ಮಾರುಕಟ್ಟೆ ವಿಶ್ಲೇಷಣೆ: ಬ್ಯಾಂಕ್ ನಿಫ್ಟಿ ಮತ್ತು ನಿಫ್ಟಿ ಪ್ರವೃತ್ತಿಗಳು

ಬ್ಯಾಂಕ್ ನಿಫ್ಟಿ ಮತ್ತು ನಿಫ್ಟಿ ಸೂಚ್ಯಂಕಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳನ್ನು ಅನ್ವೇಷಿಸಿ, ಇದರಲ್ಲಿ ಪ್ರಮುಖ ಬೆಂಬಲ ಮಟ್ಟಗಳು ಮತ್ತು ವ್ಯಾಪಾರಿಗಳಿಗೆ ಸ್ಟಾಕ್ ಶಿಫಾರಸುಗಳು ಸೇರಿವೆ.

Maruti: 26.32 ಕಿ.ಮೀ ಮೈಲೇಜ್... ಆದ್ರೆ ಯಾರೂ ಖರೀದಿಸುತ್ತಿಲ್ಲ!

ಮಾರುತಿ ಸುಜುಕಿ MPV ಗಳ ಒಟ್ಟಾರೆ ಮಾರುಕಟ್ಟೆಯು ಒತ್ತಡವನ್ನು ಕಂಡಿದ್ದು, ಪ್ರಮುಖ ಕಾರೊಂದು ತೀರಾ ಕುಸಿತವನ್ನು ಕಂಡು ಇಳಿಮುಖ ಪ್ರವೃತ್ತಿಯನ್ನು ಮುಂದುವರೆಸಿದೆ. ಇದು ಮಾರುತಿ ಸುಜುಕಿ ಕಂಪನಿಯ ಜನಪ್ರಿಯ 6 ಸೀಟರ್ ಪ್ರೀಮಿಯಂ ಎಂಪಿವಿಯಾಗಿದ್ದರು, ಇತ್ತೀಚಿನ ಅಪ್‌ಡೇಟ್‌ಗಳ ಕೊರತೆ ಮತ್ತು ಅದರ ಬೆಲೆಗೆ ತಕ್ಕ ಮೌಲ್ಯದ ಕೊರತೆಯು ಮಾರಾಟದ ಕುಸಿತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಮಾರಾಟದಲ್ಲಿನ ಈ ನಿರಂತರ ಕುಸಿತವು ಮಾರುಕಟ್ಟೆಯಲ್ಲಿ ಕಾರಿನ ಭವಿಷ್ಯದ ಬಗ್ಗೆ ಕಳವಳವನ್ನು ಹೆಚ್ಚಿಸಿದೆ. ಅಷ್ಟಕ್ಕೂ ಈ ಕಾರು ಯಾವುದು ಬನ್ನಿ ತಿಳಿಯೋಣ.

Tesla: ಅಬ್ಬರ ಶುರು.. ನಾಳೆ ಭಾರತದಲ್ಲಿ ಟೆಸ್ಲಾದ ಮೊದಲ ಶೋರೂಂ..

ವಿಶ್ವದ ನಂಬರ್ 1 ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಮಾಲೀಕತ್ವದ ಟೆಸ್ಲಾ (Tesla) ಜನಪ್ರಿಯ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾಗಿದ್ದು, ವಿವಿಧ ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಮಾಡೆಲ್ ಎಸ್, ಮಾಡೆಲ್ 3, ಮಾಡೆಲ್ ಎಕ್ಸ್ ಹಾಗೂ ಸೈಬರ್‌ಟ್ರಕ್ ಸೇರಿದಂತೆ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಅಂತಿಮವಾಗಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲು ಹಣಿಯಾಗುತ್ತಿದೆ.

Amazon: ಅಗ್ಗದ ಮೋಟಾರ್‌ಸೈಕಲ್ ಈಗ ಅಮೇಜ್‌ನ್‌ನಲ್ಲಿ ಖರೀದಿಗೆ ಲಭ್ಯ!

ಭಾರತದ ಪ್ರಮುಖ ಸ್ವದೇಶಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿಯಾದ 'ಓಬೆನ್ ಎಲೆಕ್ಟ್ರಿಕ್' (Oben Electric), ತನ್ನ ಜನಪ್ರಿಯ ಎಲೆಕ್ಟ್ರಿಕ್ ಬೈಕ್ ಆಗಿರುವ 'ರೋರ್ ಇಝಡ್' (Rorr EZ) ಅನ್ನು ಅಮೇಜಾನ್ (Amazon) ‌ನಲ್ಲಿ ಖರೀದಿಗೆ ಲಭ್ಯವಾಗಿಸುವುದನ್ನು ಘೋಷಿಸಿದೆ. ಭಾರತದಾದ್ಯಂತ ಇವಿ ವಾಹನಗಳ ಖರೀದಿಯನ್ನು ಹೆಚ್ಚಿಸಲು ಇ-ಕಾಮರ್ಸ್ ಅನ್ನು ಬಳಸಿಕೊಳ್ಳುತ್ತಿದ್ದು, ಒಬೆನ್ ಎಲೆಕ್ಟ್ರಿಕ್‌ನ ಈ ಕ್ರಮವು ಮಹತ್ವದ ಹೆಜ್ಜೆಯಾಗಿದೆ. ಈ ಡಿಜಿಟಲ್ ಆಕ್ರಮಣವು ಕಂಪನಿಯ ವಿಸ್ತರಣಾ ತಂತ್ರದ ಭಾಗವಾಗಿದ್ದು, ಶೋರೂಮ್ ನೆಟ್‌ವರ್ಕ್ ಜೊತೆಗೆ ಆನ್‌ಲೈನ್ ಮಾರಾಟದೊಂದಿಗೆ ಗ್ರಾಹಕರಿಗೆ ಖರೀದಿಯನ್ನು ಇನ್ನೂ ಸುಲಭವಾಗಿಸಲಾಗಿದೆ.
Advertisement

Yamaha: 2025ರ ಹೊಸ ಯಮಹಾ ಎಫ್‌ಜಡ್-ಎಕ್ಸ್ ಹೈಬ್ರಿಡ್ ಬೈಕ್ ಬಿಡುಗಡೆ..

ಜಪಾನ್ ಮೂಲದ ಯಮಹಾ (Yamaha), ಪ್ರಮುಖ ದ್ವಿಚಕ್ರ ವಾಹನ ತಯಾರಕ (two whellar) ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಬೈಕ್ ಹಾಗೂ ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಅದರಲ್ಲೂ ಕಂಪನಿಯ ಜನಪ್ರಿಯ ಮೋಟಾರ್‌ಸೈಕಲ್‌ ಆಗಿ 'ಎಫ್‌ಜಡ್-ಎಕ್ಸ್ ಹೈಬ್ರಿಡ್' ಹೊರಹೊಮ್ಮಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ಈ ಬೈಕ್‌ನ್ನು ಒಂದಷ್ಟು ನವೀಕರಣಕ್ಕೆ ಒಳಪಡಿಸಲಾಗಿದ್ದು, 2025ರ ಮಾಡೆಲ್‌ನ್ನು ಬಿಡುಗಡೆಗೊಳಿಸಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಎಚ್ಚರ ಎಚ್ಚರ.. ತಂಬಾಕಿನಷ್ಟೇ ಡೇಂಜರ್ ಸಮೋಸ್-ಜಿಲೇಬಿ..!


Hyundai Aura: ಹುಂಡೈ ಔರಾ ಈಗ ಇನ್ನೂ ಅಗ್ಗ: S AMT ಬಿಡುಗಡೆ

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ತನ್ನ ಜನಪ್ರಿಯ ಔರಾ (AURA) ಸೆಡಾನ್ ಕಾರನ್ನು, ಈಗ ಕೈಗೆಟುಕುವ S AMT (ಆಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ವೇರಿಯೆಂಟ್‌ನಲ್ಲಿ ಪರಿಚಯಿಸಿದೆ. ಈ ಕ್ರಮವು ವ್ಯಾಪಕ ಶ್ರೇಣಿಯ ಭಾರತೀಯ ಗ್ರಾಹಕರಿಗೆ, ವಿಶೇಷವಾಗಿ ಯುವ, ಮೌಲ್ಯ ಪ್ರಜ್ಞೆಯುಳ್ಳ ಖರೀದಿದಾರರು, ಅನುಕೂಲತೆ ಮತ್ತು ಸುರಕ್ಷತೆಯನ್ನು ಬಯಸುವವರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಹೆಚ್ಚಾಗಿ ಖರೀದಿಸುವಂತೆ ಮಾಡುತ್ತದೆ. ಇದು ಮಾತ್ರವಲ್ಲದೆ ಹೊಸ S AMT ವೇರಿಯೆಂಟ್ ಪ್ರಭಾವಶಾಲಿ ಫೀಚರ್ಸ್ ಹೊಂದಿದ್ದು, ಅವುಗಳಲ್ಲಿ ಹಲವು ಉನ್ನತ ವಿಭಾಗದ ವಾಹನಗಳಲ್ಲಿ ಕಂಡುಬರುತ್ತವೆ.

ಬೆಲೆಯೂ ಅಗ್ಗ.. ಬಜಾಜ್ ಪಲ್ಸರ್ ಎನ್160 ಮೋಟಾರ್‌ಸೈಕಲ್‌ನ ನೂತನ..

ಇತ್ತೀಚೆಗೆ ಬಜಾಜ್ ಪಲ್ಸರ್ ಎನ್160 (Bajaj Pulsar N160) ಬೈಕ್‌ನ ಹೊಚ್ಚ ಹೊಸ ಸಿಂಗಲ್ ಸೀಟ್ - ಡುಯಲ್ ಚಾನೆಲ್ ಎಬಿಎಸ್ ರೂಪಾಂತರವನ್ನು (ವೇರಿಯೆಂಟ್) ಮಾರಾಟಕ್ಕೆ ತರಲಾಗಿದೆ. ಇದು ಕಡಿಮೆ ಬೆಲೆಯಲ್ಲಿಯೂ ಖರೀದಿ ಲಭ್ಯವಿದ್ದು, ಅತ್ಯುತ್ತಮವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಬನ್ನಿ, ನೂತನ ರೂಪಾಂತರದ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಪ್ರಮುಖಾಂಶಗಳನ್ನು ತಿಳಿಯೋಣ.

ಕಣ್ಮರೆಯಾಗುತ್ತಿವೆ ಎಲೆಕ್ಟ್ರಿಕ್ ವಾಹನ ಕಂಪನಿಗಳು

ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ತಯಾರಿಕೆಗಾಗಿ (FAME-II) ಸರ್ಕಾರವು ಸಬ್ಸಿಡಿ ನೀಡಿ ಪ್ರೋತ್ಸಾಹಿಸಿತ್ತು. ಆದರೆ ಇದೀಗ ಸರ್ಕಾರ ನೀಡಿದ್ದ ಸಬ್ಸಿಡಿ ಗಡುವು ನಿಧಾನವಾಗಿ ಕಣ್ಮರೆಯಾಗುತ್ತಿದ್ದು, ಹಲವಾರು ಸಣ್ಣ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಗಳು ಮಾರುಕಟ್ಟೆಯಿಂದ ವೇಗವಾಗಿ ಮರೆಯಾಗುತ್ತಿವೆ. ಬೆಲೆಗಳನ್ನು ಆಕರ್ಷಕವಾಗಿಡಲು ಸಬ್ಸಿಡಿಗಳನ್ನು ಹೆಚ್ಚು ಅವಲಂಬಿಸಿದ್ದ ಸಣ್ಣ ಕಂಪನಿಗಳಿಗೆ ಇದು ತೀವ್ರವಾಗಿ ಹೊಡೆತ ಬಿದ್ದಿದೆ. ಸಬ್ಸಿಡಿ ಕಡಿತವು ಹಲವು ಸವಾಲುಗಳನ್ನು ತಂದೊಡ್ಡಿದ್ದು, ಸಣ್ಣ ಎಲೆಕ್ಟ್ರಿಕ್ ಸ್ಕೂಟರ್ ತಯಾರಕರನ್ನು ಮಾರುಕಟ್ಟೆಯಿಂದ ಹೊರಬರಲು ಒತ್ತಾಯಿಸಬಹುದು ಎಂದು ಉದ್ಯಮ ತಜ್ಞರು ಹೇಳುತ್ತಿದ್ದಾರೆ.

ನಾಳೆಯಿಂದ ಹೊಸ ಕಂಪನಿ ವಿನ್‌ಫಾಸ್ಟ್‌ನ ನೂತನ ಕಾರುಗಳಿಗೆ..

ವಿಯೆಟ್ನಾಂನ ವಿನ್‌ಫಾಸ್ಟ್ (VinFast) ಪ್ರಖ್ಯಾತ ವಾಹನ ತಯಾರಕ ಕಂಪನಿಯಾಗಿದೆ. ಅತಿ ಶೀಘ್ರದಲ್ಲೇ ದೇಶೀಯ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಮೊದಲಿಗೆ ವಿಎಫ್6 (VF6) ಹಾಗೂ ವಿಎಫ್7 (VF7) ಹೆಸರಿನ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಿದೆ. ಅದಕ್ಕಾಗಿ ದೊಡ್ಡ ಮಟ್ಟದಲ್ಲಿ ತಯಾರಿ ಮಾಡಿಕೊಳ್ಳುತ್ತಿದೆ. ಈ ಕಾರುಗಳು ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಮಾರಾಟಕ್ಕೆ ಬರುವ ಎಲ್ಲ ಸಾಧ್ಯತೆಗಳಿವೆ.

Kia: ಬಿಡುಗಡೆ ಮುನ್ನವೇ 7-ಸೀಟರ್ ಕಾರಿಗೆ ಹೆಚ್ಚಾಯ್ತು ಬೇಡಿಕೆ

ಕಿಯಾ ಕಂಪನಿಯು ನಾಳೆ (ಜುಲೈ 15) ಕಿಯಾ ತನ್ನ 2025 ರ ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಇವಿ (2025 Kia Carens Clavis EV) ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕ್ಲಾವಿಸ್ ಇವಿ ಬಿಡುಗಡೆಯಾದ ನಂತರ ಭಾರತದಲ್ಲಿ ಅದರ ಬೆಲೆ ವರ್ಗದಲ್ಲಿರುವ ಏಕೈಕ ಎಲೆಕ್ಟ್ರಿಕ್ ಎಂಪಿವಿ ಆಗಲಿದ್ದು, ಇದನ್ನು 7 ಆಸನಗಳ ವಿನ್ಯಾಸದಲ್ಲಿ ಮಾತ್ರ ನೀಡಲಾಗುವುದು. ಬಿಡುಗಡೆಗೂ ಮುನ್ನ, ಮುಂಬರುವ ಎಲೆಕ್ಟ್ರಿಕ್ ಎಂಪಿವಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ. ಅದರ ವಿನ್ಯಾಸ, ವೈಶಿಷ್ಟ್ಯಗಳು, ಒಳಾಂಗಣ ಸೇರಿದಂತೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬಡವರ ಕಾರಿದು.. 34 Km ಮೈಲೇಜ್.. 4 ಲಕ್ಷ, 6 ಏರ್‌ಬ್ಯಾಗ್..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದ್ದು, ಮಧ್ಯಮ ವರ್ಗದ ಗ್ರಾಹಕರಿಗೆ ಹೇಳಿ ಮಾಡಿಸಿದ ರೀತಿಯಲಿದೆ. ಆದರೂ ದಿನದಿಂದ ದಿನಕ್ಕೆ ಈ ಕಾರಿನ ಮಾರಾಟ ಸಂಖ್ಯೆ ಕುಸಿತವಾಗುತ್ತಿದೆ. ಅದು ಈ ಜೂನ್ ತಿಂಗಳಲ್ಲೂ ಮುಂದುವರಿದಿದ್ದು, ಒಟ್ಟು 5045 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 35.11% ಕುಸಿತವಾಗಿದೆ. 2024ರ ಇದೇ ಅವಧಿಯಲ್ಲಿ 7,775 ಯುನಿಟ್‌ಗಳನ್ನು ಮಾರಲಾಗಿತ್ತು.
Advertisement

ವ್ಯಾಪಾರ ಉದ್ವಿಗ್ನತೆಯಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಕುಸಿತ

ನಿರಾಶಾದಾಯಕ ಗಳಿಕೆ ಮತ್ತು ವ್ಯಾಪಾರ ಉದ್ವಿಗ್ನತೆಗಳಿಂದಾಗಿ ಭಾರತೀಯ ಷೇರು ಮಾರುಕಟ್ಟೆಯು ನಿಫ್ಟಿ ಮತ್ತು ಸೆನ್ಸೆಕ್ಸ್‌ನಲ್ಲಿ ಕುಸಿತವನ್ನು ಕಂಡಿದೆ. ಪ್ರಮುಖ ಬೆಂಬಲ ಮಟ್ಟಗಳನ್ನು ಪರೀಕ್ಷಿಸಲಾಗುತ್ತಿದೆ.

ನಿವೃತ್ತಿ ಇಕ್ವಿಟಿಗಾಗಿ ಬಕೆಟ್ ತಂತ್ರಗಳನ್ನು ಮೌಲ್ಯಮಾಪನ ಮಾಡುವುದು

ನಿವೃತ್ತಿಯಲ್ಲಿ ಇಕ್ವಿಟಿ ಹಿಂಪಡೆಯುವಿಕೆಗಾಗಿ ಬಕೆಟ್ ತಂತ್ರಗಳ ಪರಿಣಾಮಕಾರಿತ್ವ ಮತ್ತು ಅಪಾಯ ನಿರ್ವಹಣೆಯ ಮೇಲೆ ಅವುಗಳ ಪ್ರಭಾವವನ್ನು ಅನ್ವೇಷಿಸುವುದು.

ಭಾರತದಲ್ಲಿ ಸಾರ್ವಜನಿಕ ಭವಿಷ್ಯ ನಿಧಿಗಾಗಿ NRI ಮಾರ್ಗಸೂಚಿಗಳು

ಅಸ್ತಿತ್ವದಲ್ಲಿರುವ ಖಾತೆದಾರರಿಗೆ ಮಾರ್ಗಸೂಚಿಗಳು ಮತ್ತು ಪ್ರಯೋಜನಗಳನ್ನು ಒಳಗೊಂಡಂತೆ, NRI ಗಳು ಭಾರತದಲ್ಲಿ ತಮ್ಮ ಸಾರ್ವಜನಿಕ ಭವಿಷ್ಯ ನಿಧಿ ಖಾತೆಗಳನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಅನ್ವೇಷಿಸಿ.

ಯುಐಡಿಎಐನ ಆಧಾರ್ ಮರುಸಕ್ರಿಯಗೊಳಿಸುವ ಪ್ರಕ್ರಿಯೆಯ ವಿವರಣೆ

ಭಾರತದಲ್ಲಿ ಮರಣ ದಾಖಲೆ ದೋಷಗಳಿಂದಾಗಿ ತಪ್ಪಾಗಿ ನಿಷ್ಕ್ರಿಯಗೊಳಿಸಲಾದ ಆಧಾರ್ ಸಂಖ್ಯೆಗಳನ್ನು ಪುನಃ ಸಕ್ರಿಯಗೊಳಿಸಲು UIDAI ನ ಕಾರ್ಯವಿಧಾನದ ಬಗ್ಗೆ ತಿಳಿಯಿರಿ.

Toyota: 8-ಸೀಟರ್.. ಜನಮೆಚ್ಚಿದ ಕಾರಿದು, ಆದ್ರೂ ಈ ಟೊಯೊಟಾ..

ಟೊಯೊಟಾ ಇನ್ನೋವಾ (Toyota Innova) ಜನ ಮೆಚ್ಚಿದ ಎಂಪಿವಿಯಾಗಿದೆ. ಇದರ ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳಿಗೆ ಗ್ರಾಹಕರು ಕೂಡ ಮನಸೋತಿದ್ದಾರೆ. ಆದರೂ, ಈ ಕಾರಿನ ಮಾರಾಟ ಸಂಖ್ಯೆ ಕುಸಿತವಾಗಿದೆ. ಇದೇ ಜೂನ್‌ನಲ್ಲಿ ಒಟ್ಟು 8,802 ಯುನಿಟ್ ಇನ್ನೋವಾ ಎಂಪಿವಿಗಳು ಮಾರಾಟವಾಗಿವೆ. ಈ ಮೂಲಕ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -6% ಇಳಿಕೆಯಾಗಿದೆ. 2024ರ ಜೂನ್‌ನಲ್ಲಿ 9,412 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

24 ಕಿ.ಮೀ ಮೈಲೇಜ್.. 5 ಸೀಟರ್, 8 ಲಕ್ಷ.. ಕಿಯಾ ಸೋನೆಟ್‌ಗೆ 3 ಬದಲಿ..

ಕಿಯಾ ಸೋನೆಟ್‌ (Kia Sonet) ಜನಪ್ರಿಯ ಎಸ್‌ಯುವಿಯಾಗಿದೆ. ಇದು ರೂ.8 ಲಕ್ಷದಿಂದ ರೂ.15.60 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1-ಲೀ. ಟರ್ಬೊ ಪೆಟ್ರೋಲ್, 1.2-ಲೀ. ಪೆಟ್ರೋಲ್ ಹಾಗೂ 1.5-ಲೀ. ಡೀಸೆಲ್ ಎಂಜಿನ್‌ನ್ನು ಪಡೆದಿದೆ. 18 ರಿಂದ 24 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 5 ಆಸನಗಳಿವೆ. 10.25-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಸನ್‌ರೂಫ್ ಹಾಗೂ ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳನ್ನು ಪಡೆದಿದೆ. ನೀವು ಸೋನೆಟ್‌ಗೆ ಪರ್ಯಾಯವಾಗಿ ಈ 3 ಕಾರುಗಳನ್ನು ಖರೀದಿ ಮಾಡಬಹುದು. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಬಜಾಜ್ NS 400Z ರಿವ್ಯೂ: ಅಗ್ಗದ ಸ್ಟ್ರೀಟ್ ಫೈಟರ್

Bajaj NS 400Z ನ ಸಂಪೂರ್ಣ ವಿಮರ್ಶೆ: ವೈಶಿಷ್ಟ್ಯಗಳು, ವಿಶೇಷಣಗಳು, ಕಾರ್ಯಕ್ಷಮತೆ ಮತ್ತು ಬೆಲೆ. ಹೊಸ 400cc ಬೈಕ್‌ನ ಬಗ್ಗೆ ತಿಳಿದುಕೊಳ್ಳಿ.

ಮೊನ್ನೆಯಷ್ಟೆ ಬಿಡುಗಡೆ... ಕೇವಲ 50 ಸಾವಿರ ಬೆಲೆ

ಹೊಸದಾಗಿ ಬಿಡುಗಡೆಯಾದ ಜೀಲಿಯೊ ಈವಾ ಲೋ - ಸ್ಪೀಡ್ ಫೇಸ್‌ಲಿಫ್ಟ್ ಎಲೆಕ್ಟ್ರಿಕ್ ಸ್ಕೂಟರ್ ನಗರ ಪ್ರಯಾಣಿಕರು, ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಸಣ್ಣ ಕೆಲಸಗಾರರಿಗೆ ಅನುಗುಣವಾಗಿ ಹಲವಾರು ಗಮನಾರ್ಹ ವೈಶಿಷ್ಟ್ಯಗಳು ಮತ್ತು ಸುಧಾರಣೆಗಳನ್ನು ಪಡೆದು ಬಿಡುಗಡೆಯಾಗಿದೆ. ಈ ಫೇಸ್‌ಲಿಫ್ಟೆಡ್ ಈವಾ ಮಾದರಿಯು ಸುಧಾರಿತ ಸವಾರಿ ಸೌಕರ್ಯ, ವರ್ಧಿತ ಸುರಕ್ಷತೆ ಮತ್ತು ಅನುಕೂಲಕರವಾದ ಹಲವು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಕೈಗೆಟುಕುವ ಬೆಲೆಯಲ್ಲಿ ದೈನಂದಿನ ನಗರ ಸವಾರಿಗೆ ಬೆಸ್ಟ್ ಆಯ್ಕೆಯಾಗಿದೆ. ಈ ಸ್ಕುಟರ್ ಕುರಿತ ಹಲವು ವಿಶೆಷತೆಗಳು ಇಲ್ಲಿವೆ.
Advertisement

ಭಾರತ್ಕಕೆ ಹೊಸ ಬ್ರಾಂಡ್... ಅಗ್ಗದ ಕಾರುಗಳನ್ನು ನೀಡಲು ಸರ್ವಸಿದ್ಧ

ಭಾರತಕ್ಕೆ ಹೊಸ ಕಾರು ಕಂಪನಿ ಎಂಟ್ರಿಕೊಟ್ಟಿದೆ, ಈ ವರ್ಷಾರಂಭದಲ್ಲಿ (ಜನವರಿ) ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ವಿನ್‌ಫಾಸ್ಟ್ (VinFast) ಎಂಬ ವಿಯೆಟ್ನಾಂ ಮೂಲದ ಕಾರು ತಯಾರಕ ಕಂಪನಿ ತನ್ನ VF 6 ಮತ್ತು VF 7 ಮಾಡಲ್‌ಗಳನ್ನು ಪ್ರದರ್ಶಿಸಿತ್ತು. ಈ ಕಾರುಗಳು ಈಗ ಶೀಘ್ರದಲ್ಲೆ ಭಾರತದಲ್ಲಿ ಬಿಡುಗಡೆಯಾಗಲಿವೆ. ಕಂಪನಿಯು ತಮಿಳುನಾಡಿನಲ್ಲಿ ತನ್ನ ಉತ್ಪಾದನಾ ಸ್ಥಾವರವನ್ನು ಹೊಂದಿದ್ದು, ಕಾರುಗಳ ನಿರ್ಮಾಣಕ್ಕೂ ಸರ್ವಸಿದ್ಧಗೊಂಡಿದೆ. ಇದು ಹೀಗಿದ್ದರೇ ಇದೀಗ ದೇಶಾದ್ಯಂತ 27 ನಗರಗಳಲ್ಲಿ 32 ಡೀಲರ್‌ಶಿಪ್‌ಗಳಿಗೆ 13 ಪ್ರಮುಖ ಡೀಲರ್ ಗುಂಪುಗಳೊಂದಿಗೆ ಡೀಲರ್ ಪಾಲುದಾರ ಒಪ್ಪಂದಗಳಿಗೆ ಕಂಪನಿ ಸಹಿ ಹಾಕಿದೆ.

Tesla: ಕೊನೆಗೂ ಭಾರತಕ್ಕೆ ಎಂಟ್ರಿ ಕೊಟ್ಟ ಟೆಸ್ಲಾ: ಮೊದಲ ಡೀಲರ್‌ಶಿಪ್

ಟೆಸ್ಲಾ (Tesla) ತನ್ನ ಮೊದಲ ಇಂಡಿಯಾ ಎಕ್ಸ್‌ಪೀರಿಯೆನ್ಸ್ ಸೆಂಟರ್ (Experience Centre) ಅನ್ನು ಜುಲೈ 15, 2025 ರಂದು ಮುಂಬೈನಲ್ಲಿ ತೆರೆಯಲಿದೆ. ಈ ಎಕ್ಸ್‌ಪೀರಿಯೆನ್ಸ್ ಸೆಂಟರ್ ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿದೆ. ಈ 4,000 ಚದರ ಅಡಿ ವಿಸ್ತೀರ್ಣದ ಸ್ಥಳವು ಭಾರತೀಯ ಮಾರುಕಟ್ಟೆಗೆ ಟೆಸ್ಲಾದ ಔಪಚಾರಿಕ ಪ್ರವೇಶವನ್ನು ಗುರುತಿಸುತ್ತದೆ. ಇದು "ಅನುಭವ ಕೇಂದ್ರ" ವಾಗಿ ಕಾರ್ಯನಿರ್ವಹಿಸುತ್ತದೆ, ಇಲ್ಲಿ ಸಂದರ್ಶಕರು ಟೆಸ್ಲಾದ ಎಲೆಕ್ಟ್ರಿಕ್ ವಾಹನಗಳನ್ನು ಅನ್ವೇಷಿಸಬಹುದು, ಮಾದರಿಗಳನ್ನು ಹೋಲಿಸಬಹುದು, ಬೆಲೆಗಳನ್ನು ಪರಿಶೀಲಿಸಬಹುದು ಮತ್ತು ಆರ್ಡರ್‌ಗಳನ್ನು ಕಾನ್ಫಿಗರ್ ಮಾಡಬಹುದು.

Kinetic: ಕೈನೆಟಿಕ್ ಮತ್ತೆ 3 ಹೊಸ ಸ್ಕೂಟರ್‌ಗಳ ಬಿಡುಗಡೆಗೆ ಸಜ್ಜು

ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿರುವ ಕೈನೆಟಿಕ್ ಗ್ರೀನ್ ಮುಂದಿನ 18 ತಿಂಗಳುಗಳಲ್ಲಿ ಮೂರು ಹೊಸ ಇ-ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಪ್ಲಾನ್ ಮಾಡಿದೆ. ಮೊದಲ ಮಾಡಲ್ 2025ರ ದ್ವಿತಿಯಾರ್ಧದ ಹಬ್ಬದ ಸೀಸನ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಂಪನಿಯು ಇಟಲಿಯ ಟೊರಿನೊ ಡಿಸೈನ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಹೊಸ ಶ್ರೇಣಿಯ ಅಲ್ಟ್ರಾ - ಫ್ಯೂಚರಿಸ್ಟಿಕ್ ಸ್ಕೂಟರ್‌ಗಳನ್ನು ಸಹ - ರಚಿಸಿದೆ, ಇದು ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಶ್ರೇಣಿಯ ಶೈಲಿ ಮತ್ತು ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆ ಪಡೆಯಲಿದೆ.

17 ಕಿ.ಮೀ ಮೈಲೇಜ್, 12 ಲಕ್ಷ.. ಹೊಸ ಮಾರುತಿ ಎಸ್‌ಯುವಿ ಖರೀದಿಸಬೇಕೇ..

ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ವಿಶ್ವಾಸಾರ್ಹ ಆಫ್-ರೋಡ್ ಎಸ್‌ಯುವಿಯಾಗಿದೆ. ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಹೀಗಾಗಿ, ಮಾರಾಟ ಪ್ರಮಾಣವು ಸ್ಥಿರವಾಗಿದೆ. ನೀವು ಹೊಚ್ಚ ಹೊಸ 'ಜಿಮ್ನಿ' ಎಸ್‌ಯುವಿ ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ನಾವಿಲ್ಲಿ, ಈ ಕಾರಿನ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ಮಹೀಂದ್ರಾ XUV 3XO 'REVX' ಸಿರೀಸ್ ಇತ್ತೀಚೆಗೆ ಬಿಡುಗಡೆ

ಪ್ರಮುಖ ಎಸ್‌ಯುವಿ ತಯಾರಕ ಕಂಪನಿಯಾಗಿರುವ ಮಹೀಂದ್ರಾ ತನ್ನ ಹೊಸ XUV 3XO 'REVX' ಸೀರೀಸ್ ಅನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದು ತನ್ನ ಜನಪ್ರಿಯ ಸಬ್ - ಕಾಂಪ್ಯಾಕ್ಟ್ SUV ಶ್ರೇಣಿಯನ್ನು ಸ್ಪೋರ್ಟಿಯರ್ ಸ್ಟೈಲಿಂಗ್, ವರ್ಧಿತ ಫೀಚರ್ಸ್ ಮತ್ತು ಸ್ಪರ್ಧಾತ್ಮಕ ಬೆಲೆಯೊಂದಿಗೆ ವಿಸ್ತರಿಸಿದೆ. REVX ಸಿರೀಸ್ ಡಿಸೈನ್, ತಂತ್ರಜ್ಞಾನ ಮತ್ತು ಹೈ-ಪರ್ಫಾಮೆನ್ಸ್ ಮಿಶ್ರಣವನ್ನು ಬಯಸುವ ಗ್ರಾಹಕರಿಗೆ ಇದನ್ನು ಪರಿಚಯಿಸಲಾಗಿದೆ. ಮಹೀಂದ್ರಾ XUV 3XO 'REVX' ಸಿರೀಸ್‌ನ ಟಾಪ್ ವಿಶೇಷತೆಗಳು ಇಲ್ಲಿವೆ.