ವಿಮಾನದಂತಹ ಸೌಕರ್ಯದೊಂದಿಗೆ ನಿನ್ನೆಯಷ್ಟೆ ಬಿಡುಗಡೆ

ಎಂಜಿ ಮೋಟಾರ್ ತನ್ನ ಹೊಸ ವಿಂಡ್ಸರ್ ಇನ್‌ಸ್ಪೈರ್ ಎಡಿಷನ್ ಅನ್ನು ನಿನ್ನೆಯಷ್ಟೆ ಬಿಡುಗಡೆ ಮಾಡಿದೆ. 2025 MG ವಿಂಡ್ಸರ್ ಇನ್‌ಸ್ಪೈರ್ ಎಡಿಷನ್ ಭಾರತದಲ್ಲಿ ವಿಂಡ್ಸರ್‌ನ ಒಂದು ವರ್ಷದ ವಾರ್ಷಿಕೋತ್ಸವ ಮತ್ತು 40,000 ಕ್ಕೂ ಹೆಚ್ಚು ಯುನಿಟ್ ವಾಹನಗಳ ಮಾರಾಟ ಗಡಿ ದಾಟಿರುವ ಅಂಗವಾಗಿ ಈ ವಿಶೇಷ ಲಿಮಿಟೆಡ್ ಎಡಿಷನ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಾಗಿದೆ. ಕಂಪನಿ ಹೇಳಿದಂತೆ ಕೇವಲ 300 ಯೂನಿಟ್‌ ಕಾರುಗಳು ಮಾತ್ರ ಲಭ್ಯವಿರುತ್ತದೆ. ಸ್ಟ್ಯಾಂಡರ್ಡ್ ಎಸೆನ್ಸ್ ವೇರಿಯೆಂಟ್‌ಗಿಂತ ಹಲವಾರು ಕಾಸ್ಮೆಟಿಕ್, ಇಂಟೀರಿಯರ್ ಮತ್ತು ಆಕ್ಸೆಸರಿ ಅಪ್‌ಗ್ರೇಡ್‌ಗಳೊಂದಿಗೆ ಈ ಕಾರು ಸಿಗಲಿದೆ.

TATA: ಶೋರೂಂ ಮುಂದೆ ಗ್ರಾಹಕರು ಕ್ಯೂ ನಿಲ್ಲುವರು..

ಟಾಟಾ ಮೋಟಾರ್ಸ್ (Tata Motors) ಜಗಮೆಚ್ಚಿದ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯವಾಗಿ 1991 ರಿಂದ 2003 ರವರೆಗೆ 'ಸಿಯೆರಾ' ಎಸ್‌ಯುವಿಯನ್ನು ಯಶಸ್ವಿಯಾಗಿ ಮಾರಾಟಗೊಳಿಸಲಾಗುತ್ತಿತ್ತು. ಆದರೆ, ವಿವಿಧ ಕಾರಣಗಳಿಗೆ ಈ ಕಾರನ್ನು ಮಾರಾಟದಿಂದ ಸ್ಥಗಿತಗೊಳಿಸಲಾಗಿತ್ತು. ಸದ್ಯ, ಇದೇ 'ಸಿಯೆರಾ'ವನ್ನು ಹೊಸ ರೂಪದಲ್ಲಿ ಬಿಡುಗಡೆಗೊಳಿಸಲು ಕಂಪನಿಯು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದರ ಭಾಗವಾಗಿ ಜನವರಿಯಲ್ಲಿ ಕೊನೆಗೊಂಡ 'ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ'ದಲ್ಲೂ ಪ್ರದರ್ಶಿಲಾಗಿತ್ತು. ಈಗಾಗಲೇ, ನೂತನ 'ಟಾಟಾ ಸಿಯೆರಾ' ಹಲವು ಬಾರಿ ಪ್ರಾಯೋಗಿಕ ಸಂಚಾರವನ್ನು ನಡೆಸುವಾಗಲೂ ಕಾಣಿಸಿಕೊಂಡಿದೆ.

ಕಾರು ಸುರಕ್ಷತೆಯಲ್ಲಿ ಕಂಪನಿಗಳಿಗೆ ಬೆವರಿಳಿಸುವ ನಿರ್ಧಾರ!

ಈಗಾಗಲೇ ಭಾರತದಲ್ಲಿ ಕಾರುಗಳ ಸುರಕ್ಷತೆಯನ್ನು ಅಳೆಯಲು ನಮ್ಮದೇ ಆದ ಕ್ರಾಷ್ ಟೆಸ್ಟ್ ಏಜೆನ್ಸಿಯನ್ನು ಹೊಂದಿದ್ದೇವೆ. ಆದರೆ ಈ ಏಜೆನ್ಸಿಯನ್ನು ಇನ್ನಷ್ಟು ಕಠಿಣಗೊಳಿಸಿ ಕಾರುಗಳ ನಿರ್ಮಾಣ ಗುಣಮಟ್ಟಕ್ಕೆ ಸವಾಲು ಹಾಕುವ ಹೊಸ ಭಾರತ್ NCAP 2.0 ಶೀಘ್ರದಲ್ಲೆ ಬರದಲಿದೆ ಎಂದು ಹೇಳಲಾಗುತ್ತಿದೆ. ಹೊಸ ಭಾರತ್ NCAP 2.0 2027 ರ ಅಂತ್ಯದ ವೇಳೆಗೆ ಬಿಡುಗಡೆಯಾಗಲಿದೆ. ಗಮನಾರ್ಹವಾಗಿ ಕಠಿಣ ಸುರಕ್ಷತಾ ನಿಯಮಗಳು ಮತ್ತು ಪರೀಕ್ಷಾ ಪ್ರೋಟೋಕಾಲ್‌ಗಳನ್ನು ತರುವ ನಿರೀಕ್ಷೆಯಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ.

ಕಲ್ಲು ಬಂಡೆಯಂತಹ ಕಾರಿದು.. 27.97 ಕಿ.ಮೀ ಮೈಲೇಜ್, 10.95 ಲಕ್ಷ.. ಈ ಟ

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ (Toyota Urban Cruiser Hyryder) ವಿಶ್ವಾಸಾರ್ಹ ಎಸ್‌ಯುವಿ ಎಂದೇ ಹೆಸರುವಾಸಿಯಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ಸೆಪ್ಟೆಂಬರ್ ತಿಂಗಳಲ್ಲೂ 'ಹೈರೈಡರ್' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 7,608 ಯುನಿಟ್‌ಗಳನ್ನು ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 5,385 ಯುನಿಟ್‌ಗಳನ್ನು ಮಾರಲಾಗಿತ್ತು. ಈ ದತ್ತಾಂಶವನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 41.28% ಬೆಳವಣಿಗೆಯಾಗಿದೆ.
Advertisement

Renault Triber: ಭಾರತದ ಅತ್ಯಂತ ಅಗ್ಗದ 7-ಸೀಟರ್ ಕಾರಿದು

ಕಾರು ತಯಾರಕ ಕಂಪನಿಯಾಗಿರುವ ರೆನಾಲ್ಟ್ (Renault), ಇತ್ತೀಚೆಗೆ 2025ರ ನವೀಕೃತ 7-ಸೀಟರ್ ರೆನಾಲ್ಟ್ ಟ್ರೈಬರ್ (Renault Triber) ಕಾರನ್ನು ಬಿಡುಗಡೆ ಮಾಡಿತ್ತು. ಈ 2025 ರ ಟ್ರೈಬರ್ ಫೇಸ್‌ಲಿಫ್ಟ್ ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಪ್ರೀಮಿಯಂ ನೋಟದೊಂದಿಗೆ ಭಾರತದ ಅತ್ಯಂತ ಬಹುಮುಖ ಮತ್ತು ಕೈಗೆಟುಕುವ ಕುಟುಂಬ-ಆಧಾರಿತ 7-ಆಸನಗಳ MPV ಆಗಿದೆ. ಈ ಫ್ಯಾಮಿಲಿ ಕಾರು ಈ ಬಾರಿ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಡಿಸೈನ್‌ನೊಂದಿಗೆ ಬಿಡುಗಡೆಯಾಗಿದೆ. ಈ ಕಾರಿನ ಕುರಿತ ಹೆಚ್ಚಿನ ಮಾಹಿತಿ ಇಲ್ಲದೆ.

ಭಾರತದ ಎಲ್ಲಾ ಘನತ್ಯಾಜ್ಯವನ್ನು ರಸ್ತೆ ನಿರ್ಮಾಣಕ್ಕೆ ಬಳಕೆ

2027 ರ ಅಂತ್ಯದ ವೇಳೆಗೆ ಭಾರತದ ಎಲ್ಲಾ ಘನತ್ಯಾಜ್ಯವನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ (Union Minister Gadkari) ಅವರು ಪಿಎಚ್‌ಡಿ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ 120 ನೇ ವಾರ್ಷಿಕ ಅಧಿವೇಶನದಲ್ಲಿ ಬಹಿರಂಗಪಡಿಸಿದ್ದಾರೆ. ಇದು ಸುಸ್ಥಿರ ಮೂಲಸೌಕರ್ಯ ಮತ್ತು ಸಂಪನ್ಮೂಲ ದಕ್ಷತೆಯತ್ತ ಭಾರತದ ಚಾಲನೆಯಲ್ಲಿ ಒಂದು ನಿರ್ಣಾಯಕ ಕ್ಷಣವಾಗಿದೆ. ಸರಿಯಾದ ತಂತ್ರಜ್ಞಾನ ಮತ್ತು ನಾಯಕತ್ವವನ್ನು ಅನ್ವಯಿಸಿದಾಗ ಯಾವುದೇ ವಸ್ತುವನ್ನು ತ್ಯಾಜ್ಯವೆಂದು ಪರಿಗಣಿಸಬಾರದು ಎಂದು ಒತ್ತಿ ಹೇಳಿದರು.

ಲಕ್ಷುರಿ ಫೀಚರ್ಸ್‌.. ಹೊಸ ಟೆಸ್ಲಾ ಕಾರು ಖರೀದಿಸಿದ ಖ್ಯಾತ..

ಟೀಂ ಇಂಡಿಯಾ ಮಾಜಿ ನಾಯಕ, ಖ್ಯಾತ ಕ್ರಿಕೆಟಿಗ ರೋಹಿತ್ ಶರ್ಮಾ (Rohit Sharma) ಅವರಿಗೆ ಕಾರುಗಳ ಮೇಲೆ ವಿಶೇಷ ಪ್ರೀತಿಯಿದೆ. ಬಿಎಂಡಬ್ಲ್ಯೂ ಎಂ5, ರೇಂಜ್ ರೋವರ್, ಮರ್ಸಿಡಿಸ್ ಎಸ್ ಕ್ಲಾಸ್, ಮರ್ಸಿಡಿಸ್ ಜಿಎಲ್ಎಸ್ ಹಾಗೂ ಲ್ಯಾಂಬೋರ್ಘಿನಿ ಉರಸ್ ಎಸ್ಇ ಸೇರಿದಂತೆ ಹಲವು ಐಷಾರಾಮಿ ಕಾರುಗಳ ಮಾಲೀಕರು ಆಗಿದ್ದಾರೆ. ಸದ್ಯ, ರೋಹಿತ್ ಶರ್ಮಾ ಅವರು ಹೊಚ್ಚ ಹೊಸ ಟೆಸ್ಲಾ ಮಾಡೆಲ್ ವೈ (Tesla Model Y) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

2023 ರ ಭಾರತದಲ್ಲಿನ ಟಾಪ್ ಫಿಕ್ಸೆಡ್ ಡೆಪಾಸಿಟ್ ದರಗಳು

2023 ರಲ್ಲಿ ಭಾರತದಲ್ಲಿ ಬ್ಯಾಂಕುಗಳು ನೀಡುವ ಅತ್ಯಧಿಕ ಸ್ಥಿರ ಠೇವಣಿ ಬಡ್ಡಿದರಗಳನ್ನು ಅನ್ವೇಷಿಸಿ. ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ ದರಗಳನ್ನು ಹೋಲಿಕೆ ಮಾಡಿ.

ಫುಲ್ ಡಿಮ್ಯಾಂಡ್: ವಿಂಡ್ಸರ್ ಇನ್‌ಸ್ಪೈರ್ ಎಡಿಷನ್ ಬಿಡುಗಡೆ

ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ಇಂದು ಭಾರತದಲ್ಲಿ ತನ್ನ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರಿನ ಲಿಮಿಟೆಡ್ ಎಡಿಷನ್ ಆಗಿರುವ ವಿಂಡ್ಸರ್ ಇನ್‌ಸ್ಪೈರ್ (Windsor Inspire Edition) ಅನ್ನು ಬಿಡುಗಡೆ ಮಾಡಿದೆ. ವಿಂಡ್ಸರ್ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 40,000 ಕಾರುಗಳು ಮಾರಾಟವಾಗಿವೆ. ಗ್ರಾಹಕರಿಂದ ಗಳಿಸಿರುವ ಆಳವಾದ ಪ್ರೀತಿ ಮತ್ತು ನಂಬಿಕೆಯಿಂದ ಇನ್‌ಸ್ಪೈರ್ ಎಡಿಷನ್ ಅನ್ನು ಪರಿಚಯಿಸಲಾಗುತ್ತಿದೆ. ಕೇವಲ 300 ಕಾರುಗಳನ್ನು ಉತ್ಪಾದಿಸಲಾಗುತ್ತಿದ್ದು, ಭಾರತದಲ್ಲಿ ವಿಂಡ್ಸರ್‌ನ ಯಶಸ್ಸಿಗೆ ಸಂಕೇತವಾಗಿ ಇವನ್ನು ಮಾರಾಟ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

Atal Pension Yojana: ಅ.1ರಿಂದ ಹೊಸ ನೋಂದಣಿ ಅನಿವಾರ್ಯ!

ಹೊಸ ಫಾರ್ಮ್‌ಗಳು ಮತ್ತು ಅರ್ಹತಾ ಅವಶ್ಯಕತೆಗಳನ್ನು ಒಳಗೊಂಡಂತೆ, ಅಕ್ಟೋಬರ್ 2023 ರಿಂದ ಜಾರಿಗೆ ಬರುವ ನವೀಕರಿಸಿದ ಅಟಲ್ ಪಿಂಚಣಿ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಅನ್ವೇಷಿಸಿ.

ಬಡವರ ಅಂಬಾರಿ.. 34 ಕಿ.ಮೀ ಮೈಲೇಜ್, 4.99 ಲಕ್ಷ..

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಜಗಮೆಚ್ಚಿದ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಇದು ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸ ಹೊಂದಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಕೊಂಡುಕೊಳ್ಳುತ್ತಿದ್ದಾರೆ. ಈ ಸೆಪ್ಟೆಂಬರ್ ತಿಂಗಳಲ್ಲೂ 'ವ್ಯಾಗನ್ಆರ್' ಬೃಹತ್ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 15,388 ಯುನಿಟ್‌ಗಳನ್ನು ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿವಲ್ಲಿ 13,359 ಯುನಿಟ್‌ಗಳನ್ನು ಮಾರಾಟ ಮಾಡಲಾಗತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 15% ಪ್ರಗತಿಯಾಗಿದೆ.

ಬುಕ್ಕಿಂಗ್‌ನಲ್ಲಿ ಅಬ್ಬರ.. 261 Km ರೇಂಜ್, 1.45 ಲಕ್ಷ.. ಆದರೂ..

ಬೆಂಗಳೂರು ಮೂಲದ ಅಲ್ಟ್ರಾವೈಲೆಟ್ ಆಟೋಮೋಟಿವ್ (Ultraviolette Automotive) ಜಗಮೆಚ್ಚಿದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಇದೇ ವರ್ಷದ ಮಾರ್ಚ್‌ನಲ್ಲಿ ಹೊಚ್ಚ ಹೊಸ ಟೆಸ್ಸೆರಾಕ್ಟ್ (Tesseract) ಹೆಸರಿನ ಇ-ಸ್ಕೂಟರ್‌ನ್ನು ಬಿಡುಗಡೆಗೊಳಿಸಲಾಗಿತ್ತು. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದೆ. ಇದಕ್ಕೆ ಗ್ರಾಹಕರು ಕೂಡ ಮನಸೋತಿದ್ದು, 70,000ಕ್ಕೂ ಅಧಿಕ ಸಂಖ್ಯೆಯಲ್ಲಿ ಬುಕ್ಕಿಂಗ್‌ಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
Advertisement

Top-5 SUVs: 10 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಎಸ್‌ಯುವಿ ಬೇಕೆ?

2025 ರಲ್ಲಿ ಭಾರತದಲ್ಲಿ ರೂ.10 ಲಕ್ಷಕ್ಕಿಂತ ಕಡಿಮೆ ಬೆಲೆಯ 5 ಅತ್ಯುತ್ತಮ ಎಸ್‌ಯುವಿ (Top-5 SUVs) ಗಳನ್ನು ಇಲ್ಲಿ ತಿಳಿಸುತ್ತಿದ್ದೇವೆ. ಟಾಟಾದಿಂದ ಮಹೀಂದ್ರಾ ಮತ್ತು ಹ್ಯುಂಡೈವರೆಗೆ, ಖರೀದಿದಾರರು 2025 ರಲ್ಲಿ ಆಯ್ಕೆ ಮಾಡಲು ಸಾಕಷ್ಟು ಆಯ್ಕೆಗಳನ್ನು ಹೊಂದಿದ್ದಾರೆ. ಹೌದು, ನೀವು 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಎಸ್‌ಯುವಿಗಳನ್ನು ಈಗ ಸುಲಭವಾಗಿ ಖರೀದಿಸಬಹುದು. ಅದೃಷ್ಟವಶಾತ್ ಹಲವಾರು ಕಾರು ತಯಾರಕರು ಈಗ ಕಾಂಪ್ಯಾಕ್ಟ್ ಮತ್ತು ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳನ್ನು ಕಡಿಮೆ ಬೆಲೆಗೆ ನೀಡುತ್ತಿದ್ದಾರೆ. ಉತ್ತಮ ಡಿಸೈನ್, ಪ್ರಾಯೋಗಿಕತೆ ಮತ್ತು ವೈಶಿಷ್ಟ್ಯಗಳನ್ನು ಹೊಂದಿರುವ ಕೈಗೆಟುಕುವ ಕಾರುಗಳು ಯಾವುವು ಬನ್ನಿ ನೋಡೋಣ.

Toyota: ನಿನ್ನೆಯಷ್ಟೆ ಬಿಡುಗಡೆಯಾದ ಟೊಯೋಟಾ ಫಾರ್ಚುನರ್ ಲೀಡರ್ ಎಡಿಷನ್

2025 ರ ಟೊಯೋಟಾ ಫಾರ್ಚೂನರ್ ಲೀಡರ್ ಎಡಿಷನ್ ಹಲವಾರು ಕಾಸ್ಮೆಟಿಕ್ ಅಪ್‌ಗ್ರೇಡ್‌ಗಳು, ವೈಶಿಷ್ಟ್ಯ ಸೇರ್ಪಡೆಗಳು ಮತ್ತು ಸ್ಪೋರ್ಟಿ ಡ್ಯುಯಲ್-ಟೋನ್ ಇಂಟೀರಿಯರ್ ಪಡೆದುಕೊಂಡು ನಿನ್ನೆಯಷ್ಟೆ (ಸೆಪ್ಟೆಂಬರ್ 8) ಬಿಡುಗಡೆಯಾಗಿದೆ. ಅದರ ದೃಢವಾದ ಡೀಸೆಲ್ ಎಂಜಿನ್ ಮತ್ತು ಪ್ರಮುಖ ಸುರಕ್ಷತಾ ಫೀಚರ್‌ಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಈ 2025 ರ ನವೀಕರಣವು ಫಾರ್ಚೂನರ್ ಸಿರೀಸ್ ಅನ್ನು ತಾಜಾ ಮತ್ತು ವಿಭಿನ್ನವಾಗಿಡಲು ಟೊಯೋಟಾದ ಕಾರ್ಯತಂತ್ರವನ್ನು ಒತ್ತಿಹೇಳುತ್ತದೆ, ವಿಶೇಷವಾಗಿ ಭಾರತದ ಪ್ರೀಮಿಯಂ SUV ವಿಭಾಗದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯ ವಿರುದ್ಧ ಈ ಕಾರನ್ನು ಅಪ್‌ಡೇಟ್ ಮಾಡಿ ಬಿಡುಗಡೆ ಮಾಡಲಾಗಿದೆ.

8-ಸೀಟರ್.. ಜನಪ್ರಿಯ ಟೊಯೊಟಾ ಇನ್ನೋವಾ ಹೈಕ್ರಾಸ್‌ ಕೊಳ್ಳಬೇಕೇ..

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ವಿಶ್ವಾಸಾರ್ಹ ಎಂಪಿವಿಯಾಗಿದೆ. ಸೆ.22 ರಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಗೊಂಡಿವೆ. ಅದರ ಸಂಪೂರ್ಣ ಪ್ರಯೋಜನವು 'ಇನ್ನೋವಾ ಹೈಕ್ರಾಸ್' ಕಾರಿಗೂ ಲಭ್ಯವಿದ್ದು, ರೂ.1,15 ಲಕ್ಷವರೆಗೆ ಬೆಲೆ ಇಳಿಕೆಯಾಗಿದೆ. ಕನಿಷ್ಠ ರೂ.18.16 ಲಕ್ಷ ಹಾಗೂ ಗರಿಷ್ಠ ರೂ.30.83 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ನೀವು ಹೊಸ ಕಾರೊಂದನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ, 'ಟೊಯೊಟಾ ಇನ್ನೋವಾ ಹೈಕ್ರಾಸ್' ಅತ್ಯುತ್ತಮ ಆಯ್ಕೆಯಾಗಲಿದೆ. ನಾವಿಲ್ಲಿ ಇದೇ ಎಂಪಿವಿಯ ಆನ್-ರೋಡ್ ದರ (On-Road Price) ಹಾಗೂ ಇಎಂಐ (EMI) ಕುರಿತಂತೆ ಪ್ರಮುಖ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಎಪ್ರಿಲಿಯಾ RSV4 X-GP ದಾಖಲೆ: ಎಲ್ಲಾ 30 ಘಟಕಗಳು ಮಾರಾಟ

ಕೇವಲ ಹದಿನಾಲ್ಕು ದಿನಗಳಲ್ಲಿ ಎಪ್ರಿಲಿಯಾ RSV4 X - GP ಮಾಡಲ್ ಸಂಪೂರ್ಣವಾಗಿ ಮಾರಾಟವಾಗಿದೆ. ಕಂಪನಿ ಹೇಳಿದ್ದ ಎಲ್ಲಾ 30 ಮಾಡಲ್‌ಗಳು ದಾಖಲೆಯ ಸಮಯದಲ್ಲಿ ಮಾರಾಟವಾಗಿವೆ. ಇದು "X" ಬ್ರ್ಯಾಂಡ್‌ನ ಶ್ರೇಷ್ಠತೆ ಮತ್ತು RS - GP ಯ MotoGP ಚೊಚ್ಚಲ ಪ್ರವೇಶದ ಹತ್ತನೇ ವಾರ್ಷಿಕೋತ್ಸವವನ್ನು ಆಚರಿಸಲು ನೋಯೆಲ್ ರೇಸಿಂಗ್ ವಿಭಾಗದಿಂದ ಜನಿಸಿದ ಸೀಮಿತ ಆವೃತ್ತಿಯ ಬೈಕ್ RSV4 X-GP ಯ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಎಪ್ರಿಲಿಯಾ ಹೇಳಿದೆ.

93,800 ಬೆಲೆ.. ಹೊಸ ಟಿವಿಎಸ್ ರೈಡರ್ ಡುಯಲ್ ಡಿಸ್ಕ್ ವೇರಿಯೆಂಟ್‌ಗೆ..

ಇತ್ತೀಚೆಗೆ ಟಿವಿಎಸ್ ರೈಡರ್ (TVS Raider) ಮೋಟಾರ್‌ಸೈಕಲ್‌ನ ನೂತನ ರೂಪಾಂತರವಾದ 'ಡುಯಲ್ ಡಿಸ್ಕ್ ಬ್ರೇಕ್'ನ್ನು ಮಾರಾಟದಕ್ಕೆ ತರಲಾಗಿತ್ತು. ಇದು ರೂ.93,800 ದಿಂದ ರೂ.95,600 (ಎಕ್ಸ್-ಶೋರೂಂ) ದರವನ್ನು ಪಡೆದಿದ್ದು, ಎಸ್‌ಎಕ್ಸ್‌ಸಿ ಡಿಡಿ (ಡುಯಲ್ ಡಿಸ್ಕ್) & ಟಿಎಫ್‌ಟಿ ಡಿಡಿ (ಡುಯಲ್ ಡಿಸ್ಕ್) ಎಂಬ 2 ರೂಪದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. 124.8-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 56.7 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌/ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್‌ ಹಾಗೂ ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡುಯಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ನೀವು ಇದೇ 'ರೈಡರ್ ಡುಯಲ್ ಡಿಸ್ಕ್' ವೇರಿಯೆಂಟ್‌ಗೆ ಪರ್ಯಾಯವಾಗಿ ಈ 3 ಬೈಕ್‌ಗಳನ್ನು ಖರೀದಿ ಮಾಡಬಹುದು. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಶೋರೂಂ ಮುಂದೆ ಜನರು ಸಾಲು ಕಟ್ಟುವರು.. 5-ಸೀಟರ್, ಶೀಘ್ರ ಹೊಸ..

ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಎಲೆಕ್ಟ್ರಿಕ್ ಚಾಲಿತ ಎಸ್‌ಯುವಿಯಾಗಿದೆ. ದೇಶೀಯವಾಗಿ ಈ ಕಾರನ್ನು ಬರಮಾಡಿಕೊಳ್ಳಲು ಗ್ರಾಹಕರು ಕೂಡ ಎದುರು ನೋಡುತ್ತಿದ್ದಾರೆ. ಇದನ್ನು ವಿದೇಶಿ ಮಾರುಕಟ್ಟೆಯಲ್ಲಿ ಸುಜುಕಿ ಇ-ವಿಟಾರಾ (Suzuki e Vitara) ಹೆಸರಿನಲ್ಲಿ ಮಾರಾಟಗೊಳ್ಳಲು ತೀರ್ಮಾನಿಸಲಾಗಿದೆ. ಈಗಾಗಲೇ, ಗುಜರಾತ್‌ನ ಹಂಸಲ್‌ಪುರದಲ್ಲಿರುವ ಕಂಪನಿಯ ಉತ್ಪಾದನಾ ಘಟಕದಿಂದ 2,900ಕ್ಕೂ ಅಧಿಕ 'ಇ-ವಿಟಾರಾ'ಗಳನ್ನು ಇಂಗ್ಲೆಂಡ್, ಜರ್ಮನಿ, ನಾರ್ವೆ, ಫ್ರಾನ್ಸ್, ಡೆನ್ಮಾರ್ಕ್, ಸ್ವಿಟ್ಜರ್‌ಲ್ಯಾಂಡ್ ಹಾಗೂ ನೆದರ್‌ಲ್ಯಾಂಡ್‌ಗಳಿಗೂ ರಫ್ತು ಮಾಡಲಾಗಿದೆ.

Jeep: ಹೊಸ ರಗಡ್ ಎಸ್‌ಯುವಿ ಬಿಡುಗಡೆ ಮಾಡಿದ ಜೀಪ್

ಜೀಪ್ ಇಂಡಿಯಾ ಇಂದು ತನ್ನ ಪ್ರೀಮಿಯಂ SUV ಯ ಲಿಮಿಟೆಡ್-ರನ್ ಸ್ಪೆಷಲ್ ಎಡಿಷನ್ ಆಗಿರುವ ಕಂಪಾಸ್ ಟ್ರ್ಯಾಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಬೆಲೆಗಳು ರೂ. 2,678,200 (ಎಕ್ಸ್‌ ಶೋರೂಂ) ನಿಂದ ಆರಂಬವಾಗುತ್ತವೆ. ಸುಸಜ್ಜಿತ ಕಂಪಾಸ್ ಮಾಡೆಲ್ S ಅನ್ನು ಆಧರಿಸಿದ ಟ್ರ್ಯಾಕ್ ಎಡಿಷನ್ ಎಸ್‌ಯುವಿ ವಿಶಿಷ್ಟವಾದ ಬಾಹ್ಯ ವಿನ್ಯಾಸ ಮತ್ತು ಐಷಾರಾಮಿ ಒಳಾಂಗಣ ನವೀಕರಣಗಳೊಂದಿಗೆ ತುಂಬಿದೆ. ಜೀಪ್‌ನ ಸಾಮರ್ಥ್ಯ ಮತ್ತು ಅಡ್ವೆಂಚರ್ ಮಾಡುವವರಿಗೆ ನಿಜವಾದ ವಿಶಿಷ್ಟ ಶೈಲಿಯ ಅಭಿವ್ಯಕ್ತಿಯನ್ನು ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಹೊಸ ಲಿಮಿಟೆಡ್-ರನ್ ಸ್ಪೆಷಲ್ ಎಡಿಷನ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಸಂಪತ್ತಿನ ಬೆಳವಣಿಗೆಗೆ ಸ್ಮಾರ್ಟ್ ಹಣಕಾಸು ಅಭ್ಯಾಸಗಳು

ಪರಿಣಾಮಕಾರಿ ಹಣ ನಿರ್ವಹಣೆಯು ಗಮನಾರ್ಹ ಉಳಿತಾಯಕ್ಕೆ ಹೇಗೆ ಕಾರಣವಾಗಬಹುದು ಎಂಬುದನ್ನು ಕಂಡುಕೊಳ್ಳಿ, ಕೇವಲ ಸಂಬಳ ಹೆಚ್ಚಳಕ್ಕಿಂತ ಬುದ್ಧಿವಂತ ಆರ್ಥಿಕ ಅಭ್ಯಾಸಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.
Advertisement

7-ಸೀಟರ್ SUV ಹುಡುಕುತ್ತಿದ್ದೀರಾ? ಈ ಐದು Tata & Mahindra..

ಹೊಸ ಕಾರು ಖರೀದಿ ಮಾಡಬೇಕೆಂಬುದು ಸಾವಿರಾರು ಜನರ ಆಸೆಯಾಗಿದೆ. ಬಹುತೇಕರಿಗೆ ಫ್ಯಾಮಿಲಿ ಎಸ್‌ಯುವಿಗಳ ಮೇಲೆ ಕಣ್ಣಿರುತ್ತದೆ. ಅದಕ್ಕಾಗಿ ವಿವಿಧ ಕಂಪನಿಗಳ ಶೋರೂಂನ್ನು ಎಡತಾಕುತ್ತಾರೆ. ಆದರೆ, ಮನಸ್ಸಿಗೆ ಸಮಾಧಾನವೆನಿಸುವ ಕಾರು ಸಿಗುವುದಿಲ್ಲ. ಅಂತಹವರಿಗೆ 7 ಆಸನ ಹೊಂದಿರುವ ಟಾಟಾ ಸಫಾರಿ, ಮಹೀಂದ್ರಾ ಸ್ಕಾರ್ಪಿಯೋ ಎನ್, ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್, ಮಹೀಂದ್ರಾ ಎಕ್ಸ್‌ಯುವಿ700 ಹಾಗೂ ಮಹೀಂದ್ರಾ ಬೊಲೆರೊ ಎಸ್‌ಯುವಿಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ನಾವಿಲ್ಲಿ ಈ ಕಾರುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ಪಾವತಿ ಸುರಕ್ಷತೆಯನ್ನು ಹೆಚ್ಚಿಸುವ ಹೊಸ UPI ವೈಶಿಷ್ಟ್ಯಗಳು!

ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು NPCI ಯುಪಿಐ ಪಾವತಿಗಳಿಗಾಗಿ ಬಯೋಮೆಟ್ರಿಕ್ ವೈಶಿಷ್ಟ್ಯಗಳನ್ನು ಅನಾವರಣಗೊಳಿಸಿದ್ದು, ಬಳಕೆದಾರರಿಗೆ ಭದ್ರತೆ ಮತ್ತು ಅನುಕೂಲತೆಯನ್ನು ಹೆಚ್ಚಿಸುತ್ತವೆ.

Toyota: ಹೊಸ ಟೊಯೋಟಾ ದೈತ್ಯ ಎಸ್‌ಯುವಿ ಬಿಡುಗಡೆ

ಪ್ರಮುಖ ವಾಹನ ತಯಾರಕರಾದ ಟೊಯೋಟಾ, 2025ರ ಫಾರ್ಚೂನರ್ ಲೀಡರ್ ಎಡಿಷನ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಹೊಸ ಸ್ಟೈಲಿಂಗ್ ಮತ್ತು ಪ್ರೀಮಿಯಂ ವರ್ಧನೆಗಳೊಂದಿಗೆ, ಈ ಇತ್ತೀಚಿನ ಎಡಿಷನ್ ಫಾರ್ಚೂನರ್‌ನ ಕಮಾಂಡಿಂಗ್ ರಸ್ತೆ ಉಪಸ್ಥಿತಿಯನ್ನು ಮತ್ತಷ್ಟು ವರ್ಧಿಸುತ್ತದೆ, ಗ್ರಾಹಕರಿಗೆ ಸ್ಪೋರ್ಟಿಯರ್ ಮತ್ತು ಹೆಚ್ಚು ಕ್ರಿಯಾತ್ಮಕ ಆಕರ್ಷಣೆಯನ್ನು ನೀಡುತ್ತದೆ. ಇದರ ಬುಕಿಂಗ್‌ಗಳು ಅಕ್ಟೋಬರ್ 2025 ರ ಎರಡನೇ ವಾರದಿಂದ ಪ್ರಾರಂಭವಾಗುತ್ತವೆ. ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ಹತ್ತಿರದ ಡೀಲರ್‌ಶಿಪ್‌ನಲ್ಲಿ ಬುಕ್ ಮಾಡಬಹುದು ಎಂದು ಟೊಯೋಟಾ ಹೇಳಿದೆ.

7-ಸೀಟರ್.. 16 ಕಿ.ಮೀ ಮೈಲೇಜ್, 7.99 ಲಕ್ಷ.. ನೂತನ ಮಹೀಂದ್ರಾ..

ಇತ್ತೀಚೆಗೆ 2025ರ ಹೊಚ್ಚ ಹೊಸ ಮಹೀಂದ್ರಾ ಬೊಲೆರೊ ಫೇಸ್‌ಲಿಫ್ಟ್ (Mahindra Bolero Facelift) ಎಸ್‌ಯುವಿಯನ್ನು ಪರಿಚಯಿಸಲಾಗಿದೆ. ಹಳೆಯ ಬೊಲೆರೊಗೆ ಹೋಲಿಸಿದರೆ, ನವೀನ ಶೈಲಿಯ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದೆ. ನೀವು ಹೊಚ್ಚ ಹೊಸ ಎಸ್‌ಯುವಿವೊಂದನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ 'ಬೊಲೆರೊ ಫೇಸ್‌ಲಿಫ್ಟ್' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಈ ಕಾರಿನ ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

ರತನ್ ಟಾಟಾ ಸ್ಮರಣೆಯಂದು TCS Q2 ಪತ್ರಿಕಾಗೋಷ್ಠಿ ರದ್ದು!

ರತನ್ ಟಾಟಾ ಅವರ ಪುಣ್ಯತಿಥಿಯ ಕಾರಣ ಅಕ್ಟೋಬರ್ 9 ರಂದು ಟಿಸಿಎಸ್ ತನ್ನ ಹಣಕಾಸು ವರ್ಷದ ತ್ರೈಮಾಸಿಕ 2026 ರ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಿದೆ, ಆದರೆ ಫಲಿತಾಂಶಗಳ ಮೊದಲು ಷೇರುಗಳು ಸಕಾರಾತ್ಮಕ ಕಾರ್ಯಕ್ಷಮತೆಯನ್ನು ತೋರಿಸುತ್ತಿವೆ.