28 Km ಮೈಲೇಜ್.. 7 ಲಕ್ಷ, 5-ಸೀಟರ್.. ಆದರೂ ಈ ಟೊಯೊಟಾ ಕಾರನ್ನು..

ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ (Toyota Urban Cruiser Taisor) ಪ್ರಖ್ಯಾತ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಇದು ಮಾರುತಿ ಸುಜುಕಿ ಫ್ರಾಂಕ್ಸ್ ಕಾರಿನ ರೀ-ಬ್ಯಾಡ್ಜ್ ಮಾಡೆಲ್ ಆಗಿದ್ದು, 2024ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಆರಂಭದಲ್ಲಿ ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿತ್ತು. ಅದರ ಹೊರತಾಗಿ ದಿನದಿಂದ ದಿನಕ್ಕೆ ಕಾರಿನ ಮಾರಾಟ ಸಂಖ್ಯೆ ಕುಸಿತವಾಗುತ್ತಿದೆ. ಈ ಜೂನ್ ತಿಂಗಳಲ್ಲೂ ಅದು ಮುಂದುವರಿದಿದ್ದು, ಒಟ್ಟು 2,408 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಇದರೊಂದಿಗೆ ವರ್ಷದಿಂದ ವರ್ಷಕ್ಕೆ ಮಾರಾಟ ಪ್ರಮಾಣವು ಶೇಕಡ -24% ಇಳಿಕೆಯಾಗಿದೆ. 2024ರ ಇದೇ ಅವಧಿಯಲ್ಲಿ 3,185 ಯುನಿಟ್‌ನ್ನು ಮಾರಲಾಗಿತ್ತು.

BMTC: ಬಿಎಂಟಿಸಿಗೆ 148 ಟಾಟಾ ಎಲೆಕ್ಟ್ರಿಕ್ ಬಸ್‌ಗಳು

ಸಾರ್ವಜನಿಕ ಸಾರಿಗೆ ಸೇವೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಹಾಗೂ ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಹನ ಮಾಲಿನ್ಯ ತಡೆಗಟ್ಟಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC), ಸತತವಾಗಿ 4 ವರ್ಷಗಳಿಂದ ಎಲೆಕ್ಟ್ರಿಕ್ ಬಸ್ಸುಗಳನ್ನು ಪರಿಚಯಿಸುತ್ತಿದೆ. ಇಲ್ಲಿಯವರೆಗೆ 1,436 ಎಲೆಕ್ಟ್ರಿಕ್ ಬಸ್ಸುಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಪ್ರತಿ ದಿನ 1,436 ಎಲೆಕ್ಟ್ರಿಕ್ ಬಸ್ಸುಗಳು ಓಡಾಡುವ ಮೂಲಕ, ಸುಮಾರು 2.07 ಲಕ್ಷ ಕೆ.ಜಿ CO2 (ಇಂಗಾಲದ ಡೈ ಆಕ್ಸೈಡ್) ಅನ್ನು ತಡೆಗಟ್ಟುವ ಜೊತೆಗೆ ಸುಮಾರು 77 ಸಾವಿರ ಲೀಟರ್‌ ಇಂಧನವನ್ನು ಉಳಿತಾಯ ಮಾಡಿರುವುದಾಗಿ ಬಿಎಂಟಿಸಿ ತಿಳಿಸಿದೆ.

30 ಕಿ.ಮೀ ಮೈಲೇಜ್.. 5-ಸೀಟರ್, ಇನ್ನು 6.90 ಲಕ್ಷದ ಈ ಟೊಯೊಟಾ..

ಟೊಯೊಟಾ ಗ್ಲಾನ್ಜಾ (Toyota Glanza) ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಆಗಿದೆ. ಈ ಕಾರು ಹೆಚ್ಚು ಅತ್ಯಾಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಇದೇ 'ಗ್ಲಾನ್ಜಾ' ಹ್ಯಾಚ್‌ಬ್ಯಾಕ್‌ನ್ನು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸಲು ನವೀಕರಿಸಿಯೂ ಮಾರಾಟಕ್ಕೆ ತರಲಾಗಿದೆ. ಬನ್ನಿ, ಆ ಬಗ್ಗೆ ಇಲ್ಲಿದೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಹೈ-ವೋಲ್ಟೇಜ್ ಬ್ಯಾಟರಿ ಮರುಬಳಕೆಗಾಗಿ ವಿನ್‌ಫಾಸ್ಟ್ ಹೊಸ ಒಪ್ಪಂದ

ವಿಯೆಟ್ನಾಂ ಮೂಲದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕರಾದ ವಿನ್‌ಫಾಸ್ಟ್ (Vinfast), ಭಾರತದಲ್ಲಿ ಹೈ - ವೋಲ್ಟೇಜ್ (HV) ಬ್ಯಾಟರಿ ಮರುಬಳಕೆ ಮತ್ತು ಮರುಬಳಕೆಯನ್ನು ಮುನ್ನಡೆಸಲು ಭಾರತೀಯ ಕ್ಲೀನ್ - ಟೆಕ್ ಕಂಪನಿಯಾದ ಬ್ಯಾಟ್ ಎಕ್ಸ್ (BatX) ಎನರ್ಜೀಸ್‌ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ. ಈ ಸಹಯೋಗವು ಭಾರತದ ವೇಗವಾಗಿ ವಿಕಸನಗೊಳ್ಳುತ್ತಿರುವ ಎಲೆಕ್ಟ್ರಿಕ್ ವಾಹನ (EV) ವಲಯವನ್ನು ಬೆಂಬಲಿಸುವ ಸುಸ್ಥಿರ, ರೀಸೈಕಲ್ ಬ್ಯಾಟರಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ವಿನ್‌ಫಾಸ್ಟ್ ಕಂಪನಿ ಹೇಳಿದೆ.
Advertisement

24+ ಕಿ.ಮೀ ಮೈಲೇಜ್.. ಅಗ್ಗದ ದರಕ್ಕೆ ಸಿಗುವ ಟಾಪ್-5 ಡೀಸೆಲ್..

ಭಾರತದಾದ್ಯಂತ ಕಠಿಣ ಎಮಿಷನ್ ಮಾನದಂಡಗಳು ಜಾರಿಯಲ್ಲಿದ್ದು, ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ಮಾರುತಿ ಸುಜುಕಿಯು ಡೀಸೆಲ್ ಎಂಜಿನ್‌ ಹೊಂದಿರುವ ಎಲ್ಲ ವಿಧದ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿ ವರ್ಷಗಳಾಗಿವೆ. ಕೇವಲ ಪೆಟ್ರೋಲ್ ಚಾಲಿತ ಹ್ಯಾಚ್‌ಬ್ಯಾಕ್, ಸೆಡಾನ್ ಹಾಗೂ ಎಸ್‌ಯುವಿಗಳನ್ನು ಮಾತ್ರ ತಯಾರಿಸುತ್ತಿದೆ. ವಿಶೇಷವಾಗಿ, ದೇಶೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಡೀಸೆಲ್ ಎಂಜಿನ್‌ ಒಳಗೊಂಡಿರುವ ಎಸ್‌ಯುವಿಗಳು ಖರೀದಿಗೆ ದೊರೆಯುವುದು ಕೂಡ ಕಷ್ಟವಾಗಿ ಬಿಟ್ಟಿದೆ. ಆದರೂ ನೀವು ಹೆಚ್ಚು ಟಾರ್ಕ್ ಹೊರಹಾಕಬಲ್ಲ ಬಜೆಟ್ ದರಕ್ಕೆ ಲಭ್ಯವಿರುವ ಈ 5 ಡೀಸೆಲ್ ಚಾಲಿತ ಕಾರುಗಳನ್ನು ಖರೀದಿ ಮಾಡಬಹುದು.

ಕಳಪೆ ಗುಣಮಟ್ಟದ ಈ 5 ವಾಹನಗಳ ತಂಟೆಗೆ ಹೋಗಬೇಡಿ!

ಕಾರಿನಲ್ಲಿ ಪ್ರಯಾಣಿಸುವಾಗ ಅನೀರೀಕ್ಷಿತ ಅಪಘಾತಗಳಿಂದ ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕಾದರೆ ಉತ್ತಮ ನಿರ್ಮಾಣ ಗುಣಮಟ್ಟವನ್ನು ಹೊಂದಿರುವ ಕಾರನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಇತ್ತೀಚಿನ 'GNCAP' (ಗ್ಲೋಬಲ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ) ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳ ಪ್ರಕಾರ, ಭಾರತದಲ್ಲಿ ಹಲವಾರು ಜನಪ್ರಿಯ ಮಾದರಿಗಳು ಕಳಪೆ ಪ್ರದರ್ಶನ ನೀಡಿವೆ. ವಿಶೇಷವಾಗಿ ಮಕ್ಕಳನ್ನು ರಕ್ಷಿಸುವಲ್ಲಿ ಇವು ತೀರಾ ಕಳೆಪೆ ಪ್ರದರ್ಶನ ನೀಡಿವೆ. ಕುಟುಂಬದ ಸುರಕ್ಷತೆಯು ನಿಮ್ಮ ಆದ್ಯತೆಯಾಗಿದ್ದರೆ ಕಡಿಮೆ GNCAP ಸುರಕ್ಷತಾ ರೇಟಿಂಗ್‌ ಹೊಂದಿರುವ ಕಾರುಗಳ ಬಗ್ಗೆ ನಿಮಗೆ ತಿಳಿದಿರಲಿ.

Bajaj Pulsar N160: ಬಜಾಜ್ ಪಲ್ಸರ್ ಎನ್160 ಬೈಕ್‌ನ ಹೊಸ..

ಬಜಾಜ್ ಪಲ್ಸರ್ (Bajaj Pulsar) ಯುವಕರ ನೆಚ್ಚಿನ ಬೈಕ್ ಆಗಿದ್ದು, ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತದೆ. ಸದ್ಯ ಬಜಾಜ್ ಕಂಪನಿಯು 'ಪಲ್ಸರ್ ಎನ್160' ಲೈನ್ಅಪ್‌ನ್ನು ವಿಸ್ತರಿಸಿದ್ದು, ಹೊಚ್ಚ ಹೊಸ ರೂಪಾಂತರವನ್ನು (ವೇರಿಯೆಂಟ್) ಬಿಡುಗಡೆಗೊಳಿಸಲಾಗಿದೆ. ಇದು ಬಜೆಟ್ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದ್ದು, ಸುರಕ್ಷತೆಗೂ ಹೆಸರುವಾಸಿಯಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Audi: ಕಾರಿನ ರಕ್ಷಣೆ ಸೇರಿಂದತೆ ದರೋಡೆಕೋರರು ಹೆದರುವಂತಹ ಅಕ್ಸೆಸೊರಿ

ಜರ್ಮನ್ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ, ಇಂದು ಭಾರತದಲ್ಲಿ 'ಆಡಿ ಡ್ಯಾಶ್ ಕ್ಯಾಮ್' (Audi Dash Cam) ಅನ್ನು ಬಿಡುಗಡೆ ಮಾಡಿದೆ. ರೂ. 68,000 ಬೆಲೆಯ ಆಡಿ ಡ್ಯಾಶ್ ಕ್ಯಾಮ್ ಕಾರಿನೊಳಗಿನ ಕಣ್ಗಾವಲು ಮತ್ತು ಭದ್ರತಾ ತಂತ್ರಜ್ಞಾನದಲ್ಲಿ ಒಂದು ಮುನ್ನಡೆಯನ್ನು ಪ್ರತಿನಿಧಿಸುತ್ತದೆ. ಇದು ಎಲ್ಲಾ ಆಡಿ ಕಾರುಗಳಲ್ಲಿ ಹೊಂದಿಕೊಳ್ಳುತ್ತದೆ. ಹೊಸ ಕಾರು ಡೆಲಿವರಿಗಳೊಂದಿಗೆ ಮರುಹೊಂದಿಸಬಹುದು ಅಥವಾ ಆರ್ಡರ್ ಮಾಡಬಹುದು. ಸಮಗ್ರ ವಾಹನ ರಕ್ಷಣೆಯನ್ನು ನೀಡಲು ಈ ವ್ಯವಸ್ಥೆಯು ರೆಕಾರ್ಡಿಂಗ್ ಸಾಧನಗಳನ್ನು ಮೀರಿ ಕೆಲಸ ಮಡುತ್ತದೆ ಎಂದು ಕಂಪನಿ ತಿಳಿಸಿದೆ.

KTM: ಭಾರತದಲ್ಲಿ ಎರಡು ನವೀಕರಿಸಿದ ಅಡ್ವೆಂಚರ್ ಬೈಕ್‌ಗಳ ಬಿಡುಗಡೆ

ಪ್ರೀಮಿಯಂ ಸ್ಪೋರ್ಟ್ಸ್ ಮೋಟಾರ್‌ಸೈಕಲ್ ಬ್ರಾಂಡ್ ಆಗಿರುವ ಕೆಟಿಎಂ, ತನ್ನ 390 ಸಿಸಿ ವಿಭಾಗಕ್ಕೆ ಎರಡು ಹೊಸ ವೇರಿಯೆಂಟ್‌ಗಳನ್ನು ಬಿಡುಗಡೆ ಮಾಡಿದೆ. ನವೀಕರಿಸಿದ ಕೆಟಿಎಂ 390 ಅಡ್ವೆಂಚರ್ ಎಕ್ಸ್ (390 Adventure X) ಮತ್ತು ಕೆಟಿಎಂ 390 ಅಡ್ವೆಂಚರ್ ಎಂಡ್ಯೂರೋ ಆರ್ (Enduro R) ಈಗ ಹೊಸದಾಗಿ ಬಿಡುಗಡೆಯಾಗಿರುವ ವೇರಿಯೆಂಟ್‌ಗಳಾಗಿವೆ. ಇವು ಕ್ರಮವಾಗಿ ರೂ. 3,03,125 ಮತ್ತು ರೂ. 3,53,825 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಎರಡು ನವೀಕೃತ ಮೋಟಾರ್‌ಸೈಕಲ್‌ಗಳ ವಿಶೇಷತೆಗಳನ್ನು ಇಲ್ಲಿ ನೋಡೋಣ.

7-ಸೀಟರ್.. ಭೂಲೋಕದ ಅರಮನೆಯಂತಿರುವ ಎಂಜಿ ಎಂ9 ಪ್ರೆಸಿಡೆನ್ಶಿಯಲ್..

MG M9 Presidential Limousine: ಭಾರತದಲ್ಲಿ ಬಿಡುಗಡೆಯಾದ ಎಲೆಕ್ಟ್ರಿಕ್ MPV, ಐಷಾರಾಮಿ, ಸ್ಥಳಾವಕಾಶ ಮತ್ತು ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

17 Km ಮೈಲೇಜ್.. 5-ಸೀಟರ್, ಕಲ್ಲು ಬಂಡೆಯಂತಿರುವ ಟಾಟಾ ಕಾರಿದು..

ಟಾಟಾ ಹ್ಯಾರಿಯರ್ (Tata Harrier) ಪ್ರಖ್ಯಾತ ಎಸ್‌ಯುವಿಯಾಗಿದ್ದು, ಆಕರ್ಷಕವಾದ ವೈಶಿಷ್ಟ್ಯಗಳು ಹಾಗೂ ಉತ್ತಮವಾದ ಕಾರ್ಯಕ್ಷಮತೆಯಿಂದಲೇ ಗಮನ ಸೆಳೆದಿದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗಿದ್ದು, ಅದು ಈ ಜೂನ್ ತಿಂಗಳಲ್ಲೂ ಮುಂದುವರಿದಿದೆ. ಒಟ್ಟು 1,259 ಯುನಿಟ್‌ಗಳನ್ನು ಮಾತ್ರ ಮಾರಾಟಗೊಳಿಸಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -7% ಇಳಿಕೆಯಾಗಿದೆ. 2024ರ ಇದೇ ಅವಧಿಯಲ್ಲಿ 1,347 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

ನಿಫ್ಟಿ ಸೂಚ್ಯಂಕ ಕೆಳಮಟ್ಟಕ್ಕೆ ಮುಕ್ತಾಯ: ಪ್ರಮುಖ ಬೆಂಬಲ ಮಟ್ಟಗಳು!

ನಿಫ್ಟಿ ಸೂಚ್ಯಂಕವು ಪ್ರಮುಖ ಬೆಂಬಲ ಮಟ್ಟವನ್ನು ಎದುರಿಸುತ್ತಾ ಕೆಳಮಟ್ಟಕ್ಕೆ ಮುಕ್ತಾಯಗೊಂಡಿತು. ವಿಶ್ಲೇಷಕರು ಮಾರುಕಟ್ಟೆ ಪ್ರವೃತ್ತಿಗಳು ಮತ್ತು ಹೂಡಿಕೆದಾರರಿಗೆ ಷೇರು ಶಿಫಾರಸುಗಳನ್ನು ಚರ್ಚಿಸುತ್ತಾರೆ.
Advertisement

Toyota: ಟೊಯೋಟಾ ಹೈಬ್ರಿಡ್‌ ಎಸ್‌ಯುವಿಗೆ ಫುಲ್ ಡಿಮ್ಯಾಂಡ್

ಟೊಯೋಟಾ ಭಾರತೀಯ ಮಾರುಕಟ್ಟೆಗೆ ತನ್ನ ಜನಪ್ರಿಯ ಹೈಬ್ರಿಡ್ ಮಾಡಲ್ ಆಗಿರುವ ಅರ್ಬನ್ ಕ್ರೂಸರ್ ಹೈರೈಡರ್ ಅನ್ನು 'ಪ್ರೆಸ್ಟೀಜ್ ಪ್ಯಾಕೇಜ್' ನೊಂದಿಗೆ ಅನಾವರಣಗೊಳಿಸಿದೆ. ಇದು ಜುಲೈ 2025 ರಿಂದ ಸೀಮಿತ ಅವಧಿಯವರೆಗೆ ಲಭ್ಯವಿದೆ. ಈ ಪ್ಯಾಕೇಜ್ ಅನ್ನು ಎಸ್‌ಯುವಿಯ ಬಾಹ್ಯ ಆಕರ್ಷಣೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದ್ದು, ಬೆಲೆ ಮತ್ತು ಲಭ್ಯತೆಗಾಗಿ, ಗ್ರಾಹಕರು ತಮ್ಮ ಸ್ಥಳೀಯ ಟೊಯೋಟಾ ಡೀಲರ್‌ಗಳೊಂದಿಗೆ ಪರಿಶೀಲಿಸಲು ಸೂಚಿಸಲಾಗಿದೆ. ಏಕೆಂದರೆ ಪ್ಯಾಕೇಜ್ ಸೀಮಿತ ಅವಧಿಗೆ ಮತ್ತು ಮೊದಲು ಬಂದವರಿಗೆ ಮೊದಲು ಸೇವೆ ಸಲ್ಲಿಸಿದ ಆಧಾರದ ಮೇಲೆ ಲಭ್ಯವಿದೆ.

Hero: ಆಕರ್ಷಕ ಹೀರೋ ವಿಡಾ VX 2 ಸ್ಕೂಟರ್ ಕೇವಲ 59 ಸಾವಿರ

ಹೀರೋ ಮೋಟೋಕಾರ್ಪ್ (Hero Motocorp) ಭಾರತದಲ್ಲಿ ವಿಡಾ ವಿಎಕ್ಸ್ 2 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದು ಬಜೆಟ್ ಸ್ನೇಹಿ ಮತ್ತು ನಗರ ಪ್ರಯಾಣಿಕರ ವಿಭಾಗವನ್ನು ಗುರಿಯಾಗಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಹೊಸ ವಿಡಾ ವಿಎಕ್ಸ್ 2 ಎಲೆಕ್ಟ್ರಿಕ್ ಸ್ಕೂಟರ್ ಗೋ (ಸಿಂಗಲ್ 2.2 ಕಿ.ವ್ಯಾ ಬ್ಯಾಟರಿ, 92 ಕಿ.ಮೀ ಐಡಿಸಿ ರೇಂಜ್) ಮತ್ತು ಪ್ಲಸ್ (ಡ್ಯುಯಲ್ 3.4 ಕಿ.ವ್ಯಾ ಬ್ಯಾಟರಿಗಳು, 142 ಕಿ.ಮೀ ಐಡಿಸಿ ರೇಂಜ್) ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

20 ಕಿ.ಮೀ ಮೈಲೇಜ್.. 6 ಲಕ್ಷ, 5-ಸೀಟರ್.. Nissan Magnite..

ಭಾರತದ ಕಾರು ಮಾರುಕಟ್ಟೆಯಲ್ಲಿ ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಬಲು ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದರ ಆಕರ್ಷಕವಾದ ನೋಟಕ್ಕೆ ಗ್ರಾಹಕರು ಕೂಡ ಮರುಳಾಗಿದ್ದು, ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಸದ್ಯ, ಈ ಕಾರನ್ನು ಕೊಂಡುಕೊಳ್ಳಬೇಕು ಎಂದು ಆಲೋಚಿಸಿರುವ ಖರೀದಿದಾರರಿಗೆ ಭಾರೀ ಸಿಹಿಸುದ್ದಿಯೊಂದು ಲಭ್ಯವಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Tata: ಇದಕ್ಕೆ ನೋಡಿ ಟಾಟಾ ಇಷ್ಟವಾಗೋದು: ಲೈಫ್‌ಟೈಮ್ ವಾರೆಂಟಿ ಘೋಷಣೆ!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಇರುವ ಅಡೆತಡೆಗಳನ್ನು ತೆಗೆದುಹಾಕುವ ತನ್ನ ನಿರಂತರ ಪ್ರಯತ್ನಗಳ ಭಾಗವಾಗಿ, ಭಾರತದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ಕರ್ವ್ ಇವಿ ಎಸ್‌ಯುವಿ ಕೂಪೆ (Curvv ev SUV Coupe) ಮತ್ತು ನೆಕ್ಸಾನ್ ಇವಿ (Nexon ev) 45 kWh ಎಸ್‌ಯುವಿಗಳ ಮೇಲೆ ಲೈಫ್‌ಟೈಮ್ HV ಬ್ಯಾಟರಿ ವಾರಂಟಿಯನ್ನು ಘೋಷಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಹ್ಯಾರಿಯರ್ ಇವಿ (Harrier ev) ದೊಂದಿಗೆ ಮೊದಲು ಪರಿಚಯಿಸಲಾದ ಲೈಫ್‌ಟೈಮ್ HV ಬ್ಯಾಟರಿ ವಾರಂಟಿಯು ದೇಶಾದ್ಯಂತ ಗ್ರಾಹಕರಿಂದ ವ್ಯಾಪಕ ಮೆಚ್ಚುಗೆಯನ್ನು ಪಡೆದಿದೆ.

28 Km ಮೈಲೇಜ್.. 5-ಸೀಟರ್, 11 ಲಕ್ಷ.. ಈ ಪ್ರಮುಖ Maruti Suv..

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಜನಪ್ರಿಯ ಎಸ್‌ಯುವಿ ಎಂದೇ ಹೆಸರುವಾಗಿದೆ. ಇದು ಉತ್ತಮವಾದ ಕಾರ್ಯಕ್ಷಮತೆ ಹಾಗೂ ಆಕರ್ಷಕ ವೈಶಿಷ್ಟ್ಯಗಳಿಂದಲೂ ಮನೆ ಮಾತಾಗಿದೆ. ಅದರ ಹೊರತಾಗಿಯೂ ಈ ಕಾರಿನ ಮಾರಾಟ ಸಂಖ್ಯೆ ದಿನೇ ದಿನೆ ಕುಸಿತವಾಗುತ್ತಿದೆ. ಅದಕ್ಕೆ ಈ ಜೂನ್ ತಿಂಗಳು ಕೂಡ ಹೊರತಾಗಿಲ್ಲ. ಒಟ್ಟು 6,828 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ -29% ಇಳಿಕೆಯಾಗಿದೆ. 2024ರ ಇದೇ ಅವಧಿಯಲ್ಲಿ 9,679 ಯುನಿಟ್‌ಗಳನ್ನು ಮಾರಲಾಗಿತ್ತು.

Kia: ಕಿಯಾ ಹೊಸ ಕಾರು ಬಿಡುಗಡೆ ಸ್ಥಗಿತ? ಬಹುನಿರೀಕ್ಷಿತ 7-ಸೀಟರ್

ಜನಪ್ರಿಯ ಕಾರು ತಯಾರಕ ಕಂಪನಿಯಾದ 'ಕಿಯಾ ಇಂಡಿಯಾ' (Kia india) ಇತ್ತೀಚೆಗೆ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳಿಂದ 'ಕಾರೆನ್ಸ್ ಕ್ಲಾವಿಸ್ ಇವಿ' (Carens Clavis EV) ಕಾರಿಗೆ ಸಂಬಂಧಿಸಿದ ಎಲ್ಲಾ ಟೀಸರ್ ವೀಡಿಯೊಗಳು ಮತ್ತು ಪ್ರಚಾರದ ವಿಷಯವನ್ನು ತೆಗೆದುಹಾಕಿದೆ. ಈ ಕ್ರಮವು ಭಾರತದಲ್ಲಿ ಕಾರೆನ್ಸ್ ಕ್ಲಾವಿಸ್ ಇವಿ ಬಿಡುಗಡೆಯ ಸ್ಥಿತಿಯ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ. ಕೆಲವರು ಕಂಪನಿ ಹೇಳಿರುವ ಬಿಡುಗಡೆ ದಿನಾಂಕಕ್ಕಿಂತ ವಿಳಂಬವಾಗಬಹುದು ಎಂದು ಹೇಳುತ್ತಿದ್ದರೇ, ಇನ್ನೂ ಕೆಲವರು ದೇಶದಲ್ಲಿ ಕಾರೆನ್ಸ್ ಕ್ಲಾವಿಸ್ ಇವಿಯನ್ನು ಬಿಡುಗಡೆ ಮಾಡುವುದನ್ನೇ ಸ್ಥಗಿತಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ. ಅಷ್ಟಕ್ಕೂ ಈ ಬೆಳವಣಿಗೆಗೆ ಕಾರಣವೇನು? ಬಿಡುಗಡೆಯಲ್ಲಿ ವಿಳಂಬ ಅಥವಾ ಟೀಸರ್‌ನಲ್ಲಿ ತೋರಿಸಿದಂತೆ ಕಾರಿನ ಕೆಲವು ವಿವರಗಳಲ್ಲಿ ಪರಿಷ್ಕರಣೆ ಇರಬಹುದು, ಹಾಗಾಗಿ ಟೀಸರ್‌ಗಳನ್ನು ಸದ್ದಿಲ್ಲದೆ ತೆಗೆದುಹಾಕಿದ್ದಾರೆ. ಕೆಲವು ಮೂಲಗಳ ಪ್ರಕಾರ ಟೀಸರ್‌ಗಳಲ್ಲಿ ಪ್ರದರ್ಶಿಸಲಾದ ಕಾರಿನ ಬಾಹ್ಯ ಅಥವಾ ಒಳಾಂಗಣ ಡಿಸೈನ್‌ನಲ್ಲಿ ಬದಲಾವಣೆ ಮಾಡುತ್ತಿರಬಹುದು, ಇದು ಭಾರತದ ಅಂತಿಮ ಉತ್ಪಾದನಾ ಮಾಡಲ್‌ಗೆ ಹೊಂದಿಕೆಯಾಗುತ್ತಿಲ್ಲವಾದ್ದರಿಂದ ಹೀಗೆ ಮಾಡಿರಬಹುದು.

ಇನ್ನು ಬಡವರು ತೆಗೆದುಕೊಳ್ಳಬಹುದು: ಮೊದಲೇ ಅಗ್ಗ.. Hero VIDA VX2..

ಇತ್ತೀಚೆಗೆ ಹೀರೋ ವಿಡಾ ವಿಎಕ್ಸ್2 (Hero Vida Vx2) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆಗೊಳಿಸಲಾಗಿತ್ತು. ಇದು ಅತಿ ಕಡಿಮೆ ಬೆಲೆಯಲ್ಲಿ ಮಾರಾಟಕ್ಕೆ ಬಂದಿದ್ದು, ಹೆಚ್ಚು ಅತ್ಯಾಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಸದ್ಯ, ಇದೇ 'ವಿಡಾ ವಿಎಕ್ಸ್2' ಇ-ಸ್ಕೂಟರ್‌ನ್ನು ಖರೀದಿ ಮಾಡಬೇಕೆಂದಿರುವ ಗ್ರಾಹಕರಿಗೆ ಭಾರೀ ಸಿಹಿಸುದ್ದಿಯೊಂದು ಲಭ್ಯವಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಹೊಸ ಬಜಾಜ್ ಟೂರಿಂಗ್ ಮೋಟಾರ್‌ಸೈಕಲ್ ವಿಶೇಷತೆಗಳು

ಬಜಾಜ್ ಡೊಮಿನಾರ್ 250 ಮತ್ತು ಡೊಮಿನಾರ್ 400 ಎರಡನ್ನೂ ಒಳಗೊಂಡಂತೆ 2025 ರ ಬಜಾಜ್ ಡೊಮಿನಾರ್ ಶ್ರೇಣಿಯನ್ನು ಮೊನ್ನೆಯಷ್ಟೆ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ತಂತ್ರಜ್ಞಾನ, ಏರ್ಗೊನಾಮಿಕ್ಸ್ ಮತ್ತು ರೂರಿಂಗ್ ವೈಶಿಷ್ಟ್ಯಗಳ ಮೇಲೆ ಕೇಂದ್ರೀಕರಿಸಿದ ಹಲವಾರು ಗಮನಾರ್ಹ ನವೀಕರಣಗಳೊಂದಿಗೆ ಈ ಬೈಕ್‌ಗಳನ್ನು ಬಿಡುಗಡೆ ಮಾಡಲಾಗಿದೆ. ರೈಡ್ - ಬೈ - ವೈರ್ ತಂತ್ರಜ್ಞಾನ, ರೈಡಿಂಗ್ ಮೋಡ್‌ಗಳು ಮತ್ತು ಹೊಸ ಬಾಂಡೆಡ್ ಸ್ಪೀಡೋಮೀಟರ್‌ನೊಂದಿಗೆ ಹೊಸ ಡೊಮಿನಾರ್ ಸಿರೀಸ್ ಈಗ ಮತ್ತಷ್ಟು ಸ್ಪೋರ್ಟಿಯಾಗಿ ಅಪ್‌ಡೇಟ್‌ ಆಗಿದೆ.
Advertisement

28 ಕಿ.ಮೀ ಮೈಲೇಜ್.. 7 ಲಕ್ಷ, 5-ಸೀಟರ್.. ಈ ಜನಪ್ರಿಯ ಮಾರುತಿ..

ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಪ್ರಮುಖ ಕಾಂಪ್ಯಾಕ್ಟ್ ಎಸ್‌ಯುವಿಯಾಗಿ ಗುರುತಿಸಿಕೊಂಡಿದೆ. ಇದು ಬಲೆನೊ ಹ್ಯಾಚ್‌ಬ್ಯಾಕ್‌ನ್ನು ಆಧರಿಸಿದ್ದು, ಅತ್ಯಾಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈ ಜೂನ್ ತಿಂಗಳಲ್ಲೂ ಇದೇ 'ಫ್ರಾಂಕ್ಸ್' ಕಾರು ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟಗೊಂಡಿದ್ದು, ಒಟ್ಟು 9,815 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಈ ಮೂಲಕ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 1% ಪ್ರಗತಿಯಾಗಿದೆ. 2024ರ ಇದೇ ಅವಧಿಯಲ್ಲಿ 9,688 ಯುನಿಟ್‌ಗಳನ್ನು ಮಾರಲಾಗಿತ್ತು.

ಗುರುಪೂರ್ಣಿಮಾ 2025: ನೆಚ್ಚಿನ ಗುರುವಿಗೆ ಶುಭಾಶಯ ಕೋರಲು ಸಂದೇಶ

'ಗುರುವಿನ ಗುಲಾಮನಾಗುವ ತನಕ ದೊರೆಯದ್ದಣ್ಣ ಮುಕುತಿ' ಎಂಬ ನಾಣ್ಣುಡಿಯನ್ನು ಕೇಳಿರ್ತಿರಾ. ಜೀವನದಲ್ಲಿ ಪೋಷಕರ ಪಾತ್ರ ಎಷ್ಟಿದೆಯೋ, ಅಷ್ಟೇ ಗುರುಗಳ ಪಾತ್ರವೂ ಇದೆ. ನಮ್ಮಲ್ಲಿರುವ ಅಂಧಕಾರವನ್ನು ದೂರಮಾಡಿ, ಜ್ಞಾನವೆಂಬ ಬೆಳಕನ್ನು ನೀಡುವ ಮಹಾನ್ ಶಕ್ತಿಯೇ ಗುರು. ಬದುಕಲ್ಲಿ ಏನಾದರೂ ಸಾಧಿಸಬೇಕೆಂದರೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು. ಇಂತಹ ಗುರುವಿಗೆ ನಮನ ಸಲ್ಲಿಸುವ ದಿನವೇ ಗುರುಪೂರ್ಣಿಮ.

8 ಆಸನಗಳು.. ಟೊಯೊಟಾ ಇನ್ನೋವಾ ಕ್ರಿಸ್ಟಾ ಎಂಪಿವಿ ಖರೀದಿಸಬೇಕೇ..

ಟೊಯೊಟಾ ಇನ್ನೋವಾ ಕ್ರಿಸ್ಟಾ (Toyota Innova Crysta) ವಿಶ್ವಾಸಾರ್ಹ ಎಂಪಿವಿಯಾಗಿದೆ. ಇದು ಹೆಚ್ಚು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ನೀವು ಹೊಚ್ಚ ಹೊಸ 'ಇನ್ನೋವಾ ಕ್ರಿಸ್ಟಾ' ಎಂಪಿವಿಯನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ನಾವಿಲ್ಲಿ, ಈ ಕಾರಿನ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

6-ಸೀಟರ್, ಗಟ್ಟಿಮುಟ್ಟದ ಕಾರಿದು.. ಆದರೂ ಈ Tata SUV ಖರೀದಿಸಲು..

ಭಾರತದ ಕಾರು ಮಾರುಕಟ್ಟೆಯಲ್ಲಿ ಟಾಟಾ ಸಫಾರಿ (Tata Safari) ತನ್ನದೆಯಾದ ಛಾಪನ್ನು ಮೂಡಿಸಿದೆ. ಇದು ಉತ್ತಮವಾದ ಕಾರ್ಯಕ್ಷಮತೆ ಹಾಗೂ ಆಕರ್ಷಕವಾದ ವೈಶಿಷ್ಟ್ಯಗಳಿಗೂ ಹೆಸರುವಾಸಿಯಾಗಿದೆ. ಅದರ ಹೊರತಾಗಿ ಈ ಕಾರಿನ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದು ಈ ಜೂನ್ ತಿಂಗಳಲ್ಲೂ ಮುಂದುವರಿದಿದ್ದು, ಒಟ್ಟು 922 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಈ ಮೂಲಕ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -34% ಇಳಿಕೆಯಾಗಿದೆ. 2024ರ ಇದೇ ಅವಧಿಯಲ್ಲಿ 1,394 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಲಾಗಿತ್ತು.

ರಚನೆಕಾರರಿಗಾಗಿ YouTube ಹಣಗಳಿಕೆ ನೀತಿಗಳನ್ನು ನವೀಕರಿಸುತ್ತದೆ

ಜುಲೈ 15, 2025 ರಿಂದ YouTube ಹಣಗಳಿಕೆಯ ನೀತಿಗಳನ್ನು ನವೀಕರಿಸುತ್ತದೆ, ಸ್ವಂತಿಕೆಯನ್ನು ಹೆಚ್ಚಿಸಲು ಪುನರಾವರ್ತಿತ ಮತ್ತು AI- ರಚಿತವಾದ ವಿಷಯವನ್ನು ಗುರಿಯಾಗಿರಿಸಿಕೊಳ್ಳುತ್ತದೆ.