Hyundai: ರಣ ಹದ್ದಿನಂತಹ ಎಸ್‌ಯುವಿಗೆ ಜನ ಫಿದಾ
ಆಟೋಮೊಬೈಲ್ಸ್
- 1 year, 3 month, 2 days ago
ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL), ತನ್ನ ಜನಪ್ರಿಯ SUV ಆಗಿರುವ ಕ್ರೆಟಾ ಜೂನ್ 2025 ರಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ ಎಂದು ಪ್ರಕಟಿಸಿದೆ. ಜೂನ್ 2025 ರಲ್ಲಿ 15,786 ಯುನಿಟ್ ಕಾರುಗಳನ್ನು ಮಾರಾಟ ಮಾಡುವುದರೊಂದಿಗೆ ಹುಂಡೈ ಕ್ರೆಟಾ (Hyundai Creta) ಹೆಚ್ಚು ಸ್ಪರ್ಧಾತ್ಮಕ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಗ್ರಾಹಕರ ನೆಚ್ಚಿನ ಕಾರಾಗಿ ಸ್ಥಾನವನ್ನು ದಕ್ಕಿಸಿಕೊಂಡಿದೆ. ಹಾಗೆಯೇ ಹುಂಡೈ ಕ್ರೆಟಾ 2025 ರ H1 (ಜನವರಿ-ಜೂನ್) ನಲ್ಲಿ ಭಾರತದ ಅತಿ ಹೆಚ್ಚು ಮಾರಾಟವಾದ SUV ಆಗಿದೆ.