ಸಖತ್ ಫೇಮಸ್ ಆಗಿರುವ 5 ಸೆಡಾನ್‌ಗಳಿವು: ಬೆಲೆ ಇಷ್ಟೇನಾ.. ವಿಶಾಲ..
ಆಟೋಮೊಬೈಲ್ಸ್
- 1 year, 6 month, 3 days ago
ಭಾರತದ ಕಾರು ಮಾರುಕಟ್ಟೆಯಲ್ಲಿ ಸೆಡಾನ್‌ಗಳಿಗೆ ಪ್ರತ್ಯೇಕವಾದ ಸ್ಥಾನವಿದೆ. ಈ ಕಾರುಗಳು ವಿಶಾಲವಿರುವ ಆಸನಗಳು ಹಾಗೂ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ದೊಡ್ಡ ಗಾತ್ರದ ಬೂಟ್ ಸ್ಪೇಸ್‌ನ್ನು ಹೊಂದಿರುತ್ತವೆ. ಇದರಿಂದ ಬಹುತೇಕ ಖರೀದಿದಾರರು ಸೆಡಾನ್‌ಗಳನ್ನು ತಮ್ಮ ಕುಟುಂಬದ ವಾಹನವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ನೀವು ಕೂಡ ಹೊಚ್ಚ ಹೊಸ ಕಾರೊಂದನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ, ಹೋಂಡಾ ಅಮೇಜ್, ಮಾರುತಿ ಸುಜುಕಿ ಸಿಯಾಜ್, ಹ್ಯುಂಡೈ ಔರಾ, ಮಾರುತಿ ಸುಜುಕಿ ಡಿಜೈರ್ ಹಾಗೂ ಟಾಟಾ ಟಿಗೂರ್ ಸೆಡಾನ್‌ಗಳು ಹೆಚ್ಚು ಸೂಕ್ತವಾಗಲಿವೆ. ಬನ್ನಿ.. ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.