Steelbird: ಅಂತರಾಷ್ಟ್ರೀಯ ಗುಣಮಟ್ಟದ ಹೆಲ್ಮೆಟ್ ಬಿಡುಗಡೆ

ಪ್ರಮುಖ ಸ್ವದೇಶಿ ಹೆಲ್ಮೆಟ್ ತಯಾರಕರಾದ ಸ್ಟೀಲ್‌ಬರ್ಡ್, ಭಾರತದಲ್ಲಿ SXE ಹೆಲ್ಮೆಟ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ರೂ. 3,599 ರಿಂದ ಆರಂಭವಾಗುತ್ತದೆ, ಇದು TPE (ಥರ್ಮೋಪ್ಲಾಸ್ಟಿಕ್ ಎಲಾಸ್ಟೊಮರ್) ಎನರ್ಜಿ ಅಬ್ಸಾರ್ಬರ್ ಅನ್ನು ಒಳಗೊಂಡಿರುವ ದೇಶದ ಮೊದಲ ಮೋಟಾರ್‌ಸೈಕಲ್ ಹೆಲ್ಮೆಟ್ ಆಗಿದೆ. ಈ ನಾವೀನ್ಯತೆಯು ಸುಧಾರಿತ ರಕ್ಷಣೆಯ ಅಗತ್ಯವಿರುವ ಮಾರುಕಟ್ಟೆ ವಿಭಾಗದಲ್ಲಿ ಸವಾರರ ಸುರಕ್ಷತೆ, ಸೌಕರ್ಯ ಮತ್ತು ಶೈಲಿಯನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ. ಇತರ ದೇಶಗಳಲ್ಲಿನ ಇದೇ ಮಾದರಿಯ ಹೆಲ್ಮೆಟ್‌ಗಳಿಗೆ ಹೋಲಿಸಿದರೆ ಇದು ತೀರಾ ಕೈಗೆಟುಕುವ ಬೆಲೆಯಾಗಿದೆ.

ಜಾಗತಿಕ ಸಂಕೇತಗಳ ಮೇರೆಗೆ ಷೇರು ಸೂಚ್ಯಂಕಗಳು ಏರಿಕೆ

ನಿಫ್ಟಿ 25,220 ಮತ್ತು ಬ್ಯಾಂಕ್ ನಿಫ್ಟಿ 57,210 ಕ್ಕೆ ಮುಕ್ತಾಯಗೊಳ್ಳುತ್ತಿದ್ದಂತೆ ಈಕ್ವಿಟಿ ಮಾನದಂಡ ಸೂಚ್ಯಂಕಗಳು ಏರಿಕೆಯಾಗುತ್ತವೆ. ವಿಶ್ಲೇಷಕರು ಬುಲಿಶ್ ಆವೇಗ ಮತ್ತು ಷೇರು ಶಿಫಾರಸುಗಳನ್ನು ಸೂಚಿಸುತ್ತಾರೆ.

73 ಕಿ.ಮೀ ಮೈಲೇಜ್.. 79,000 ಬೆಲೆ, ಹೀರೋ ಸ್ಪ್ಲೆಂಡರ್‌ಗೆ ಫುಲ್..

ವಿಶ್ವಾಸಾರ್ಹ ಮೋಟಾರ್‌ಸೈಕಲ್‌ಗೆ ಮತ್ತೊಂದು ಹೆಸರೇ ಹೀರೋ ಸ್ಪ್ಲೆಂಡರ್ (Hero Splendor) ಎಂದು. ಅಷ್ಟರಮಟ್ಟಿಗೆ ಈ ಬೈಕ್ ಜನಪ್ರಿಯತೆಯನ್ನು ಗಳಿಸಿದೆ. ಹಳ್ಳಿಯಿಂದ ದಿಲ್ಲಿವರೆಗಿನ ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ಕಳೆದ ತಿಂಗಳು (ಜೂನ್) ಹೊರತಾಗಿಲ್ಲ. ಒಟ್ಟು 3,31,057 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಮೂಲಕ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 8.34% ಬೆಳವಣಿಗೆಯಾಗಿದೆ. 2024ರ ಇದೇ ಅವಧಿಯಲ್ಲಿ 3,05,586 ಮಾರಲಾಗಿದೆ.

ಒಂದೇ ಚಾರ್ಜ್‌ನಲ್ಲಿ ಬೆಂಗಳೂರಿನಿಂದ ತಮಿಳುನಾಡಿಗೆ ತಲುಪಿ ದಾಖಲೆ

ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (GEML), ತನ್ನ ಎಲೆಕ್ಟ್ರಿಕ್ 3-ಚಕ್ರ ಪ್ರಯಾಣಿಕ ವಾಹನವಾದ ಎಲ್ಟ್ರಾ ಸಿಟಿ ಎಕ್ಸ್‌ಟ್ರಾ (Eltra City XTRA) ದೊಂದಿಗೆ ಹೊಸ ದಾಖಲೆ ನಿರ್ಮಿಸಿದೆ. ನವೀಕರಿಸಿದ ಎಲ್ಟ್ರಾ ಕರ್ನಾಟಕದ ಬೆಂಗಳೂರಿನಿಂದ ತಮಿಳುನಾಡಿನ ರಾಣಿಪೇಟೆಗೆ ಒಂದೇ ಚಾರ್ಜ್‌ನಲ್ಲಿ 324 ಕಿಲೋಮೀಟರ್ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಸಿಂಗಲ್ ಚಾರ್ಜ್‌ನಲ್ಲಿ ಇಷ್ಟು ದೂರ ಪ್ರಯಾಣಿಸಿದ ಎಲೆಕ್ಟ್ರಿಕ್ 3-ಚಕ್ರ ವಾಹನವಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದುಕೊಂಡಿದೆ ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Advertisement

26.11 ಕಿ.ಮೀ ಮೈಲೇಜ್.. 7-ಸೀಟರ್.. ಸದ್ದಿಲ್ಲದೇ ಅಗ್ಗದ ಟೊಯೊಟಾ..

ಟೊಯೊಟಾ ರೂಮಿಯನ್ (Toyota Rumion) ಜನಪ್ರಿಯ ಎಂಪಿವಿಯಾಗಿದೆ. ಇದು ದೊಡ್ಡ ಗಾತ್ರದ ಕಾರಾಗಿದ್ದು, ವಿಶ್ವಾಸಾರ್ಹತೆಗೂ ಹೆಸರುವಾಸಿಯಾಗಿದೆ. ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ವರ್ಷದ ಮೊದಲರ್ಧದಲ್ಲೂ ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 11,630 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಸದ್ಯ, ಇದೇ 'ರೂಮಿಯನ್' ಎಂಪಿವಿ ಬೆಲೆ ಏರಿಕೆಯಾಗಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Safe car driving: ಸುರಕ್ಷಿತ ಕಾರು ಖರೀದಿಸುತ್ತಿದ್ದೀರಾ?

Safe car driving: ಕಾರಿನ ಗುಣಮಟ್ಟವನ್ನು ನಿರ್ಣಯಿಸಲು ಕ್ರಾಷ್ ಟೆಸ್ಟ್‌ ಮಾಡಿ ಸುರಕ್ಷತಾ ರೇಟಿಂಗ್‌ ನೀಡಲಾಗುತ್ತದೆ. ಈ ರೇಟಿಂಗ್‌ಗಳ ಮೂಲಕ ವಾಹನ ಯಾವ ಮಟ್ಟಿಗೆ ಅಪಘಾತಗಳಲ್ಲಿ ಪ್ರಯಾಣಿಕರನ್ನು ರಕ್ಷಿಸಬಲ್ಲದು ಎಂಬುದನ್ನು ನಿರ್ಣಯಿಸಲಾಗುತ್ತದೆ. ಆದರೆ ಕಾರು ಗುಣಮಟ್ಟದ 5-ಸ್ಟಾರ್ ಸುರಕ್ಷಿತಾ ರೇಟಿಂಗ್ ಪಡೆದಿದೆ ಎಂದ ಮಾತ್ರಕ್ಕೆ, ನೀವು ನಿರ್ಲಕ್ಷ್ಯದ ಡ್ರೈವಿಂಗ್ ಮಾಡಿದರೂ ನಡೆಯುತ್ತದೆ ಎಂದರ್ಥವಲ್ಲ. ರಸ್ತೆಯಲ್ಲಿ ಗರಿಷ್ಠ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಕಾರಿನ ಸುರಕ್ಷತಾ ರೇಟಿಂಗ್ ಮಾತ್ರವಲ್ಲದೆ ನಿಮ್ಮ ಜವಾಬ್ದಾರಿಯುತ ಚಾಲನೆ ಕೂಡ ಮುಖ್ಯ. ಹಾಗಾದ್ರೆ ಪರಿಪೂರ್ಣ ಚಾಲಕ ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ನೋಡೋಣ ಬನ್ನಿ.

1 ಲೀ. ಪೆಟ್ರೋಲ್‌ಗೆ 90 ಕಿ.ಮೀ ಮೈಲೇಜ್! ಈ ಬೈಕ್ 70,000 ರೂಪಾಯಿಗೆ..

ಭಾರತದ ನವದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಹಾಗೂ ಕೋಲ್ಕತ್ತಾದಂತಹ ಮಹಾನಗರಗಳಲ್ಲಿ ಆಫೀಸ್‌ ಕೆಲಸಕ್ಕೆ ಹೋಗುವುದು ತುಂಬಾ ಪ್ರಯಾಸದ ಕೆಲಸ. ಅಂತಹವರಿಗೆ ಬಜಾಜ್ ಪ್ಲಾಟಿನಾ (Bajaj Platina) ಬೈಕ್ ಅತ್ಯುತ್ತಮವಾದ ಆಯ್ಕೆಯಾಗಲಿದೆ. ಇದು ಅತಿ ಕಡಿಮೆ ದರದಲ್ಲಿ ಖರೀದಿಗೆ ದೊರೆಯಲಿದ್ದು, ಸಾಮಾನ್ಯ ವರ್ಗದ ಜನರ ಅಂಬಾರಿಯಾಗಿದೆ. 2006ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡ ಈ ಮೋಟಾರ್‌ಸೈಕಲ್, ಎರಡು ದಶಕಗಳಿಂದಲೂ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ನಾವಿಲ್ಲಿ 'ಪ್ಲಾಟಿನಾ' ಬೈಕ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

Renault: ಭಾರತದ ಅತ್ಯಂತ ಅಗ್ಗದ 7-ಸೀಟರ್ ಕಾರು ಬಿಡುಗಡೆ

ಫ್ರೆಂಚ್ ಕಾರು ತಯಾರಕ ಕಂಪನಿಯಾಗಿರುವ ರೆನಾಲ್ಟ್ (Renault), ಇಂದು ಭಾರತದ ಅತ್ಯಂತ ಅಗ್ಗದ 2025ರ ನವೀಕೃತ 7-ಸೀಟರ್ ರೆನಾಲ್ಟ್ ಟ್ರೈಬರ್ (Renault Triber) ಕಾರನ್ನು ಬಿಡುಗಡೆ ಮಾಡಿದೆ. ಈ ಫ್ಯಾಮಿಲಿ ಕಾರು ಈ ಬಾರಿ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್‌ನೊಂದಿಗೆ ಪಾದಾರ್ಪಣೆ ಮಾಡಿದೆ. ಮಸ್ಕುಲರ್ ಬಾನೆಟ್, ರಿಫ್ರೆಶ್ ಮಾಡಿದ ಬಂಪರ್, ಸಂಯೋಜಿತ LED DRL ಗಳೊಂದಿಗೆ ಹೊಸ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ಹೊಸ LED ಫಾಗ್ ಲ್ಯಾಂಪ್‌ಗಳನ್ನು ಪಡೆದುಕೊಂಡು ಬಿಡುಗಡೆಯಾಗಿದೆ.

ಸ್ಪ್ಲೆಂಡರ್‌ಗೆ ಎದುರಾಳಿಯಾಗಿ ಹೊಸ ಹೋಂಡಾ ಶೈನ್ 100 ಡಿಎಕ್ಸ್ ಬೈಕ್..

ಹೋಂಡಾ ಶೈನ್ (Honda Shine) ಜನಮೆಚ್ಚಿದ ಬೈಕ್ ಎಂದೇ ಹೆಸರುವಾಸಿಯಾಗಿದೆ. ಈ ಪರಂಪರೆಯನ್ನು ಮುಂದುವರಿಸಲು ಕಂಪನಿಯು ಮುಂದಾಗಿದೆ. ನವದೆಹಲಿಯಲ್ಲಿ ಬುಧವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಹೊಚ್ಚ ಹೊಸ 'ಶೈನ್ 100 ಡಿಎಕ್ಸ್' ಬೈಕ್‌ನ್ನು ಅನಾವರಣಗೊಳಿಸಿದೆ. ಇದನ್ನು ನವ ಯುಗದ ಗ್ರಾಹಕರನ್ನು ಆಕರ್ಷಿಸಲೆಂದೇ ಸಿದ್ದಪಡಿಸಲಾಗಿದೆ. ಇದು ತುಂಬಾ ಚೆನ್ನಾಗಿರುವ ವಿನ್ಯಾಸ ಹಾಗೂ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Honda: ಹೊಸ ಬೈಕ್ ಅನಾವರಣ: ಅತ್ಯಂತ ಪವರ್‌ಫುಲ್ ಮೋಟಾರ್‌ಸೈಕಲ್!

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಹೋಂಡಾ (Honda), ಭಾರತಕ್ಕೆ ಲಗ್ಗೆಯಿಟ್ಟು ಇಂದಿಗೆ 25 ವರ್ಷಗಳನ್ನು ಪೂರ್ಣಗೊಳಿಸಿದೆ. ಇದರ ಭಾಗವಾಗಿ ಕಂಪನಿಯು CB125 ಹಾರ್ನೆಟ್ (CB125 Hornet) ಬೈಕ್‌ನ್ನು ಅನಾವರಣಗೊಳಿಸಿದೆ. ಹೊಚ್ಚ ಹೊಸ ಹೋಂಡಾ CB125 ಹಾರ್ನೆಟ್ ಬುಕಿಂಗ್‌ಗಳು ಆಗಸ್ಟ್ 1, 2025 ರಿಂದ ಪ್ರಾರಂಭವಾಗಲಿವೆ. ಹೋಂಡಾ CB125 ಹಾರ್ನೆಟ್ ಅನ್ನು ಇಂದಿನ ನಗರ ಯುವಕರಿಗಾಗಿ ವಿನ್ಯಾಸಗೊಳಿಸಲಾಗಿದೆ, ಆಕ್ರಮಣಕಾರಿ ವಿನ್ಯಾಸ, ಸುಧಾರಿತ ವೈಶಿಷ್ಟ್ಯಗಳು ಮತ್ತು ರೋಮಾಂಚಕ ಪರ್ಫಾಮೆನ್ಸ್‌ನೊಂದಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.

15 ವರ್ಷ ಕಳೆದರೂ ಈ ಜನಪ್ರಿಯ ಕಾರುಗಳದ್ದೇ ಹವಾ..

ವಿಶ್ವದಲ್ಲೇ ಭಾರತವು ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಪ್ರತಿ ತಿಂಗಳು ಒಂದಿಲ್ಲೊಂದು ಒಂದು ಹ್ಯಾಚ್‌ಬ್ಯಾಕ್, ಸೆಡಾನ್ ಎಸ್‌ಯುವಿ ಹಾಗೂ ಎಂಪಿವಿಗಳು ಬಿಡುಗಡೆಯಾಗುತ್ತವೆ. ಆದರೆ, ಕೆಲವೇ ಕಾರುಗಳು ಮಾತ್ರ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ. ದೇಶೀಯವಾಗಿಯೂ ಬೆರಳೆಣಿಕೆಯಷ್ಟು ಕಾರುಗಳ ಮಾರಾಟ ಶುರುವಾಗಿ, ದಶಕವೇ ಉರುಳಿದೆ. ಅವುಗಳಲ್ಲಿ ಮಾರುತಿ ಸುಜುಕಿ ಆಲ್ಟೊ ಕೆ10, ಟಾಟಾ ಸಫಾರಿ ಹಾಗೂ ಮಾರುತಿ ಸುಜುಕಿ ಸ್ವಿಫ್ಟ್ ಪ್ರಮುಖವಾಗಿವೆ. ಈ ಕಾರುಗಳು 15 ವರ್ಷಗಳಿಂದ ಮಾರಾಟದಲ್ಲಿದ್ದು, ಭಾರೀ ಬೇಡಿಕೆಯನ್ನು ಹೊಂದಿವೆ.

Hero: ಹೀರೋ ಮೈಲೇಜ್ ಬೈಕ್ ಬಿಡುಗಡೆ

ಜನಪ್ರಿಯ ಮೋಟಾರ್‌ಸೈಕಲ್‌ ಮತ್ತು ಸ್ಕೂಟರ್ ತಯಾರಕರಾದ ಹೀರೋ ಮೋಟೋಕಾರ್ಪ್ (Hero MotoCorp), ಫೀಚರ್ ಪ್ಯಾಕ್ಡ್ HF ಡಿಲಕ್ಸ್ ಪ್ರೊ ಅನ್ನು ಪರಿಚಯಿಸಿದೆ. ಇದು ಭಾರತದ ಅತ್ಯಂತ ವಿಶ್ವಾಸಾರ್ಹ, ದಿಟ್ಟ ಮತ್ತು ಸೊಗಸಾದ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ. ಕಂಪನಿಯು HF ಡಿಲಕ್ಸ್ ಅನ್ನು ಆತ್ಮವಿಶ್ವಾಸ, ಮೌಲ್ಯ ಪ್ರಜ್ಞೆ ಮತ್ತು ಹೊಸ ಡಿಸೈನ್ ಬಯಸುವ ಭಾರತೀಯರಿಗಾಗಿ ವಿನ್ಯಾಸಗೊಳಿಸಿದೆ. ವಿಭಾಗ - ಪ್ರಮುಖ ವೈಶಿಷ್ಟ್ಯಗಳು, ಗಮನಾರ್ಹ ವಿನ್ಯಾಸ ಮತ್ತು ಉತ್ತಮ ಮೈಲೇಜ್‌ನೊಂದಿಗೆ, ಹೊಸ HF ಡಿಲಕ್ಸ್ ಪ್ರೊ ಆರಂಭಿಕ ಹಂತದ ಮೋಟಾರ್‌ಸೈಕಲ್ ವಿಭಾಗಕ್ಕೆ ಉತ್ಸಾಹವನ್ನು ನೀಡುತ್ತದೆ ಎಂದು ಕಂಪನಿ ತಿಳಿಸಿದೆ.
Advertisement

ಬ್ರೋ.. ಬಡವರ ಲಕ್ಷುರಿ ಕಾರಿದು, 5.85 ಲಕ್ಷ ರೂಪಾಯಿ..

ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಗಿದೆ. ಇದು ಹೆಚ್ಚು ಆಕರ್ಷಕವಾಗಿದೆ. ಅದರ ಹೊರತಾಗಿ ಈ ಕಾರಿನ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಕಳೆದ ಜೂನ್ ತಿಂಗಳಲ್ಲೂ ಅದು ಮುಂದುವರಿದಿದೆ. ಒಟ್ಟು 1,484 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -41.48% ಕುಸಿತವಾಗಿದೆ. 2024ರ ಜೂನ್‌ನಲ್ಲಿ 2,536 ಯುನಿಟ್‌ಗಳನ್ನು ಮಾರಲಾಗಿತ್ತು.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುತ್ತಿದ್ದೀರಾ? ನೋಡಲಷ್ಟೆ ಚಂದ

ಭಾರತೀಯ ಕಾರು ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ, ಹಾಗೆಯೇ ಅದೇ ವೇಗದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರುಕಟ್ಟೆಯೂ ವಿಸ್ತರಿಸುತ್ತಿದೆ. ಅನೇಕ ಜನರು ಸೆಕೆಂಡ್ ಹ್ಯಾಂಡ್ ಕಾರು (Second hand cars)ಗಳನ್ನು ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಬಳಸಿದ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುವ ಮುನ್ನ ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಹಲವರಿಗೆ ತಿಳಿದಿಲ್ಲ. ಹಾಗಾಗಿ ಬಳಸಿದ ಕಾರನ್ನು ಖರೀದಿಸುವಾಗ ಏನೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ 6 ಉಪಯುಕ್ತ ಸಲಹೆಗಳು ಇಲ್ಲಿವೆ.

ಅಪೋಲಿಯನ್ ಡೈನಾಮಿಕ್ಸ್ ಭಾರತೀಯ ಸೇನೆಗೆ ಯುಎವಿಗಳನ್ನು ವಿತರಿಸುತ್ತದೆ!

ಬಿಟ್ಸ್ ಪಿಲಾನಿಯ ಸ್ಟಾರ್ಟ್ಅಪ್ ಆದ ಅಪೋಲಿಯನ್ ಡೈನಾಮಿಕ್ಸ್, ರಕ್ಷಣಾ ತಂತ್ರಜ್ಞಾನದಲ್ಲಿ ನಾವೀನ್ಯತೆಯನ್ನು ಪ್ರದರ್ಶಿಸುವ ಮೂಲಕ ಭಾರತೀಯ ಸೇನಾ ಘಟಕಗಳಿಗೆ ಯುಎವಿಗಳನ್ನು ತಲುಪಿಸುತ್ತದೆ.

ನಿನ್ನೆಯಷ್ಟೇ ಬಿಡುಗಡೆ.. ಭೂಲೋಕದ ಚಲಿಸುವ ಅರಮನೆ, 7-ಆಸನಗಳ MG M9..

ನಿನ್ನೆಯಷ್ಟೇ ಬಹುನಿರೀಕ್ಷಿತ ಎಂಜಿ ಎಂ9 ಎಲೆಕ್ಟ್ರಿಕ್ ಎಂಪಿವಿ (MG M9 Electric Mpv) ಬಿಡುಗಡೆಗೊಂಡಿದೆ. ಇದು ಹೆಚ್ಚು ವಿಶಾಲವಾಗಿರುವ ಕಾರಾಗಿದ್ದು, ತುಂಬಾ ಚೆನ್ನಾಗಿರುವ ವಿನ್ಯಾಸ & ಹಲವು ಅತ್ಯಾಧುನಿಕವಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಜೊತೆಗೆ ಉತ್ತಮವಾದ ಕಾರ್ಯಕ್ಷಮತೆಗೂ ಹೆಸರುವಾಸಿಯಾಗಿದ್ದು, ಹೆಚ್ಚಿನ ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಹೀಗಾಗಿ, 2 ಸಣ್ಣ ಕುಟುಂಬಗಳು ಸುಲಭವಾಗಿ ಪ್ರಮಾಣ ಮಾಡಬಹುದಾಗಿದೆ. ನಾವಿಲ್ಲಿ ಈ ಕಾರಿನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

ZELIO E: 1 ರೂ. ಖರ್ಚಿಲ್ಲದೆ 130 ಕಿ.ಮೀ ಓಡುವ ಸ್ಕೂಟರ್ ಬಿಡುಗಡೆ

ಫೇಸ್‌ಲಿಫ್ಟೆಡ್ ಝೀಲಿಯೊ ಇ ಗ್ರೇಸಿ ಪ್ಲಸ್ ಲೋ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ನಗರ ಪ್ರಯಾಣಿಕರಿಗೆ ಹಲವಾರು ನವೀಕರಣಗಳನ್ನು ಪ್ರಸ್ತುತಪಡಿಸಲಾಗಿದೆ. ಈ ಸ್ಕೂಟರ್ ವೈಟ್, ಗ್ರೇ, ಬ್ಲಾಕ್ ಮತ್ತು ಬ್ಲೂನಂತಹ ನಾಲ್ಕು ಬಣ್ಣಗಳಲ್ಲಿ ಬರುತ್ತದೆ. ಆರಂಭಿಕ ಬೆಲೆ ರೂ. 54,000 (ಎಕ್ಸ್-ಶೋರೂಂ) ಇದ್ದು, ವಿದ್ಯಾರ್ಥಿಗಳು, ಕೆಲಸ ಮಾಡುವ ವೃತ್ತಿಪರರು ಮತ್ತು ಸಣ್ಣ ಕೆಲಸಗಾರರಿಗೆ ಸೂಕ್ತವಾದ ಆಯ್ಕೆಯಾಗಿದೆ. ನಗರಗಳಲ್ಲಿ ಓಡಿಸುವವರಿಗೆ ಸೂಕ್ತವಾದ ಆಧುನಿಕ ವಿನ್ಯಾಸವನ್ನು ನೀಡುತ್ತದೆ.

7-ಆಸನಗಳು.. ನಾಳೆ ಹೊಸ ಅವತಾರದಲ್ಲಿ ರೆನಾಲ್ಟ್ ಎಂಪಿವಿ ಬಿಡುಗಡೆ..

ರೆನಾಲ್ಟ್ ಟ್ರೈಬರ್ (Renault Triber) ಜನಪ್ರಿಯ ಎಂಪಿವಿಯಾಗಿದೆ. ಈ ಕಾರನ್ನು 2019ರಲ್ಲಿ ಮೊದಲ ಭಾರಿಗೆ ಪರಿಚಯಿಸಲಾಯಿತು. ನಾಳೆ (ಜುಲೈ 23) ದೇಶೀಯ ಮಾರುಕಟ್ಟೆಗೆ ಒಂದಷ್ಟು ನವೀಕರಣಕ್ಕೆ ಒಳಪಟ್ಟ ಇದೇ 'ಟ್ರೈಬರ್' ಎಂಪಿವಿಯ 2025ರ ಹೊಚ್ಚ ಹೊಸ ಫೇಸ್‌ಲಿಫ್ಟ್ ಮಾಡೆಲ್‌ನ್ನು ಮಾರಾಟಕ್ಕೆ ತರಲಾಗುತ್ತದೆ. ಇದಕ್ಕಾಗಿ ಮುಂಬೈನಲ್ಲಿ ಅದ್ದೂರಿ ಸಮಾರಂಭವನ್ನು ಏರ್ಪಡಿಸಲಾಗಿದೆ. ಬನ್ನಿ, ನೂತನ ಕಾರಿನ ನಿರೀಕ್ಷಿತ ದರವೆಷ್ಟು.. ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂಬುದರ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

Renault: ನೂತನ ರೆನಾಲ್ಟ್ 7-ಸೀಟರ್ ಕಾರಿನ ಬಿಡುಗಡೆ

ಫ್ರೆಂಚ್ ಕಾರು ತಯಾರಕ ರೆನಾಲ್ಟ್ ಗ್ರೂಪ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರೆನಾಲ್ಟ್ ಇಂಡಿಯಾ, ಶೀಘ್ರದಲ್ಲೇ ಬಿಡುಗಡೆಯಾಗಲಿರುವ ದಿ ಆಲ್ ನ್ಯೂ ಟ್ರೈಬರ್‌ನಿಂದ ಪ್ರಾರಂಭವಾಗುವ ಎಲ್ಲಾ ಹೊಸ ಕಾರುಗಳ ಬಿಡುಗಡೆಗಳಲ್ಲಿ ತನ್ನ ಹೊಸ ಲೋಗೋವನ್ನು ಸಂಯೋಜಿಸುವುದಾಗಿ ಘೋಷಿಸಿದೆ. 'ರೆನಾಲ್ಟ್. ರೀತಿಂಕ್' (renault. rethink.) ಬ್ರಾಂಡ್ ರೂಪಾಂತರದ ಅಡಿಯಲ್ಲಿ ಭಾರತದಲ್ಲಿ ತನ್ನ ಬ್ರ್ಯಾಂಡ್ ಅನ್ನು ಪರಿವರ್ತಿಸುತ್ತಿದ್ದು, ಕಂಪನಿಯ ಪ್ರಯತ್ನಗಳಲ್ಲಿ ಇದು ಮಹತ್ವದ ಮೈಲಿಗಲ್ಲಾಗಲಿದೆ. ಹೊಸ ಲೋಗೋ ಈಗಾಗಲೇ ರೆನಾಲ್ಟ್ ಇಂಡಿಯಾ ಮಾರ್ಕೆಟಿಂಗ್ ಅಭಿಯಾನಗಳ ಭಾಗವಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

Kia Carens Clavis EV: 7-ಸೀಟರ್.. ಕಿಯಾ ಕ್ಯಾರೆನ್ಸ್ ಕ್ಲಾವಿಸ್..

Kia Clavis EV ಎಲೆಕ್ಟ್ರಿಕ್ ಕಾರಿನ ಸಂಪೂರ್ಣ ವಿಮರ್ಶೆ ಇಲ್ಲಿದೆ. ಬೆಲೆ, ವೈಶಿಷ್ಟ್ಯಗಳು, ಕಾರ್ಯಕ್ಷಮತೆ ಮತ್ತು ಒಳಾಂಗಣದ ಬಗ್ಗೆ ತಿಳಿಯಿರಿ. ಕನ್ನಡದಲ್ಲಿ ಓದಿ.
Advertisement

Kia: ಬ್ಯೂಟಿಫುಲ್ ಕಾರಿನ ಬುಕಿಂಗ್ ಪ್ರಾರಂಭ: 490 ಕಿ.ಮೀ ಓಡಬಲ್ಲದು

ಪ್ರಮುಖ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ, ತನ್ನ ಮೊದಲ 7-ಸೀಟರ್ ಎಲೆಕ್ಟ್ರಿಕ್ ವಾಹನವಾದ ಕ್ಯಾರೆನ್ಸ್ ಕ್ಲಾವಿಸ್ ಇವಿಗಾಗಿ ಇಂದಿನಿಂದ (ಜುಲೈ 22, 2025) ಬುಕಿಂಗ್ ಪ್ರಾರಂಭಿಸಿದೆ. ಗ್ರಾಹಕರು ಕಿಯಾ ಇಂಡಿಯಾ ವೆಬ್‌ಸೈಟ್ ಮತ್ತು ದೇಶಾದ್ಯಂತದ ಕಿಯಾ ಡೀಲರ್‌ಶಿಪ್‌ಗಳ ಮೂಲಕ 25,000 ರೂ. ಮೊತ್ತವನ್ನು ಪಾವತಿಸುವ ಮೂಲಕ ಕ್ಯಾರೆನ್ಸ್ ಕ್ಲಾವಿಸ್ ಇವಿಯನ್ನು ಬುಕ್ ಮಾಡಬಹುದು. ನಿರೀಕ್ಷಿತ ಇವಿ ಗ್ರಾಹಕರ ವಿಕಸನಗೊಳ್ಳುತ್ತಿರುವ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಕ್ಯಾರೆನ್ಸ್ ಕ್ಲಾವಿಸ್ ಇವಿ, ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಡಿಸೈನ್, ಪರ್ಫಾಮೆನ್ಸ್ ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿದೆ.

Maruti Baleno: 6 ಏರ್‌ಬ್ಯಾಗ್‌ನ ಜನಪ್ರಿಯ ಮಾರುತಿ ಬಲೆನೊ ಕಾರಿನ..

ಇತ್ತೀಚೆಗೆ ಮಾರುತಿ ಸುಜುಕಿ ಬಲೆನೊ (Maruti Suzuki Baleno) ಕಾರನ್ನು ನವೀಕರಿಸಿ ಬಿಡುಗಡೆಗೊಳಿಸಲಾಯಿತು. ಇದೊಂದು ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ಈ ಕಾರಿನ ಎಲ್ಲ ರೂಪಾಂತರಗಳನ್ನು (ವೇರಿಯೆಂಟ್) 6 ಏರ್‌ಬ್ಯಾಗ್‌ಗಳೊಂದಿಗೆ ಮೇಲ್ದರ್ಜೆರಿಸಲಾಗಿದೆ. ಅದಕ್ಕೆ ತಕಂತೆ ಬೆಲೆಯನ್ನು ಕೂಡ ಪರಿಷ್ಕರಣೆ ಮಾಡಲಾಗಿದೆ. ನಾವಿಲ್ಲಿ ನೂತನ ಬಲೆನೊ ಹ್ಯಾಚ್‌ಬ್ಯಾಕ್‌ನ ದರ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

Kia: ಒಂದೇ ಕಾರಿನ ಎರಡು ಪ್ರತಿರೂಪಗಳು: ಎಲೆಕ್ಟ್ರಿಕ್ ಕಾರು ಬಲು ಜೋರು!

ಕಿಯಾ ಕ್ಯಾರೆನ್ಸ್ ಕ್ಲಾವಿಸ್ (Kia Carens Clavis) ಇಂಧನ - ಚಾಲಿತ ಆವೃತ್ತಿಯ ಸಂಪೂರ್ಣ - ಎಲೆಕ್ಟ್ರಿಕ್ ಪ್ರತಿರೂಪವಾದ ಕ್ಯಾರೆನ್ಸ್ ಕ್ಲಾವಿಸ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದು ಕೆಲವು ತಿಂಗಳ ಹಿಂದೆ ಮೂಲ ಕ್ಯಾರೆನ್ಸ್‌ನ ಫೇಸ್‌ಲಿಫ್ಟ್ ಆಗಿ ಮಾರಾಟಕ್ಕೆ ಬಂದಿತು. ಕಿಯಾದ ಹೆಚ್ಚು ಪ್ರೀಮಿಯಂ MPV ಗಳಾಗಿ ಸ್ಥಾನ ಪಡೆದಿರುವ ಕ್ಯಾರೆನ್ಸ್ ಕ್ಲಾವಿಸ್‌ನ ICE (ಇಂಧನ ಚಾಲಿತ) ಮತ್ತು EV ಕಾರುಗಳು ಹೊರಭಾಗದಲ್ಲಿ ಹಲವಾರು ಹೋಲಿಕೆಗಳನ್ನು ಹೊಂದಿವೆ. ಆದರೂ ಹಲವು ವಿಷಯಗಳಲ್ಲಿ ಭಿನ್ನವಾಗಿ ಕಾಣುತ್ತವೆ, ಅಂತಹ ಪ್ರಮುಖ ಹೈಲೆಟ್‌ಗಳನ್ನು ಇಲ್ಲಿ ವಿವರಿಸಲಾಗಿದೆ.

Honda Activa e: ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ ನಂ.1 ಆಗು

ಹೋಂಡಾ ಆಕ್ಟಿವಾ ಇ (Honda Activa e) ವಿಶ್ವಾಸಾರ್ಹ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಜನವರಿಯಲ್ಲಿ ತೆರೆಕಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಈ ಸ್ಕೂಟರ್‌ನ್ನು ಮಾರಾಟಕ್ಕೆ ತರಲಾಗಿತ್ತು. ಇದು ಸ್ಟ್ಯಾಂಡರ್ಡ್ & ರೋಡ್‌ಸಿಂಕ್ ಎಂಬ ರೂಪಾಂತರಗಳೊಂದಿಗೆ (ವೇರಿಯೆಂಟ್) ಲಭ್ಯವಿದ್ದು, ಕ್ರಮವಾಗಿ ರೂ.1.17 ಲಕ್ಷದಿಂದ ರೂ.1.52 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ (Swappable Battery Pack) ಆಯ್ಕೆಯನ್ನು ಹೊಂದಿದ್ದು, ಬ್ಯಾಟರಿ-ಆಸ್-ಎ-ಸರ್ವಿಸ್ (ಬಾಸ್ - BaaS) ಪ್ಲ್ಯಾನ್‌ನಡಿ ಬೆಂಗಳೂರು, ದೆಹಲಿ ಹಾಗೂ ಮುಂಬೈ ಮಹಾನಗರಗಳಲ್ಲಿ ಮಾತ್ರ ಮಾರಾಟಗೊಳಿಸಲಾಗುತ್ತಿದೆ.

ಮೊದಲ ಅಡ್ವಾನ್ಸ್ಡ್ ಇಂಪ್ಯಾಕ್ಟ್ ಪ್ರೊಟೆಕ್ಷನ್ ತಂತ್ರಜ್ಞಾನದ ಹೆಲ್ಮೆಟ್

ಭಾರತದ ಪ್ರಮುಖ ಹೆಲ್ಮೆಟ್ ತಯಾರಕ ಕಂಪನಿಯಾಗಿರುವ 'ಸ್ಟೀಲ್‌ಬರ್ಡ್ ಹೆಲ್ಮೆಟ್ಸ್' (Steelbird Helmets) ತನ್ನ ಹೊಸ 'SXE' ಹೆಲ್ಮೆಟ್ ಅನ್ನು ಬಿಡುಗಡೆ ಮಾಡಿದೆ. ಇದು ಅಡ್ವಾನ್ಸ್ಡ್ ಇಂಪ್ಯಾಕ್ಟ್ ಪ್ರೊಟೆಕ್ಷನ್ ತಂತ್ರಜ್ಞಾನವನ್ನು ಹೊಂದಿರುವ ಭಾರತದ ಮೊದಲ ಮೋಟಾರ್‌ಸೈಕಲ್ ಹೆಲ್ಮೆಟ್ ಆಗಿದೆ. ಇದನ್ನು ಉತ್ತಮ ಸುರಕ್ಷತೆ, ಸುಧಾರಿತ ಸೌಕರ್ಯ ಮತ್ತು ಆಧುನಿಕ ಶೈಲಿಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಹೊಸ SXE ಅನ್ನು ಧರಿಸುವ ಮೂಲಕ ಪ್ರತಿ ರೈಡ್‌ನಲ್ಲಿ ರಕ್ಷಣೆ ಮತ್ತು ಕಾರ್ಯಕ್ಷಮತೆ ಎರಡನ್ನೂ ಗೌರವಿಸುವ ಇಂದಿನ ಸವಾರರಿಗಾಗಿ ನಿರ್ಮಿಸಲಾಗಿದೆ ಎಂದು ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.