ಬೈಕ್ & ಸ್ಕೂಟರ್‌ಗಳಿಗೆ ಟೋಲ್ ಶುಲ್ಕ.. ಸ್ಪಷ್ಟನೆ

ಇನ್ಮುಂದೆ ಬೈಕ್ & ಸ್ಕೂಟರ್‌ ಸೇರಿದಂತೆ ವಿವಿಧ ದ್ವಿಚಕ್ರ ವಾಹನಗಳು (Two Wheelers), ಹೆದ್ದಾರಿಗಳಲ್ಲಿ ಟೋಲ್ ಶುಲ್ಕ (Toll Charges) ಪಾವತಿಸಬೇಕಾಗುತ್ತದೆ ಎಂದು ವರದಿಯಾಗಿತ್ತು. ಇದರಿಂದ ವಾಹನ ಸವಾರರು ಬಹಳಷ್ಟು ಗೊಂದಲಕ್ಕೆ ಒಳಗಾಗಿದ್ದರು. ಸದ್ಯ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸ್ಪಷ್ಟನೆ ನೀಡಿದ್ದು, ಎಲ್ಲ ಊಹಾಪೋಹಗಳಿಗೂ ತೆರೆ ಎಳೆದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ನಿರುದ್ಯೋಗಿ ಟೆಕ್ಕಿಯ ಡೇರ್‌ಡೆವಿಲ್ ಡ್ರೈವ್

ಹೈದರಾಬಾದ್ ಬಳಿ ನಡೆದ ಆಘಾತಕಾರಿ ಘಟನೆಯೊಂದು ಎಲ್ಲರನ್ನು ಶಾಕ್‌ಗೆ ಗುರಿಮಾಡಿದೆ. ಕೆಲಸ ಕಳೆದುಕೊಂಡಿದ್ದ ಲಕ್ನೋದ ಮಹಿಳಾ ನಿರುದ್ಯೋಗಿ ಟೆಕ್ಕಿಯೊಬ್ಬರು ತಮ್ಮ ಕಾರನ್ನು ರೈಲ್ವೆ ಹಳಿಗಳ ಮೇಲೆ ಓಡಿಸಿದ್ದಾರೆ. ಇದರಿಂದಾಗಿ ಜೂನ್ 26, 2025 ರಂದು 45 ನಿಮಿಷಗಳ ಕಾಲ ರೈಲು ಸೇವೆಗಳಲ್ಲಿ ತೀವ್ರ ಅಡಚಣೆ ಉಂಟಾಗಿದೆ. ಇತ್ತೀಚೆಗೆ ಕೆಲಸದಿಂದ ವಜಾಗೊಳಿಸಲಾದ ಮಾಜಿ ಐಟಿ ಉದ್ಯೋಗಿ ಎಂದು ಗುರುತಿಸಲ್ಪಟ್ಟ ಮಹಿಳೆ, ತೆಲಂಗಾಣದ ನಾಗುಲಪಲ್ಲಿ ಮತ್ತು ಶಂಕರಪಲ್ಲಿ ನಡುವಿನ ಹಳಿಗಳ ಉದ್ದಕ್ಕೂ ಹಲವಾರು ಕಿಲೋಮೀಟರ್ ತಮ್ಮ ಕಾರನ್ನು ಓಡಿಸಿದ್ದಾರೆ.

627 Km ರೇಂಜ್.. 5-ಸ್ಟಾರ್ ಸೇಫ್ಟಿ ರೇಟಿಂಗ್, ನಾಳೆ Tata Harrier..

ಟಾಟಾ ಹ್ಯಾರಿಯರ್ ಇವಿ (Tata Harrier EV) ಪ್ರಮುಖ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಇದೇ 23ರಂದು ಈ ಕಾರಿನ ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ರೂಪಾಂತರಗಳ (ವೇರಿಯೆಂಟ್) ಬೆಲೆಯನ್ನು ಘೋಷಣೆ ಮಾಡಲಾಗಿದೆ. ಇವು ರೂ.21.49 ಲಕ್ಷದಿಂದ ರೂ.ರೂ.27.49 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿವೆ. ನಾಳೆ (ಜೂನ್-27) ಎಡಬ್ಲ್ಯೂಡಿ (ಆಲ್ ವೀಲ್ ಡ್ರೈವ್) ರೂಪಾಂತರಗಳ ಬೆಲೆಯನ್ನು ಘೋಷಣೆ ಮಾಡಲಾಗುತ್ತದೆ. ಜುಲೈ 2ರಿಂದ ಬುಕ್ಕಿಂಗ್ ಕೂಡ ಶುರುವಾಗಲಿದೆ. ಆಸಕ್ತ ಗ್ರಾಹಕರು ಸಮೀಪದ ಶೋರೂಂಗೆ ಭೇಟಿ ನೀಡಿ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆರ್ಡರ್ ಮಾಡಬಹುದು.

Affordable bikes: ಭಾರತದ ಅತ್ಯಂತ ಕೈಗೆಟುಕುವ ಬೈಕ್‌ಗಳು

ಮಧ್ಯಮ ವರ್ಗದ ಕುಟುಂಬಗಳಿಗೆ ಬೈಕುಗಳು ಅತ್ಯಗತ್ಯ ವಾಹನಗಳಾಗಿವೆ. ಖರೀದಿದಾರರು ಕೇವಲ ಕೈಗೆಟುಕುವಿಕೆಯನ್ನು ಮಾತ್ರವಲ್ಲ, ವಿಶ್ವಾಸಾರ್ಹತೆ, ಮೈಲೇಜ್ ಮತ್ತು ದೀರ್ಘಕಾಲೀನ ಮೌಲ್ಯವನ್ನು ಸಹ ಬಯಸುತ್ತಾರೆ. ಇಂತಹ ಗ್ರಾಹಕರಿಗಾಗಿಯೇ ಹೀರೋ, ಟಿವಿಎಸ್, ಹೋಂಡಾ, ಬಜಾಜ್ ನಂತಹ ಪ್ರಮುಖ ದ್ವಿಚಕ್ರ ವಾಹನ ತಯಾರಕರು ಹಲವು ಬಜೆಟ್ ಬೈಕ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದ್ದಾರೆ. ಮಿತವ್ಯಯದ ಮತ್ತು ವಿಶ್ವಾಸಾರ್ಹ ಬೈಕುಗಳನ್ನು ಗಮನಾರ್ಹವಾಗಿ ಕಡಿಮೆ ಬೆಲೆಗೆ ನೀಡುತ್ತಿದ್ದಾರೆ. ಸದ್ಯ ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಬೈಕುಗಳ ಬಗ್ಗೆ ಮಾಹಿತಿ ಇಲ್ಲಿದೆ.
Advertisement

ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್‌ನಿಂದ ಗ್ರಾಹಕರಿಗೆ ಶಾಕ್.. ಕಾರಣವೇನು?

ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್‌ (JSW MG Motor) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿಂಡ್ಸರ್‌ ಇವಿ, ಕಾಮೆಟ್ ಇವಿ, ಜಡ್ಎಸ್ ಇವಿ, ಹೆಕ್ಟರ್ ಮತ್ತು ಆಸ್ಟರ್ ಸೇರಿದಂತೆ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಕಂಪನಿಯು ಹೋದ ತಿಂಗಳು (ಮೇ-2025) 6,304 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. 2024ರ ಇದೇ ಅವಧಿಯಲ್ಲಿ 4,510 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಈ ಅಂಕಿಸಂಖ್ಯೆಗೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 40% ಪ್ರಗತಿಯಾಗಿದೆ.

ಬಜಾಜ್ ಚೇತಕ್ ಇವಿಗೆ ಶುರುವಾಯ್ತು ನಡುಕ... ಸುಜುಕಿ ಆಕ್ಸಿಸ್ ಇವಿ ಸಜ್ಜ

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್​ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಪ್ರಮುಖ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಪೈಪೋಟಿಯೊಂದಿಗೆ ತಮ್ಮ ಇವಿಗಳನ್ನು ಬಿಡುಗಡೆ ಮಾಡುತ್ತಿವೆ. ಬಜಾಜ್ ತನ್ನ ಚೇತಕ್ ಇವಿಯೊಂದಿಗೆ ಭಾರತದಲ್ಲಿ ಸದ್ಯ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದರೆ, ಸುಜುಕಿ ಕಂಪನಿಯು ತನ್ನ ಆಕ್ಸಿಸ್ ಇವಿ ಬಿಡುಗಡೆಯೊಂದಿಗೆ ಚೇತಕ್ ಇವಿಗೆ ಪೈಪೋಟಿ ನೀಡಲು ಸಜ್ಜಾಗುತ್ತಿದೆ. ಇ-ಆಕ್ಸಿಸ್ ಬಿಡುಗಡೆಯಾಗದಿದ್ದರು ಅದರ ಪ್ರಮುಖ ವಿಶೇಷತೆಗಳು ಈಗಾಗಲೇ ಬಹಿರಂಗವಾಗಿವೆ. ಸುಜುಕಿ ಇ-ಆಕ್ಸೆಸ್ ಮತ್ತು ಬಜಾಜ್​​ ಚೇತಕ್ 3001 ಎರಡು ಸ್ಕೂಟರ್​ಗಳ ವೈಶಿಷ್ಟ್ಯಗಳು, ಬೆಲೆ ಮತ್ತು ಪರ್ಫಾಮೆನ್ಸ್ ಕುರಿತು ಮಾಹಿತಿ ಇಲ್ಲಿದೆ.

ಸ್ವಿಫ್ಟ್‌ನಿಂದ ವ್ಯಾಗನ್ಆರ್‌ವರೆಗೆ.. 2025ರಲ್ಲಿ ಗರಿಷ್ಠ ಮೈಲೇಜ್..

ಹೊಸ ಕಾರು ಖರೀದಿ ಮಾಡಬೇಕು ಎಂಬುದು ಹಲವರ ವರ್ಷಗಳ ಕನಸಾಗಿರುತ್ತದೆ. ಆದರೆ, ಯಾವ ಕಾರನ್ನು ತೆಗೆದುಕೊಳ್ಳಬೇಕು ಎಂಬ ಗೊಂದಲದಲ್ಲಿರುತ್ತಾರೆ. ನೀವು ಬಜೆಟ್ ದರದಲ್ಲಿ ಉತ್ತಮ ಇಂಧನ ದಕ್ಷತೆ (Fuel Efficiency) ಹೊಂದಿರುವ ನೂತನ ಕಾರೊಂದನ್ನು ಮನೆಗೆ ತರಲು ಹುಡುಕಾಟ ನಡೆಸುತ್ತಿದ್ದೀರಾ.. ಹಾಗಾದರೆ, ಮಾರುತಿ ಸುಜುಕಿ ಸ್ವಿಫ್ಟ್, ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್, ಮಾರುತಿ ಸುಜುಕಿ ವ್ಯಾಗನ್ಆರ್, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಹಾಗೂ ಮಾರುತಿ ಸುಜುಕಿ ಸೆಲೆರಿಯೊ ಕಾರುಗಳು ಅತ್ಯುತ್ತಮ ಆಯ್ಕೆಯಾಗಲಿವೆ. ಬನ್ನಿ, ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

Mahindra: ಹೊಸ ಮಹೀಂದ್ರಾ CNG ಪಿಕ್-ಅಪ್ ಬಿಡುಗಡೆ: ಆಧುನಿಕ ಫೀಚರ್ಸ್

ಭಾರತದಲ್ಲಿ ನಂ.1 ಪಿಕಪ್ ಬ್ರ್ಯಾಂಡ್ ಆಗಿರುವ ಬೊಲೆರೊ ಪಿಕ್-ಅಪ್ ತಯಾರಕರಾದ ಮಹೀಂದ್ರಾ (Mahindra), ಇಂದು ತಮ್ಮ ಹೊಚ್ಚ ಹೊಸ ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಎಚ್‌ಡಿ 1.9 ಸಿಎನ್‌ಜಿ (Bolero MaXX Pik-Up HD 1.9 CNG) ಯನ್ನು ಬಿಡುಗಡೆ ಮಾಡಿದೆ. ಇದು ಸಣ್ಣ ವಾಣಿಜ್ಯ ವಾಹನ ವಿಭಾಗದಲ್ಲಿ ಹೊಸ ಎಂಟ್ರಿಯಾಗಿದ್ದು, ರೂ. 11.19 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಫೀಚರ್ - ಪ್ಯಾಕ್ಡ್ ಪಿಕಪ್ ಟ್ರಕ್ 1.85 ಟನ್‌ಗಳ ಅತ್ಯಧಿಕ ಪೇಲೋಡ್ ಸಾಮರ್ಥ್ಯವನ್ನು ಹೊಂದಿದ್ದು, ಗ್ರಾಹಕರಿಗೆ ಸಾಟಿಯಿಲ್ಲದ ಸಾಮರ್ಥ್ಯ ಮತ್ತು ಆಯ್ಕೆಯನ್ನು ನೀಡುತ್ತದೆ ಎಂದು ಮಹೀಂದ್ರಾ ಹೇಳಿದೆ.

ಬಡವರ ಬಂಡಿ: 65 Km ಮೈಲೇಜ್.. 68,000 ಆರಂಭಿಕ ಬೆಲೆ, Honda Shine..

ಹೋಂಡಾ ಶೈನ್ (Honda Shine) ಪ್ರಖ್ಯಾತ ಮೋಟಾರ್‌ಸೈಕಲ್ ಆಗಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆ & ವಿಶ್ವಾಸಾರ್ಹತೆಗೂ ಹೆಸರುವಾಸಿಯಾಗಿದೆ. ಮಧ್ಯಮ ವರ್ಗದ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಮೇ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಪ್ರಮುಖ 10 ಮೋಟಾರ್‌ಸೈಕಲ್‌ಗಳ ಪಟ್ಟಿ ಪ್ರಕಟಗೊಂಡಿದೆ. ಅದರಲ್ಲಿ 'ಹೋಂಡಾ ಶೈನ್' ಎರಡನೇ ಸ್ಥಾನದಲ್ಲಿದ್ದು, ಕಂಪನಿಯು ನಿರೀಕ್ಷೆ ಮಾಡಿದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಹಾಗೆಯೇ ಈ ಪಟ್ಟಿಯಲ್ಲಿ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನದಲ್ಲಿದ್ದರೆ, ಬಜಾಜ್ ಪಲ್ಸರ್ ಮೂರನೇ ಸ್ಥಾನದಲ್ಲಿದೆ.

Komaki: ಸೈಕಲ್ ಬೆಲೆಯಲ್ಲಿ ಮೊಪೆಡ್ ಬಿಡುಗಡೆ

ಪ್ರಮುಖ ಎಲೆಕ್ಟ್ರಿಕ್ ವಾಹನ ಬ್ರಾಂಡ್ ಆಗಿರುವ ಕೊಮಾಕಿ ಎಲೆಕ್ಟ್ರಿಕ್ (Komaki Electric), ಸ್ಮಾರ್ಟ್ ರೈಡಿಂಗ್ ಅನ್ನು ಸುಗಮಗೊಳಿಸಲು ತನ್ನ ಹೊಸ ಶ್ರೇಣಿಯ XR1 ಸಿರೀಸ್ ಅನ್ನು ಬಿಡುಗಡೆ ಮಾಡಿದೆ. ಸುಧಾರಿತ ವಾಹನವು ಪುನರುತ್ಪಾದಕ ಚಲನ ಶಕ್ತಿ (regenerative kinetic energy) ಯಿಂದ ಚಾಲಿತವಾಗಿದ್ದು, ಇದು ಬ್ಯಾಟರಿ ಖಾಲಿಯಾದ ನಂತರವೂ ಸವಾರಿ ಮಾಡಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಸವಾರರು ಪ್ರಯಾಣದ ಮಧ್ಯದಲ್ಲಿ ಬ್ಯಾಟರಿ ಖಾಲಿಯಾಗುವ ಸವಾರರ ಸಾಮಾನ್ಯ ಕಾಳಜಿಯನ್ನು ಇದು ನಿವಾರಿಸುತ್ತದೆ ಎಂದು ಕಂಫನಿ ಭರವಸೆ ನೀಡಿದೆ. ಸ್ಕೂಟರ್ ಬೆಲೆ ಹಾಗೂ ವಿಶೇಷತೆಗಳು ಇಲ್ಲಿವೆ.

5-ಸೀಟರ್.. 33 ಕಿಲೋಮೀಟರ್‌ವರೆಗೆ ಮೈಲೇಜ್.. 10 ಲಕ್ಷಕ್ಕಿಂತ ಕಡಿಮೆ..

ಭಾರತದ ಕಾರು ಮಾರುಕಟ್ಟೆಯಲ್ಲಿ ಹ್ಯಾಚ್‌ಬ್ಯಾಕ್, ಎಸ್‌ಯುವಿ, ಸೆಡಾನ್ ಹಾಗೂ ಎಂಪಿವಿಗಳನ್ನು ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಸೆಡಾನ್‌ಗಳು ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿಯಾಗಿದ್ದು, ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ ದೊಡ್ಡ ಗಾತ್ರದ ಬೂಟ್ ಸ್ಪೇಸ್‌ನ್ನು ಹೊಂದಿರುತ್ತವೆ. ಈ ಕಾರಣಕ್ಕೆ ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಾರೆ. ನೀವು ರೂ.10 ಲಕ್ಷಕ್ಕಿಂತ ಕಡಿಮೆ ಬೆಲೆಗೆ 5-ಆಸನಗಳ ಹೊಚ್ಚ ಹೊಸ ಸೆಡಾನ್‌ವೊಂದನ್ನು ಮನೆಗೆ ತರಲು ಆಲೋಚಿಸಿದ್ದೀರಾ.. ಹಾಗಾದರೆ, ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಜ್, ಹ್ಯುಂಡೈ ಔರಾ, ಟಾಟಾ ಟಿಗೂರ್ ಹಾಗೂ ಮಾರುತಿ ಸುಜುಕಿ ಸಿಯಾಜ್ ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

41 ವರ್ಷಗಳ ಬಳಿಕ ನಮ್ಮ ಹೆಮ್ಮೆಯ ಯೋಧ ಬಾಹ್ಯಾಕಾಶಕ್ಕೆ..

ಗಗನಯಾನವೆಂಬುದು ಒಂದು ಕನಸು. ಅಂತಹ ಬಹುವರ್ಷಗಳ ಕನಸೊಂದನ್ನು ನಮ್ಮ ದೇಶದ ಹೆಮ್ಮೆಯ ಯೋಧರೊಬ್ಬರು ನನಸು ಮಾಡಿದ್ದಾರೆ. ನಾಸಾ, ಇಸ್ರೋ, ಆ್ಯಕ್ಸಿಯಂ ಸ್ಪೇಸ್ ಹಾಗೂ ಸ್ಪೇಸ್‌ಎಕ್ಸ್‌ನ ಒಡಂಬಡಿಕೆಯ ಭಾಗವಾಗಿ, ಆ್ಯಕ್ಸಿಯಂ 4 (Axiom 4) ಮಿಷನ್‌ನಡಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla), ಬಾಹ್ಯಾಕಾಶ ಯಾನವನ್ನು ಕೈಗೊಂಡಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಅಮೆರಿಕದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಫಾಲ್ಕನ್-9 (Falcon 9) ಹೆಸರಿನ ರಾಕೆಟ್‌ನಲ್ಲಿ ಅಂತರಿಕ್ಷಕ್ಕೆ ಪ್ರಯಾಣ ಬೆಳೆಸಿದ್ದಾರೆ.
Advertisement

Steelbird: ಅಗ್ಗದ ಬೆಲೆಗೆ ಅಂತರಾಷ್ಟ್ರೀಯ ಮಟ್ಟದ ಹೊಸ ಹೆಲ್ಮೆಟ್

ಭಾರತದ ಪ್ರಮುಖ ಹೆಲ್ಮೆಟ್ ತಯಾರಕರಲ್ಲಿ ಒಂದಾದ ಸ್ಟೀಲ್‌ಬರ್ಡ್ ಹೆಲ್ಮೆಟ್ಸ್ ಕಂಪನಿಯು, ಸುರಕ್ಷತೆ, ಸೌಕರ್ಯ ಮತ್ತು ದೈನಂದಿನ ಸವಾರಿಗಾಗಿ ವಿನ್ಯಾಸಗೊಳಿಸಲಾದ ತನ್ನ ಇತ್ತೀಚಿನ ಮಾದರಿಯಾದ' ಟೊರ್ನಾಡೋ' ಹೆಲ್ಮೆಟ್ ಅನ್ನು ಬಿಡುಗಡೆ ಮಾಡಿದೆ. ಇದು DOT, ISI ಅಡಿಯಲ್ಲಿ ಪ್ರಮಾಣೀಕರಿಸಲ್ಪಟ್ಟ ದೃಢವಾದ ಹೆಲ್ಮೆಟ್ ಆಗಿದ್ದು, ದೀರ್ಘ ಪ್ರಯಾಣ ಮಾಡುವ ಪ್ರಯಾಣಿಕರಿಗಾಗಿ ರಚಿಸಲಾಗಿದೆ. ಅಲ್ಲದೇ ಇದು ಭಾರತೀಯ ಮತ್ತು ಅಂತರರಾಷ್ಟ್ರೀಯ ಸುರಕ್ಷತಾ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸುತ್ತದೆ ಎಂದು ಕಂಪನಿ ಹೇಳಿದೆ. ಈ ಹೆಲ್ಮೆಟ್ ಹಲವು ವಿಶೇಷತೆಗಳನ್ನು ಓಳಗೊಂಡಿದ್ದು, ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

7-ಸೀಟರ್.. ಅತಿ ಶೀಘ್ರದಲ್ಲೇ ಜನಪ್ರಿಯ Mahindra Scorpio N..

ಮಹೀಂದ್ರಾ ಸ್ಕಾರ್ಪಿಯೋ ಎನ್ (Mahindra Scorpio N) ಜನಪ್ರಿಯ ಎಸ್‌ಯುವಿಯಾಗಿದೆ. 2022ರಲ್ಲಿ ಈ ಕಾರನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಇದು ಹಲವು ಹೊಸತನಗಳಿಗೂ ಸಾಕ್ಷಿಯಾಗಿದ್ದು, ಹೆಚ್ಚು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸದ್ಯ, ನವೀಕರಣಕ್ಕೆ ಒಳಪಟ್ಟ 'ಸ್ಕಾರ್ಪಿಯೋ ಎನ್' ಎಸ್‌ಯುವಿಯನ್ನು ಮಾರಾಟಕ್ಕೆ ತರಲು ಕಂಪನಿಯು ಎಲ್ಲ ರೀತಿಯ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಅದಕ್ಕೆ ಸಂಬಂಧಿಸಿದ ಟೀಸರ್‌ವೊಂದನ್ನು ಬಿಡುಗಡೆಗೊಳಿಸಿದೆ.

ZELIO: ಹೊಸ ಸ್ಕೂಟರ್ ಬಿಡುಗಡೆಗೆ ಸಜ್ಜು: 150 ಕೆ.ಜಿ ಹೊರುವ ಸಾಮರ್ಥ್ಯ

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್‌ಗಳಲ್ಲಿ ಒಂದಾದ ಜೀಲಿಯೋ ಇ (ZELIO E) ಮೊಬಿಲಿಟಿ, ಜುಲೈ 2025 ರಲ್ಲಿ ತನ್ನ ಕಡಿಮೆ-ವೇಗದ ಕಾರ್ಗೋ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ ಲೋಜಿಕ್ಸ್ (Logix)ನ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಸಣ್ಣ ಕೆಲಸಗಾರರು, ಡೆಲಿವರಿ ಬಾಯ್ಸ್ ಮತ್ತು ಸಣ್ಣ ವ್ಯಾಪಾರ ಮಾಲೀಕರಿಗಾಗಿ ನಿರ್ಮಿಸಲಾದ ಹೊಸ Logix, ಉತ್ತಮ ಪರ್ಫಾಮೆನ್ಸ್, ಹೆಚ್ಚಿನ ರೇಂಜ್ ಮತ್ತು ವರ್ಧಿತ ವಿಶ್ವಾಸಾರ್ಹತೆಯ ಮೂಲಕ ಭಾರತದ ನಗರ ಮತ್ತು ಅರೆ-ನಗರ ಮಾರುಕಟ್ಟೆಗಳಲ್ಲಿ ಕೊನೆಯ ಮೈಲಿ ಲಾಜಿಸ್ಟಿಕ್ಸ್‌ಗೆ ಬೆಸ್ಟ್ ಆಯ್ಕೆಯಾಗಲಿದೆ ಎಂದು ಕಂಪನಿ ಹೇಳಿದೆ.

Honda: ಎಲೆಕ್ಟ್ರಿಕ್ ಆಕ್ಟೀವಾ ಬೇಕೆ? ತಿಂಗಳಿಗೆ ರೂ. 678 ಪಾವತಿಸಿ

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ, ಇಂದು ಬೆಂಗಳೂರಿನ ಮಲ್ಲೇಶ್ವರಂನ ಮಂತ್ರಿ ಸ್ಕ್ವೇರ್ ಮಾಲ್‌ನಲ್ಲಿ ತನ್ನ ಮೊದಲ EV ಕಾನ್ಸೆಪ್ಟ್ ಸ್ಟೋರ್ ಉದ್ಘಾಟಿಸಿದೆ. ಈ ವಿಶಿಷ್ಟ ಕಾನ್ಸೆಪ್ಟ್ ಸ್ಟೋರ್ ಗ್ರಾಹಕರಿಗೆ ಭವಿಷ್ಯದ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದು ಹೋಂಡಾದ ಹೊಸ ತಂತ್ರಜ್ಞಾನ ಮತ್ತು ನಾವೀನ್ಯತೆಯ ಪ್ರಪಂಚದ ಒಂದು ನೋಟವನ್ನು ನೀಡುತ್ತದೆ. ಜೊತೆಗೆ ಕಂಪನಿಯು ತನ್ನ ಆಕ್ಟೀವಾ-ಇ ಗಾಗಿ BaaS ಲೈಟ್ ಯೋಜನೆಯನ್ನು ಸಹ ಘೋಷಿಸಿದೆ. ಇಲ್ಲಿ ಗ್ರಾಹಕರು ಕೇವಲ ತಿಂಗಳಿಗೆ ರೂ. 678 ಪಾವತಿಸಿ ಸ್ಕೂಟರ್ ಮಾಲೀಕತ್ವವನ್ನು ಪಡೆಯಬಹುದು ಎಂದು ಹೋಂಡಾ ತಿಳಿಸಿದೆ.

28 ಕಿ.ಮೀ ಮೈಲೇಜ್.. ಹೈಬ್ರಿಡ್ ಎಂಜಿನ್‌ನೊಂದಿಗೆ ಜಪಾನ್‌ನಲ್ಲಿ..

ಮಾರುತಿ ಸುಜುಕಿ (Maruti Suzuki) ಮಾತೃ ಸಂಸ್ಥೆ ಸುಜುಕಿ ಮೋಟಾರ್ ಕಾರ್ಪೊರೇಷನ್ (Suzuki Motor Corporation), ಜಪಾನ್‌ನಲ್ಲಿ ಆಲ್ಟೊ (Alto) ಹ್ಯಾಚ್‌ಬ್ಯಾಕ್‌ನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಅಲ್ಲಿನ ಗ್ರಾಹಕರು ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. 2021ರ ವರ್ಷಾಂತ್ಯದಲ್ಲಿ 9ನೇ ತಲೆಮಾರಿನ ಆಲ್ಟೊವನ್ನು ಬಿಡುಗಡೆಗೊಳಿಸಲಾಗಿತ್ತು. ಸದ್ಯ, ಈ ಕಾರಿನ ನವೀಕರಿಸಿದ ಅಂದರೆ, ಫೇಸ್‌ಲಿಫ್ಟ್‌ ಮಾಡೆಲ್‌ನ್ನು ಕೂಡ ಪರಿಚಯಿಸಲಾಗಿದೆ. ನೂತನ 2025ರ 'ಸುಜುಕಿ ಆಲ್ಟೊ' ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಎಲ್ಲರಿಗೂ ಬೆಂಗಳೂರೇ ಬೇಕು... ದೇಶದ ಅತಿದೊಡ್ಡ ಚಾರ್ಜಿಂಗ್ ಹಬ್

ಎಲೆಕ್ಟ್ರಿಕ್ ವಾಹನಗಳ ಮೂಲಸೌಕರ್ಯಕ್ಕಾಗಿ 'ಚಾರ್ಜ್ ಝೋನ್' ಕಂಪನಿಯು (CHARGE ZONE) ಬೆಂಗಳೂರಿನಲ್ಲಿ ದೇಶದ ಅತಿದೊಡ್ಡ ಮತ್ತು ಅತ್ಯಂತ ಪವರ್‌ಫುಲ್ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಹಬ್‌ನ್ನು ಉದ್ಘಾಟನೆ ಮಾಡಿದೆ. ಹೆಚ್ಚಿನ ಪ್ರಮಾಣದಲ್ಲಿರುವ ನಗರದ ಎಲೆಕ್ಟ್ರಿಕ್ ವಾಹನಗಳಿಗೆ ತೊಂದರೆ ಮುಕ್ತ ಚಾರ್ಜಿಂಗ್ ಸೌಕರ್ಯ ಒದಗಿಸುವ ಉದ್ದೇಶದಿಂದ ನಿರ್ಮಿಸಲಾದ ಈ ಅತ್ಯಾಧುನಿಕ ಸೌಲಭ್ಯವು, ವಿಶ್ವಾಸಾರ್ಹ ಮತ್ತು ವೇಗದ EV ಚಾರ್ಜಿಂಗ್‌ನಲ್ಲಿ ಹೊಸ ಅಲೆ ಎಬ್ಬಿಸಲಿದೆ. ಇದು ದೇಶದ ಅತಿದೊಡ್ಡ ಚಾರ್ಜಿಂಗ್ ಹಬ್ ಆಗಿರುವ ಕಾರಣ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.

BMW ಕಾರಿನಲ್ಲಿ ಬಂದ್ರು.. ಹೊಸ ಟೊಯೊಟಾ ಇನ್ನೋವಾ ಖರೀದಿಸಿದ 40ರ..

ಮಮತಾ ಮೋಹನ್‌ದಾಸ್‌ (Mamta Mohandas) ಜನಪ್ರಿಯ ನಟಿ ಹಾಗೂ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು, ತಮಿಳು ಹಾಗೂ ತೆಲುಗು ಚಿತ್ರಗಳಲ್ಲೂ ಬಣ್ಣ ಹಚ್ಚಿದ್ದಾರೆ. ಕನ್ನಡದಲ್ಲಿ ಕಿಚ್ಚ ಸುದೀಪ್ ನಟನೆಯ ಗೊಳಿ ಸಿನಿಮಾದಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ಮಮತಾ ಅವರ ಅಭಿನಯಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ 2 ಫಿಲ್ಮ್‌ಫೇರ್ ಪ್ರಶಸ್ತಿಗಳು ಕೂಡ ಒಲಿದೆ.

ಭಾರತದಲ್ಲಿ BMW ಮಾನ್ಸೂನ್ ಸೇವಾ ಅಭಿಯಾನ ಆರಂಭ: ಏನೆಲ್ಲಾ ಸೇವೆಗಳಿವೆ?

ಬಿಎಂಡಬ್ಲ್ಯು (BMW) ಕಂಪನಿಯು ತನ್ನ ಡೀಲರ್ ನೆಟ್‌ವರ್ಕ್‌ನಲ್ಲಿ ಜೂನ್ 15 ರಿಂದ ನವೆಂಬರ್ 30 ರವರೆಗೆ BMW ಮಾನ್ಸೂನ್ ಸರ್ವಿಸ್ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಈ ವಿಶೇಷ ಅಭಿಯಾನವು ಭಾರತದ ಎಲ್ಲಾ BMW ಅಧಿಕೃತ ಕಾರ್ಯಾಗಾರಗಳಲ್ಲಿ ನಡೆಯಲಿದೆ. ವಾಹನ ಮೇಂಟೇನಸ್ಸ್, ಸಮಯಕ್ಕೆ ಸರಿಯಾಗಿ ನಿರ್ವಹಣೆ ಮತ್ತು BMW/MINI ವಾಹನಗಳ ಒಟ್ಟಾರೆ ತಿಳುವಳಿಕೆಯ ಕುರಿತು ಗ್ರಾಹಕರಿಗೆ ಸಮಗ್ರ ಮಾಹಿತಿ ಮತ್ತು ಸಲಹೆಗಳನ್ನು ನೀಡಲು BMW ಮಾನ್ಸೂನ್ ಸರ್ವಿಸ್ ಅಭಿಯಾನವನ್ನು ಮಾಡಲಾಗುತ್ತಿದೆ. ಈ ಕಾರ್ಯಕ್ರಮವು ಗ್ರಾಹಕರಿಗೆ ಪೂರಕ ವಾಹನ ಪರಿಶೀಲನೆಯನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿದೆ.
Advertisement

27 Km ಮೈಲೇಜ್.. 5 ಲಕ್ಷ.. ಜನಪ್ರಿಯ Maruti Eecoಗೆ 3 ಬದಲಿ..

ಮಾರುತಿ ಸುಜುಕಿ ಇಕೋ (Maruti Suzuki Eeco) ಜನಪ್ರಿಯ ವ್ಯಾನ್ ಆಗಿದೆ. ಇದು ರೂ.5.70 ಲಕ್ಷದಿಂದ ರೂ.6.96 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 1.2-ಲೀ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ ಆಯ್ಕೆಯನ್ನು ಒಳಗೊಂಡಿದೆ. 19 ರಿಂದ 27 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 5/ 7 ಆಸನಗಳನ್ನು ಒಳಗೊಂಡಿದೆ. ಸೆಮಿ ಡಿಜಿಟಲ್ ಸ್ಪೀಡೋಮೀಟರ್ ಮತ್ತು ಮ್ಯಾನುವಲ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳನ್ನು ಪಡೆದಿದೆ. ನೀವು 'ಇಕೋ'ಗೆ ಪರ್ಯಾಯವಾಗಿ ಈ 3 ಕಾರುಗಳನ್ನು ಖರೀದಿ ಮಾಡಬಹುದು. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Suzuki: ರೂ.87,000, 45 Km ಮೈಲೇಜ್.. ಸುಜುಕಿ ಆಕ್ಸೆಸ್ 125ಗೆ..

ಸುಜುಕಿ ಆಕ್ಸೆಸ್ 125 (Suzuki Access 125) ಪ್ರಖ್ಯಾತ ಸ್ಕೂಟರ್ ಆಗಿದ್ದು, ವಿಶ್ವಾಸಾರ್ಹತೆ ಹಾಗೂ ಉತ್ತಮವಾದ ಕಾರ್ಯಕ್ಷಮತೆಯಿಂದ ಎಲ್ಲೆಡೆ ಮನೆ ಮಾತಾಗಿದೆ. ಈ ಸ್ಕೂಟರ್ ದಿನಬಳಕೆಗೂ ಹೆಚ್ಚು ಸೂಕ್ತವಾಗಿದೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಸ್ಕೂಟರ್‌ಗಳ ಪಟ್ಟಿ ಪ್ರಕಟಗೊಂಡಿದೆ. ಅದರಲ್ಲಿ 'ಆಕ್ಸೆಸ್ 125' ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಹೋಂಡಾ ಆಕ್ಟಿವಾ ಇದ್ದರೆ, ಎರಡನೇ ಸ್ಥಾನವನ್ನು ಟಿವಿಎಸ್ ಜೂಪಿಟರ್ ಭದ್ರಪಡಿಸಿಕೊಂಡಿದೆ.

Tata: ಬಲಿಷ್ಟ ಬಂಡೆಯಂಥಹ ಟಾಟಾ ಕಾರಿಗೆ 5-ಸ್ಟಾರ್

ಇತ್ತೀಚೆಗೆ ಬಿಡುಗಡೆಯಾದ ಟಾಟಾ ಹ್ಯಾರಿಯರ್ ಇವಿ, ಭಾರತ್ ಎನ್‌ಸಿಎಪಿ ಕ್ರ್ಯಾಶ್ ಪರೀಕ್ಷೆಗಳಲ್ಲಿ ಪೂರ್ಣ 5-ಸ್ಟಾರ್ ರೇಟಿಂಗ್‌ನೊಂದಿಗೆ ಹೊರಬಂದಿದೆ. ಇದು ವಯಸ್ಕ ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಯಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್‌ ಗಳಿಸಿದೆ. ಭಾರತ್ ಎನ್‌ಸಿಎಪಿ ಹ್ಯಾರಿಯರ್ ಇವಿಯ ಟಾಪ್-ಸ್ಪೆಕ್ ಎಂಪವರ್ಡ್ 75 ಮತ್ತು ಎಂಪವರ್ಡ್ 75 AWD ವೇರಿಯೆಂಟ್‌ಗಳನ್ನು ಪರೀಕ್ಷಿಸಿದೆ. ಆದರೆ ಎಲ್ಲಾ ವೇರಿಯೆಂಟ್‌ಗಳ ನಿರ್ಮಾಣ ಗುಣಮಟ್ಟ ಒಂದೇ ಆಗಿರುವುದರಿಂದ ಈ ಕ್ರ್ಯಾಶ್ ಟೆಸ್ಟ್ ಸೇಫ್ಟಿ ರೇಟಿಂಗ್ ಹ್ಯಾರಿಯರ್ ಇವಿಯ ಎಲ್ಲಾ ವೇರಿಯೆಂಟ್‌ಗಳಿಗೆ ಅನ್ವಯಿಸುತ್ತದೆ ಎಂದು ವರದಿಯಾಗಿದೆ.

ಜುಲೈ 1ಕ್ಕೆ ಹೊಸ Hero Electric Scooter ಬಿಡುಗಡೆ.. ರೂ.65,000..

ಬಹುನಿರೀಕ್ಷಿತ ಹೀರೋ ವಿಡಾ ವಿಎಕ್ಸ್2 (Hero Vida VX2) ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದು ಜುಲೈ 1 ರಂದು ಮಾರಾಟಕ್ಕೆ ಬರಲಿದ್ದು, ಹಲವು ಹೊಸತನಗಳಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಅತಿ ಕಡಿಮೆ ಬೆಲೆಗೂ ಲಭ್ಯವಾಗಲಿದ್ದು, ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಖರೀದಿ ಮಾಡಬಹುದು ಎನ್ನಲಾಗಿದೆ. ಬನ್ನಿ, ಹೊಚ್ಚ ಹೊಸ 'ವಿಡಾ ವಿಎಕ್ಸ್2' ಇ-ಸ್ಕೂಟರ್‌ನ ಅಂದಾಜು ಬೆಲೆ ಎಷ್ಟಿರಲಿದೆ.. ಸಂಪೂರ್ಣ ಚಾರ್ಜ್‌ನಲ್ಲಿ ಕ್ರಮಿಸುವ ದೂರವೆಷ್ಟು?, ಜೊತೆಗೆ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ. ಬೆಲೆ (Price): ನೂತನ ಹೀರೋ ವಿಡಾ ವಿಎಕ್ಸ್2 ಎಲೆಕ್ಟ್ರಿಕ್ ಸ್ಕೂಟರ್ ಭಾರೀ ಕಡಿಮೆ ಬೆಲೆಗೆ ಮಾರಾಟಕ್ಕೆ ಬರುವ ಸಾಧ್ಯತೆಯಿದೆ. ಇದು ರೂ.65,000 ರಿಂದ ರೂ.70,000 (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ. ಈ ಸ್ಕೂಟರ್‌ನ್ನು ಕಂಪನಿಯು ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಯೋಜನೆಯಡಿ ಪರಿಚಯಿಸಲು ಸಜ್ಜಾಗಿದೆ.

133 ಬಿಡಿಎ ಸೈಟ್‌ಗಳು ಹರಾಜು..ಎಲ್ಲೆಲ್ಲಿ ನಿವೇಶನ?