Ather: ಬೆಂಗಳೂರಿನ ಎಥರ್ ಸ್ಕೂಟರ್‌ಗಳಿಗೆ ಮನಸೋತ ಗ್ರಾಹಕರು..
ಆಟೋಮೊಬೈಲ್ಸ್
- 1 year, 1 month, 2 days ago
ಬೆಂಗಳೂರಿಗೆ ಸೇರಿರುವ ಎಥರ್ ಎನರ್ಜಿ (Ather Energy), ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯವಾಗಿ ಹಲವು ಇ-ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಇವುಗಳು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಮತ್ತು ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈ 2025ರ ಆಗಸ್ಟ್‌ನಲ್ಲಿ ಕಂಪನಿಯ ಸ್ಕೂಟರ್‌ಗಳು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.