Bajaj: ಅಗ್ಗದ ಬೆಲೆಯ ಹೊಸ ಬಜಾಜ್ ಚೇತಕ್ 3503 ಇ-ಸ್ಕೂಟರ್..

ಬಜಾಜ್ ಚೇತಕ್ (Bajaj Chetak) ಪ್ರಖ್ಯಾತ ಇ-ಸ್ಕೂಟರ್ ಆಗಿ ಹೊರಹೊಮ್ಮಿದೆ. ಇದು ಹೆಚ್ಚು ಅತ್ಯಾಧುನಿಕವಾಗಿದ್ದು, ದೇಶೀಯವಾಗಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಸದ್ಯ, ಈ ಎಲೆಕ್ಟ್ರಿಕ್ ಸ್ಕೂಟರ್‌ನ '35 ಸೀರೀಸ್'ಗೆ ನವೀನ ಮಾಡೆಲ್ ಸೇರ್ಪಡೆಯಾಗಿದ್ದು, ಇತ್ತೀಚೆಗೆ ಬಿಡುಗಡೆಗೊಂಡಿತ್ತು. ನೀವು ಬಜಾಜ್ ಚೇತಕ್ ಸ್ಕೂಟರ್‌ನ ಹೊಚ್ಚ ಹೊಸ ಮಾಡೆಲ್‌ನ್ನು ಖರೀದಿ ಮಾಡಲು ಪ್ಲ್ಯಾನ್ ಮಾಡಿದ್ದೀರಾ.. ನಾವಿಲ್ಲಿ ನೂತನ '3503' ಮಾಡೆಲ್‌ನ ಬೆಲೆ ಹಾಗೂ ವಿಶೇಷತೆ ಕುರಿತ ಪ್ರಮುಖಾಂಶಗಳ ಬಗ್ಗೆ ತಿಳಿಸಿಕೊಟ್ಟಿದ್ದೇವೆ.

ಹ್ಯುಂಡೈ ಹೊಸ ಕಾರಿನ ಬಿಡುಗಡೆಗೆ ಸರ್ವ ಸಿದ್ಧ: ಟೆಸ್ಟಿಂಗ್ ವೇಳೆ..

Next-gen Hyundai Venue spotted on test runs | ಭಾರತದಲ್ಲಿ ಹೊಸ ಕಾರುಗಳ ಆಗಮನಗಳು ಹೆಚ್ಚಾಗಿವೆ, ಒಂದೆಡೆ ಹೊಸ ಮಾಡಲ್‌ಗಳನ್ನು ವಾಹನ ತಯಾರಕರು ಬಿಡುಗಡೆ ಮಾಡುತ್ತಿದ್ದರೆ. ಮತ್ತೊಂದೆಡೆ ತಮ್ಮ ಜನಪ್ರಿಯ ಮಾದರಿಗಳನ್ನು ಅಧುನಿಕ ಡಿಸೈನ್ ಹಾಗೂ ಹಲವು ಹೊಸ ಫೀಚರ್ಸ್‌ನೊಂದಿಗೆ ಬಿಡುಗಡೆ ಮಾಡುತ್ತಿದ್ದಾರೆ. ಇತ್ತೀಚೆಗೆ ಹ್ಯುಂಡೈನಿಂದ ಹೊರಬರಲಿರುವ ಹೊಸ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಕಾಣಿಸಿಕೊಂಡಿದೆ. 2026 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಇದರ ಪರೀಕ್ಷೆಗಳನ್ನು ಜೋರಾಗಿ ನಡೆಸಲಾಗುತ್ತಿದೆ. ಇದು ಹ್ಯುಂಡೈಗೆ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ತಂದುಕೊಟ್ಟಿರುವ ಕಾರಣ ಈ ಕಾರನ್ನು ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆ ಮಾಡಲು ಸಜ್ಜಾಗಿದೆ.

Toyota: ಟೊಯೊಟಾದ ಕಾರುಗಳನ್ನು ಲೈಕ್ ಮಾಡಿದ ಗ್ರಾಹಕರು..

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor), ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಇನ್ನೋವಾ ಕ್ರಿಸ್ಟಾ, ಇನ್ನೋವಾ ಹೈಕ್ರಾಸ್, ಅರ್ಬನ್ ಕ್ರೂಸರ್ ಹೈರೈಡರ್, ಟೈಸರ್, ಗ್ಲಾನ್ಜಾ, ಹಿಲಕ್ಸ್, ಫಾರ್ಚೂನರ್ ಮತ್ತು ರೂಮಿಯನ್‌ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ದೊರೆಯುತ್ತವೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ ಟೊಯೊಟಾ ಕಂಪನಿಯು ಈ ಏಪ್ರಿಲ್ ತಿಂಗಳ ಒಟ್ಟಾರೆ ಕಾರು ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿದ್ದು, ನಿರೀಕ್ಷೆಗೂ ಮೀರಿದ ಪ್ರಗತಿಯನ್ನು ಕಂಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Hero: ಹೀರೋದ ಈ ಬೈಕ್‌ಗೆ ಫುಲ್ ಡಿಮ್ಯಾಂಡ್.. ಮುಗಿಬಿದ್ದ ಗ್ರಾಹಕರು..

ಹೀರೋ ಮೋಟೋಕಾರ್ಪ್ (Hero MotoCorp), ಸಾಮಾನ್ಯ ಬೈಕ್‌ಗಳೊಂದಿಗೆ ವಿವಿಧ ಪ್ರೀಮಿಯಂ ಮೋಟಾರ್‌ಸೈಕಲ್‌ಗಳನ್ನು ಕೂಡ ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಅದರಲ್ಲೂ ಎಕ್ಸ್‌ಟ್ರೀಮ್ 250ಆರ್, ಎಕ್ಸ್‌ಪಲ್ಸ್ 210 ಹಾಗೂ ಕರಿಜ್ಮಾ ಎಕ್ಸ್‌ಎಂಆರ್ 210 ಬೈಕ್‌ಗಳು ದೊಡ್ಡಮಟ್ಟದಲ್ಲಿ ಜನಪ್ರಿಯತೆ ಗಳಿಸಿವೆ. ಈ ಮೋಟಾರ್‌ಸೈಕಲ್‌ಗಳನ್ನು 'ಪ್ರೀಮಿಯಾ' ಡೀಲರ್‌ಶಿಪ್‌ ಮೂಲಕ ಮಾರಾಟಗೊಳಿಸಲಾಗುತ್ತದೆ. ವಿಶೇಷವಾಗಿ ಪ್ರಖ್ಯಾತ 'ಎಕ್ಸ್‌ಟ್ರೀಮ್ 250ಆರ್'ಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಗ್ರಾಹಕರು ಸಹ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ.
Advertisement

ಈಗಲೇ ಬುಕ್ ಮಾಡಿ! 5000 ರಿಯಾಯಿತಿ.. 50MP + 50MP ಕ್ಯಾಮೆರಾಗಳು.. ಯಾವ ಫೋನ್?


ಕಾಲೇಜು ವಿದ್ಯಾರ್ಥಿಗಳೇ ಇವು ನಿಮಗಾಗಿ: ಖರ್ಚಿಲ್ಲದೆ ನಿತ್ಯ ಓಡಾಡಿ

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು (Electric vehicles) ಭಾರೀ ಜನಪ್ರಿಯತೆ ಪಡೆಯುತ್ತಿವೆ. ಮುಖ್ಯವಾಗಿ ಓಲಾ, ಎಥರ್, ಟಿವಿಎಸ್, ಬಜಾಜ್‌ನಂತಹ ಪ್ರಮುಖ ಬ್ರಾಂಡ್‌ಗಳು ಉತ್ತಮ ಬೇಡಿಕೆ ಪಡೆದಿವೆ. ಇಂಧನ ವೆಚ್ಚವಿಲ್ಲದೆ ನಿತ್ಯ ನಗರಗಳಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುವುದರಿಂದ ವಿದ್ಯಾರ್ಥಿಗಳು ಹೆಚ್ಚಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ಶೀಘ್ರದಲ್ಲೇ ಕಾಲೇಜಿಗೆ ಪ್ರವೇಶಿಸುತ್ತಿರುವುದರಿಂದ, ಪರಿಗಣಿಸಬೇಕಾದ ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳು ಇಲ್ಲಿವೆ. ನಮ್ಮ ಪಟ್ಟಿಯಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕೈಗೆಟುಕವ ಬೆಲೆಯನ್ನು ಹೊಂದಿವೆ. ಇವು ಬೆಲೆ ಮತ್ತು ವಿಶ್ವಾಸಾರ್ಹತೆಯ ನಡುವೆ ಉತ್ತಮ ಸಮತೋಲನವನ್ನು ಹೊಂದಿವೆ. ಓಲಾ ಎಸ್1 ಎಕ್ಸ್ (Ola S1X): ಇದು ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಮೂರು ವಿಧದಲ್ಲಿ ಖರೀದಿಗೆ ದೊರೆಯುತ್ತದೆ. ಸಂಪೂರ್ಣ ಚಾರ್ಜ್‌ನಲ್ಲಿ 108 ಕಿಲೋಮೀಟರ್ ಓಡುತ್ತದೆ. 101 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಇದರ 2 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದಿರುವ ಮಾಡೆಲ್, ರೂ.79,999 (ಎಕ್ಸ್ ಶೋರೂಂ) ಬೆಲೆಯನ್ನು ಒಳಗೊಂಡಿದೆ.

6-ಆಸನಗಳ ಈ ಜನಪ್ರಿಯ 'Tata Suv'ಗೆ 3 ಬದಲಿ ಕಾರುಗಳಿವು..

ಟಾಟಾ ಸಫಾರಿ (Tata Safari) ಪ್ರಖ್ಯಾತ ಎಸ್‌ಯುವಿಯಾಗಿದೆ. ಕನಿಷ್ಠ ರೂ.15 ಲಕ್ಷದಿಂದ ಗರಿಷ್ಠ ರೂ.27 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2-ಲೀಟರ್ ಡೀಸೆಲ್ ಎಂಜಿನ್‌ ಆಯ್ಕೆಯನ್ನು ಹೊಂದಿದೆ. 14.50 ರಿಂದ 16.30 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದು 6-ಆಸನಗಳನ್ನು ಪಡೆದಿದ್ದು, ಹೊರಭಾಗದಲ್ಲಿ ಆಕರ್ಷಕ ವಿನ್ಯಾಸವನ್ನು ಒಳಗೊಂಡಿದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 7 ಏರ್‌ಬ್ಯಾಗ್‌ಗಳನ್ನು ಹೊಂದಿದೆ. ನಾವಿಲ್ಲಿ ಟಾಟಾ ಸಫಾರಿಗೆ ಪರ್ಯಾಯ ಆಯ್ಕೆಯಾಗಬಲ್ಲ 3 ಪ್ರಮುಖ ಕಾರುಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.

ಆಂಕರ್ ಅನುಶ್ರೀ ಮದುವೆ ಆಗುವ ಹುಡುಗ ಶೀಘ್ರದಲ್ಲೇ... Anchor Anushree


Skoda: ಸ್ಕೊಡಾದಿಂದ 25,000 ಕಾರುಗಳ ಹಿಂತೆಗೆತ ಘೋಷಣೆ.. ಕಾರಣವೇನು?

ಸ್ಕೋಡಾ ಆಟೋ ಇಂಡಿಯಾ (Skoda Auto India) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಸದ್ಯ, ನಿರ್ದಿಷ್ಟ ಅವಧಿಯಲ್ಲಿ ಉತ್ಪಾದಿಸಿದ ಸ್ಲಾವಿಯಾ, ಕುಶಾಕ್ ಹಾಗೂ ಕೈಲಾಕ್ ಕಾರುಗಳಲ್ಲಿ ಸ್ವಲ್ಪ ಮಟ್ಟಿಗೆ ಸಂಭಾವ್ಯ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದಾಗಿ ಈ ಮಾಡೆಲ್‌ಗಳ ಬರೋಬ್ಬರಿ 25,000 ಯುನಿಟ್‌ಗಳನ್ನು ವಾಪಸ್ ಪಡೆಯಲು ಕಂಪನಿಯು ತೀರ್ಮಾನಿಸಿದೆ ಎಂದು ವರದಿಯಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಹಳ್ಳಿಗೂ ಸೈ.. ಸಿಟಿಗೂ ಓಕೆ.. ಈ ತಿಂಗಳು ಮಾರಾಟಕ್ಕೆ ಬಂದ ಜನಪ್ರಿಯ..

ಭಾರತವು ವಿಶ್ವದಲ್ಲಿಯೇ ಅತಿದೊಡ್ಡ ದ್ವಿಚಕ್ರ ವಾಹನ (Two Wheeler) ಮಾರುಕಟ್ಟೆಯನ್ನು ಹೊಂದಿದೆ. ಇಲ್ಲಿ ಪ್ರತಿ ತಿಂಗಳು ಹಲವು ಬೈಕ್ ಹಾಗೂ ಸ್ಕೂಟರ್‌ಗಳು ಬಿಡುಗಡೆಯಾಗುತ್ತಿರುತ್ತಿವೆ. ಅದಕ್ಕೆ ಏಪ್ರಿಲ್ ಕೂಡ ಹೊರತಾಗಿಲ್ಲ. ಈ ತಿಂಗಳು ಬಹುತೇಕ ಹೀರೋ ಕಂಪನಿಯು ನವೀಕರಣಕ್ಕೆ ಒಳಪಟ್ಟು ಮೋಟಾರ್‌ಸೈಕಲ್‌ಗಳನ್ನು ಮಾರಾಟಕ್ಕೆ ತಂದಿದೆ. ಜೊತೆಗೆ ಹೋಂಡಾ ಕಂಪನಿಯು ಸ್ಕೂಟರ್‌ವೊಂದನ್ನು ಬಿಡುಗಡೆಗೊಳಿಸಿದೆ. ಇವೆಲ್ಲ ದ್ವಿಚಕ್ರ ವಾಹನಗಳನ್ನು ಒಬಿಡಿ-2ಬಿ (OBD-2B) ಮಾನದಂಡಗಳ ಅನ್ವಯ ಮೇಲ್ದರ್ಜೆರಿಸಲಾಗಿದೆ. ಇದು ಇಂಗಾಲದ ಹೊರಸೂಸುವಿಕೆಯಲ್ಲಿ ಸಮಸ್ಯೆಗಳು ಕಂಡುಬಂದರೆ ಸವಾರರನ್ನು ಎಚ್ಚರಿಸುತ್ತದೆ.

2025ರ ಕವಾಸಕಿ ವರ್ಸಿಸ್ 650 ಬೈಕ್ ಬಿಡುಗಡೆ

ಭಾರತದ ಇತ್ತೀಚಿನ ಮತ್ತು ಹೆಚ್ಚು ಕಠಿಣವಾದ ಬಿಎಸ್ 6 ಪಿ 2 ಒಬಿಡಿ 2 ಬಿ ಎಮಿಷನ್ ಮಾನದಂಡಗಳನ್ನು ಪೂರೈಸಲು ವಿಶ್ವದ ಪವರ್‌ಫುಲ್‌ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿರುವ ಕವಾಸಕಿ, ತನ್ನ ಹೊಸ 2025ರ ನಿಂಜಾ 500 ಅನ್ನು ನವೀಕರಿಸಿ ಬಿಡುಗಡೆ ಮಾಡಿತ್ತು. ಇದೀಗ ಮತ್ತೊಂದು ಪವರ್‌ಫುಲ್‌ ಅಡ್ವೆಂಚರ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಕವಾಸಕಿ ಕಂಪನಿಯು ತನ್ನ ಅಡ್ವೆಂಚರ್ ಟೂರರ್ ಪ್ರತಿರೂಪವಾದ ವರ್ಸಿಸ್ 650 ಅನ್ನು 2025ರ ಆವೃತ್ತಿಗೆ ಪರಿಷ್ಕೃತ ಬೆಲೆ ಮತ್ತು ಸ್ವಲ್ಪ ಪರಿಷ್ಕೃತ ಬಣ್ಣದೊಂದಿಗೆ ನವೀಕರಿಸಿ ಬಿಡುಗಡೆ ಮಾಡಿದೆ.

Renault: ಲಕ್ಷುರಿ ಫೀಚರ್‌.. ರೆನಾಲ್ಟ್‌ ಡಸ್ಟರ್‌ಗೆ ಹೊಸ ಹೆಸರು..

ಫ್ರಾನ್ಸ್ ಮೂಲದ ರೆನಾಲ್ಟ್ (Renault), ಪ್ರಖ್ಯಾತ ಕಾರು ತಯಾರಕ ಕಂಪನಿಯಾಗಿಯಾಗಿ ಮನೆ ಮಾತಾಗಿದೆ. ದೇಶೀಯವಾಗಿ ಕ್ವಿಡ್, ಕಿಗರ್ ಮತ್ತು ಟ್ರೈಬರ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತವೆ. ಸದ್ಯ, ಕಂಪನಿಯು ಮಾರಾಟದಿಂದ ಸ್ಥಗಿತಗೊಳಿಸಿದ್ದ 'ಡಸ್ಟರ್‌' ಎಸ್‌ಯುವಿಯನ್ನು ಹೊಸ ರೂಪದಲ್ಲಿ ಮತ್ತೆ ಬಿಡುಗಡೆಗೊಳಿಸಲು ಸಾಕಷ್ಟು ತಯಾರಿಯನ್ನು ನಡೆಸುತ್ತಿದೆ. ಆದರೆ, ಈ ಬಾರಿ ಡಸ್ಟರ್‌ (duster) ನೂತನ ಹೆಸರಿನೊಂದಿಗೆ ಮಾರಾಟಕ್ಕೆ ಬರುವುದು ಬಹುತೇಕ ಖಚಿತವಾಗಿದೆ.
Advertisement

ಕೇವಲ ಒಂದೇ ದಿನ ಬಾಕಿ: ಮೇ ತಿಂಗಳಲ್ಲಿ 4 ಹೊಸ ಕಾರುಗಳು ಬಿಡುಗಡೆ

ಭಾರತದ ನಾಲ್ಕು ಪ್ರಮುಖ ಕಾರು ತಯಾರಕ ಕಂಪನಿಗಳು ತಮ್ಮ ಹೊಸ ಕಾರುಗಳ ಬಿಡುಗಡೆಗೆ ರೆಡಿಯಾಗಿವೆ. ಪ್ರಮುಖ ವಾಹನ ತಯಾರಕರಾದ ಟಾಟಾ, ಕಿಯಾ, ಎಂಜಿ ಮತ್ತು ಫೋಕ್ಸ್ ವ್ಯಾಗನ್ 2025 ರ ಮೇ ತಿಂಗಳಲ್ಲಿ ತಮ್ಮ ಮುಂಬರುವ ಹೊಸ ಉತ್ಪನ್ನಗಳನ್ನು ಪರಿಚಯಿಸಲಿವೆ. 2025ರ ಕಿಯಾ ಕ್ಯಾರೆನ್ಸ್, ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ನವೀಕರಿಸಿದ ವಿಂಡ್ಸರ್ ಇವಿ, 2025ರ ಟಾಟಾ ಆಲ್ಟ್ರೋಜ್ ಫೇಸ್ ಲಿಫ್ಟ್, 250 ಫೋಕ್ಸ್ ವ್ಯಾಗನ್ ಗಾಲ್ಫ್ ಜಿಟಿಐ ಕಾರುಗಳು ಮೇ ತಿಂಗಳಲ್ಲಿ ಬಿಡುಗಡೆಗೆ ಸಜ್ಜಾಗಿಬಿಟ್ಟಿವೆ.

ಹೊಸ ಹೈಬ್ರಿಡ್ ಎಸ್‌ಯುವಿ ಬಿಡುಗಡೆಗೆ ಸಜ್ಜು

ಸಿಟ್ರನ್ ಅಧಿಕೃತವಾಗಿ ಎರಡನೇ ತಲೆಮಾರಿನ ಸಿ5 ಏರ್‌ಕ್ರಾಸ್ ಎಸ್‌ಯುವಿಯನ್ನು ಹೊಸ ಹೈಬ್ರಿಡ್ ಮತ್ತು ಆಲ್-ಎಲೆಕ್ಟ್ರಿಕ್ ಪವರ್ ಟ್ರೇನ್ ಆಯ್ಕೆಗಳೊಂದಿಗೆ ಅನಾವರಣಗೊಳಿಸಿದೆ. ಸಿ-ಆಕಾರದ ಎಲ್ಇಡಿ ಡಿಆರ್‌ಎಲ್ ಗಳೊಂದಿಗೆ ಸ್ಲಿಮ್ ಹೆಡ್ ಲ್ಯಾಂಪ್‌ಗಳು ಫ್ರಂಟ್‌ ಲುಕ್‌ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ. ಡ್ಯುಯಲ್-ಟೋನ್ ಬಂಪರ್, ಫ್ಲಶ್ ಫ್ಲಾಟ್ ಸ್ಲಾಟ್‌ಗಳು ಎಸ್‌ಯುವಿಗೆ ರಗಡ್ ಲುಕ್ ಅನ್ನು ಹೆಚ್ಚಿಸಿವೆ. ಕೆಳಗೆ ಬ್ಲಾಕ್ - ಔಟ್ ಸೆಂಟ್ರಲ್ ಏರ್ ಇನ್‌ಟೇಕ್ ಕೂಡ ಇದೆ. ಇವು ಅಕ್ಟೋಬರ್ 2024 ರಲ್ಲಿ ಪ್ರದರ್ಶಿಸಲಾದ ಕಾನ್ಸೆಪ್ಟ್ ಮಾಡಲ್‌ಗೆ ತೀರಾ ಹತ್ತಿರವೆನಿಸಿವೆ.

Bajaj: ಬಿಡುಗಡೆಯೇ ಆಗಿಲ್ಲ.. ಸದ್ದಿಲ್ಲದೇ ಡೀಲರ್‌ಶಿಪ್‌ಗೆ ಬಂತು..

ಬಜಾಜ್ ಡೊಮಿನಾರ್ 250 (Bajaj Dominar 250) ಪ್ರೀಮಿಯಂ ಬೈಕ್ ಆಗಿದ್ದು, ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸ್ವಲ್ಪ ಮಟ್ಟಿಗೆ ಕೈಗೆಟುಕುವ ಬೆಲೆಯಲ್ಲಿಯೇ ಸಿಗಲಿದ್ದು, ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. ಸದ್ಯ, ಬಜಾಜ್ ಕಂಪನಿಯು ಈ ಮೋಟಾರ್‌ಸೈಕಲ್‌ನ ನವೀಕರಿಸಿದ 2025ರ ಮಾಡೆಲ್‌ನ್ನು ಬಿಡುಗಡೆಗೊಳಿಸಲು ಸಿದ್ಧತೆಯನ್ನು ನಡೆಸುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಕೆಲವೇ ದಿನಗಳಲ್ಲಿ ನೂತನ ಬಜಾಜ್ ಡೊಮಿನಾರ್ 250 ಬೈಕ್ ಅದ್ದೂರಿಯಾಗಿಯೂ ಮಾರಾಟಕ್ಕೂ ಬರಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಅಗ್ಗದ ಬೆಲೆಗೆ ಬಿಡುಗಡೆಯಾಗಿರುವ ಹೊಸ ಎಲೆಕ್ಟ್ರಿಕ್ ಬೈಕ್ ವಿಶೇಷತೆಗಳು

ಗಂಟೆಗೆ 75 ಕಿ.ಮೀ ಗರಿಷ್ಠ ವೇಗವನ್ನು ತಲುಪಬಲ್ಲ ಹಾಗೂ ಒಂದು ಬಾರಿ ಚಾರ್ಜ್ ಮಾಡಿದರೆ 90 ಕಿ.ಮೀ ಓಡಬಲ್ಲ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಪೂರ್ಣ - ಫೇರ್ಡ್ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಆಗಿದ್ದು, ಅನೇಕ ಡ್ರೈವಿಂಗ್ ಮೋಡ್ ಗಳು, ಕೀಲೆಸ್ ಇಗ್ನಿಷನ್, ಮೋಟಾರ್ ಕಟ್ - ಆಫ್ ಸ್ವಿಚ್, ಆಂಟಿ - ಥೆಫ್ಟ್ ಲಾಕ್ ಮತ್ತು ಸ್ಮಾರ್ಟ್ ಬ್ಯಾಟರಿಯೊಂದಿಗೆ ಬರುತ್ತದೆ. ಹೊಸ ಎಲೆಕ್ಟ್ರಿಕ್ ಬೈಕ್ ಕಂಪನಿಯಾದ 'ಒಡಿಸ್ಸಿ' ತನ್ನ ಇವೊಕ್ಯೂಐಎಸ್ (EVOQIS) ಫೇರ್ಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ್ನು ಹೆಚ್ಚು ಕೈಗೆಟುಕುವ ಬೆಲೆಗೆ ಬಿಡುಗಡೆ ಮಾಡಿದೆ.

ಇಂದು ಭಾರತದಲ್ಲಿ Motorola Edge 60 Pro ಬಿಡುಗಡೆ; ಬಜೆಟ್ ಬೆಲೆ, ವಿಶೇಷತೆಗಳೇನು?


ಇಲ್ಲಿವೆ ನೋಡಿ.. 5 ಬಾಗಿಲುಗಳ ಪ್ರಮುಖ 3 ಆಫ್-ರೋಡ್ ಎಸ್‌ಯುವಿಗಳು..

ಹೊಸ ಕಾರು ಖರೀದಿ ಮಾಡುವ ಗ್ರಾಹಕರಿಗೆ ಆಫ್-ರೋಡ್ ಎಸ್‌ಯುವಿಗಳ ಮೇಲೆ ವಿಶೇಷವಾದ ಪ್ರೀತಿಯಿರುತ್ತದೆ. ಇವುಗಳು ಸಾಮಾನ್ಯ ರಸ್ತೆಗಳಲ್ಲಿ ಸುಲಭವಾಗಿ ಚಲಿಸಬಲ್ಲವು. ಅದೇ ರೀತಿಯಲ್ಲಿ ಹಳ್ಳ-ದಿಣ್ಣೆ ಹಾಗೂ ಗುಡ್ಡಗಾಡಿನ ರಸ್ತೆಯಲ್ಲಿ ಸುಲಭವಾಗಿ ಓಡುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ನಾವಿಲ್ಲಿ ಹೆಚ್ಚು ಶಕ್ತಿಯುತವಾಗಿರುವ ಜನಪ್ರಿಯ ಆಫ್-ರೋಡ್ ಎಸ್‌ಯುವಿಗಳಾದ ಮಹೀಂದ್ರಾ ಥಾರ್ ರಾಕ್ಸ್‌, ಮಾರುತಿ ಸುಜುಕಿ ಜಿಮ್ನಿ ಹಾಗೂ ಫೋರ್ಸ್ ಗೂರ್ಖಾ ಮಾಡೆಲ್‌ಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ. ಮಹೀಂದ್ರಾ ಥಾರ್ ರಾಕ್ಸ್‌ (Mahindra Thar Roxx): ಇದು ಪ್ರಖ್ಯಾತ ಆಫ್-ರೋಡ್ ಎಸ್‌ಯುವಿಯಾಗಿ ಹೊರಹೊಮ್ಮಿದ್ದು, ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಇದರ ಕಾರ್ಯಕ್ಷಮತೆಯನ್ನು ಗ್ರಾಹಕರು ಮೆಚ್ಚಿದ್ದು, ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ಕಾರು, ಕನಿಷ್ಠ ರೂ.13 ಲಕ್ಷದಿಂದ ರೂ.23 ಲಕ್ಷವರೆಗೆ ಎಕ್ಸ್-ಶೋರೂಂ ದರವನ್ನು ಹೊಂದಿದೆ.

Tata Punch: 7 ಲಕ್ಷದೊಳಗೆ ಸಿಗುವ ಎರಡು ಬೆಸ್ಟ್ ಎಸ್‌ಯುವಿಗಳು

ನಿಸ್ಸಾನ್ ಮ್ಯಾಗ್ನೈಟ್ ಮತ್ತು ಟಾಟಾ ಪಂಚ್ ಎರಡೂ ಕಾರುಗಳು ಆಯಾ ಬ್ರಾಂಡ್‌ಗಳಿಗೆ ಉತ್ತಮ ಯಶಸ್ಸು ತಂದುಕೊಟ್ಟ ಕಾರುಗಳಾಗಿವೆ. ಆಕರ್ಷಕ ಬೆಲೆಯಲ್ಲಿ ಸಿಗುವ ಉತ್ತಮ ಕಾರುಗಳು ಯಾವಾಗಲೂ ಕಾರು ಮಾರುಕಟ್ಟೆಗೆ ಒಳ್ಳೆಯ ಸುದ್ದಿಯಾಗಿದ್ದರೂ, ಇದು ನಿಮ್ಮ ಖರೀದಿ ನಿರ್ಧಾರವನ್ನು ಸ್ವಲ್ಪ ಕಷ್ಟಕರವಾಗಿಸುತ್ತದೆ. ನಿಸ್ಸಾನ್ ಮ್ಯಾಗ್ನೈಟ್ ಹಾಗೂ ಟಾಟಾ ಪಂಚ್ ವಿಷಯದಲ್ಲೂ ಇದೇ ಆಗಿದೆ. ಎರಡೂ ಕಾರುಗಳಲ್ಲಿ ಯಾವ ಕಾಂಪ್ಯಾಕ್ಟ್ ಎಸ್‌ಯುವಿ ನಿಮಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ನಿರ್ಧರಿಸಲು ನಿಮಗೆ ಸಹಾಯ ಮಾಡಲು ನಾವು ಎರಡು ಕಾರುಗಳನ್ನು ಹೋಲಿಸಿದ್ದೇವೆ.

ನಿನ್ನೆಯಷ್ಟೇ ಬಿಡುಗಡೆ.. 60 ಸಾವಿರದ ಹೀರೋ ಎಚ್ಎಫ್ 100 ಬೈಕ್..

ಹೀರೋ ಎಚ್ಎಫ್ 100 (Hero HF 100) ಜನಪ್ರಿಯ ಪ್ರಯಾಣಿಕ ಬೈಕ್ ಆಗಿದೆ. ಇದು ಸಾಮಾನ್ಯ ವರ್ಗದ ಗ್ರಾಹಕರಿಗೆ ಹೇಳಿ ಮಾಡಿಸಿದ ರೀತಿಯಲಿದ್ದು, ದಿನನಿತ್ಯದ ಬಳಕೆಗೆ ಅತ್ಯುತ್ತಮವಾದ ಆಯ್ಕೆಯಾಗಲಿದೆ. ಸೋಮವಾರ ಈ ಮೋಟಾರ್‌ಸೈಕಲ್‌ನ ನವೀಕರಿಸಿದ 2025ರ ಮಾಡೆಲ್‌ನ್ನು ಮಾರಾಟಕ್ಕೆ ತರಲಾಗಿದೆ. ಇದರ ಪವರ್‌ಟ್ರೇನ್‌ನ್ನು ಒಬಿಡಿ-2ಬಿ ಮಾನದಂಡಗಳ ಪ್ರಕಾರ ಮೇಲ್ದರ್ಜೆರಿಸಲಾಗಿದ್ದು, ಇಂಗಾಲದ ಹೊರಸೂಸುವಿಕೆಯ ಸಂದರ್ಭದಲ್ಲಿ ದೋಷಗಳು ಕಂಡುಬಂದರೆ ಸವಾರರನ್ನು ಎಚ್ಚರಿಸುತ್ತದೆ. ನೀವು ಈ ನೂತನ ಬೈಕ್‌ನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಬೆಲೆ ಹಾಗೂ ವಿಶೇಷತೆಗಳ ಕುರಿತ 5 ಪ್ರಮುಖಾಂಶಗಳು ಇಲ್ಲಿವೆ.
Advertisement

Motorola: 50MP + 50MP + 50MP ಕ್ಯಾಮೆರಾ.. 3000 ರಿಯಾಯಿತಿ.. ಬೆಲೆ ಎಷ್ಟು?


ಪತ್ನಿಗೆ ಹೊಸ ಮಹೀಂದ್ರಾ ಬಿಇ 6 ಎಲೆಕ್ಟ್ರಿಕ್ ಎಸ್‌ಯುವಿ ಗಿಫ್ಟ್

ನಾವು ಇಷ್ಟಪಡುವ ವ್ಯಕ್ತಿಗಳಿಗೆ ಅಪರೂಪವಾಗಿ ಏನಾದರು ಉಡುಗೊರೆ ಕೊಡುವ ಸಂದರ್ಭ ಬಂದಾಗ ತುಂಬಾ ಯೋಚಿಸಿ ದುಬಾರಿ ಗಿಫ್ಟ್‌ಗಳನ್ನು ಕೊಡುತ್ತೇವೆ. ಇಂತಹ ಉಡುಗೊರೆಗಳನ್ನು ನಮ್ಮ ಸಂಗಾತಿಗಳಿಗೆ ಹೆಚ್ಚಾಗಿ ಕೊಡುತ್ತೇವೆ. ಕೆಲವೊಮ್ಮೆ ಈ ಉಡುಗೊರೆಗಳು ಚಿಕ್ಕದಾಗಿರುತ್ತವೆ, ಆದರೆ ಇನ್ನೂ ಕೆಲ ಸಂದರ್ಭಗಳಲ್ಲಿ ಈ ಉಡುಗೊರೆಗಳು ತುಂಬಾ ದೊಡ್ಡದಾಗುತ್ತವೆ. ಇತ್ತೀಚೆಗೆ ಭಾರತದಾದ್ಯಂತ ಸಖತ್ ಸದ್ದು ಮಾಡಿರುವ ಮಹೀಂದ್ರಾ ಬಿಇ 6 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಪತ್ನಿಗೆ ಉಡುಗೊರೆಯಾಗಿ ನೀಡಿ ಅಚ್ಚರಿಗೊಳಿಸಿರುವ ವಿಡಿಯೋ ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸದ್ದಿಲ್ಲದೇ ಸಿದ್ಧತೆ: ಈ 3 ಜನಪ್ರಿಯ ಎಸ್‌ಯುವಿಗಳು ಹೊಸ ಅವತಾರದಲ್ಲಿ..

ಭಾರತದ ಕಾರು ಮಾರುಕಟ್ಟೆಯಲ್ಲಿ ಎಸ್‌ಯುವಿಗಳು ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಇವುಗಳನ್ನು ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ ಹಸಿರು ಚಲನಶೀಲತೆಯನ್ನು ಬೆಂಬಲಿಸುವ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅದಕ್ಕಾಗಿ ಈಗಿನಿಂದಲೇ ಮಾರುತಿ ಸುಜುಕಿ, ಮಹೀಂದ್ರಾ ಹಾಗೂ ಕಿಯಾದಂತಹ ಕಂಪನಿಗಳು ಸಾಕಷ್ಟು ತಯಾರಿಯನ್ನು ಆರಂಭಿಸಿವೆ. ಕೆಲವೇ ವರ್ಷಗಳಲ್ಲಿ ಎಲೆಕ್ಟ್ರಿಕ್/ ಹೈಬ್ರಿಡ್ ಚಾಲಿತ ಕಾರುಗಳನ್ನು ಮಾರಾಟಕ್ಕೆ ತರಲಿವೆ. ಬಹುಮುಖ್ಯವಾಗಿ ಕೆಲವು ಜನಪ್ರಿಯ ಎಸ್‌ಯುವಿಗಳನ್ನು ಹೊಸ ಪವರ್‌ಟ್ರೇನ್‌ನೊಂದಿಗೆ ಪರಿಚಯಿಸಲಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Tata Nexon: ನೆಕ್ಸಾನ್ ಘನ ನಿರ್ಮಾಣ ಗುಣಮಟ್ಟಕ್ಕೆ ಮಾಲೀಕ ಸುಸ್ತು

ಕಾರು ಮಾಲೀಕರಿಗೆ ಕಾರು ನಿರ್ವಹಣೆ ಮಾಡುವುದಕ್ಕಿಂತಲೂ ಅದನ್ನು ಹೊರಗಡೆ ತೆಗೆದುಕೊಂಡು ಹೋದಾಗ ಸುರಕ್ಷಿತವಾಗಿ ಪಾರ್ಕ್ ಮಾಡುವುದೇ ದೊಡ್ಡ ಸವಾಲಾಗಿರುತ್ತದೆ. ಒಂದು ಸಣ್ಣ ಗೀರು ಬಿದ್ದರೂ ಮಾಲೀಕರಿಗೆ ಅದನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟವಾಗಿರುತ್ತದೆ. ಅಂಥದರಲ್ಲಿ ನಿಲ್ಲಿಸಿರುವ ಕಾರಿಗೆ ಅಪಘಾತವಾಗಿ ನಜ್ಜುಗುಜ್ಜಾದರೆ ಪರಿಸ್ಥಿತಿಯೇನು? ಮಾಲೀಕರಿಗೆ ಹೇಳತೀರದ ಸಂಕಟ ಎದುರಾಗುತ್ತದೆ. ಆದರೆ ಈ ಭಯ, ಸಂಕಟ ಟಾಟಾ (Tata) ಕಾರುಗಳ ಮಾಲೀಕರಿಗೆ ಬೇಡ. ಏಕೆಂದರೆ ಇತ್ತೀಚೆಗೆ ಪಾರ್ಕಿಂಗ್ ಸೌಲಭ್ಯದಲ್ಲಿ ಲಿಫ್ಟ್ ವಿಫಲಗೊಂಡು ನೆಕ್ಸಾನ್ ಎಸ್‌ಯುವಿ ಮೇಲೆ ಬಿದ್ದ ನಂತರವೂ ಕಾರು ಸುರಕ್ಷಿತವಾಗಿರುವುದು ಮಾಲೀಕರನ್ನು ಅಚ್ಚರಿಗೊಳಿಸಿದೆ.

ಬಾಸ್.. 50 Km ಮೈಲೇಜ್, 1.20 ಲಕ್ಷ.. ಈ ಜನಪ್ರಿಯ ಹೋಂಡಾ ಬೈಕ್..

ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಜನಮನ್ನಣೆ ಗಳಿಸಿದೆ. ದೇಶೀಯವಾಗಿ ವಿವಿಧ ಹಾಗೂ ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಇವುಗಳು ಹೆಚ್ಚು ಆಕರ್ಷಕವಾಗಿದ್ದು, ಗ್ರಾಹಕರು ಕೂಡ ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಅದರಲ್ಲಿ ಕೊಂಚ ದೊಡ್ಡ ಗಾತ್ರದ ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿರುವ 'ಯೂನಿಕಾರ್ನ್' ಮೋಟಾರ್‌ಸೈಕಲ್, ಈ ಮಾರ್ಚ್ ತಿಂಗಳು ಭಾರೀ ಸಂಖ್ಯೆಯಲ್ಲಿಯೂ ಮಾರಾಟಗೊಂಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.