Vinfast: ವೇಗ ಹೆಚ್ಚಿಸಿದ ಹೊಸ ಕಾರು ಕಂಪನಿ: ಶೀಘ್ರದಲ್ಲೆ ಬಿಡುಗಡೆ
ಆಟೋಮೊಬೈಲ್ಸ್
- 1 year, 2 month, 25 days ago
ಭಾರತಕ್ಕೆ ಲಗ್ಗೆಯಿಟ್ಟಿರುವ ವಿಯೆಟ್ನಾಂ ಮೂಲದ ಹೊಸ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ವಿನ್‌ಫಾಸ್ಟ್ (Vinfast), ತಮಿಳುನಾಡಿನ ತೂತುಕುಡಿಯಲ್ಲಿ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿರುವ ತನ್ನ ಹೊಸ ಕಾರ್ಖಾನೆಯಲ್ಲಿ ಸ್ಥಳೀಯವಾಗಿ ನೇಮಕಗೊಂಡ 200 ಮಂದಿ ವೃತ್ತಿಪರರ ಮೊದಲ ಸಮೂಹವನ್ನು ಸೇರ್ಪಡೆ ಮಾಡಿಕೊಳ್ಳುವುದಾಗಿ ಇಂದು ಘೋಷಿಸಿದೆ. ಈ ಹೊಸ ಉತ್ಪಾದನಾ ಸೌಲಭ್ಯವು ಮುಂದಿನ ಐದು ವರ್ಷಗಳಲ್ಲಿ 3,500 ವೃತ್ತಿಪರರಿಗೆ ಉದ್ಯೋಗ ಅವಕಾಶವನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಸ್ಥಾವರದ ಬೆಳವಣಿಗೆಯ ಪಥಕ್ಕೆ ಅನುಗುಣವಾಗಿ ಹಂತಹಂತವಾಗಿ ನೇಮಕಾತಿ ಮಾಡಲಾಗುತ್ತದೆ ಎಂದು ವಿನ್‌ಫಾಸ್ಟ್ ತಿಳಿಸಿದೆ.