2025ರ ಟಿವಿಎಸ್ ಐಕ್ಯೂಬ್ S ಮತ್ತು ಐಕ್ಯೂಬ್ ST ವಿಶೇಷತೆಗಳು!

2025ರ ಟಿವಿಎಸ್ ಐಕ್ಯೂಬ್ ಎಸ್ ಮತ್ತು ಟಿವಿಎಸ್ ಐಕ್ಯೂಬ್ ಎಸ್‌ಟಿ ಸ್ಕೂಟರ್‌ಗಳನ್ನು 15 ಮೇ 2025 ರಂದು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಬಾರಿ ಕಂಪನಿಯು ಗ್ರಾಹಕರ ಬೇಡಿಕೆಯ ಮೇರೆಗೆ ಹೆಚ್ಚಿನ ರೇಂಜ್ ನೀಡಲು ಸ್ವಲ್ಪ ದೊಡ್ಡ ಬ್ಯಾಟರಿ ಪ್ಯಾಕ್ ನೀಡಿರುವುದರಿಂದ ಟಿವಿಎಸ್ ಐಕ್ಯೂಬ್ ಮಾದರಿಗಳು ಈ ಹಿಂದೆ ಇರುವುದಕ್ಕಿಂತ ಹೆಚ್ಚಿನ ರೇಂಜ್ ನೀಡಲಿವೆ. ದೊಡ್ಡ ಬ್ಯಾಟರಿಯ ಹೊರತಾಗಿ, ಟಿವಿಎಸ್ ಐಕ್ಯೂಬ್ ಎಸ್‌ಟಿ ಹೊಸ ಹೆಚ್ಚುವರಿ ಫೀಚರ್ಸ್ ಕೂಡ ಪಡೆದುಕೊಂಡಿದೆ. ಹೆಚ್ಚುವರಿ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಲೈವ್ ವೀಡಿಯೋ ಮಾಡುತ್ತಿದ್ದಾಗಲೇ ಯುವತಿಗೆ ಗುಂಡೇಟು; ವೀಡಿಯೋ ವೈರಲ್


'ಕಿಂದರಿ ಜೋಗಿ' ಸಮಯದಲ್ಲೇ ರವಿಚಂದ್ರನ್ ಮೇಲೆ ಹಂಸಲೇಖ ಬೇಸರಗೊಂಡಿದ್ದೇಕೆ?


7-ಸೀಟರ್.. 'ಐರಾವತ'ದಂತಹ ವೈಶಿಷ್ಟ್ಯಗಳು.. ಹೊಸ Kia Carens Clavis..

ಇತ್ತೀಚೆಗೆ ಹೊಚ್ಚ ಹೊಸ ಕಿಯಾ ಕ್ಯಾರೆನ್ಸ್ ಕ್ಲಾವಿಸ್ (Kia Carens Clavis) ಎಂಪಿವಿಯನ್ನು ಅನಾವರಣಗೊಳಿಸಲಾಗಿತ್ತು. ಇದೇ 23ರಂದು ಈ ಕಾರನ್ನು ಮಾರಾಟಕ್ಕೂ ತರಲಾಗುತ್ತದೆ. ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆಗೂ ಚಾಲನೆ ನೀಡಲಾಗಿದ್ದು, ಆಸಕ್ತ ಖರೀದಿದಾರರು ನಿರ್ದಿಷ್ಟ ಮೊತ್ತವನ್ನು ಪಾವತಿ ಮಾಡಿ, ಆರ್ಡರ್ ಮಾಡಬಹುದು. ನೂತನ ಕ್ಲಾವಿಸ್ ಎಂಪಿವಿ ರೂ.11 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿರುವ ನಿರೀಕ್ಷೆಯಿದೆ. ಕೆಲವೇ ದಿನಗಳ ಹಿಂದೆ, ನಮ್ಮ ತಂಡದ ಸದಸ್ಯರು ಇದೇ ಕಾರನ್ನು ಟೆಸ್ಟ್ ಡ್ರೈವ್ ಕೂಡ ನಡೆಸಿದ್ದರು. ನಿಮಗಾಗಿ ಇಲ್ಲಿದೆ ಕನ್ನಡ ವಿಡಿಯೋ ರಿವ್ಯೂ..
Advertisement

ಅತ್ಯಂತ ಆಕರ್ಷಕ ಕಾರು... 23 ಕಿ.ಮೀ ಮೈಲೇಜ್, 1 ಲಕ್ಷ ಡಿಸ್ಕೌಂಟ್

ಮಾರುತಿ ಸುಜುಕಿ ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದ್ದು, ಭಾರತದಲ್ಲಿ ಪ್ರಸ್ತುತ ಕಂಪನಿಯು 17 ಕಾರುಗಳನ್ನು ಮಾರಾಟ ಮಾಡುತ್ತಿದೆ. ಅಗ್ಗದ ಬೆಲೆಗೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಂಪನಿಯು ತನ್ನ ಕಾರುಗಳನ್ನು ಮಾಡುತ್ತದೆ. ಇದರಲ್ಲಿ ಪ್ರೀಮಿಯಂ ಕಾರುಗಳನ್ನು ನೆಕ್ಸಾ ಮೂಲಕ ಮಾರಾಟ ಮಾಡಿದರೆ, ಬಡ ಹಾಗೂ ಮಧ್ಯಮ ವರ್ಗದವರಿಗಾಗಿ ಅರೆನಾ ಮೂಲಕ ಕಾರುಗಳನ್ನು ಮಾರಾಟ ಮಾಡುತ್ತದೆ. ಕಂಪನಿ ನೀಡುವ ಕೆಲವು ಕಾರುಗಳು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿವೆ. ಅಂತಹ ಕಾರುಗಳಲ್ಲಿ ಮಾರುತಿಯ ಪ್ರೀಮಿಯಂ ಕಾರಾಗಿರುವ ಇನ್ವಿಕ್ಟೋ ಕೂಡ ಒಂದು.

ಸದ್ದಿಲ್ಲದೆ ಬೆಲೆ ಏರಿಸಿ ಸೈಲೆಂಟ್ ಆದ ಕಂಪನಿ

ಭಾರತದಲ್ಲಿ ಪರ್ಫಾಮೆನ್ಸ್ ಮೋಟಾರ್‌ಸೈಕಲ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದರಲ್ಲೂ ಕೆಟಿಎಂ ಕಂಪನಿ ನೀಡುವ ಬೈಕ್‌ಗಳಿಗಾಗಿ ಯುವಕರು ಮುಗಿಬಿದ್ದು ಖರೀದಿಸುತ್ತಾರೆ. ಕಂಪನಿಯ ಕೆಟಿಎಂ 390 ಡ್ಯೂಕ್ ಸದ್ಯ ಸ್ಟ್ರೀಟ್ ಫೈಟರ್ ಲುಕ್‌ನೊಂದಿಗೆ ಭಾರತೀಯ ಮಧ್ಯಮ ವರ್ಗದ ಯುವಕರ ಹಾಟ್‌ ಫೇವರೆಟ್ ಆಗಿದೆ. ಇದರ ಪರ್ಫಾಮೆನ್ಸ್, ಪವರ್, ಫೀಚರ್ಸ್‌ಗೆ ಸಾಟಿಯಿಲ್ಲ ಎಂದು ಹೇಳಬಹುದು. ಇದೇ ವಿಭಾಗದಲ್ಲಿ ಬರುವ ಪ್ರತಿಸ್ಪರ್ಧಿ ಬೈಕ್‌ಗಳಿಗೆ ಹೋಲಿಸಿಕೊಂಡರೆ ಈ ಬೈಕ್ ಟಾಪ್‌ನಲ್ಲಿ ನಿಲ್ಲುತ್ತದೆ. ಇಂತಹ ಪರ್ಫಾಮೆನ್ಸ್ ಕಿಂಗ್ ಬೈಕ್ ಈಗ ತುಸು ಬೆಲೆ ಏರಿಕೆ ಪಡೆದುಕೊಂಡಿದೆ.

Kia Carens Clavis: ಹೊಸ ಕಿಯಾ ಕ್ಯಾರೆನ್ಸ್ ಕ್ಲಾವಿಸ್ ರಿವ್ಯೂ..

ದ.ಕೊರಿಯಾ ಮೂಲದ ಕಿಯಾ ಮೋಟಾರ್ಸ್ (Kia Motors) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. 2019ರಲ್ಲಿ ಸೆಲ್ಟೋಸ್ (Seltos) ಎಸ್‌ಯುವಿ ಬಿಡುಗಡೆಯೊಂದಿಗೆ ದೇಶೀಯ ಮಾರುಕಟ್ಟೆಗೂ ಪಾದಾರ್ಪಣೆ ಮಾಡಿತ್ತು. 2021ರ ಡಿಸೆಂಬರ್ 16ರಂದು ಇದೇ ಸೆಲ್ಟೋಸ್ ಪ್ಲಾಟ್‌ಫಾರ್ಮ್ ಆಧಾರಿತ ಕ್ಯಾರೆನ್ಸ್ (Clarens) ಎಂಪಿವಿಯನ್ನು ಅನಾವರಣಗೊಳಿಸಿತ್ತು. ಬರೋಬ್ಬರಿ 4 ವರ್ಷಗಳ ನಂತರ ಈ ಕಾರನ್ನು ನವೀಕರಣಕ್ಕೆ ಒಳಪಡಿಸಲಾಗಿದೆ. ಮೇ.8 ರಂದು ಮೇಲ್ದರ್ಜೆಗೇರಿಸಲಾಗಿರುವ 'ಕ್ಯಾರೆನ್ಸ್ ಕ್ಲಾವಿಸ್'ನ್ನು ಅದ್ದೂರಿಯಾಗಿ ಪರಿಚಯಿಸಲಾಗಿತ್ತು.

ಈ ಕಾರುಗಳನ್ನು ಏಕೆ ಖರೀದಿಸುತ್ತಿಲ್ಲ? 6 ಲಕ್ಷಕ್ಕಿಂತ ಕಡಿಮೆ ಬೆಲೆ

ಭಾರತದಲ್ಲಿ ಬಜೆಟ್ ಬೆಲೆಯ ಕಾರುಗಳಿಗೆ (affordable cars) ಭಾರೀ ಡಿಮ್ಯಾಂಡ್ ಇದೆ, ಕಡಿಮೆ ಬೆಲೆ ಇದೆಯೆಂದು ಏನನ್ನು ನಿರೀಕ್ಷಿಸದೆ ಕಾರು ಖರೀದಿಸುತ್ತಾರೆ ಎಂದುಕೊಳ್ಳುವುದು ತಪ್ಪು. ಗ್ರಾಹಕರು ನೀಡುವ ಹಣ್ಣಕ್ಕೆ ಮೌಲ್ಯವಿದೆಯೇ ಎಂಬುದನ್ನು ಕೂಡ ನೋಡುತ್ತಾರೆ. ತಮ್ಮ ಬಜೆಟ್‌ಗೆ ತಕ್ಕಂತೆ ಕಾರಿನಲ್ಲಿ ಎಲ್ಲಾ ವೈಶಿಷ್ಟ್ಯಗಳನ್ನು ನಿರೀಕ್ಷಿಸುತ್ತಾರೆ. ಜೊತೆಗೆ ವಾಹನ ಸುರಕ್ಷತೆಯನ್ನು ಪರಿಗಣಿಸುವುದು ಸರ್ವೇ ಸಾಮಾನ್ಯವಾಗಿಬಿಟ್ಟದೆ. ಒಂದು ಕಾಲದಲ್ಲಿ 10 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಕಾರುಗಳಲ್ಲಿ ಮಾತ್ರ ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳನ್ನು ನೀಡುತ್ತಿದ್ದರು. ಆದರೆ ಈಗ 6 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಕೆಲವು ಕಾರುಗಳು 6-ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತಿವೆ.

27 ಕಿ.ಮೀ ಮೈಲೇಜ್.. 11 ಲಕ್ಷ.. ಈ ಜನಪ್ರಿಯ 'Maruti SUV'..

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಪ್ರಮುಖ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಈ ಕಾರನ್ನು ಸಾಮಾನ್ಯರಿಂದ ಹಿಡಿದು ಸಿನಿಮಾ ನಟ, ನಟಿಯರು ಕೂಡ ಇಷ್ಟ ಪಟ್ಟು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಆದರೆ ಕೆಲವು ತಿಂಗಳಿನಿಂದ ಮಾರಾಟ ಸಂಖ್ಯೆ ಅಷ್ಟು ಚೆನ್ನಾಗಿಲ್ಲ. ಅದಕ್ಕೆ ಈ ಏಪ್ರಿಲ್ ಕೂಡ ಹೊರತಾಗಿಲ್ಲ ಎಂದು ಹೇಳಬಹುದು. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಮೊದಲ ಸಿಎನ್‌ಜಿ ರೆಡಿ ಸಿ3 ಕಾರನ್ನು ಪರಿಚಯಿಸಿದ ಸಿಟ್ರನ್: ವಿಶೇಷತೆ

ಸಿಟ್ರನ್ ಕಂಪನಿಯು ತನ್ನ C3 ಹ್ಯಾಚ್‌ಬ್ಯಾಕ್‌ ಕಾರನ್ನು CNG ಆವೃತ್ತಿಯಲ್ಲಿ ನೀಡುವುದಾಗಿ ಪ್ರಕಟಿಸಿದೆ. ಇದು ಕಡಿಮೆ ವೆಚ್ಚದ ಪರ್ಯಾಯ ಇಂಧನದೊಂದಿಗೆ ಕಾರಿನ ಮೌಲ್ಯವನ್ನು ಹೆಚ್ಚಿಸಲಿದೆ. C3 CNG ಈಗ ಪ್ರಮಾಣೀಕೃತ ನವೀಕರಣ ಕಾರ್ಯಕ್ರಮದ ಮೂಲಕ ಸಿಟ್ರನ್ ಡೀಲರ್‌ಶಿಪ್‌ಗಳಲ್ಲಿ ಲಭ್ಯವಾಗಲಿದೆ. ಕಡಿಮೆ ಕಾರ್ಬನ್ ಹೊರಸೂಸುವಿಕೆಯನ್ನು ಬಯಸುವ ಗ್ರಾಹಕರಿಗೆ ಸೂಕ್ತ ಆಯ್ಕೆಯಾಗಲಿದೆ. ಹಾಗೆಯೇ ಕಾರಿನ ಸೌಕರ್ಯ, ಪರ್ಫಾಮೆನ್ಸ್ ಮತ್ತು ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ನವೀಕರಣವು ಪ್ರಮುಖ ಸಾಮರ್ಥ್ಯಗಳಿಗೆ ಧಕ್ಕೆಯಾಗದಂತೆ ಪರಿಸರ ಸ್ನೇಹಿ ಕಾರಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

TATA: 5-ಸೀಟರ್.. ಕಲ್ಲು ಬಂಡೆಯಂತಿರುವ ಹೊಸ ಟಾಟಾ ಕಾರು ಶೀಘ್ರ..

ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿದೆ. ಈ ವಿಭಾಗದಲ್ಲಿ ಟಾಟಾ ಮೋಟಾರ್ಸ್ (Tata Motors) ಮುಂಚೂಣಿಯಲ್ಲಿದೆ. ಟಿಯಾಗೊ ಇವಿ, ಟಿಗೂರ್ ಇವಿ, ಪಂಚ್ ಇವಿ, ನೆಕ್ಸಾನ್ ಇವಿ ಹಾಗೂ ಕರ್ವ್ ಇವಿಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಸದ್ಯ, ಕಂಪನಿ ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರೊಂದನ್ನು ಅತಿ ಶೀಘ್ರದಲ್ಲೇ ಅದ್ದೂರಿಯಾಗಿ ಮಾರಾಟಕ್ಕೂ ತರಲಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಯಾವಾಗ? ಯಾಕೀ ಗೊಂದಲ?


Advertisement

2025ರ ಟಿವಿಎಸ್ ಐಕ್ಯೂಬ್ S ಮತ್ತು ಐಕ್ಯೂಬ್ ST ಬಿಡುಗಡೆ: ಅಧಿಕ ರೇಂಜ್

2025ರ ಟಿವಿಎಸ್ ಐಕ್ಯೂಬ್ ಎಸ್ ಮತ್ತು ಟಿವಿಎಸ್ ಐಕ್ಯೂಬ್ ಎಸ್‌ಟಿ ಸ್ಕೂಟರ್‌ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಬೆಲೆಗಳು ಈಗ 1.09 ಲಕ್ಷ ರೂ. (ಎಕ್ಸ್‌ಶೋರೂಂ) ಗಳಿಂದ ಪ್ರಾರಂಭವಾಗಿ 1.59 ಲಕ್ಷ ರೂ. (ಎಕ್ಸ್‌ಶೋರೂಂ) ವರೆಗೆ ಇದೆ. ಈಗಾಗಲೇ ಮಾರಾಟದಲ್ಲಿರುವ ಐಕ್ಯೂಬ್ ಮಾದರಿಗಳಿಗೆ ಹೋಲಿಸಿಕೊಂರೆ ಹೊಸ ಫೀಚರ್ಸ್ ಹಾಗೂ ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಈ ಸ್ಕೂಟರ್‌ಗಳು ಬಿಡುಗಡೆಯಾಗಿವೆ. ಈ ಮೂಲಕ ಹೊಸ ಸ್ಕೂಟರ್‌ಗಳು ಸಿಂಗಲ್‌ ಚಾರ್ಜ್‌ನಲ್ಲಿ ಹೆಚ್ಚಿನ ರೇಂಜ್ ನೀಡಲಿವೆ. ಐಕ್ಯೂಬ್ ಎಸ್ ಮತ್ತು ಟಿವಿಎಸ್ ಐಕ್ಯೂಬ್ ಎಸ್‌ಟಿ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

2 New Railway Line: ಕರ್ನಾಟಕದ 06 ಜಿಲ್ಲೆಗಳಿಗೆ ಅನುಕೂಲಕರ 2 ರೈಲ್ವೆ ಯೋಜನೆಗಳ ಘೋಷಣೆ


ಟೊಯೊಟಾ ಇನ್ನೋವಾಗಾಗಿ ಶೋರೂಂ ಎಡತಾಕಿದ ಗ್ರಾಹಕರು..

ಟೊಯೊಟಾ ಇನ್ನೋವಾ (Toyota Innova) ಪ್ರಮುಖ ಎಂಪಿವಿಯಾಗಿ ಹೆಸರುವಾಸಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಈ ಕಾರು, ಹೈಕ್ರಾಸ್ & ಕ್ರಿಸ್ಟಾ ಎಂಬ ಎರಡು ವಿಧದಲ್ಲಿ ಖರೀದಿ ದೊರೆಯುತ್ತದೆ. ಸದ್ಯ, ಏಪ್ರಿಲ್ ತಿಂಗಳ ಟೊಯೊಟಾ ಕಾರುಗಳ ಮಾರಾಟದ ಅಂಕಿಅಂಶಗಳ ವರದಿ ಪ್ರಕಟಗೊಂಡಿದ್ದು, ಇದೇ 'ಇನ್ನೋವಾ' ಎಂಪಿವಿ ಗೇಮ್ ಚೇಂಜರ್ ಕಾರಾಗಿ ಹೊರಹೊಮ್ಮಿದೆ. ಅದಕ್ಕೆ ತಕ್ಕಂತೆ ಭಾರೀ ಸಂಖ್ಯೆಯಲ್ಲಿಯೂ ಮಾರಾಟಗೊಂಡಿದ್ದು, ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಂಡಿದ್ದಾರೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಬಿಡುಗಡೆಗೆ ಸಜ್ಜಾಗುತ್ತಿದೆ ಎಲೆಕ್ಟ್ರಿಕ್ ಸುಜುಕಿ ಆಕ್ಸೆಸ್

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದು, ಹೊಸ ಕಂಪನಿಗಳಿಂದ ಹಲವು ಇವಿ ಸ್ಕೂಟರ್‌ಗಳು ಬಿಡುಗಡೆಯಾಗುತ್ತಿವೆ. ಮೂಲಗಳ ಪ್ರಕಾರ, ಸುಜುಕಿ ಕೂಡ ತಮ್ಮ ಮೊದಲ ಇವಿಯನ್ನು ಈಗಾಗಲೇ ಸಿದ್ಧಪಡಿಸಿದೆ, ಇದನ್ನು ಜಪಾನ್‌ನ ಎಂಜಿನಿಯರ್‌ಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇ-ಆಕ್ಸೆಸ್ ಎಂದು ಕರೆಯಲಾಗುತ್ತದೆ. ಒಟ್ಟಾರೆ ಸ್ಟೈಲಿಂಗ್ ಮತ್ತು ಬಾಡಿ ಡಿಸೈನ್ ಇಂಧನ ಚಾಲಿತ ಆಕ್ಸಿಸ್ ಸ್ಕೂಟರ್ ಅನ್ನು ಹೋಲುತ್ತದೆ. ಪ್ರಸ್ತುತ, ಮೋಟಾರು ಸಾಮರ್ಥ್ಯ, ಬ್ಯಾಟರಿ ಮತ್ತು ರೈಡಿಂಗ್ ರೇಂಜ್ ಬಗ್ಗೆ ಒಂದಷ್ಟು ಮಾಹಿತಿ ಹೊರಬಿದ್ದಿದೆ.

Suzuki Access 125: ಸದ್ದಿಲ್ಲದೇ ಹೊಸ 'ಸುಜುಕಿ ಆಕ್ಸೆಸ್ 125'..

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India), ದೇಶೀಯ ಮಾರುಕಟ್ಟೆಯಲ್ಲಿ 'ಆಕ್ಸೆಸ್ 125' ಸ್ಕೂಟರ್‌ನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಇದೇ ಸ್ಕೂಟರ್‌ನ ನವೀಕರಿಸಿದ ಮಾಡೆಲ್‌ನ್ನು ಬಿಡುಗಡೆಗೊಳಿಸಲಾಗಿತ್ತು. ಸದ್ಯ, ಈ ಸ್ಕೂಟರ್‌ನ ಬೆಲೆಯನ್ನು ಪರಿಷ್ಕರಿಸಲಾಗಿದ್ದು, ಕೊಂಚ ಮಟ್ಟಿಗೆ ದರವನ್ನು ಏರಿಕೆ ಮಾಡಲಾಗಿದೆ. ಬನ್ನಿ, ಆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

ಸದ್ದಿಲ್ಲದೆ ಬಿಡುಗಡೆಗೆ ಸಜ್ಜಾಗಿದೆ ರಾಯಲ್‌ ಎನ್‌ಫೀಲ್ಡ್ ಎಲೆಕ್ಟ್ರಿಕ್

ಭವಿಷ್ಯವು ಎಲೆಕ್ಟ್ರಿಕ್ ವಾಹನಗಳಿಗೆ ಪ್ರಮುಖ ವೇದಿಕೆಯಾಗಲಿದ್ದು, ಇದರ ಲಾಭವನ್ನು ಪಡೆಯಲು ಈಗಾಗಲೇ ಬಹುತೇಕ ಎಲ್ಲಾ ಬ್ರಾಂಡ್‌ಗಳು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುವಲ್ಲಿ ನಿರತವಾಗಿವೆ. ರಾಯಲ್‌ ಎನ್‌ಫೀಲ್ಡ್ ಕೂಡ ತಮ್ಮ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆಗೆ ಸಜ್ಜಾಗಿದೆ. ತನ್ನ ಮೊದಲ ಇವಿ ಮಾದರಿಗಳಾದ ಫ್ಲೈಯಿಂಗ್ ಫ್ಲೀ ಸಿ6 ಮತ್ತು ಎಸ್6 (Flying Flea C6 and S6) ಅನ್ನು ಬಿಡುಗಡೆ ಮಾಡುವ ಮೂಲಕ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ವಿಭಾಗಕ್ಕೆ ಪ್ರವೇಶಿಸಲು ಸಜ್ಜಾಗಿದೆ. ಇವುಗಳ ಬಿಡುಗಡೆ ದಿನಾಂಕಗಳನ್ನು ಕಂಪನಿ ಇತ್ತೀಚೆಗಷ್ಟೆ ಘೋಷಿಸಿದೆ.

ಇದು ಟಾಟಾ ಕಂಪನಿ ಕಾರಲ್ಲ.. ನ್ಯಾನೋದಂತಿರುವ ಈ ಪುಟ್ಟ ಎಲೆಕ್ಟ್ರಿಕ್..

ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast) ಪ್ರಖ್ಯಾತ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿವಿಧ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಈ ಕಂಪನಿಯು ಭಾರತದ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದೆ. ಇದೇ ಜನವರಿಯಲ್ಲಿ ತೆರೆಕಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಕೆಲವು ಕಾರುಗಳನ್ನು ಪ್ರದರ್ಶಿಸಿತ್ತು. ಅವುಗಳಲ್ಲಿ 'ವಿಎಫ್3' ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಎಲ್ಲರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಸೇನೆಗೆ ಪವರ್‌ಫುಲ್ ಸುರಕ್ಷಿತ ಎಸ್‌ಯುವಿಗಳು!

ಭಾರತೀಯ ಸೇನೆಗೆ ಯುದ್ಧ ವಿಮಾನಗಳು, ಟ್ಯಾಂಕರ್‌ಗಳು, ಬೃಹತ್ ಟ್ರಕ್‌ಗಳು ಎಷ್ಟು ಮುಖ್ಯವೋ ತುರ್ತು ಸಂದರ್ಭಗಳನ್ನು ನಿಭಾಯಿಸಲು ಹಾಗೂ ಕೂಡಲೇ ಪ್ರತಿಕ್ರಿಯಿಸಲು ಪವರ್‌ಫುಲ್‌ ಎಸ್‌ಯುವಿಗಳು ಕೂಡ ಅಷ್ಟೇ ಮುಖ್ಯ. ದೇಶದ ವೈವಿಧ್ಯಮಯ ಭೂಪ್ರದೇಶಗಳಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆಯು ದೀರ್ಘಕಾಲದಿಂದ ಹಲವಾರು ಅಪ್ರತಿಮ ಮೇಡ್ ಇನ್ ಇಂಡಿಯಾ ಕಾರುಗಳನ್ನು ಬಳಸುತ್ತಿದೆ. ಹಿಮಾಲಯದಿಂದ ಹಿಡಿದು ರಾಜಸ್ಥಾನದ ಮರುಭೂಮಿಗಳವರೆಗಿನ ಕಠಿಣ ಭೂಪ್ರದೇಶಗಳಲ್ಲಿ ಮುನ್ನುಗ್ಗಲು ಕೆಲವು ಜನಪ್ರಿಯ ಕಾರುಗಳನ್ನು ವಿಶೇಷವಾಗಿ ಭಾರತೀಯ ಸಶಸ್ತ್ರ ಪಡೆಗಳಿಗಾಗಿ ತಯಾರಿಸಲಾಗುತ್ತದೆ.
Advertisement

28 Km ಮೈಲೇಜ್.. 7 ಲಕ್ಷ.. 5-ಸೀಟರ್, ಈ ಜನಪ್ರಿಯ ಟೊಯೊಟಾ ಕಾರಿಗೆ..

ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ (Toyota Urban Cruiser Taisor) ಪ್ರಖ್ಯಾತ ಎಸ್‌ಯುವಿಯಾಗಿದೆ ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ 'ಮಾರುತಿ ಸುಜುಕಿ ಫ್ರಾಂಕ್ಸ್' ಆಧಾರಿತ ಈ ಕಾರನ್ನು 2024ರ ಏಪ್ರಿಲ್ ತಿಂಗಳಲ್ಲಿ ಅದ್ದೂರಿಯಾಗಿ ಮಾರಾಟಕ್ಕೆ ತರಲಾಗಿತ್ತು. ನೂತನ 'ಟೈಸರ್' ಎಸ್‌ಯುವಿಯು ಹೆಚ್ಚು ಆಕರ್ಷಕವಾಗಿರುವ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಈ ಕಾರಿನ ಖರೀದಿ ಮೇಲೆ ದೊಡ್ಡ ಮಟ್ಟದ ಹಣಕಾಸಿನ ಪ್ರಯೋಜನಗಳನ್ನು ಘೋಷಣೆ ಮಾಡಲಾಗಿದೆ.

Toyota: ಹೊಸ ಟೊಯೋಟಾ ಕರೊಲಾ ಕ್ರಾಸ್ ವಿಶೇಷತೆಗಳು

ಯುರೋಪಿಯನ್ ಮಾರುಕಟ್ಟೆಗಳಿಗಾಗಿ ಟೊಯೋಟಾ (Toyota) ಕಂಪನಿಯು ತನ್ನ 2025ರ ಫೇಸ್‌ಲಿಫ್ಟ್ ಕರೊಲಾ ಕ್ರಾಸ್ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಯುರೋಪಿಯನ್ ಖರೀದಿದಾರರು ಕರೊಲಾ ಕ್ರಾಸ್‌ನ ಜಿಆರ್ ಸ್ಪೋರ್ಟ್ ಎಡಿಷನ್ ಕೂಡ ಪಡೆಯಬಹುದು. ತನ್ನ ಇತ್ತೀಚಿನ ನವೀಕರಣಗಳೊಂದಿಗೆ, 2025ರ ಟೊಯೋಟಾ ಕರೊಲಾ ಕ್ರಾಸ್ ಫೇಸ್ ಲಿಫ್ಟ್ ಕಾಂಪ್ಯಾಕ್ಟ್ ಕಾರು ಟೊಯೊಟಾದ ಉಪಸ್ಥಿತಿಯನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಬಲಪಡಿಸಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿರುವ ಈ ಹೊಸ ಕರೊಲಾ ಕ್ರಾಸ್‌ ಎಸ್‌ಯುವಿ ಕುರಿತ ವಿಶೇಷತೆಗಳನ್ನು ನೋಡೋಣ.

ಗಟ್ಟಿಮುಟ್ಟಾದ ಕಾರಿದು.. 6-ಸೀಟರ್, ಆದರೂ ಈ 'Tata Suv' ಕೊಳ್ಳಲು..

ಭಾರತದ ಕಾರು ಮಾರುಕಟ್ಟೆಯಲ್ಲಿ ಟಾಟಾ ಸಫಾರಿ (Tata Safari) ಪ್ರಮುಖ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ಹೆಚ್ಚು ಆಕರ್ಷಕವಾಗಿದ್ದು, ಸುರಕ್ಷತೆಗೂ ಹೆಸರುವಾಸಿಯಾಗಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದರ ಹೊರತಾಗಿ ಈ ಕಾರಿನ ಮಾರಾಟ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಏಪ್ರಿಲ್‌ನಲ್ಲಿಯೂ 'ಟಾಟಾ ಸಫಾರಿ'ಯನ್ನು ಕೊಳ್ಳಲು ಗ್ರಾಹಕರು ನಿರಾಸಕ್ತಿ ತೋರಿಸಿದ್ದಾರೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಭಾರತದಲ್ಲಿ ತಯಾರಿಸಿದ ಈ ಮಾರುತಿ ಕಾರಿಗೆ ಸ್ವಂತ ದೇಶದಲ್ಲಿ..

ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಪ್ರಮುಖ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಈ ಕಾರು ಅತಿ ಹೆಚ್ಚಿನ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಭಾರತದಲ್ಲಿ ತಯಾರಿಸಿದ ಇದೇ ಎಸ್‌ಯುವಿಯನ್ನು 'ಮಾರುತಿ ಸುಜುಕಿ' ಮಾತೃ ಸಂಸ್ಥೆ ಸುಜುಕಿ ಮೋಟಾರ್ ಕಾರ್ಪೊರೇಷನ್ (Suzuki Motor Corporation), ಜಪಾನ್ ಮಾರುಕಟ್ಟೆಯಲ್ಲಿಯೂ ಮಾರಾಟಗೊಳಿಸುತ್ತಿದೆ. ಅಲ್ಲಿಯೂ ಈ ಕಾರು ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಸದ್ಯ, 'ಸುಜುಕಿ ಫ್ರಾಂಕ್ಸ್'ನ್ನು ಅತ್ಯಂತ ಸುರಕ್ಷಿತ ಕಾರೆಂದು ನಿರ್ಣಯಿಸಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

Hyundai: ನಿಮಗೆ 'ಮೈಹ್ಯುಂಡೈ' ಅಪ್ಲಿಕೇಷನ್ ಗೊತ್ತಾ? ದಾಖಲೆ ನಿರ್ಮಾಣ

ಹುಂಡೈ ಕಂಪನಿಯು ತನ್ನ 'ಮೈಹ್ಯುಂಡೈ' (myHyundai) ಅಪ್ಲಿಕೇಶನ್ 2.6 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ದಾಟಿದೆ ಎಂದು ಘೋಷಿಸಿದೆ. ಇದು ಹುಂಡೈ ಗ್ರಾಹಕರಿಗೆ ಡಿಜಿಟಲ್ ಒಡನಾಡಿಯಾಗಿದ್ದು, ಈ ಅಪ್ಲಿಕೇಶನ್ ಎಲ್ಲಾ ಹುಂಡೈ ಸಂಬಂಧಿತ ಉತ್ಪನ್ನಗಳು, ಸೇವೆಗಳು ಮತ್ತು ಪ್ರಯೋಜನಗಳನ್ನು ಅನ್ವೇಷಿಸಲು ಸಮಗ್ರ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. 3,39,000 ಸರಾಸರಿ ಮಾಸಿಕ ಸಕ್ರಿಯ ಬಳಕೆದಾರರು ಮತ್ತು 23 ಮಿಲಿಯನ್ ಮಾಸಿಕ ಸಂವಹನಗಳೊಂದಿಗೆ, ಗ್ರಾಹಕರು ವೈಶಿಷ್ಟ್ಯಗಳನ್ನು ಸಕ್ರಿಯವಾಗಿ ಅನ್ವೇಷಿಸುತ್ತಿದ್ದಾರೆ, ಅನುಕೂಲತೆ ಮತ್ತು ಉಳಿತಾಯಕ್ಕಾಗಿ ಅಪ್ಲಿಕೇಶನ್ ಅನ್ನು ದೈನಂದಿನ ಒಡನಾಡಿಯಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ಹ್ಯುಂಡೈ ಹೇಳಿದೆ.