Defender: ಇತ್ತೀಚೆಗೆ ಬಿಡುಗಡೆಯಾದ ಆಫ್‌ರೋಡ್ ಕಿಂಗ್ 'ಡಿಫೆಂಡರ್ ಆಕ್ಟ

ಭಾರತದಲ್ಲಿ ಇತ್ತೀಚೆಗೆ 4x4 ಐಷಾರಾಮಿ SUV ಆದ ಹೊಸ 'ಡಿಫೆಂಡರ್ ಆಕ್ಟಾ' (Defender OCTA) ಎಸ್‌ಯುವಿನ್ನು ರೂ. 2 ಕೋಟಿ 59 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಹೊರಭಾಗವು ಹೆಚ್ಚು ಆಕರ್ಷಕ ಹಾಗೂ ವಿಶಿಷ್ಟ ವಿನ್ಯಾಸದೊಂದಿಗೆ ನಿರ್ಮಾಣಗೊಂಡು ಈ ಬಾರಿ ತುಸು ಸವಾರಿ ಎತ್ತರವನ್ನು ಹೆಚ್ಚಿಸಲಾಗಿದೆ. ಮರುವಿನ್ಯಾಸಗೊಳಿಸಲಾದ ಬಂಪರ್‌ಗಳನ್ನು ಒದಗಿಸಲಾಗಿದ್ದು, ಕಠಿಣವಾದ ಇದರ ಅಂಡರ್‌ಬಾಡಿ ರಕ್ಷಣೆಯು ಚಾಲಕರು ಒರಟು ಭೂಪ್ರದೇಶದಲ್ಲೂ ಸುನಾಯಾಸವಾಗಿ ಓಡಿಸುವ ವಿಶ್ವಾಸವನ್ನು ಒದಗಿಸುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

TATA: ಶೀಘ್ರ ಲಕ್ಷುರಿ ಫೀಚರ್‌ನ ಟಾಟಾದ ಹೊಸ ಎಲೆಕ್ಟ್ರಿಕ್ ಕಾರು..

ಹೊಚ್ಚ ಹೊಸ ಟಾಟಾ ಹ್ಯಾರಿಯರ್ ಇವಿ (Tata Harrier EV) ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಕಾರನ್ನು ಜನವರಿಯಲ್ಲಿ ಅದ್ದೂರಿಯಾಗಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲೂ ಪ್ರದರ್ಶಿಸಲಾಗಿತ್ತು. ಇದು ಹೆಚ್ಚು ಆಕರ್ಷಕವಾದ ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದ್ದು, ಸ್ವಲ್ಪ ಹೆಚ್ಚಿನ ದರದಲ್ಲಿ ಮಾರಾಟಕ್ಕೆ ಬರಬಹುದು ಎಂದು ಹೇಳಲಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಭಾರತ ಮಾತ್ರವಲ್ಲ ವಿದೇಶದಲ್ಲೂ ಟಾಟಾ ಕಾರುಗಳಿಗೆ ಫುಲ್ ಡಿಮ್ಯಾಂಡ್

ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ TATA.ev, ಮಾರಿಷಸ್‌ ದೇಶದ ಪ್ರಮುಖ ಆಟೋಮೊಬೈಲ್ ವಿತರಕರಾದ ಅಲೈಡ್ ಮೋಟಾರ್ಸ್‌ನ ಸಹಯೋಗದೊಂದಿಗೆ, ಮಾರಿಷಸ್‌ ದೇಶದಲ್ಲಿ ಟಿಯಾಗೋ ಇವಿ (Tiago.ev), ಪಂಚ್ ಇವಿ (Punch.ev) ಮತ್ತು ನೆಕ್ಸಾನ್ (Nexon.ev) ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿದೆ. ಸುಧಾರಿತ ಹೈ - ವೋಲ್ಟೇಜ್ ಆರ್ಕಿಟೆಕ್ಚರ್‌ಗಳ ಮೇಲೆ ನಿರ್ಮಿಸಲಾದ ಈ EVಗಳು ಪ್ರಮುಖ ವೈಶಿಷ್ಟ್ಯಗಳು, ಅತ್ಯುತ್ತಮ ದರ್ಜೆಯ ಸುರಕ್ಷತೆ ಮತ್ತು ಸಾಟಿಯಿಲ್ಲದ ಸೌಕರ್ಯವನ್ನು ನೀಡುತ್ತವೆ ಎಂದು ಅಲ್ಲಿನ ಜನರಿಗೆ ಟಾಟಾ ಹೇಳಿಕೊಂಡಿದೆ.

ಈ ಜನಪ್ರಿಯ ಎಸ್‌ಯುವಿಗಳು ರೂ.12 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಲಭ್ಯ..

ಭಾರತದ ಕಾರು ಮಾರುಕಟ್ಟೆಯಲ್ಲಿ ಎಸ್‌ಯುವಿಗಳು ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಇವುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ನೀವು ಹೊಚ್ಚ ಹೊಸ ಎಸ್‌ಯುವಿಯೊಂದನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ, ರೂ.12 ಲಕ್ಷದೊಳಗೆ ಲಭ್ಯವಾಗುವ ಟಾಟಾ ಪಂಚ್, ಹ್ಯುಂಡೈ ಎಕ್ಸ್‌ಟರ್, ಕಿಯಾ ಸೈರಸ್, ಸ್ಕೋಡಾ ಕೈಲಾಕ್, ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಫ್ರಾಂಕ್ಸ್, ಮಾರುತಿ ಸುಜುಕಿ ಬ್ರೆಝಾ ಹಾಗೂ ಹೋಂಡಾ ಎಲಿವೇಟ್‌ ಕಾರುಗಳು ಹೆಚ್ಚು ಸೂಕ್ತವಾಗಲಿವೆ.
Advertisement

2-seater car: ಬೈಕ್ ಬೆಲೆಯಲ್ಲಿ ಹೊಸ 2-ಸೀಟರ್ ಕಾರು

ಇದೇ ವರ್ಷ ಜನವರಿಯಲ್ಲಿ ನಡೆದ ಭಾರತ್ ಮೊಬಿಲಿಟಿ ಎಕ್ಸ್‌ಪೋ 2025 (Bharat Mobility Expo 2025) ರಲ್ಲಿ ಸೋಲಾರ್ ಎಲೆಕ್ಟ್ರಿಕ್ ಕಾರುಗಳ ತಯಾರಕ ಕಂಪನಿಯಾದ 'ವೈವ್ ಮೊಬಿಲಿಟಿ', ತನ್ನ ಬಹುನಿರೀಕ್ಷಿತ ಇವಾ ಕಾಂಪ್ಯಾಕ್ಟ್ ಸೋಲಾರ್ ಎಲೆಕ್ಟ್ರಿಕ್ 2-ಸೀಟರ್ ಕಾರನ್ನು (2-seater car) ಬಿಡುಗಡೆ ಮಾಡಿದೆ. ಟ್ರಾಫಿಕ್ ದಟ್ಟಣೆ, ಸೀಮಿತ ಪಾರ್ಕಿಂಗ್ ಸ್ಥಳ ಮತ್ತು ಹೆಚ್ಚುತ್ತಿರುವ ಇಂಧನ ವೆಚ್ಚಗಳಂತಹ ನಗರ ಜೀವನದ ಸವಾಲುಗಳನ್ನು ನಿಭಾಯಿಸಲು ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಬೆಲೆ ಹಾಗೂ ವಿಶೇಷತೆಗಳನ್ನು ಇಲ್ಲಿ ವಿವರಿಸಲಾಗಿದೆ.

ಯುಗಾದಿ ಶುಭಾಶಯಗಳು: ಕ್ರೋಧಿ ನಾಮ ಸಂವತ್ಸರಕ್ಕೆ ಈ ರೀತಿ ಶುಭ ಕೋರಿ

ಹಿಂದೂ ಪಂಚಾಗದ ಪ್ರಕಾರ ಏಪ್ರಿಲ್ 13ಕ್ಕೆ ಪ್ಲವ ನಾಮ ಸಂವತ್ಸರ, ಅಂದ್ರೆ ಹೊಸ ವರ್ಷ. ಹೊಸತನ್ನು ಹೊತ್ತು ಯುಗಾದಿ ಬರುತ್ತದೆ. ಎಲ್ಲರಿಗೂ ಹೊಸ ವರ್ಷದ, ಪ್ಲವ ನಾಮ ಸಂವತ್ಸರದ ಶುಭಾಶಯಗಳು...

ಶ್ರೀ ಶಾರ್ವರಿ ಸಂವತ್ಸರ ಸಿಹಿಗಿಂತ ಕಹಿಯೇ ಹೆಚ್ಚಿತ್ತು, ಕೊರೊನಾ ಎಂಬ ಮಹಾಮಾರಿ ನಮ್ಮೆಲ್ಲರ ಬದುಕಿನ ಮೇಲೆ ತುಂಬಾ ಪರಿಣಾಮ ಬೀರಿತ್ತು. ನಾವೀಗ ಪ್ಲವ ನಾಮ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಹೊಸ ವರ್ಷದಲ್ಲಿ ಕಹಿಯೆಲ್ಲಾ ದೂರವಾಗಿ ಸಿಹಿ ಹೆಚ್ಚಲಿ ಎಂಬ ನಿರೀಕ್ಷೆ ನಮ್ಮೆಲ್ಲರದ್ದೂ...

ಈ ಯುಗಾದಿಗೆ ನಿಮ್ಮ ಪ್ರೀತಿ ಪಾತ್ರರರಿಗೆ ಯುಗಾದಿ ಶುಭಾಶಯ ಕೋರಲು ಕನ್ನಡ ಬೋಲ್ಡ್ ಸ್ಕೈ ಶುಭಾಶಯಗಳನ್ನು ನೀಡಿದೆ.

Maruti: ಲಕ್ಷುರಿ ಫೀಚರ್ಸ್‌.. ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರು..

ಬಹುನೀರಿಕ್ಷಿತ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೆ ದಿನಗಣನೇ ಶುರುವಾಗಿದೆ. ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಈ ಕಾರು, ಅತಿ ಶೀಘ್ರದಲ್ಲೇ ಮಾರಾಟಕ್ಕೆ ಬರಲಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಇದೇ ಏಪ್ರಿಲ್‌ನಲ್ಲಿ ಗ್ರಾಹಕರ ಖರೀದಿಗೆ ದೊರೆಯಬಹುದು ಎನ್ನಲಾಗಿದೆ. ಆದರೆ, ಈ ಕುರಿತಂತೆ ಕಂಪನಿ ಕಡೆಯಿಂದ ಅಧಿಕೃತ ವಿವರಗಳು ಲಭ್ಯವಾಗಿಲ್ಲ. ಬನ್ನಿ.. ನೂತನ ಇ-ವಿಟಾರಾದ ನಿರೀಕ್ಷಿತ ಬೆಲೆ ಎಷ್ಟು.. ಯಾವೆಲ್ಲ ವಿಶೇಷತೆಗಳಿಗೆ ಸಾಕ್ಷಿಯಾಗಿದೆ ಎಂಬುದನ್ನು ತಿಳಿಯೋಣ.

ಶೀಘ್ರದಲ್ಲೆ ಹೊಸ ಫೋಕ್ಸ್‌ವ್ಯಾಗನ್ ಟಿಗುವಾನ್ R-ಲೈನ್ ಬಿಡುಗಡೆ

ಭಾರತದಲ್ಲಿ ಹೊಸ ಫೋಕ್ಸ್‌ವ್ಯಾಗನ್ ಟಿಗುವಾನ್‌ನ (Volkswagen Tiguan) ಸ್ಪೋರ್ಟಿ ಎಡಿಷನ್ ಆಗಿರುವ ''R'' ಲೈನ್ ಆವೃತ್ತಿಯನ್ನು ಕಂಪನಿ ಪರಿಚಯಿಸಲು ಸಜ್ಜಾಗಿದೆ. ಶೀಘ್ರದಲ್ಲೇ ಪರಿಚಯಿಸಲಿರುವ ಈ ಪ್ರಮುಖ ಎಸ್‌ಯುವಿ ಗಮನಾರ್ಹವಾದ 'ಆರ್' ಥೀಮ್‌ನ ಡಿಸೈನ್ ಮತ್ತು ಪ್ರೀಮಿಯಂ ಸೌಕರ್ಯದೊಂದಿಗೆ ಬರುತ್ತದೆ. ಅಲ್ಲದೇ ಹೊಸ ಟಿಗುವಾನ್ ಆರ್ - ಲೈನ್ ಸಂಪೂರ್ಣವಾಗಿ ಹೊಸ ವಿನ್ಯಾಸ, ಗಮನಾರ್ಹ ವೈಶಿಷ್ಟ್ಯಗಳು, ಎಸ್‌ಯುವಿಯ ಮುಂಭಾಗವು ಎಲ್ಇಡಿ ಪ್ಲಸ್ ಹೆಡ್‌ಲೈಟ್‌ಗಳು ಮತ್ತು ಗಾಜಿನಿಂದ ಆವೃತವಾದ ಪವರ್‌ಫುಲ್ ನೋಟವನ್ನು ಹೊಂದಿದೆ.

34 Km ಮೈಲೇಜ್.. 6 ಏರ್‌ಬ್ಯಾಗ್‌ನ ಅಗ್ಗದ ಮಾರುತಿ ಆಲ್ಟೊ ಕಾರು..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಇದನ್ನು 6 ಏರ್‌ಬ್ಯಾಗ್‌ನೊಂದಿಗೆ ನವೀಕರಿಸಲಾಗಿದ್ದು, ಕನಿಷ್ಠ ರೂ.4.23 ಲಕ್ಷ ಹಾಗೂ ಗರಿಷ್ಠ ರೂ.6.21 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ನೀವು ಕೂಡ ಹೊಚ್ಚ ಹೊಸ ಆಲ್ಟೊ ಕೆ10 ಕಾರನ್ನು ಖರೀದಿಸಲು ಆಲೋಚಿಸಿದ್ದೀರಾ.. ನಾವಿಲ್ಲಿ ಈ ನೂತನ ಹ್ಯಾಚ್‌ಬ್ಯಾಕ್‌ನ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.

Ashok Layland: ಭರ್ಜರಿ ಆರ್ಡರ್ ಬಾಚಿಕೊಂಡ ಅಶೋಕ್ ಲೇಲ್ಯಾಂಡ್!

ಹಿಂದೂಜಾ ಗ್ರೂಪ್‌ನ ಭಾರತದ ಪ್ರಮುಖ ಕಂಪನಿ ಮತ್ತು ಭಾರತೀಯ ಸೇನೆಗೆ ಲಾಜಿಸ್ಟಿಕ್ಸ್ ವಾಹನಗಳ ಅತಿದೊಡ್ಡ ಪೂರೈಕೆದಾರರಾದ ಅಶೋಕ್ ಲೇಲ್ಯಾಂಡ್ (Ashok Layland), ಇಂದು ತನ್ನ ರಕ್ಷಣಾ ವ್ಯವಹಾರವು ರೂ. 700 ಕೋಟಿಗಿಂತ ಹೆಚ್ಚಿನ ಮೌಲ್ಯದ ಬಹು ಆರ್ಡರ್‌ಗಳನ್ನು ಗೆದ್ದಿದೆ ಎಂದು ಘೋಷಿಸಿದೆ. ಈ ಆರ್ಡರ್‌ಗಳ ಅಡಿಯಲ್ಲಿ ಸರಬರಾಜು ಮಾಡಲಾಗುವ ವಾಹನಗಳು ಕ್ಲೋಸ್-ಇನ್ ವೆಪನ್ ಸಿಸ್ಟಮ್ಸ್ (CIWS) ಕಾರ್ಯಕ್ರಮದ ಅಡಿಯಲ್ಲಿ ಸೈನ್ಯದ ಸಾಗಣೆ, ಲಾಜಿಸ್ಟಿಕ್ಸ್ ಮತ್ತು ಇತರ ವಿಶೇಷ ಮೊಬಿಲಿಟಿ ಅಗತ್ಯಗಳ ರಕ್ಷಣಾ ವಲಯದ ಅಗತ್ಯಗಳನ್ನು ಪೂರೈಸುತ್ತವೆ ಎಂದು ಅಶೋಕ್ ಲೇಲ್ಯಾಂಡ್ ಹೇಳಿದೆ.

Mahindra: ಈ ಫ್ಯಾಮಿಲಿ ಕಾರಿನ ಬೆಲೆ ಭಾರೀ ಇಳಿಕೆ.. 17 Km ಮೈಲೇಜ್..

ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಜನಪ್ರಿಯ ಎಸ್‍ಯುವಿಯಾಗಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಹಾಗೆಯೇ ಫ್ಯಾಮಿಲಿ ಕಾರಾಗಿರುವುದರಿಂದ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ಕಂಪನಿಯು ಈ 'ಎಕ್ಸ್‌ಯುವಿ700' ಎಸ್‍ಯುವಿಯನ್ನು ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿಸಲು ಮುಂದಾಗಿದ್ದು, ಇದೇ ಕಾರಿನ ಆಯ್ದ ರೂಪಾಂತರಗಳ (ವೇರಿಯೆಂಟ್) ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಿದೆ.
Advertisement

ಭಾರತದ ಮೊದಲ AI ಪರ್ಸನಲ್ ಅಸಿಸ್ಟೆಂಟ್ ಕಾರನ್ನು ಪರಿಚಯಿಸಿದ MG ಮೋಟಾರ್

JSW MG ಮೋಟಾರ್ ಇಂಡಿಯಾ, ತನ್ನ MY2025 ಆವೃತ್ತಿಯೊಂದಿಗೆ MG ಆಸ್ಟರ್ ಗೆ 'ದಿ ಬ್ಲಾಕ್‌ಬಸ್ಟರ್ SUV' ಎಂಬ ಹೊಸ ಹೆಸರನ್ನು ಘೋಷಿಸಿದೆ. ಇದು ತನ್ನ ಗ್ರಾಹಕರಿಗೆ ಆಟೋ-ಟೆಕ್ ಮಾಸ್ಟರ್‌ಪೀಸ್ ಅನ್ನು ತರುವ ಬ್ರ್ಯಾಂಡ್‌ನ ಅತ್ಯಾಕರ್ಷಕ ಪರ್ಫಾಮೆನ್ಸ್, ಅತ್ಯಾಧುನಿಕತೆ, ನಾವೀನ್ಯತೆ ಮತ್ತು ತಂತ್ರಜ್ಞಾನವನ್ನು ಒಂದೇ ಪ್ಯಾಕೇಜ್‌ನಲ್ಲಿ ನೀಡುವ ಕಾರಾಗಿದೆ. MG ಆಸ್ಟರ್ ಈಗ ತನ್ನ ಹೊಸ ಶೈನ್ ರೂಪಾಂತರದೊಂದಿಗೆ ರೂ. 12.5 ಲಕ್ಷ (ಎಕ್ಸ್-ಶೋರೂಮ್) ಕ್ಕಿಂತ ಕಡಿಮೆ ಬೆಲೆಯಲ್ಲಿ ಪನೋರಮಿಕ್ ಸನ್‌ರೂಫ್ ಅನ್ನು ನೀಡುವ ತನ್ನ ವಿಭಾಗದಲ್ಲಿನ ಏಕೈಕ SUV ಆಗಿದೆ ಎಂದು ಕಂಪನಿ ಹೇಳಿದೆ.

ಭಾರತೀಯ ಸೇನೆಯಿಂದ 2,978 ಯುನಿಟ್‌ಗಳ ಬೃಹತ್ ಆರ್ಡರ್ ಬಾಚಿಕೊಂಡ..

ಭಾರತೀಯ ಸೇನಾ ಪಡೆಗಳಿಂದ ಫೋರ್ಸ್ ಮೋಟಾರ್ಸ್ ಲಿಮಿಟೆಡ್ ಬೃಹತ್ ಆರ್ಡರ್ ಪಡೆದುಕೊಂಡಿದೆ. 2,978 ಯುನಿಟ್‌ 'ಫೋರ್ಸ್ ಗೂರ್ಖಾ' ಲೈಟ್ ವೆಹಿಕಲ್‌ನ್ನು (ಜಿಎಸ್ 4X4 800 ಕೆಜಿ ಸಾಫ್ಟ್ ಟಾಪ್) ಪೂರೈಸಲು ಕಂಪನಿಯು ಒಪ್ಪಂದವನ್ನು ಮಾಡಿಕೊಂಡಿದೆ. ಈ ಗೂರ್ಖಾ ಮಾಡೆಲ್‌ಗಳನ್ನು ಸೇನೆಗೆ ಗರಿಷ್ಠ ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಹಸ್ತಾಂತರ ಮಾಡಲಾಗುತ್ತದೆ. ನೂತನ ಫೋರ್ಸ್ ಗೂರ್ಖಾ ವೆಹಿಕಲ್‌ನ್ನು ಭೂ ಸೇನೆ ಹಾಗೂ ವಾಯು ಸೇನೆಗಳಲ್ಲಿ ಬಳಕೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಹೊಸ ಇಂಧನದಲ್ಲಿ ಓಡಲಿದೆ ಸುಜುಕಿ ಬರ್ಗ್ ಮ್ಯಾನ್ ಇ20! ವಿಶೇಷತೆಗಳೇನು?

2025ರ ಸುಜುಕಿ ಬರ್ಗ್ ಮ್ಯಾನ್ ಸ್ಟ್ರೀಟ್ ತನ್ನ ಎಲ್ಲಾ ವೇರಿಯೆಂಟ್‌ಗಳಲ್ಲಿ ಸ್ವಲ್ಪ ಬೆಲೆ ಪರಿಷ್ಕರಣೆಯನ್ನು ಪಡೆದಿದೆ. ಬರ್ಗ್ ಮ್ಯಾನ್ ಸ್ಟ್ರೀಟ್ ಇಎಕ್ಸ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.16 ಲಕ್ಷಗಳಾದರೆ, ಸ್ಟ್ಯಾಂಡರ್ಡ್ ಬರ್ಗ್ ಮ್ಯಾನ್ ಸ್ಟ್ರೀಟ್ ನ ಬೆಲೆಯು ರೂ.95,800ಗಳಾಗಿದೆ. ಸುಸ್ಥಿರ ಇಂಧನದತ್ತ ಭಾರತದ ಪ್ರಯತ್ನವನ್ನು ಬೆಂಬಲಿಸಲು, 2025 ರ ಸುಜುಕಿ ಬರ್ಗ್ ಮ್ಯಾನ್ ಸ್ಟ್ರೀಟ್ ಈಗ ಇ 20 ಇಂಧನ ಹೊಂದಿಕೆಯಾಗಿದೆ. ಅಂದರೆ ಇದು ಶೇಕಡಾ 20 ರಷ್ಟು ಎಥೆನಾಲ್‌ನೊಂದಿಗೆ ಬೆರೆಸಿದ ಪೆಟ್ರೋಲ್‌ನಲ್ಲಿ ಚಲಿಸುತ್ತದೆ.

ಓಲಾ, ಉಬರ್‌ಗೆ ಶಾಕ್: ಶೀಘ್ರದಲ್ಲೇ ಪ್ರಧಾನಿ ಮೋದಿ ಸರ್ಕಾರದಿಂದ..

ಓಲಾ, ಉಬರ್ ಓಟಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಶೀಘ್ರದಲ್ಲೇ 'ಸಹಕಾರ್ ಟ್ಯಾಕ್ಸಿ' ಹೆಸರಿನ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಯನ್ನು ಆರಂಭ ಮಾಡಲಿದೆ. ಈ ಮೂಲಕ ಪ್ರಯಾಣಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಬೈಕ್, ಕ್ಯಾಬ್ ಹಾಗೂ ಆಟೋ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದರಿಂದ ಚಾಲಕರು ಹಾಗೂ ಪ್ರಯಾಣಿಕರಿಗೆ ದೊಡ್ಡ ಮಟ್ಟದ ಲಾಭವಾಗುವ ನಿರೀಕ್ಷೆಯಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ

TVS: ಟಿವಿಎಸ್ ಜುಪಿಟರ್ CNG ಸ್ಕೂಟರ್ ಶೀಘ್ರದಲ್ಲೆ ಬಿಡುಗಡೆ!

ಟಿವಿಎಸ್ ಮೋಟಾರ್‌ ಕಂಪನಿ ಕಳೆದ ಜನವರಿಯಲ್ಲಿ ನಡೆದ ಆಟೋ ಎಕ್ಸ್‌ಪೋ 2025 (Auto Expo 2025) ರಲ್ಲಿ ಜುಪಿಟರ್ ಸಿಎನ್‌ಜಿ ಸ್ಕೂಟರ್ (TVS Jupiter CNG Scooter) ಅನ್ನು ಅನಾವರಣಗೊಳಿಸಿದೆ. ಇದು ವಿಶ್ವದ ಮೊದಲ ಸಿಎನ್‌ಜಿ ಸ್ಕೂಟರ್ ಆಗಿದೆ. ಕಂಪನಿಯು ಅಕ್ಟೋಬರ್ 2025 ರಲ್ಲಿ ಈ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಬಲ್ಲ ಮೂಲಗಳ ಪ್ರಕಾರ ಇದು 90,000 ರೂ.ನಿಂದ 1,00,000 ರೂ.ಗಳ ನಿರೀಕ್ಷಿತ ಬೆಲೆಯಲ್ಲಿ ಲಭ್ಯವಾಗಬಹುದು ಎನ್ನಲಾಗಿದೆ.

ಕಾರಿನಂತಹ ಫೀಚರ್ಸ್: ನಮ್ಮೂರ ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್..

ಬೆಂಗಳೂರಿನ ಅಲ್ಟ್ರಾವೈಲೆಟ್ (Ultraviolette), ಈ ತಿಂಗಳಾರಂಭದಲ್ಲಿ ನೂತನ ಟೆಸ್ಸೆರಾಕ್ಟ್ (Tesseract) ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಈ ಸ್ಕೂಟರ್‌ಗೆ ದೇಶೀಯ ಗ್ರಾಹಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬುಕ್ಕಿಂಗ್ ಪ್ರಾರಂಭಿಸಿದ ಕೇವಲ ಎರಡು ವಾರಗಳಲ್ಲಿ 50,000ಕ್ಕೂ ಅಧಿಕ ಗ್ರಾಹಕರು ಆರ್ಡರ್ ಮಾಡಿದ್ದರು. ಇದು ಅತ್ಯಂತ ಕೈಗೆಟುಕುವ ಬೆಲೆಯಲ್ಲೂ ಲಭ್ಯವಿದೆ. ನೀವು ಹೊಸ ಟೆಸ್ಸೆರಾಕ್ಟ್ ಸ್ಕೂಟರ್‌ನ್ನು ಖರೀದಿಸಬೇಕೇ.. ಹಾಗಾದರೆ, ಪ್ರಮುಖ 5 ಕಾರಣಗಳು ಇಲ್ಲಿವೆ.

ಅಕ್ಕನಿಂದ ಬೇರ್ಪಟ್ಟ ತಂಗಿ ಕಥೆ ಮುಕ್ತಾಯ; 'ಲಕ್ಷ್ಮೀಬಾರಮ್ಮ' ಫೇಲ್ ಆಗಿದ್ದೆಲ್ಲಿ?


Honda Shine: ಬಡವರ ಬಂಡಿ, ಮೈಲೇಜ್ ಕಿಂಗ್ 2025ರ ಹೋಂಡಾ ಶೈನ್ 100

ಭಾರತೀಯ ಕಮ್ಯೂಟರ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಎಷ್ಟೇ ಬೈಕ್‌ಗಳು ಇದ್ದರೂ, ಒಂದಷ್ಟು ವಾಹನಗಳು ಮಾತ್ರ ಸಖತ್ ಸದ್ದು ಮಾಡುತ್ತವೆ. ಅಂತಹ ಮೋಟಾರ್‌ಸೈಕಲ್‌ಗಳಲ್ಲಿ ಹೋಂಡಾ ಶೈನ್ 100 ಕೂಡ ಒಂದು, ಬಹುತೇಕ ಎಲ್ಲಾ ಬ್ರಾಂಡ್‌ಗಳು ತಮ್ಮ 100cc ಬೈಕ್ ವಿಭಾಗದಲ್ಲಿ ಹೊಸ ಅಪ್‌ಡೇಟ್‌ಗಳೊಂದಿಗೆ ಭಾರೀ ಪೈಪೋಟಿ ನೀಡುತ್ತಿರುವ ಕಾರಣ ಹೋಂಡಾ ಕೂಡ ತನ್ನ 2025ರಲ್ಲಿ ಹೋಂಡಾ ಶೈನ್ 100 (2025 Honda Shine 100) ಅನ್ನು ನವೀಕರಿಸಿ ಪರಿಚಯಿಸಿದೆ. ಇತ್ತೀಚೆಗೆ ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಯಾಗಿರುವ ಈ ಬೈಕ್‌ನ ಟಾಪ್ ವಿಶೇಷತೆಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.
Advertisement

6 ಏರ್‌ಬ್ಯಾಗ್‌ನೊಂದಿಗೆ ಭಾರೀ ಮೈಲೇಜ್ ನೀಡಬಲ್ಲ ಕಾರನ್ನು..

ಹೊಸ ಕಾರು ಖರೀದಿ ಮಾಡುವವರಿಗೆ ಸುರಕ್ಷತೆಯೊಂದಿಗೆ ಗರಿಷ್ಠ ಮೈಲೇಜ್ ಎಂಬುದು ಬಹುಮುಖ್ಯವಾದ ಆದ್ಯತೆಯಾಗಿರುತ್ತದೆ. ಆದರೆ, ಯಾವ ಕಾರನ್ನು ತೆಗೆದುಕೊಂಡರೆ ಇವೆರೆಡು ಅಂಶಗಳು ಒಟ್ಟೊಟ್ಟಿಗೆ ಸಿಗುತ್ತದೆ ಎಂಬುದು ತಿಳಿದಿರುವುದಿಲ್ಲ. ಅಂತಹ ಗ್ರಾಹಕರಿಗೆ 6 ಏರ್‌ಬ್ಯಾಗ್‌ನೊಂದಿಗೆ ಗರಿಷ್ಠ ಮೈಲೇಜ್ ನೀಡಬಲ್ಲ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಹಾಗೂ ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಕಾರುಗಳು ಹೆಚ್ಚು ಸೂಕ್ತವಾಗಬಲ್ಲವು. ಬನ್ನಿ ಈ ಕಾರುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹೊಸ ಬಹುಪಯೋಗಿ ಇ-ಸ್ಕೂಟರ್ ಬಿಡುಗಡೆ!

ದೇಶೀಯ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ನ್ಯೂಮೆರೋಸ್ ಮೋಟಾರ್ಸ್ (Numeros Motors), ತನ್ನ ಬಹು-ಉಪಯುಕ್ತ ಇ-ಸ್ಕೂಟರ್ ಡಿಪ್ಲೋಸ್ ಮ್ಯಾಕ್ಸ್ ಇವಿ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಡಿಪ್ಲೋಸ್ ಮ್ಯಾಕ್ಸ್ ಎಲೆಕ್ಟ್ರಿಕ್ ಸ್ಕೂಟರ್, ತನ್ನ ಪ್ರಮುಖ ಡಿಪ್ಲೋಸ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ವೈವಿಧ್ಯಮಯ ಅನ್ವಯಿಕೆಗಳಿಗಾಗಿ ವಿನ್ಯಾಸಗೊಳಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ. ಈ ವಾಹನವು ಗ್ರಾಹಕರಿಗೆ ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಉತ್ತಮ ಬಾಳಿಕೆಯನ್ನು ನೀಡುತ್ತದೆ. ಜೊತೆಗೆ ಗ್ರಾಹಕರ ಎಲ್ಲಾ ಅಗತ್ಯಗಳಿಗೆ ಸೂಕ್ತವಾಗಿರುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

Nissan: 2 ಹೊಸ ಕಾರುಗಳ ಬಿಡುಗಡೆಗೆ ಸಿದ್ಧತೆ.. ಮೊದಲಿಗೆ ಬರಲಿದೆ..

ಜಪಾನ್ ಮೂಲದ ನಿಸ್ಸಾನ್ (Nissan) ಪ್ರಖ್ಯಾತ ಕಾರು ತಯಾರಕ ಕಂಪನಿಯಾಗಿದೆ. ಭಾರತವು ಸೇರಿದಂತೆ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಾನಾ ಬಗೆಯ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಸದ್ಯ, ದೇಶೀಯವಾಗಿ ಎರಡು ಹೊಚ್ಚ ಹೊಸ ಕಾರುಗಳನ್ನು ಮಾರಾಟಕ್ಕೆ ತರಲು ಸಿದ್ಧತೆಯನ್ನು ನಡೆಸುತ್ತಿದೆ. ಅದನ್ನು ನೂತನ ಕಾರುಗಳ ಕುರಿತಂತೆ ಟೀಸರ್ ಬಿಡುಗಡೆಗೊಳಿಸುವ ಮೂಲಕ ಖಚಿತಪಡಿಸಿದೆ. ಎಲ್ಲವು ಅಂದುಕೊಂಡರೆ ನಡೆದರೆ, ಅತಿ ಶೀಘ್ರದಲ್ಲಿ ಈ ಹೊಸ ನಿಸ್ಸಾನ್ ಕಾರುಗಳು ಗ್ರಾಹಕರ ಖರೀದಿಗೂ ಲಭ್ಯವಾಗಲಿವೆ.

Defender: ಭಾರತದಲ್ಲಿ ಆಫ್‌ರೋಡ್ ಕಿಂಗ್ 'ಡಿಫೆಂಡರ್ ಆಕ್ಟಾ' ಬಿಡುಗಡೆ!

ಡಿಫೆಂಡರ್ ಭಾರತದಲ್ಲಿ 4x4 ಅತ್ಯಂತ ಕಠಿಣ, ಸಮರ್ಥ ಮತ್ತು ಐಷಾರಾಮಿ SUV ಆದ ಹೊಸ 'ಡಿಫೆಂಡರ್ ಆಕ್ಟಾ' (Defender OCTA) ಎಸ್‌ಯುವಿನ್ನು ಬಿಡುಗಡೆ ಮಾಡಿದೆ. ಈ ಹೈ - ಪರ್ಫಾಮೆನ್ಸ್ ಅಡ್ವೆಂಚರ್ ಐಕಾನಿಕ್ ಎಸ್‌ಯುವಿಯನ್ನು ಯಾವುದೇ ಭೂಪ್ರದೇಶವಾಗಿರಲಿ ಸುನಾಯಾಸವಾಗಿ ಮುನ್ನುಗ್ಗುವಂತೆ ವಿನ್ಯಾಸಗೊಳಿಸಲಾಗಿದೆ. ಹೊಸ ಡಿಫೆಂಡರ್ ಆಕ್ಟಾ ಬುಕಿಂಗ್‌ಗಳು ಶೀಘ್ರದಲ್ಲೇ ಅಧಿಕೃತವಾಗಿ ತೆರೆಯಲಿವೆ. ಇದರ ಬೆಲೆ ರೂ. 2 ಕೋಟಿ 59 ಲಕ್ಷ (ಎಕ್ಸ್-ಶೋರೂಂ) ವಿರಲಿದೆ. ಉತ್ಪಾದನೆಯ ಮೊದಲ ವರ್ಷದವರೆಗೆ ಲಭ್ಯವಿರುವ ಹೊಸ 'ಡಿಫೆಂಡರ್ ಆಕ್ಟಾ ಎಡಿಷನ್ ಒನ್' ಭಾರತದಲ್ಲಿ ರೂ. 2 ಕೋಟಿ 79 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಲಿದೆ.

Acer Faster Awards: ಮಹೀಂದ್ರಾ ಥಾರ್ ರಾಕ್ಸ್ & ಬಜಾಜ್ ಫ್ರೀಡಂ..

ದೇಶದ ಆಟೋಮೋಟಿವ್ ಮಾಧ್ಯಮಗಳ ಒಕ್ಕೂಟವಾಗಿ 'ಫಾಸ್ಟರ್' ಹೊರಹೊಮ್ಮಿದೆ. ಗುರುಗ್ರಾಮದಲ್ಲಿ ಬುಧವಾರ ಪ್ರಖ್ಯಾತ ಕಾರು & ದ್ವಿಚಕ್ರ ವಾಹನಗಳಿಗೆ ಕೊಡಲಾಗುವ ಏಸರ್ ಫಾಸ್ಟರ್ ಪ್ರಶಸ್ತಿ (Acer Faster Awards - 2025) ಸಮಾರಂಭಕ್ಕೆ ಅದ್ದೂರಿಯಾಗಿ ತೆರೆ ಬಿದ್ದಿದೆ. ಜನಪ್ರಿಯ ಆಫ್-ರೋಡ್ ಎಸ್‌ಯುವಿ ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx) ವರ್ಷದ ಕಾರೆಂಬ ಪ್ರಶಸ್ತಿಯನ್ನು ಪಡೆದರೆ, ಬಜಾಜ್ ಫ್ರೀಡಂ 125 (Bajaj Freedom 125) ವರ್ಷದ ಮೋಟಾರ್‌ಸೈಕಲ್ ಎಂಬ ಗೌರವಕ್ಕೆ ಪಾತ್ರವಾಯಿತು.