Tata: 24 ಕಿ.ಮೀ ಮೈಲೇಜ್... ಬಲಿಷ್ಠ ಟಾಟಾ ಕಾರಿಗೆ ಭಾರೀ ಡಿಮ್ಯಾಂಡ್!
ಆಟೋಮೊಬೈಲ್ಸ್
- 1 year, 6 month, 18 days ago
ಭಾರತೀಯ ಕಾರು ಮಾರುಕಟ್ಟೆಯಲ್ಲಿ ಟಾಟಾ ಕಾರುಗಳಿಗೆ ಭಾರೀ ಬೇಡಿಕೆ ಇದೆ. ನಿರ್ಮಾಣ ಗುಣಮಟ್ಟ, ಆಕರ್ಷಕ ಡಿಸೈನ್, ಅತ್ಯಾಕರ್ಷಕ ಫೀಚರ್ಸ್‌ನೊಂದಿಗೆ ಟಾಟಾ ಕಾರುಗಳು ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿವೆ. ಅದರಲ್ಲೂ ಟಾಟಾ ನೆಕ್ಸಾನ್ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ತನ್ನ ವಿಭಾಗದಲ್ಲಿಯೇ ಬೆಸ್ಟ್ ಕಾರಾಗಿ ಪ್ರತಿ ತಿಂಗಳ ಮಾರಾಟದಲ್ಲಿ ಸಾಭೀತುಪಡಿಸುತ್ತಿದೆ. ಟಾಟಾ ನೆಕ್ಸಾನ್ (Tata Nexon) ಈ ಬಾರಿಯೂ ಉತ್ತಮ ಮಾರಾಟ ಅಂಕಿಅಂಶಗಳನ್ನು ದಾಖಲು ಮಾಡಿದೆ. ಕೇವಲ ಫೆಬ್ರವರಿ ತಿಂಗಳಿನಲ್ಲೆ ಬರೋಬ್ಬರಿ 15 ಸಾವಿರ ಕಾರುಗಳ ಮಾರಾಟವನ್ನು ದಾಟಿದೆ.