Best mileage cars: 7 ಲಕ್ಷಕ್ಕಿಂತ ಕಡಿಮೆ ಬೆಲೆ... 24 ಕಿ.ಮೀ ಓಡಿಸಿ

ಪ್ರತಿ ಲೀಟರ್‌ಗೆ 20 ಕಿ.ಮೀ ಮೈಲೇಜ್ ಹೊಂದಿರುವ ಏಳು ಲಕ್ಷಕ್ಕಿಂತ ಕಡಿಮೆ ಬೆಲೆಯ ಅಗ್ರ ಐದು ಕಾರುಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ. ಇದರಿಂದ ಕಾಲಕಾಲಕ್ಕೆ ನಿಮ್ಮ ಕಾರಿನಲ್ಲಿ ಇಂಧನವನ್ನು ಮರುಭರ್ತಿ ಮಾಡುವ ಒತ್ತಡವಿಲ್ಲದೆ ಆರಾಮದಾಯಕ ಚಾಲನಾ ಅನುಭವ ಪಡೆಯಬಹುದು. ಟಾಟಾ ಹಾಗೂ ಮಾರುತಿ ಸುಜುಕಿ ಕಂಪನಿಗಳ ಆಯ್ದ ಕಾರುಗಳು ಲೀಟರ್‌ಗೆ 20.52 ಕಿ.ಮೀ ನಿಂದ 24.80 ಕಿ.ಮೀ ಮೈಲೇಜ್ ಅನ್ನು ನೀಡುತ್ತವೆ. ಬನ್ನಿ ಹಾಗಾದ್ರೆ ಭಾರತದಲ್ಲಿ ಕಡಿಮೆ ಬೆಲೆಗೆ ಸಿಗುವ ಬೆಸ್ಟ್ ಮೈಲೇಜ್ ಕಾರುಗಳನ್ನು ಇಲ್ಲಿ ನೋಡೋಣ.

34 ಕಿ.ಮೀ ಮೈಲೇಜ್.. 3.70 ಲಕ್ಷ, ಈ ಜನಪ್ರಿಯ ಮಾರುತಿ ಕಾರನ್ನು..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10), ಮಧ್ಯಮ ವರ್ಗದ ಗ್ರಾಹಕರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ. ನೋಡುಗರ ಕಣ್ಣು ಕುಕ್ಕುವಂತಹ ಸರಳವಾದ ವಿನ್ಯಾಸವನ್ನು ಹೊಂದಿದೆ. ಅದಕ್ಕೆ ತಕ್ಕಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದ್ದು, ಅದು ಈ ಸೆಪ್ಟೆಂಬರ್‌ ತಿಂಗಳಲ್ಲೂ ಮುಂದುವರಿದಿದೆ. ಒಟ್ಟು 5,434 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 8,655 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -37% ಇಳಿಮುಖವಾಗಿದೆ.

ದಿನ ಭವಿಷ್ಯ: ಇಂದು ಹಣ ಕಳೆದುಕೊಳ್ಳೋದು ಯಾರು?


Mahindra: 7.99 ಲಕ್ಷ, 2025ರ ಹೊಸ ಮಹೀಂದ್ರಾ ಬೊಲೆರೊ ಖರೀದಿಸಬೇಕೇ..

ಇತ್ತೀಚೆಗೆ 2025ರ ನೂತನ ಮಹೀಂದ್ರಾ ಬೊಲೆರೊ ಫೇಸ್‌ಲಿಫ್ಟ್ (Mahindra Bolero Facelift) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿತ್ತು. ಇದು ವಿನ್ಯಾಸ ಹಾಗೂ ವೈಶಿಷ್ಟ್ಯಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದೆ. ಕನಿಷ್ಠ ರೂ.7.99 ಲಕ್ಷ ಮತ್ತು ಗರಿಷ್ಠ ರೂ.9.69 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ನೀವು ಹೊಸ ಕಾರೊಂದನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ, 'ಬೊಲೆರೊ' ಅತ್ಯುತ್ತಮ ಆಯ್ಕೆಯಾಗಲಿದೆ. ನಾವಿಲ್ಲಿ ಇದೇ ಎಸ್‌ಯುವಿಯ ಆನ್-ರೋಡ್ ದರ (On-Road Price) ಹಾಗೂ ಇಎಂಐ (EMI) ಕುರಿತಂತೆ ಪ್ರಮುಖ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.
Advertisement

Maruti: 5-ಸ್ಟಾರ್ ಸೇಫ್ಟಿಯೊಂದಿಗೆ ಮಿಂಚುತ್ತಿದೆ ಹೊಸ ಮಾರುತಿ ಕಾರು!

ಹೊಸ ಮಾರುತಿ ವಿಕ್ಟೋರಿಸ್ ನಿಜಕ್ಕೂ ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ (BNCAP) ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ. ಈ ಮೌಲ್ಯಮಾಪನಗಳಲ್ಲಿ ವಯಸ್ಕ ಮತ್ತು ಮಕ್ಕಳ ಪ್ರಯಾಣಿಕರಿಬ್ಬರಿಗೂ ಪೂರ್ಣ 5-ಸ್ಟಾರ್ ಸುರಕ್ಷತಾ ರೇಟಿಂಗ್‌ಗಳನ್ನು ಸಾಧಿಸಿದ ಡಿಜೈರ್ ನಂತರ ಇದು ಎರಡನೇ ಮಾರುತಿ ಕಾರಾಗಿದೆ. ಹಾಗೆಯೆ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಸುರಕ್ಷಿತ ಮಧ್ಯಮ ಗಾತ್ರದ SUV ಗಳಲ್ಲಿ ಒಂದಾಗಿಸಿದೆ. ಇದು ಇತ್ತೀಚಿನ ಮಾಡಲ್‌ಗಳಲ್ಲಿ ವಾಹನ ಸುರಕ್ಷತೆಗೆ ಮಾರುತಿ ಸುಜುಕಿಯ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

7-ಸೀಟರ್ Mpv ಹುಡುಕುತ್ತಿದ್ದೀರಾ.. ಈ 5 ಕಾರುಗಳು ಬೆಸ್ಟ್..

ನೂತನ ಕಾರನ್ನು ಖರೀದಿ ಮಾಡಬೇಕೆಂದು ಸಾವಿರಾರು ಜನರ ಕನಸಾಗಿರುತ್ತದೆ. ವಿಶೇಷವಾಗಿ ಬಹುತೇಕರು ತಮ್ಮ ಕುಟುಂಬಕ್ಕಾಗಿ ಹೆಚ್ಚು ಆಸನಗಳ ಹೊಚ್ಚ ಹೊಸ ಎಂವಿಪಿ (ಮಲ್ಟಿ-ಪರ್ಪಸ್ ವೆಹಿಕಲ್) ಖರೀದಿಸಲು ಹುಡುಕಾಟ ನಡೆಸುತ್ತಿರುತ್ತಾರೆ. ಅಂತಹವರಿಗೆ ಕಿಯಾ ಕ್ಯಾರೆನ್ಸ್ ಕ್ಲಾವಿಸ್, ರೆನಾಲ್ಟ್ ಟ್ರೈಬರ್, ಮಾರುತಿ ಸುಜುಕಿ ಎರ್ಟಿಗಾ, ಟೊಯೊಟಾ ರೂಮಿಯನ್ ಹಾಗೂ ಮಾರುತಿ ಇಕೋ ಕಾರುಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ನಾವಿಲ್ಲಿ ಈ ಎಂಪಿವಿಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಒಮ್ಮೆ ಹೂಡಿಕೆ ಮಾಡಿ, ತಿಂಗಳಿಗೆ 20 ಸಾವಿರ ಆದಾಯ ಪಡೆಯಿರಿ!

ಹಿರಿಯ ನಾಗರಿಕರ ಉಳಿತಾಯ ಯೋಜನೆಯು ನಿವೃತ್ತರಿಗೆ ₹20,500 ವರೆಗೆ ಸುರಕ್ಷಿತ ಮಾಸಿಕ ಆದಾಯವನ್ನು ನೀಡುತ್ತದೆ, ಇದು 8.2% ಬಡ್ಡಿದರದೊಂದಿಗೆ ಆರ್ಥಿಕ ಸ್ಥಿರತೆಯನ್ನು ಒದಗಿಸುತ್ತದೆ.

ತುಂಬಿವೆ ಶೋರೂಂ.. 29 Km ಮೈಲೇಜ್, ಹೊಸ ಮಾರುತಿ ಕಾರಿಗೆ..

ಇತ್ತೀಚೆಗೆ ನೂತನ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಲಾಗಿತ್ತು. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಕಾರು ಮಾರಾಟಕ್ಕೆ ಬಂದು 1 ತಿಂಗಳು ಕಳೆಯುವ ಮೊದಲೇ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಇದೇ ಸೆಪ್ಟೆಂಬರ್‌ನಲ್ಲಿ ಒಟ್ಟು 4,261 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ.

30 ಕಿ.ಮೀ ಮೈಲೇಜ್.. 5-ಸೀಟರ್, ಅಗ್ಗದ ಟೊಯೊಟಾ ಕಾರಿಗೆ ಫುಲ್..

ಟೊಯೊಟಾ ಗ್ಲಾನ್ಜಾ (Toyota Glanza) ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್‌ ಎಂದೇ ಹೆಸರುವಾಸಿಯಾಗಿದೆ. ಇದು ಮಾರುತಿ ಸುಜುಕಿ ಬಲೆನೊದ ರೀ-ಬ್ಯಾಡ್ಜ್ ಮಾಡೆಲ್ ಆಗಿದೆ. ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸವನ್ನು ಹೊಂದಿದ್ದು, ಹಲವು ಅತ್ಯಾಧುನಿಕವಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈ ಸೆಪ್ಟೆಂಬರ್ ತಿಂಗಳಲ್ಲೂ'ಗ್ಲಾನ್ಜಾ' ಕಾರು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 3,299 ಯುನಿಟ್‌ಗಳನ್ನು ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 3,246 ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 2% ಪ್ರಗತಿಯಾಗಿದೆ.

ಬಡವರ ಬಂಡಿ.. ರೂ.3.50 ಲಕ್ಷ, 33 Km ಮೈಲೇಜ್.. 5-ಸೀಟರ್..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಜನಪ್ರಿಯ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಎಲ್ಲ ವರ್ಗದ ಗ್ರಾಹಕರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ. ನೀವು ಹೊಚ್ಚ ಹೊಸ ಹ್ಯಾಚ್‌ಬ್ಯಾಕ್‌ನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ 'ಎಸ್-ಪ್ರೆಸ್ಸೊ' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಈ ಕಾರಿನ ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

2026 ರಲ್ಲಿ ಬಿಡುಗಡೆಗೆ ಸಜ್ಜಾಗಿವೆ 7 ಬೊಂಬಾಟ್ ಎಸ್‌ಯುವಿಗಳು

2026 ರಲ್ಲಿ ಭಾರತೀಯ SUV ಮಾರುಕಟ್ಟೆಯು ವಿಶೇಷವಾಗಿ ಟಾಟಾ ಮತ್ತು ಮಹೀಂದ್ರಾದಿಂದ ಅತ್ಯಾಕರ್ಷಕ ಬಿಡುಗಡೆಗಳ ಅಲೆಗೆ ಸಜ್ಜಾಗಿದೆ. ಎಲೆಕ್ಟ್ರಿಕ್, ಹೈಬ್ರಿಡ್ ಮತ್ತು ಇಂಧನ ಚಾಲಿತ ಕಾರುಗಳು ಶೀಘ್ರದಲ್ಲೆ ಬರಲಿವೆ. ಈ ಬಿಡುಗಡೆಗಳು SUV ವಿನ್ಯಾಸಗಳು ಮತ್ತು ತಂತ್ರಜ್ಞಾನದೊಂದಿಗೆ ಹೊಸತನವನ್ನು ಮುಂದುವರಿಸುವುದರ ಜೊತೆಗೆ ವಿದ್ಯುದೀಕರಣದ ಕಡೆಗೆ ರೂಪಾಂತರವನ್ನು ಪ್ರತಿಬಿಂಬಿಸುತ್ತವೆ. 2026 ರಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಏಳು SUV ಗಳ ಅವಲೋಕನವನ್ನು ಕೆಳಗೆ ನೀಡಲಾಗಿದೆ. ಅವುಗಳ ನಿರೀಕ್ಷಿತ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತು ಪ್ರಮುಖ ವಿವರಗಳನ್ನು ತಿಳಿಯೋಣ.

ಕಾರು ಬಂದು 10 ವರ್ಷ ಕಳೆದರು ಅದೇ ಡಿಮ್ಯಾಂಡ್

ಇತ್ತೀಚೆಗಷ್ಟೆ ರೆನಾಲ್ಟ್ ಕ್ವಿಡ್ ಭಾರತದಲ್ಲಿ ಬಿಡುಗಡೆಯಾಗಿ 10 ವರ್ಷಗಳನ್ನು ಪೂರ್ಣಗೊಳಿಸಿದೆ. ಇದನ್ನು ಆಚರಿಸಲು ಕಂಪನಿಯು ಕ್ವಿಡ್‌ನ 10ನೇ ವಾರ್ಷಿಕೋತ್ಸವ ಆವೃತ್ತಿ (10th Anniversary Edition) ಯನ್ನು ಬಿಡುಗಡೆ ಮಾಡಿದೆ. ಈಗ ಈ ವಿಶೇಷ ಆವೃತ್ತಿಯೊಂದಿಗೆ ಕಾರು ತಯಾರಕರು ಹೆಚ್ಚುವರಿ ವಿಶೇಷತೆ ಮತ್ತು ಪ್ರೀಮಿಯಂ ಸ್ಪರ್ಶಗಳೊಂದಿಗೆ ಹತ್ತು ವರ್ಷಗಳ ಯಶಸ್ಸನ್ನು ಗುರುತಿಸುತ್ತಿದ್ದಾರೆ. ಈ ಜನಪ್ರಿಯ ಹ್ಯಾಚ್‌ಬ್ಯಾಕ್‌ನ ದಶಕವನ್ನು ಗುರುತಿಸುವ ವಿಶಿಷ್ಟ, ಸೊಗಸಾದ ಮತ್ತು ವಿಶೇಷ ಆಚರಣೆಯ ಪ್ರಮುಖಾಂಶಗಳ ಬಗ್ಗೆ ಇಲ್ಲಿ ನೋಡೋಣ.
Advertisement

ನಿಫ್ಟಿ 25,300 ಮುಟ್ಟಿದ ಹಂತದಲ್ಲಿ ಈ 3 ಷೇರುಗಳು ಗಮನಕ್ಕೆ

ನಿಫ್ಟಿ ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳು ಸಕಾರಾತ್ಮಕ ಬೆಳವಣಿಗೆಯನ್ನು ತೋರಿಸುತ್ತಿದ್ದು, ಸೆಪ್ಟೆಂಬರ್ 2023 ರಲ್ಲಿ ಗರಿಷ್ಠ ಮಟ್ಟವನ್ನು ತಲುಪಿವೆ. ಪ್ರಮುಖ ವಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ, ಇದು ಸುಧಾರಿತ ಮಾರುಕಟ್ಟೆ ಭಾವನೆಯನ್ನು ಸೂಚಿಸುತ್ತದೆ.

ಈ BSE ಷೇರುಗಳು ₹10,000 ಮೌಲ್ಯ ₹2 ಲಕ್ಷಕ್ಕೆ ತಲುಪಿದವು!

2025 ರಲ್ಲಿ ಮಾರುಕಟ್ಟೆಯ ಏರಿಳಿತಗಳ ನಡುವೆಯೂ ಬಿಎಸ್‌ಇ-ಪಟ್ಟಿ ಮಾಡಲಾದ ನಿರ್ದಿಷ್ಟ ಕಂಪನಿಗಳು ₹10,000 ಹೂಡಿಕೆಯನ್ನು ₹2 ಲಕ್ಷಕ್ಕೆ ಹೇಗೆ ಪರಿವರ್ತಿಸಿದವು ಎಂಬುದನ್ನು ಕಂಡುಕೊಳ್ಳಿ.

ಎಸ್‌ಯುವಿ ಎಲೆಕ್ಟ್ರಿಕ್ ಸ್ಕೂಟರ್: ಖರ್ಚಿಲ್ಲದೆ 163 ಕಿ.ಮೀ ಓಡಬಲ್ಲದು

ರಿವರ್ ಇಂಡೀ ಜೆನ್ 3 ಇವಿ ಸಿಟಿ ರೈಡ್‌ಗಾಗಿ ಸುಸಜ್ಜಿತ, ವೈಶಿಷ್ಟ್ಯಗಳಿಂದ ತುಂಬಿದ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಸ್ಥಾನ ಪಡೆದಿದ್ದು, ಪ್ರಾಯೋಗಿಕ ಶ್ರೇಣಿ, ಉತ್ತಮ ಕಾರ್ಯಕ್ಷಮತೆ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ, ಸ್ಪರ್ಧಾತ್ಮಕ ಬೆಲೆ ರೂ.1.46 ಲಕ್ಷದಲ್ಲಿ ಖರೀದಿಗೆ ಲಭ್ಯವಿದೆ. ಉಪಯುಕ್ತತೆ ಮತ್ತು ತಾಂತ್ರಿಕ ಏಕೀಕರಣವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಹಲವಾರು ನವೀಕರಣಗಳನ್ನು ಈ ಸ್ಕೂಟರ್ ಪಡೆದುಕೊಂಡಿದೆ. ಇದನ್ನು ಬ್ರ್ಯಾಂಡ್‌ನ ವೆಬ್‌ಸೈಟ್‌ನಲ್ಲಿ ಅಥವಾ ಸ್ಥಳೀಯ ಡೀಲರ್‌ಶಿಪ್‌ನಲ್ಲಿ ಬುಕ್‌ ಮಾಡಿಕೊಳ್ಳಬಹುದು.

ಹೀರೋ ಸ್ಪ್ಲೆಂಡರ್ ಪ್ಲಸ್ VS ಹೋಂಡಾ ಶೈನ್ 100: ಯಾವುದು ಬೆಸ್ಟ್?

ಹೀರೋ ಸ್ಪ್ಲೆಂಡರ್ ಪ್ಲಸ್ ಮತ್ತು ಹೋಂಡಾ ಶೈನ್ 100 ಎರಡೂ 100 ಸಿಸಿ ವಿಭಾಗದಲ್ಲಿ ಜನಪ್ರಿಯ ಪ್ರಯಾಣಿಕ ಬೈಕ್‌ಗಳಾಗಿವೆ. ಎರಡೂ ಇಂಧನ-ಸಮರ್ಥ, ಬಳಸಲು ಸುಲಭ ಮತ್ತು ದಟ್ಟವಾದ ಡೀಲರ್ ನೆಟ್‌ವರ್ಕ್‌ಗಳಿಂದ ಬೆಂಬಲಿತವಾಗಿವೆ. ಆದರೆ ಇವು ಬೆಲೆ, ಮೈಲೇಜ್ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ಭಿನ್ನವಾಗಿವೆ. ಹಾಗಾಗಿ ಇವೆರಡರಲ್ಲಿ ಯಾವುದು ಬೆಸ್ಟ್ ಎಂಬುದನ್ನು ತಿಳಿಯಲು ಬೆಲೆ, ಮೈಲೇಜ್ ಮತ್ತು ಪ್ರಮುಖ ವೈಶಿಷ್ಟ್ಯಗಳನ್ನು ಹೋಲಿಕೆ ಮಾಡೋಣ. ಆಗ ನಿಮ್ಮ ದೈನಂದಿನ ಬಳಕೆಗೆ ಸರಿಹೊಂದುವಂತಹದನ್ನು ನೀವು ಆಯ್ಕೆ ಮಾಡಬಹುದು.

Toyota: ಸರ್ಕಾರದೊಂದಿಗೆ ಟೊಯೋಟಾ ಒಪ್ಪಂದ

ಟೊಯೋಟಾ (Toyota) ಕಿರ್ಲೋಸ್ಕರ್ ಮೋಟಾರ್, ಇಂದು ಕರ್ನಾಟಕ ಸರ್ಕಾರದ ಸಮಗ್ರ ಶಿಕ್ಷಣ ಕರ್ನಾಟಕ (ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ) ಜೊತೆಗೆ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣವನ್ನು ಉತ್ತೇಜಿಸಲು ಮತ್ತು ಬಲಪಡಿಸಲು ತಿಳುವಳಿಕೆ ಒಪ್ಪಂದ (ಎಂಒಯು) ಮಾಡಿಕೊಂಡಿರುವುದಾಗಿ ಪ್ರಕಟಿಸಿದೆ. ಇದರಡಿ ಶೈಕ್ಷಣಿಕ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡುವುದು, ಆಟೋಮೊಬೈಲ್ ತಂತ್ರಜ್ಞಾನದಲ್ಲಿ ಪ್ರಾಯೋಗಿಕ ಕಲಿಕೆಯೊಂದಿಗೆ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಿ ಜವಾಬ್ದಾರಿಯುತ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ನಾಗರಿಕರನ್ನಾಗಿ ಮಾಡುವ ಗುರಿಯನ್ನು ಹೊಂದಿರುವುದಗಿ ಟೊಯೋಟಾ ತಿಳಿಸಿದೆ.

27 Km ಮೈಲೇಜ್.. ಬರೀ 5 ಲಕ್ಷ, ಆದರೂ ಈ ಫೇಮಸ್ ಹ್ಯುಂಡೈ..

ಹ್ಯುಂಡೈ ಎಕ್ಸ್‌ಟರ್‌ (Hyundai Exter) ವಿಶ್ವಾಸಾರ್ಹ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸ ಹೊಂದಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಆದರೂ ಈ ಸೆಪ್ಟೆಂಬರ್ ತಿಂಗಳು 'ಎಕ್ಸ್‌ಟರ್‌' ಕಾರಿನ ಮಾರಾಟ ಸಂಖ್ಯೆ ಕುಸಿತವಾಗಿದೆ. ಒಟ್ಟು 5,643 ಯುನಿಟ್‌ಗಳನ್ನು ಮಾತ್ರ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 6,908 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 18.31% ಇಳಿಮುಖವಾಗಿದೆ

ಭಾರತದಲ್ಲಿ ದುಬಾರಿ ಚಿನಾ ಕಾರಿಗೆ ಫುಲ್ ಡಿಮ್ಯಾಂಡ್

ಎಂಜಿ ಮೋಟಾರ್ ಕಂಪನಿಯು ಐಷಾರಾಮಿ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಭಾರತದ ಎರಡನೇ ಅತಿದೊಡ್ಡ ಬ್ರಾಂಡ್ ಆಗಿ ಬೆಳೆದಿದೆ. MG ಸೈಬರ್‌ಸ್ಟರ್ ಮತ್ತು MG M9 ಪ್ರೆಸಿಡೆನ್ಶಿಯಲ್ ಲಿಮೋಸಿನ್ ಕಾರುಗಳ ಸಂಯೋಜಿತ ಯಶಸ್ಸಿನಿಂದ ಇದು ಪ್ರಭಾವಶಾಲಿ ಮೈಲಿಗಲ್ಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಎರಡೂ ಮಾಡಲ್‌ಗಳು ಅಸಾಧಾರಣ ಮಾರುಕಟ್ಟೆ ಪ್ರತಿಕ್ರಿಯೆ ಮತ್ತು ಬಲವಾದ ಬೇಡಿಕೆಯನ್ನು ಪಡೆಯುತ್ತಲೇ ಇವೆ. ಇವು 3 ರಿಂದ 4 ತಿಂಗಳ ಕಾಯುವ ಅವಧಿಯನ್ನು ಹೊಂದಿವೆ. ಈ ಬೇಡಿಕೆಯ ಆಧಾರದ ಮೇಲೆ ಈಗ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರ್ ಎಂದು MG ಸೈಬರ್‌ಸ್ಟರ್ ಅನ್ನು ಘೋಷಿಸಲಾಗಿದೆ.

Skoda: ಬಿಡುಗಡೆಯೇ ಆಗಿಲ್ಲ ಆಗಲೇ ಎಲ್ಲಾ ಕಾರುಗಳು ಉಡೀಸ್

2025ರ ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಬಿಡುಗಡೆಗೂ ಮುನ್ನವೇ ಭಾರತದಲ್ಲಿ ತನ್ನ ಗತ್ತನ್ನು ತೋರಿಸಿದೆ. ಬುಕಿಂಗ್ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಎಲ್ಲಾ 100 ಯೂನಿಟ್‌ ಕಾರುಗಳನ್ನು ಗ್ರಾಹಕರು ಬುಕ್ ಮಾಡಿದ್ದಾರೆ. ಈ ಅಗಾಧ ಬೇಡಿಕೆಯು ಭಾರತೀಯ ಉತ್ಸಾಹಿಗಳಲ್ಲಿ ಸ್ಕೋಡಾದ ಪರ್ಫಾಮೆನ್ಸ್ ಸೆಡಾನ್ ‌ನ ನಿರಂತರ ಆಕರ್ಷಣೆಯನ್ನು ಎತ್ತಿ ತೋರಿಸುತ್ತದೆ. ವಿಶೇಷವಾಗಿ ಸ್ಕೋಡಾ ಆಕ್ಟೇವಿಯಾ ಆರ್‌ಎಸ್ (Skoda Octavia RS) ಅನ್ನು ಈ ವರ್ಷಕ್ಕೆ ಸೀಮಿತ ಆವೃತ್ತಿಯ ಸಿಬಿಯು (ಸಂಪೂರ್ಣವಾಗಿ ನಿರ್ಮಿಸಲಾದ ಘಟಕ) ಆಗಿ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
Advertisement

TVS: 93,800.. 56 ಕಿ.ಮೀ ಮೈಲೇಜ್, ಟಿವಿಎಸ್ ರೈಡರ್ ಬೈಕ್‌ನ ಹೊಸ..

ಈಚೆಗೆ ಜನಪ್ರಿಯ ಟಿವಿಎಸ್ ರೈಡರ್ (TVS Raider) ಮೋಟಾರ್‌ಸೈಕಲ್‌ನ ನೂತನ ರೂಪಾಂತರವಾದ 'ಡುಯಲ್ ಡಿಸ್ಕ್ ಬ್ರೇಕ್'ನ್ನು ಮಾರಾಟಕ್ಕೆ ತರಲಾಗಿತ್ತು. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಸಾಕಷ್ಟು ಹೊಸತನಗಳಿಗೂ ಹೆಸರುವಾಸಿಯಾಗಿದೆ. ನೀವು ಹೊಚ್ಚ ಹೊಸ ಬೈಕ್‌ವೊಂದನ್ನು ಮನೆಗೆ ತರಲು ಆಲೋಚಿಸಿದ್ದೀರಾ.. ಹಾಗಾದರೆ 'ರೈಡರ್ ಡುಯಲ್ ಡಿಸ್ಕ್ ಬ್ರೇಕ್' ರೂಪಾಂತರ (ವೇರಿಯೆಂಟ್) ಹೆಚ್ಚು ಸೂಕ್ತವಾಗಬಲ್ಲದು. ನಾವಿಲ್ಲಿ ಈ ಮೋಟಾರ್‌ಸೈಕಲ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

ಪೊಲೀಸ್ ಇಲಾಖೆಗೆ ಬಲಿಷ್ಠ ಟಾಟಾ ಇವಿಗಳು ಸೇರ್ಪಡೆಗೆ ಸಜ್ಜು

ಸುಸ್ಥಿರ ಮತ್ತು ಪರಿಸರ ಸ್ನೇಹಿ ಪೊಲೀಸ್ ವ್ಯವಸ್ಥೆಗೆ ಮಹತ್ವದ ಹೆಜ್ಜೆಯಾಗಿ ಆರು ಕಸ್ಟಮೈಸ್ ಮಾಡಿದ ಟಾಟಾ ಕರ್ವ್ ಇವಿಗಳನ್ನು ರಾಜ್ಯ ಪೊಲೀಸ್ ವಾಹನಗಳ ಸಮೂಹದಲ್ಲಿ ಸೇರಿಸಲಾಗಿದ್ದು, ಇವುಗಳನ್ನು ರಸ್ತೆ ಸುರಕ್ಷತಾ ಜಾರಿ ಕರ್ತವ್ಯಗಳಿಗಾಗಿ ನಿರ್ದಿಷ್ಟವಾಗಿ ಕಾನ್ಫಿಗರ್ ಮಾಡಲಾಗಿದೆ. ಈ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯು ಭಾರತದಾದ್ಯಂತ ಸರ್ಕಾರಿ ಫ್ಲೀಟ್‌ಗಳಲ್ಲಿ ವ್ಯಾಪಕ ಸ್ವೀಕಾರಕ್ಕೆ ದಾರಿ ಮಾಡಿಕೊಡಲಿದೆ, ಸಾರ್ವಜನಿಕ ಸುರಕ್ಷತಾ ಮೂಲಸೌಕರ್ಯವನ್ನು ಹೆಚ್ಚಿಸುತ್ತಾ ದೇಶದ ಹಸಿರು ಭವಿಷ್ಯಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ಹೇಳಬಹುದು.

TATA: 6-ಸೀಟರ್, ಬಲಭೀಮ ಕಾರಿದು.. ಈ ಜನಪ್ರಿಯ ಟಾಟಾ ಎಸ್‌ಯುವಿ..

ಟಾಟಾ ಸಫಾರಿ (Tata Safari) ಜನಮೆಚ್ಚಿದ ಎಸ್‌ಯುವಿ ಎಂದೇ ಹೆಸರುವಾಸಿಯಾಗಿದೆ. ಇದು ತುಂಬಾ ಚೆನ್ನಾಗಿರುವ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆದರೂ ಈ ಕಾರಿನ ಮಾರಾಟವು ದಿನದಿಂದ ದಿನಕ್ಕೆ ಕುಸಿತವಾಗುತ್ತಿತ್ತು. ಜಿಎಸ್‌ಟಿ ಪರಿಷ್ಕರಣೆ ನಂತರ 'ಸಫಾರಿ' ಬೆಲೆಯೂ ರೂ.1.45 ಲಕ್ಷವರೆಗೆ ಇಳಿಕೆಯಾಗಿದ್ದು, ಈ ಸೆಪ್ಟೆಂಬರ್ ತಿಂಗಳು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಬರೋಬ್ಬರಿ 2,000 ಯುನಿಟ್‌ಗಳನ್ನು ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 1,644 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 22% ಪ್ರಗತಿಯಾಗಿದೆ.

ಎಥರ್ ಇವಿ ಸ್ಕೂಟರ್ ಗ್ರಾಹಕರಿಗಾಗಿ ರಾಷ್ಟ್ರವ್ಯಾಪಿ ಸೇವಾ ಕಾರ್ನಿವಲ್

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಾದ ಎಥರ್ ಎನರ್ಜಿ (Ather Energy) ಲಿಮಿಟೆಡ್, ಅಕ್ಟೋಬರ್ 9 ರಿಂದ 18, 2025 ರವರೆಗೆ ನಡೆಯುವ ರಾಷ್ಟ್ರವ್ಯಾಪಿ ಸೇವಾ ಉಪಕ್ರಮವಾದ ಎಥರ್ ಸರ್ವಿಸ್ ಕಾರ್ನಿವಲ್ ಅನ್ನು ಘೋಷಿಸಿದೆ. ಇದು ಕಂಪನಿಯ ವ್ಯಾಪಕ ಸೇವಾ ಜಾಲದಾದ್ಯಂತ ಎಥರ್ ಗ್ರಾಹಕರಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ, ಹಬ್ಬದ ಋತುವಿನಲ್ಲಿ ತಮ್ಮ ಸ್ಕೂಟರ್ ‌ಗಳನ್ನು ಸುಗಮ, ಚಿಂತೆಯಿಲ್ಲದ ಸವಾರಿಗಳಿಗೆ ಸಿದ್ಧಗೊಳಿಸಲು ಅವರನ್ನು ಪ್ರೋತ್ಸಾಹಿಸುತ್ತದೆ ಎಂದು ಎಥರ್ ಎನರ್ಜಿ ಪ್ರಕಟಣೆಯಲ್ಲಿ ತಿಳಿಸಿದೆ.

Maruti WagonR EV: ಹೊಸ ಮಾರುತಿ ವ್ಯಾಗನ್ಆರ್ ಇವಿ..

ಮಾರುತಿ ಸುಜುಕಿ (Maruti Suzuki) ಮಾತೃ ಸಂಸ್ಥೆ ಸುಜುಕಿ ಮೋಟಾರ್ ಕಾರ್ಪೊರೇಷನ್ (Suzuki Motor Corporation), ಇದೇ ಅ.29 ರಿಂದ ಆರಂಭವಾಗುವ 'ಜಪಾನ್ ಮೊಬಿಲಿಟಿ ಶೋ'ನಲ್ಲಿ ವಿವಿಧ ಹೊಚ್ಚ ಹೊಸ ಕಾರುಗಳನ್ನು ಪ್ರದರ್ಶಿಸಲಿದೆ. ಅದಕ್ಕಾಗಿ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದು, ವಾಹನ ಪ್ರಿಯರ ಕಾತರವು ಹೆಚ್ಚಾಗಿದೆ. ಈ ಶೋನಲ್ಲಿ ಯಾವೆಲ್ಲ ನೂತನ ಕಾರುಗಳನ್ನು ತೋರಿಸಲಾಗುತ್ತದೆ ಎಂಬುದರ ಕುರಿತ ಒಂದಷ್ಟು ವಿವರಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲೂ ಬಹಿರಂಗಪಡಿಸಲಾಗಿದೆ. ವಿಶೇಷವಾಗಿ 'ವ್ಯಾಗನ್ಆರ್ ಇವಿ' ಎಂದೇ ಬಣ್ಣಿಸಲಾಗಿರುವ 'ವಿಷನ್ ಇ-ಸ್ಕೈ' ಕಾನ್ಸೆಪ್ಟ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.