Toyota: ನಿನ್ನೆಯಷ್ಟೆ ಬಿಡುಗಡೆಯಾದ ಟೊಯೋಟಾ ಹೈಬ್ರಿಡ್ ವಿಶೇಷತೆಗಳು!
ಆಟೋಮೊಬೈಲ್ಸ್
- 1 year, 1 month, 14 days ago
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೋಟಾ (Toyota), ಹೈಬ್ರಿಡ್ ಎಲೆಕ್ಟ್ರಿಕ್ ಸೆಡಾನ್ 'ಕ್ಯಾಮ್ರಿ-ಸ್ಪ್ರಿಂಟ್ ಎಡಿಷನ್' (Camry Sprint Edition) ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಟೊಯೋಟಾ ಹೈಬ್ರಿಡ್ ಬ್ಯಾಟರಿಯ ಮೇಲೆ 8 ವರ್ಷ ಅಥವಾ 1,60,000 ಕಿಮೀ ವಾರಂಟಿಯನ್ನು (ಯಾವುದು ಮೊದಲು ಬರುತ್ತದೆಯೋ ಅದು) ನೀಡುತ್ತಿದೆ. ಕ್ಯಾಮ್ರಿ ಸ್ಪ್ರಿಂಟ್ ಆವೃತ್ತಿಯ ಬುಕಿಂಗ್‌ಗಳು ಈಗ ತೆರೆದಿವೆ. ಗ್ರಾಹಕರು ಟೊಯೋಟಾ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಬುಕಿಂಗ್‌ಗಳನ್ನು ಮಾಡಬಹುದು ಅಥವಾ ಹತ್ತಿರದ ಟೊಯೋಟಾ ಡೀಲರ್‌ಶಿಪ್‌ಗೆ ಭೇಟಿ ನೀಡಬಹುದು.