'ಮಾರುತಿ ಸುಜುಕಿ' ಮಾತೃ ಸಂಸ್ಥೆ ಸುಜುಕಿ ಮೋಟಾರ್ ಕಾರ್ಪೊರೇಷನ್ (Suzuki Motor Corporation), ವಿಶ್ವದಾದ್ಯಂತ ಹತ್ತಾರು ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಸದ್ಯ, ಎಲ್ಲ ದೇಶಗಳಲ್ಲಿಯೂ ಸಾಮಾನ್ಯ ವರ್ಗದ ಜನರು ಇಷ್ಟಪಟ್ಟು ಖರೀದಿ ಮಾಡುವ ಆಲ್ಟೋ (Alto) ಹ್ಯಾಚ್‌ಬ್ಯಾಕ್‌ನ್ನು ಹೊಸ ರೂಪದಲ್ಲಿ ಮಾರಾಟಕ್ಕೆ ತರಲು ತೆರೆಮರೆಯಲ್ಲಿ ಸಿದ್ದತೆಯನ್ನು ನಡೆಸುತ್ತಿದೆ ಎಂದು ವರದಿಯಾಗಿದೆ. ಎಲ್ಲವು ಅಂದುಕೊಂಡಂತೆ ನಡೆದಿರೆ, ಮುಂಬರುವ ವರ್ಷಗಳಲ್ಲಿ ಈ ಕಾರು ಗರಿಷ್ಠ ಮೈಲೇಜ್ ಹಾಗೂ ಕೈಗೆಟುಕುವ ಬೆಲೆಯಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಇತ್ತೀಚೆಗೆ ಬಿಡುಗಡೆಯಾದ ಡುಕಾಟಿ ಡೆಸರ್ಟ್‌ಎಕ್ಸ್ ಡಿಸ್ಕವರಿ ವಿಶೇಷತೆ
ಪ್ರಮುಖ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿರುವ ಡುಕಾಟಿ ಇತ್ತೀಚೆಗೆ ಭಾರತದಲ್ಲಿ ಡೆಸರ್ಟ್‌ಎಕ್ಸ್ ಡಿಸ್ಕವರಿ ಮೋಟಾರ್‌ಸೈಕಲ್ (Ducati DesertX Discovery) ಅನ್ನು ಬಿಡುಗಡೆ ಮಾಡಿದೆ. ಈ ಡೆಸರ್ಟ್‌ಎಕ್ಸ್ ಡಿಸ್ಕವರಿ ಮೋಟಾರ್‌ಸೈಕಲ್ ಎಕ್ಸ್ - ಶೋರೂಮ್ ಬೆಲೆ ರೂ. 21,78,200 ಗೆ ಎಲ್ಲಾ ಡುಕಾಟಿ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ವಿಶ್ವಾದ್ಯಂತ ಭಾರೀ ಜನಪ್ರಿಯತೆ ಹೊಂದಿರುವ ಡುಕಟಿ ಮೋಟಾರ್‌ಸೈಕಲ್‌ಗಳು ಇದೀಗ ಭಾರತದಲ್ಲಿ ಸದ್ದು ಮಾಡಲು ಸಜ್ಜಾಗಿದ್ದು, ಡುಕಾಟಿಯ ಈ ಪ್ರಮುಖ ಡೆಸರ್ಟ್‌ಎಕ್ಸ್ ಡಿಸ್ಕವರಿಯ ಪ್ರಮುಖಾಂಶಗಳು ಇಲ್ಲಿವೆ.
24.69 Km ಮೈಲೇಜ್.. 6.79 ಲಕ್ಷ.. ಹೊಸ ಮಾರುತಿ ಡಿಜೈರ್ ಟೂರ್ ಎಸ್..
ಮಾರುತಿ ಸುಜುಕಿ ಇಂಡಿಯಾ (Maruti Suzuki India), ಟ್ಯಾಕ್ಸಿ ಖರೀದಿ ಮಾಡಿ, ಬದುಕು ಕಟ್ಟಿಕೊಳ್ಳಬೇಕು ಎಂದು ಆಲೋಚಿಸಿರುವ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಇತ್ತೀಚೆಗೆ ಡಿಜೈರ್' ಸೆಡಾನ್‌ನ ಹೊಚ್ಚ ಹೊಸ ಟ್ಯಾಕ್ಸಿ ವರ್ಷನ್ 'ಟೂರ್ ಎಸ್'ನ್ನು ಮಾರಾಟಕ್ಕೆ ತಂದಿದೆ. ಇದು ಹೆಚ್ಚು ಅತ್ಯಾಧುನಿಕವಾದ ಡಿಸೈನ್ & ಫೀಚರ್‌ಗಳನ್ನು ಹೊಂದಿದೆ. ಬನ್ನಿ.. ಈ ನೂತನ ಡಿಜೈರ್ ಟೂರ್ ಎಸ್ (Dzire Tour S) ಕಾರಿನ ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.
Advertisement
Top-5 Cars: ಫೆಬ್ರವರಿ ತಿಂಗಳ ಮಾರಾಟದಲ್ಲಿ ಧೂಳೆಬ್ಬಿಸಿದ ಕಾರುಗಳ ಲಿಸ
ಭಾರತದಲ್ಲಿ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್‌ಗಳಿಂದ ಹಿಡಿದು ಎಸ್‌ಯುವಿಗಳು ಮತ್ತು ವಿಶಾಲವಾದ ಸೆಡಾನ್‌ಗಳವರೆಗೆ ಎಲ್ಲಾ ರೀತಿಯ ಕಾರುಗಳು ಸಿಗುತ್ತವೆ. ಮಧ್ಯಮ ಹಾಗೂ ಶ್ರೀಮಂತ ಕುಟುಂಬ ಸೇರಿದಂತೆ ಕೆಳ ಮಧ್ಯಮ ಕುಟುಂಬಗಳಿಗೂ ಕೈಗೆಟುಕುವ ಒಂದಷ್ಟು ಕಾರುಗಳು ಭಾರತದಲ್ಲಿ ಖರೀದಿಗೆ ಸಿಗುತ್ತವೆ. ಆದರೆ ಆಯ್ದ ಕೆಲವು ವಾಹನಗಳು ಮಾತ್ರ ಮಾರಾಟ ಪಟ್ಟಿಯಲ್ಲಿ ಪ್ರಾಬಲ್ಯ ಹೊಂದುತ್ತವೆ. ಹೆಚ್ಚಾಗಿ ಭಾರತದಲ್ಲಿ ಮಾರಾಟ ಕಾಣುವುದೇ ಹ್ಯಾಚ್‌ಬ್ಯಾಕ್‌ಗಳು, ಅದರಲ್ಲೂ ಮಾರುತಿ ಕಾರುಗಳು ಹೆಚ್ಚು ಮಾರಾಟ ಕಾಣುತ್ತವೆ. ಭಾರತದಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಅತಿ ಹೆಚ್ಚು ಮಾರಾಟ ಕಂಡ ಟಾಪ್-5 ಕಾರುಗಳು (Top-5 Cars) ಇಲ್ಲಿವೆ.
26+ Km ಮೈಲೇಜ್, 6ಕ್ಕೂ ಹೆಚ್ಚು ಆಸನಗಳು.. 6 ಲಕ್ಷದಿಂದ ಶುರು..
ಭಾರತದಲ್ಲಿ ವಿಭಕ್ತ ಕುಟುಂಬಗಳಂತೆ ಅವಿಭಕ್ತ ಕುಟುಂಬಗಳ ಸಂಖ್ಯೆಯೂ ಹೆಚ್ಚಿದೆ. ಬಹುತೇಕರು ಹೆಚ್ಚು ಆಸನ ಆಯ್ಕೆ ವ್ಯವಸ್ಥೆಯಿರುವ ಹೊಸ ಕಾರೊಂದನ್ನು ಖರೀದಿ ಮಾಡಲು ಹುಡುಕಾಟ ನಡೆಸುತ್ತಿರುತ್ತಾರೆ. ಆದರೆ, ಹಲವರಿಗೆ ಯಾವ ಕಾರನ್ನು ಖರೀದಿ ಮಾಡಿದರೆ, ಹೆಚ್ಚು ಉತ್ತಮ ಎಂಬ ಗೊಂದಲವಿರುತ್ತದೆ. ನಾವಿಲ್ಲಿ ದೊಡ್ಡ ಕುಟುಂಬಗಳಿಗೆ ಅತ್ಯುತ್ತಮ ಆಯ್ಕೆಯಾಗಬಲ್ಲ ಟಾಟಾ ಸಫಾರಿ, ಮಾರುತಿ ಸುಜುಕಿ ಎರ್ಟಿಗಾ, ರೆನಾಲ್ಟ್ ಟ್ರೈಬರ್, ಟೊಯೊಟಾ ರೂಮಿಯನ್, ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಹಾಗೂ ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರುಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.
ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಕಾಂಪ್ಯಾಕ್ಟ್ ಸೆಡಾನ್ ಆಗಿದ್ದರೂ ಆಧುನಿಕ ವಿನ್ಯಾಸದೊಂದಿಗೆ ವಿಕಸನಗೊಂಡಿದೆ. ಇದು ಉತ್ತಮ ಸವಾರಿ ಗುಣಮಟ್ಟ, ಆರಾಮದಾಯಕ ವೈಶಿಷ್ಟ್ಯಗಳು, ಐದು ಜನರಿಗೆ ಒಳಾಂಗಣ ಸ್ಥಳಾವಕಾಶ ಮತ್ತು ಸಿಎನ್‌ಜಿ ಹೊಂದಾಣಿಕೆಗೆ ಹೆಸರುವಾಸಿಯಾಗಿದೆ. ಇವೆಲ್ಲಕ್ಕಿಂತ ಮಖ್ಯವಾಗಿ ಸುರಕ್ಷತೆಯಲ್ಲೂ ಹೊಸ ದಾಖಲೆ ನಿರ್ಮಿಸಿ ಎಲ್ಲರನ್ನು ಅಚ್ಚರಿಗೊಳಿಸಿದೆ. ಈ ವರೆಗೆ ಯಾವುದೇ ಮಾರುತಿ ಕಾರಿಗೆ ಸಿಗದ 5-ಸ್ಟಾರ್ ಸೇಫ್ಟಿಯನ್ನು ದಕ್ಕಿಸಿಕೊಳ್ಳುವ ಮೂಲಕ ಮಾರುತಿ ಸುಜುಕಿ ಡಿಜೈರ್ ಡಿಜೈರ್ ಭಾರತದ ಸೆಡಾನ್ ವಿಭಾಗದಲ್ಲಿ ಅಚ್ಚುಮೆಚ್ಚಿನ ಕಾರಾಗಿ ಮುಂದುವರೆದಿದೆ.
ಹೊಸ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಬಾಸ್ ಎಡಿಷನ್ ಮಾರಾಟಕ್ಕೆ..
ಉದ್ಯಮಿ ಆನಂದ್ ಮಹೀಂದ್ರಾ ಒಡೆತನದ ಮಹೀಂದ್ರಾ & ಮಹೀಂದ್ರಾ (Mahindra & Mahindra) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ದೇಶೀಯವಾಗಿ ಕಂಪನಿಯು ವರ್ಷಗಳಿಂದ ಮಾರಾಟಗೊಳಿಸುವ 'ಸ್ಕಾರ್ಪಿಯೋ' ಪ್ರಖ್ಯಾತ ಎಸ್‌ಯುವಿಯಾಗಿದೆ. ಇತ್ತೀಚೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಹೊಚ್ಚ ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಬಾಸ್ ಎಡಿಷನ್ (Scorpio Classic Boss Edition) ಕಾರನ್ನು ಮಾರಾಟಕ್ಕೆ ತರಲಾಗಿದೆ. ಬನ್ನಿ.. ಈ ಎಸ್‌ಯುವಿಯ ವಿನ್ಯಾಸ ಹಾಗೂ ವೈಶಿಷ್ಟ್ಯಗಳು ಸೇರಿದಂತೆ ಪ್ರಮುಖಾಂಶಗಳ ಕುರಿತಂತೆ ಸಂಪೂರ್ಣವಾದ ವಿವರವನ್ನು ತಿಳಿಯೋಣ.
Ashok Leyland: ಪಕ್ಕದ ರಾಜ್ಯಕ್ಕೆ ಒಲಿದ ಬೃಹತ್ ಬಸ್ ಉತ್ಪಾದನಾ ಘಟಕ
ಹಿಂದೂಜಾ ಗ್ರೂಪ್‌ನ ಭಾರತದ ಪ್ರಮುಖ ಕಂಪನಿ ಮತ್ತು ಪ್ರಮುಖ ವಾಣಿಜ್ಯ ವಾಹನ ತಯಾರಕರಾದ ಅಶೋಕ್ ಲೇಲ್ಯಾಂಡ್ (Ashok Leyland), ಇಂದು ಆಂಧ್ರಪ್ರದೇಶದ ವಿಜಯವಾಡ ಬಳಿ ತನ್ನ ಹೊಸ ಬಸ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದೆ. ಈ ಘಟಕವನ್ನು ಇಂದು ಆಂಧ್ರಪ್ರದೇಶ ಸರ್ಕಾರದ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಸಂವಹನ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್ ಉದ್ಘಾಟಿಸಿದರು. ಸಮಾರಂಭದ ಭಾಗವಾಗಿ, ಅಶೋಕ್ ಲೇಲ್ಯಾಂಡ್ ಮತ್ತು ಹಿಂದೂಜಾ ಗ್ರೂಪ್ ಸ್ವಿಚ್ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್‌ನ ಕೀಲಿಗಳನ್ನು ಆಂಧ್ರಪ್ರದೇಶ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು.
Rapido: ವಿಡಿಯೋ.. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬಗ್ಗೆ ಜನಸಾಮಾನ್ಯರು..
ಸಾರ್ವಜನಿಕ ಸಾರಿಗೆ ವಿಧಾನದಲ್ಲಿ ಬೈಕ್ ಟ್ಯಾಕ್ಸಿ ಹಾಗೂ ಆಟೋಗಳು ಜನಸಾಮಾನ್ಯನಿಗೆ ಪರಿಣಾಮಕಾರಿ ಸೇವೆ ಒದಗಿಸುವ ಮೂಲಕ ಹೆಚ್ಚು ಜನಮನ್ನಣೆ ಗಳಿಸಿವೆ. ಬೆಂಗಳೂರು, ಮುಂಬೈ, ನವದೆಹಲಿ ಹಾಗೂ ಹೈದರಾಬಾದ್ ಸೇರಿದಂತೆ ಪ್ರಮುಖ ಮಹಾನಗರಗಳಲ್ಲಿ ಒಂದಷ್ಟು ಪ್ರಯಾಣಿಕರು ತಮ್ಮ ದಿನನಿತ್ಯದ ಓಡಾಟಕ್ಕಾಗಿ ಬೈಕ್ ಟ್ಯಾಕ್ಸಿ ಮತ್ತು ಆಟೋಗಳನ್ನು ಅವಲಂಭಿಸಿದ್ದಾರೆ. ಇವುಗಳಲ್ಲಿ ಪ್ರಯಾಣ ವೆಚ್ಚ ತುಂಬಾ ಕಡಿಮೆಯಿದ್ದು, ನಿರ್ದಿಷ್ಟ ಗಮ್ಯ ಸ್ಥಾನವನ್ನು ಸುಲಭವಾಗಿ ತಲುಪಬಹುದು.
ಟೊಯೊಟಾ ಇನ್ನೋವಾ ಹೈಕ್ರಾಸ್ (Toyota innova hycross) ದೇಶದ ಅತ್ಯಂತ ಜನಪ್ರಿಯ ಎಂಪಿವಿಗಳಲ್ಲಿ ಒಂದಾಗಿದೆ. ಇದರ ವಿಶಾಲತೆ, ಪ್ರೀಮಿಯಂ ಕ್ಯಾಬಿನ್ ಮತ್ತು ಪ್ರಾಯೋಗಿಕತೆಗೆ ಹೆಸರುವಾಸಿಯಾಗಿದೆ. ಈ ಬೃಹತ್ ಕಾರು 7 ಹಾಗೂ 8 ಆಸನಗಳ ಸಂರಚನೆಯಲ್ಲಿ ಖರೀದಿಗೆ ದೊರೆಯಲಿದೆ. ಇನ್ನೋವಾ ಹೈಕ್ರಾಸ್ ಅನ್ನು 10 ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಇದರ ಬೇಸ್ ವೇರಿಯೆಂಟ್ GX 7STR ಮತ್ತು ಟಾಪ್ ವೇರಿಯೆಂಟ್ ZX (0) ಹೈಬ್ರಿಡ್ ಆಗಿದೆ. ಬೆಲೆಗಳು 19,94,000 ರೂ.ಗಳಿಂದ ಪ್ರಾರಂಭವಾಗಿ 31,34,000 ರೂ.ಗಳವರೆಗೆ (ಎಕ್ಸ್ ಶೋರೂಂ) ಹೋಗುತ್ತದೆ.
50 Km ಮೈಲೇಜ್.. ರೂ.78,000, ಆಕ್ಟಿವಾ ಎದುರಾಳಿ ಟಿವಿಎಸ್..
ಟಿವಿಎಸ್ ಜುಪಿಟರ್ (TVS Jupiter) ಜನಪ್ರಿಯ ಸ್ಕೂಟರ್ ಆಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ ಬಹುತೇಕ ಎಲ್ಲ ದ್ವಿಚಕ್ರ ವಾಹನ ತಯಾರಕ ಕಂಪನಿಗಳು, ಈ ಫೆಬ್ರವರಿ ತಿಂಗಳ ಪ್ರಮುಖ ಬೈಕ್ ಹಾಗೂ ಸ್ಕೂಟರ್‌ಗಳ ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿವೆ. ಅದರಲ್ಲೂ 'ಜುಪಿಟರ್' ಸ್ಕೂಟರ್ ಸ್ಥಾನ ಪಡೆದಿದ್ದು, 'ಹೋಂಡಾ ಆಕ್ಟಿವಾ'ಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುತ್ತಿದೆ.
2023 ರಲ್ಲಿ ಮಿಲನ್‌ನಲ್ಲಿ ನಡೆದ EICMA ಮೋಟಾರ್‌ಸೈಕಲ್ ಪ್ರದರ್ಶನಲ್ಲಿ ಹೀರೋ ಮೋಟೋಕಾರ್ಪ್ ಕಂಪನಿಯು, ಭವಿಷ್ಯದಲ್ಲಿ ಬರಲಿರುವ ತನ್ನ ಕೆಲವು ಆಕರ್ಷಕ ಬೈಕ್‌ಗಳನ್ನು ಪ್ರದರ್ಶಿಸಿತ್ತು. ಈ ಮೋಟಾರ್ ಶೋನಲ್ಲಿ ಪ್ರಮುಖ ವಿಷಯವೆಂದರೆ ಕಾನ್ಸೆಪ್ಟ್ 2.5 R Xtunt ಎಂದು ಕರೆಯಲ್ಪಡುವ ಬೈಕ್ ಆಗಿತ್ತು. ಒಂದು ವರ್ಷದ ನಂತರ, ಈ ಬೈಕ್ ಕೆಲವು ವಿನ್ಯಾಸ ಬದಲಾವಣೆಗಳನ್ನು ಪಡೆದುಕೊಂಡು ಕೊನೆಗೂ ಮಾರುಕಟ್ಟೆಗೆ ಎಂಟ್ರಿಕೊಟ್ಟಿದೆ. ಹೌದು, ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೋ ತನ್ನ ಅತ್ಯಂತ ಪವರ್‌ಫುಲ್ ನೇಕೆಡ್ ಮೋಟಾರ್‌ಸೈಕಲ್ ಆಗಿ ಹೀರೋ ಎಕ್ಸ್‌ಟ್ರೀಮ್ 250R (2.5 R Xtunt) ಹೆಸರಿನಲ್ಲಿ ಕಂಪನಿ ಬೈಕ್ ಅನ್ನು ಪರಿಚಯಿಸಿದೆ.
TATA: ಹೊಸ ಕಾರು ಖರೀದಿಸಬೇಕೇ.. ಟಾಟಾದಿಂದ ಮತ್ತೆ ಬೆಲೆ ಏರಿಕೆ ಶಾಕ್!
ಟಾಟಾ ಮೋಟಾರ್ಸ್ (Tata Motors) ಅತಿ ದೊಡ್ಡ ಸ್ವದೇಶಿ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಾರು ಹಾಗೂ ಬಸ್‌ಗಳನ್ನು ಒಳಗೊಂಡಂತೆ ಹಲವು ವಾಹನಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಕೆಲವೇ ದಿನಗಳ ಹಿಂದೆ, ಏಪ್ರಿಲ್ 1, 2025 ರಿಂದ ಜಾರಿಗೆ ಬರುವಂತೆ ಎಲ್ಲ ವಾಣಿಜ್ಯ ವಾಹನಗಳ (Commercial Vehicles) ಬೆಲೆಯನ್ನು ಶೇಕಡ 2% ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿತ್ತು. ಅದರ ಬೆನ್ನಲ್ಲೇ ಕಾರು ಸೇರಿದಂತೆ ಪ್ರಯಾಣಿಕ ವಾಹನಗಳ (Passenger vehicles) ದರವನ್ನು ಅಧಿಕಗೊಳಿಸುವುದಾಗಿ ತಿಳಿಸಿದೆ.
330 Km ಮೈಲೇಜ್.. 90,000 ಬೆಲೆ, ಬಜಾಜ್ ಫ್ರೀಡಂ 125 ಸಿಎನ್‌ಜಿ..
ಬಜಾಜ್ ಫ್ರೀಡಂ 125 (Bajaj Freedom 125) ವಿಶ್ವದ ಮೊದಲ ಸಿಎನ್‌ಜಿ ಮೋಟಾರ್‌ಸೈಕಲ್ ಆಗಿದೆ. ಇದು ಹೆಚ್ಚು ಅತ್ಯಾಧುನಿಕವಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿ ಸಿಗುವುದರಿಂದ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಅದಕ್ಕೆ ತಕ್ಕಂತೆ ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಬಜಾಜ್ ಕಂಪನಿಯು ಇದೇ ಫ್ರೀಡಂ ಬೈಕ್ ಮಾರಾಟದಲ್ಲಿ ಹೊಸದೊಂದು ದಾಖಲೆಯನ್ನು ನಿರ್ಮಿಸಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಸನ್ನಿ ಲಿಯೋನ್ ಹೆಸರು ಕೇಳುತ್ತಿದ್ದಂತೆ ಯಶ್ ಫುಲ್ ಸೈಲೆಂಟ್; ವೀಡಿಯೋ ವೈರಲ್
ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಉತ್ತಮ ಮಾರಾಟ ಕಾಣುವ ಕಾರುಗಳ ಸಾಲಿನಲ್ಲಿ ಪ್ರಮುಖ ಕಾರಾಗಿ ಗುರ್ತಿಸಿಕೊಂಡಿದೆ. ಕಳೆದ ವರ್ಷ ಹೊಸ ಅಪ್‌ಡೇಟ್‌ಗಳನ್ನು ಪಡೆದುಕೊಂಡು ಬಿಡುಗಡೆಯಾದ ಬಳಿಕ ಈ ಕಾರಿಗೆ ಬೇಡಿಕೆ ಇನ್ನೂ ಹೆಚ್ಚಾಗಿದೆ. ಹೊಸ ಮುಂಭಾಗದ ಡಿಸೈನ್ ಹಾಗೂ ಮೈಲೇಜ್ ಹೆಚ್ಚಳದೊಂದಿಗೆ ಗ್ರಾಹಕರ ಗಮನ ಸೆಳೆದಿದೆ. ಅಂದಹಾಗೆ ಈ ಕಾರು ಕಳೆದ ತಿಂಗಳು ಫೆಬ್ರವರಿಯಲ್ಲಿ ಭರ್ಜರಿ ಮಾರಾಟವನ್ನು ದಾಖಲಿಸಿದೆ. ಒಂದು ತಿಂಗಳಲ್ಲಿ ಬರೋಬ್ಬರಿ 15 ಸಾವಿರಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿರುವುದಾಗಿ ಕಂಪನಿ ಬಹಿರಂಗಪಡಿಸಿದೆ.
ಯಾರು ಊಹಿಸಿರಲಿಲ್ಲ: ಎಂಜಿ - ಜಿಂದಾಲ್ ರಣತಂತ್ರ.. 4.99 ಲಕ್ಷಕ್ಕೆ..
ಭಾರತದ ಕಾರು ಮಾರುಕಟ್ಟೆಯು ವ್ಯಾಪಕವಾಗಿ ಬೆಳೆಯುತ್ತಿದೆ. ಅದರಲ್ಲೂ ಎಂಜಿ ಮೋಟಾರ್ & ಜಿಂದಾಲ್ ಕಂಪನಿಗಳು ವ್ಯಾಪಾರ ಪಾಲುದಾರಿಕೆ ಹೊಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.. ಇವೆರೆಡು ಕಂಪನಿಗಳ ಒಪ್ಪಂದದ ಭಾಗವಾಗಿ ಕೆಲವೊಂದು ನವೀಕರಣಗಳನ್ನು ಪಡೆದುಕೊಂಡಿರುವ 2025ರ 'ಕಾಮೆಟ್' ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಾಗಿದೆ. ಇದು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಅತಿ ಕಡಿಮೆಗೂ ಮಾರಾಟಕ್ಕೆ ಬಂದಿದೆ. ಬನ್ನಿ.. ಈ ನೂತನ ಕಾರಿನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ. ನೂತನ ಎಂಜಿ ಕಾಮೆಟ್ ಇವಿ (MG Comet EV) ರೂ.4.99 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆಗೊಂಡಿದೆ. ಈ ಕಾರನ್ನು ಕಂಪನಿಯು ಬಾಸ್ (BaaS) ಯೋಜನೆಯಡಿ ಮಾರಾಟಗೊಳಿಸಲು ತೀರ್ಮಾನಿಸಿದೆ. ಇದರರ್ಥ ಪ್ರತಿ ಕಿಲೋಮೀಟರ್‌ಗೆ ನಿಗದಿಪಡಿಸಿದ ಬಾಡಿಗೆಯನ್ನು ಪಾವತಿ ಮಾಡಬೇಕು.
Best CNG Cars: 10 ಲಕ್ಷದೊಳಗೆ ಸಿಗುವ ಭಾರತದ ಪ್ರೀಮಿಯಂ CNG ಕಾರು
Best CNG Cars: ಹೆಚ್ಚಿನ ಮೈಲೇಜ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆ, ಕಡಿಮೆ ಮಾಲಿನ್ಯಕ್ಕೆ ಪರ್ಯಾಯವಾಗಿ ಸಿಎನ್‌ಜಿ ಕಾರುಗಳು ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿವೆ. ಈ ಹಿಂದೆ, ಕಡಿಮೆ ವೆಚ್ಚದ ಕಾರ್ಯಾಚರಣೆಗೆ ಹೆಸರುವಾಸಿಯಾಗಿದ್ದ ಸಿಎನ್‌ಜಿ ಕಾರುಗಳು ಅವುಗಳ ಬೇಸ್ ವೇರಿಯೆಂಟ್‌ಗಳಿಗೆ ಮಾತ್ರ ಸೀಮಿತವಾಗಿದ್ದವು. ಸದ್ಯ ಇವು ಜನಪ್ರಿಯವಾಗುತ್ತಿರುವುದರಿಂದ, ಕಾರು ತಯಾರಕರು ಈಗ ತಮ್ಮ ವಾಹನಗಳ ಟಾಪ್ ವೇರಿಯೆಂಟ್‌ಗಳಲ್ಲಿಯೂ ಪೆಟ್ರೋಲ್-ಸಿಎನ್‌ಜಿ ದ್ವಿ-ಇಂಧನ ತಂತ್ರಜ್ಞಾನವನ್ನು ನೀಡಲು ಪ್ರಾರಂಭಿಸಿದ್ದಾರೆ. 10 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಹಲವಾರು ವೈಶಿಷ್ಟ್ಯಗಳೊಂದಿಗೆ ಸಿಗುವ ಸಿಎನ್‌ಜಿ ಕಾರುಗಳು ಇಲ್ಲಿವೆ.
Tesseract: ಭಾರತದಲ್ಲಿ ಹೊಸ ಸ್ಕೂಟರ್‌ಗೆ ಮುಗಿಬಿದ್ದ 50,000 ಜನ
ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾಗಿರುವ ಅಲ್ಟ್ರಾವೈಲೆಟ್ (Ultraviolette), ಇತ್ತೀಚೆಗೆ ಅನಾವರಣಗೊಳಿಸಿರುವ ತನ್ನ ಟೆಸ್ಸೆರಾಕ್ಟ್ (Tesseract) ಇವಿ ಸ್ಕೂಟರ್‌ನೊಂದಿಗೆ ಹೊಸ ಮೈಲಿಗಲ್ಲು ಸಾಧಿಸಿದೆ. ಈ ಸ್ಕೂಟರ್ ಅನಾವರಣಗೊಂಡ ಕೇವಲ ಎರಡು ವಾರಗಳಲ್ಲಿ 50,000 ಮುಂಗಡ ಬುಕಿಂಗ್‌ಗಳನ್ನು ಸ್ವೀಕರಿಸಿದೆ. ಗ್ರಾಹಕರಿಂದ ವ್ಯಕ್ತವಾಗಿರುವ ಅಗಾಧ ಪ್ರತಿಕ್ರಿಯೆ ಕುರಿತು ಕಂಪನಿ ಹರ್ಷ ವ್ಯಕ್ತಪಡಿಸಿದೆ. ಇದು ಅತ್ಯಾಧುನಿಕ ತಂತ್ರಜ್ಞಾನ, ನಾವೀನ್ಯತೆ ಮತ್ತು ಉನ್ನತ ವಿನ್ಯಾಸವನ್ನು ಸಂಯೋಜಿಸುವ ಭವಿಷ್ಯದ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಒತ್ತಿಹೇಳುತ್ತದೆ ಎಂದು ಕಂಪನಿ ತನ್ನ ಸ್ಕೂಟರ್ ಕುರಿತು ಹೆಮ್ಮೆಯನ್ನು ವ್ಯಕ್ತಪಡಿಸಿದೆ.
Advertisement
Suzuki: 47.5 Km ಮೈಲೇಜ್.. ರೂ.85,000 ಬೆಲೆ, ಸುಜುಕಿ ಆಕ್ಸೆಸ್..
ಸುಜುಕಿ ಆಕ್ಸೆಸ್ 125 (Suzuki Access 125) ಜನಪ್ರಿಯ ಸ್ಕೂಟರ್ ಆಗಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುವುದರಿಂದ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಇತ್ತೀಚೆಗೆ, ಈ ಫೆಬ್ರವರಿಯಲ್ಲಿ ದೇಶೀಯವಾಗಿ ಮಾರಾಟಗೊಂಡ ಟಾಪ್ 10 ದ್ವಿಚಕ್ರ ವಾಹನಗಳ (Two-Wheelers) ಪಟ್ಟಿ ಪ್ರಕಟಗೊಂಡಿದ್ದು, ಇದೇ 'ಸುಜುಕಿ ಆಕ್ಸೆಸ್ 125' ಸ್ಕೂಟರ್ 8ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಹೀರೋ ಸ್ಪ್ಲೆಂಡರ್ ಹಾಗೂ ಎರಡನೇ ಸ್ಥಾನದಲ್ಲಿ ಹೋಂಡಾ ಆಕ್ಟಿವಾ ಮುಂದುವರಿದಿದೆ.
ಈ ಅವಧಿಗೆ ಎಕ್ಸ್‌ಪ್ರೆಸ್‌ವೇ ರೆಡಿ: ಬೆಂಗಳೂರಿನಲ್ಲಿ ಕಾಫಿ ಕುಡಿದರೆ..
ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳನ್ನು ಬೆಸೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯನ್ನು ಅಭಿವೃದ್ಧಿಪಡಿಸುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದಿದ್ದರೆ, ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ನೂತನ ಹೆದ್ದಾರಿಯನ್ನು ಉದ್ಘಾಟನೆ ಮಾಡಬೇಕಾಗಿತ್ತು. ಆದರೆ, ಕೆಲವೆಡೆಗಳಲ್ಲಿ ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿದ್ದು, ಹೊಸ ಎಕ್ಸ್‌ಪ್ರೆಸ್‌ವೇ 1 ವರ್ಷ ತಡವಾಗಿ, ಅಂದರೆ 2026ರ ಜೂನ್‌ನಲ್ಲಿ ಸಂಪೂರ್ಣವಾಗಿ ವಾಹನ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ.
ಹೋಂಡಾ ಶೈನ್-ಹೀರೋ ಸ್ಪ್ಲೆಂಡರ್: ಮೈಲೇಜ್‌ನಲ್ಲಿ ಪ್ರಚಂಡ ಪ್ರತಿಸ್ಪರ್ಧಿ
ಭಾರತದಲ್ಲಿ ಮೈಲೇಜ್ ವಾಹನಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದರಲ್ಲೂ ಹೋಂಡಾ ಶೈನ್ (Honda Shine) ಹಾಗೂ ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ನಂತಹ ಮೋಟಾರ್‌ಸೈಕಲ್‌ಗಳು ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತವೆ. ಇದೀಗ ಹೋಂಡಾ ಇತ್ತೀಚೆಗೆ 2025ರ ಶೈನ್ 100 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಹಲವು ಆಧುನಿಕ ಫೀಚರ್ಸ್‌ನೊಂದಿಗೆ ಮತ್ತಷ್ಟು ಮೈಲೇಜ್ ಹೆಚ್ಚಿಸಿಕೊಂಡು ಎಂಟ್ರಿಕೊಟ್ಟಿದೆ. ಹೋಂಡಾ ಶೈನ್ 100 ಬೈಕಿಗೆ ಪ್ರತಿಸ್ಪರ್ಧಿಯಾಗಿ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಬೈಕ್ ಆಗಿದೆ. ಈ ಎರಡು 100 ಸಿಸಿ ಮೋಟಾರ್ ಸೈಕಲ್‌ಗಳಲ್ಲಿ ಯಾವುದು ಬೆಸ್ಟ್ ಇಲ್ಲಿ ನೋಡೋಣ.
ಭಾರತವು ವಿಶ್ವದಲ್ಲಿಯೇ ಅತಿ ದೊಡ್ಡ ದ್ವಿಚಕ್ರ ವಾಹನ (Two-Wheeler) ಮಾರುಕಟ್ಟೆಯನ್ನು ಹೊಂದಿದೆ. ಇಲ್ಲಿ ಪ್ರತಿ ತಿಂಗಳು ಲಕ್ಷಾಂತರ ಸಂಖ್ಯೆಯಲ್ಲಿ ಬೈಕ್ ಹಾಗೂ ಸ್ಕೂಟರ್‌ಗಳು ಮಾರಾಟವಾಗುತ್ತಿವೆ. ಇತ್ತೀಚೆಗೆ, ಎಲ್ಲ ವಾಹನ ತಯಾರಕ ಕಂಪನಿಗಳು ಫೆಬ್ರವರಿ ತಿಂಗಳ ದ್ವಿಚಕ್ರ ವಾಹನಗಳ ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿದೆ. ದೇಶೀಯವಾಗಿ ಮಾರಾಟಗೊಂಡ ಪ್ರಮುಖ 10 ಪಟ್ಟಿಯಲ್ಲಿ ಎಂದಿನಂತೆ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನದಲ್ಲಿದೆ. ಹೋಂಡಾ ಆಕ್ಟಿವಾ ಎರಡನೇ ಸ್ಥಾನದಲ್ಲಿದ್ದರೆ, ಹತ್ತನೇ ಸ್ಥಾನದಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಇದೆ.