Hyundai: ಬೇಸಿಗೆಯಲ್ಲಿ ಹ್ಯುಂಡೈ ಗ್ರಾಹಕರಿಗೆ ಸಖತ್ ಸಿಹಿಸುದ್ದಿ

ಹ್ಯುಂಡೈ (Hyundai) ಕಂಪನಿಯು ಇಂದು ದೇಶಾದ್ಯಂತ ಗ್ರಾಹಕರ ಸಂಪರ್ಕ ಕಾರ್ಯಕ್ರಮವಾದ ಹುಂಡೈ ಸ್ಮಾರ್ಟ್ ಕೇರ್ ಕ್ಲಿನಿಕ್ ಅನ್ನು ಘೋಷಿಸಿದೆ. ಈ ಅಭಿಯಾನವು ಏಪ್ರಿಲ್ 25 ರಿಂದ ಮೇ 6, 2025 ರವರೆಗೆ ಭಾರತದ ಎಲ್ಲಾ ಹುಂಡೈ ಸೇವಾ ಕೇಂದ್ರಗಳಲ್ಲಿ ನಡೆಯಲಿದೆ. ಈ ಅಭಿಯಾನವು ಆವರ್ತಕ ನಿರ್ವಹಣೆಯ ಸಮಯದಲ್ಲಿ (Periodic Maintenance Services) ಯಾಂತ್ರಿಕ ಭಾಗಗಳು ಮತ್ತು ಲೇಬರ್ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡುವ ಮೂಲಕ, ಹುಂಡೈ ಗ್ರಾಹಕರು ತಮ್ಮ ವಾಹನಗಳನ್ನು ಉತ್ತಮ ಸ್ಥಿತಿಯಲ್ಲಿ ನಿರ್ವಹಿಸಲು ಪ್ರೋತ್ಸಾಹಿಸುತ್ತಿದೆ ಎಂದು ಕಂಪನಿ ತಿಳಿಸಿದೆ.

ಭಾರತೀಯ ಹೆಲ್ಮೆಟ್ ಬ್ರಾಂಡ್‌ಗೆ ಫುಲ್ ಡಿಮ್ಯಾಂಡ್: ಮುಗಿಬಿದ್ದು ಖರೀದಿ

ಭಾರತದ ಅತಿದೊಡ್ಡ ಹೆಲ್ಮೆಟ್ ತಯಾರಕ ಕಂಪನಿಯಾದ ಸ್ಟೀಲ್‌ಬರ್ಡ್ ಹೈ-ಟೆಕ್ ಇಂಡಿಯಾ ಲಿಮಿಟೆಡ್, 2024-25ರ ಆರ್ಥಿಕ ವರ್ಷದಲ್ಲಿ ಮತ್ತೊಂದು ಬಲವಾದ ಸಾಧನೆಯನ್ನು ಸಾಧಿಸಿದೆ. ಕಂಪನಿಯ ಹೆಲ್ಮೆಟ್‌ಗಳಿಗೆ ದೇಶಾದ್ಯಂತ ಭಾರೀ ಬೇಡಿಕೆ ವ್ಯಕ್ತವಾಗಿದ್ದು, ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗಿವೆ. ಸ್ಥಿರವಾದ ನಾವೀನ್ಯತೆ, ಆಳವಾದ ಉತ್ಪಾದನಾ ಏಕೀಕರಣ ಮತ್ತು ರಾಷ್ಟ್ರವ್ಯಾಪಿ ವ್ಯಾಪಾರದ ಬೆಂಬಲದೊಂದಿಗೆ, ಸ್ಟೀಲ್‌ಬರ್ಡ್ ಹೆಲ್ಮೆಟ್ ಮತ್ತು ರೈಡರ್ ಗೇರ್ ವಿಭಾಗದಲ್ಲಿ ತನ್ನ ನಾಯಕತ್ವವನ್ನು ಗಟ್ಟಿಗೊಳಿಸುವುದನ್ನು ಮುಂದುವರೆಸಿದೆ. ಆದಾಯದಲ್ಲಿ ಶೇಕಡಾ 10.07% ಹೆಚ್ಚಳದೊಂದಿಗೆ, ಕಂಪನಿಯು 787 ಕೋಟಿ ರೂ.ಗಳನ್ನು ಗಳಿಸಿದೆ.

ಸ್ಪ್ಲೆಂಡರ್, ಶೈನ್ & ಹೆಚ್ಎಫ್ ಡಿಲಕ್ಸ್ ಬೈಕ್ ಖರೀದಿಗೆ..

ಭಾರತವು ವಿಶ್ವದಲ್ಲೇ ಅತಿದೊಡ್ಡ ದ್ವಿಚಕ್ರ ವಾಹನ (Two Wheeler) ಮಾರುಕಟ್ಟೆಯನ್ನು ಹೊಂದಿದೆ. ಇದೇ ಮಾರ್ಚ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಬೈಕ್‌ಗಳು ಮಾರಾಟಗೊಂಡಿವೆ. ಅದರಲ್ಲೂ ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus), ಹೋಂಡಾ ಶೈನ್ 125 (Honda Shine 125) ಹಾಗೂ ಹೀರೋ ಹೆಚ್ಎಫ್ ಡಿಲಕ್ಸ್ (Hero HF Deluxe) ಮೋಟಾರ್‌ಸೈಕಲ್‌ಗಳನ್ನು ಗ್ರಾಹಕರು ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

Hyundai: ಭಾರತದಲ್ಲಿ ಹ್ಯುಂಡೈ ನೆಕ್ಸೊ ಹೈಡ್ರೋಜನ್ ಕಾರು

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL), ಭಾರತದಲ್ಲಿ ಹೈಡ್ರೋಜನ್ ಇಂಧನ ಕೋಶ (Hydrogen fuel cell) ವಾಹನಗಳ ಸಾಮೂಹಿಕ ಬಳಕೆಯ ಕಾರ್ಯಸಾಧ್ಯತೆಯನ್ನು ಅನ್ವೇಷಿಸಲು ಭಾರತದ ಅತಿದೊಡ್ಡ ಇಂಧನ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ (Indian Oil Corporation Limited) ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ. ಒಪ್ಪಂದದ ಭಾಗವಾಗಿ, ಭಾರತೀಯ ರಸ್ತೆಗಳಲ್ಲಿ ನೈಜ - ಪ್ರಪಂಚದ ಪರೀಕ್ಷೆಗಳನ್ನು ನಡೆಸಲು ಹ್ಯುಂಡೈ ಒಂದು NEXO ಎಂಬ ಹೈಡ್ರೋಜನ್ FCEV ಕಾರನ್ನು ಇಂಡಿಯನ್ ಆಯಿಲ್‌ಗೆ ಹಸ್ತಾಂತರಿಸಿದೆ.
Advertisement

ಭಾರತದಲ್ಲಿ ಹೊಸ ಬೈಕ್ ಬಿಡುಗಡೆ: ಇದರ ಬೆಲೆಗೆ ಹೊಸ ಕಾರು ಬರಲಿದೆ

ವಿಶ್ವದ ಪವರ್‌ಫುಲ್‌ ಮೋಟಾರ್‌ಸೈಕಲ್ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಕವಾಸಕಿ, ಭಾರತದಲ್ಲಿಯೂ ತನ್ನ ಪ್ರಮುಖ ಮಾಡಲ್‌ಗಳನ್ನು ಮಾರಾಟ ಮಾಡುತ್ತಿದೆ. ಅವುಗಳಲ್ಲಿ ಕವಾಸಕಿ ನಿಂಜಾ 500 ಕೂಡ ಒಂದು, ಇದು ಮೋಟಾರ್‌ಸೈಕಲ್ ಉತ್ಸಾಹಿಗಳ ಫೇವರೆಟ್ ಬೈಕ್ ಆಗಿದೆ. ಇದರ ಪವರ್‌ಫುಲ್ ಎಂಜಿನ್ ಹಾಗೂ ಇದರ ರೈಡಿಂಗ್ ಡೈನಾಮಿಕ್ಸ್ ಸೇರಿದಂತೆ ಸ್ಪೋರ್ಟಿ ಡಿಸೈನ್ ಬೈಕ್‌ನ್ನು ದುಬಾರಿಯಾಗಿಸಿವೆ. ಇದೀಗ ಭಾರತದ ಇತ್ತೀಚಿನ ಮತ್ತು ಹೆಚ್ಚು ಕಠಿಣವಾದ ಬಿಎಸ್ 6 ಪಿ 2 ಒಬಿಡಿ 2 ಬಿ ಎಮಿಷನ್ ಮಾನದಂಡಗಳನ್ನು ಪೂರೈಸಲು ಕವಾಸಕಿ ನಿಂಜಾ 500 ಅನ್ನು ನವೀಕರಿಸಿ ಬಿಡುಗಡೆ ಮಾಡಿದೆ.

27 ಕಿ.ಮೀ ಮೈಲೇಜ್.. 7-ಸೀಟರ್, 5 ಲಕ್ಷ.. Maruti Eeco ಖರೀದಿಸಲು..

ಮಾರುತಿ ಸುಜುಕಿ ಇಕೋ (Maruti Suzuki Eeco) ಜನಪ್ರಿಯ ವ್ಯಾನ್ ಆಗಿದ್ದು, ಮಧ್ಯಮ ವರ್ಗದ ಜನರಿಗೆ ಹೇಳಿ ಮಾಡಿಸಿದ ರೀತಿಯಲ್ಲಿದೆ. ಬೆಲೆಗೆ ತಕ್ಕಂತೆ ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಆದರೂ ವ್ಯಾನ್‌ನ ಮಾರಾಟ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಅದಕ್ಕೆ ಈ ಮಾರ್ಚ್ ತಿಂಗಳು ಸಹ ಹೊರತಾಗಿಲ್ಲ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಬಡವನು ಕೊಳ್ಳಬಹುದು, ಆದರೂ 'Honda QC1' ಬದಲಿಗೆ ಈ 3 ಪೆಟ್ರೋಲ್..

ಹೋಂಡಾ ಕ್ಯೂಸಿ1 (Honda QC1) ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದು ರೂ.90,000 (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. 1.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 80 ಕಿ.ಮೀ ಕ್ರಮಿಸುತ್ತದೆ. ಎಲ್‌ಸಿಡಿ ಡಿಸ್‌ಪ್ಲೇ, ಅನಲಾಗ್ ಕೀ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ 50 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ನೀವು ಇದೇ ಹೋಂಡಾ ಕ್ಯೂಸಿ1 ಬೆಲೆಗೆ ಪರ್ಯಾಯವಾಗಿ ಈ ಮೂರು ಪೆಟ್ರೋಲ್ ಚಾಲಿತ ಸ್ಕೂಟರ್‌ಗಳನ್ನು ಬೇಕಾದರೂ ಕೊಂಡುಕೊಳ್ಳಬಹುದು. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

Royal Enfield: ರಾಯಲ್ ಎನ್‌ಫೀಲ್ಡ್‌ನ ಅತ್ಯಂತ ಅಗ್ಗದ ಬೈಕ್ ಬಿಡುಗಡೆ

ರಾಯಲ್ ಎನ್‌ಫೀಲ್ಡ್ ಹಂಟರ್ (Royal Enfield Hunter) ಬೈಕ್ ಸದ್ಯ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ 350 ಸಿಸಿ ಬೈಕ್ ಆಗಿದೆ. ಇದು ಕ್ಲಾಸಿಕ್ 350 ನಷ್ಟೇ ಜನಪ್ರಿಯತೆ ಪಡೆದುಕೊಂಡಿದ್ದು, ರೆಟ್ರೋ ಸ್ಟೈಲಿಷ್ ಲುಕ್‌ನಲ್ಲಿ ಸಿಗುವ ರಾಯಲ್ ಎನ್‌ಫೀಲ್ಡ್ ಅಗ್ಗದ ಬೈಕ್ ಆಗಿದೆ. ಪ್ರಸ್ತುತ ತನ್ನ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗಿದ್ದು, ಪ್ರತಿಸ್ಪರ್ಧಿ ಬೈಕ್‌ಗಳು ಹೊಸ ಅಪ್‌ಡೇಟ್‌ಗಳೊಂದಿಗೆ ಧೂಳೆಬ್ಬಿಸುತ್ತಿರುವ ಕಾರಣ ಈಗ ರಾಯಲ್ ಎನ್‌ಫೀಲ್ಡ್ ಹಂಟರ್ ಕೂಡ ಹೊಸ ಅಪ್‌ಡೇಟ್‌ಗಳನ್ನು ಪಡೆದುಕೊಂಡು ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಯಾವೆಲ್ಲಾ ಅಪ್‌ಡೇಟ್‌ಗಳನ್ನು ಪಡೆಯಲಿದೆ? ಬೆಲೆ ಎಷ್ಟಿರಬಹುದು ಎಂಬುದನ್ನು ತಿಳಿಯೋಣ.

ಹಳ್ಳಿಗಾಡಿನ ರೈತರ ಮಕ್ಕಳ ನೆಚ್ಚಿನ ಬೈಕ್‌ಗಳಿವು..

ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ಹಳ್ಳಿಗಳ ಸಂಖ್ಯೆ ಹೆಚ್ಚಿದೆ. ಹೊಲಕ್ಕೆ ಹೋಗಲು.. ಡೈರಿಗೆ ಹಾಲು ಹಾಕಲು ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳಿಗೆ ದ್ವಿಚಕ್ರ ವಾಹನಗಳು ತೀರಾ ಅನಿವಾರ್ಯವಾಗಿವೆ. ಅದರಲ್ಲೂ ಬೈಕ್‌ಗಳು ಬೇಕೇ ಬೇಕು. ಪ್ರಮುಖವಾಗಿ ಗ್ರಾಮೀಣ ಭಾಗದ ಜನರು ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಹೋಂಡಾ ಸಿಡಿ 110 ಡ್ರೀಮ್, ಬಜಾಜ್ ಸಿಟಿ 110ಎಕ್ಸ್, ಹೀರೋ ಸ್ಪ್ಲೆಂಡರ್ ಪ್ಲಸ್, ಹೀರೋ ಹೆಚ್ಎಫ್ ಡಿಲಕ್ಸ್ & ಬಜಾಜ್ ಪ್ಲಾಟಿನಾ 100 ಮೋಟಾರ್‌ಸೈಕಲ್‌ಗಳನ್ನು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಬನ್ನಿ, ಈ ಬೈಕ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

TATA: 5-ಸೀಟರ್, ಬಹುನಿರೀಕ್ಷಿತ 'ಟಾಟಾ ಸಿಯೆರಾ' ಎಸ್‌ಯುವಿ ಕುರಿತ..

ಟಾಟಾ ಸಿಯೆರಾ (Tata Sierra) ಎಂಬ ಹೆಸರು ದಶಕಗಳ ಹಿಂದೆ, ಹೆಚ್ಚು ಜನಜನಿತವಾಗಿತ್ತು. ಇದೊಂದು ಪ್ರಖ್ಯಾತ ಎಸ್‌ಯುವಿಯಾಗಿದ್ದು, 1991 ರಿಂದ 2003ರವರೆಗೆ ಭಾರೀ ಸಂಖ್ಯೆಯಲ್ಲಿ ಮಾರಾಟವಾಗಿತ್ತು. ಆದರೆ, ವಿವಿಧ ಮಾರುಕಟ್ಟೆ ಕಾರಣಗಳಿಗೆ ಸಿಯೆರಾ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ ಇದೇ ಕಾರನ್ನು ಹೊಸ ಅವತಾರದಲ್ಲಿ ಬಿಡುಗಡೆಗೊಳಿಸಲು ಕಂಪನಿ ಕೂಡ ಶರವೇಗದಲ್ಲಿ ಸಿದ್ದತೆಯನ್ನು ನಡೆಸುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಉತ್ಪಾದನೆಗೆ ಬಹುತೇಕ ಸಿದ್ಧಗೊಂಡಿರುವ 'ಸಿಯೆರಾ' ಎಸ್‌ಯುವಿಯನ್ನು ಪ್ರದರ್ಶನ ಮಾಡಲಾಗಿತ್ತು.

Tvs sport: ಹೊಸ ಟಿವಿಎಸ್ ಸ್ಪೋರ್ಟ್ ಬಿಡುಗಡೆಗೆ ಸಜ್ಜು!

ಟಿವಿಎಸ್ ಮೋಟಾರ್ ಭಾರತ ಮಾತ್ರವಲ್ಲ ವಿಶ್ವದ ಹಲವು ದೇಶಗಳಲ್ಲಿ ತನ್ನ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡುತ್ತಿದೆ. ಭಾರತದಲ್ಲೂ ಭಾರೀ ಬೇಡಿಕೆ ಪಡೆದುಕೊಂಡಿರುವ ತನ್ನ ದ್ವಿಚಕ್ರ ವಾಹನಗಳಲ್ಲಿ ಟಿವಿಎಸ್ ಸ್ಪೋರ್ಟ್ ಕೂಡ ಒಂದು. ಇತ್ತೀಚೆಗೆ ಕಮ್ಯೂಟರ್ ಮೋಟಾರ್‌ಸೈಕಲ್ ಸೆಗ್ಮೆಂಟಿನಲ್ಲಿ ಪೈಪೋಟಿ ಹೆಚ್ಚಾಗಿರುವ ಕಾರಣ ಟಿವಿಎಸ್ ತನ್ನ ಸ್ಪೋರ್ಟ್ ಮೋಟಾರ್‌ಸೈಕಲ್ ಅನ್ನು ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ಇತ್ತೀಚೆಗಷ್ಟೆ ಬೈಕ್ ಕುರಿತ ಹೊಸ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ಹೊಸ ಬಣ್ಣ ಆಯ್ಕೆಗಳನ್ನು ಪರಿಚಯಿಸುತ್ತಿರುವುದನ್ನು ಬಹಿರಂಗಪಡಿಸಿದೆ.

ಮಗನ ಕೈ ಕಚ್ಚಿ ಹಲ್ಲೆಗೈದ ವಿಂಗ್ ಕಮಾಂಡರ್ ವಿರುದ್ಧ ಬೈಕ್ ಸವಾರನ ತಾಯಿ ಪ್ರತಿಕ್ರಿಯೆ..


Advertisement

ಇವು ಬಿಸಿ ಜಿಲೇಬಿಯಂತೆ ಮಾರಾಟವಾಗುವ ಕಾರುಗಳು.. ಆದರೂ 6..

ನೂತನ ಕಾರನ್ನು ತೆಗೆದುಕೊಳ್ಳುವ ಗ್ರಾಹಕರಿಗೆ ಸುರಕ್ಷತೆ ಎಂಬುದು ಮೊಟ್ಟ ಮೊದಲ ಆದ್ಯತೆಯಾಗಿರುತ್ತದೆ. ಅದಕ್ಕಾಗಿ ಹೊಸ ಕಾರಿನಲ್ಲಿ ಗರಿಷ್ಠ ಸಂಖ್ಯೆಯ ಏರ್‌ಬ್ಯಾಗ್‌ಗಳು ಇರಬೇಕೆಂದು ಬಯಸುತ್ತಾರೆ. ದೇಶೀಯ ಮಾರುಕಟ್ಟೆಯಲ್ಲಿಯೂ ಖರೀದಿಗೆ ದೊರೆಯುತ್ತಿರುವ ಬಹುತೇಕ ಎಲ್ಲ ಕಾರುಗಳು 6 ಏರ್‌ಬ್ಯಾಗ್‌ ಆಯ್ಕೆಯನ್ನು ಹೊಂದಿವೆ. ಆದರೆ, ಈಗಲೂ ಕೆಲವೊಂದು ಜನಪ್ರಿಯ ಕಾರುಗಳನ್ನು 2 ಅಥವಾ 4 ಏರ್‌ಬ್ಯಾಗ್‌ ಆಯ್ಕೆಯಲ್ಲಿ ಮಾತ್ರ ಮಾರಾಟಗೊಳಿಸಲಾಗುತ್ತಿದೆ. ನಾವಿಲ್ಲಿ ಅಂತಹ ಒಂದಷ್ಟು ಕಾರುಗಳನ್ನು ಪಟ್ಟಿ ಮಾಡಿದ್ದೇವೆ.

BYD: ಚೀನಾ ಕಾರಿಗೆ ಫುಲ್ ಡಿಮ್ಯಾಂಡ್: 5-ಸ್ಟಾರ್ ರೇಟಿಂಗ್

ಭಾರತದಲ್ಲಿ ಚೀನಾ ಮೂಲದ ಪ್ರಮುಖ ಕಂಪನಿಯೊಂದು ಭಾರೀ ಸದ್ದು ಮಾಡುತ್ತಿದೆ. ಹೌದು, ಕೇವಲ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ತಯಾರಿಸಿ ಮಾರಾಟ ಮಾಡುವ ಚೀನಾದ ಪ್ರಮುಖ ಕಾರು ತಯಾರಕ ಕಂಪನಿ 'ಬಿವೈಡಿ' (BYD) ಪ್ರಸ್ತುತ ಜಾಗತಿಕವಾಗಿ ಸುದ್ದಿಯಲ್ಲಿದೆ. ಚೀನಾ ವಸ್ತುಗಳು ಎಂದಾಕ್ಷಣ ಡಮ್ಮಿ ಎಂದುಕೊಳ್ಳುವ ಭಾರತೀಯರಿಗೆ ಅದು ತಪ್ಪು ಕಲ್ಪನೆ ಎಂದು ನಿರೂಪಿಸಿದೆ. ಬಿವೈಡಿ ಕಂಪನಿಯು ತನ್ನ ಸೀಲಿಯನ್-7 ಕಾರನ್ನು ಭಾರತ್ ಮೊಬಿಲಿಟಿ ಎಕ್ಸ್ ಪೋ 2025 ರಲ್ಲಿ ಪ್ರದರ್ಶಿಸಿತ್ತು, ನಂತರ ಇದೇ ವರ್ಷದ ಫೆಬ್ರವರಿಯಲ್ಲಿ ಭಾರತದಲ್ಲಿ ಈ ಕಾರನ್ನು 48.90 ಲಕ್ಷ ರೂ.ಗಳ (ಎಕ್ಸ್ ಶೋರೂಂ) ಬೆಲೆಯಲ್ಲಿ ಬಿಡುಗಡೆ ಮಾಡಿತು.

ಟೊಯೋಟಾಗೆ ಮಾರುತಿ ಸುಜುಕಿ ಸಾಥ್

ಭಾರತದಲ್ಲಿ ಮಾರುತಿ ಸುಜುಕಿ ಹಾಗೂ ಟೊಯೋಟಾ ಕಂಪನಿಗಳ ಸಹಭಾಗಿತ್ವದಲ್ಲಿ ಕಾರುಗಳು ನಿರ್ಮಾಣವಾಗುವುದು ಎಲ್ಲರಿಗೂ ತಿಳಿದಿದೆ. ಮಾರುತಿ ಕಂಪನಿ ಬಲೆನೊ ಕಾರನ್ನು ಹೊಂದಿದ್ದರೆ, ಟೊಯೋಟಾ ಇದೇ ಕಾರಿನ ರೀಬ್ಯಾಡ್ಜ್ ಆವೃತ್ತಿಯಾಗಿ ಗ್ಲಾಂಝಾವನ್ನು ಹೊಂದಿದೆ. ಹೀಗೆ ಹಲವು ಕಾರುಗಳನ್ನು ಎರಡೂ ಬ್ರಾಂಡ್‌ಗಳು ರೀಬ್ಯಾಡ್ಜ್ ಆವೃತ್ತಿಗಳಲ್ಲಿ ಮಾರಾಟ ಮಾಡುತ್ತಿವೆ. ಇದೀಗ ಈ ಮಾರುತಿ-ಟೊಯೋಟಾ ಬ್ರಾಂಡ್‌ಗಳ ರೀಬ್ಯಾಡ್ಜ್ ಆವೃತ್ತಿಗಳು ಬರೋಬ್ಬರಿ 4 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿವೆ. ಮಾರುತಿ ಸುಜುಕಿ ಬಲೆನೊ, ಫ್ರಾಂಕ್ಸ್ ಕಾರುಗಳ ರಿಬ್ಯಾಡ್ಜ್ ಟೊಯೊಟಾ ಕಾರುಗಳು 2025ರ ಆರ್ಥಿಕ ವರ್ಷದಲ್ಲಿ 4 ಲಕ್ಷಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿವೆ.

2025ರ ಹೀರೋ ಸ್ಪ್ಲೆಂಡರ್ ಪ್ಲಸ್.. ಅದೇ ಬೆಲೆಗೆ ಸಿಗುವ ಇತರೆ ಟೂ..

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಈಚೆಗೆ 2025ರ ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ಬೈಕ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಇದು ಒಂದಷ್ಟು ನವೀಕರಣಗಳಿಗೂ ಸಾಕ್ಷಿಯಾಗಿತ್ತು. ಈ ನೂತನ ಮೋಟಾರ್‌ಸೈಕಲ್ ಕನಿಷ್ಠ ರೂ.79,096 ಹಾಗೂ ಗರಿಷ್ಠ ರೂ.85,001 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 97.2 ಸಿಸಿ ಒಬಿಡಿ 2ಬಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 70 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ದೇಶೀಯ ಗ್ರಾಹಕರು ಇದೇ 'ಸ್ಪ್ಲೆಂಡರ್ ಪ್ಲಸ್' ಬೆಲೆಗೆ ಸಿಗುವ ಇತರೆ ಟೂ ವೀಲರ್‌ಗಳನ್ನು ಕೂಡ ತಮ್ಮ ದಿನನಿತ್ಯದ ಬಳಕೆಗಾಗಿ ಕೊಂಡುಕೊಳ್ಳಬಹುದು.

Affordable scooters: ಕಡಿಮೆ ಬೆಲೆಯ ಸ್ಕೂಟರ್ ಹುಡುಕುತ್ತಿದ್ದೀರಾ?

Affordable scooters: ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೊಸ ಸ್ಕೂಟರ್‌ಗಳ ಪರಿಚಯದೊಂದಿಗೆ, ಸ್ಕೂಟರ್ ವಿಭಾಗವು ಈಗ ಹಲವು ಆಯ್ಕೆಗಳಿಂದ ಕೂಡಿದೆ. ನಿಮ್ಮ ಬಜೆಟ್ ಕೇವಲ 1,00,000 ರೂ.ಗಿಂತ (ಎಕ್ಸ್ ಶೋರೂಂ) ಕಡಿಮೆ ಇದ್ದರೂ ಚಿಂತೆಯಿಲ್ಲ ಒಂದು ಸ್ಕೂಟರ್ ಖರೀದಿಸಬಹುದು. ವರ್ಧಿತ ವೈಶಿಷ್ಟ್ಯಗಳೊಂದಿಗೆ ಹೊಸ ಸ್ಕೂಟರ್‌ಗಳ ಲಭ್ಯತೆಯಿಂದಾಗಿ ಸ್ಕೂಟರ್ ವಿಭಾಗವು ಬೆಳವಣಿಗೆಯನ್ನು ಮುನ್ನಡೆಸಿದೆ. ನೀವು ಕೂಡ ಬಜೆಟ್ ಸ್ಕೂಟರ್ ಹುಡುಕುತ್ತಿದ್ದರೆ ನೀವು ಪರಿಗಣಿಸಬಹುದಾದ ಐದು ಅತ್ಯುತ್ತಮ ಸ್ಕೂಟರ್‌ಗಳು ಇಲ್ಲಿವೆ. ಬನ್ನಿ ಎಲ್ಲವನ್ನು ಪರಿಶೀಲಿಸೋಣ.

Brezza: ಮಾರುತಿ ಸುಜುಕಿ ಬ್ರೆಝಾಗೆ ಸವಾಲೆಸೆಯಬಲ್ಲ 3 ಪರ್ಯಾಯ..

ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ರೂ.8.69 ಲಕ್ಷದಿಂದ ರೂ.14.14 ಲಕ್ಷ (ಎಕ್ಸ್-ಶೋರೂಂ) ದರದಲ್ಲಿ ಖರೀದಿಗೆ ದೊರೆಯುತ್ತದೆ. 1.5-ಲೀ. ಪೆಟ್ರೋಲ್ & ಸಿಎನ್‌ಜಿ ಎಂಜಿನ್ ಹೊಂದಿದ್ದು, 17.38 ರಿಂದ 25.51 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸನ್‌ರೂಫ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಇದರಲ್ಲಿ 5 ಮಂದಿ ಓಡಾಟ ನಡೆಸಬಹುದು. ವಿಶೇಷವಾಗಿ ಬ್ರೆಝಾಗೆ ಪರ್ಯಾಯವಾಗಿ ಗ್ರಾಹಕರು ಈ 3 ಕಾರುಗಳನ್ನು ತೆಗೆದುಕೊಳ್ಳಬಹುದು. ಬನ್ನಿ, ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಯೋಣ.

RCB ಸ್ಟಾರ್ ಪ್ಲೇಯರ್ ಮನೆಗೆ ಬಂತು ಐರಾವತದಂತಹ ಹೊಸ ಕಾರು..

ಯುವ ಕ್ರಿಕೆಟಿಗ ದೇವದತ್ ಪಡಿಕ್ಕಲ್ (Devdutt Padikkal) ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 24ರ ಹರೆಯದ ಪಡಿಕ್ಕಲ್ ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಾರೆ. ಹಾಗೆಯೇ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಬ್ಯಾಟ್ ಬಿಸುತ್ತಾರೆ. 2021ರ ಜುಲೈನಲ್ಲಿ ಶ್ರೀಲಂಕಾ ವಿರುದ್ಧದ ಟಿ 20ಐ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೂ ಪಾದಾರ್ಪಣೆ ಮಾಡಿದರು. ಆ ಬಳಿಕ, ಟೀಮ್ ಇಂಡಿಯಾ ಪರ ಹಲವು ಪಂದ್ಯಗಳನ್ನು ಆಡಿದ್ದಾರೆ.

ಹೋಂಡಾ ಡಿಯೋ 125 VS ಟಿವಿಎಸ್ N-ಟಾರ್ಕ್: ಬೆಸ್ಟ್ ಸ್ಪೋರ್ಟಿ ಸ್ಕೂಟರ್

ದೇಶದಲ್ಲಿ ಸ್ಕೂಟರ್‌ಗಳು ತುಂಬಾ ಬೇಡಿಕೆಯನ್ನು ಹೊಂದಿವೆ, ಇದರಲ್ಲಿ ತಮಗೆಂದೆ ಪ್ರತ್ಯೇಕ ವಿಭಾಗವನ್ನು ಹೊಂದಿರುವ ಸ್ಟೈಲಿಷ್ ಸ್ಕೂಟರ್‌ಗಳು ಯುವ ಸವಾರರಿಗೆ ಉತ್ಸಾಹಭರಿತ ಪ್ರಯಾಣವನ್ನು ನೀಡುತ್ತವೆ. ಅಂತಹ ಸ್ಕೂಟರ್‌ಗಳ ಸಾಲಿನಲ್ಲಿ ಮೊದಲ ಎರಡು ಸ್ಕೂಟರ್‌ಗಳು ಎಂದರೆ ಹೋಂಡಾ ಡಿಯೋ 125 ಸ್ಕೂಟರ್ ಹಾಗೂ ಟಿವಿಎಸ್ ಎನ್ ಟಾರ್ಕ್ ಆಗಿವೆ. ಇವೆರಡು ಸ್ಪೋರ್ಟಿ ಸ್ಕೂಟರ್ ಮಾರುಕಟ್ಟೆಯಲ್ಲಿ ತುಂಬಾ ಜನಪ್ರಿಯತೆ ಪಡೆದುಕೊಂಡಿವೆ. ಎರಡೂ ಸ್ಕೂಟರ್‌ಗಳು ಪರ್ಫಾಮೆನ್ಸ್ ಹಾಗೂ ಆಧುನಿಕ ಡಿಸೈನ್ ಬಯಸುವವರಿಗಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ ಈ ಎರಡೂ ಸ್ಕೂಟರ್‌ಗಳಲ್ಲಿ ಬೆಸ್ಟ್ ಯಾವುದು? ಹೋಲಿಕೆ ಇಲ್ಲಿದೆ.
Advertisement

ಇತ್ತೀಚೆಗೆ ಬಿಡುಗಡೆಯಾದ 2025 ಹೀರೋ ಸೂಪರ್ ಸ್ಪ್ಲೆಂಡರ್ XTEC ವಿಶೇಷತೆ

ದೇಶದಲ್ಲಿ ದ್ವಿಚಕ್ರ ವಾಹನಗಳ ಪ್ರಮುಖ ತಯಾರಕರಾದ ಹೋಂಡಾ' ತಮ್ಮ ಪ್ರಮುಖ ಬ್ರಹ್ಮಾಸ್ತ್ರವಾದ 2025ರ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್‌ ಬೈಕ್‌ನ್ನು(2025 Hero Super Splendor XTEC) ಹೆಚ್ಚಿನ ಮೈಲೇಜ್, ಆಧುನಿಕ ಫೀಚರ್ಸ್, ಆಕರ್ಷಕ ಡಿಸೈನ್‌ನೊಂದಿಗೆ ಅಪ್‌ಡೇಟ್ ಮಾಡಿ ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದು ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಸದ್ಯ ಪೈಪೋಟಿ ಹೆಚ್ಚಿಸಿದ್ದು, ಮೈಲೇಜ್ ಬೈಕ್‌ಗಳ ನಡುವೆ ಸ್ಪರ್ದೆ ಹೆಚ್ಚಾಗಿದೆ. ಈ ಮಟ್ಟದ ಪೈಪೋಟಿ ಹೆಚ್ಚಾಗಲು ಇತ್ತೀಚೆಗೆ ಬಿಡುಗಡೆಯಾಗಿರುವ 2025ರ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್‌ ತನ್ನ ಹಳೆಯ ಮಾಡಲ್‌ಗಿಂತ ಯಾವೆಲ್ಲಾ ಅಪ್‌ಡೇಟ್‌ಗಳನ್ನು ಪಡೆದಿದೆ ತಿಳಿಯೋಣ.

Kawasaki: ಹೊಸ ಕವಾಸಕಿ ನಿಂಜಾ 650 ಕೆಆರ್‌ಟಿ ಎಡಿಷನ್ ಬೈಕ್ ಬಿಡುಗಡೆ

ಕವಾಸಕಿ ಇಂಡಿಯಾ (Kawasaki India) ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಜಡ್900, ನಿಂಜಾ ಜಡ್-10ಆರ್, ನಿಂಜಾ 300, ನಿಂಜಾ 500 ಮತ್ತು ಡಬ್ಲ್ಯೂ175 ಸೇರಿದಂತೆ ವಿವಿಧ ಬೈಕ್‌ಗಳನ್ನು ಮಾರಾಟಗೊಳಿಸುತ್ತಿದೆ. ಸದ್ಯ ಕಂಪನಿಯು 2025ರ ನವೀಕರಿಸಿದ 'ನಿಂಜಾ 650 ಕೆಆರ್‌ಟಿ ಎಡಿಷನ್'ನ್ನು ಬಿಡುಗಡೆಗೊಳಿಸಿದೆ. ಇದು ಒಂದಷ್ಟು ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Tata: ಬಹುಬೇಡಿಕೆಯ ಅಗ್ಗದ ಟಾಟಾ ಕಾರು: ಕೇವಲ 5 ಲಕ್ಷ ಬೆಲೆ

ಭಾರತದಲ್ಲಿ ಗುಣಮಟ್ಟದ ಕಾರುಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚಾಗಿದ್ದು, ಸುರಕ್ಷತೆ ವಿಚಾರದಲ್ಲಿ ಗ್ರಾಹಕರು ತುಂಬಾ ಪರಿಶೀಲಿಸುತ್ತಿದ್ದಾರೆ. ಅಗ್ಗದ ಬೆಲೆಗೆ ಸುರಕ್ಷಿತ ಕಾರುಗಳು ಸಿಕ್ಕರೆ ಮುಗಿಬಿದ್ದು ಖರೀದಿಸುತ್ತಾರೆ. ಅಂತಹ ಒಂದು ಕಾರೆಂದರೆ 'ಟಾಟಾ ಟಿಯಾಗೋ'. ಟಾಟಾ ಟಿಯಾಗೊ ಸದ್ಯ 2025 ರಲ್ಲಿ ಅತ್ಯಂತ ಕೈಗೆಟುಕುವ ಕಾರಾಗಿದ್ದು, ಉತ್ತಮ ಮಾರಾಟ ಕಾಣುತ್ತಿದೆ. ಈ ಕಾರು ಬಿಡುಗಡೆಯಾಗಿ ಈಗ ಸುಮಾರು ಹತ್ತು ವರ್ಷ ಕಳೆದಿದ್ದರೂ, ಟಾಟಾ ಮೋಟಾರ್ಸ್ ನಿರಂತರ ವಿನ್ಯಾಸ ಬದಲಾವಣೆಗಳು ಮತ್ತು ವೈಶಿಷ್ಟ್ಯ ಸೇರ್ಪಡೆಗಳೊಂದಿಗೆ ಕಾರನ್ನು ಹೊಸದಾಗಿರಿಸಿದೆ.

Citroen: 19.5 Km ಮೈಲೇಜ್.. 5-ಸೀಟರ್, 8 ಲಕ್ಷ..

ಸಿಟ್ರನ್ ಬಸಾಲ್ಟ್ (Citroen Basalt) ಜನಪ್ರಿಯ ಕೂಪೆ ಎಸ್‌ಯುವಿಯಾಗಿದ್ದು, ಟಾಟಾ ಕರ್ವ್ (TATA Curvv) ಕಾರಿಗೆ ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿತ್ತು... ಇದೇ ಮಾರ್ಚ್ ತಿಂಗಳಲ್ಲಿ ಮಾರಾಟ ಪ್ರಮಾಣ ಧಿಡೀರನೇ ಏರಿಕೆಯಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

Trending SUVs: ಟಾಪ್-5 ಟ್ರೆಂಡಿಂಗ್ ಎಸ್‌ಯುವಿಗಳು

Trending SUVs: ಭಾರತದಲ್ಲಿ ಎಸ್‌ಯುವಿಗಳು ಭಾರೀ ಜನಪ್ರಿಯತೆಯನ್ನು ಗಳಿಸುತ್ತಿವೆ. ಬಹತೇಕ ಎಲ್ಲಾ ವಾಹನ ತಯಾರಕರು ಈಗ ತಮ್ಮ ಶ್ರೇಣಿಯಲ್ಲಿ ಅನೇಕ ಎಸ್‌ಯುವಿಗಳನ್ನು ಹೊಂದಿದ್ದಾರೆ. ಮಾರುತಿ ಸುಜುಕಿಯ ಗ್ರ್ಯಾಂಡ್ ವಿಟಾರಾದಿಂದ ಹಿಡಿದು ಮಹೀಂದ್ರಾ ಥಾರ್‌ ವರೆಗೆ ಐದು ಎಸ್‌ಯುವಿಗಳು ಸದ್ಯ ಭಾರತದಲ್ಲಿ ಟ್ರೆಂಡಿಂಗ್‌ನಲ್ಲಿವೆ. ಈ ಎಸ್‌ಯುವಿಗಳು ಭಾರತೀಯ ಮಾರುಕಟ್ಟೆಯನ್ನು ಆಕರ್ಷಿಸಿವೆ. ಕಳೆದ ತಿಂಗಳು ಭಾರತದಲ್ಲಿ ಗ್ರಾಹಕರನ್ನು ಹೆಚ್ಚು ಆಕರ್ಷಿಸಿರುವ ಟಾಪ್ 5 ಅತ್ಯಂತ ಜನಪ್ರಿಯ ಎಸ್‌ಯುವಿಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಹಾಗೆಯೇ ಅವುಗಳ ವಿಶೇಷತೆಗಳನ್ನು ವಿವರಿಸಿದ್ದೇವೆ.