ಕೇವಲ 20 ಸಾವಿರ ಬೆಲೆ: ಹೊಸ ಡೋಪ್ ಇ - ಸೈಕಲ್ ವಿಶೇಷತೆಗಳು
ಆಟೋಮೊಬೈಲ್ಸ್
- 1 year, 11 days ago
ಪ್ರಮುಖ ಎಲೆಕ್ಟ್ರಿಕ್ ಸೈಕಲ್ ಬ್ರ್ಯಾಂಡ್ ಆಗಿರುವ ಇಮೊಟೊರಾಡ್, ನವೀನ ಸಸ್ಪೆನ್ಷನ್ - ಸಜ್ಜಿತ 'ಡೋಪ್ ಇ - ಸೈಕಲ್' ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಸೈಕಲ್ ಅನ್ನು ರೂ. 19,999 ಬೆಲೆಯಲ್ಲಿ ಈ ಸೈಕಲ್ ಖರೀದಿಗೆ ಲಭ್ಯವಿದೆ. ಇದು ಭಾರತದ ಮೊದಲ 24T ಎಲೆಕ್ಟ್ರಿಕ್ ಸೈಕಲ್ ಆಗಿದ್ದು, ವಿಶೇಷವಾಗಿ ಯುವ ಸವಾರರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಸುಧಾರಿತ ಸಸ್ಪೆನ್ಷನ್ ತಂತ್ರಜ್ಞಾನವನ್ನು ಹೊಂದಿದೆ. ಗುಣಮಟ್ಟ ಅಥವಾ ಸುರಕ್ಷತೆಯ ಮೇಲೆ ರಾಜಿ ಮಾಡಿಕೊಳ್ಳದ ಬೆಲೆಯಲ್ಲಿ, ಮಕ್ಕಳ ಬೆಳವಣಿಗೆಗೆ ಸಹಕರಿಸುವ ಸೈಕಲ್ ಆಗಿದೆ ಎಂದು ಕಂಪನಿ ಭರವಸೆ ನೀಡಿದೆ.