ಟಿವಿಎಸ್ ಜೊತೆ ಕೈಜೋಡಿಸಿದ ನಾಯ್ಸ್: ದೇಶದ ಮೊದಲ ಇವಿ-ಸ್ಮಾರ್ಟ್‌ವಾಚ್
ಆಟೋಮೊಬೈಲ್ಸ್
- 1 year, 16 days ago
ಪ್ರಮುಖ ದ್ವಿಚಕ್ರ ವಾಹನ ತಯಾರಕರಾಗಿರುವ ಟಿವಿಎಸ್ ಮೋಟಾರ್ (TVS Motor) ಕಂಪನಿ ಮತ್ತು ಭಾರತದ ಕನೆಕ್ಟೆಡ್ ಲೈಫ್‌ಸ್ಟೈಲ್ ಬ್ರ್ಯಾಂಡ್ ಆಗಿರುವ ನಾಯ್ಸ್ (Noise), ಇಂದು ಮೊದಲ ಮೇಡ್ - ಇನ್ - ಇಂಡಿಯಾ ಇವಿ - ಸ್ಮಾರ್ಟ್‌ವಾಚ್ ಏಕೀಕರಣ (EV-Smartwatch integration) ವನ್ನು ಪರಿಚಯಿಸಿವೆ. ಈ ಏಕೀಕರಣವು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಾಯ್ಸ್ ಸ್ಮಾರ್ಟ್‌ವಾಚ್‌ನೊಂದಿಗೆ ಸಂಪರ್ಕಿಸುತ್ತದೆ. ಈ ಮೂಲಕ ಸವಾರರು ತಮ್ಮ ವಾಹನದ ಎಲ್ಲಾ ಮಾಹಿತಿಯನ್ನು ಸ್ಮಾರ್ಟ್ ವಾಚ್‌ನಲ್ಲಿ ಪಡೆಯಬಹುದು ಎಂದು ಟಿವಿಎಸ್ ತಿಳಿಸಿದೆ.