ಬಿಡುಗಡೆಯೇ ಆಗಿಲ್ಲ.. ಬಹುನಿರೀಕ್ಷಿತ 'MG Windsor' ಕಾರು..

ಹೊಚ್ಚ ಹೊಸ ಎಂಜಿ ವಿಂಡ್ಸರ್ ಇವಿ ಪ್ರೊ (MG Windsor EV Pro) ಎಲೆಕ್ಟ್ರಿಕ್ ಕಾರಿನ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಅದ್ದೂರಿಯಾಗಿಯೂ ಮಾರಾಟಕ್ಕೆ ಬರಲಿದೆ. ನೂತನ ಎಸ್‌ಯುವಿಯನ್ನು ಪರಿಚಯಿಸಲು ಕಂಪನಿಯು ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದೆ. ಗ್ರಾಹಕರು ಕೂಡ ಕಾತರದಿಂದ ಕಾಯುತ್ತಿದ್ದಾರೆ. ಸದ್ಯ, 'ವಿಂಡ್ಸರ್ ಇವಿ ಪ್ರೊ' ಕಾರಿನ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲೂ ಕಾಣಿಸಿಕೊಂಡಿವೆ. ಅದರಲ್ಲಿ ನೂತನ ಎಲೆಕ್ಟ್ರಿಕ್ ಎಸ್‌ಯುವಿ ವಿನ್ಯಾಸದ ಕುರಿತ ಒಂದಷ್ಟು ಅಂಶಗಳು ಬಹಿರಂಗಗೊಂಡಿವೆ.

ಎಲೆಕ್ಟ್ರಿಕ್ ಕಾರುಗಳು ಅಷ್ಟೇನು ದುಬಾರಿಯಲ್ಲ

Affordable Electric cars: ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿವೆ, ಇಂಧನ ಬೆಲೆಗಳು ಗಗನಕ್ಕೇರುತ್ತಿರುವುದು ಇದಕ್ಕೆ ಮೂಲ ಕಾರಣವಾಗಿದೆ. ಅನೇಕ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಇನ್ನೂ ಸಂದೇಹದಲ್ಲಿದ್ದರೆ, ಬಹುತೇಕರು ಈಗಾಗಲೇ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿ ಯಾವುದೇ ಗೊಂದಲವಿಲ್ಲದೆ ನಿರ್ವಹಣೆ ಮಾಡುತ್ತಿದ್ದಾರೆ. ಸದ್ಯ ಭಾರತದಲ್ಲಿ ಯಾವುದೇ ಸಮಸ್ಯಗಳಿಲ್ಲದೆ ಉತ್ತಮವಾಗಿ ಮಾರಾಟವಗುತ್ತಿರುವ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಕಾರುಗಳಿವೆ. ಇವು ನಗರ ಮತ್ತು ಸುತ್ತಮುತ್ತಲಿನ ದೈನಂದಿನ ಪ್ರಯಾಣಕ್ಕೆ ಸೂಕ್ತವಾಗಿರುತ್ತವೆ. ಟಾಟಾ ಮೋಟಾರ್ಸ್ ಮತ್ತು ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಈ ಕಾರುಗಳನ್ನು ನೀಡುತ್ತಿವೆ.

ವ್ರಾಂಗ್ಲರ್ ವಿಲ್ಲಿಸ್ '41 ವಿಶೇಷ ಆವೃತ್ತಿಯನ್ನು ಅನಾವರಣ

ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಜೀಪ್, ತನ್ನ ಪರ್ಫಾಮೆನ್ಸ್ ಇಷ್ಟಪಡುವ ಗ್ರಾಹಕರಿಗಾಗಿ 1941 ರ ವಿಲ್ಲೀಸ್‌ನ ಮೂಲ ಡಿಸೈನ್‌ನೊಂದಿಗೆ, ಇಂದಿನ ವ್ರಾಂಗ್ಲರ್‌ನ ದೃಢವಾದ ಸಾಮರ್ಥ್ಯ ಮತ್ತು ಪ್ರೀಮಿಯಂ ನಾವೀನ್ಯತೆಯನ್ನು ಸಂಯೋಜಿಸುವ ಸೀಮಿತ - ಚಾಲಿತ ಸಂಗ್ರಾಹಕರ ಆವೃತ್ತಿಯಾದ ವ್ರಾಂಗ್ಲರ್ ವಿಲ್ಲೀಸ್ '41 ವಿಶೇಷ ಆವೃತ್ತಿ (limited-run collector's edition) ಯನ್ನು ಅನಾವರಣಗೊಳಿಸಿದೆ. ನಿಜವಾದ ಆಫ್-ರೋಡ್ ಪ್ರಿಯರು ಮತ್ತು ಪರ್ಫಾಮೆನ್ಸ್ ಇಷ್ಟಪಡುವವರಿಗಾಗಿ ಮಾತ್ರ ಈ ಜೀಪ್ ವ್ರಾಂಗ್ಲರ್ ವಿಲ್ಲೀಸ್ '41 ವಿಶೇಷ ಆವೃತ್ತಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

Honda: ಆಕ್ಟಿವಾ & ಶೈನ್ ಇದ್ರು ಹೋಂಡಾ ಟೂ-ವೀಲರ್‌ಗಳನ್ನು..

ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India) ಜನಪ್ರಿಯ ದ್ವಿಚಕ್ರ ವಾಹನ (Two Wheeler) ಕಂಪನಿಯಾಗಿ ಗುರುತಿಸಿಕೊಂಡಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಶೈನ್, ಆಕ್ಟಿವಾ, ಡಿಯೋ ಸೇರಿದಂತೆ ವಿವಿಧ ಬೈಕ್ & ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಆದರೂ ಈ ಏಪ್ರಿಲ್ ತಿಂಗಳು ಕಂಪನಿಯ ದ್ವಿಚಕ್ರ ವಾಹನ ಮಾರಾಟ ಸಂಖ್ಯೆ ಒಂದಷ್ಟು ಮಟ್ಟಿಗೆ ಕುಸಿತವಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Advertisement

TVS: ಬಡವರು ಮನೆಗೆ ತರಬಹುದು.. ಹೊಸ 'ಟಿವಿಎಸ್ ಸ್ಪೋರ್ಟ್ ಇಎಸ್..

ಟಿವಿಎಸ್ ಮೋಟಾರ್ (TVS Motor) ವಿಶ್ವಾಸಾರ್ಹ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿ ಹೊರಹೊಮ್ಮಿದ್ದು, ದೇಶಾದ್ಯಂತ ಮನೆ ಮಾತಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಿಸುವ ನಿಟ್ಟಿನಲ್ಲಿ ಒಂದಷ್ಟು ನವೀಕರಣಗಳೊಂದಿಗೆ 2025ರ ಹೊಚ್ಚ ಹೊಸ 'ಸ್ಪೋರ್ಟ್ ಇಎಸ್ ಪ್ಲಸ್' ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಇದು ಅತ್ಯಂತ ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದೆ. ಬನ್ನಿ, ಈ ನೂತನ ಬೈಕ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

Tata: ಟಾಟಾ ಅಭಿಮಾನಿಗಳೇ ಸಜ್ಜಾಗಿ.... ಮೇ 22 ರಂದು ಹ್ಯಾಚ್‌ಬ್ಯಾಕ್

ಟಾಟಾ ಮೋಟಾರ್ಸ್ (Tata Motors) ತನ್ನ ಮುಂಬರಲಿರುವ 2025ರ ಹೊಸ ಫೇಸ್‌ಲಿಫ್ಟ್ ಆಲ್ಟ್ರೋಜ್ ಬಿಡುಗಡೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮೂಲಗಳ ಪ್ರಕಾರ ಇದು ಕೆಲ ವಿನ್ಯಾಸ ಬದಲಾವಣೆಗಳು ಹಾಗೂ ಹೊಸ ಫೀಚರ್ಸ್‌ಗಳ ಜೋಡಣೆ ಸೇರಿದಂತೆ ಇಂಟೀರಿಯರ್‌ನಲ್ಲಿ ಹೊಸ ಬದಲಾವಣೆಗಳು ಇರಲಿವೆ. ಕಂಪನಿಯ ಹೇಳಿಕೊಂಡಿರುವಂತೆ ಈ ಹೊಸ ಫೇಸ್‌ಲಿಫ್ಟ್ ಆವೃತ್ತಿಯನ್ನು ಇದೇ ತಿಂಗಳ 22 ರಂದು ಬಿಡುಗಡೆ ಮಾಡಲಾಗುವುದು. ಇದೀಗ ಬಿಡುಗಡೆಗೂ ಮುನ್ನ ಕಾರು ಹೇಗಿರಲಿದೆ ಎಂದು ತೋರಿಸುವ ಸಣ್ಣ ಟೀಸರ್ ಅನ್ನು ಟಾಟಾ ಹೊರಬಿಟ್ಟಿದೆ.

ನಕಲಿ ಹೆಲ್ಮೆಟ್ ತಯಾರಕರ ವಿರುದ್ಧ ಗುಡುಗಿದ ಯೋಗಿ ಸರ್ಕಾರ

ನಕಲಿ ಬಿಐಎಸ್ ಪ್ರಮಾಣೀಕೃತ ಹೆಲ್ಮೆಟ್‌ಗಳ ಮಾರಾಟ ಮತ್ತು ಬಳಕೆಯ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಕೈಗೊಂಡಿರುವ ದಿಟ್ಟ ಕ್ರಮವನ್ನು ಭಾರತೀಯ ದ್ವಿಚಕ್ರ ವಾಹನ ಹೆಲ್ಮೆಟ್ ತಯಾರಕರ ಸಂಘ (2WHMA) ಶ್ಲಾಘಿಸಿದೆ. ಈ ಕ್ರಮವು ಭಾರತದಾದ್ಯಂತ ರಸ್ತೆ ಸುರಕ್ಷತಾ ಜಾರಿಗಾಗಿ ಒಂದು ಮಾದರಿ ಎಂದು ಪ್ರಶಂಸಿಸಲ್ಪಟ್ಟಿದೆ. ಈ ಕ್ರಮವನ್ನು "ಮಹತ್ವದ ನಿರ್ಧಾರ" ಎಂದು 2WHMA (ದ್ವಿಚಕ್ರ ವಾಹನ ಹೆಲ್ಮೆಟ್ ತಯಾರಕರ ಸಂಘ) ಅಧ್ಯಕ್ಷ ಮತ್ತು ಸ್ಟೀಲ್‌ಬರ್ಡ್ ಹೆಲ್ಮೆಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಕಪೂರ್, ಯುಪಿ ರಾಜ್ಯದ ನಾಯಕತ್ವವನ್ನು ಶ್ಲಾಘಿಸಿದ್ದಾರೆ.

7-ಸೀಟರ್.. ಲಕ್ಷುರಿ ಫೀಚರ್ಸ್‌ನ ಹೊಸ 'Kia Mpv'ಗೆ ಅನಧಿಕೃತ..

ಕಿಯಾ ಇಂಡಿಯಾ (Kia India) ಪ್ರಮುಖ ಕಾರು ತಯಾರಕ ಕಂಪನಿಯಾಗಿ ಮನೆ ಮಾತಾಗಿದೆ. ಕಳೆದ ತಿಂಗಳು (ಏಪ್ರಿಲ್-2025) ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಸರಿ ಸುಮಾರು 23,623 ಯುನಿಟ್ ಕಾರುಗಳನ್ನು ಮಾರಾಟಗೊಳಿಸಿತ್ತು. 2024ರ ಇದೇ ಅವಧಿಯಲ್ಲಿ 19,968 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ (YoY) ಶೇಕಡ 18.3% ಬೆಳವಣಿಗೆಯಾಗಿದೆ. ಇತ್ತೀಚೆಗೆ ಬಿಡುಗಡೆಗೊಂಡ ನೂತನ 'ಸೈರಸ್' ಎಸ್‌ಯುವಿ ಕೂಡ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಸದ್ಯ, ಕಂಪನಿಯು ಹೊಚ್ಚ ಹೊಸ ಫ್ಯಾಮಿಲಿ ಕಾರೊಂದನ್ನು ಮಾರಾಟಕ್ಕೆ ತರಲು ಅಂತಿಮ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

27 ಕಿ.ಮೀ ಮೈಲೇಜ್, 6 ಲಕ್ಷ ಬೆಲೆಯ 7-ಸೀಟರ್ ಕಾರು

ಭಾರತದಲ್ಲಿ ಬಹುತೇಕರ ಕಾರು ಖರೀದಿಸುವ ಕನಸನ್ನು ನನಸು ಮಾಡಿರುವ ಮಾರುತಿ ಸುಜುಕಿ, ತನ್ನ ಅಗ್ಗದ ಬೆಲೆಯ ಕಾರುಗಳನ್ನು ನೀಡುವ ಮೂಲಕ ಕಾರು ಮಾರಾಟದಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿಯುತ್ತಿದೆ. ಕಂಪನಿ ನೀಡುವ ಬೆಸ್ಟ್‌ ಫ್ಯಾಮಿಲಿ ಕಾರುಗಳಲ್ಲಿ, 2010 ರಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ಇಕೋ ಸದ್ಯ ಬಡವರ ಕಾರಾಗಿ ಗುರ್ತಿಸಿಕೊಂಡಿದೆ. ಬಜೆಟ್ ಸ್ನೇಹಿ 5/7 ಸೀಟರ್ ಆಯ್ಕೆಯಲ್ಲಿ ದೊರೆಯುವ ಈ ಕಾರಿನ ಮಾರಾಟವು ನಿರಾಶಾದಾಯಕವಾಗಿದೆ. ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದರು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದೆ.

ನೂತನ ಟೊಯೊಟಾ ಇನ್ನೋವಾ ಹೈಕ್ರಾಸ್ ಎಕ್ಸ್‌ಕ್ಲೂಸಿವ್ ಎಡಿಷನ್..

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಪ್ರಖ್ಯಾತ ಎಂಪಿವಿಯಾಗಿ ಹೊರಹೊಮ್ಮಿದೆ. ಇತ್ತೀಚೆಗೆ ಈ ಕಾರಿನ ಎಕ್ಸ್‌ಕ್ಲೂಸಿವ್ ಎಡಿಷನ್ (Exclusive Edition) ಮಾಡೆಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಇದು ಹೊರಭಾಗದ ವಿನ್ಯಾಸದಲ್ಲಿ ಒಂದಷ್ಟು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಕೊಂಚ ದುಬಾರಿ ಬೆಲೆಯನ್ನೇ ಹೊಂದಿದೆ. ಜೊತೆಗೆ ಜುಲೈವರೆಗೆ ಮಾತ್ರ ಖರೀದಿಗೆ ಲಭ್ಯವಿದೆ. ಬನ್ನಿ, ಈ ಎಂಪಿವಿಯ ಬೆಲೆ ಹಾಗೂ ವಿಶೇಷತೆಗಳನ್ನು ಒಳಗೊಂಡ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.

TVS: ಶೀಘ್ರ ನವೀಕರಿಸಿದ ಹೊಚ್ಚ ಹೊಸ ಟಿವಿಎಸ್ ಐಕ್ಯೂಬ್ ಎಸ್‌ಟಿ..

ಟಿವಿಎಸ್ ಐಕ್ಯೂಬ್ (TVS iQube) ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಈ ಹಿನ್ನೆಲೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಬ್ಯಾಟರಿ ಪ್ಯಾಕ್‌ಗೆ ಅನುಗುಣವಾಗಿ ಐಕ್ಯೂಬ್ ಇ-ಸ್ಕೂಟರ್ 5 ವಿಧದಲ್ಲೂ ಲಭ್ಯವಿದೆ. ಇದೇ ಸ್ಕೂಟರ್‌ನ 'ಐಕ್ಯೂಬ್ ಎಸ್‌ಟಿ' ಮಾಡೆಲ್‌ನ್ನು ಹೊಸ ರೂಪದಲ್ಲಿ ಮಾರಾಟಕ್ಕೆ ತರಲು ಕಂಪನಿಯು ಸಹ ತಯಾರಿ ನಡೆಸುತ್ತಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
Advertisement

ಪ್ರತಿಸ್ಪರ್ಧಿಗಳ ಪೈಪೋಟಿ ನಡುವೆ ಧೂಳೆಬ್ಬಿಸದ ಟಿವಿಎಸ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಟಿವಿಎಸ್ ಮೋಟಾರ್, ದಾಖಲೆಯ ಮಾರಾಟವನ್ನು ದಾಖಲು ಮಾಡಿದೆ. ಭಾರತದಲ್ಲಿ ಬಹುತೇಕ ದ್ವಿಚಕ್ರವಾಹನ ಮಾರಾಟವನ್ನು ಹೊಂದಿರುವ ಟಿವಿಎಸ್ ಕಂಪನಿಯು, ತನ್ನ ಪ್ರತಿಸ್ಪರ್ಧಿಗಳಾದ ಬಜಾಜ್, ಹೀರೋ, ಹೋಂಡಾದಂತಹ ಪ್ರಮುಖ ಕಂಪನಿಗಳ ಪೈಪೋಟಿಯ ನಡುವೆಯೂ ಶೇ16 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಅಂದರೆ ಕಳೆದ ವರ್ಷ ಇದೇ ಅವಧಿಯಲ್ಲಿ (ಏಪ್ರಿಲ್ 2024) ಬರೋಬ್ಬರಿ 3,83,615 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿತ್ತು. ಆದರೆ ಈ ವರ್ಷ (ಏಪ್ರಿಲ್ 2025) 4,43,896 ಯುನಿಟ್‌ ವಾಹನಗಳಿಗೆ ಮಾರಾಟ ಏರಿಕೆಯಾಗಿದೆ.

Tata Curvv: ಅಗ್ಗದ 'ಟಾಟಾ ಕರ್ವ್'ಗೆ 3 ಪರ್ಯಾಯ ಕಾರುಗಳಿವು..

ಟಾಟಾ ಕರ್ವ್ (Tata Curvv) ಪ್ರಮುಖ ಕೂಪೆ ಎಸ್‌ಯುವಿ ಹೊರಹೊಮ್ಮಿದೆ. ಇದು ರೂ.10 ಲಕ್ಷದಿಂದ ರೂ.20 ಲಕ್ಷವರೆಗೆ ಎಕ್ಸ್-ಶೋರೂಂ ಬೆಲೆಯನ್ನು ಒಳಗೊಂಡಿದೆ. ಪೆಟ್ರೋಲ್ & ಡೀಸೆಲ್ ಎಂಜಿನ್‌ನ್ನು ಹೊಂದಿದ್ದು, 11 ರಿಂದ 15 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಹಾಗೂ ಪನೊರೊಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳನ್ನು ಪಡೆದಿದೆ. ನಾವಿಲ್ಲಿ 'ಕರ್ವ್'ಗೆ ಪರ್ಯಾಯ ಆಯ್ಕೆಯಾಗಬಲ್ಲ ಈ 3 ಜನಪ್ರಿಯ ಕಾರುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಪ್ರಮುಖ 10 ಕಾರುಗಳ ಮಾರಾಟ ಪಟ್ಟಿ.. ಪ್ರಾಬಲ್ಯ ಸಾಧಿಸಿದ ಮಾರುತಿ..

ಭಾರತವು ವಿಶ್ವದಲ್ಲೇ ಅತಿದೊಡ್ಡ ವಾಹನ ಮಾರುಕಟ್ಟೆಯನ್ನು ಹೊಂದಿದೆ. ಪ್ರತಿ ತಿಂಗಳು ಸಾವಿರಾರು ಕಾರುಗಳು ಮಾರಾಟವಾಗುತ್ತಿರುತ್ತವೆ. ಅದಕ್ಕೆ ಈ ಏಪ್ರಿಲ್ ತಿಂಗಳು ಕೂಡ ಹೊರತಾಗಿಲ್ಲ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಅತಿ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ವರದಿ ಪ್ರಕಟಗೊಂಡಿದ್ದು, ಎಂದಿನಂತೆ ಮಾರುತಿ ಸುಜುಕಿ ಕಂಪನಿಯು ತನ್ನ ಪಾಬಲ್ಯವನ್ನು ಮುಂದುವರಿಸಿದೆ. ಆದರೂ ಹ್ಯುಂಡೈ ಕಂಪನಿಯ ಈ ಕಾರು ಮೊದಲ ಸ್ಥಾನದಲ್ಲಿದೆ. ಹಾಗೆಯೇ ಟಾಟಾ ಹಾಗೂ ಮಹೀಂದ್ರಾ ಕಾರುಗಳು ಸಹ ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿವೆ.

Hero: ಹೀರೋ ವಾಹನಗಳಿಗೆ ಫುಲ್ ಡಿಮ್ಯಾಂಡ್: ಕಂಪನಿಗೆ ಊಹಿಸದ ಲಾಭ

ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಕಂಪಯಾಗಿರುವ ಹೀರೋ ಮೋಟೋಕಾರ್ಪ್, ಏಪ್ರಿಲ್ 2025 ರಲ್ಲಿ 3,05,406 ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ರವಾನಿಸಿದೆ. ಯೋಜಿತ ಕಾರ್ಯಾಚರಣೆಯ ಕಾರ್ಯತಂತ್ರದ ಭಾಗವಾಗಿ, ಕಂಪನಿಯು ಏಪ್ರಿಲ್ 17-19 ರಿಂದ ತನ್ನ ಧರುಹೆರಾ, ಗುರುಗ್ರಾಮ್, ಹರಿದ್ವಾರ ಮತ್ತು ನೀಮ್ರಾನಾ ಸೌಲಭ್ಯಗಳಲ್ಲಿ ತಾತ್ಕಾಲಿಕ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು, ಪೂರೈಕೆ ಸರಪಳಿ ಜೋಡಣೆಯನ್ನು ಸುಗಮಗೊಳಿಸಲು ಮತ್ತು ನಿಗದಿತ ನಿರ್ವಹಣೆ ಮತ್ತು ಮೂಲಸೌಕರ್ಯ ವರ್ಧನೆಗಳನ್ನು ನಡೆಸಲು, ಮೇ 2025 ರಲ್ಲಿ ಸಾಮಾನ್ಯೀಕರಣವನ್ನು ನಿರೀಕ್ಷಿಸಲಾಗಿದೆ.

21 Km ಮೈಲೇಜ್, 5-ಸೀಟರ್.. Hyundai SUVಗೆ ಮುಗಿಬಿದ್ದ ಗ್ರಾಹಕರು..

ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ (Hyundai) ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ ಕ್ರೆಟಾ (Creta) ಎಸ್‌ಯುವಿಯನ್ನು ಮಾರಾಟಗೊಳಿಸುತ್ತಿದೆ. ಇದು ಹೆಚ್ಚು ಆಕರ್ಷಕವಾಗಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಇದೀಗ ಸತತ ಎರಡನೇ ತಿಂಗಳು ಅಂದರೆ ಏಪ್ರಿಲ್‌ನಲ್ಲಿಯೂ 'ಪ್ರಯಾಣಿಕ ವಾಹನ' ವಿಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಕಾರಾಗಿ ಹೊರಹೊಮ್ಮಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಭಾರತೀಯ ಸೇನೆಗೆ ಬೆಂಗಳೂರು ಮೂಲದ F77 ಪರ್ಫಾಮೆನ್ಸ್ ಮೋಟಾರ್‌ಸೈಕಲ್‌ಗಳು

'ಪರ್ಫಾಮೆನ್ಸ್ ಮೋಟಾರ್‌ಸೈಕಲ್ ತಯಾರಕ ಹಾಗೂ ಬೆಂಗಳೂರು ಮೂಲದ ಕಂಪನಿಯಾಗಿರುವ ಅಲ್ಟ್ರಾವೈಲೆಟ್, ತಮಿಳುನಾಡಿನಾದ್ಯಂತ ಐದು ದಿನಗಳ ಸ್ಮರಣೀಯ ರ್ಯಾಲಿಗಾಗಿ ಭಾರತೀಯ ಸೇನೆಯ ಮದ್ರಾಸ್ ರೆಜಿಮೆಂಟ್ ಸೆಂಟರ್ (MRC) ನೊಂದಿಗೆ ಸಹಯೋಗ ಪ್ರಕಟಿಸಿದೆ. ಈ ರ್ಯಾಲಿಗಾಗಿ ಕಂಪನಿಯು F77 ಮೋಟಾರ್‌ಸೈಕಲ್‌ಗಳನ್ನು ಒದಗಿಸುತ್ತಿದೆ. ಭಾರತದಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಲಾದ ಅಲ್ಟ್ರಾವೈಲೆಟ್ F77 (Ultraviolette F77) ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಭಾರತೀಯ ನಾವೀನ್ಯತೆಯ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಈ ಸ್ಪೂರ್ತಿದಾಯಕ ಪ್ರಯಾಣಕ್ಕೆ ಸೂಕ್ತ ಒಡನಾಡಿಯಾಗಿ ನಿಂತಿದೆ ಎಂದು ಅಲ್ಟ್ರಾವೈಲೆಟ್ ಹೇಳಿಕೊಂಡಿದೆ.

ಇನ್ನೂ ವರ್ಷವಾಗಿಲ್ಲ.. ಮೇ.6ಕ್ಕೆ ಹೊಸ ಬದಲಾವಣೆಯೊಂದಿಗೆ ಅಗ್ಗದ..

ಎಂಜಿ ವಿಂಡ್ಸರ್ ಇವಿ (MG Windsor EV) ಜನಪ್ರಿಯ ಎಲೆಕ್ಟ್ರಿಕ್ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಈ ಕಾರನ್ನು 2024ರ ಅಕ್ಟೋಬರ್ ತಿಂಗಳಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಇದು ಹೆಚ್ಚು ಆಕರ್ಷಕವಾಗಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಈವರೆಗೆ 20,000ಕ್ಕೂ ಅಧಿಕ ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಸದ್ಯ, ಇದೇ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಹೊಸ ಅವತಾರದಲ್ಲಿ ಬಿಡುಗಡೆಗೊಳಿಸಲು ಕಂಪನಿಯು ಕೂಡ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ನಿನ್ನೆಯಷ್ಟೆ ಬಿಡುಗಡೆಯಾದ 2025ರ ಕವಾಸಕಿ ವರ್ಸಿಸ್ 650 ಬೈಕ್ ವಿಶೇಷತೆ

ಕವಾಸಕಿ ಕಂಪನಿಯು ತನ್ನ ಅಡ್ವೆಂಚರ್ ಟೂರರ್ ಪ್ರತಿರೂಪವಾದ ವರ್ಸಿಸ್ 650 ಅನ್ನು 2025ರ ಆವೃತ್ತಿಗೆ ಪರಿಷ್ಕೃತ ಬೆಲೆ ಮತ್ತು ಸ್ವಲ್ಪ ಪರಿಷ್ಕೃತ ಬಣ್ಣದೊಂದಿಗೆ ನವೀಕರಿಸಿ ಬಿಡುಗಡೆ ಮಾಡಿದೆ. ಕವಾಸಕಿ ಕಂಪನಿಯು ಇತ್ತೀಚೆಗೆ ನಿಂಜಾ 500, ಎಲಿಮಿನೇಟರ್ 500 ಮತ್ತು ನಿಂಜಾ 650 ಬೈಕುಗಳನ್ನು ನವೀಕರಿಸಿದೆ. ಇದೀಗ ವರ್ಸಿಸ್ 650 ಅನ್ನು ನವೀಕರಿಸಲಾಗಿದೆ, ಇದು ಏಪ್ರಿಲ್ 1, 2025 ರಿಂದ ಜಾರಿಗೆ ಬಂದ ಭಾರತೀಯ ಸರ್ಕಾರ ನಿಗದಿಪಡಿಸಿದ ಇತ್ತೀಚಿನ ಬಿಎಸ್ 6 ಪಿ 2 ಒಬಿಡಿ 2 ಬಿ ಎಮಿಷನ್ ಮಾನದಂಡಕ್ಕೆ ಹೊಂದಿಕೆಯಾಗುತ್ತದೆ ಎಂದು ಕಂಪನಿ ತಿಳಿಸಿದೆ.
Advertisement

Toyota: ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ ಎಕ್ಸ್‌ಕ್ಲೂಸಿವ್ ಎಡಿಷನ್..

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಜನಪ್ರಿಯ ಎಂಪಿವಿಯಾಗಿ ಗುರುತಿಸಿಕೊಂಡಿದೆ. ಇದು ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ದೊಡ್ಡ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಸದ್ಯ, 'ಇನ್ನೋವಾ ಹೈಕ್ರಾಸ್'ನ್ನು ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿಸಲು ಕಂಪನಿಯು ಮುಂದಾಗಿದ್ದು, ಶುಕ್ರವಾರ ಇದರ 'ಎಕ್ಸ್‌ಕ್ಲೂಸಿವ್ ಎಡಿಷನ್'ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಸಾಮಾನ್ಯ 'ಇನ್ನೋವಾ ಹೈಕ್ರಾಸ್'ಗೆ ಹೋಲಿಕೆ ಮಾಡಿದರೆ, ನೂತನ ಎಂಪಿವಿ ವಿನ್ಯಾಸದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

Royal Enfield: ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಹಿಂದೆ ಬಿದ್ದ ಹೈಕ್ಳು..

ರಾಯಲ್ ಎನ್‌ಫೀಲ್ಡ್ (Royal Enfield), ಪ್ರಖ್ಯಾತ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿ ಎಲ್ಲೆಡೆ ಮನೆ ಮಾತಾಗಿದೆ. ದೇಶೀಯವಾಗಿ ಕಂಪನಿಯು ಮಾರಾಟಗೊಳಿಸುವ ಬೈಕ್‌ಗಳನ್ನು ಯುವ ಗ್ರಾಹಕರು ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಏಪ್ರಿಲ್ ತಿಂಗಳಲ್ಲೂ ಕಂಪನಿಯ ಮೋಟಾರ್‌ಸೈಕಲ್‌ಗಳು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದ್ದು, ನಿರೀಕ್ಷಿತ ಮಟ್ಟಕ್ಕಿಂತ ಉತ್ತಮವಾದ ಪ್ರಗತಿಯನ್ನೇ ಸಾಧಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ನಗರವನ್ನು ಸ್ವಚ್ಛವಾಗಿಡಲು 100 ಕಸ್ಟಮೈಸ್ ಮಾಡಿದ ಅತ್ಯಾಧುನಿಕ..

SWITCH Mobility Flags Off 100 SWITCH IeV3 for Waste Management to Indore | ಭಾರತದಾದ್ಯಂತ ಎಲ್ಲಾ ರಾಜ್ಯಗಳ ಪ್ರಮುಖ ನಗರಗಳು ಸ್ಮಾರ್ಟ್ ಹಾಗೂ ಸ್ವಚ್ಚ ನಗರಗಳಾಗಲು ಸಜ್ಜಾಗುತ್ತಿವೆ. ಇದಕ್ಕೆ ಮುಖ್ಯವಾಗಿ ಕಾರ್ಬನ್ ಹೊರಸೂಸುವ ವಾಹನಗಳನ್ನು ನಿಯಂತ್ರಿಸಿದರೆ ಪರಿಸರ ರಕ್ಷಣೆಯಲ್ಲಿ ಮೊದಲ ಹೆಜ್ಜೆ ಇಟ್ಟಂತೆ ಎಂಬುದನ್ನು ಅರಿತುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮಧ್ಯಪ್ರದೇಶದ ಇಂದೋರ್ ಮಹಾನಗರ ಪಾಲಿಕೆಯ ತ್ಯಾಜ್ಯ ನಿರ್ವಹಣೆಗಾಗಿ 100 ಕಸ್ಟಮೈಸ್ ಮಾಡಿದ ಸ್ವಿಚ್ ಐಇವಿ3 ಎಲೆಕ್ಟ್ರಿಕ್ ವಾಹನಗಳನ್ನು ಸಜ್ಜುಗೊಳಿಸಲಾಗಿದೆ. ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಇಂದೋರ್‌ನ ಖ್ಯಾತಿಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದ್ದು, ಸುಸ್ಥಿರ ನಗರಾಭಿವೃದ್ಧಿಗೆ ಅದರ ಬದ್ಧತೆಯನ್ನು ಬಲಪಡಿಸಿರುವುದಾಗಿ ಹೇಳಿದೆ.

Kia: ಕಿಯಾ ಕಾರುಗಳಿಗೆ ಕ್ಯೂ ನಿಂತ ಗ್ರಾಹಕರು.. ಭಾರೀ ಸಂಖ್ಯೆಯಲ್ಲಿ..

ಕಿಯಾ ಇಂಡಿಯಾ (Kia India) ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಆಂಧ್ರ ಪ್ರದೇಶದ ಅನಂತಪುರದಲ್ಲಿ ಕಂಪನಿಯು ಬೃಹತ್ ಉತ್ಪಾದನಾ ಘಟಕವನ್ನು ಹೊಂದಿದ್ದು, ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವುಗಳು ಹೆಚ್ಚು ಆಕರ್ಷಕವಾಗಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈ ಏಪ್ರಿಲ್ ತಿಂಗಳಲ್ಲೂ ಕಿಯಾ ಕಂಪನಿಯ ಕಾರುಗಳು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಭಾರತದಲ್ಲಿ ಸ್ವದೇಶಿ ಟಾಟಾ ಕಾರಿಗೆ ಟಾಂಗ್ ಕೊಟ್ಟ ಚೀನಾ ಕಾರು!

MG Windsor EV Vs Tata Nexon EV price, features, battery comparison | ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ, ಇಂಧನ ಬೆಲೆಗಳ ಏರಿಕೆಯಿಂದ ಬೇಸತ್ತಿರುವ ಜನರು ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರುಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಎಲೆಕ್ಟ್ರಿಕ್ ಕಾರುಗಳು ತುಸು ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಟಾಟಾ ಮೋಟಾರ್ಸ್ ಮುನ್ನುಗ್ಗುತ್ತಿದೆ. ಪ್ರತಿ ತಿಂಗಳು ದಾಖಲೆ ಮಟ್ಟದ ಇವಿಗಳನ್ನು ಟಾಟಾ ಡೆಲಿವರಿ ನೀಡುತ್ತಿದೆ. ಅದರಲ್ಲೂ ಟಾಟಾ ನೆಕ್ಸಾನ್ ಇವಿ ಕಾರಿಗೆ ಎಲ್ಲಿಲ್ಲದ ಬೇಡಿಕೆ ಇದ್ದು, ಇದೀಗ ಚೀನಾ ಮೂಲದ ಎಂಜಿ ಮೋಟಾರ್‌ ನೆಕ್ಸಾನ್‌ಗೆ ಸರಿಯಾದ ಪ್ರತಿಸ್ಪರ್ಧಿಯನ್ನು ಭಾರತದಲ್ಲಿ ಇಳಿಸಿದೆ. ಅದೇ ಎಂಜಿ ವಿಂಡ್ಸರ್.