EMotorad: ಬೈಕ್-ಸೈಕಲ್ ಮಿಶ್ರಣದಲ್ಲಿ ಹೊಸ ವಾಹನ ಬಿಡುಗಡೆ

ಭಾರತದ ಪ್ರಮುಖ ಎಲೆಕ್ಟ್ರಿಕ್ ಸೈಕಲ್ ತಯಾರಕರಾದ ಇಮೋಟೊರಾಡ್ (EMotorad), ಅಡ್ವೆಂಚರ್ ರೇಂಜರ್ ಇ - ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಇಮೋಟೊರಾಡ್‌ನ ಮೊದಲ ಮೋಟೋ - ಶೈಲಿಯ ಎಲೆಕ್ಟ್ರಿಕ್ ಸೈಕಲ್ ಇದಾಗಿದ್ದು, ರೂ. 55,999 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ರೇಂಜರ್ ಈಗ ಇಮೋಟೊರಾಡ್‌ನ ಮಾರಾಟ ಮಳಿಗೆ ಸೇರಿದಂತೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಭಾಗಶಃ ಸೈಕಲ್, ಭಾಗಶಃ ಮೋಟೋ ಡಿಸೈನ್‌ನೊಂದಿಗೆ ಸಂಪೂರ್ಣ ವಿಶಿಷ್ಟವಾದ ಬೈಕ್ ಅನ್ನು ಹುಡುಕುತ್ತಿರುವವರಿಗಾಗಿ ರೇಂಜರ್ ಬೆಸ್ಟ್ ಆಯ್ಕೆಯಾಗಿದೆ ಎಂದು ಕಂಪನಿ ಪ್ರತಿಕಾ ಪ್ರಕಟಣೆಯಲ್ಲಿ ಹೇಳಿದೆ.

Toyota: ಸದ್ದಿಲ್ಲದೇ ಜನಾಕರ್ಷಣೆಯ ಟೊಯೊಟಾ ಇನ್ನೋವಾ ಹೈಕ್ರಾಸ್..

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ವಿಶ್ವಾಸಾರ್ಹ ಎಂಪಿವಿಯಾಗಿದೆ. ಇದು ದೊಡ್ಡ ಗಾತ್ರದ ಕಾರಾಗಿದೆ. ನೋಡಲು ಕೂಡ ತುಂಬಾ ಚೆನ್ನಾಗಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಸದ್ಯ, ಇದೇ 'ಇನ್ನೋವಾ ಹೈಕ್ರಾಸ್' ಎಂಪಿವಿ ಬೆಲೆ ಏರಿಕೆಯಾಗಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಬನ್ನಿ, ಯಾವ ರೂಪಾಂತರದ (ವೇರಿಯೆಂಟ್) ದರ ಎಷ್ಟು ಹೆಚ್ಚಳವಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಟಾಟಾ ಗ್ರಾಹಕರಿಗೆ ವಿನಾಯಿತಿ: ಮಹೀಂದ್ರಾ ಕಾರು ಮಾಲೀಕರಿಗೆ ಶೇ10 ತೆರಿಗ

ಮಹೀಂದ್ರಾ XEV 9e (Mahindra XEV 9e) ಮತ್ತು ಟಾಟಾ ಹ್ಯಾರಿಯರ್ EV (Tata Harrier EV) ಎಲೆಕ್ಟ್ರಿಕ್ ಎಸ್‌ಯುವಿ ವಿಭಾಗದಲ್ಲಿ ಇತ್ತೀಚಿನ ಬಹುನಿರೀಕ್ಷಿತ ಪ್ರತಿಸ್ಪರ್ಧಿಗಳಾಗಿದ್ದು, ಇತ್ತೀಚೆಗಷ್ಟೆ ಬಿಡುಗಡೆಯಾಗಿವೆ. ಇವುಗಳಲ್ಲಿ ಟಾಟಾ ಹ್ಯಾರಿಯರ್ ಇವಿಗೆ ತೆರಿಗೆ ವಿನಾಯಿತಿ ನೀಡಲಾಗಿದ್ದು, ಮಹೀಂದ್ರಾ XEV 9e ಎಸ್‌ಯುವಿಗೆ ಶೇ10 ರಷ್ಟು ತೆರಿಗೆ ವಿಧಿಸಲಾಗಿದೆ. ಇದೇಕೆ ಹೀಗೆ, ಟಾಟಾ ಕಾರುಗಳಲ್ಲಿ ಇರೋದಾದರೂ ಏನು? ತೆರಿಗೆ ವಿನಾಯಿತಿ ನೀಡಲು ಕಾರಣವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲದೆ.

8-ಸೀಟರ್.. 23 Km ಮೈಲೇಜ್, 2 ಫ್ಯಾಮಿಲಿ ಹೋಗಬಹುದು.. ಈ ಆನೆ ಗಾತ್ರದ..

ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto) ಜನಪ್ರಿಯ ಎಂಪಿವಿಯಾಗಿದೆ. ಇದು ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಕಾರಿನ ರೀ-ಬ್ಯಾಡ್ಜ್ ಮಾಡೆಲ್ ಆಗಿದ್ದು, ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಈ ಜೂನ್ ತಿಂಗಳು ಈ ಕಾರು ಸ್ಪರ್ಧಾತ್ಮಕ ಸಂಖ್ಯೆಯಲ್ಲಿಯೂ ಮಾರಾಟಗೊಂಡಿದೆ. ಒಟ್ಟು 264 ಯುನಿಟ್‌ಗಳನ್ನು ಮಾರಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 18.19% ಪ್ರಗತಿಯಾಗಿದೆ. 2024ರ ಇದೇ ಅವಧಿಯಲ್ಲಿ 223 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.
Advertisement

ತತ್ಕಾಲ್ ಟಿಕೆಟ್ ಬುಕ್‌ ಮಾಡುವ ಮುನ್ನ ಈ ವಿಷಯ ತಿಳಿಯಲೇಬೇಕು!


ನಂ.1 ಕಾರು ಕಂಪನಿಗೆ ನಿದ್ದೆಗೆಡಿಸಿದೆ ಈ SUV

ಮಾರಾಟದಲ್ಲಿ ಭಾರತದ ನಂ.1 ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯನ್ನು ಹಿಂದಿಕ್ಕಿ ಪ್ರಮುಖ ಬ್ರಾಂಡ್‌ನ ಎಸ್‌ಯುವಿಯೊಂದು ಮಾರಾಟದಲ್ಲಿ ದಾಖೆಲೆ ನಿರ್ಮಿಸಿದೆ. ಪ್ರತಿ ತಿಂಗಳ ಒಟ್ಟಾರೆ ಮಾರಾಟದಲ್ಲಿ ಮಾರುತಿ ಕಾರುಗಳು ಹೆಚ್ಚು ಮಾರಾಟ ಕಾಣುತ್ತವೆ. ಇತರ ಬ್ರಾಂಡ್‌ಗಳಿಗೆ ಹೋಲಿಸಿದರೆ, ಮಾರುತಿ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಆದರೆ ಈ ಬಾರಿ ಹ್ಯುಂಡೈ ಕ್ರೆಟಾ ಎಸ್‌ಯುವಿ ಅತೀ ಹೆಚ್ಚು ಮಾರಾಟವಾದ (ಜೂನ್ 2025) ದೇಶದ ನಂ.1 ಕಾರಾಗಿ ಗುರ್ತಿಸಿಕೊಂಡಿದೆ. ನಂತರದ ಸ್ಥಾನದಲ್ಲಿ ಮಾರುತಿ ಸುಜುಕಿ ಡಿಜೈರ್ ಇದೆ.

ಸದ್ದಿಲ್ಲದೇ Renault Kwid ಎಲೆಕ್ಟ್ರಿಕ್ ಕಾರಿನ ಪರೀಕ್ಷೆ.. ಭಾರೀ..

ರೆನಾಲ್ಟ್ ಇಂಡಿಯಾ (Renault India), ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಅದರಲ್ಲೂ ಜಾಗತಿಕವಾಗಿ ಕಂಪನಿಯ ಒಡೆತನದಲ್ಲಿರುವ 'ಡೇಸಿಯಾ ಸ್ಪ್ರಿಂಗ್ ಇವಿ' ಆಧಾರಿತ ಕ್ವಿಡ್ ಇವಿಯನ್ನು ಕೂಡ ಮಾರಾಟಕ್ಕೆ ತರಲಿದೆ. ಈ ಮೊದಲು ಚೆನ್ನೈ ವಿಮಾನ ನಿಲ್ದಾಣ ಸಮೀಪ ಟ್ರಕ್‌ವೊಂದರಲ್ಲಿ ಇದೇ 'ರೆನಾಲ್ಟ್ ಕ್ವಿಡ್' ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ್ನು ನಿಲ್ಲಿಸಲಾಗಿತ್ತು. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲೂ ಸಖತ್ ವೈರಲ್ ಆಗಿದ್ದವು. ಸದ್ಯ, ಈ ಕಾರು ಪ್ರಾಯೋಜಿಕ ಓಡಾಟದ ಸಂದರ್ಭದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದೆ.

VinFast: ಎರಡು ಹೊಸ ಕಾರುಗಳು ಬಿಡುಗಡೆಗೆ ಸಜ್ಜು: ಬೆಲೆಯೆಷ್ಟು?

ಭಾರತಕ್ಕೆ ಹೊಸ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಲಗ್ಗೆಯಿಟ್ಟಿದೆ. ಇದು ವಿಯೆಟ್ನಾಂ ಮೂಲದ ಬ್ರಾಂಡ್ ಆಗಿದ್ದು, ಜಾಗತಿಕವಾಗಿ ಹೆಸರು ಮಾಡಿದೆ. ಅದೇ ವಿನ್‌ಫಾಸ್ಟ್ (VinFast) ಬ್ರಾಂಡ್, ಈ ವರ್ಷದ ಆರಂಭದಲ್ಲಿ ಕಂಪನಿಯು ಭಾರತದಲ್ಲಿ ಆರಂಭಿಕವಾಗಿ VF7 ಮತ್ತು VF6 ಎಂಬ ಎರಡು ಹೊಸ ಎಸ್‌ಯುವಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಈ ಸಂಬಂಧ ದೇಶದಲ್ಲಿ ಡೀಲರ್‌ ನೆಟ್‌ವರ್ಕ್ ಸೇರಿದಂತೆ ಸ್ಥಳೀಯ ಕಾರು ಉತ್ಪಾದನಾ ಘಟಕದವರೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇನ್ನೇನು ಕಾರುಗಳ ಬಿಡುಗಡೆ ಮಾತ್ರ ಬಾಕಿಯಿದ್ದು, ಆ ಎರಡೂ ಕಾರುಗಳ ಬಗ್ಗೆ ನಮಗೆ ಲಭ್ಯವಾಗಿರುವ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದೇವೆ.

ಥಿಂಕಿಂಗ್ ಮೆಷಿನ್ಸ್ ಲ್ಯಾಬ್ $2 ಬಿಲಿಯನ್ ನಿಧಿ ಸಂಗ್ರಹ!

ಮೀರಾ ಮುರಾಟಿ ಸ್ಥಾಪಿಸಿದ ಥಿಂಕಿಂಗ್ ಮೆಷಿನ್ಸ್ ಲ್ಯಾಬ್, $2 ಬಿಲಿಯನ್ ಹಣವನ್ನು ಸಂಗ್ರಹಿಸುತ್ತದೆ, ಅದರ ಮೌಲ್ಯಮಾಪನವನ್ನು $12 ಬಿಲಿಯನ್‌ಗೆ ಹೆಚ್ಚಿಸುತ್ತದೆ ಮತ್ತು AI ನಲ್ಲಿ ಹೂಡಿಕೆದಾರರ ಆಸಕ್ತಿಯನ್ನು ಎತ್ತಿ ತೋರಿಸುತ್ತದೆ.

ಈ ಬೈಕ್‌ಗಳನ್ನು ಕಂಡ್ರೆ ಯೂತ್ಸ್ ಐ ಲೈಕ್ ಇಟ್ ಎನ್ನುವರು..

ಯುವ ಜನತೆಗೆ ಬೈಕ್‌ಗಳ ಮೇಲೆ ವಿಶೇಷವಾದ ಪ್ರೀತಿ ಇರುತ್ತದೆ. ಆದರೆ, ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿರುವ ಪ್ರೀಮಿಯಂ ಮೋಟಾರ್‌ಸೈಕಲ್‌ಗಳನ್ನು ಕೊಳ್ಳುವಷ್ಟು ಹಣವಿರುವುದಿಲ್ಲ. ಹೀಗಾಗಿ, ಬಹುತೇಕ ಯುವಕರು ಬಜಾಜ್ ಪಲ್ಸರ್, ಟಿವಿಎಸ್ ಅಪಾಚೆ ಹಾಗೂ ಹೀರೋ ಎಕ್ಸ್‌ಪಲ್ಸ್ ಬೈಕ್‌ಗಳ ಮೊರೆ ಹೋಗುತ್ತಾರೆ. ಇವು ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಖರೀದಿಗೆ ಲಭ್ಯವಿದ್ದು, ಅದಕ್ಕೆ ತಕ್ಕಂತೆ ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸ ಮತ್ತು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿವೆ. ನಾವಿಲ್ಲಿ ಈ ಮೋಟಾರ್‌ಸೈಕಲ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಕಾರಿನ ರಕ್ಷಣೆಗೆ ಹೊಸ ಆಡಿ ಡ್ಯಾಶ್ ಕ್ಯಾಮ್ ಬಿಡುಗಡೆ

ಆಡಿ ಇಂಡಿಯಾ ರೂ.68,000 ಬೆಲೆಯ ಪ್ರೀಮಿಯಂ ಹೈ-ರೆಸಲ್ಯೂಶನ್ ಡ್ಯಾಶ್ ಕ್ಯಾಮ್ ಅನ್ನು ಇತ್ತೀಚೆಗಷ್ಟೆ ಬಿಡುಗಡೆ ಮಾಡಿದೆ. ಇದು ಎಲ್ಲಾ ಆಡಿ ಮಾಡಲ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ, ಅದರ ಡೀಲರ್‌ಶಿಪ್ ನೆಟ್‌ವರ್ಕ್ ಮೂಲಕ ನವೀಕರಣ ಸ್ಥಾಪನೆ ಮತ್ತು ಹೊಸ ವಾಹನ ವಿತರಣೆಗಳಲ್ಲಿ ಲಭ್ಯವಿದೆ. ಡ್ಯಾಶ್ ಕ್ಯಾಮ್ QHD ರೆಸಲ್ಯೂಶನ್‌ನಲ್ಲಿ ರೆಕಾರ್ಡ್ ಮಾಡುತ್ತದೆ, ಚಾಲನೆ ಮಾಡುವಾಗ ಮತ್ತು ನಿಲ್ಲಿಸಿದಾಗ ವಾಹನ ಸುರಕ್ಷತೆಯನ್ನು ಹೆಚ್ಚಿಸಲು ಕ್ರಿಸ್ಟಲ್-ಕ್ಲಿಯರ್ ವೀಡಿಯೊವನ್ನು ಒದಗಿಸುತ್ತದೆ ಎಂದು ಕಂಪನಿ ತಿಳಿಸಿದೆ. ಈ ಅದ್ಬುತ ಅಕ್ಸೆಸೊರಿಯ ಟಾಪ್ ವಿಶೇಷತೆಗಳನ್ನು ಇಲ್ಲಿ ನೋಡೋಣ.

ನಿಫ್ಟಿ ಸೂಚ್ಯಂಕವು ಸಕಾರಾತ್ಮಕ ಆವೇಗ ಮತ್ತು ಸಂಕೇತಗಳನ್ನು ತೋರಿಸುತ್ತದೆ

ನಿಫ್ಟಿ ಸೂಚ್ಯಂಕವು ಚೇತರಿಕೆ ಕಂಡಿದ್ದು, ಬಲವಾದ ಮಾರುಕಟ್ಟೆ ವಿಸ್ತಾರದೊಂದಿಗೆ 114 ಅಂಕಗಳನ್ನು ಗಳಿಸಿದೆ. ತಾಂತ್ರಿಕ ಸೂಚಕಗಳು ಮುಂಬರುವ ವಾರಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯನ್ನು ಸೂಚಿಸುತ್ತವೆ.
Advertisement

ಬಡವರಿಗೆ ಪರ್ಫೆಕ್ಟ್ ಕಾರುಗಳಿವು.. 5 ಲಕ್ಷ ಬೆಲೆ, 34 ಕಿ.ಮೀ..

ಭಾರತದ ಮಧ್ಯಮ ವರ್ಗದ ಜನರಿಗೆ ಹೊಚ್ಚ ಹೊಸ ಕಾರೊಂದನ್ನು ಖರೀದಿಸಬೇಕೆಂಬ ಬಹುದೊಡ್ಡ ಆಸೆಯಿರುತ್ತದೆ. ಆದರೆ ಯಾವ ಕಾರನ್ನು ಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಇರುವುದಿಲ್ಲ. ಅಂತಹವರಿಗೆ 2025ರಲ್ಲೂ ರೂ.5 ಲಕ್ಷ ಎಕ್ಸ್-ಶೋರೂಂ ದರದಲ್ಲಿ ಸಿಗುವ ಈ ನಾಲ್ಕು ಕಾರುಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಇವುಗಳು ಬೆಲೆಗೆ ತಕ್ಕಂತೆ ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿವೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Bajaj: ಅಗ್ಗದ ಬಜಾಜ್ ಚೇತಕ್ 3001 ಇವಿ ಸ್ಕೂಟರ್ ವಿಶೇಷತೆಗಳು

ಇತ್ತೀಚೆಗೆ ಬಿಡುಗಡೆಯಾಗಿರುವ ಚೇತಕ್ 3001 ಇವಿ ಸ್ಕೂಟರ್ ಭಾರತದಲ್ಲಿ ಸದ್ಯ ಒಂದು ಲಕ್ಷಕ್ಕಿಂದ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಬಜಾಜ್‌ನ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಈ ಸ್ಕೂಟರ್ ದೇಶಾದ್ಯಂತ ಈಗ ರೂ. 99,990 ಎಕ್ಸ್-ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಫ್ಲೋರ್‌ಬೋರ್ಡ್ ಬ್ಯಾಟರಿ ಆರ್ಕಿಟೆಕ್ಚರ್ ಹೊಂದಿರುವ ಈ ಸ್ಕೂಟರ್, ನಗರ ಪ್ರಯಾಣ, ಕಚೇರಿ ಮತ್ತು ಕಾಲೇಜುಗಳಿಗೆ ಸೂಕ್ತವಾದ ಇವಿ ಆಗಿದೆ. ಹಾಗೆಯೇ ಭಾರತೀಯ ಸ್ಕೂಟರ್ ಸವಾರರು ಬಯಸುವ ರೇಂಜ್ ಮತ್ತು ಪರ್ಫಾಮೆನ್ಸ್ ನೀಡುತ್ತದೆ. ಇದರ ಹೆಚ್ಚಿನ ಮುಖ್ಯಾಂಶಗಳನ್ನು ಇಲ್ಲಿ ನೋಡೋಣ.

ಆಟೋ ಚಾಲಕರಿಗೆ ಸಿಹಿಸುದ್ಧಿ: ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ

ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆಟೋಗಳ ಕನಿಷ್ಠ ಶುಲ್ಕವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಆಗಸ್ಟ್ 1 ರಿಂದ, ಸವಾರಿಯ ಮೊದಲ 2 ಕಿಲೋಮೀಟರ್‌ಗೆ ಮೂಲ ಶುಲ್ಕವು 30 ರೂ.ಗಳಿಂದ 36 ರೂ.ಗೆ ಹೆಚ್ಚಾಗಲಿದೆ. ಈ ಸಂಬಂಧ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಮಿತಿಯಲ್ಲಿ ಸಂಚರಿಸುವ ಎಲ್ಲಾ ಆಟೋಗಳು ಅಕ್ಟೋಬರ್ 31, 2025 ರೊಳಗೆ ಹೊಸ ದರಗಳನ್ನು ಪ್ರತಿಬಿಂಬಿಸಲು ತಮ್ಮ ಮೀಟರ್‌ಗಳನ್ನು ನವೀಕರಿಸಬೇಕು ಮತ್ತು ಮರು ಪರಿಶೀಲಿಸಬೇಕಾಗಿ ಸೂಚಿಸಲಾಗಿದೆ.

7-ಸೀಟರ್.. ಹೊಸ ಫ್ಯಾಮಿಲಿ ಕಾರಿದು, ಅಗ್ಗದ ಕಿಯಾ ಕ್ಯಾರೆನ್ಸ್..

ಬಹುನಿರೀಕ್ಷಿತ ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಇವಿ (Kia Carens Clavis EV) ಮಂಗಳವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದೊಂದು ಎಲೆಕ್ಟ್ರಿಕ್ ಎಂಪಿವಿಯಾಗಿದ್ದು, ಹಲವು ಹೊಸತನಗಳಿಗೆ ಸಾಕ್ಷಿಯಾಗಿದ್ದು, ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅದಕ್ಕೆ ತಕ್ಕಂತೆ ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದ್ದು, ಒಂದು ಪರಿಪೂರ್ಣ ಫ್ಯಾಮಿಲಿ ಕಾರಾಗಿ ಹೊರಹೊಮ್ಮಿದೆ. ಬನ್ನಿ, ನೂತನ ಎಂಪಿವಿ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ರಸ್ತೆ ಮೇಲಿನ ಅಂಬಾರಿಯಂತಿದೆ.. ದೇಶದ ಮೊದಲ Tesla Model Y..

ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಒಡೆತನದ ಟೆಸ್ಲಾ (Tesla), ಭಾರತದ ಕಾರು ಮಾರುಕಟ್ಟೆಗೆ ಅದ್ದೂರಿಯಾಗಿ ಪಾದಾರ್ಪಣೆ ಮಾಡಿದೆ. ಇಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಮೇಕರ್ ಮ್ಯಾಕ್ಸಿಟಿ ಮಾಲ್‌ನಲ್ಲಿ, ದೇಶದ ಮೊಟ್ಟ ಮೊದಲ ಕಾರು ಶೋರೂಂನ್ನು ತೆರೆದಿದೆ. ಪ್ರಪ್ರಥಮ ಕಾರಾಗಿ ಮಾಡೆಲ್ ವೈ (Model Y) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಮಾರಾಟಕ್ಕೆ ತಂದಿದೆ. ನಾವಿಲ್ಲಿ ಈ ಕಾರಿನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

Tesla: ಟೆಸ್ಲಾ ಕಾರು ಬಿಡುಗಡೆ: ಜರ್ಮನಿಯನ್ನು ಹಿಂದಿಕ್ಕಿದ ಭಾರತ!

ಟೆಸ್ಲಾ ಮಾಡೆಲ್ ವೈ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಎರಡು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಮೂಲ ರಿಯರ್-ವೀಲ್ ಡ್ರೈವ್ (RWD) ವೇರಿಯೆಂಟ್ ಬೆಲೆ ರೂ. 59.89 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಲಾಂಗ್ ರೇಂಜ್ RWD ವೇರಿಯೆಂಟ್ ಬೆಲೆ ರೂ. 67.89 ಲಕ್ಷ (ಎಕ್ಸ್-ಶೋರೂಂ) ಇದೆ. ಬುಕಿಂಗ್‌ಗಳು ತೆರೆದಿದ್ದು, ರೂ. 22,220 ಟೋಕನ್ ಮೊತ್ತದೊಂದಿಗೆ ಬುಕ್ ಮಾಡಿಕೊಳ್ಳಬಹುದು. ಆರಂಭಿಕ ಮಾಡಲ್‌ಗಳನ್ನು ಚೀನಾದಲ್ಲಿರುವ ಟೆಸ್ಲಾದ ಶಾಂಘೈ ಗಿಗಾಫ್ಯಾಕ್ಟರಿಯಿಂದ ಕಂಪ್ಲೀಟ್ ಬಿಲ್ಟ್ ಯೂನಿಟ್‌ಗಳಾಗಿ (CBUs) ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ.

ಭಾರತದಲ್ಲಿ ಮೊದಲ ಶೋ ರೂಂ ಆರಂಭಿಸಿದ ಟೆಸ್ಲಾ

ಟೆಸ್ಲಾ ತನ್ನ ಮೊದಲ ಶೋರೂಮ್ ಅನ್ನು ಮುಂಬೈನಲ್ಲಿ ಪ್ರಾರಂಭಿಸುತ್ತದೆ, ಇದು ಮಾಡೆಲ್ ವೈ ಎಸ್‌ಯುವಿಯೊಂದಿಗೆ ಭಾರತದ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಗಮನಾರ್ಹ ಪ್ರವೇಶವನ್ನು ಸೂಚಿಸುತ್ತದೆ.

Tesla: ಭಾರತದಲ್ಲಿ ಮೊದಲ ಟೆಸ್ಲಾ ಕಾರು ಬಿಡುಗಡೆ: ಶೋರೂಂ ಎಲ್ಲಿದೆ?

ಭಾರತದಲ್ಲಿ ಹಲವು ಅಡತಡೆಗಳ ನಂತರ ಕೊನೆಗೂ ಅಂತರಾಷ್ಟ್ರೀಯ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ 'ಟೆಸ್ಲಾ' (Tesla), ದೇಶಕ್ಕೆ ಲಗ್ಗೆಯಿಟ್ಟಿದೆ. ತನ್ನ ಮೊದಲ ಕಾರನ್ನು ಕೂಡ ಬಿಡುಗಡೆ ಮಾಡಿ ಭಾರೀ ಸದ್ದು ಮಾಡುತ್ತಿದೆ. ಮುಂಬೈನಲ್ಲಿ ಟೆಸ್ಲಾದ ಮೊದಲ ಶೋರೂಂ ಅದ್ದೂರಿಯಾಗಿ ಇಂದು ಪ್ರಾರಂಭಿಸಲಾಗಿದ್ದು, ಇದು ದೇಶದ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಗಮನಾರ್ಹ ಪ್ರವೇಶವನ್ನು ಸೂಚಿಸುತ್ತದೆ. ಈ ಶೋರೂಂ ಟೆಸ್ಲಾ ಕಂಪನಿಗೆ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಮತ್ತಷ್ಟು ವಿಸ್ತರಿಸುವ ಕಂಪನಿಯ ಉದ್ದೇಶಗಳನ್ನು ಸೂಚಿಸುತ್ತದೆ.
Advertisement

ಟೆಸ್ಲಾದ ಶೋರೂಂ ಲೋಕಾರ್ಪಣೆ: ಅಮೆರಿಕದ ಅಂಬಾರಿ ಭಾರತಕ್ಕೆ..

ಅಮೆರಿಕ ಮೂಲದ ಟೆಸ್ಲಾ (Tesla) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಒಡೆತನದಲ್ಲಿದೆ. ಜಾಗತಿಕವಾಗಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ತನ್ನದೆಯಾದ ಛಾಪನ್ನು ಮಾಡಿಸಿದೆ. ಮಾಡೆಲ್ ವೈ, ಮಾಡೆಲ್ ಎಸ್, ಮಾಡೆಲ್ 3, ಮಾಡೆಲ್ ಎಕ್ಸ್ ಮತ್ತು ಸೈಬರ್‌ಟ್ರಕ್ ಒಳಗೊಂಡಂತೆ ಹತ್ತಾರು ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಭಾರತಕ್ಕೂ ಅಧಿಕೃತವಾಗಿ ಪ್ರವೇಶಿಸಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಜಬರ್ದಸ್ತ್ ಟ್ರಯಂಫ್ ಸ್ಕ್ರಾಂಬ್ಲರ್ 400 ಎಕ್ಸ್‌ಸಿ ಬೈಕ್ ರಿವ್ಯೂ..

Triumph Scrambler 400 XC ಯ ಸಂಪೂರ್ಣ ವಿಮರ್ಶೆ, ಬೆಲೆ, ವಿನ್ಯಾಸ, ಎಂಜಿನ್ ಮತ್ತು ಕಾರ್ಯಕ್ಷಮತೆ ಸೇರಿದಂತೆ. ಭಾರತದಲ್ಲಿನ ಮಧ್ಯಮ ಸಾಮರ್ಥ್ಯದ ಬೈಕ್ ಬಗ್ಗೆ ತಿಳಿಯಿರಿ.

Vinfast: ಭಾರತದಲ್ಲಿ ಹೊಸ ಕಾರು ಕಂಪನಿ: ಬುಕಿಂಗ್ ಪ್ರಾರಂಭ

ಈ ವರ್ಷದ ಆರಂಭದಲ್ಲಿ ನಡೆದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದ ವಿಯೆಟ್ನಾಂ ಮೂಲದ ಪ್ರಮುಖ ಕಾರು ಕಂಪನಿ 'ವಿನ್‌ಫಾಸ್ಟ್', ಇದೀಗ ತನ್ನ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿಗಳಾದ ವಿಎಫ್ 7 ಮತ್ತು ವಿಎಫ್ 6 ಕಾರುಗಳಿಗಾಗಿ ಇಂದು ಭಾರತೀಯ ಮಾರುಕಟ್ಟೆಯಾದ್ಯಂತ ಬುಕಿಂಗ್ ಅನ್ನು ಅಧಿಕೃತವಾಗಿ ತೆರೆದಿದೆ. ತಮಿಳುನಾಡಿನ ತೂತುಕುಡಿಯಲ್ಲಿ ಕಂಪನಿಯ ಸ್ಥಾವರ ಉದ್ಘಾಟನೆಯ ನಂತರ, ಈ ಮಾಡಲ್‌ಗಳನ್ನು ಆಗಸ್ಟ್‌ನಲ್ಲಿ ಅಧಿಕೃತವಾಗಿ ಸಾರ್ವಜನಿಕ ಮಾರಾಟಕ್ಕೆ ಬಿಡುಗಡೆ ಮಾಡಲಾಗುವುದು ಮತ್ತು ನಂತರ ವಿತರಣೆಗಳು ನಡೆಯಲಿವೆ ಎಂದು ಕಂಪನಿ ತಿಳಿಸಿದೆ.

ಸುಂಕದ ಕಳವಳಗಳ ನಡುವೆಯೂ ಭಾರತೀಯ ಷೇರು ಮಾರುಕಟ್ಟೆ ಎಚ್ಚರಿಕೆಯಿಂದ ತೆರೆದಿದೆ.

ಅಮೆರಿಕದ ಸುಂಕ ಅನಿಶ್ಚಿತತೆಗಳಿಗೆ ಹೂಡಿಕೆದಾರರು ಪ್ರತಿಕ್ರಿಯಿಸುತ್ತಿರುವುದರಿಂದ ಭಾರತೀಯ ಷೇರು ಮಾರುಕಟ್ಟೆ ಎಚ್ಚರಿಕೆಯಿಂದ ತೆರೆದುಕೊಳ್ಳುತ್ತದೆ, ನಿಫ್ಟಿ ಮತ್ತು ಸೆನ್ಸೆಕ್ಸ್ ಆರಂಭಿಕ ಲಾಭಗಳನ್ನು ತೋರಿಸುತ್ತಿವೆ.

27 Km ಮೈಲೇಜ್.. 7-ಸೀಟರ್, 5 ಲಕ್ಷ.. 6 ಏರ್‌ಬ್ಯಾಗ್‌ಗಳು, ಈ ಬಡವರ..

ಮಾರುತಿ ಸುಜುಕಿ ಇಕೋ (Maruti Suzuki Eeco) ಪ್ರಮುಖ ವ್ಯಾನ್ ಆಗಿ ಹೊರಹೊಮ್ಮಿದೆ. ಇದು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಕಡಿಮೆ ಬೆಲೆಯಲ್ಲಿ ಕೂಡ ಸಿಗುತ್ತದೆ. ಅದರ ಹೊರತಾಗಿಯೂ ಇದೇ ಜೂನ್‌ನಲ್ಲಿ ಈ ಕಾರಿನ ಮಾರಾಟ ಸಂಖ್ಯೆ ಒಂದಷ್ಟು ಕುಸಿತವಾಗಿದೆ. ಒಟ್ಟು 9,340 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 13.29% ಕುಸಿತವಾಗಿದೆ. 2024ರ ಜೂನ್‌ ತಿಂಗಳಲ್ಲಿ 10,771 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.