ಅಣ್ತಮ್ಮಾಸ್.. 25 ಕಿ.ಮೀ ಮೈಲೇಜ್, 8 ಲಕ್ಷದ 'ಮಾರುತಿ ಬ್ರೆಝಾ'..

ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಪ್ರಖ್ಯಾತ ಎಸ್‌ಯುವಿಯಾಗಿದೆ. ಈ ಕಾರನ್ನು ಕಂಪನಿಯು ಅರೆನಾ ಡೀಲರ್‌ಶಿಪ್ ಮೂಲಕ ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇದು ಗ್ರಾಹಕರ ನೆಚ್ಚಿನ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದೇ ಮಾರ್ಚ್ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ ಕಾರುಗಳ ಪಟ್ಟಿಯಲ್ಲಿ ಈ ಮಾರುತಿ ಬ್ರೆಝಾ ಎಸ್‌ಯುವಿ ಆರನೇ ಸ್ಥಾನದಲ್ಲಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

Hyundai: ಕೇವಲ 6 ಲಕ್ಷಕ್ಕೆ ಹೊಸ ಕಾರು: 27.1 ಕಿ.ಮೀ ಮೈಲೇಜ್

ಮೈಕ್ರೋ ಕ್ರಾಸ್ಒವರ್ ಆಗಿರುವ ಹ್ಯುಂಡೈ ಎಕ್ಸ್ಟರ್, ಹ್ಯಾಚ್‌ಬ್ಯಾಕ್‌ನ ಬೆಲೆಗೆ ಎಸ್‌ಯುವಿಯ ಡಿಸೈನ್ ಒಳಗೊಂಡಿದೆ. ಇದರ ಎತ್ತರದ ವಿನ್ಯಾಸವು ಕ್ಯಾಬಿನ್ ಸ್ಥಳವನ್ನು ಹೆಚ್ಚಿಸುವುದರ ಜೊತೆಗೆ ಬೂಟ್ ಸಹ ಸಾಕಷ್ಟು ದೊಡ್ಡದಾಗಿದೆ. ಹುಂಡೈ ಎಕ್ಸ್‌ಟರ್ (Hyundai Exter) ಬೆಲೆ ರೂ. 6 ಲಕ್ಷದಿಂದ ಪ್ರಾರಂಭವಾಗಿ ಟಾಪ್ ಮಾಡೆಲ್ ರೂ. 10.51 ಲಕ್ಷದವರೆಗೆ (ಎಕ್ಸ್‌ ಶೋರೂಂ ಬೆಲೆಗಳು) ಇದೆ. ಎಕ್ಸ್‌ಟರ್ ಅನ್ನು 34 ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಎಕ್ಸ್‌ಟರ್‌ನ ಬೇಸ್‌ ವೇರಿಯೆಂಟ್ EX ಮತ್ತು ಟಾಪ್ ಮಾಡೆಲ್ SX ಆಪ್ಟ್ ಕನೆಕ್ಟ್ ನೈಟ್ DT AMT ಆಗಿದೆ. ಕಾರಿನ ಹೆಚ್ಚಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಅತಿಹೆಚ್ಚು ಮಾರಾಟ ಕಾಣುವ 4 ಬೆಸ್ಟ್ ಫ್ಯಾಮಿಲಿ 7-ಸೀಟರ್ ಕಾರುಗಳು

ಭಾರತದಲ್ಲಿ 7-ಸೀಟರ್ ಕಾರುಗಳು ಸಾಕಷ್ಟು ಜನಪ್ರಿಯವಾಗಿವೆ. ಜನಸಾಮಾನ್ಯರು, ಫ್ಲೀಟ್ ಆಪರೇಟರ್‌ಗಳು ಕೈಗೆಟುಕುವ ಏಳು ಆಸನಗಳ ಎಸ್‌ಯುವಿಗಳನ್ನು ಹೆಚ್ಚಾಗಿ ಪರಿಗಣಿಸುತ್ತಾರೆ. ಪ್ರಸ್ತುತ, ಭಾರತದಲ್ಲಿ ಅತ್ಯಂತ ಕೈಗೆಟುಕುವ ಏಳು ಆಸನಗಳ ಕಾರು ರೆನಾಲ್ಟ್ ಟ್ರೈಬರ್ ಆಗಿದೆ. ಇದರ ನಂತರ ಮಾರುತಿ, ಮಹೀಂದ್ರಾ ಬ್ರಾಂಡ್‌ಗಳ ಕಾರುಗಳು ಕೂಡ ಉತ್ತಮ 7-ಸೀಟರ್ ಕಾರುಗಳನ್ನು ನೀಡುತ್ತಿವೆ. ಬೆಲೆ ಏರಿಕೆಯಾದಷ್ಟು ಫಿಚರ್‌ಗಳು ಹಾಗೂ ಅದರ ಗುಣಮಟ್ಟ ಹೆಚ್ಚುತ್ತದೆ ಎಂಬುದನ್ನು ಗಮನಿಸಬೇಕು. ಬನ್ನಿ ಹಾಗಾದ್ರೆ ಭಾರತಲ್ಲಿ ಕೈಗೆಟುಕುವ ಬೆಲೆಯ ಬೆಸ್ಟ್ 7-ಸೀಟರ್ ಕಾರುಗಳನ್ನು ಪರಿಶೀಲಿಸೋಣ.

ಇಲ್ನೋಡಿ ಬಾಸ್.. ಹೋಂಡಾ ಆಕ್ಟಿವಾ 125ಗಿಂತ ಅಪ್‌ಗ್ರೇಡ್ ಆಗಿರುವ..

ಹೋಂಡಾ ಆಕ್ಟಿವಾ 125 (Honda Activa 125) ಜನಪ್ರಿಯ ಸ್ಕೂಟರ್ ಆಗಿದೆ. ಇದು ರೂ.94,442 ರಿಂದ ರೂ.97,146 (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 23.92 ಸಿಸಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 47 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಟಿಎಫ್‌ಟಿ ಕನ್ಸೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ಐಡಲ್ ಸ್ಟಾರ್ಟ್/ ಸ್ಟಾಪ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ. ವಿಶೇಷವಾಗಿ ಈ ಹೋಂಡಾ ಆಕ್ಟಿವಾ 125ಗಿಂತ ಅಪ್‌ಗ್ರೇಡ್ ಆಗಿರುವ 5 ಶಕ್ತಿಶಾಲಿ ಸ್ಕೂಟರ್‌ಗಳನ್ನು ಗ್ರಾಹಕರ ಕೂಡ ಖರೀದಿ ಮಾಡಬಹುದು. ಬನ್ನಿ.. ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾದ ವಿವರವನ್ನು ತಿಳಿಯೋಣ.
Advertisement

Hero: ಜನಪ್ರಿಯ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಭಾರೀ ಇಳಿಕೆ..

ಹೀರೋ ವಿಡಾ ವಿ2 (Hero Vida V2) ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ ಈ ಸ್ಕೂಟರ್‌ನ ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು ಕಂಪನಿಯು ಮುಂದಾಗಿದ್ದು, ವಿವಿಧ ರೂಪಾಂತರಗಳ (ವೇರಿಯೆಂಟ್) ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

Citroen: ಸಿಟ್ರನ್ ಡಾರ್ಕ್ ಎಡಿಷನ್ ಕಾರುಗಳ ಬಿಡುಗಡೆ: ವಿಶೇಷತೆಗಳೇನು?

ಇಂಟೀರಿಯರ್‌ನಲ್ಲಿ ಸಂಪೂರ್ಣ ಬ್ಲಾಕ್ ಥೀಮ್ ವಿಶಿಷ್ಟವಾದ ಪ್ರೀಮಿಯಂ ವೈಬ್‌ನೊಂದಿಗೆ ಕ್ಯಾಬಿನ್ ಅನ್ನು ಮೆಟ್ರೋಪಾಲಿಟನ್ ಬ್ಲಾಕ್ ಲೆಥೆರೆಟ್ ಸೀಟ್‌ಗಳು ಮತ್ತು ಕಸ್ಟಮ್ ಲೆಥೆರೆಟ್ ಪ್ಯಾನಲ್‌ನೊಂದಿಗೆ ವಿನ್ಯಾಸಗೊಳಿಸಲಾದ ಡಾರ್ಕ್ ಎಡಿಷನ್ ಆವೃತ್ತಿಗಳನ್ನು ಸಿಟ್ರನ್ ಬಿಡುಗಡೆ ಮಾಡಿದೆ. ಹೌದು ಸಿಟ್ರನ್ ತನ್ನ ಜನಪ್ರಿಯ ಮಾಡಲ್‌ಗಳಾದ ಸಿಟ್ರನ್ C3, ಏರ್‌ಕ್ರಾಸ್ ಮತ್ತು ಬಸಾಲ್ಟ್ SUV ಕೂಪೆ ಕಾರುಗಳ ಟಾಪ್‌ ವೇರಿಯೆಂಟ್‌ಗಳನ್ನು ಡಾರ್ಕ್ ಎಡಿಷನ್ ಆವೃತ್ತಿಗಳಲ್ಲಿ ಬಿಡುಗಡೆ ಮಾಡಿದೆ. ಇವು ಸೀಮಿತ ಸಂಗ್ರಹವಾಗಿದ್ದು (limited edition), ರೂ. 19,500 ಹೆಚ್ಚುವರಿ ಬೆಲೆಯಿಂದ ದರ ಪ್ರಾರಂಭವಾಗುತ್ತದೆ.

Tata: 24 Km ಮೈಲೇಜ್.. 8 ಲಕ್ಷ, 5-ಸೀಟರ್.. ಜನಪ್ರಿಯ..

ಟಾಟಾ ನೆಕ್ಸಾನ್ (Tata Nexon) ಪ್ರಖ್ಯಾತ ಎಸ್‌ಯುವಿಯಾಗಿದೆ. ಈ ಕಾರು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಕಳೆದ ತಿಂಗಳು (ಮಾರ್ಚ್‌) 16,366 ಯುನಿಟ್ ನೆಕ್ಸಾನ್ ಎಸ್‌ಯುವಿಗಳನ್ನು ಮಾರಾಟಗೊಳಿಸಲಾಗಿದೆ. ಸದ್ಯ, ಈ ಏಪ್ರಿಲ್ ತಿಂಗಳು ನೂತನ ಟಾಟಾ ನೆಕ್ಸಾನ್ ಕಾರಿನ ಖರೀದಿ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Toyota: ಮೊನ್ನೆಯಷ್ಟೆ ಬಿಡುಗಡೆ: ಹೊಸ ಟೊಯೋಟಾ ಹೈಬ್ರಿಡ್ ಎಸ್‌ಯುವಿ

ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ (Toyota Urban Cruiser Hyryder) ಭಾರತದ ಮೊದಲ ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಎಸ್‌ಯುವಿ ಎಂದು ವ್ಯಾಪಕವಾಗಿ ಜನಪ್ರಿಯವಾಗಿದೆ. ಈ ಎಸ್‌ಯುವಿಯ ಸುರಕ್ಷತೆ, ಸೌಕರ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸುವ ಸಲುವಾಗಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಹೊಸ ಫೀಚರ್‌ಗಳ ಅಪ್‌ಡೇಟ್‌ಗಳೊಂದಿಗೆ ಇತ್ತೀಚೆಗೆ ಬಿಡುಗಡೆ ಮಾಡಿದೆ. ಗ್ರಾಹಕರ ಚಾಲನಾ ಅನುಭವವನ್ನು ಹೆಚ್ಚಿಸಲು ಮತ್ತು ವಿಕಸನಗೊಳ್ಳುತ್ತಿರುವ ಮಾರುಕಟ್ಟೆ ಪ್ರವೃತ್ತಿಗಳನ್ನು ಮನಗಂಡು ಹೊಸ ಅಪ್‌ಡೇಟ್‌ಗಳನ್ನು ಪರಿಚಯಿಸಿರುವುದಾಗಿ ಟೊಯೋಟಾ ಕಂಪನಿ ಹೇಳಿದೆ.

"ಮನೆಯಲ್ಲಿ ಒಬ್ಬ ಗಂಡಸು ಇರಬೇಕು, ಹಾಗಿದ್ರೆ ಎದುರಿಸೋಕೆ ಸಾಧ್ಯ ಅನ್ನೋ ಪ್ರಶ್ನೆನೇ ಇಲ್ಲ"; ಸಾನ್ಯಾ ಅಯ್ಯರ್!


Kia: ಸುರಕ್ಷತೆಯಲ್ಲಿ ಟಾಟಾಗೆ ಸವಾಲು.. 8.99 ಲಕ್ಷದ ಕಿಯಾ ಸೈರಸ್..

ಕಿಯಾ ಮೋಟಾರ್ಸ್ (Kia Motors), ಮಾರಾಟಗೊಳಿಸುತ್ತಿರುವ 'ಸೈರಸ್' ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದ್ದು, ಗ್ರಾಹಕರ ನೆಚ್ಚಿನ ಕಾರಾಗಿದೆ. ಈ ಮಾರ್ಚ್‌ನಲ್ಲಿ 5,425 ಯುನಿಟ್‌ ಸೈರಸ್ ಎಸ್‌ಯುವಿಗಳನ್ನು ಮಾರಾಟ ಮಾಡಲಾಗಿದೆ. ಇದು ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಸದ್ಯ ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಭಾರತ್ ಎನ್‌ಸಿಎಪಿ (Bharat NCAP) ನೂತನ 'ಕಿಯಾ ಸೈರಸ್'ನ್ನು ಅತ್ಯಂತ ಸುರಕ್ಷಿತ ಕಾರೆಂದು ತೀರ್ಮಾನಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ.

ಬೆಚ್ಚಿಬಿದ್ದ ಟಾಟಾ.. 20,000 ಯುನಿಟ್ ಮಾರಾಟ, ಎಂಜಿ ಕಾರಿನಿಂದ..

ಭಾರತದ ಕಾರು ಮಾರುಕಟ್ಟೆಯಲ್ಲಿ ಜೆ‌ಎಸ್‌ಡಬ್ಲ್ಯೂ (JSW) ಹಾಗೂ ಎಂಜಿ ಮೋಟಾರ್ (MG Motor) ಕಂಪನಿಗಳು ವ್ಯಾಪಾರ ಪಾಲುದಾರಿಕೆಯನ್ನು ಹೊಂದಿವೆ. ದೇಶೀಯವಾಗಿ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸಲಾಗುತ್ತಿವೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಇವೆರೆಡು ಕಂಪನಿಗಳ ಸಹಯೋಗದಲ್ಲಿ ಹೊಚ್ಚ ಹೊಸ ವಿಂಡ್ಸರ್ (Windsor) ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಾಗಿತ್ತು. ಈ ಕಾರನ್ನು ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, 'ವಿಂಡ್ಸರ್' ಮಾರಾಟದಲ್ಲಿ ವಿಶೇಷವಾದ ದಾಖಲೆಯೊಂದನ್ನು ನಿರ್ಮಾಣ ಮಾಡಲಾಗಿದೆ.

ಎಸ್‌ಯುವಿ, ಸೆಡಾನ್, ಎಂಪಿವಿ ವಿಭಾಗದ ಬೆಸ್ಟ್‌ ಕಾರುಗಳ ಪಟ್ಟಿ

ಭಾರತದಲ್ಲಿ ಪ್ಯಾಸೆಂಜರ್ ವಾಹನ ವಿಭಾಗಗಳಲ್ಲಿ ವಿಭಿನ್ನ ಬೆಲೆ ಶ್ರೇಣಿಗಳಲ್ಲಿ ಖರೀದಿದಾರರಿಗೆ ಹಲವು ಆಯ್ಕೆಗಳಿದ್ದು, 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಕಾರುಗಳು ಹೆಚ್ಚಾಗಿ ಮಾರಾಟ ಕಾಣುತ್ತವೆ. ಹಾಗೆಯೇ 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳವರೆಗಿನ ಕಾರುಗಳು ಅವುಗಳ ಗಾತ್ರ, ಫೀಚರ್‌ಗಳು ಮತ್ತು ಒಟ್ಟಾರೆ ಪರ್ಫಾಮೆನ್ಸ ಆಧರಿಸಿ ಬೆಲೆಗೆ ತಕ್ಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ನಿಮ್ಮ ಬಜೆಟ್ 10 ಲಕ್ಷ ರೂ.ಗಳಿಂದ 20 ಲಕ್ಷ ರೂ. (ಎಕ್ಸ್ ಶೋರೂಂ) ಆಗಿದ್ದರೇ, ಈ ಬೆಲೆಯಲ್ಲಿ ಸಿಗುವ ಅತ್ಯುತ್ತಮ ಕಾಂಪ್ಯಾಕ್ಟ್ ಎಸ್‌ಯುವಿ, ಮಧ್ಯಮ ಗಾತ್ರದ ಎಸ್‌ಯುವಿ ಮತ್ತು ಸೆಡಾನ್, ಎಂಪಿವಿಗಳ ಪಟ್ಟಿ ಇಲ್ಲಿದೆ.
Advertisement

Yamaha: ಹೊಸ ಯಮಹಾ ಎಫ್‌ಝಡ್-ಎಸ್ ಎಫ್‌ಐ ಬೈಕ್ ವಿಶೇಷತೆಗಳು!

ಕಳೆದ ಹಲವು ವರ್ಷಗಳಿಂದ ಸ್ಟೈಲಿಷ್ 150 ಸಿಸಿ ಮೋಟಾರ್‌ಸೈಕಲ್ ವಿಭಾಗದಲ್ಲಿ ಸಖತ್ ಹೆಸರು ಮಾಡಿರುವ ಯಮಹಾ ಎಫ್‌ಝಡ್-ಎಸ್ ಎಫ್‌ಐ (Yamaha FZ-S FI) ಈಗ ಹೊಸ ಫೀಚರ್ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಯಾಗಿದೆ. ಹೊಸ 2025ರ ಯಮಹಾ ಎಫ್‌ಝಡ್-ಎಸ್ ಎಫ್‌ಐ ಈ ಬಾರಿ ಸ್ವಲ್ಪ ವಿನ್ಯಾಸ ಪರಿಷ್ಕರಣೆ ಮಾಡಲಾಗಿದೆ. ಹಾಗೆಯೇ ಕೆಲವು ಹೊಸ ಬಣ್ಣಗಳನ್ನು ಪರಿಚಯಿಸಲಾಗಿದೆ. ಇದು 2025ರ ಎಫ್‌ಝಡ್-ಎಸ್ ಎಫ್‌ಐ ಮಾಡಲ್ ಆಗಿದ್ದು, ಈ ಹಿಂದೆ ಇದ್ದ ಎಫ್‌ಝಡ್-ಎಸ್‌ ಎಫ್‌ಐ 4.0 ಮಾಡಲ್‌ ಅನ್ನು ಕೈಬಿಡಲಾಗಿದೆ.

ಹನುಮಾನ್‌ ಜಯಂತಿಗೆ ಶುಭ ಕೋರಲು ಇಲ್ಲಿದೆ ನೋಡಿ ಶುಭಾಶಯಗಳು


ವಾಯು ಪುತ್ರ, ರಾಮನ ಭಕ್ತ ಹನುಮಂತನ ಪೂಜಿಸಿದರೆ, ಹನುಮಾನ್‌ ಮಂತ್ರಗಳನ್ನು ಹೇಳಿದರೆ ಜೀವನದಲ್ಲಿ ಕಷ್ಟಗಳೆಲ್ಲಾ ದೂರವಾಗುವುದು.

ಹನುಮಂತನ ಮಂತ್ರ ಪಠಿಸಿದರೆ ಆತ ಧೈರ್ಯ, ಆರೋಗ್ಯ, ಸಂಪತ್ತು ಎಲ್ಲಾ ಕರುಣಿಸುತ್ತಾನೆ, ವಿಘ್ನ ನಿವಾರಕನಂತೆಯೇ ಹನುಮಂತ ಕೂಡ ನಮ್ಮ ಬದುಕಿನಲ್ಲಿರುವ ಎಲ್ಲಾ ಕಷ್ಟಗಳನ್ನು ನಿವಾರಿಸುತ್ತಾನೆ. ಈ ವರ್ಷ ಹನುಮಾನ್ ಜಯಂತಿಯನ್ನು ಏಪ್ರಿಲ್ 27ಕ್ಕೆ ಆಚರಿಸಲಾಗುವುದು.

ಹನುಮಾನ್ ಜಯಂತಿಗೆ ನಿಮ್ಮ ಪ್ರೀತಿ ಪಾತ್ರರರಿಗೆ ಶುಭ ಕೋರಲು ಇಲ್ಲಿದೆ ಅದ್ಭುತ ಸಾಲುಗಳ ಸಂದೇಶ: ಆ ಭಗವಂತ ನಿಮಗೆ, ನಿಮ್ಮ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ ನೀಡಿ ಸಂರಕ್ಷಿಸಲಿ.

ರಿವರ್ಸ್ ಮೋಡ್‌ನ ಓಲಾದ ಮೊದಲ ಇ-ಬೈಕ್‌ ಫ್ಯಾಕ್ಟರಿಯಿಂದ ಹೊರ ಬಂತು..

ಬೆಂಗಳೂರು ಮೂಲದ ಓಲಾ ಎಲೆಕ್ಟ್ರಿಕ್ (Ola Electric), ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ (Two Wheeler) ಕಂಪನಿಯಾಗಿ ಗುರುತಿಸಿಕೊಂಡಿದೆ. ಕಳೆದ ಫೆಬ್ರವರಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಮೊಟ್ಟ ಮೊದಲ ಇ-ಬೈಕ್ 'ರೋಡ್‌ಸ್ಟರ್ ಎಕ್ಸ್'ನ್ನು ಬಹಳ ಅದ್ದೂರಿಯಾಗಿಯೂ ಬಿಡುಗಡೆಗೊಳಿಸಿತ್ತು. ಸದ್ಯ, ಈ ನೂತನ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ಉತ್ಪಾದನೆಗೆ ಹೆಚ್ಚಿನ ವೇಗ ನೀಡಲಾಗಿದ್ದು, ರಸ್ತೆಗಿಳಿಯಲು ಸಂಪೂರ್ಣವಾಗಿ ಸಿದ್ದಗೊಂಡಿರುವ ಹೊಚ್ಚ ಹೊಸ 'ರೋಡ್‌ಸ್ಟರ್ ಎಕ್ಸ್' ಇ-ಬೈಕ್‌ನ್ನು ತಯಾರಿಕಾ ಘಟಕದಿಂದ ಹೊರತರಲಾಗಿದೆ.

Ford: ಮಾಡಲ್ ಸ್ಥಗಿತ, ಆದರೆ ಫುಲ್ ಡಿಮ್ಯಾಂಡ್: ಜನ ಸೆಕೆಂಡ್ ಹ್ಯಾಂಡ್‌

ವಿಶ್ವಾದ್ಯಂತ ಜನಪ್ರಿಯತೆ ಪಡೆದಿರುವ ಫೋರ್ಡ್ (Ford) ಕಂಪನಿಯು ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸಿದ ಹೊರತಾಗಿಯೂ, ಈ ಬ್ರಾಂಡ್‌ನ ಪ್ರಮುಖ ಕಾರೊಂದು ದೇಶದಲ್ಲಿ ಇನ್ನೂ ಸದ್ದು ಮಾಡುತ್ತಿದೆ. ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಈ ಕಾರು ಖರೀದಿದಾರರಿಗೆ ಮೆಚ್ಚಿನ ಆಯ್ಕೆಯಾಗಿರುವುದು ಹಲವರನ್ನು ಅಚ್ಚರಿಗೊಳಿಸಿದೆ. ಅದೇ ಫೋರ್ಡ್‌ನ ಪ್ರಖ್ಯಾತ ಇಕೋಸ್ಪೋರ್ಟ್ (EcoSport) ಎಸ್‌ಯುವಿ, ಇದರ ಘನ ನಿರ್ಮಾಣ ಗುಣಮಟ್ಟದಿಂದ ಭಾರತದಲ್ಲಿ ತನ್ನ ಖ್ಯಾತಿಯನ್ನು ಗಳಿಸಿದೆ. ಇದರೊಳಗಿನ ಆರು ಏರ್‌ಬ್ಯಾಗ್‌ಗಳು, 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್, ಹೆಚ್ಚಿನ ಸಾಮರ್ಥ್ಯದ ಚಾಸಿಸ್‌, ಪವರ್‌ಫುಲ್ ಎಂಜಿನ್ ಭಾರತದಲ್ಲಿ ಅದಕ್ಕೆ ಬೇಡಿಕೆ ಹೆಚ್ಚಿಸಿದೆ.

ಬಡವರು ಕೊಳ್ಳಬಹುದು.. 200 Km ರೇಂಜ್, ಕಡಿಮೆ ಬೆಲೆಗೆ ಇದೇ ವರ್ಷ..

ಟಾಟಾ ನ್ಯಾನೋ (Tata Nano) ಜನಪ್ರಿಯ ಕಾರಾಗಿ ಎಲ್ಲಡೆ ಮನೆ ಮಾತಾಗಿತ್ತು. ಆದರೂ ನಾನಾ ಕಾರಣಗಳಿಗೆ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿ ವರ್ಷಗಳೇ ಉರುಳಿ ಬಿಟ್ಟಿವೆ. ಈಗಲೂ ಟಾಟಾ ನ್ಯಾನೋ ಕಾರಿಗೆ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಫುಲ್ ಡಿಮ್ಯಾಂಡ್ ಇದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿಯೇ ಮಾರಾಟವಾಗುತ್ತಿದ್ದು, ಖರೀದಿದಾರರು ಕೂಡ ಇಷ್ಟಪಟ್ಟು ಕೊಳ್ಳುತ್ತಿದ್ದಾರೆ. ಸದ್ಯ, ಇದೇ ಕಾರು ಎಲೆಕ್ಟ್ರಿಕ್ ಅವತಾರದಲ್ಲೂ ಈ ವರ್ಷವೇ ಮಾರಾಟಕ್ಕೆ ಬರಬಹುದು ಎಂದು ಹೇಳಲಾಗಿದೆ.

Hyundai: ಮೊನ್ನೆಯಷ್ಟೆ ಬಿಡುಗಡೆಯಾದ ಹ್ಯುಂಡೈ ಸಿಎನ್‌ಜಿ ಕಾರು

ಹ್ಯುಂಡೈ ತನ್ನ ಎಕ್ಸ್‌ಟರ್ ಕಾರಿಗೆ ಹೊಸ ಸಿಎನ್‌ಜಿ ಕಿಟ್‌ ಅನ್ನು ಪರಿಚಯಿಸಿ ಬಿಡುಗಡೆ ಮಾಡಿದೆ. ಹ್ಯುಂಡೈ ಎಕ್ಸ್‌ಟರ್ ಹೈ-ಸಿಎನ್‌ಜಿ ಡ್ಯುಯೊ ಕಾರನ್ನು ಹೊಸ ಟ್ರಿಮ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಎಕ್ಸ್ಟರ್ ಹೈ-ಸಿಎನ್ ಜಿ ಡ್ಯುಯೊ ಸುರಕ್ಷತೆ ಮತ್ತು ಅನುಕೂಲವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹ್ಯುಂಡೈ ಇಂಟಿಗ್ರೇಟೆಡ್ ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್ ಅನ್ನು ಸಹ ಇದರಲ್ಲಿ ನೀಡಿದೆ. ಇದು ಪೆಟ್ರೋಲ್‌ನಿಂದ ಸಿಎನ್‌ಜಿಗೆ ಬದಲಾಯಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ ಎಂದು ಕಂಪನಿ ಹೇಳಿದೆ.

ಬ್ರೋ.. 28 ಕಿ.ಮೀ ಮೈಲೇಜ್.. 7 ಲಕ್ಷ.. 'ಮೈಸೂರ್ ಪಾಕ್'ನಂತೆ ಸೇಲ್..

ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ (Toyota Urban Cruiser Taisor) ಪ್ರಮುಖ ಎಸ್‌ಯುವಿಯಾಗಿದೆ. ಈ ಕಾರನ್ನು ಕಳೆದ ವರ್ಷದ (2024) ಏಪ್ರಿಲ್ ತಿಂಗಳಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ದೇಶದಲ್ಲಿ ಹಲವು ಎಸ್‌ಯುವಿಗಳ ಮಾರಾಟ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದರ ಹೊರತಾಗಿ ಟೊಯೊಟಾ ಟೈಸರ್ ಕಾರಿನ ಮಾರಾಟ ಮಾತ್ರ ನಿಧಾನಗತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಈ ಮಾರ್ಚ್‌ನಲ್ಲಿಯೂ ನೂತನ ಟೈಸರ್‌ನ್ನು ಗ್ರಾಹಕರು ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡಿದ್ದಾರೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ,

ಇದು ಸ್ಪ್ಲೆಂಡರ್ ಅಲ್ಲವೇ ಅಲ್ಲ: ನಿನ್ನೆ ಬಿಡುಗಡೆ.. 70 Km ಮೈಲೇಜ್..

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ನಿನ್ನೆಯೆಷ್ಟೇ 2025ರ ಹೊಚ್ಚ ಹೊಸ ಹೀರೋ ಪ್ಯಾಶನ್ ಪ್ಲಸ್ (Hero Passion Plus) ಬೈಕ್ ಬಿಡುಗಡೆಗೊಂಡಿದೆ. ಇದು ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ದೊರೆಯುತ್ತದೆ. ನೀವು ನೂತನ ಹೀರೋ ಪ್ಯಾಶನ್ ಪ್ಲಸ್ ಮೋಟಾರ್‌ಸೈಕಲ್‌ನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದೀರಾ.. ಬನ್ನಿ, ಈ ಬೈಕ್‌ನ ಬೆಲೆ & ವಿಶೇಷತೆಗಳನ್ನು ಒಳಗೊಂಡ ಪ್ರಮುಖಾಂಶಗಳು ಏನೆಂಬುದನ್ನು ನೋಡೋಣ.
Advertisement

ನಮ್ಮೂರಿಗೂ ಸೈ, ನಿಮ್ಮೂರಿಗೂ ಜೈ.. ಟಿವಿಎಸ್ ಜುಪಿಟರ್ 125ನಂತೆಯೇ..

ಟಿವಿಎಸ್ ಜುಪಿಟರ್ 125 (TVS Jupiter 125) ಜನಪ್ರಿಯ ಸ್ಕೂಟರ್ ಆಗಿದೆ. ಇದು ಕನಿಷ್ಠ ರೂ.89,396 ಹಾಗೂ ಗರಿಷ್ಠ ರೂ.99,805 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 124.8 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿದ್ದು, 57.27 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಮತ್ತು ಯುಎಸ್‌‍ಬಿ ಚಾರ್ಜಿಂಗ್ ಸಾಕೆಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ. ಈ ' ಜುಪಿಟರ್ 125ಗೆ ಪರ್ಯಾಯವಾಗಿ ಗ್ರಾಹಕರು ಈ 5 ಸ್ಕೂಟರ್‌ಗಳನ್ನು ಕೊಂಡುಕೊಳ್ಳಬಹುದು ಬನ್ನಿ, ಇವುಗಳ ಬೆಲೆ ಹಾಗೂ ವಿಶೇಷತೆಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿಯೋಣ.

ಖರೀದಿಗೆ ಕ್ಯೂ: 18500 ಇಳಿಕೆ.. ಅಗ್ಗದ ಬೆಲೆಗೆ iPhone 15 ಸೇಲ್; ಹೊಸ ಬೆಲೆ ನೋಡಿ


'ಚಾರ್ಜ್ ಮೈ ಆಡಿ' ಉಪಕ್ರಮದಲ್ಲಿ 6,500 ಚಾರ್ಜಿಂಗ್ ಪಾಯಿಂಟ್‌ಗಳು

ಐಷಾರಾಮಿ ಕಾರು ತಯಾರಕರಾದ ಆಡಿ, ತನ್ನ ವಿಭಾಗದ ಮೊದಲ 'ಚಾರ್ಜ್ ಮೈ ಆಡಿ' ಉಪಕ್ರಮದ ಎರಡನೇ ಹಂತದ ಭಾಗವಾಗಿ ದೇಶಾದ್ಯಂತ 6,500+ ಚಾರ್ಜಿಂಗ್ ಪಾಯಿಂಟ್‌ಗಳನ್ನು ದಾಟಿರುವುದಾಗಿ ಘೋಷಿಸಿದೆ. ದೇಶದಲ್ಲಿ ಐಷಾರಾಮಿ ಇವಿ ಅಳವಡಿಕೆಯನ್ನು ವೇಗಗೊಳಿಸಲು ಬ್ರ್ಯಾಂಡ್ 16 ಹೊಸ ಪಾಲುದಾರರನ್ನು ಸೇರಿಸಿದೆ. ಈ ಸ್ಥಳಗಳಲ್ಲಿ 75 ಕ್ಕೂ ಡಿಸಿ ಫಾಸ್ಟ್-ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದ್ದು, ನೆಟ್‌ವರ್ಕ್ ಅನುಕೂಲತೆಯನ್ನು ಹೆಚ್ಚಿಸಲು, ಚಾರ್ಜಿಂಗ್ ಸಮಯವನ್ನು ಕಡಿಮೆ ಮಾಡಲು ಮತ್ತು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಆಡಿ ತಿಳಿಸಿದೆ.

Hero: ಕೋಟ್ಯಂತರ ಜನರ ನಂಬಿಕೆ.. 79,000ಕ್ಕೆ ಹೊಸ ಹೀರೋ ಸ್ಪ್ಲೆಂಡರ್..

ಹೀರೋ ಸ್ಪ್ಲೆಂಡರ್ (Hero Splendor) ವಿಶ್ವದ ನಂಬರ್ 1 ಬೈಕ್ ಎಂದೇ ಹೆಸರುವಾಸಿಯಾಗಿದೆ. 4 ಕೋಟಿಗೂ ಅಧಿಕ ಮೋಟಾರ್‌ಸೈಕಲ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸಲಾಗಿದೆ. ಇಂದು ಕೆಲವೊಂದು ನವೀಕರಣಗಳೊಂದಿಗೆ 2025ರ ಸ್ಪ್ಲೆಂಡರ್ ಪ್ಲಸ್ ಬೈಕ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿದೆ. ನೂತನ ಮೋಟಾರ್‌ಸೈಕಲ್‌ ಅತ್ಯಂತ ಕೈಗಟುಕುವ ಬೆಲೆಯನ್ನು ಹೊಂದಿದೆ. ಇದರೊಂದಿಗೆ ಸ್ಪ್ಲೆಂಡರ್ ಪ್ಲಸ್ (Splendor+), ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ (Splendor+ XTEC) ಹಾಗೂ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ 2.0 (Splendor+ XTEC 2.0) ಎಂಬ ಮೂರು ವಿಧದಲ್ಲೂ ಸಿಗುತ್ತದೆ.

Maruti: ಸೇಫ್ಟಿಯಲ್ಲಿ ಟಾಟಾಗೆ ಮಾರುತಿ ಸವಾಲು

ಮಾರುತಿ ಸುಜುಕಿ (Maruti Suzuki) ತನ್ನ ಎಲ್ಲಾ ಕಾರುಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನಹರಿಸುತ್ತಿದೆ. ಸಾಲಾಗಿ ಎಲ್ಲಾ ಕಾರುಗಳಲ್ಲಿ 6 ಏರ್ ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ) ನೀಡುವ ಮೂಲಕ ಪ್ರಯಾಣಿಕರನ್ನು ಮತ್ತಷ್ಟು ಸುರಕ್ಷಿತವಾಗಿಸಲು ಸಜ್ಜಾಗಿದೆ. ಈಗಾಗಲೇ ಗ್ರ್ಯಾಂಡ್ ವಿಟಾರಾ, ಆಲ್ಟೋ ಕೆ10 ಮತ್ತು ಸೆಲೆರಿಯೊ ಕಾರುಗಳಲ್ಲಿ 6 ಏರ್ ಬ್ಯಾಗ್‌ಗಳನ್ನು ನೀಡಿ ಎಲ್ಲರನ್ನು ಅಚ್ಚರಿಗೊಳಿಸಿ, ಇದೀಗ ಮಾರುತಿ ಇಕೋದಲ್ಲೂ 6 ಏರ್ ಬ್ಯಾಗ್ ನೀಡಿ (ಸ್ಟ್ಯಾಂಡರ್ಡ್ ಆಗಿ) ಎಲ್ಲರು ಹುಬ್ಬೇರಿಸುವಂತೆ ಮಾಡಿದೆ.