2025 ಕ್ರೆಡಿಟ್ ರಿಸ್ಕ್ ಫಂಡ್‌ಗಳ ಕಾರ್ಯಕ್ಷಮತೆ

2023 ರಲ್ಲಿ DSP, HSBC ಮತ್ತು ಆದಿತ್ಯ ಬಿರ್ಲಾ ನಂತಹ ಕ್ರೆಡಿಟ್ ರಿಸ್ಕ್ ಮ್ಯೂಚುಯಲ್ ಫಂಡ್‌ಗಳ ಕಾರ್ಯಕ್ಷಮತೆಯನ್ನು ಅನ್ವೇಷಿಸಿ, ಅವುಗಳ ಆದಾಯ ಮತ್ತು ಹೂಡಿಕೆ ತಂತ್ರಗಳ ಒಳನೋಟಗಳನ್ನು ನೀಡುತ್ತದೆ.

ದಸರಾಗೆ GST ಸುಧಾರಣೆ: ಕಾರುಗಳ ಮೇಲೆ 1.2 ಲಕ್ಷ ಕಡಿತ ಘೋಷಿಸಿದ ಹೋಂಡಾ

ಪ್ರಮುಖ ಕಾರು ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL), GST ಸುಧಾರಣೆಗಳು ಇಂದಿನಿಂದ (22 ಸೆಪ್ಟೆಂಬರ್) ಜಾರಿಗೆ ಬರುವ ತನ್ನ ಪರಿಷ್ಕೃತ ಬೆಲೆಗಳನ್ನು ಪ್ರಕಟಿಸಿದೆ. ಇತ್ತೀಚೆಗೆ ಘೋಷಿಸಲಾದ GST ಸುಧಾರಣೆಗಳು 2025 ರ ಸಂಪೂರ್ಣ ಪ್ರಯೋಜನಗಳನ್ನು ತನ್ನ ಗ್ರಾಹಕರಿಗೆ ವರ್ಗಾಯಿಸುವ ಬಗ್ಗೆ ಹೋಂಡಾ ಈ ಹಿಂದಿಯೇ ಘೋಷಿಸಿತ್ತು, ಇದೀಗ ಖಚಿತಪಡಿಸಿರುವುದಾಗಿ ಕಂಪನಿ ಪ್ರಕಟಿಸಿದೆ. ಇದು ಹಬ್ಬದ ಋತುವಿನ ಮೊದಲು ಹೋಂಡಾದ ಮೆಚ್ಚುಗೆ ಪಡೆದ ಕಾರುಗಳನ್ನು ಇನ್ನಷ್ಟು ಆಕರ್ಷಕ ಕೊಡುಗೆಯನ್ನಾಗಿ ಮಾಡಲಿದೆ. ಯಾವ ಹೋಂಡಾ ಕಾರಿನ ಮೇಲೆ ಎಷ್ಟು ಬೆಲೆ ಇಳಿಕೆಯಾಗಿದೆ ಬನ್ನಿ ನೋಡೋಣ.

ಬಡವರು ತೆಗೆದುಕೊಳ್ಳಬಹುದು: Honda Activa ಸೇರಿ ಈ ಜನಪ್ರಿಯ..

ನಿನ್ನೆಯಿಂದಲೇ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಅಧಿಕೃತವಾಗಿ ಜಾರಿಗೊಂಡಿವೆ. ಇದರ ಸಂಪೂರ್ಣ ಲಾಭವನ್ನು ದ್ವಿಚಕ್ರ ವಾಹನ ತಯಾರಕ ಕಂಪನಿಗಳು ತಮ್ಮ ಗ್ರಾಹಕರಿಗೆ ವರ್ಗಾಯಿಸುತ್ತಿವೆ. ಜನಪ್ರಿಯ ಸ್ಕೂಟರ್‌ಗಳಾದ ಹೋಂಡಾ ಆಕ್ಟಿವಾ 125, ಟಿವಿಎಸ್ ಜೂಪಿಟರ್ 125 ಮತ್ತು ಸುಜುಕಿ ಆಕ್ಸೆಸ್ 125ಗಳ ಬೆಲೆಯು ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Hero: ಲೀಟರ್‌ಗೆ 56.2 ಕಿ.ಮೀ ಮೈಲೇಜ್: ಹೊಸ ಹೀರೋ ಸ್ಕೂಟರ್ ಬಿಡುಗಡೆ

ಪ್ರಮುಖ ಮೋಟಾರ್‌ಸೈಕಲ್‌ ಮತ್ತು ಸ್ಕೂಟರ್ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್ (Hero Motocorp)' ಇಂದು ಹೊಚ್ಚ ಹೊಸ ಡೆಸ್ಟಿನಿ 110 ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಇದು ವಿಭಾಗ - ಪ್ರಮುಖ ವೈಶಿಷ್ಟ್ಯಗಳು, ಅಸಾಧಾರಣ ಇಂಧನ ದಕ್ಷತೆ (ಮೈಲೇಜ್) ಮತ್ತು ವಿಶಿಷ್ಟವಾದ ರೆಟ್ರೊ ನೋಟದೊಂದಿಗೆ ಸಜ್ಜುಗೊಂಡಿದೆ. ಮೊದಲ ಬಾರಿಗೆ ಖರೀದಿಸುವವರ ವಿಕಸನಗೊಳ್ಳುತ್ತಿರುವ ದೈನಂದಿನ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಡೆಸ್ಟಿನಿ 110, ದೈನಂದಿನ ಪ್ರಯಾಣಕ್ಕೆ ಸೌಕರ್ಯ, ಸುರಕ್ಷತೆಯೊಂದಿಗೆ ವೃತ್ತಿಪರರು ಅಥವಾ ಕಾಲೇಜು ಹೋಗುವವರಿಗೆ ಬೆಸ್ಟ್ ಆಯ್ಕೆಯಾಗಿದೆ ಎಂದು ಕಂಪನಿ ಹೇಳಿದೆ.
Advertisement

Tata: ಟಾಟಾದಿಂದ ಹೊಸ ದರ ಪಟ್ಟಿ ಘೋಷಣೆ.. ರೂ.4.57 ಲಕ್ಷಕ್ಕೆ ಹೊಸ..

ನಿನ್ನೆಯಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಅಧಿಕೃತವಾಗಿ ಜಾರಿಗೆ ಬಂದಿವೆ. ಇದರ ಸಂಪೂರ್ಣ ಲಾಭವನ್ನು ಟಾಟಾ ಮೋಟಾರ್ಸ್ (Tata Motors), ತನ್ನ ಗ್ರಾಹಕರಿಗೆ ವರ್ಗಾಯಿಸುತ್ತಿದೆ. ಕಂಪನಿಯ ವಿವಿಧ ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿಗಳ ಬೆಲೆಯು ರೂ.65,000 ರಿಂದ ರೂ.1.55 ಲಕ್ಷವರೆಗೆ ಇಳಿಕೆಯಾಗಿದೆ. ಬನ್ನಿ, ಯಾವ ಕಾರಿನ 'ಎಕ್ಸ್-ಶೋರೂಂ' ದರ ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಎಂಜಿ ಕಾರುಗಳ ಮೇಲೆ ಜಿಎಸ್‌ಟಿ ಕಡಿತ ಜಾರಿ: ರೂ.2.83 ಲಕ್ಷ ಬೆಲೆ ಇಳಿಕೆ

ಜೆಎಸ್‌ಡಬ್ಲ್ಯು ಎಂಜಿ ಮೋಟಾರ್ (JSW MG Motor) ಇಂಡಿಯಾ ತನ್ನ ICE SUV (ಇಂಧನ ಚಾಲಿತ ಎಸ್‌ಯುವಿ) ಬಿಡಿಭಾಗಗಳು ಮತ್ತು ಪರಿಕರಗಳು ಸೇರಿದಂತೆ ತನ್ನ ಪ್ರಮುಖ ಕಾರುಗಳ ಮೇಲಿನ GST ಕಡಿತದ ದರಗಳ ಸಂಪೂರ್ಣ ಪ್ರಯೋಜನವನ್ನು ವಿಸ್ತರಿಸಿದೆ. ರೂ. 54,000 ದಿಂದ ರೂ. 3,04,000 ವರೆಗಿನ ಉಳಿತಾಯವನ್ನು ನೀಡುವ ಕಾರುಗಳ ಪರಿಷ್ಕೃತ ಬೆಲೆಗಳು ಈಗ ಜಾರಿಗೆ ಬಂದಿವೆ ಎಂದು ತಿಳಿಸಿದೆ. ಕೇಂದ್ರ ಸರ್ಕಾರದ ಜಿಎಸ್‌ಟಿ ಕಡಿತವು ಸೆಪ್ಟೆಂಬರ್ 22 ರಿಂದ ಜಾರಿಗೆ ಬಂದಿದ್ದು, ಅದರಂತೆ ಕಂಪನಿ ಪ್ರಯೋಜನಗಳನ್ನು ನೀಡುತ್ತಿರುವುದಾಗಿ ಘೋಷಿಸಿದೆ.

TATA: 5-ಸೀಟರ್.. ಗಟ್ಟಿಮುಟ್ಟಾದ ಈ ಟಾಟಾ ಕಾರಿಗೆ ಫುಲ್ ಡಿಮ್ಯಾಂಡ್..

ಟಾಟಾ ಹ್ಯಾರಿಯರ್ (Tata Harrier) ಜಗಮೆಚ್ಚಿದ ಎಸ್‌ಯುವಿಯಾಗಿದೆ. ಇದು ಇಂಧನ ಹಾಗೂ ಎಲೆಕ್ಟ್ರಿಕ್ ಚಾಲಿತ ರೂಪದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಈ ಆಗಸ್ಟ್ ತಿಂಗಳು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 3,087 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 1,892 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 63.16% ಪ್ರಗತಿಯಾಗಿದೆ.

ಹೊಸ ಸ್ವದೇಶಿ ಸೂಪರ್‌ಮ್ಯಾನ್ ಎಡಿಷನ್ ಹೆಲ್ಮೆಟ್ ವಿಶೇಷತೆಗಳು

ಭಾರತದ ಪ್ರಮುಖ ಹೆಲ್ಮೆಟ್ ತಯಾರಕ ಕಂಪನಿಯಾಗಿರುವ ಸ್ಟಡ್ಸ್ (STUDDS), ದೇಶದಲ್ಲಿ ಹೊಸ ಹೆಲಿಯೊಸ್ ಸೂಪರ್‌ಮ್ಯಾನ್ ಎಡಿಷನ್ ಹೆಲ್ಮೆಟ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ವಾರ್ನರ್ ಬ್ರದರ್ಸ್ ಡಿಸ್ಕವರಿ ಗ್ಲೋಬಲ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಇಂಡಿಯಾ ಸಹಯೋಗದೊಂದಿಗೆ ರಚಿಸಲಾದ ಈ ಪ್ರೀಮಿಯಂ ಪೂರ್ಣ-ಮುಖದ ಹೆಲ್ಮೆಟ್, ಸೂಪರ್‌ಮ್ಯಾನ್ "ಮ್ಯಾನ್ ಆಫ್ ಸ್ಟೀಲ್" ಗ್ರಾಫಿಕ್ಸ್ ಅನ್ನು ಹೊಂದಿದೆ. ಮ್ಯಾಟ್ ಮತ್ತು ಗ್ಲಾಸ್ ಫಿನಿಶ್‌ಗಳೊಂದಿಗೆ ಆರು ಗಮನಾರ್ಹ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಈ ಹೆಲ್ಮೆಟ್ ಕುರಿತ ಪ್ರಮುಖ ವಿಶೆಷತೆಗಳು ಇಲ್ಲಿವೆ.

ಬಡವರಿಗೆ ಬೆಸ್ಟ್ ಕಾರಿದು: 3.70 ಲಕ್ಷ, ಹೊಸ Maruti Alto K10..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ವಿಶ್ವಾಸರ್ಹ ಹ್ಯಾಚ್‌ಬ್ಯಾಕ್ ಆಗಿದೆ. ಜಿಎಸ್‌ಟಿ ಪರಿಷ್ಕರಣೆಗೊಂಡಿದೆ. ಈ ಕಾರಿನ ದರವು ರೂ.1.07 ಲಕ್ಷವರೆಗೆ ಇಳಿಕೆಯಾಗಿದೆ. ರೂ.3.70 ಲಕ್ಷದಿಂದ ರೂ.5.45 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಮನೆಗೆ ತರಲು ಆಲೋಚಿಸಿದ್ದೀರಾ.. ಹಾಗಾದರೆ 'ಆಲ್ಟೊ ಕೆ10' ಅತ್ಯುತ್ತಮ ಆಯ್ಕೆಯಾಗಿದೆ. ನಾವಿಲ್ಲಿ ಇದೇ ಹ್ಯಾಚ್‌ಬ್ಯಾಕ್‌ನ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಆಯ್ಕೆಯ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

5 ಲಕ್ಷ ಬೆಲೆಯ ಸ್ಪೆಷಲ್ ಎಡಿಷನ್ ಬಿಡುಗಡೆ

ಜನಪ್ರಿಯ ಕಾರು ತಯಾರಕ ಕಂಪನಿಯಾಗಿರುವ ರೆನಾಲ್ಟ್, ಇಂದು ತನ್ನ 'ಕ್ವಿಡ್' ಕಾರಿನ 10ನೇ ವಾರ್ಷಿಕೋತ್ಸವದ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಈ ಕಾರು ಬಿಡುಗಡೆಯಾಗಿ 10 ವರ್ಷಗಳನ್ನು ಪೂರ್ಣಗೊಳಿಸಿದ್ದು, ಇಂದಿಗೂ ಗ್ರಾಹಕರಿಂದ ಉತ್ತಮ ಬೇಡಿಕೆಯನ್ನು ಪಡೆಯುತ್ತಿದೆ. ಇದು ಭಾರತದಲ್ಲಿ ತನ್ನ ಆಕರ್ಷಕ ವಿನ್ಯಾಸ, SUV-ಪ್ರೇರಿತ ನಿಲುವು ಮತ್ತು ಸಾಟಿಯಿಲ್ಲದ ಮೌಲ್ಯ ಪ್ರತಿಪಾದನೆಯೊಂದಿಗೆ ಉತ್ತಮ ಮಾರಾಟ ಕಾಣುತ್ತಾ ಭಾರತದಲ್ಲಿ ಒಂದು ದಶಕವನ್ನು ಪೂರ್ಣಗೊಳಿಸಿದೆ ಎಂದು ರೆನಾಲ್ಟ್ ಹೇಳಿಕೊಂಡಿದೆ.

26.32 ಕಿ.ಮೀ ಮೈಲೇಜ್.. 6-ಸೀಟರ್, 11 ಲಕ್ಷ.. ಈ ಜನಪ್ರಿಯ ಮಾರುತಿ..

ಮಾರುತಿ ಸುಜುಕಿ ಎಕ್ಸ್ಎಲ್6 (Maruti Suzuki XL6) ಜನಮೆಚ್ಚಿದ ಎಂಪಿವಿಯಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಆಗಸ್ಟ್ ತಿಂಗಳಲ್ಲೂ ಇದೇ 'ಎಕ್ಸ್ಎಲ್6' ಕಾರು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 2,973 ಯುನಿಟ್‌ಗಳನ್ನು ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 2,740 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 8.50% ಪ್ರಗತಿಯಾಗಿದೆ.

ಯುವ ವೃತ್ತಿಪರರು ಆರ್ಥಿಕ ವೃತ್ತಿಜೀವನದ ಸವಾಲುಗಳೇನು?

ಹಣಕಾಸಿನ ಅನಿಶ್ಚಿತತೆಯು 30 ರ ಹರೆಯದ ವೃತ್ತಿಪರರ ವೃತ್ತಿ ನಿರ್ಧಾರಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ, ಅವರ ಉದ್ಯೋಗ ಭದ್ರತೆ ಮತ್ತು ಆರ್ಥಿಕ ಆದ್ಯತೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅನ್ವೇಷಿಸಿ.
Advertisement

STUDDS: ಸ್ವದೇಶಿ ಬ್ರಾಂಡ್‌ನಿಂದ ಸೂಪರ್‌ಮ್ಯಾನ್ ಹೆಲ್ಮೆಟ್ ಬಿಡುಗಡೆ

ಪ್ರಮುಖ ದೇಶಿಯ ದ್ವಿಚಕ್ರ ವಾಹನ ಹೆಲ್ಮೆಟ್ ತಯಾರಕ ಕಂಪನಿಯಾದ ಸ್ಟಡ್ಸ್ (STUDDS), ಹಾಲಿವುಡ್ ಸೂಪರ್‌ ಹೀರೋ ಮತ್ತು ಸುರಕ್ಷತೆಯ ಗಮನಾರ್ಹ ಮಿಶ್ರಣದೊಂದಿಗೆ ಹೊಸ ಸ್ಟಡ್ಸ್ ಹೆಲಿಯೊಸ್ ಸೂಪರ್‌ಮ್ಯಾನ್ ಎಡಿಷನ್ ಹೆಲ್ಮೆಟ್ ( Studds Helios Superman Edition Helmet) ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ತನ್ನ DC ಸೂಪರ್‌ಹೀರೋ - ಪ್ರೇರಿತ ಶ್ರೇಣಿಗೆ ಮತ್ತೊಂದು ಗಮನಾರ್ಹ ಆಯ್ಕೆಯನ್ನು ಸೇರಿಸಿದೆ. ಈ ಆವೃತ್ತಿಯನ್ನು ವಾರ್ನರ್ ಬ್ರದರ್ಸ್ ಡಿಸ್ಕವರಿ ಗ್ಲೋಬಲ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಇಂಡಿಯಾ ಸಹಯೋಗದೊಂದಿಗೆ ಪರಿಚಯಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

25,000 ರೂ. ಸಂಬಳದಲ್ಲಿ ಮನೆ ಮತ್ತು ಕಾರು ಖರೀದಿ

₹25,000 ಸಂಬಳದಲ್ಲಿ ಮನೆ ಮತ್ತು ಕಾರನ್ನು ಖರೀದಿಸುವುದು ಹೇಗೆ ಎಂದು ಅನ್ವೇಷಿಸಿ. ವ್ಯವಹಾರ ತರಬೇತುದಾರ ದೀಪಕ್ ವಾಧ್ವಾ ಅವರಿಂದ ಅಗತ್ಯ ಆರ್ಥಿಕ ತಂತ್ರಗಳನ್ನು ಕಲಿಯಿರಿ.

Maruti Suzuki: ಹೊಸ ದರ ಪಟ್ಟಿ.. 3.50 ಲಕ್ಷ ರೂಪಾಯಿಗೆ ಹೊಸ ಕಾರು..

ಇಂದಿನಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಅಧಿಕೃತವಾಗಿ ಜಾರಿಗೆ ಬರಲಿವೆ. ಇದರ ಸಂಪೂರ್ಣ ಲಾಭವನ್ನು ಮಾರುತಿ ಸುಜುಕಿ ಇಂಡಿಯಾ (Maruti Suzuki India) ತನ್ನ ಗ್ರಾಹಕರಿಗೆ ವರ್ಗಾಯಿಸುತ್ತಿದೆ. ವಿಶೇಷವಾಗಿ ಅರೆನಾ ಡೀಲರ್‌ಶಿಪ್‌ ಮಾರಾಟಗೊಳ್ಳುವ ವಿವಿಧ ಕಾರುಗಳ ಬೆಲೆಯನ್ನು ರೂ.46,400 ರಿಂದ ರೂ.1.29 ಲಕ್ಷವರೆಗೆ ಇಳಿಸಿದೆ. ಬನ್ನಿ, ಯಾವ ಕಾರು ಎಷ್ಟು 'ಎಕ್ಸ್-ಶೋರೂಂ' ಬೆಲೆಯನ್ನು ಹೊಂದಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Toyota: 26.11 ಕಿ.ಮೀ ಮೈಲೇಜ್... 7-ಸೀಟರ್ ಕಾರಿಗೆ ಫುಲ್ ಡಿಮ್ಯಾಂಡ್

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (TKM) ತನ್ನ ಮೆಚ್ಚುಗೆ ಪಡೆದ ಪ್ರಮುಖ 7-ಸೀಟರ್ ಫ್ಯಾಮಿಲಿ ಕಾರಾಗಿರುವ ಟೊಯೋಟಾ ರೂಮಿಯನ್‌ಗೆ ಗಮನಾರ್ಹ ವರ್ಧನೆಯನ್ನು ಘೋಷಿಸಿದೆ. ಪ್ರತಿಯೊಬ್ಬ ಪ್ರಯಾಣಿಕರಿಗೂ ಗರಿಷ್ಟ ಸುರಕ್ಷತೆಯನ್ನು ಒದಗಿಸುವ ಸಲುವಾಗಿ ಎಲ್ಲಾ ವೇರಿಯೆಂಟ್‌ಗಳಲ್ಲಿ ಈಗ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುವುದಾಗಿ ಘೋಷಿಸಿದೆ. ಈ ಮೂಲಕ ಎಲ್ಲಾ ರೂಪಾಂತರಗಳು ಈಗ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎರಡು ಸೈಡ್ ಏರ್‌ಬ್ಯಾಗ್‌ಗಳು ಮತ್ತು ಎರಡು ಕರ್ಟನ್ ಶೀಲ್ಡ್ ಏರ್‌ಬ್ಯಾಗ್‌ಗಳೊಂದಿಗೆ ಸಮಗ್ರ 360 - ಡಿಗ್ರಿ ಸುರಕ್ಷತೆಯನ್ನು ಒದಗಿಸುತ್ತವೆ ಎಂದು ಟೊಯೋಟಾ ಹೇಳಿದೆ.

5-ಸ್ಟಾರ್ ಸೇಫ್ಟಿ ರೇಟಿಂಗ್‌ನ ಹೊಸ ಮಾರುತಿ ವಿಕ್ಟೋರಿಸ್ ಕಾರಿನ..

ಸೆ.16 ರಂದು ಹೊಚ್ಚ ಹೊಸ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಕಾರನ್ನು ಮಾರಾಟಕ್ಕೆ ತರಲಾಗಿತ್ತು. ಇದೊಂದು ಮಿಡ್-ಸೈಜ್ ಎಸ್‌ಯುವಿಯಾಗಿದೆ. ಗ್ಲೋಬಲ್ ಎನ್‌ಸಿಎಪಿ (Global NCAP) ಮತ್ತು ಭಾರತ್ ಎನ್‌ಸಿಎಪಿ (Bharat NCAP) ಸುರಕ್ಷತಾ ಪರೀಕ್ಷೆಯಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಪಡೆದಿದೆ. ಸದ್ಯ 'ವಿಕ್ಟೋರಿಸ್' ಕಾರು ಮೊದಲ ಬಾರಿಗೆ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ಈ ಕುರಿತ ವಿಡಿಯೋ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ.

ಮನೆಯಲ್ಲೇ ಕುಳಿತು ಬುಕ್ ಮಾಡಿ: Rorr EZ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ

ಭಾರತದ ಪ್ರಮುಖ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕರಾದ ಒಬೆನ್ ಎಲೆಕ್ಟ್ರಿಕ್, ತನ್ನ ಹೊಸ ರೋರ್ ಇಝಡ್ (Rorr EZ) ಜೊತೆಗೆ ರೋರ್ ಇಝಡ್ ಸಿಗ್ಮಾ (Rorr EZ Sigma) ಮೋಟಾರ್‌ಸೈಕಲ್‌ಗಳನ್ನು ಭಾರತದ ಸ್ವದೇಶಿ ಇ-ಕಾಮರ್ಸ್ ಮಾರುಕಟ್ಟೆಯಾದ ಫ್ಲಿಪ್‌ಕಾರ್ಟ್ (Flipkart) ‌ನಲ್ಲಿ ಖರೀದಿಸಬಹುದು ಎಂದು ಘೋಷಿಸಿದೆ. ಈ ಪಾಲುದಾರಿಕೆಯು ಒಬೆನ್ ಎಲೆಕ್ಟ್ರಿಕ್‌ನ ಡಿಜಿಟಲ್ ವ್ಯಾಪಾರದ ವಿಸ್ತರಣೆಯಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಅನುಕೂಲಕರ, ಸುಸ್ಥಿರ ಮತ್ತು ವಿವಿಧ ಆಯ್ಕೆಗಳ ಮೂಲಕ ವಾಹನಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಈ ಸೌಲಭ್ಯವು ಇನ್ನೂ ಸುಲಭವಾಗಿಸುತ್ತದೆ.

ಮಹೀಂದ್ರಾ ಅತಿದೊಡ್ಡ ಹಬ್ಬದ ಆಫರ್: ರೂ. 1.84 ಲಕ್ಷದವರೆಗೆ ಕಡಿತ ಘೋಷಣೆ

ಪ್ರಮುಖ ವಾಹನ ತಯಾರಕರಾದ ಮಹೀಂದ್ರಾ, ತನ್ನ ವಾಣಿಜ್ಯ ವಾಹನ ಶ್ರೇಣಿಯ ಮೇಲೆ ಹಬ್ಬದ ಪ್ರಮುಖ ಪ್ರಯೋಜನಗಳನ್ನು ಘೋಷಿಸಿದೆ. ಆಯ್ದ ಮಾಡಲ್ ಮತ್ತು ವೇರಿಯೆಂಟ್ ಅವಲಂಭಿಸಿ ರೂ. 1.84 ಲಕ್ಷದವರೆಗೆ ಉಳಿತಾಯ ಮಾಡಬಹುದು ಎಂದು ತಿಳಿಸಿದೆ. ಇತ್ತೀಚಿನ GST ದರವನ್ನು 28% ರಿಂದ 18% ಕ್ಕೆ ಇಳಿಸಿದ ನಂತರ, ಈ ಆಫರ್ ಕಡಿಮೆಯಾದ ಎಕ್ಸ್-ಶೋರೂಂ ಬೆಲೆಗಳು ಮತ್ತು ಹೆಚ್ಚುವರಿ ಹಬ್ಬದ ರಿಯಾಯಿತಿಗಳನ್ನು ಸಂಯೋಜಿಸುತ್ತದೆ. ಇದು ಈ ದೀಪಾವಳಿ ಸೀಸನ್‌ನಲ್ಲಿ ವ್ಯಾಪಾರ ಮತ್ತು ಫ್ಲೀಟ್ ಖರೀದಿದಾರರಿಗೆ ಅತ್ಯಂತ ಲಾಭದಾಯಕವಾಗಲಿದೆ.

Duster: 24 ಕಿ.ಮೀ ಮೈಲೇಜ್.. ಲಕ್ಷುರಿ ಫೀಚರ್, ಬೆಂಗಳೂರಿನಲ್ಲಿ..

ರೆನಾಲ್ಟ್ ಇಂಡಿಯಾ (Renault India), ಅತ್ಯಂತ ಜನಪ್ರಿಯ ಎಸ್‌ಯುವಿಯಾದ 'ಡಸ್ಟರ್'ನ್ನು ಹೊಸ ಅವತಾರದಲ್ಲಿ ಮಾರಾಟಕ್ಕೆ ತರಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. 'ಕೈಗರ್ ಫೇಸ್‌ಲಿಫ್ಟ್' ಬಿಡುಗಡೆ ಸಮಾರಂಭದಲ್ಲೂ ಶೀಘ್ರದಲ್ಲೇ ನೂತನ 'ರೆನಾಲ್ಟ್ ಡಸ್ಟರ್'ನ್ನು ಪರಿಚಯಿಸಲಾಗುತ್ತದೆ ಎಂದು ಕಂಪನಿಯೇ ಅಧಿಕೃತವಾಗಿ ಘೋಷಣೆ ಮಾಡಿತ್ತು. ಇದೇ ಕಾರು ದೇಶೀಯ ಮಾರುಕಟ್ಟೆಯಲ್ಲಿ 2012 ರಿಂದ 2020 ರವರೆಗೆ ಭರ್ಜರಿಯಾಗಿ ಮಾರಾಟಗೊಂಡಿತ್ತು.
Advertisement

ಟಾಟಾ ಏಸ್ ಗೋಲ್ಡ್ ಪ್ಲಸ್ ಡೀಸೆಲ್ ಮಿನಿ-ಟ್ರಕ್ ವಿಶೇಷತೆಗಳು

ದೇಶದ ಪ್ರಮುಖ ವಾಣಿಜ್ಯ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್, ಮೊನ್ನೆಯಷ್ಟೆ ತನ್ನ ಅತ್ಯಂತ ಜನಪ್ರಿಯ ಏಸ್ ಸರಣಿಯ ಕೈಗೆಟಕುವ ಬೆಲೆಯ ಡೀಸೆಲ್ ಏಸ್ ಗೋಲ್ಡ್+ ವಾಹನವನ್ನು ಬಿಡುಗಡೆ ಮಾಡಿದೆ. ಕೇವಲ ರೂ. 5.52 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಉನ್ನತ ಕಾರ್ಯಕ್ಷಮತೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದು ಸುಧಾರಿತ ಲೀನ್ ಎನ್ಓಎಕ್ಸ್ ಟ್ರ್ಯಾಪ್ (LNT) ತಂತ್ರಜ್ಞಾನ ಹೊಂದಿರುವ ಏಸ್ ಗೋಲ್ಡ್+ ಡೀಸೆಲ್ ಎಕ್ಸಾಸ್ಟ್ ಫ್ಲೂಯಿಡ್ (ಡಿಇಎಫ್) ಅಗತ್ಯವನ್ನು ತೆಗೆದುಹಾಕುತ್ತದೆ ಎಂದು ಟಾಟಾ ತಿಳಿಸಿದೆ. ಈ ವಾಹನದ ಇನ್ನೂ ಹಲವು ವಿಶೆಷತೆಗಳು ಇಲ್ಲಿವೆ.

TVS: ಟಿವಿಎಸ್ ಎಕ್ಸ್ಎಲ್ 100ನ ಹೊಸ ವೇರಿಯೆಂಟ್ ಮಾರಾಟಕ್ಕೆ..

ಟಿವಿಎಸ್ ಎಕ್ಸ್ಎಲ್ 100 (TVS XL 100) ಜಗಮೆಚ್ಚಿದ ಮೊಪೆಡ್ ಆಗಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸದೆ. ಹೊಸ ಕಾಲಘಟ್ಟಕ್ಕೆ ತಕ್ಕಂತೆ ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಮೊಪೆಡ್‌ನ್ನು ಮೇಲ್ದರ್ಜೆರಿಸಲಾಗಿದೆ. ಇತ್ತೀಚೆಗೆ ನೂತನ ರೂಪಾಂತರವಾದ (ವೇರಿಯೆಂಟ್) 'ಹೆವಿ ಡ್ಯೂಟಿ ಅಲಾಯ್'ನ್ನು ಬಿಡುಗಡೆಗೊಳಿಸಲಾಗಿದೆ. ನಾವಿಲ್ಲಿ ನೂತನ ಮಾಡೆಲ್‌ನ ಬೆಲೆ, ಕಾರ್ಯಕ್ಷಮತೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

ಕೇವಲ 20 ಸಾವಿರ ಬೆಲೆ: ಹೊಸ ಡೋಪ್ ಇ - ಸೈಕಲ್ ವಿಶೇಷತೆಗಳು

ಪ್ರಮುಖ ಎಲೆಕ್ಟ್ರಿಕ್ ಸೈಕಲ್ ಬ್ರ್ಯಾಂಡ್ ಆಗಿರುವ ಇಮೊಟೊರಾಡ್, ನವೀನ ಸಸ್ಪೆನ್ಷನ್ - ಸಜ್ಜಿತ 'ಡೋಪ್ ಇ - ಸೈಕಲ್' ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಸೈಕಲ್ ಅನ್ನು ರೂ. 19,999 ಬೆಲೆಯಲ್ಲಿ ಈ ಸೈಕಲ್ ಖರೀದಿಗೆ ಲಭ್ಯವಿದೆ. ಇದು ಭಾರತದ ಮೊದಲ 24T ಎಲೆಕ್ಟ್ರಿಕ್ ಸೈಕಲ್ ಆಗಿದ್ದು, ವಿಶೇಷವಾಗಿ ಯುವ ಸವಾರರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಸುಧಾರಿತ ಸಸ್ಪೆನ್ಷನ್ ತಂತ್ರಜ್ಞಾನವನ್ನು ಹೊಂದಿದೆ. ಗುಣಮಟ್ಟ ಅಥವಾ ಸುರಕ್ಷತೆಯ ಮೇಲೆ ರಾಜಿ ಮಾಡಿಕೊಳ್ಳದ ಬೆಲೆಯಲ್ಲಿ, ಮಕ್ಕಳ ಬೆಳವಣಿಗೆಗೆ ಸಹಕರಿಸುವ ಸೈಕಲ್ ಆಗಿದೆ ಎಂದು ಕಂಪನಿ ಭರವಸೆ ನೀಡಿದೆ.

ಭಾರತದಲ್ಲಿ ಮತ್ತೊಮ್ಮೆ ತನ್ನ ಗತ್ತು ತೋರಿಸಿದ ಬಜಾಜ್ ಚೇತಕ್

ಬಜಾಜ್ ಚೇತಕ್ ಭಾರತದಲ್ಲಿ 5 ಲಕ್ಷ (500,000) ಮಾರಾಟದ ಮೈಲಿಗಲ್ಲನ್ನು ದಾಟಿದೆ, ಜನವರಿ 2020 ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಬಿಡುಗಡೆಯಾದಾಗಿನಿಂದ ಸೆಪ್ಟೆಂಬರ್ 2025 ರ ಹೊತ್ತಿಗೆ ಒಟ್ಟು ಮಾರಾಟವು 5,10,000 ಯೂನಿಟ್‌ ವಾಹನಗಳನ್ನು ತಲುಪಿದೆ. ಈ ಸಾಧನೆಯು ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬಜಾಜ್‌ನ ಬಲವಾದ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುತ್ತದೆ. ಚೇತಕ್‌ನ ಯಶಸ್ಸು ಬಹು ವೇರಿಯೆಂಟ್‌ಗಳು, ಸ್ಪರ್ಧಾತ್ಮಕ ಬೆಲೆ ಮತ್ತು ಭಾರತದಲ್ಲಿ ಬಜಾಜ್‌ನ ವ್ಯಾಪಕ ಜನಪ್ರಿಯತೆಯಿಂದಾಗಿದೆ.

ಬುಲೆಟ್ ರೈಲು 2027ರ ವೇಳೆಗೆ 50 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆ!

ಭಾರತದ ಮೊದಲ ಹೈಸ್ಪೀಡ್ ರೈಲು ಯೋಜನೆಯಾಗಿರುವ ಮುಂಬೈ-ಅಹಮದಾಬಾದ್ ಬುಲೆಟ್ ರೈಲು - ಸೆಪ್ಟೆಂಬರ್ 2025 ರಲ್ಲಿ 4.88 ಕಿ.ಮೀ ಸುರಂಗ ಮಾರ್ಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದರೊಂದಿಗೆ ಪ್ರಮುಖ ನಿರ್ಮಾಣ ಮೈಲಿಗಲ್ಲನ್ನು ಸಾಧಿಸಿದೆ. ಇದು ಕಾರಿಡಾರ್‌ನ ಮುಂದಿನ ಹಂತಕ್ಕೆ ದಾರಿ ಮಾಡಿಕೊಡುತ್ತದೆ. ಈ ಪ್ರಗತಿಯ ಆಧಾರದ ಮೇಲೆ ದೇಶದ ಮೊದಲ ಬುಲೆಟ್ ರೈಲು 2027 ರ ವೇಳೆಗೆ ಆರಂಭಿಕ 50 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಘೋಷಿಸಿದರು.