ಹೊಸ ಅವತಾರದಲ್ಲಿ ಈ Renault SUV.. ಆಗಸ್ಟ್ 24ರಂದು ಬಿಡುಗಡೆ..

ರೆನಾಲ್ಟ್ ಕಿಗರ್ (Renault Kiger) ಪ್ರಮುಖ ಎಸ್‌ಯುವಿಯಾಗಿದೆ. ಈ ಕಾರನ್ನು ದೇಶೀಯವಾಗಿ 2021ರಲ್ಲಿ ಬಿಡುಗಡೆಗೊಳಿಸಲಾಯಿತು. ಅಂದಿನಿಂದ ಇಂದಿನವರೆಗೆ ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ಇದೇ ಕಿಗರ್ ಎಸ್‌ಯುವಿಯನ್ನು ನವೀಕರಿಸಿದ ರೂಪದಲ್ಲಿ ಅಂದರೆ, ಫೇಸ್‌ಲಿಫ್ಟ್ ಮಾಡೆಲ್‌ನ್ನು ಬಿಡುಗಡೆಗೊಳಿಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಆಪ್ ಸ್ಟೋರ್‌ನಲ್ಲಿ ಆಪಲ್‌ ವಿರುದ್ಧ ಎಲೋನ್ ಮಸ್ಕ್ ಆಕ್ರೋಶ!

ಆಪ್ ಸ್ಟೋರ್‌ನಲ್ಲಿ ChatGPT ಗೆ ಆದ್ಯತೆ ನೀಡುವ ಮೂಲಕ ಆಪಲ್ ಸ್ಪರ್ಧೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಎಲೋನ್ ಮಸ್ಕ್ ಹೇಳಿಕೊಂಡಿದ್ದಾರೆ, xAI ಮೂಲಕ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.

ಇವಿ ಖರೀದಿಸುವ ಮುನ್ನ ಪರಿಗಣಿಸುವ ಪ್ರಮುಖ ವಿಷಯಗಳಿವು: ನೀವು ಅಷ್ಟೇನಾ?

ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ರಸ್ತೆಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚಾಗಿ ಕಂಡುಬರುತ್ತಿವೆ. ಕೆಲಸ, ಕಾಲೇಜು ಅಥವಾ ಸಣ್ಣ ವಾಣಿಜ್ಯ ಕೆಲಸಗಳಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ದೈನಂದಿನ ಪ್ರಯಾಣಕ್ಕಾಗಿ ತಮ್ಮ ಮುಖ್ಯ ವಾಹನವಾಗಿ ಈಗ ಹೆಚ್ಚಿನ ಜನರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೆಚ್ಚುತ್ತಿರುವ ಜಾಗೃತಿ, ಉತ್ತಮ ಉತ್ಪನ್ನಗಳು ಮತ್ತು ಬಲವಾದ ಪರಿಸರ ವ್ಯವಸ್ಥೆಗಳೊಂದಿಗೆ, ಈ ಬದಲಾವಣೆಯು ವೇಗವಾಗಿ ಬೆಳೆಯುತ್ತಿದೆ. ಆದರೆ ಮೊದಲ ಬಾರಿಯ ಇವಿ ಖರೀದಿದಾರರಿಗೆ, ಕೆಲವು ಅನುಮಾನಗಳು ಹಾಗೂ ಪ್ರಶ್ನೆಗಳು ಇನ್ನೂ ತಮ್ಮನ್ನು ಕಾಡುತ್ತಿವೆ.

ನಿವೃತ್ತಿ ಆದಾಯ ಭದ್ರತೆಗಾಗಿ ಹೂಡಿಕೆ ತಂತ್ರಗಳು

ನಿವೃತ್ತಿಯಲ್ಲಿ ಆರ್ಥಿಕ ಭದ್ರತೆಗಾಗಿ ಹೂಡಿಕೆ ತಂತ್ರಗಳನ್ನು ಅನ್ವೇಷಿಸಿ. ನಿವೃತ್ತಿಯ ನಂತರ ಮಾಸಿಕ ಆದಾಯವನ್ನು ಗಳಿಸಲು NPS ಮತ್ತು PPF ಬಗ್ಗೆ ತಿಳಿಯಿರಿ.
Advertisement

ಗಣೇಶ ಹಬ್ಬಕ್ಕೆ ಸಿಹಿಸುದ್ದಿ: 20 ಕಿ.ಮೀ ಮೈಲೇಜ್.. 5-ಸೀಟರ್..

ಇದೇ 27ಕ್ಕೆ ಗಣೇಶ ಹಬ್ಬ (ganesha festival) ಬಂದಿದ್ದು, ಅಂದು ಸಿದ್ದಿ ವಿನಾಯಕನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. ಹಬ್ಬವನ್ನು ಕೂಡ ಸಂಭ್ರಮ - ಸಡಗರದಿಂದ ಆಚರಿಸಲಾಗುತ್ತದೆ. ನೀವು ಗಣೇಶ ಚತುರ್ಥಿಗೆ ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಯಾವ ಕಾರು ಹೆಚ್ಚಿನ ರಿಯಾಯಿತಿ ಹೊಂದಿದೆ ಎಂಬುದರ ಬಗ್ಗೆ ತಿಳಿಯಲು ಪ್ರಯತ್ನಿಸುತ್ತಿರುವಿರಾ.. ಈ ತಿಂಗಳು ಜನಪ್ರಿಯ ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಎಸ್‌ಯುವಿಯು ಭಾರೀ ರಿಯಾಯಿತಿ ಪ್ರಯೋಜವನ್ನು ಪಡೆದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Best Sunroof cars: ಬಜೆಟ್ ಬೆಲೆಯಲ್ಲಿ ಸನ್‌ರೂಫ್ ಕಾರು ಬೇಕೆ?

ಕಾರುಗಳ ಅಂದವನ್ನು ಹೆಚ್ಚಿಸುವ ಹಾಗೂ ಇಂಟೀರಿಯರ್‌ನಲ್ಲಿ ಆಕರ್ಷಕ ಲುಕ್ ಕೊಡುವ 'ಸನ್‌ರೂಫ್' ಈ ಹಿಂದೆ ಐಷಾರಾಮಿ ಕಾರುಗಳಿಗೆ ಮಾತ್ರ ಸೀಮಿತವಾಗಿತ್ತು. ಈ ಅಪರೂಪದ ಐಷಾರಾಮಿ ಫೀಚರ್‌ಗೆ ಬೇಡಿಕೆ ಹೆಚ್ಚಾಗಿದ್ದು, ಭಾರತದಲ್ಲಿ ಕೈಗೆಟುಕುವ ಬೆಲೆಯ ಕಾರುಗಳಲ್ಲಿಯೂ ಲಭ್ಯವಾಗುತ್ತಿದೆ. 2025 ರಲ್ಲಿ ಹಲವಾರು ಹ್ಯಾಚ್‌ಬ್ಯಾಕ್‌ಗಳು, ಮೈಕ್ರೋ ಎಸ್‌ಯುವಿಗಳು ಮತ್ತು ಕಾಂಪ್ಯಾಕ್ಟ್ ಎಸ್‌ಯುವಿಗಳು ಸನ್‌ರೂಫ್‌ಗಳನ್ನು ಕೇವಲ ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಪಡೆಯುತ್ತಿವೆ. ಸದ್ಯ ಭಾರತದಲ್ಲಿ ಬಜೆಟ್ ಬೆಲೆಯಲ್ಲಿ ಸನ್‌ರೂಫ್ ಬಯಸುವ ಖರೀದಿದಾರರಿಗೆ ಬೆಸ್ಟ್ ಆಯ್ಕೆಗಳು ಇಲ್ಲಿವೆ.

5-ಸೀಟರ್.. ಜನಮೆಚ್ಚಿದ Kia Syros ಎಲೆಕ್ಟ್ರಿಕ್ ರೂಪದಲ್ಲಿ..

ಕಿಯಾ ಮೋಟಾರ್ಸ್ (Kia Motors), ಇದೇ ಫೆಬ್ರವರಿಯಲ್ಲಿ ಹೊಚ್ಚ ಹೊಸ 'ಸೈರಸ್' ಎಸ್‌ಯುವಿಯನ್ನು ಮಾರಾಟಕ್ಕೆ ತಂದಿತ್ತು. ಈ ಕಾರು ಅತ್ಯಾಧುನಿಕವಾದ ವಿನ್ಯಾಸ ಹಾಗೂ ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕನಿಷ್ಠ ರೂ.9.50 ಲಕ್ಷ ಹಾಗೂ ಗರಿಷ್ಠ ರೂ.17.80 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ಸದ್ಯ ಈ ಸೈರಸ್ ಎಸ್‌ಯುವಿಯು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಲಿದೆ ಎಂಬ ವಿಚಾರವು ಬಹುತೇಕ ದೃಢಪಟ್ಟಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Bikes under 1 lakh: 1 ಲಕ್ಷಕ್ಕಿಂತ ಕಡಿಮೆ ಬೆಲೆಯ ಬೈಕ್‌ಗಳು

ಭಾರತದ ಪ್ರಯಾಣಿಕ ಮೋಟಾರ್‌ಸೈಕಲ್ ವಿಭಾಗವು ಪ್ರಮುಖ ಅಪ್‌ಡೇಟ್‌ಗಳನ್ನು ಕಾಣುತ್ತಿದೆ, ತಯಾರಕರು ತಮ್ಮ 125 ಸಿಸಿ ಬೈಕ್‌ಗಳಲ್ಲಿ ಹೆಚ್ಚಿನ ಪರ್ಫಾಮೆನ್ಸ್, ಸುಧಾರಿತ ಫೀಚರ್ಸ್ ಮತ್ತು ಆಕರ್ಷಕ ಡಿಸೈನ್‌ನೊಂದಿಗೆ ನೀಡುತ್ತಿದ್ದಾರೆ. ಬಜೆಟ್ ಬೆಲೆಯಲ್ಲಿ ಪವರ್ ಮತ್ತು ಮೌಲ್ಯದ ಪರಿಪೂರ್ಣ ಮಿಶ್ರಣವನ್ನು ಬಯಸುವ ಖರೀದಿದಾರರಿಗೆ, ರೂ. 1 ಲಕ್ಷಕ್ಕಿಂತ ಕಡಿಮೆ ಬೆಲೆ (Bikes under 1 lakh) ಯಲ್ಲಿ ರಾಜಿ ಮಾಡಿಕೊಳ್ಳದ ಹಲವು ಬೈಕ್‌ಗಳು ಈಗ ಮಾರುಕಟ್ಟೆಯಲ್ಲಿ ಸಿಗುತ್ತಿವೆ. 2025 ರಲ್ಲಿ ಭಾರತದಲ್ಲಿ ರೂ. 1 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ನೀವು ಖರೀದಿಸಬಹುದಾದ ಐದು ಅತ್ಯಂತ ಶಕ್ತಿಶಾಲಿ 125 ಸಿಸಿ ಬೈಕ್‌ಗಳ ವಿವರವಾದ ನೋಟ ಇಲ್ಲಿದೆ.

6-ಸೀಟರ್.. ಬಲಭೀಮ ಕಾರಿದು, ಆದರೂ ಈ TATA SUV ಮಾರಾಟದಲ್ಲಿ..

ಟಾಟಾ ಸಫಾರಿ (Tata Safari) ಪ್ರಮುಖ ಫ್ಯಾಮಿಲಿ ಎಸ್‌ಯುವಿಯಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ & ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಉತ್ತಮವಾದ ಕಾರ್ಯಕ್ಷಮತೆಯಿಂದಲೂ ಮನೆ ಮಾತಾಗಿದೆ. ಅದರ ಹೊರತಾಗಿ ಈ ಕಾರಿನ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದು ಈ ಜುಲೈನಲ್ಲೂ ಮುಂದುವರಿದ್ದು, ಒಟ್ಟು 1,242 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. 2024ರ ಇದೇ ಅವಧಿಯಲ್ಲಿ 2,109 ಯುನಿಟ್‌ಗಳನ್ನು ಮಾರಲಾಗಿತ್ತು. ಇದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -41% ಇಳಿಕೆಯಾಗಿದೆ.

Tata: ಹೊಸ ಟಾಟಾ ಅಡ್ವೆಂಚರ್ X ಪರ್ಸೋನಾ ಎಸ್‌ಯುವಿಗಳ ವಿಶೇಷತೆಗಳು!

ಟಾಟಾ ಮೋಟಾರ್ಸ್ ತನ್ನ ಪ್ರಮುಖ SUV ಗಳಾದ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿಗಳ ಹೊಸ ಅಡ್ವೆಂಚರ್ X ಪರ್ಸೋನಾ (Adventure X Persona) ವೇರಿಯೆಂಟ್‌ಗಳನ್ನು ಬಿಡುಗಡೆಗೊಳಿಸಿದೆ. ಇತ್ತೀಚೆಗಷ್ಟೆ ಬಿಡುಗಡೆಯಾದ ಈ ಪರ್ಸೋನಾ ವೇರಿಯೆಂಟ್‌ಗಳು, ಅಡ್ವೆಂಚರ್ ಎಕ್ಸ್ ಪರ್ಸೋನಾ ಎಂದು ಇವುಗಳನ್ನು ಬ್ರಾಂಡ್ ಮಾಡಲಾಗಿದ್ದು, ಅಡ್ವೆಂಚರ್ ಪ್ರಿಯರು ಮತ್ತು ನಗರ ಚಾಲಕರನ್ನು ಗುರಿಯಾಗಿಟ್ಟುಕೊಂಡು ಆಧುನಿಕ ತಂತ್ರಜ್ಞಾನ ಮತ್ತು ಐಷಾರಾಮಿ ಡಿಸೈನ್‌ನೊಂದಿಗೆ ಒರಟಾದ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿವೆ. ಬೆಲೆಗಳು ಹ್ಯಾರಿಯರ್‌ಗೆ ರೂ.18.99 ಲಕ್ಷ ಮತ್ತು ಸಫಾರಿಗೆ ರೂ.19.99 ಲಕ್ಷದಿಂದ ಪ್ರಾರಂಭವಾಗುತ್ತವೆ.

ಅಲ್ಲಿ ನೋಡು ಥಾರ್‌.. ಇಲ್ಲಿ ನೋಡು ಥಾರ್‌.. ಮುಗಿಬಿದ್ದ ಗ್ರಾಹಕರು..

ಮಹೀಂದ್ರಾ ಥಾರ್‌ (Mahindra Thar) ವಿಶ್ವಾಸಾರ್ಹ ಆಫ್-ರೋಡ್ ಎಸ್‍ಯುವಿಯಾಗಿದೆ. ಇದು ನೋಡುಗರ ಸೆಳೆಯುವಂತಹ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಥಾರ್‌ ರಾಕ್ಸ್ ಮತ್ತು 3-ಡೋರ್ ಥಾರ್‌ ಎಂಬ ರೂಪದಲ್ಲಿ ಖರೀದಿಗೆ ಲಭ್ಯವಿದೆ. ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಈ 2025ರ ಜುಲೈ ತಿಂಗಳು 'ಥಾರ್‌' ಭಾರೀ ಸಂಖ್ಯೆಯಲ್ಲಿಯೂ ಮಾರಾಟಗೊಂಡಿದೆ. ಒಟ್ಟು 9,845 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 4,385 ಯುನಿಟ್‌ಗಳನ್ನು ಮಾರಲಾಗಿತ್ತು. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 125% ಬೆಳವಣಿಗೆಯಾಗಿದೆ.

KTM: 160 ಸಿಸಿ ವಿಭಾಗದ ಅತ್ಯಂತ ಪವರ್‌ಫುಲ್ ಬೈಕ್ ಬಿಡುಗಡೆ

ವಿಶ್ವದ ಪ್ರಮುಖ ಪ್ರೀಮಿಯಂ ಪರ್ಫಾಮೆನ್ಸ್ ಮೋಟಾರ್‌ಸೈಕಲ್ ಬ್ರಾಂಡ್ ಆಗಿರುವ ಕೆಟಿಎಂ (KTM), ತನ್ನ ಹೊಸ ಕೆಟಿಎಂ 160 ಡ್ಯೂಕ್ (KTM 160 Duke) ಬಿಡುಗಡೆಯೊಂದಿಗೆ ತನ್ನ ಐಕಾನಿಕ್ ಸ್ಟ್ರೀಟ್ ಮೋಟಾರ್‌ಸೈಕಲ್ ಲೈನ್ ಅಪ್ ಅನ್ನು ವಿಸ್ತರಿಸಿದೆ. ಪ್ರೀಮಿಯಂ 160 ಸಿಸಿ ಜಾಗಕ್ಕೆ ಈ ಹೊಸ ಮೋಟಾರ್‌ಸೈಕಲ್ ಪ್ರವೇಶವು ಕೆಟಿಎಂನ ರೆಡಿ ಟು ರೇಸ್ (READY TO RACE) ಪರ್ಫಾಮೆನ್ಸ್ ಅನ್ನು ಭಾರತದ ಬೆಳೆಯುತ್ತಿರುವ ಸ್ಪೋರ್ಟ್ ಬೈಕ್ ಉತ್ಸಾಹಿಗಳಿಗೆ ಹೆಚ್ಚು ಆಕರ್ಷಕ ಆಯ್ಕೆಯನ್ನಾಗಿ ಮಾಡಲಿದೆ ಎಂದು ಕೆಟಿಎಂ ಹೇಳಿದೆ.
Advertisement

Royal Enfield: ಹೊಸ ಬಣ್ಣದೊಂದಿಗೆ ರಾಯಲ್ ಎನ್‌ಫೀಲ್ಡ್ ಹಂಟರ್ 350..

ರಾಯಲ್ ಎನ್‌ಫೀಲ್ಡ್ ಹಂಟರ್ 350 (Royal Enfield Hunter 350) ವಿಶ್ವಾಸಾರ್ಹ ಬೈಕ್ ಆಗಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಬೇಸ್ (ರೆಟ್ರೊ), ಮಿಡ್ (ಡ್ಯಾಪರ್) ಹಾಗೂ ಟಾಪ್ (ರೆಬೆಲ್) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಸದ್ಯ, ಈ ಮೋಟಾರ್‌ಸೈಕಲ್‌ನ್ನು ಹೊಸ ಬಣ್ಣದ ಆಯ್ಕೆಯಲ್ಲಿಯೂ ಬಿಡುಗಡೆಗೊಳಿಸಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಇತ್ತೀಚೆಗೆ ಬಿಡುಗಡೆಯಾದ ಹೊಸ ವೋಲ್ವೋ XC60 ವಿಶೇಷತೆಗಳು

2025ರ ವೋಲ್ವೋ XC60 ಮೈಲ್ಡ್ ಹೈಬ್ರಿಡ್ SUV ಅನ್ನು ಭಾರತದಲ್ಲಿ ಇತ್ತೀಚೆಗಷ್ಟೆ ರೂ. 71.90 ಲಕ್ಷ (ಎಕ್ಸ್ - ಶೋರೂಂ) ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಫೇಸ್‌ಲಿಫ್ಟೆಡ್ ಮಾದರಿಯು ವಿನ್ಯಾಸ, ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯಲ್ಲಿ ಗಮನಾರ್ಹ ನವೀಕರಣಗಳೊಂದಿಗೆ ಬಿಡುಗಡೆಯಾಗಿದೆ. ವೋಲ್ವೋ ಶೋರೂಂಗಳು ಅಥವಾ ಆನ್‌ಲೈನ್ ಮೂಲಕ ಬುಕಿಂಗ್‌ಗಳು ತೆರೆಯಲಾಗಿದ್ದು, ವಿತರಣೆಗಳು ಶೀಘ್ರದಲ್ಲೇ ಪ್ರಾರಂಭವಾಗುತ್ತವೆ ಎಂದು ವೋಲ್ವೋ ಇಂಡಿಯಾ ತಿಳಿಸಿದೆ. ಕಾರಿನ ಕುರಿತ ಹೈಬ್ರಿಡ್ ವಿಶೇಷತೆಗಳನ್ನು ಈ ಕೆಳಗೆ ತಿಳಿಸಲಾಗಿದೆ.

ನಮ್ಮೂರಿಗೂ ಸೈ.. ನಿಮ್ಮೂರಿಗೂ ಜೈ: 6 ಏರ್‌ಬ್ಯಾಗ್‌.. 8 ಲಕ್ಷದೊಳಗೆ..

ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಮೇಲೆ ಕೇಂದ್ರೀಕರಿಸಿ, INR 8 ಲಕ್ಷಕ್ಕಿಂತ ಕಡಿಮೆ ಬೆಲೆಯ ಆರು ಏರ್‌ಬ್ಯಾಗ್‌ಗಳನ್ನು ಹೊಂದಿರುವ ಕೈಗೆಟುಕುವ ಕಾರುಗಳ ಪಟ್ಟಿಯನ್ನು ಅನ್ವೇಷಿಸಿ.

ಕ್ರೆಡಿಟ್ ಸ್ಕೋರ್ ಇಲ್ಲದೆ ಸಾಲ ಹೇಗೆ ಪಡೆಯುವುದು?

ಕ್ರೆಡಿಟ್ ಸ್ಕೋರ್ ಇಲ್ಲದೆ ಕ್ರೆಡಿಟ್ ಪಡೆಯಲು ಪರಿಣಾಮಕಾರಿ ವಿಧಾನಗಳನ್ನು ಅನ್ವೇಷಿಸಿ, ಇದರಲ್ಲಿ ಕ್ರೆಡಿಟ್ ಕಾರ್ಡ್‌ಗಳು ಮತ್ತು ಹೊಸ ಉದ್ಯೋಗಿಗಳಿಗೆ ಅನುಗುಣವಾಗಿ ಸಾಲಗಳು ಸೇರಿವೆ.

ಸ್ಕೋಡಾ ಭಾರತಕ್ಕೆ ಲಗ್ಗೆಯಿಟ್ಟು 25 ವರ್ಷ: ಈಗೇನು ಮಾಡಿದೆ ಗೊತ್ತಾ?

ಭಾರತದಲ್ಲಿ ತನ್ನ 25ನೇ ವಾರ್ಷಿಕೋತ್ಸವ ಮತ್ತು ಜಾಗತಿಕವಾಗಿ 130 ವರ್ಷಗಳನ್ನು ಆಚರಿಸುತ್ತಿರುವ ಸ್ಕೋಡಾ (Skoda) ಆಟೋ ಇಂಡಿಯಾ, ತನ್ನ ಅತ್ಯುತ್ತಮ ಮಾರಾಟವಾದ ಮಾದರಿಗಳಾದ ಕುಶಾಕ್, ಸ್ಲಾವಿಯಾ ಮತ್ತು ಕೈಲಾಕ್‌ಗಳ ಲಿಮಿಟೆಡ್ ಎಡಿಷನ್‌ಗಳನ್ನು ಪರಿಚಯಿಸಿದೆ. ಈ ಸ್ಪೆಷಲ್ ಎಡಿಷನ್‌ಗಳು ವಿಶಿಷ್ಟ ವಿನ್ಯಾಸ ವರ್ಧನೆಗಳು ಮತ್ತು ಪ್ರೀಮಿಯಂ ಫೀಚರ್‌ಗಳನ್ನು ಒಳಗೊಂಡಿವೆ. ಜೊತೆಗೆ ವಿಶೇಷ 25ನೇ ವಾರ್ಷಿಕೋತ್ಸವದ ಬ್ಯಾಡ್ಜಿಂಗ್ ಅನ್ನು ಒಳಗೊಂಡಿವೆ. ಸ್ಪೆಷಲ್ ಎಡಿಷನ್‌ಗಳನ್ನು ಅಸ್ತಿತ್ವದಲ್ಲಿರುವ ಹೈ-ಸ್ಪೆಕ್ ಟ್ರಿಮ್‌ಗಳಾದ ಕುಶಾಕ್ ಮತ್ತು ಸ್ಲಾವಿಯಾದ ಮಾಂಟೆ ಕಾರ್ಲೊ ಮತ್ತು ಕೈಲಾಕ್‌ನ ಪ್ರೆಸ್ಟೀಜ್ ಮತ್ತು ಸಿಗ್ನೇಚರ್+ ನಲ್ಲಿ ನೀಡಲಾಗುವುದು.

ಬಿಡುಗಡೆಗೂ ಮುನ್ನವೇ ರಸ್ತೆಯಲ್ಲಿ ಕಾಣಿಸಿಕೊಂಡ ಹೊಸ ಕಂಪನಿ..

ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast), ಭಾರತದ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲು ಅಂತಿಮ ಹಂತದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ತಮಿಳುನಾಡಿನ ಚೆನ್ನೈ ಹಾಗೂ ಗುಜರಾತ್‌ನ ಸೂರತ್‌ನಲ್ಲಿ ಡೀಲರ್‌ಶಿಪ್‌ನ್ನು ಆರಂಭಿಸಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಮುಂದಿನ ತಿಂಗಳು (ಸೆಪ್ಟೆಂಬರ್) ನೂತನ ವಿಎಫ್6 (VF6) ಮತ್ತು ವಿಎಫ್7 (VF7) ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಕೂಡ ಬಿಡುಗಡೆಗೊಳಿಸಲಾಗಿದೆ. ಈಗಾಗಲೇ, ಇವೆರಡು ಕಾರುಗಳಿಗಾಗಿ ಬುಕ್ಕಿಂಗ್ ಶುರುವಾಗಿದೆ. ಆಸಕ್ತರು ರೂ.21,000 ಮುಂಗಡ ಹಣ ಪಾವತಿಸಿ, ಆರ್ಡರ್ ಮಾಡಬಹುದು.

SBI vs Indian ಬ್ಯಾಂಕ್: 444 ದಿನ FDಗೆ ಯಾವುದು ಬೆಸ್ಟ್?

ಹಿರಿಯ ನಾಗರಿಕರಿಗಾಗಿ SBI ಮತ್ತು ಇಂಡಿಯನ್ ಬ್ಯಾಂಕಿನ 444 ದಿನಗಳ ವಿಶೇಷ FD ಯೋಜನೆಗಳನ್ನು ಹೋಲಿಕೆ ಮಾಡಿ. ಬಡ್ಡಿದರಗಳು ಮತ್ತು ಮುಕ್ತಾಯ ಮೊತ್ತಗಳನ್ನು ಅನ್ವೇಷಿಸಿ.

Mahindra: ಪ್ರೀಮಿಯಂ B2C ಸೇವೆ ನೀಡಲು ಮಹೀಂದ್ರಾ 'ಅಲೈಟ್' ಪ್ರಾರಂಭ

ಭಾರತದ ಸಂಯೋಜಿತ ಲಾಜಿಸ್ಟಿಕ್ಸ್ ಮತ್ತು ಮೊಬಿಲಿಟಿ ಪರಿಹಾರ ಪೂರೈಕೆದಾರರಲ್ಲಿ ಒಂದಾದ ಮಹೀಂದ್ರಾ ಲಾಜಿಸ್ಟಿಕ್ಸ್ ಲಿಮಿಟೆಡ್, ಇಂದಿನ ಡಿಜಿಟಲ್ ಸಂಪರ್ಕಿತ ನಗರ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾದ ರಿಫ್ರೆಶ್ಡ್, ಪ್ರೀಮಿಯಂ ಮತ್ತು ತಂತ್ರಜ್ಞಾನ - ಸಕ್ರಿಯಗೊಳಿಸಿದ B2C ಮೊಬಿಲಿಟಿ ಸೇವೆಯಾದ ಅಲೈಟ್ (Alyte) ಅನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ. ವಿಮಾನ ನಿಲ್ದಾಣದಿಂದ ನಗರಕ್ಕೆ, ನಗರದೊಳಗೆ ಪ್ರಯಾಣ ಮತ್ತು ಹೊರರಾಜ್ಯಗಳಿಗೆ ತಡೆರಹಿತ ಸವಾರಿಗಳನ್ನು ನೀಡುವ ಅಲೈಟ್, ಆಧುನಿಕ ಪ್ರಯಾಣಿಕರ ವಿಕಸನಗೊಳ್ಳುತ್ತಿರುವ ನಿರೀಕ್ಷೆಗಳನ್ನು ಪೂರೈಸಲು ಸೌಕರ್ಯ, ಸುಧಾರಿತ ತಂತ್ರಜ್ಞಾನ, ಸುಸ್ಥಿರತೆ ಮತ್ತು ಉನ್ನತ ಸೇವೆಗಳನ್ನು ಒದಗಿಸಲಿದೆ.
Advertisement

ಟ್ರಯಂಫ್ ಥ್ರಕ್ಸ್ಟನ್ 400 ರಿವ್ಯೂ

Triumph Thruxton 400 launched in India at ₹2.74 Lakh. It blends classic style with a 398cc engine, clip-on bars, and bar-end mirrors. | ಟ್ರಯಂಫ್ ಥ್ರಕ್ಸ್ಟನ್ 400 ಭಾರತದಲ್ಲಿ ₹ 2.74 ಲಕ್ಷಕ್ಕೆ ಬಿಡುಗಡೆಯಾಗಿದೆ. ಇದು ಕ್ಲಾಸಿಕ್ ಶೈಲಿಯನ್ನು 398cc ಎಂಜಿನ್, ಕ್ಲಿಪ್-ಆನ್ ಬಾರ್‌ಗಳು ಮತ್ತು ಬಾರ್-ಎಂಡ್ ಕನ್ನಡಿಗಳೊಂದಿಗೆ ಸಂಯೋಜಿಸುತ್ತದೆ.

ಜನಪ್ರಿಯ ಮಾರುತಿ ಗ್ರ್ಯಾಂಡ್ ವಿಟಾರಾ ಕಾರಿನ ಫ್ಯಾಂಟಮ್ ಬ್ಲ್ಯಾಕ್..

ಮಾರುತಿ ಸುಜುಕಿಯು ಪ್ರೀಮಿಯಂ ಕಾರುಗಳನ್ನು ಮಾರಾಟಗೊಳಿಸುವ ನೆಕ್ಸಾ (Nexa) ಡೀಲರ್‌ಶಿಪ್‌ ನೆಟ್‌ವರ್ಕ್, ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿದೆ. 2015ರಿಂದ ಇಲ್ಲಿವರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಕಾರುಗಳನ್ನು ಮಾರಾಟ ಮಾಡಲಾಗಿದೆ. ನೆಕ್ಸಾದ ದಶಮಾನೋತ್ಸವದ ಸವಿನೆನಪಿಗಾಗಿ ಕಂಪನಿಯು ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ ಹೊಚ್ಚ ಹೊಸ 'ಫ್ಯಾಂಟಮ್ ಬ್ಲ್ಯಾಕ್ ಎಡಿಷನ್'ನ್ನು ಅನಾವರಣಗೊಳಿಸಿದೆ. ಬನ್ನಿ, ಈ ಕಾರಿನ ನಿರೀಕ್ಷಿತ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಈ ಜನಪ್ರಿಯ ಎಸ್‌ಯುವಿಗಾಗಿ ಕ್ಯೂ ನಿಂತ ಗ್ರಾಹಕರು! 25 ಕಿ.ಮೀ..

ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ನಂಬಿಕಾರ್ಹ ಎಸ್‌ಯುವಿಯಾಗಿದೆ. ತುಂಬಾ ಚೆನ್ನಾಗಿರುವ ವಿನ್ಯಾಸ ಹಾಗೂ ಹತ್ತಾರು ಆಕರ್ಷಕವಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಉತ್ತಮವಾದ ಕಾರ್ಯಕ್ಷಮತೆಗೂ ಹೆಸರುವಾಸಿಯಾಗಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಈ 2025ರ ಜುಲೈನಲ್ಲೂ ಭಾರೀ ಸಂಖ್ಯೆಯಲ್ಲಿಯೂ ಮಾರಾಟಗೊಳಿಸಲಾಗಿದೆ. ಒಟ್ಟು 14,065 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 14,676 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಗೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಕೊಂಚ ಮಟ್ಟಿಗೆ ಶೇಕಡ -4% ಇಳಿಕೆಯಾಗಿದೆ.

ಬಜೆಟ್‌ನಲ್ಲಿ ಒಂದೊಳ್ಳೆ ಬೈಕ್ ಹುಡುಕುತ್ತಿದ್ದೀರಾ? ರಿವರ್ಸ್ ಗೇರ್ ಇದೆ

ಪ್ರಮುಖ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿ ಓಬೆನ್ ಎಲೆಕ್ಟ್ರಿಕ್ (Oben Electric) ತನ್ನ ರೋರ್ ಇಝಡ್ ಸಿಗ್ಮಾ (Rorr EZ Sigma) ವನ್ನು ಇತ್ತೀಚೆಗೆ ರೂ.1.27 ಲಕ್ಷ (ಎಕ್ಸ್‌ ಶೋರೂಂ) ಪರಿಚಯಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಮುಂದಿನ ಪೀಳಿಗೆಯ ಎಲೆಕ್ಟ್ರಿಕ್ ಬೈಕ್ ಅಂತರ್ನಿರ್ಮಿತ ನ್ಯಾವಿಗೇಷನ್, ರಿಯಲ್-ಟೈಮ್ ಕರೆ ಮತ್ತು SMS ಅಲರ್ಟ್, ಮ್ಯೂಸಿಕ್ ಕಂಟ್ರೋಲ್ ಮತ್ತು ಹೆಚ್ಚಿನ ನಗರ ಟ್ರಾಫಿಕ್ ಸ್ಥಳಗಳಲ್ಲಿ ಸುಲಭವಾಗಿ ಚಲಿಸಲು ಹೊಸ ರಿವರ್ಸ್ ಮೋಡ್‌ ಸೇರಿದಂತೆ ಹಲವು ಆಧುನಿಕ ಫೀಚರ್ಸ್ ಒಳಗೊಂಡಿದೆ. ಈ ಬೈಕ್ ಕುರಿತ ಹೆಚ್ಚಿನ ವಿವರಗಳು ಇಲ್ಲಿವೆ.

Nissan: 8 ಲಕ್ಷ.. 5-ಸೀಟರ್, ನಿಸ್ಸಾನ್ ಮ್ಯಾಗ್ನೈಟ್ ಕುರೊ ಎಡಿಷನ್...

ಇತ್ತೀಚೆಗೆ ಹೊಚ್ಚ ಹೊಸ ನಿಸ್ಸಾನ್ ಮ್ಯಾಗ್ನೈಟ್ ಕುರೊ ಎಡಿಷನ್ (Nissan Magnite Kuro Edition) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಇದು ತುಂಬಾ ಚೆನ್ನಾಗಿರುವ ವಿನ್ಯಾಸ ಮತ್ತು ಹತ್ತಾರು ಅತ್ಯಾಧುನಿಕವಾದ ವೈಶಿಷ್ಟ್ಯಗಳನ್ನು ಪಡೆದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಇದರೊಂದಿಗೆ ಕೈಗೆಟುಕುವ ದರದಲ್ಲೂ ಗ್ರಾಹಕರ ಖರೀದಿಗೆ ಲಭ್ಯವಿದೆ. ನಾವಿಲ್ಲಿ ನೂತನ 'ಕುರೊ ಎಡಿಷನ್' ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.