Viral: ಮೋದಿಜೀ.. ಮುದ್ದಾದ ಅಕ್ಷರಗಳಲ್ಲಿ ಪತ್ರ ಬರೆದ ಪುಟ್ಟ ಪೋರಿ...
ಆಟೋಮೊಬೈಲ್ಸ್
- 1 year, 1 month, 19 days ago
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಭಾನುವಾರ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ವಂದೇ ಭಾರತ್ ಎಕ್ಸ್‌ಪ್ರೆಸ್ ಹಾಗೂ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಉದ್ಘಾಟಿಸಿದ್ದರು. ಅದೇ ಸಂದರ್ಭದಲ್ಲಿ ನಗರದ ಸಂಚಾರ ದಟ್ಟಣೆ ಹಾಗೂ ಹದಗೆಟ್ಟ ರಸ್ತೆ ಕುರಿತಂತೆ ಪ್ರಧಾನಿಗಳಿಗೆ ಪುಟ್ಟ ಬಾಲಕಿಯೋರ್ವಳು ಪತ್ರ ಬರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ನೆಟ್ಟಿಗರಿಂದಲೂ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ.