Skoda: ಸ್ಕೋಡಾ ಕಾರುಗಳಿಗೆ ಫುಲ್ ಡಿಮ್ಯಾಂಡ್: ಯಾರೂ ನಂಬಲ್ಲ

ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಸ್ಕೋಡಾ (Skoda), ಭಾರತದಲ್ಲಿ ಹೊಸ ಉತ್ಪಾದನಾ ಮೈಲಿಗಲ್ಲನ್ನು ದಾಟಿದೆ. ಭಾರತದಲ್ಲಿನ ಅತ್ಯಾಧುನಿಕ ಸ್ಕೋಡಾ ಉತ್ಪಾದನಾ ಸೌಲಭ್ಯಗಳಲ್ಲಿ ಅರ್ಧ ಮಿಲಿಯನ್ (5 ಲಕ್ಷ) ಕಾರುಗಳನ್ನು ಉತ್ಪಾದಿಸಲಾಗಿದೆ. ಸ್ಕೋಡಾ ಕಂಪನಿಯು ಮೊದಲ ಬಾರಿಗೆ 2001 ರಲ್ಲಿ ತನ್ನ ಛತ್ರಪತಿ ಸಂಭಾಜಿ ನಗರ ಸೌಲಭ್ಯದಿಂದ (ಹಿಂದೆ ಔರಂಗಾಬಾದ್) ಆಕ್ಟೇವಿಯಾವನ್ನು ಹೊರತಂದ ನಂತರ, ಭಾರತದಲ್ಲಿ ಬ್ರ್ಯಾಂಡ್‌ನ ಪ್ರಯಾಣವು ಅಭಿವೃದ್ಧಿ ಹೊಂದುತ್ತಾ ಬಂದಿದೆ, ಪ್ರಸ್ತುತ ಹಲವು ಕಾರು ಮಾದರಿಗಳನ್ನು ಪರಿಚಯಿಸುವ ಮೂಲಕ ಭಾರತದಲ್ಲಿ ಪ್ರಮುಖ ಬ್ರಾಂಡ್‌ ಆಗಿ ಬೆಳೆದುನಿಂತಿದೆ.

Hero: ಅಗ್ಗದ ಹೀರೋ ವಿಡಾ ವಿಎಕ್ಸ್2ಗೆ ಬದಲಿ ಆಯ್ಕೆಯಾಗಬಲ್ಲ 5..

ಇತ್ತೀಚೆಗೆ ಹೀರೋ ವಿಡಾ ವಿಎಕ್ಸ್2 (Hero Vida Vx2) ಇ-ಸ್ಕೂಟರ್‌ನ್ನು ಬಿಡುಗಡೆಗೊಳಿಸಲಾಗಿತ್ತು. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಆರಂಭಿಕ ಬೆಲೆ ರೂ.59,000 ಇದ್ದು, 2.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 3.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. 92 ರಿಂದ 142 ಕಿಲೋಮೀಟರ್ ರಿಂದ ರೇಂಜ್ (ಮೈಲೇಜ್) ನೀಡುತ್ತದೆ. ಎಲ್‌ಸಿಡಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ನೀವು ದಿನನಿತ್ಯದ ಬಳಕೆಗಾಗಿ 'ವಿಡಾ ವಿಎಕ್ಸ್2'ಗೆ ಪರ್ಯಾಯವಾಗಿ ಈ 5 ದ್ವಿಚಕ್ರ ವಾಹನಗಳನ್ನು ಖರೀದಿ ಮಾಡಬಹುದು. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

32.85 Km ಮೈಲೇಜ್.. 5-ಸೀಟರ್, 6 ಲಕ್ಷ.. ಈ ಮಾರುತಿ ಕಾರು ಭಾರೀ..

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಜನಪ್ರಿಯ ಹ್ಯಾಚ್‌ಬ್ಯಾಕ್‌ ಆಗಿದೆ. ಇದು ವಿಶ್ವಾಸಾರ್ಹತೆ ಹಾಗೂ ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. ಈಚೆಗೆ ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿ ಪ್ರಕಟಗೊಂಡಿದೆ. ಅದರಲ್ಲಿ ಇದೇ ಸ್ವಿಫ್ಟ್ 5ನೇ ಸ್ಥಾನದಲ್ಲಿದ್ದು, ಬರೋಬ್ಬರಿ 13,275 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಹಾಗೆಯೇ ಮೊದಲ ಸ್ಥಾನದಲ್ಲಿ ಹ್ಯುಂಡೈ ಕ್ರೆಟಾ (15,786 ಯುನಿಟ್), ಎರಡನೇ ಸ್ಥಾನದಲ್ಲಿ ಮಾರುತಿ ಸುಜುಕಿ ಡಿಜೈರ್ (15,484 ಯುನಿಟ್), ಮೂರನೇ ಸ್ಥಾನದಲ್ಲಿ ಮಾರುತಿ ಸುಜುಕಿ ಬ್ರೆಜಾ (14,507 ಯುನಿಟ್) ಹಾಗೂ ನಾಲ್ಕನೇ ಸ್ಥಾನದಲ್ಲಿ ಮಾರುತಿ ಸುಜುಕಿ ಎರ್ಟಿಗಾ (14,151 ಯುನಿಟ್) ಇದೆ.

NPS Vs UPS: ನಿಮ್ಮ ಪಿಂಚಣಿ ಯೋಜನೆಯನ್ನು ಆರಿಸಿಕೊಳ್ಳುವುದು ಹೇಗೆ..?

ಭಾರತೀಯ ಸರ್ಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಮತ್ತು ಸಾರ್ವತ್ರಿಕ ಪಿಂಚಣಿ ಯೋಜನೆಯ ನಡುವಿನ ವ್ಯತ್ಯಾಸಗಳು ಮತ್ತು ಅವರ ನಿವೃತ್ತಿಯ ಪರಿಣಾಮಗಳನ್ನು ಅನ್ವೇಷಿಸಿ.
Advertisement

Ather: ಖರ್ಚಿಲ್ಲದೆ ನಿತ್ಯ 159 ಕಿ.ಮೀ ಓಡುವ ಹೊಸ ಸ್ಕೂಟರ್

ಎಥರ್ ಎನರ್ಜಿ (Ather energy) ಹೊಸ 3.7kWh ಬ್ಯಾಟರಿ ಪ್ಯಾಕ್‌ನೊಂದಿಗೆ ತನ್ನ ರಿಜ್ಟಾ S ಫ್ಯಾಮಿಲಿ ಸ್ಕೂಟರ್ ಅನ್ನು ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ್ದು, ಉತ್ತಮ ಪ್ರಿತಿಕ್ರಿಯೆ ವ್ಯಕ್ತವಾಗಿದೆ. ಇದರ ಬೆಲೆಯು ರೂ. 1.37 ಲಕ್ಷ (ಎಕ್ಸ್-ಶೋರೂಂ) ವಿದೆ. ಈ ವೇರಿಯೆಂಟ್ ಅನ್ನು ಉನ್ನತ-ಮಟ್ಟದ Z ವೇರಿಯೆಂಟ್ ಆಯ್ಕೆ ಮಾಡದೆ ದೀರ್ಘ ರೇಂಜ್ ಬಯಸುವವರು ಖರೀದಿಸಬಹುದಾಗಿದೆ. ಈ ಹೊಸ ಬ್ಯಾಟರಿ ಪ್ಯಾಕ್ ಮೂಲಕ ಒಮ್ಮೆ ಚಾರ್ಜ್ ಮಾಡಿದರೆ 159 ಕಿ.ಮೀ IDC-ಪ್ರಮಾಣೀಕೃತ ರೇಂಜ್ ಪಡೆಯಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

19.25 ಕಿ.ಮೀ ಮೈಲೇಜ್.. 5-ಸೀಟರ್, ಸದ್ದಿಲ್ಲದೇ ಈ ಜನಪ್ರಿಯ Tata..

ಟಾಟಾ ಕರ್ವ್ (Tata Curvv) ಪ್ರಮಖ ಕೂಪೆ ಎಸ್‌ಯುವಿಯಾಗಿದೆ. ಇದು ಹೆಚ್ಚು ಅತ್ಯಾಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಸದ್ಯ, ಇದೇ ಕರ್ವ್ ಕಾರಿನ ದರ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

627 ಕಿ.ಮೀ ರೇಂಜ್.. 5-ಸೀಟರ್.. Tata Harrier EVಗೆ ಮುಗಿಬಿದ್ದ..

ಇತ್ತೀಚೆಗೆ ನೂತನ ಟಾಟಾ ಹ್ಯಾರಿಯರ್ ಇವಿಯನ್ನು ಬಿಡುಗಡೆಗೊಳಿಸಲಾಗಿತ್ತು. ಈ ಕಾರು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಜುಲೈ 3ರಿಂದ ಹ್ಯಾರಿಯರ್ ಇವಿಗಾಗಿ ಕಂಪನಿಯು ಬುಕ್ಕಿಂಗ್‌ನ್ನು ಶುರು ಮಾಡಿತ್ತು. ಗ್ರಾಹಕರಿಂದಲೂ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದೇ ದಿನದಲ್ಲಿ ದಾಖಲೆ ಸಂಖ್ಯೆಯಲ್ಲಿ ಆರ್ಡರ್ ಮಾಡಿದ್ದಾರೆ. ಇದು ಎಲೆಕ್ಟ್ರಿಕ್ ಎಸ್‌ಯುವಿಗಳಿರುವ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಭಾರತದ ಹಸಿರು ಠೇವಣಿ ಯೋಜನೆಯನ್ನು ಅರ್ಥಮಾಡಿಕೊಳ್ಳುವುದು!

ಭಾರತದ ಹಸಿರು ಠೇವಣಿ ಯೋಜನೆಯನ್ನು ಅನ್ವೇಷಿಸಿ, ಇದು ಸಾರ್ವಜನಿಕರಿಗೆ ಮತ್ತು ಹಿರಿಯ ನಾಗರಿಕರಿಗೆ ಆಕರ್ಷಕ ಬಡ್ಡಿದರಗಳೊಂದಿಗೆ ಸುರಕ್ಷಿತ, ಸುಸ್ಥಿರ ಹೂಡಿಕೆಗಳನ್ನು ನೀಡುತ್ತದೆ.

ಭಾರತೀಯ ಅಧಿಕ ಆದಾಯ ಗಳಿಸುವವರಿಗೆ ತೆರಿಗೆ ತಂತ್ರಗಳು!

ಭಾರತದಲ್ಲಿ ಹೆಚ್ಚಿನ ಆದಾಯ ಗಳಿಸುವವರು EPF ಮತ್ತು NPS ಮೂಲಕ ತೆರಿಗೆ ವಿನಾಯಿತಿಗಳನ್ನು ಹೇಗೆ ಪಡೆಯಬಹುದು ಮತ್ತು ನಿವೃತ್ತಿ ನಿಧಿಯ ಬೆಳವಣಿಗೆಯನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಕಂಡುಕೊಳ್ಳಿ.

2025-26ನೇ ಸಾಲಿಗೆ ಯುಐಡಿಎಐ ಹೊಸ ಆಧಾರ್ ಮಾರ್ಗಸೂಚಿಳು!

2025-26ನೇ ಸಾಲಿಗೆ ಆಧಾರ್ ಕಾರ್ಡ್‌ಗಳಿಗಾಗಿ ಯುಐಡಿಎಐ ಹೊಸ ಮಾರ್ಗಸೂಚಿಗಳನ್ನು ಪರಿಚಯಿಸುತ್ತದೆ, ಇದು ಭಾರತೀಯ ನಾಗರಿಕರಿಗೆ ದಸ್ತಾವೇಜನ್ನು ಮತ್ತು ಬಯೋಮೆಟ್ರಿಕ್ ಡೇಟಾ ಅವಶ್ಯಕತೆಗಳನ್ನು ಸ್ಪಷ್ಟಪಡಿಸುತ್ತದೆ.

25 ಕಿ.ಮೀ ಮೈಲೇಜ್.. 8 ಲಕ್ಷ, 5-ಸೀಟರ್.. ಈ Maruti Suv ಬೇಕೆಂದು..

ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ವಿಶ್ವಾಸಾರ್ಹ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದ್ದು, ತನ್ನದೇ ಆದ ಛಾಪನ್ನು ಮೂಡಿಸಿದೆ. ಈ ಕಾರು ಅತ್ಯುತ್ತಮವಾದ ವಿನ್ಯಾಸ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳಿಂದಲೇ ಹೆಚ್ಚಿನ ಗ್ರಾಹಕರ ಗಮನವನ್ನು ಸೆಳೆದಿದೆ. ಇತ್ತೀಚೆಗೆ ಈ ಜೂನ್ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿ ಪ್ರಕಟಗೊಂಡಿದೆ. ಇದೇ 'ಬ್ರೆಝಾ' 3ನೇ ಸ್ಥಾನದಲ್ಲಿದ್ದು, 14,507 ಯುನಿಟ್‌ಗಳನ್ನು ಮಾರಲಾಗಿದೆ. ಆದರೆ 15,786 ಯುನಿಟ್‌ಗಳೊಂದಿಗೆ ಹ್ಯುಂಡೈ ಕ್ರೆಟಾ ಮೊದಲ ಸ್ಥಾನದಲ್ಲಿದ್ದರೆ, 15,484 ಯುನಿಟ್‌ಗಳೊಂದಿಗೆ ಮಾರುತಿ ಸುಜುಕಿ ಡಿಜೈರ್ ಎರಡನೇ ಸ್ಥಾನದಲ್ಲಿದೆ.

Tata: ಬೆಲೆ ಕೇವಲ 3.99 ಲಕ್ಷ: ಭಾರತದ ಅತ್ಯಂತ ಕೈಗೆಟುಕುವ ಮಿನಿ ಟ್ರಕ್

ಟಾಟಾ ಮೋಟಾರ್ಸ್, ಭಾರತದ ಅತ್ಯಂತ ಕೈಗೆಟುಕುವ 4-ವೀಲ್ ಮಿನಿ - ಟ್ರಕ್ ಆಗಿರುವ ಹೊಸ ಏಸ್ ಪ್ರೊ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆಯು ಕೇವಲ 3.99 ಲಕ್ಷ (ಎಕ್ಸ್-ಶೋರೂಂ) ವಾಗಿದೆ. ಇದು ದೇಶದ ಸಣ್ಣ ವಾಣಿಜ್ಯ ವಾಹನ ವಿಭಾಗದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ವಾಹನವು ಪೆಟ್ರೋಲ್, ದ್ವಿ - ಇಂಧನ (CNG + ಪೆಟ್ರೋಲ್) ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಲಭ್ಯವಿದೆ. ವಾಹನದ ವಿಶೇಷತೆಗಳನ್ನು ನೋಡೋಣ ಬನ್ನಿ.
Advertisement

ಬಡವರ ಬಂಡಿ.. ಹೊಸ Hero VIDA VX2 ಇ-ಸ್ಕೂಟರ್ ಕುರಿತ ಪ್ರಮುಖಾಂಶಗಳಿವು

ಇತ್ತೀಚೆಗೆ ಹೊಚ್ಚ ಹೊಸ ಹೀರೋ ವಿಡಾ ವಿಎಕ್ಸ್2 (Hero Vida Vx2) ಇ-ಸ್ಕೂಟರ್ ಬಿಡುಗಡೆಗೊಂಡಿದೆ. ಇದು ಅತ್ಯುತ್ತಮವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ ಸ್ಟ್ಯಾಂಡರ್ಡ್ ಹಾಗೂ ಬ್ಯಾಟರಿ-ಆಸ್-ಎ-ಸರ್ವಿಸ್ (ಬಾಸ್-BaaS) ಪ್ಲ್ಯಾನ್‌ನಡಿ ಗ್ರಾಹಕರ ಖರೀದಿಗೆ ಲಭ್ಯವಿದೆ. ನಾವಿಲ್ಲಿ ನೂತನ 'ವಿಡಾ ವಿಎಕ್ಸ್2' ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

5-ಸೀಟರ್.. ಸ್ವದೇಶಿ ನಿರ್ಮಿತ ಅಗ್ಗದ Mahindra Suv ದುಬಾರಿ ಬೆಲೆಗೆ..

ಆನಂದ್ ಮಹೀಂದ್ರಾ ಮಾಲೀಕತ್ವದ ಮಹೀಂದ್ರಾ (Mahindra) ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯವಾಗಿ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ತನ್ನದೆಯಾದ ಛಾಪನ್ನು ಮೂಡಿಸಿದೆ. ಸದ್ಯ, ಆಸ್ಟ್ರೇಲಿಯಾದಲ್ಲಿ ಸ್ವದೇಶಿ ನಿರ್ಮಿತ ಹೊಚ್ಚ ಹೊಸ ಎಕ್ಸ್‌ಯುವಿ 3ಎಕ್ಸ್ಒ (XUV 3XO) ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿದೆ. ಬನ್ನಿ, ಈ ಕಾರಿನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Matter Aera: ದೇಶದ ಮೊದಲ ಎಲೆಕ್ಟ್ರಿಕ್ ಗೇರ್ ಬೈಕ್..

ಅಹಮದಾಬಾದ್ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಸ್ಟಾರ್ಟ್ಅಪ್ ಕಂಪನಿಯಾಗಿ ಮ್ಯಾಟರ್ (Matter) ಗುರುತಿಸಿಕೊಂಡಿದೆ. ಹಬ್ಬಗಳು ಸಮೀಪಿಸುತ್ತಿರುವಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನೂತನ 'ಏರಾ' ಇ-ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಇದು 1.93 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದ್ದು, ಹಲವು ವಿಶೇಷತೆಗಳಿಗೂ ಸಾಕ್ಷಿಯಾಗಿದೆ. ಈ ಎಲೆಕ್ಟ್ರಿಕ್ ಬೈಕ್‌ಗಾಗಿ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್‌ನ್ನು ತೆರೆಯಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ರಸ್ತೆ ಮೇಲಿನ ಅರಮನೆಯಂತಿರುವ Lexus ಕಾರನ್ನು ಖರೀದಿಸಿದ ರಾಕಿಂಗ್..

ಕನ್ನಡದ ರಾಕಿಂಗ್ ಸ್ಟಾರ್ ಯಶ್ (Yash) ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದ ಕೆಜಿಎಫ್ (KGF) ಸಿನಿಮಾದ ಯಶಸ್ಸಿನ ಬಳಿಕ, ಯಶ್ ಅವರ ಅದೃಷ್ಟವೇ ಬದಲಾಗಿ ಹೋಗಿದೆ. ಸದ್ಯ, ರಾಮಾಯಣ ಹಾಗೂ ಟಾಕ್ಸಿಕ್ ಚಿತ್ರಗಳಲ್ಲಿ ಫುಲ್ ಬ್ಯುಸಿಯಾಗಿದ್ದು, ಶೂಟಿಂಗ್‌ಗಾಗಿ ಮುಂಬೈನಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅಲ್ಲಿನ ಓಡಾಟಕ್ಕಾಗಿ, ರಸ್ತೆ ಮೇಲಿನ ಅರಮನೆಯಂತಿರುವ ದುಬಾರಿ ಬೆಲೆಯ ಐಷಾರಾಮಿ ಕಾರನ್ನು ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ.

TVS: ಇತ್ತೀಚೆಗೆ ಬಿಡುಗಡೆಯಾದ ಹೊಸ ಟಿವಿಎಸ್ ಬೈಕ್ ವಿಶೇಷತೆಗಳು!

ಟಿವಿಎಸ್ 2025 ಅಪಾಚೆ ಆರ್‌ಟಿಆರ್ 160 (TVS Apache RTR 160) ಅನ್ನು ಮೊದಲ ಬಾರಿಗೆ ಡ್ಯುಯಲ್ - ಚಾನೆಲ್ ಎಬಿಎಸ್‌ನೊಂದಿಗೆ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಇದು 160 ಸಿಸಿ ಮೋಟಾರ್‌ಸೈಕಲ್ ವಿಭಾಗದಲ್ಲಿ ಗಮನಾರ್ಹ ಸುರಕ್ಷತಾ ಅಪ್‌ಗ್ರೇಡ್ ಅನ್ನು ಪಡೆದುಕೊಂಡಿದೆ. ಹೊಸ ಡ್ಯುಯಲ್ - ಚಾನೆಲ್ ಎಬಿಎಸ್ ರೂಪಾಂತರದ ಬೆಲೆಯು ರೂ. 1.34 ಲಕ್ಷ (ಎಕ್ಸ್ - ಶೋರೂಂ) ಇದೆ. ಇಂದಿನ ಸವಾರರ ವಿಕಸನಗೊಳ್ಳುತ್ತಿರುವ ಬೇಡಿಕೆಗಳನ್ನು ಪೂರೈಸುವ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿರುವ ಟಿವಿಎಸ್ ಅಪಾಚೆ RTR 160 ಕುರಿತ ಹೆಚ್ಚಿನ ವಿಶೇಷತೆಗಳು ಇಲ್ಲಿವೆ.

ಬಡವರಿಗೆ ಬೆಸ್ಟ್ ಕಾರಿದು.. 5 ಲಕ್ಷ, 34 Km ಮೈಲೇಜ್.. ಈ ಮಾರುತಿ..

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಜನಮೆಚ್ಚಿದ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ಹೆಚ್ಚು ಅತ್ಯಾಧುನಿಕವಾಗಿದ್ದು, ಉತ್ತಮವಾದ ಕಾರ್ಯಕ್ಷಮತೆಗೂ ಹೆಸರುವಾಗಿದೆ. ಈಚೆಗೆ ಈ ಜೂನ್ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿ ಪ್ರಕಟಗೊಂಡಿದೆ. ಅದರಲ್ಲೂ ಇದೇ 'ವ್ಯಾಗನ್ಆರ್' 6ನೇ ಸ್ಥಾನದಲ್ಲಿದೆ. ಒಟ್ಟು 12,930 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಹ್ಯುಂಡೈ ಕ್ರೆಟಾ (15,786 ಯುನಿಟ್‌), ಮಾರುತಿ ಡಿಜೈರ್ (15,484 ಯುನಿಟ್‌), ಮಾರುತಿ ಬ್ರೆಝಾ (14,507 ಯುನಿಟ್‌), ಮಾರುತಿ ಎರ್ಟಿಗಾ (14,151 ಯುನಿಟ್) ಹಾಗೂ ಮಾರುತಿ ಸ್ವಿಫ್ಟ್ (13,275 ಯುನಿಟ್‌) ಕಾರುಗಳು ಕ್ರಮವಾಗಿ ಮೊದಲ 5 ಸ್ಥಾನದಲ್ಲಿವೆ.

33 ಕಿ.ಮೀ ಮೈಲೇಜ್.. 6 ಲಕ್ಷ, ಈ ಜನಪ್ರಿಯ Maruti Suzuki ಕಾರಿಗೆ...

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ವಿಶ್ವಾಸಾರ್ಹ ಸೆಡಾನ್ ಆಗಿದೆ. ಇದು ಆಕರ್ಷಕವಾದ ವಿನ್ಯಾಸ, ಉತ್ತಮ ಕಾರ್ಯಕ್ಷಮತೆ ಹಾಗೂ ಕೈಗೆಟುಕುವ ಬೆಲೆಯಿಂದಲೇ ಮನೆ ಮಾತಾಗಿದೆ. ಇದರಿಂದಾಗಿ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಸದ್ಯ, ಈ ಜೂನ್ ತಿಂಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಮಾರಾಟ ವರದಿ ಪ್ರಕಟಗೊಂಡಿದೆ. ಅದರಲ್ಲಿ ಇದೇ 'ಡಿಜೈರ್' 2ನೇ ಸ್ಥಾನದಲಿದ್ದು, ಬರೋಬ್ಬರಿ 15,484 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಆದರೂ, 15,786 ಯುನಿಟ್ ಮಾರಾಟದೊಂದಿಗೆ ಹ್ಯುಂಡೈ ಕ್ರೆಟಾ ಎಸ್‌ಯುವಿ ಮೊದಲ ಸ್ಥಾನದಲ್ಲಿದೆ.

ಲಕ್ಸುರಿ ಫೀಚರ್ಸ್.. ಶೀಘ್ರದಲ್ಲೇ ಹೊಸ ಕಂಪನಿ ವಿನ್‌ಫಾಸ್ಟ್‌ನ..

ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅದರ ಭಾಗವಾಗಿ, ವಿಎಫ್6 ಹಾಗೂ ವಿಎಫ್7 ಹೆಸರಿನ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಶಾಪಿಂಗ್ ಮಾಲ್‌ಗಳಲ್ಲಿ ಕೂಡ ಪ್ರದರ್ಶನ ಮಾಡಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಇದೇ ಸೆಪ್ಟೆಂಬರ್‌ನಲ್ಲಿ ವಿನ್‌ಫಾಸ್ಟ್‌ನ ಮೊದಲ ಕಾರಾಗಿ ವಿಎಫ್6 (VF6) ಬಿಡುಗಡೆಯಾಗಲಿದೆ. ಬನ್ನಿ, ಈ ಕಾರಿನ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾಗಿ ವಿವರಗಳನ್ನು ತಿಳಿಯೋಣ.
Advertisement

5-ಸೀಟರ್.. 627 Km ಓಡುತ್ತೆ, ಬಲಿಷ್ಠ ಟಾಟಾ ಹ್ಯಾರಿಯರ್ ಇವಿಗಾಗಿ..

ಟಾಟಾ ಹ್ಯಾರಿಯರ್ ಇವಿ (Tata Harrier EV) ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಇದು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಸ್ವದೇಶಿ ನಿರ್ಮಿತ ಈ ಕಾರಿನ ಮೇಲೆ ಗ್ರಾಹಕರು ಕೂಡ ದೊಡ್ಡ ಮಟ್ಟದ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇಂದಿನಿಂದ ದೇಶಾದ್ಯಂತ ನೂತನ 'ಹ್ಯಾರಿಯರ್ ಇವಿ'ಗಾಗಿ ಬುಕ್ಕಿಂಗ್‌ನ್ನು ಶುರು ಮಾಡಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಬ್ರೋ.. ಸುಜುಕಿ ಟೂ-ವೀಲರ್‌ಗಳಿಗೆ ಎಲ್ಲಿಲ್ಲದ ಬೇಡಿಕೆ..

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India), ಪ್ರಮುಖ ದ್ವಿಚಕ್ರ ವಾಹನ (two wheeler) ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕ್ಸೆಸ್ 125, ಅವೆನಿಸ್ 125 ಮತ್ತು ಬರ್ಗ್‌ಮನ್ ಸ್ಟ್ರೀಟ್ 125 ಸೇರಿದಂತೆ ಹಲವು ಸ್ಕೂಟರ್ ಹಾಗೂ ಬೈಕ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಕಳೆದ ತಿಂಗಳು (ಜೂನ್-2025) ಸಹ ಕಂಪನಿಯ ದ್ವಿಚಕ್ರ ವಾಹನಗಳನ್ನು ಉತ್ತಮ ಸಂಖ್ಯೆಯಲ್ಲಿ ಮಾರಾಟ ಮಾಡಲಾಗಿದೆ. ಬರೋಬ್ಬರಿ 95,244 ಯುನಿಟ್‌ಗಳನ್ನು ಗ್ರಾಹಕರು ಖರೀದಿ ಮಾಡಿದ್ದಾರೆ. 2024ರ ಇದೇ ಅವಧಿಯಲ್ಲಿ 88,287 ಯುನಿಟ್‌ಗಳು ಮಾರಾಟವಾಗಿದ್ದವು. ಅದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 8% ಪ್ರಗತಿಯಾಗಿದೆ.

Kia: ಕೊರಿಯಾ ಕಾರುಗಳಿಗೆ ಫುಲ್ ಡಿಮ್ಯಾಂಡ್: ಮನಸೋತ ಭಾರತೀಯರು

ಪ್ರಮುಖ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಕೊರಿಯಾ ಮೂಲದ ಕಿಯಾ, 2025 ರ ಮೊದಲಾರ್ಧದಲ್ಲಿ 1,42,139 ವಾಹನಗಳನ್ನು ರವಾನಿಸುವ ಮೂಲಕ ಬಲವಾದ ಮಾರಾಟ ಸಂಖ್ಯೆಯನ್ನು ದಾಖಲಿಸಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಮಾರಾಟವಾದ 1,26,137 ವಾಹನಗಳಿಗೆ ಹೋಲಿಸಿದರೆ ಶೇ 12.7 ಬೆಳವಣಿಗೆಯನ್ನು ಸಾಧಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಕಿಯಾ 'ಕಾರೆನ್ಸ್ ಕ್ಲಾವಿಸ್' ಎಂಪಿವಿಯು ತನ್ನ ಪ್ರೀಮಿಯಂ ವೈಶಿಷ್ಟ್ಯಗಳು ಮತ್ತು ಅತ್ಯುತ್ತಮ ದರ್ಜೆಯ ಸುರಕ್ಷತೆಯೊಂದಿಗೆ ರಾಜಿಯಾಗದ ಸೌಕರ್ಯ ಮತ್ತು ಸ್ಥಳಾವಕಾಶವನ್ನು ಬಯಸುವ ಗ್ರಾಹಕರಿಂದ ನಿರಂತರವಾಗಿ ಅದ್ಭುತ ಬೇಡಿಕೆಯನ್ನು ಪಡೆಯುತ್ತಿರುವುದು ವಿಶೇಷ.

ಟೊಯೊಟಾ ಇನ್ನೋವಾ 7 ಬಾರಿ ಪಲ್ಟಿ.. 5 ಬಲಿ, ರಸ್ತೆ ಅಪಘಾತ ತಪ್ಪಿಸಲು..

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸಮೀಪದ ನಾಯಕರಂಡನಹಳ್ಳಿ & ಮಾಕಳಿ ನಡುವೆ ಮಂಗಳವಾರ ಭೀಕರ ದುರಂತವೊಂದು ಸಂಭವಿಸಿದೆ. ಮಂಚೇನಹಳ್ಳಿಯ ಬೀಮೇಶ್ವರ ಬೆಟ್ಟದ ದೇಗುಲಕ್ಕೆ ತೆರಳುತ್ತಿದ್ದ ಟೊಯೊಟಾ ಇನ್ನೋವಾ (Toyota Innova) ಕಾರೊಂದು 7 ಬಾರಿ ಪಲ್ಟಿಯಾಗಿದೆ. ಈ ಘಟನೆಯಲ್ಲಿ 5 ಮಂದಿ ಸಾವನ್ನಪ್ಪಿದ್ದು, 3 ಗಂಭೀರವಾಗಿ ಗಾಯಗೊಂಡಿದ್ದಾರೆ. ಇವೆರೆಲ್ಲರೂ ಸ್ನೇಹಿತರು ಎಂಬ ವಿಚಾರವು ಗೊತ್ತಾಗಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ vs ಟಾಟಾ ಸಫಾರಿ: ಅತ್ಯಂತ ಸುರಕ್ಷಿತ..

ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆಯಾಗಿ ಭಾರತ್ ಎನ್‌ಸಿಎಪಿ (Bharat NCAP) ಗುರುತಿಸಿಕೊಂಡಿದೆ. ಇದು ಟೊಯೊಟಾ ಇನ್ನೋವಾ ಹೈಕ್ರಾಸ್ ಹಾಗೂ ಟಾಟಾ ಸಫಾರಿಯನ್ನು ಅತ್ಯಂತ ಸುರಕ್ಷಿತ ಕಾರುಗಳೆಂದು ನಿರ್ಣಯಿಸಿದ್ದು, 5 ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ನೀಡಿದೆ. ನಾವಿಲ್ಲಿ ಇವೆರೆಡು ಕಾರುಗಳು ಗಳಿಸಿರುವ ಸುರಕ್ಷತಾ ಅಂಕಗಳ ಹೋಲಿಕೆ ಮಾಡಿದ್ದೇವೆ. ಬನ್ನಿ, ಆ ಕುರಿತಂತೆ ಹೆಚ್ಚಿನ ವಿವರಗಳನ್ನು ತಿಳಿಯೋಣ.