Citroen: ಮೂರು ಹೊಸ ಸಿಟ್ರನ್ ಕಾರುಗಳು ಬಿಡುಗಡೆ: ಮೊದಲ ಕಾರು ಡೆಲಿವರಿ

ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಸಿಟ್ರನ್, ತನ್ನ ಜನಪ್ರಿಯ ಮಾಡಲ್‌ಗಳಾದ ಸಿಟ್ರನ್ C3, ಏರ್‌ಕ್ರಾಸ್ ಮತ್ತು ಬಸಾಲ್ಟ್ SUV ಕೂಪೆ ಕಾರುಗಳ ಟಾಪ್‌ ವೇರಿಯೆಂಟ್‌ಗಳನ್ನು ಡಾರ್ಕ್ ಎಡಿಷನ್ ಆವೃತ್ತಿಗಳಲ್ಲಿ ಬಿಡುಗಡೆ ಮಾಡಿದೆ. ಇವು ಸೀಮಿತ ಸಂಗ್ರಹವಾಗಿದ್ದು (limited edition), ರೂ. 19,500 ಹೆಚ್ಚುವರಿ ಬೆಲೆಯಿಂದ ದರ ಪ್ರಾರಂಭವಾಗುತ್ತದೆ. ಸಿಟ್ರನ್ ಬ್ರಾಂಡ್ ಅಂಬಾಸಿಡರ್ ಆಗಿರುವ ಪ್ರಸಿದ್ಧ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ, ಹೊಸ ಡಾರ್ಕ್ ಎಡಿಷನ್ ಅನ್ನು ಅನಾವರಣಗೊಳಿಸಿದರು. ಸಿರೀಸ್‌ನ ಮೊದಲ್ ಬಸಾಲ್ಟ್ ಡಾರ್ಕ್ ಎಡಿಷನ್ ಅನ್ನು ಡೆಲಿವರಿ ಪಡೆದುಕೊಂಡಿದ್ದಾರೆ.

ಕಲ್ಲುಬಂಡೆಯಂತಹ ಕಾರಿದು.. ಅದೇಕೋ 6-ಆಸನಗಳ ಈ Tata SUV ಕೊಳ್ಳಲು..

ಟಾಟಾ ಸಫಾರಿ (Tata Safari) ಜನಪ್ರಿಯ ಎಸ್‌ಯುವಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಈ ಕಾರು 6-ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದ್ದು, ತುಂಬು ಕುಟುಂಬಕ್ಕೆ ಹೆಚ್ಚು ಸೂಕ್ತವಾಗಿದೆ. ಇದು ಸುರಕ್ಷತೆಗೂ ಹೆಸರುವಾಸಿಯಾಗಿರುವುದರಿಂದ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಆದರೆ, ಕೆಲ ತಿಂಗಳಿಂದ ಸಫಾರಿ ಎಸ್‌ಯುವಿ ಮಾರಾಟ ಪ್ರಮಾಣವು ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ನಾರಿಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿದ ಒಮೆಗಾ ಸೀಕಿ

ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಒಮೆಗಾ ಸೀಕಿ ಮೊಬಿಲಿಟಿ (OSM), ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಉಪಕ್ರಮದ ಭಾಗವಾಗಿ ನಾರಿ ಶಕ್ತಿ (ಮಹಿಳಾ ಕಲ್ಯಾಣ ಚಾರಿಟೇಬಲ್ ಟ್ರಸ್ಟ್) ಜೊತೆಗಿನ ತನ್ನ ಸಹಯೋಗವನ್ನು ಘೋಷಿಸಿದೆ. ಈ ಉಪಕ್ರಮದ ಅಡಿಯಲ್ಲಿ, OSM ಭಾರತದಾದ್ಯಂತ ಮಹಿಳಾ ಚಾಲಕರಿಗೆ 2,500 ವಿಶೇಷವಾಗಿ ವಿನ್ಯಾಸಗೊಳಿಸಲಾದ ಪಿಂಕ್ ಆಟೋ ರಿಕ್ಷಾಗಳನ್ನು ನಿಯೋಜಿಸುವುದಾಗಿ ಹೇಳಿದೆ. ಇದು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಎಂದು ಕಂಪನಿ ತಿಳಿಸಿದೆ.

Maruti: ಮೂಗು ಮುರಿಯುವವರಿಗೆ ತಕ್ಕ ಉತ್ತರ.. 5 ಲಕ್ಷದ ಈ ಮಾರುತಿ..

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಪ್ರಖ್ಯಾತ ಹ್ಯಾಚ್‌ಬ್ಯಾಕ್ ಆಗಿದೆ. ಈ ಕಾರನ್ನು ಡಾಕ್ಟರ್ ಹಾಗೂ ಎಂಜಿನಿಯರ್‌ಗಳು ಸೇರಿದಂತೆ ಎಲ್ಲ ವರ್ಗದ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಕಳೆದ ತಿಂಗಳು (ಮಾರ್ಚ್-2025) ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ ಕಾರುಗಳ ಪಟ್ಟಿಯಲ್ಲಿ ಇದೇ ವ್ಯಾಗನ್ಆರ್ ನಾಲ್ಕನೇ ಸ್ಥಾನದಲ್ಲಿದೆ. ಬರೋಬ್ಬರಿ 17,175 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. 2024ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 16,368 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 5% ಬೆಳವಣಿಗೆಯನ್ನು ಸಾಧಿಸಲಾಗಿದೆ.
Advertisement

Mahindra: ಮಹೀಂದ್ರಾ ಹೊಸ ಕಾರಿಗಾಗಿ ಮುಗಿಬಿದ್ದ ಜನ: ಸಖತ್ ಡಿಮ್ಯಾಂಡ್

ದೇಶದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಎಲೆಕ್ಟ್ರಿಕ್ ಮೊಬಿಲಿಟಿ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಸಾಧಿಷಿಸಿದೆ. ಮಾರ್ಚ್ 20, 2025 ರಂದು ವಿತರಣೆಗಳು ಪ್ರಾರಂಭವಾದಾಗಿನಿಂದ ಕಂಪನಿಯ ಆಲ್-ಎಲೆಕ್ಟ್ರಿಕ್ ಒರಿಜಿನ್ SUV ಗಳಾದ XEV 9e ಮತ್ತು BE 6 ಕಾರುಗಳ 3000 ಕ್ಕೂ ಹೆಚ್ಚು ಗ್ರಾಹಕ ವಿತರಣೆಗಳು ಪೂರ್ಣಗೊಂಡಿವೆ. ಮಹೀಂದ್ರಾದ ಹೊಸ ಎಲೆಕ್ಟ್ರಿಕ್ SUV ಕಾರುಗಳಿಗೆ ಪ್ರತಿಕ್ರಿಯೆ ಅಗಾಧವಾಗಿದೆ. XEV 9e ಮತ್ತು BE 6 ಎರಡೂ ಬಲವಾದ ಬುಕಿಂಗ್‌ಗಳನ್ನು ಸಾಧಿಸಿರುವುದು ದೇಶದ ಎಲೆಕ್ಟ್ರಿಕ್ ಭವಿಷ್ಯಕ್ಕೆ ನಾಂದಿಯಾಗಿದೆ ಎಂದು ಕಂಪನಿ ಹೇಳಿದೆ.

Hero: 70 Km ಮೈಲೇಜ್.. ಸದ್ದಿಲ್ಲದೇ ಹೊಸ ಹೀರೋ ಪ್ಯಾಶನ್ ಪ್ಲಸ್..

ಹೀರೋ ಮೋಟೊಕಾರ್ಪ್ (Hero MotoCorp) ನಂ.1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೆಸರುವಾಸಿಯಾಗಿದ್ದು, ಸದ್ದಿಲ್ಲದೇ ಪ್ಯಾಶನ್ ಪ್ಲಸ್ (Passion Plus) ಬೈಕ್‌ನ 2025ರ ಮಾಡೆಲ್‌ನ್ನು ಬಿಡುಗಡೆಗೊಳಿಸಿದೆ. ಇದು ಒಂದಷ್ಟು ಪ್ರಮುಖ ನವೀಕರಣಗಳನ್ನು ಪಡೆದುಕೊಂಡು ಮಾರಾಟಕ್ಕೆ ಬಂದಿದೆ. ಹಳೆಯ ಮಾಡೆಲ್‌ಗೆ ಹೋಲಿಕೆ ಮಾಡಿದರೆ, ಸ್ವಲ್ಪ ಹೆಚ್ಚಿನ ದರವನ್ನು ಹೊಂದಿದೆ. ಬನ್ನಿ, ನೂತನ ಮೋಟಾರ್‌ಸೈಕಲ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರವನ್ನು ತಿಳಿಯೋಣ.

Toyota: ಟೊಯೊಟಾ ಇನ್ನೋವಾಗಾಗಿ ಮುಗಿಬಿದ್ದ ಗ್ರಾಹಕರು..

ಟೊಯೊಟಾ ಇನ್ನೋವಾ (Toyota Innova) ಜನಪ್ರಿಯ ಎಂಪಿವಿಯಾಗಿದೆ. ಇದು ಕ್ರಿಸ್ಟಾ ಹಾಗೂ ಹೈಕ್ರಾಸ್ ಎಂಬ ರೂಪದಲ್ಲಿ ಖರೀದಿಗೆ ದೊರೆಯಲಿದ್ದು, ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಈ ಹಿನ್ನೆಲೆ, ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಇನ್ನೋವಾ ಕ್ರಿಸ್ಟಾ ಮತ್ತು ಹೈಕ್ರಾಸ್ ಎಂಪಿವಿಗೆ ಭಾರೀ ಬೇಡಿಕೆಯಿದ್ದು, ದೇಶದ ಪ್ರಮುಖ ನಗರಗಳಲ್ಲಿ ವಿತರಣೆ ಪಡೆಯಲು ಒಂದಷ್ಟು ಕಾಲ ಕಾಯಬೇಕು.

ಟಾಟಾ ಮೋಟಾರ್ಸ್‌ನ ಪ್ರಸಿದ್ಧ ಜಾಗ್ವಾರ್ ಲ್ಯಾಂಡ್ ರೋವರ್ ಮಾರಾಟ ವಿವರ


Tata: ಗುಡ್‌ನ್ಯೂಸ್.. ಟಾಟಾದಿಂದ 1.35 ಲಕ್ಷವರೆಗೆ ರಿಯಾಯಿತಿ..

ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಟಿಯಾಗೊ, ಟಿಗೂರ್, ಆಲ್ಟ್ರೋಜ್, ಪಂಚ್, ನೆಕ್ಸಾನ್, ಹ್ಯಾರಿಯರ್, ಸಫಾರಿ ಮತ್ತು ಕರ್ವ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಈ ಏಪ್ರಿಲ್ ತಿಂಗಳು ಇದೇ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಿದೆ. ವಿವಿಧ ಮಾಡೆಲ್‌ಗಳಿಗೆ ಅನುಗುಣವಾಗಿ ರೂ.15,000 ದಿಂದ ರೂ.1.35 ಲಕ್ಷವರೆಗೆ ಹಣಕಾಸಿನ ಪ್ರಯೋಜನವನ್ನು ಕೊಡಲಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿವನ್ನು ತಿಳಿಯೋಣ.

kia: ಕಿಯಾ ಉತ್ಪಾದನಾ ಘಟಕದಲ್ಲಿ 900 ಕಾರು ಎಂಜಿನ್‌ಗಳು ಕಳವು!

ಆಂಧ್ರಪ್ರದೇಶದಲ್ಲಿ 5 ವರ್ಷಗಳಲ್ಲಿ 900 ಕಿಯಾ ಕಾರುಗಳ ಎಂಜಿನ್‌ಗಳನ್ನು ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ದಕ್ಷಿಣ ಕೊರಿಯಾದ ಕಂಪನಿಯಾದ 'ಕಿಯಾ' ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಪೆನುಕೊಂಡದಲ್ಲಿ ಕಾರು ಉತ್ಪಾದನಾ ಘಟಕವನ್ನು ಹೊಂದಿದ್ದು, ಇಲ್ಲಿ ಕಾರಿನ ಸಂಪೂರ್ಣ ನಿರ್ಮಾಣ ಪ್ರಕ್ರಿಯೆ ನಡೆಯುತ್ತದೆ. ಉತ್ಪಾದನಾ ಘಟಕಕ್ಕೆ ಹೋಗುವ ದಾರಿಯಲ್ಲಿ ಮತ್ತು ಒಳಗಿನಿಂದ ಎಂಜಿನ್‌ಗಳನ್ನು ಕಳವು ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಕಳ್ಳತನದ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಪೊಲೀಸರು ತಂಡಗಳನ್ನು ರಚಿಸಿದ್ದು, ಹಲವಾರು ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಹೊಸ ಸ್ಕೂಟರ್ ಬಿಡುಗಡೆ!

ಪ್ರತಿಯೊಬ್ಬರಿಗೂ ಎಲೆಕ್ಟ್ರಿಕ್ ವಾಹನಗಳನ್ನು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವ ಉದ್ದೇಶದಿಂದ, ಗ್ರೀವ್ಸ್ ಕಾಟನ್ ಲಿಮಿಟೆಡ್ (GCL)ನ ಭಾಗವಾದ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (GEML) ಅಡಿಯಲ್ಲಿ ಬರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಆಂಪಿಯರ್, ಹೊಸ ರಿಯೊ 80 ಎಂಬ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. ಈ ಹೊಸ ಸ್ಕೂಟರ್ ಅನ್ನು ದೈನಂದಿನ ಬಳಕೆಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದ್ದು, ಸ್ಮಾರ್ಟ್, ಸುರಕ್ಷಿತ ಮತ್ತು ವೆಚ್ಚಗಳನ್ನು ನಿಯಂತ್ರಣದಲ್ಲಿಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

5-ಸ್ಟಾರ್ ಸೇಫ್ಟಿ, 34 Km ಮೈಲೇಜ್.. 6.84 ಲಕ್ಷ, ಆದರೂ ಈ ಪ್ರಖ್ಯಾತ..

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಜನಪ್ರಿಯ ಸೆಡಾನ್ ಎಂದೇ ಹೆಸರುವಾಸಿಯಾಗಿದ್ದು, ಗ್ರಾಹಕರ ನೆಚ್ಚಿನ ಕಾರಾಗಿದೆ. ಇತ್ತೀಚೆಗೆ, ಎಲ್ಲ ವಾಹನ ತಯಾರಕ ಕಂಪನಿಗಳು ಈ ಮಾರ್ಚ್ ತಿಂಗಳ ಕಾರು ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿವೆ. ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ ಕಾರುಗಳ ಪಟ್ಟಿಯಲ್ಲಿ ಇದೇ 'ಡಿಜೈರ್' ಎಂಟನೇ ಸ್ಥಾನದಲ್ಲಿದೆ. ಆದರೂ ಮಾರಾಟ ಪ್ರಮಾಣ ಮಾತ್ರ ಒಂದಷ್ಟು ಕುಸಿತವಾಗಿದೆ.
Advertisement

ಬಂದಿದ್ದು ಯಾರೆಂದು ಗೊತ್ತಿಲ್ಲದೆ ಬಾಲ ಬಿಚ್ಚಿದ ಬಂಕ್ ಸಿಬ್ಬಂದಿ

ಪೆಟ್ರೋಲ್‌ ಬಂಕ್‌ಗಳಲ್ಲಿ ನಿತ್ಯ ಕೋಟ್ಯಾಂತರ ಮಂದಿ ಇಂಧನಕ್ಕಾಗಿ ಭೇಟಿ ನೀಡುತ್ತಾರೆ. ಬಂಕ್‌ಗಳು ಕೂಡ ಸಾರ್ವಜನಿಕರಿಗಾಗಿ ಕೆಲವು ಸೇವೆಗಳನ್ನು ಒದಗಿಸಲು ಬದ್ಧವಾಗಿರುತ್ತವೆ. ಆದರೆ ಈ ಸೇವಗಳ ಬಗ್ಗೆ ಹಲವರಿಗೆ ಗೊತ್ತೇ ಇಲ್ಲ. ಭಾರತದ ಪೆಟ್ರೋಲ್ ಬಂಕ್‌ಗಳಲ್ಲಿ ಕೆಲವು ಉಚಿತ ಸೌಲಭ್ಯಗಳ ಲಾಭವನ್ನು ನೀವು ಕೂಡ ಪಡೆಯಬಹುದು. ಇವುಗಳಲ್ಲಿ ಒಂದು ಶೌಚಾಲಯದ ಬಳಕೆ. ಕೇವಲ ಇಂಧನಕ್ಕಾಗಿ ಬರುವವರು ಮಾತ್ರವಲ್ಲ, ಎಲ್ಲರೂ ಈ ಶೌಚಾಲಯವನ್ನು ಬಳಸಬಹುದು. ಒಂದು ವೇಳೆ ಇದಕ್ಕೆ ನಿರಾಕರಿಸುವ ಬಂಕ್ ಸಿಬ್ಬಂದಿ ವಿರುದ್ಧ ನೀವು ಪ್ರಶ್ನಿಸುವ ಹಕ್ಕನ್ನು ಹೊಂದಿದ್ದೀರ.

Bengaluru 2nd Airport: ಸ್ಥಳ ಪರಿಶೀಲನೆ.. ಶೀಘ್ರ ಬೆಂಗಳೂರಿನ..

ಬೆಂಗಳೂರು ಐಟಿ ಹಬ್ ಆಗಿದ್ದು, ಕ್ಷಿಪ್ರಗತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಮೂಲಕ ಓಡಾಟ ನಡೆಸುತ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಾಜ್ಯ ಸರ್ಕಾರ ಬೆಂಗಳೂರಿನ ನಿವಾಸಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಮುಂದಾಗಿದೆ. ನೂತನ ವಿಮಾನ ನಿಲ್ದಾಣಕ್ಕಾಗಿ ಮೂರು ಸ್ಥಳಗಳನ್ನು ಆಯ್ಕೆ ಮಾಡಿತ್ತು. ಈ ಸಂಬಂಧ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೂ (ಎಎಐ) ಪ್ರಸ್ತಾವನೆಯನ್ನು ಸಲ್ಲಿಸಿತ್ತು.

ಅಗ್ಗದ ಬೆಲೆಯ ಬೆಸ್ಟ್ ಟಾಪ್-3 ಗರಿಷ್ಟ ಸುರಕ್ಷತಾ ಕಾರುಗಳು ಇವೆ

ಹಣ ವೆಚ್ಚಿಸಲು ಸಿದ್ದವಿದ್ದರೂ ಯಾವ ಕಾರು ಖರೀದಿಸಬೇಕು ಎಂಬ ಗೊಂದಲದಲ್ಲಿ ಗ್ರಾಹಕರಿದ್ದಾರೆ. ಕಾರು ತಯಾರಕರು ಕೂಡ ಗರಿಷ್ಟ ಸುರಕ್ಷತೆಯನ್ನು ಒದಗಿಸುವ ಜೊತೆಗೆ ಕಡಿಮೆ ಬೆಲೆಯಲ್ಲಿ ಒಂದಷ್ಟು ಕಾರುಗಳನ್ನು ನೀಡುತ್ತಿದ್ದಾರೆ. ಅಗ್ಗದ ಬೆಲೆಯಲ್ಲಿ ಬೆಸ್ಟ್ ಸೇಫ್ಟಿ ಒದಗಿಸುವ ಮೂರು ಪ್ರಮುಖ ಬ್ರಾಂಡ್‌ಗಳ ಮೂರು ಜನಪ್ರಿಯ ಕಾರುಗಳ ಬಗ್ಗೆ ಇಲ್ಲಿ ವಿವರಿಸಿದ್ದೇವೆ. ಭಾರತದಲ್ಲಿ ಸುರಕ್ಷಿತ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಹಕರು ಆರು ಏರ್‌ಬ್ಯಾಗ್‌ಗಳನ್ನು ಒಳಗೊಂಡ ಕನಿಷ್ಟ ಸೇಫ್ಟಿ ಫೀಚರ್ಸ್ ಒದಗಿಸುವ ಕಾರುಗಳು ಇಲ್ಲಿವೆ.

Hero: 'ರಸ್ತೆ ರಾಜ' ಹೊಸ ಹೀರೋ ಕರಿಜ್ಮಾ ಬೈಕ್ ಕುರಿತ ಪ್ರಮುಖಾಂಶಗಳಿವು

ಹೀರೋ ಕರಿಜ್ಮಾ ಎಕ್ಸ್ಎಂಆರ್ 210 (Hero Karizma XMR 210) ಯುವಕರ ನೆಚ್ಚಿನ ಬೈಕ್‌ ಆಗಿದೆ. ಸೋಮವಾರ ಈ ಮೋಟಾರ್‌ಸೈಕಲ್‌ನ 2025ರ ಮಾಡೆಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಇದು ಒಂದಷ್ಟು ಹೊಸ ನವೀಕರಣಗಳನ್ನು ಪಡೆದುಕೊಂಡು ಮಾರಾಟಕ್ಕೂ ಬಂದಿದ್ದು, ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. ನೀವು ನೂತನ ಹೀರೋ ಕರಿಜ್ಮಾ ಎಕ್ಸ್ಎಂಆರ್ 210 ಬೈಕ್‌ನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಬನ್ನಿ, ಈ ಮೋಟಾರ್‌ಸೈಕಲ್‌ನ ಬೆಲೆ ಹಾಗೂ ವಿಶೇಷತೆಗಳನ್ನು ಒಳಗೊಂಡ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.

Tata: ಎದುರಾಳಿಗಳಿಗೆ ಶುರುವಾಯ್ತು ನಡುಕ.. ಟಾಟಾದಿಂದ ಹೊಸ ಸಿಎನ್‌ಜಿ..

ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿದೆ. ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಹಲವು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಆದರಲ್ಲೂ ಕರ್ವ್ ಕೂಪೆ ಎಸ್‌ಯುವಿಯ 'ಡಾರ್ಕ್ ಎಡಿಷನ್'ನ್ನು ಶೀಘ್ರದಲ್ಲೇ ಮಾರಾಟಕ್ಕೆ ತರಲಿದೆ. ಈ ಕಾರನ್ನು ವಿವಿಧ ಡೀಲರ್‌ಶಿಪ್‌ಗಳಿಗೂ ತಲುಪಿಸುವ ಕಾರ್ಯಕ್ಕೂ ಕಂಪನಿಯೂ ಚಾಲನೆ ನೀಡಿದೆ. ಸದ್ಯ, ಇದೇ 'ಟಾಟಾ ಕರ್ವ್' ಕೂಪೆ ಎಸ್‌ಯುವಿ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯಲ್ಲಿಯೂ ಅತಿ ಶೀಘ್ರದಲ್ಲೇ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ.

Lakshmi Nivasa ; ಶ್ರೀಕಾಂತ್ ಸಾವಿನ ಸುತ್ತ ಅನುಮಾನ ಸಿದ್ದು ಗೆ ಹೆಚ್ಚಿದ ತಳಮಳ..!


Bajaj: 80ರ ದಶಕವನ್ನು ಆಳಿದ್ದ ಬಜಾಜ್ ಚೇತಕ್‌ಗೆ ಮತ್ತೆ ನಂ.1 ಸ್ಥಾನ

ಭಾರತೀಯ ಎಲೆಕ್ಟ್ರಿಕ್ ಸ್ಕೂಟರ್ ವಲಯದಲ್ಲಿ ಹಲವು ಬ್ರಾಂಡ್‌ಗಳಿದ್ದರೂ, ಬಜಾಜ್ ಮಾತ್ರ ತನ್ನ ಜನಪ್ರಿಯ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಹೊಸ ಅಲೆ ಎಬ್ಬಿಸಿದೆ. 2024 - 25ರ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಭಾರತೀಯ ಎಲೆಕ್ಟ್ರಿಕ್ ದ್ವಿ-ಚಕ್ರ ವಾಹನ ವಿಭಾಗದಲ್ಲಿ ಬಜಾಜ್ ಚೇತಕ್ (Bajaj chetak) ಶೇ 29 ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ನಂ.1 ಸ್ಥಾನವನ್ನು ಧಕ್ಕಿಸಿಕೊಂಡಿದೆ. ಈ ಮೈಲಿಗಲ್ಲು ವೈವಿಧ್ಯಮಯ ಗ್ರಾಹಕರಿಗೆ ಆದ್ಯತೆಯ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಬಜಾಜ್ ಚೇತಕ್‌ನ ಸ್ಥಾನವನ್ನು ಬಲಪಡಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

ವಾಟ್ಸಾಪ್‌ನಲ್ಲಿ Meta AI ವೈಶಿಷ್ಟ್ಯ ತೆಗೆದುಹಾಕಬಹುದು.. ಹೇಗೆ ಗೊತ್ತಾ?


Advertisement

2025ರ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಕಾರು ಬಿಡುಗಡೆ

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಸದ್ಯ, ಈ ಕಾರನ್ನು ಒಂದಷ್ಟು ನವೀಕರಣಗೊಳಿಸಿ ಅದ್ದೂರಿಯಾಗಿಯೂ ಬಿಡುಗಡೆಗೊಳಿಸಿಲಾಗಿದೆ. ನೂತನ ಎಸ್‌ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಗರಿಷ್ಠ ಶ್ರೇಣಿ ರೂಪಾಂತಗಳಲ್ಲಿ (ಟಾಪ್ ಎಂಡ್ ವೇರಿಯೆಂಟ್) ಮಾತ್ರ ದೊರೆಯುತ್ತಿದ್ದ 6-ಏರ್‌ಬ್ಯಾಗ್‌ನ್ನು ಸ್ಟ್ಯಾಂಡರ್ಡ್ ಆಗಿ ಎಲ್ಲ ರೂಪಾಂತರಗಳಲ್ಲಿ ಕೊಡಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ.. ಬರೋಬ್ಬರಿ 42 ದಿನಗಳ ರಜೆ


Top selling SUV's: ಮಾರ್ಚ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ

Top selling SUV's: ದೇಶದಲ್ಲಿ ಎಸ್‌ಯುವಿಗಳು ಹೆಚ್ಚಾಗಿ ಮಾರಾಟವಾಗುತ್ತಿವೆ, ಸೆಡಾನ್‌ಗಳಿಗೆ ಹೋಲಿಸಿದರೆ ಭಾರತೀಯ ಗ್ರಾಹಕರು ಹೆಚ್ಚಾಗಿ ಎಸ್‌ಯುವಿಗಳನ್ನು ಖರೀದಿಸುತ್ತಿರುವುದು ಇತ್ತೀಚಿನ ಮಾರಾಟ ಅಂಕಿಅಂಶಗಳ ಮೂಲಕ ಮತ್ತೊಮ್ಮೆ ಸಾಭೀತಾಗಿದೆ. ಎಸ್‌ಯುವಿಗಳು ಸದ್ಯ ಟ್ರೆಂಡ್ ನಲ್ಲಿವೆ. ಕಳೆದ ಕೆಲವು ತಿಂಗಳುಗಳಿಂದ ಮಾರುಕಟ್ಟೆ ಪ್ರವೃತ್ತಿಯನ್ನು ನೋಡಿದರೆ ಖರೀದಿದಾರರು ಎಸ್‌ಯುವಿಗಳಿಗೆ ಆದ್ಯತೆ ನೀಡಿದ್ದು, ಅವುಗಳಲ್ಲಿ ಸತತ ಕಳೆದ ಮೂರು ತಿಂಗಳುಗಳಿಂದ ಕ್ರೆಟಾ ಹೆಚ್ಚು ಮಾರಾಟವಾದ ವಾಹನವಾಗಿದೆ. ಇದರ ನಂತರ ಟಾಟಾ ಪಂಚ್, ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್ ಮಹೀಂದ್ರಾ ಸ್ಕಾರ್ಪಿಯೋದಂತಹ ಎಸ್‌ಯುವಿಗಳು ಹೆಚ್ಚಾಗಿ ಮಾರಾಟವಾಗಿವೆ.

ನೋಡೋಕೆ ಚೆಂದ.. ಹಳ್ಳಿ & ಪಟ್ಟಣಕ್ಕೂ ಸೈ: ಅತ್ಯುತ್ತಮ 5..

ದಿನನಿತ್ಯದ ಬಳಕೆಗಾಗಿ ಸ್ಕೂಟರ್‌ಗಳು ತೀರಾ ಅತ್ಯಗತ್ಯವಾಗಿವೆ. ಇವುಗಳನ್ನು ಮಹಿಳೆಯರು ಹಾಗೂ ಪುರುಷರು ಕೂಡ ಸುಲಭವಾಗಿ ಬಳಕೆ ಮಾಡಬಹುದು. ನೀವು ನೋಡುವುದಕ್ಕೆ ಹೆಚ್ಚು ಆಕರ್ಷಕವಾಗಿದ್ದು, ಹಳ್ಳಿ ಹಾಗೂ ಪಟ್ಟಣ ಪ್ರದೇಶದಲ್ಲಿ ಉಪಯೋಗಿಸಲು ಹೊಚ್ಚ ಹೊಸ ಪ್ರೀಮಿಯಂ ಸ್ಕೂಟರ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ರೂ.2 ಲಕ್ಷದೊಳಗೆ ದೊರೆಯುವ ಟಿವಿಎಸ್ ಎನ್‌ಟಾರ್ಕ್ 125, ಹೋಂಡಾ ಡಿಯೋ 125, ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್, ಯಮಹಾ ಏರೋಕ್ಸ್ 155 ಮತ್ತು ಹೀರೋ ಜೂಮ್ 160 ಮಾಡೆಲ್‌ಗಳು ಹೆಚ್ಚು ಸೂಕ್ತವಾಗಬಲ್ಲವು. ಬನ್ನಿ.. ಈ ಸ್ಕೂಟರ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

ನಾಳೆ Motorola Edge 60 Fusion ಸೇಲ್; ವಿಶೇಷತೆಗಳೇನು? ಆಫರ್, ಬೆಲೆ ಎಷ್ಟು?