆ, ಪ್ರಾಯೋಗಿಕತೆ ಮತ್ತು ಉತ್ಸಾಹ ಎರಡನ್ನೂ ಬಯಸುವ ಯುವ ಸವಾರರಿಗೆ ಆಕ್ರಮಣಕಾರಿ ಡಿಸೈನ್ ಮತ್ತು ಉತ್ತಮ ಪರ್ಫಾಮೆನ್ಸ್ ನೀಡುತ್ತದೆ. ಹೊಸ FZ-RAVE ಮಾರುಕಟ್ಟೆಯಲ್ಲಿ FZ ಸಿರೀಸ್ ‌ನ ಉಪಸ್ಥಿತಿಯನ್ನು ಬಲಪಡಿಸುತ್ತದೆ, ಇದು ಇಂದಿನ ಪೀಳಿಗೆಗೆ ನಿಜವಾಗಿಯೂ ಅನುರಣಿಸುವ ಮೋಟಾರ್‌ಸೈಕಲ್‌ಗಳಿಗೆ ಯಮಹಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಬೈಕ್‌ನಂತೆ 30 Km ಮೈಲೇಜ್.. ರೂ.5.99 ಲಕ್ಷಕ್ಕೆ ಲಭ್ಯ..

ಮಾರುತಿ ಸುಜುಕಿ ಬಲೆನೊ (Maruti Suzuki Baleno), ಪ್ರಮುಖ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಕೊಂಡುಕೊಳ್ಳುತ್ತಿದ್ದಾರೆ. ಈ ಅಕ್ಟೋಬರ್ ತಿಂಗಳಲ್ಲೂ 'ಬಲೆನೊ' ದೊಡ್ಡ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಸರಿ ಸುಮಾರು 16,873 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 16,082 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಅಂಶವನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 5% ಬೆಳವಣಿಗೆಯಾಗಿದೆ.

ಇದು ರಸ್ತೆ ಮೇಲಿನ ಅರಮನೆಯಂತಿದೆ.. ದುಬಾರಿ ಬೆಲೆ ಹೊಸ SUV ಖರೀದಿಸಿದ..

ಯುವ ಕ್ರಿಕೆಟಿಗ ಅರ್ಶ್‌ದೀಪ್ ಸಿಂಗ್ (Arshdeep Singh), ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಅವರು, ಫಾಸ್ಟ್ ಬೌಲರ್ ಆಗಿದ್ದಾರೆ. 2024ರ ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. 2025ರ ಚಾಂಪಿಯನ್ಸ್ ಟ್ರೋಫಿ ಹಾಗೂ 2018ರ ಅಂಡರ್19 ವಿಶ್ವಕಪ್ ಗೆಲ್ಲುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಾರೆ.

ಇತ್ತೀಚೆಗೆ ಬಿಡುಗಡೆಯಾದ ಕೈನೆಟಿಕ್ DX ಸ್ಕೂಟರ್ ಡೆಲಿವರಿಗೆ ಸಜ್ಜು

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕಾ ಕಂಪನಿಗಳಲ್ಲಿ ಒಂದಾದ ಕೈನೆಟಿಕ್ ಲಿಮಿಟೆಡ್, ಅಕ್ಟೋಬರ್ 16, 2025 ರಂದು ತನ್ನ ಮೊದಲ ಶೋರೂಂ ಉದ್ಘಾಟನೆಯನ್ನು ಮಾಡಿತು. ಬಳಿಕ ತನ್ನ ಕೈನೆಟಿಕ್ DX ಎಂಬ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಅಗಾಧ ಮಾರುಕಟ್ಟೆ ಪ್ರತಿಕ್ರಿಯೆ ಮತ್ತು ಬಲವಾದ ಬುಕಿಂಗ್‌ಗಳು ಹರಿದುಬಂದಿವೆ. ಇದೀಗ ಬೇಡಿಕೆ ಪೂರೈಕೆ ಮಾಡಲು ಕೈನೆಟಿಕ್ DX ನ ಡೆಲಿವರಿಗಳು ನವೆಂಬರ್ 2025 ರ ಅಂತ್ಯದಲ್ಲಿ ಪ್ರಾರಂಭವಾಗುತ್ತವೆ ಎಂದು ಕಂಪನಿ ತಿಳಿಸಿದೆ.
Advertisement

ಎಲ್ಲಾ ಕಾರು ಮಾಲೀಕರಿಗೆ ಪಾಠ ಕಲಿಸಿದೆ ದೆಹಲಿ ಸ್ಫೋಟ

ದೆಹಲಿಯಲ್ಲಿ ಸಂಭವಿಸಿದ ದುರಂತ ಸ್ಫೋಟದ ಘಟನೆಯು ಕಾರು ಮಾಲೀಕರಿಗೆ ತಮ್ಮ ವಾಹನಗಳನ್ನು ಮಾರಾಟ ಮಾಡುವಾಗ ನಿರ್ಣಾಯಕ ಪಾಠಗಳನ್ನು ಕಲಿಸಿದೆ. ತೀವ್ರ ಪರಿಣಾಮಗಳನ್ನು ತಪ್ಪಿಸಲು ಸರಿಯಾದ ಕಾನೂನು ಮತ್ತು ಕಾರ್ಯವಿಧಾನದ ಸುರಕ್ಷತೆಗಳ ಮಹತ್ವವನ್ನು ಒತ್ತಿಹೇಳಿದೆ. ಪ್ರಾದೇಶಿಕ ಸಾರಿಗೆ ಕಚೇರಿ (RTO) ಮೂಲಕ ಅಧಿಕೃತವಾಗಿ ಮಾಲೀಕತ್ವವನ್ನು ವರ್ಗಾಯಿಸದೆಯೇ, ಕಾರನ್ನು ಹೇಗೆ ಹಲವು ಬಾರಿ ಮಾರಾಟ ಮಾಡಲಾಗಿದೆ ಎಂಬುದನ್ನು ಈ ದುರದೃಷ್ಟಕರ ಘಟನೆ ಬಹಿರಂಗಪಡಿಸಿದೆ. ಕಾನೂನು ಮತ್ತು ಆರ್ಥಿಕ ಹೊಣೆಗಾರಿಕೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕಾರು ಮಾಲೀಕರು ಈ ಘಟನೆಯಿಂದ ಏನೆಲ್ಲಾ ಪಾಠ ಕಲಿಯಬೇಕು ನೋಡೋಣ.

TATA: ಕಲ್ಲು ಬಂಡೆಯಂತಹ ಈ ಟಾಟಾ SUV ಬೇಕೆಂದು ಹಠ ಹಿಡಿದ ಗ್ರಾಹಕರು..

ಟಾಟಾ ಹ್ಯಾರಿಯರ್ ಇವಿ (Tata Harrier EV) ಜನಪ್ರಿಯ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಇದೇ ಜೂನ್‌ ತಿಂಗಳಲ್ಲಿ ಮಾರಾಟಕ್ಕೆ ತರಲಾಯಿತು. ಅಂದಿನಿಂದಲೇ ಈ ಕಾರಿಗೆ ಭಾರೀ ಬೇಡಿಕೆ ಬಂದಿದ್ದು, ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ನೂತನ 'ಹ್ಯಾರಿಯರ್ ಇವಿ' ನೋಡಲು ತುಂಬಾ ಚೆನ್ನಾಗಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸದ್ಯ, ಈ ಕಾರಿನ ಕಾಯುವಿಕೆ ಅವಧಿ (Waiting Period) ಕುರಿತಂತೆ ಒಂದಷ್ಟು ವಿವರಗಳು ಲಭ್ಯವಾಗಿವೆ.

Maruti: ಮಾರುತಿಯ ಮೊದಲ EV ಕಾರು ಬಿಡುಗಡೆಗೆ ಒಂದೇ ತಿಂಗಳು ಬಾಕಿ

ಡಿಸೆಂಬರ್ 2, 2025 ರಂದು 'ಮಾರುತಿ ಸುಜುಕಿ ಇ ವಿಟಾರಾ' (Maruti Suzuki E Vitara) ಎಂಬ ಮೊದಲ ಪೂರ್ಣ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆ ಮಾಡುವ ಮೂಲಕ ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಮಹತ್ವದ ಪ್ರವೇಶ ಮಾಡಲು ಮಾರುತಿ ಸುಜುಕಿ ಸಜ್ಜಾಗಿದೆ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಇವಿ ವಿಭಾಗದಲ್ಲಿ ತನ್ನನ್ನು ತಾನು ಬಲವಾಗಿ ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ಈ ಬಿಡುಗಡೆಯು ಬ್ರ್ಯಾಂಡ್‌ಗೆ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಇ-ವಿಟಾರಾ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ, ಇದು ವಿಭಿನ್ನ ಬಳಕೆದಾರರ ಅಗತ್ಯತೆಗಳನ್ನು ಪೂರೈಸಲಿದೆ.

ಯಮಹಾ EC-06 ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಜಾಗತಿಕ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಯಮಹಾ, ಅಂತರ್‌ - ನಗರ ಚಾಲನೆಗಾಗಿ ವಿನ್ಯಾಸಗೊಳಿಸಲಾದ 'ಯಮಹಾ EC-06' (Yamaha EC-06) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಇದನ್ನು ಸೊಗಸಾದ ಮತ್ತು ಪ್ರಾಯೋಗಿಕ ಪ್ರಯಾಣದ ಆಯ್ಕೆಯನ್ನು ಬಯಸುವ ಸವಾರರನ್ನು ಗುರಿಯಾಗಿಟ್ಟುಕೊಂಡು ಡಿಸೈನ್ ಮಾಡಲಾಗಿದೆ. ಈ ಸ್ಕೂಟರ್ ಯಮಹಾದ ಕೋರ್ ಡಿಎನ್‌ಎಯನ್ನು ಆಧುನಿಕ ವಿನ್ಯಾಸ ಸಂವೇದನೆಗಳೊಂದಿಗೆ ಸಂಯೋಜಿಸುತ್ತದೆ. ಇದರ ಸ್ಥಿರವಾದ ನಿಲುವು ಮತ್ತು ಎತ್ತರದ ವಿನ್ಯಾಸವು ಇದಕ್ಕೆ ಉನ್ನತ - ಕೇಂದ್ರಿತ ಉಪಸ್ಥಿತಿಯನ್ನು ನೀಡುತ್ತದೆ ಎಂದು ಯಮಹಾ ಹೇಳಿದೆ.

60 Km ಮೈಲೇಜ್, ಬರೀ 77,000 ರೂಪಾಯಿಗೆ ಲಭ್ಯ.. ಈ ಜನಪ್ರಿಯ ಬೈಕ್..

ಹೋಂಡಾ ಲಿವೋ (Honda Livo) ಜನಪ್ರಿಯ ಪ್ರಯಾಣಿಕ ಬೈಕ್ ಆಗಿದ್ದು, ದೈನಂದಿನ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿದೆ. ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. ಪ್ರೀಮಿಯಂ ಲುಕ್‌ನ್ನು ಹೊಂದಿದೆ. ನೀವು ಪ್ರತಿನಿತ್ಯ ಆಫೀಸ್‌ಗೆ ತೆರಳಲು ಹೊಚ್ಚ ಹೊಸ ಮೋಟಾರ್‌ಸೈಕಲ್‌ವೊಂದನ್ನು ಖರೀದಿ ಮಾಡಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, 'ಲಿವೋ' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಈ ಬೈಕ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.