ಅಗ್ಗದ ಬೆಲೆ.. 5-ಸೀಟರ್.. 6 ಏರ್‌ಬ್ಯಾಗ್‌ನ ಮಾರುತಿ ಬಲೆನೊಗೆ ಬದಲಿ..

ಇತ್ತೀಚೆಗೆ ಮಾರುತಿ ಸುಜುಕಿ ಬಲೆನೊ (Maruti Suzuki Baleno) ಹ್ಯಾಚ್‌ಬ್ಯಾಕ್‌ನ್ನು 6 ಏರ್‌ಬ್ಯಾಗ್‌ ಆಯ್ಕೆಯಲ್ಲಿ ನವೀಕರಿಸಿ, ಮಾರಾಟಕ್ಕೆ ತರಲಾಗಿತ್ತು. ಇದು ಕನಿಷ್ಠ ರೂ.6.70 ಲಕ್ಷ ಹಾಗೂ ಗರಿಷ್ಠ ರೂ.9.92 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 1.2-ಲೀಟರ್ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 22 ರಿಂದ 30 ಕಿ.ಮೀವರೆಗೂ ಮೈಲೇಜ್ ನೀಡುತ್ತದೆ. ಈ ಕಾರಿನಲ್ಲಿ 5 ಆಸನಗಳಿವೆ. 9-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಹಾಗೂ ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನಾವಿಲ್ಲಿ ಇದೇ 'ಬಲೆನೊ'ಗೆ ಪರ್ಯಾಯ ಆಯ್ಕೆಯಾಗಬಲ್ಲ 3 ಪ್ರಮುಖ ಕಾರುಗಳ ಕುರಿತಂತೆ ತಿಳಿಸಿಕೊಟ್ಟಿದ್ದೇವೆ.

ಆಕರ್ಷಕ ಎಲೆಕ್ಟ್ರಿಕ್ ಬೈ-ಸೈಕಲ್! ಕೇವಲ 56 ಸಾವಿರ ರೂ. ಬೆಲೆ

ಭಾರತದ ಪ್ರಮುಖ ಎಲೆಕ್ಟ್ರಿಕ್ ಸೈಕಲ್ ತಯಾರಕರಾದ ಇಮೋಟೊರಾಡ್ (EMotorad), ಇ - ಸೈಕಲ್‌ನ ಅನುಕೂಲತೆ ಮತ್ತು ಮೋಟಾರ್‌ಸೈಕಲ್ ಮಿಶ್ರಣದೊಂದಿಗೆ ಹೊಸ ಮೋಟೋ-ಶೈಲಿಯ ಅಡ್ವೆಂಚರ್ 'ರೇಂಜರ್ ಇ - ಸೈಕಲ್' ಅನ್ನು ಮೊನ್ನೆಯಷ್ಟೆ ಬಿಡುಗಡೆ ಮಾಡಿದೆ. ಒರಟಾದ ಹೈ-ಟೆನ್ಸೈಲ್ ಸ್ಟೀಲ್ ಫ್ರೇಮ್‌ನೊಂದಿಗೆ ವಿಶಿಷ್ಟ ಮೋಟಾರ್‌ಸೈಕಲ್ ಆಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಭಾಗಶಃ ಮೋಟೋ ಡಿಸೈನ್‌ನೊಂದಿಗೆ ಸಂಪೂರ್ಣ ವಿಶಿಷ್ಟವಾದ ಬೈಕ್ ಅನ್ನು ಹುಡುಕುತ್ತಿರುವವರಿಗಾಗಿ ರೇಂಜರ್ ಬೆಸ್ಟ್ ಆಯ್ಕೆಯಾಗಿದೆ ಎಂದು ಕಂಪನಿ ಪ್ರತಿಕಾ ಪ್ರಕಟಣೆಯಲ್ಲಿ ಹೇಳಿದೆ.

8-ಸೀಟರ್.. ಆನೆಯಂತಿರುವ ಟೊಯೊಟಾ ಇನ್ನೋವಾ ಇಕ್ರಾಸ್‌ಗೆ ಫುಲ್...

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಪ್ರಮುಖ ಎಂಪಿವಿಯಾಗಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಈ ಜೂನ್‌ನಲ್ಲೂ ಇದೇ 'ಇನ್ನೋವಾ ಹೈಕ್ರಾಸ್' ಭಾರೀ ಸಂಖ್ಯೆಯಲ್ಲಿಯೂ ಮಾರಾಟಗೊಂಡಿದೆ. ಒಟ್ಟು 5746 ಯುನಿಟ್‌ಗಳನ್ನು ಮಾರಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 17.46% ಏರಿಕೆಯಾಗಿದೆ. 2024ರ ಇದೇ ಅವಧಿಯಲ್ಲಿ 4,892 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು.

VinFast: ಶೀಘ್ರದಲ್ಲೆ ಬಿಡುಗಡೆ: ಭಾರತದಲ್ಲಿ ವಿಯೆಟ್ನಾಂ ಬ್ರಾಂಡ್

ಭಾರತದಲ್ಲಿ ಶೀಘ್ರದಲ್ಲೇ ಹೊಸ ಕಂಪನಿಯೊಂದರ ಎರಡು ಎಸ್‌ಯುವಿಗಳು ಬಿಡುಗಡೆಗೆ ಸಜ್ಜಾಗಿವೆ. ಈ ಎರಡೂ ಕಾರುಗಳ ಕುರಿತು ಕಂಪನಿಯು ಸಾಕಷ್ಟು ಮಾಹಿತಿಯನ್ನು ಇದೀಗ ಹಂಚಿಕೊಂಡಿದೆ. ಇವು ಯಾವೆಲ್ಲಾ ಫೀಚರ್ಸ್ ಹಾಗೂ ವಿನ್ಯಾಸ ಅಂಶಗಳನ್ನು ಹೋಂದಿವೆ ಎಂಬುದರ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಹೌದು ವಿನ್‌ಫಾಸ್ಟ್‌ ಕಂಪನಿ ಭಾರತೀಯ ಮಾರುಕಟ್ಟೆಗೆ ಹೊಸದಾಗಿ ಲಗ್ಗೆಯಿಟ್ಟಿದೆ, ಪ್ರೀಮಿಯಂ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಈ ಕಂಪನಿ ತಮಿಳುನಾಡಿನ ತೂತುಕೂಡಿಯಲ್ಲಿ ತನ್ನ ಉತ್ಪಾದನಾ ಸ್ಥಾವರವನ್ನು ಹೊಂದಿದೆ. ಶೀಘ್ರದಲ್ಲೆ VinFast VF 6 ಮತ್ತು VF 7 ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
Advertisement

6.90 ಲಕ್ಷ, 30+ Km ಮೈಲೇಜ್.. 6 ಏರ್‌ಬ್ಯಾಗ್‌ನ ಈ ಜನಪ್ರಿಯ Toyota..

ಇತ್ತೀಚೆಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಎಂದೇ ಹೆಸರುವಾಸಿಯಾಗಿರುವ ಟೊಯೊಟಾ ಗ್ಲಾನ್ಜಾ (Toyota Glanza) ಕಾರನ್ನು ನವೀಕರಿಸಿ, ಮಾರಾಟಕ್ಕೆ ತರಲಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಈ ಹ್ಯಾಚ್‌ಬ್ಯಾಕ್‌ನ ಎಲ್ಲ ರೂಪಾಂತರಗಳನ್ನು (ವೇರಿಯೆಂಟ್) 6 ಏರ್‌ಬ್ಯಾಗ್‌ಗಳೊಂದಿಗೆ ಮೇಲ್ದರ್ಜೆರಿಸಲಾಗಿದೆ. ಅದರ ಹೊರತಾಗಿಯೂ ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ನಾವಿಲ್ಲಿ ಇದೇ ಗ್ಲಾನ್ಜಾ ಕಾರಿನ ದರ ಹಾಗೂ ವಿಶೇಷತೆಗಳ ಕುರಿತ ಮುಖ್ಯಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

Maruti: ಮಾರುತಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜು: ಅಗ್ಗದ ಬೆಲೆ?

ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ, ತನ್ನ ಮೊದಲ ಎಲೆಕ್ಟ್ರಿಕ್ ವಾಹನವಾದ ಇ-ವಿಟಾರಾವನ್ನು (ಎಲೆಕ್ಟ್ರಿಕ್ ಕಾರು) ಸೆಪ್ಟೆಂಬರ್ 3, 2025 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಪ್ರದರ್ಶಿಸಲಾದ ಇ-ವಿಟಾರಾ, ಕಂಪನಿಯ ಎಲೆಕ್ಟ್ರಿಕ್ ಎಸ್‌ಯುವಿ ವಿಭಾಗಕ್ಕೆ ಎಂಟ್ರಿ ಕೊಡುತ್ತಿರುವ ಬಹುನಿರೀಕ್ಷಿತ ಎಸ್‌ಯುವಿಯಾಗಿದೆ. ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ನಿರೀಕ್ಷಿತ ಇವಿ ಉಡಾವಣೆಗಳಲ್ಲಿ ಇದು ಒಂದಾಗಿದೆ ಎಂದು ಪರಿಗಣಿಸಲಾಗಿದೆ. ಬಿಡುಗಡೆಗೂ ಮುನ್ನ ಈ ಕಾರಿನ ಪ್ರಮುಖ ಅಂಶಗಳನ್ನು ತಿಳಿಯೋಣ.

ಇದು ಕ್ರೆಟಾ, ನೆಕ್ಸಾನ್, ಸ್ಕಾರ್ಪಿಯೋ ಅಲ್ಲ.. 5 ಲಕ್ಷದ ಈ ಮಾರುತಿ..

ಭಾರತದ ವಾಹನ ಮಾರುಕಟ್ಟೆಯಲ್ಲಿ ಈ ವರ್ಷದ (H1 2025) ಮೊದಲಾರ್ಧದಲ್ಲಿ ಉತ್ತಮ ಸಂಖ್ಯೆಯಲ್ಲಿ ಕಾರುಗಳನ್ನು ಮಾರಾಟ ಮಾಡಲಾಗಿದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡಿದ್ದಾರೆ. ಇತ್ತೀಚೆಗೆ, ಜನವರಿಯಿಂದ ಜೂನ್ ಅವಧಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿ ಪ್ರಕಟಗೊಂಡಿದೆ. ಮಾರುತಿ ಸುಜುಕಿಯ 6, ಟಾಟಾದ 2, ಹ್ಯುಂಡೈ ಹಾಗೂ ಮಹೀಂದ್ರಾ ಕಂಪನಿಯ ತಲಾ 1 ಕಾರುಗಳು ಸ್ಥಾನವನ್ನು ಪಡೆದಿವೆ.

ಕೈಗೆಟುಕುವ ಹ್ಯುಂಡೈ ಔರಾ AMT ವೇರಿಯೆಂಟ್ ಇತ್ತೀಚೆಗೆ ಬಿಡುಗಡೆ

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ತನ್ನ ಜನಪ್ರಿಯ ಔರಾ (AURA) ಸೆಡಾನ್ ಶ್ರೇಣಿಯನ್ನು ಹೊಸ S AMT (ಆಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ವೇರಿಯೆಂಟ್ ಅನ್ನು ಪರಿಚಯಿಸುವ ಮೂಲಕ ವಿಸ್ತರಿಸಿದೆ. ಇದು ಆರಂಭಿಕ ಹಂತದ ಸೆಡಾನ್ ವಿಭಾಗದಲ್ಲಿ AMT ತಂತ್ರಜ್ಞಾನ ಹೊಂದಿರುವ ಕಾರನ್ನು ಹೆಚ್ಚು ಖರೀದಿಸುವಂತೆ ಮಾಡಲಿದೆ. ಹೊಸ S AMT ವೇರಿಯೆಂಟ್ ಪ್ರಭಾವಶಾಲಿ ಫೀಚರ್ಸ್ ಹೊಂದಿದ್ದು, ಅವುಗಳಲ್ಲಿ ಹಲವು ಉನ್ನತ ವಿಭಾಗದ ವಾಹನಗಳಲ್ಲಿ ಕಂಡುಬರುತ್ತವೆ. ಈ ಕಾರಿನಲ್ಲಿ ಲಭ್ಯವಿರುವ ಹಲವು ವಿಶೆಷತೆಗಳನ್ನು ಇಲ್ಲಿ ವಿವರಿಸಲಾಗಿದೆ.

ಕರುಣಾಮಯಿ ಅಪ್ಪನಿಗೆ 14 ವರ್ಷಗಳ ಬಳಿಕ ಇಷ್ಟದ ಬುಲೆಟ್ ಬೈಕ್...

ಯಾವುದೇ ನಿರೀಕ್ಷೆಗಳು ಇಲ್ಲದೆ, ನಮ್ಮೆಲ್ಲ ಆಸೆಗಳನ್ನು ನಿರಾಸೆ ಮಾಡದೆ, ಈಡೇರಿಸುವ ಏಕೈಕ ವ್ಯಕ್ತಿಯೇ ಅಪ್ಪ.. ಪ್ರತಿಯೊಬ್ಬ ತಂದೆಯು ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಕನಸುಗಳನ್ನು ಕೂಡ ಬದಿಗಿಟ್ಟು ಕಷ್ಟಪಟ್ಟು ದುಡಿದು, ಹಣವನ್ನು ಕೂಡಿಡುತ್ತಾರೆ. ಕೇರಳದ ಕೊಚ್ಚಿಯಲ್ಲಿಯೂ ಹಾಗೆಯೇ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಕುಟುಂಬಕ್ಕಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ್ದು, ಕರುಣಾಮಯಿ ಅಪ್ಪನಿಗೆ ಪುತ್ರನೊಬ್ಬ ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 350 (Royal Enfield Bullet 350) ಬೈಕ್‌ನ್ನು ಉಡುಗೊರೆಯಾಗಿ ನೀಡಿದ್ದಾನೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ಸಖತ್ ವೈರಲ್ ಆಗಿದೆ.

Range Rover: ಐಷಾರಾಮಿ ರೇಂಜ್ ರೋವರ್ ವೆಲಾರ್ ಆಟೋಬಯೋಗ್ರಫಿ ಬಿಡುಗಡೆ

ರೇಂಜ್ ರೋವರ್ (Range Rover) ಭಾರತದಲ್ಲಿ ತನ್ನ ರೇಂಜ್ ರೋವರ್ ವೆಲಾರ್ ಆಟೋಬಯೋಗ್ರಫಿಯನ್ನು ಬಿಡುಗಡೆ ಮಾಡಿರುವುದಾಗಿ ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇದು ಐಷಾರಾಮಿ ವಿನ್ಯಾಸ ಮತ್ತು ಟೆಕ್ ಲೋಡೆಡ್ ಫೀಚರ್ಸ್ ಹೊಂದಿದೆ. ರೇಂಜ್ ರೋವರ್ ವೆಲಾರ್ ಆಟೋಬಯಾಗ್ರಫಿ ಬೆಲೆಯು ಈಗ ರೂ. 89.90 ಲಕ್ಷ (ಎಕ್ಸ್‌ ಶೊರೂಂ) ದಿಂದ ಪ್ರಾರಂಭವಾಗುತ್ತದೆ, ಹಾಗೆಯೇ ರೇಂಜ್ ರೋವರ್ ವೆಲಾರ್ ಡೈನಾಮಿಕ್ SE ಬೆಲೆಯು ರೂ. 84.90 ಲಕ್ಷ (ಎಕ್ಸ್‌ ಶೋರೂಂ) ಇದೆ. ಈ ಹೊಸ ಎಡಿಷನ್ ಕುರಿತ ಹೆಚ್ಚಿನ ವಿವರಗಳು ಇಲ್ಲಿವೆ. ರೇಂಜ್ ರೋವರ್ ವೆಲಾರ್‌ನ ಸಿಗ್ನೇಚರ್ ಫ್ಲೋಟಿಂಗ್ ರೂಫ್, ಫ್ಲಶ್ ಡೋರ್ ಹ್ಯಾಂಡಲ್‌ಗಳು ಮತ್ತು ಸಿಗ್ನೇಚರ್ ಡಿಆರ್‌ಎಲ್‌ಗಳೊಂದಿಗೆ ಪಿಕ್ಸೆಲ್ ಎಲ್‌ಇಡಿ ಹೆಡ್‌ಲೈಟ್‌ಗಳು ಕಾರನ್ನು ಹೆಚ್ಚು ಆಕರ್ಷಕವಾಗಿಸುತ್ತವೆ. ಸ್ಲೈಡಿಂಗ್ ಪನೋರಮಿಕ್ ರೂಫ್, 20-ಇಂಚಿನ ಸ್ಯಾಟಿನ್ ಡಾರ್ಕ್ ಗ್ರೇ ಅಲಾಯ್ ವೀಲ್‌ಗಳು ಮತ್ತು ಬರ್ನಿಶ್ಡ್ ಕಾಪರ್ ಅಕ್ಸೆಂಟ್‌ಗಳು, ಬ್ಲಾಕ್ ಕಾಂಟ್ರಾಸ್ಟ್ ರೂಫ್ ಹೊಂದಿದೆ.

ಶುಕ್ರವಾರ ಭಾರತೀಯ ಷೇರು ಮಾರುಕಟ್ಟೆ ದುರ್ಬಲವಾಗಿ ತೆರೆದಿದೆ.

ಹೂಡಿಕೆದಾರರು Q1 ಫಲಿತಾಂಶಗಳನ್ನು ನಿರ್ಣಯಿಸುತ್ತಿದ್ದಂತೆ, ಭಾರತೀಯ ಷೇರು ಮಾರುಕಟ್ಟೆ ಶುಕ್ರವಾರ ಕುಸಿತದೊಂದಿಗೆ ಪ್ರಾರಂಭವಾಯಿತು, ನಿಫ್ಟಿ ಮತ್ತು ಸೆನ್ಸೆಕ್ಸ್ ಕೆಂಪು ಬಣ್ಣದಲ್ಲಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ಶೀಘ್ರದಲ್ಲೇ ಗಳಿಕೆಯನ್ನು ಘೋಷಿಸಲು ಸಜ್ಜಾಗಿದೆ.

5-ಸೀಟರ್.. 34 ಕಿ.ಮೀ ಮೈಲೇಜ್, 5.60 ಲಕ್ಷ.. ಈ ಜನಪ್ರಿಯ ಕಾರು..

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದೆ. ಇದು ಹೆಚ್ಚು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ನಗರ ಸಂಚಾರಕ್ಕೆ ಹೇಳಿ ಮಾಡಿಸಿದ ರೀತಿಯಲ್ಲಿದೆ. ಈ ಜೂನ್ ತಿಂಗಳು ಒಟ್ಟು 2038 ಯುನಿಟ್ ಸೆಲೆರಿಯೊ ಕಾರುಗಳನ್ನು ಮಾರಾಟ ಮಾಡಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 31.73% ಕುಸಿತವಾಗಿದೆ. 2024 ಇದೇ ಅವಧಿಯಲ್ಲಿ 2,985 ಯುನಿಟ್‌ಗಳನ್ನು ಮಾರಲಾಗಿದೆ.
Advertisement

ನಿಫ್ಟಿ ಸೂಚ್ಯಂಕ ಪ್ರವೃತ್ತಿಗಳು ಮತ್ತು ಹೂಡಿಕೆ ಒಳನೋಟಗಳು

ಇತ್ತೀಚಿನ ನಿಫ್ಟಿ ಸೂಚ್ಯಂಕ ಪ್ರವೃತ್ತಿಗಳು, ಪ್ರುಡೆಂಟ್ ಕಾರ್ಪೊರೇಟ್ ಸಲಹಾ ಸೇವೆಗಳು ಮತ್ತು ಅರವಿಂದ್ ಫ್ಯಾಷನ್ಸ್‌ನಲ್ಲಿನ ಹೂಡಿಕೆ ಅವಕಾಶಗಳು ಮತ್ತು ಮಾರುಕಟ್ಟೆ ಒಳನೋಟಗಳನ್ನು ಅನ್ವೇಷಿಸಿ.

ಭಾರೀ ಲಾಭ ಕೊಡುವ ಹೊಸ ಆಟೋ ಬಿಡುಗಡೆ

ಲೋಹಿಯಾ ಆಟೋ ಜೊತೆಗೂಡಿ ಕೆಲಸ ಮಾಡುತ್ತಿರುವ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಯೋಧಾ (Youdha), ತನ್ನ ಮೊದಲ ಪ್ರಮುಖ ವಾಹನವಾದ 'ಯೋಧಾ ಇಪಿಒಡಿ' (Youdha EPOD) ತ್ರಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. ವೇಗವಾಗಿ ಬೆಳೆಯುತ್ತಿರುವ ಎಲ್5 ಎಲೆಕ್ಟ್ರಿಕ್ ಪ್ಯಾಸೆಂಜರ್ ತ್ರಿಚಕ್ರ ವಾಹನ ವರ್ಗದಲ್ಲಿ ಇದು ಹೊಸ ಎಂಟ್ರಿಯಾಗಿದೆ. ಇಪಿಒಡಿಯೊಂದಿಗೆ, ಯೋಧಾ ಭಾರತದ ವಿಕಸನಗೊಳ್ಳುತ್ತಿರುವ ನಗರ ಮತ್ತು ಅರೆ - ನಗರ ವಾಹನ ಮಾರುಕಟ್ಟೆಗಳಲ್ಲಿ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಈ ಆಟೋವನ್ನು ನಿರ್ಮಿಸಿರುವುದಾಗಿ ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಗುಡ್‌ನ್ಯೂಸ್‌ ಅಣ್ತಮ್ಮಸ್.. ಐರಾವತದಂತಹ ಹೊಸ ಕೀವೇ ಆರ್‌ಆರ್‌300..

ಹಂಗೇರಿ ಮೂಲದ ಕೀವೇ (Keeway) ಸಣ್ಣ ಹಾಗೂ ಮಧ್ಯಮ ಗಾತ್ರದ ದ್ವಿಚಕ್ರ ವಾಹನ (Two Wheeler) ತಯಾರಿಕೆಗೆ ಹೆಸರುವಾಗಿದೆ. ದೇಶೀಯ ಮಾರುಕಟ್ಟೆಯಲ್ಲಿಂದು 'ಆರ್‌ಆರ್‌300' ಹೆಸರಿನ ಹೊಚ್ಚ ಹೊಸ ಮೋಟಾರ್‌ಸೈಕಲ್‌ವೊಂದ‌ನ್ನು ಬಿಡುಗಡೆಗೊಳಿಸಿದೆ. ಇದು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಜೊತೆಗೆ ಕೈಗೆಟುಕುವ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ಲಭ್ಯವಿದೆ. ಬನ್ನಿ, ನೂತನ ಬೈಕ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Tata: ಕೇವಲ 6.20 ಲಕ್ಷ ಬೆಲೆ... 5-ಸ್ಟಾರ್ ರೇಟಿಂಗ್ ಕಾರು

ಟಾಟಾ ಮೋಟಾರ್ಸ್ (Tata Motors) ಇಂದು ತನ್ನ ಕ್ರಾಂತಿಕಾರಿ ಕಾಂಪ್ಯಾಕ್ಟ್ SUV ಆಗಿರುವ ಪಂಚ್ (Punch) ನ ಐತಿಹಾಸಿಕ ಮೈಲಿಗಲ್ಲನ್ನು ಘೋಷಿಸಿದೆ. ಇದು ನಾಲ್ಕು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ 6 ಲಕ್ಷ ಕಾರುಗಳ ಉತ್ಪಾದನಾ ಮೈಲಿಗಲ್ಲನ್ನು ದಾಟಿದೆ. ಅಕ್ಟೋಬರ್ 2021 ರಲ್ಲಿ ಬಿಡುಗಡೆಯಾದ ನಂತರ, ಟಾಟಾ ಪಂಚ್ ತನ್ನ ವಿಶಿಷ್ಟ ವಿನ್ಯಾಸ, ದೃಢವಾದ ಪರ್ಫಾಮೆನ್ಸ್ ಮತ್ತು 5 - ಸ್ಟಾರ್ ಸುರಕ್ಷತಾ ರೇಟಿಂಗ್‌ ನೊಂದಿಗೆ ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಮುನ್ನುಗ್ಗುತ್ತಿದೆ.

ಮೂಗು ಮುರಿಯುವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ: Maruti...

ಮಾರುತಿ ಸುಜುಕಿ ಬಲೆನೊ (Maruti Suzuki Baleno) ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ. ಇದು ಉತ್ತಮವಾದ ವಿನ್ಯಾಸ ಹಾಗೂ ಅತ್ಯಾಕರ್ಷಕ ವೈಶಿಷ್ಟ್ಯಗಳಿಗೂ ಹೆಸರುವಾಸಿಯಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಪ್ರಯಾಣಿಕರ ರಕ್ಷಣೆಗಾಗಿ ಈ ಕಾರನ್ನು ನವೀಕರಿಸಿಯೂ ಬಿಡುಗಡೆಗೊಳಿಸಲಾಗಿದೆ. ಬನ್ನಿ, ಆ ಬಗ್ಗೆ ಇಲ್ಲಿದೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Maruti Suzuki: ಕಳಪೆ ಗುಣಮಟ್ಟ ಎಂದವರಿಗೆ ಸರಿಯಾದ ಉತ್ತರ

ಮಾರುತಿ ಸುಜುಕಿ ತನ್ನ ಜನಪ್ರಿಯ ಎಂಪಿವಿ ಎರ್ಟಿಗಾ (Maruti Suzuki Ertiga) ದ ಎಲ್ಲಾ ವೇರಿಯೆಂಟ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಪ್ರಮಾಣಿತ ವೈಶಿಷ್ಟ್ಯವನ್ನಾಗಿ ಮಾಡಿ ಕಂಪನಿ ಅಧಿಕೃತವಾಗಿ ನವೀಕರಿಸಿದೆ. ಈ ಕ್ರಮವು ಅಕ್ಟೋಬರ್ 2025 ರ ವೇಳೆಗೆ ಎಲ್ಲಾ ಹೊಸ ಪ್ರಯಾಣಿಕ ವಾಹನಗಳು ಆರು ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ಹೊಂದಿರಬೇಕು ಎಂಬ ಭಾರತ ಸರ್ಕಾರದ ಆದೇಶಕ್ಕೆ ಒಳಪಟ್ಟಿದೆ. ಹಾಗೆಯೇ ಭಾರತೀಯ ಕಾರು ಖರೀದಿದಾರರಲ್ಲಿ ಬೆಳೆಯುತ್ತಿರುವ ಸುರಕ್ಷತಾ ನಿರೀಕ್ಷೆಗಳಿಗೆ ಅನುಗುಣವಾಗಿ ಕಂಪನಿಯ ರಾಷ್ಟ್ರವ್ಯಾಪಿ ಪ್ರಯತ್ನದ ಭಾಗವಾಗಿದೆ. ಈ ನವೀಕರಣವು ಬೆಲೆ ಏರಿಕೆಗೂ ಕಾರಣವಾಗಿದ್ದು, ಗ್ರಾಹಕರು ಇನ್ನುಮುಂದೆ ತುಸು ಹೆಚ್ಚಿನ ಬೆಲೆಯಲ್ಲಿ ಈ ಕಾರನ್ನು ಖರೀದಿಸಬೇಕಾಗುತ್ತದೆ.

ಹೊಚ್ಚ ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 310 ಮೋಟಾರ್‌ಸೈಕಲ್ ಬಿಡುಗಡೆ

ಟಿವಿಎಸ್ ಮೋಟಾರ್ ಕಂಪನಿ (ಟಿವಿಎಸ್ಎಂ) 2025ರ ಟಿವಿಎಸ್ ಅಪಾಚೆ ಆರ್‌ಟಿಆರ್ 310 ಅನ್ನು ಬಿಡುಗಡೆ ಮಾಡಿದೆ. ರೈಡರ್-ಫಸ್ಟ್ ಮನಸ್ಥಿತಿ, ಪರ್ಫಾಮೆನ್ಸ್ ಕೇಂದ್ರಿತ ಅಪ್‌ಗ್ರೇಡ್‌ಗಳು ಮತ್ತು ಆಕ್ರಮಣಕಾರಿ ಡಿಸೈನ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. OBD2B- ಕಂಪ್ಲೈಂಟ್ 2025 ಟಿವಿಎಸ್ ಅಪಾಚೆ ಆರ್‌ಟಿಆರ್ 310, ಈ ಬಾರಿ ಸ್ಮಾರ್ಟ್ ಪರ್ಫಾಮೆನ್ಸ್ ನೀಡಲಿದೆ. ಜೊತೆಗೆ ರಿಯಲ್-ಟೈಮ್ ಎಮಿಷನ್ ಮೇಲ್ವಿಚಾರಣೆ, ತೀಕ್ಷ್ಣವಾದ ಪ್ರತಿಕ್ರಿಯೆ ಮತ್ತು ವರ್ಧಿತ ಎಂಜಿನ್ ಹೆಲ್ತ್ ಅಪ್‌ಡೇಟ್‌ಗಳನ್ನು ನೀಡುತ್ತದೆ. ಹೊಸ ಬೈಕ್ ಕುರಿತ ಹೆಚ್ಚಿನ ವಿಶೇಷತೆಗಳು ಇಲ್ಲಿವೆ.

ಗುರು.. ಇದು Tata Nano ಅಲ್ಲ, ಕಡಿಮೆ ಬೆಲೆ.. ಹೊಸ ಬ್ರ್ಯಾಂಡ್..

ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿದೆ. ಈಚೆಗೆ ವಿಎಫ್6 (VF6) ಹಾಗೂ ವಿಎಫ್7 (VF7) ಎಲೆಕ್ಟ್ರಿಕ್ ಎಸ್‌ಯುವಿಗಳಾಗಿ ಪ್ರಿ-ಬುಕ್ಕಿಂಗ್ ಆರಂಭಿಸಿತ್ತು. ಆಸಕ್ತ ಗ್ರಾಹಕರು ರೂ.21,000 ಮುಂಗಡ ಹಣವನ್ನು ಪಾವತಿಸುವ ಆರ್ಡರ್ ಮಾಡಬಹುದು. ಈ ಕಾರುಗಳು ಅತಿ ಶೀಘ್ರದಲ್ಲಿ ಬಿಡುಗಡೆಯಾಗಲಿವೆ. ಇವುಗಳು ಮಾತ್ರವಲ್ಲದೇ, ಕಂಪನಿಯು ಬಹುನಿರೀಕ್ಷಿತ 'ವಿಎಫ್3' ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ್ನು ಕೂಡ ಮುಂಬರುವ ಕೆಲವೇ ತಿಂಗಳಲ್ಲಿ ಅದ್ದೂರಿಯಾಗಿಯೂ ಪರಿಚಯಿಸಲಿದೆ.
Advertisement

ಜೀಪ್ ಕಂಪಾಸ್ ಮತ್ತು ಮೆರಿಡಿಯನ್ ಟ್ರಯಲ್ ಎಡಿಷನ್‌ಗಳು ಬಿಡುಗಡೆ

ಜೀಪ್ ಇಂಡಿಯಾ (Jeep india) ತನ್ನ ಐಕಾನಿಕ್ ಎಸ್‌ಯುವಿಗಳಾದ ಜೀಪ್ ಕಂಪಾಸ್ (Jeep Compass) ಮತ್ತು ಜೀಪ್ ಮೆರಿಡಿಯನ್‌ (Jeep Meridian) ಗಳ ಟ್ರಯಲ್ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಈ ವಿಶೇಷ ಆವೃತ್ತಿಗಳು ಜೀಪ್‌ನ ಆಫ್-ರೋಡ್ ಮನೋಭಾವವನ್ನು 'ಜೀಪ್ ಟ್ರಸ್ಟ್' ಎಂಬ ಹೊಸ ಕಾರ್ಯಕ್ರಮದ ಅಡಿಯಲ್ಲಿ ಬೋಲ್ಡ್ ಸ್ಟೈಲಿಂಗ್ ವರ್ಧನೆಗಳು ಮತ್ತು ವಿಶೇಷ ಮಾಲೀಕತ್ವದ ಪ್ರಯೋಜನಗಳೊಂದಿಗೆ ಸಂಯೋಜಿಸುತ್ತವೆ. ಈ ವಿಶೇಷ ಆವೃತ್ತಿಯು ಜುಲೈ 15, 2025 ರಿಂದ ಮಾರಾಟಕ್ಕೆ ಬಂದಿವೆ.

ಜುಲೈ 17 ರಂದು ಭಾರತೀಯ ಷೇರು ಮಾರುಕಟ್ಟೆ ಫ್ಲಾಟ್ ಓಪನ್

ಭಾರತೀಯ ಷೇರು ಮಾರುಕಟ್ಟೆ ಜುಲೈ 17, 2023 ರಂದು ಸ್ಥಿರವಾಗಿ ಪ್ರಾರಂಭವಾಯಿತು, ವಲಯಗಳಿಂದ ಮಿಶ್ರ ಸಂಕೇತಗಳು ಬಂದವು. ಮಾರುಕಟ್ಟೆ ಪ್ರವೃತ್ತಿಗಳು ಮತ್ತು ಹೂಡಿಕೆದಾರರ ಭಾವನೆಗಳ ಕುರಿತು ಪ್ರಮುಖ ಒಳನೋಟಗಳು.

7-ಸೀಟುಗಳು, 490 Km ರೇಂಜ್, ಕಮ್ಮಿ ಬೆಲೆಯ ಹೊಸ Kia Carens Clavis..

ಇತ್ತೀಚೆಗೆ ಬಹುನಿರೀಕ್ಷಿತ ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಇವಿಯನ್ನು ಮಾರಾಟಕ್ಕೆ ತರಲಾಗಿತ್ತು. ಈ ಎಲೆಕ್ಟ್ರಿಕ್ ಎಂಪಿವಿ ತುಂಬಾ ಚೆನ್ನಾಗಿರುವ ವಿನ್ಯಾಸ ಹಾಗೂ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅತಿ ಕಡಿಮೆ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದ್ದು, ಒಂದು ತುಂಬು ಕುಟುಂಬ ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗಲಿದೆ. ನಾವಿಲ್ಲಿ ಹೊಚ್ಚ ಹೊಸ 'ಕ್ಯಾರೆನ್ಸ್ ಕ್ಲಾವಿಸ್ ಇವಿ'ಯ ಬೆಲೆ ಹಾಗೂ ವಿಶೇಷತೆಗಳ ಕುರಿತಾದ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

24 Km ಮೈಲೇಜ್.. 8 ಲಕ್ಷ, 5-ಸೀಟರ್.. ಈ ಜನಪ್ರಿಯ Tata Suvಗೆ..

ಟಾಟಾ ನೆಕ್ಸಾನ್ (Tata Nexon) ಜನಪ್ರಿಯ ಕಾರಾಗಿದೆ. ಇದು ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ತನ್ನದೇಯಾದ ಛಾಪನ್ನು ಮೂಡಿಸಿದೆ. ವಿಶ್ವಾಸಾರ್ಹತೆ ಹಾಗೂ ಉತ್ತಮ ಕಾರ್ಯಕ್ಷಮತೆಗೂ ಹೆಸರುವಾಗಿದೆ. ಈ ಜೂನ್ ತಿಂಗಳು 11,602 ಯುನಿಟ್ ನೆಕ್ಸಾನ್ ಕಾರುಗಳನ್ನು ಮಾರಾಟ ಮಾಡಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಸ್ವಲ್ಪ ಮಟ್ಟಿಗೆ ಅಂದರೆ -4% ಮಾತ್ರ ಇಳಿಕೆಯಾಗಿದೆ. 2024ರ ಇದೇ ಅವಧಿಯಲ್ಲಿ 12,066 ಯುನಿಟ್‌ಗಳನ್ನು ಮಾರಲಾಗಿತ್ತು.

ನಿಫ್ಟಿ ಬ್ಯಾಂಕ್ ಏರಿಕೆ; ಟಾಟಾ ಪವರ್ ಮತ್ತು ಬ್ಯಾಂಕ್ ಆಫ್ ಬರೋಡಾ ಖರೀದಿ

ನಿಫ್ಟಿ ಬ್ಯಾಂಕ್ 57,168.95 ಕ್ಕೆ ಮುಕ್ತಾಯಗೊಂಡಿದೆ. ಮಾರುಕಟ್ಟೆ ಬಲವರ್ಧನೆಯ ಮಧ್ಯೆ ಸಂಭಾವ್ಯ ಲಾಭಕ್ಕಾಗಿ ವಿಶ್ಲೇಷಕರು ಟಾಟಾ ಪವರ್ ಮತ್ತು ಬ್ಯಾಂಕ್ ಆಫ್ ಬರೋಡಾವನ್ನು ಶಿಫಾರಸು ಮಾಡುತ್ತಾರೆ.