Hero: ಈ ತಿಂಗಳೇ ಹೊಸ ಹೀರೋ ಸ್ಕೂಟರ್‌ನ ಡೆಲಿವರಿ ಶುರು..
ಆಟೋಮೊಬೈಲ್ಸ್
- 1 year, 1 month, 8 hr, 40 min ago
ಹೀರೋ ಜೂಮ್ 160 (Hero Xoom 160) ಜನಪ್ರಿಯ ಮ್ಯಾಕ್ಸಿ ಸ್ಕೂಟರ್ ಆಗಿದೆ. ಇದೇ ವರ್ಷದ ಜನವರಿಯಲ್ಲಿ ಈ ಸ್ಕೂಟರ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಆದರೆ, ಮಾರಾಟಕ್ಕೆ ಬಂದು 6 ತಿಂಗಳು ಕಳೆದರೂ ಬುಕ್ಕಿಂಗ್‌ನ್ನು ಶುರು ಮಾಡಿರಲಿಲ್ಲ. ಜುಲೈನಿಂದ ಆರ್ಡರ್ ತೆಗೆದುಕೊಳ್ಳುವ ಕಾರ್ಯಕ್ಕೆ ಕಂಪನಿಯು ಚಾಲನೆ ನೀಡಿದೆ. ಈ ತಿಂಗಳಿಂದಲೇ (ಸೆಪ್ಟೆಂಬರ್ 2025) 'ಜೂಮ್ 160' ಸ್ಕೂಟರ್‌ನ ವಿತರಣೆಯನ್ನು ಪ್ರಾರಂಭ ಮಾಡುವುದಕ್ಕೂ ಮುಂದಾಗಿದೆ. ಬನ್ನಿ, ನೂತನ ಸ್ಕೂಟರ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖ ವಿವರಗಳನ್ನು ತಿಳಿಯೋಣ.