Mahindra: ಹೊಸ ಮಹೀಂದ್ರಾ ಕಾರಿನ ಮುಂದೆ ಮರಿಯಂತೆ ಕಂಡ ಫಾರ್ಚೂನರ್

ಮಹೀಂದ್ರಾ (Mahindra) ಕಂಪನಿಯು ಇತ್ತೀಚೆಗೆ ತನ್ನ ಎಲೆಕ್ಟ್ರಿಕ್ ಕಾರುಗಳ ಭವಿಷ್ಯ ಹೇಗಿರಲಿದೆ ಎಂಬುದನ್ನು ತೋರಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಕಂಪನಿಯು ಭಾರತದಲ್ಲಿ ತನ್ನ ಮೊದಲ ಬೆಸ್ಪೋಕ್ ಇಂಗ್ಲೋ ಪ್ಲಾಟ್ ಫಾರ್ಮ್‌ನಲ್ಲಿ ನಿರ್ಮಾಣಗೊಂಡ ಬಿಇ 6 ಅನ್ನು ಹೊರತಂದಿದೆ. ಪ್ರಪಂಚದಾದ್ಯಂತ ಮಾರಾಟ ಮಾಡಲು ಈ ಕಾರನ್ನು ವಿನ್ಯಾಸಗೊಳಿಸಲಾಗಿದ್ದು, ಇತ್ತೀಚೆಗೆ ರಸ್ತೆಯಲ್ಲಿ ದೈತ್ಯ ಫಾರ್ಚೂನರ್ ಪಕ್ಕದಲ್ಲಿ ಹಾದುಹೋಗುವ ವಿಡಿಯೋ ವೈರಲ್ ಆಗಿದೆ. ಈ ಮಹೀಂದ್ರಾ ಬಿಇ 6 ಇವಿ (Mahindra BE 6) ಕಾರು ತನ್ನ ರಸ್ತೆ ಉಪಸ್ಥಿತಿ (Road presence)ಯೊಂದಿಗೆ ಎಲ್ಲರ ಗಮನ ಸೆಳೆದಿದೆ.

Holi offer: ಓಲಾ ಸ್ಕೂಟರ್‌ಗಳು ಮತ್ತಷ್ಟು ಅಗ್ಗ: ಹೋಳಿ ಆಫರ್

ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಓಲಾ ಎಲೆಕ್ಟ್ರಿಕ್ (Ola Electric) ತನ್ನ ಜನಪ್ರಿಯ ಎಸ್ 1 ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಸೀಮಿತ ಅವಧಿಯ ಹೋಳಿ ಹಬ್ಬದ ಆಫರ್‌ಗಳನ್ನು (Holi offer) ಪ್ರಕಟಿಸಿದೆ. ಈ ವಿಶೇಷ ಪ್ರಚಾರದ ಅಡಿಯಲ್ಲಿ, ಗ್ರಾಹಕರು ಎಸ್ 1 ಏರ್ ಸ್ಕೂಟರ್ ಮೇಲೆ ರೂ. 26,750 ಮತ್ತು ಎಸ್ 1 ಎಕ್ಸ್ + (ಜನರಲ್ 2) ಸ್ಕೂಟರ್ ಮೇಲೆ ರೂ. 22,000 ವರೆಗೆ ರಿಯಾಯಿತಿಗಳನ್ನು ಪಡೆಯಬಹುದು ಎಂದು ಕಂಪನಿ ಹೇಳಿದೆ.

Tata: ರಾವಣನ ದೇಶದಲ್ಲಿ ರಾಮನ ಎಸ್‌ಯುವಿಗಳು ಬಿಡುಗಡೆ!

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್, ಶ್ರೀಲಂಕಾದಲ್ಲಿ ಟಾಟಾ ಮೋಟಾರ್ಸ್ (Tata Motors) ನ ಏಕೈಕ ಅಧಿಕೃತ ವಿತರಕರಾದ ಡಿಮೋ (DIMO) ಜೊತೆಗೂಡಿ ತನ್ನ ಸಂಪೂರ್ಣ ಹೊಸ ಶ್ರೇಣಿಯ ಪ್ರಯಾಣಿಕ ವಾಹನಗಳನ್ನು (ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ) ಬಿಡುಗಡೆ ಮಾಡಿದೆ. ಈ ಬಿಡುಗಡೆ ಕಾರ್ಯಕ್ರಮವು ಟಾಟಾ ಮೋಟಾರ್ಸ್‌ನ ಯಶಸ್ವಿ SUV ಗಳ ಪರಿಚಯಕ್ಕೆ ಸಾಕ್ಷಿಯಾಗಿದೆ. ಟಾಟಾ ಪಂಚ್, ನೆಕ್ಸಾನ್ ಮತ್ತು ಕರ್ವ್ ಜೊತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಶ್ರೀಲಂಕಾದಲ್ಲಿ ಹೆಚ್ಚಿಸಲು ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆಗಿರುವ ಟಿಯಾಗೊ ಇವಿಯನ್ನು ಸಹ ಬಿಡುಗಡೆ ಮಾಡಿದೆ.

TATA: ಟಾಟಾದ ಹೊಚ್ಚ ಹೊಸ ಕಾರಿನ ವಿತರಣೆ ಶುರು

ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಪ್ರಖ್ಯಾತ ಎಸ್‌ಯುವಿಗಳಾದ ಹ್ಯಾರಿಯರ್ & ಸಫಾರಿಯ 'ಸ್ಟೆಲ್ತ್ ಎಡಿಷನ್'ನ್ನು ಅನಾವರಣಗೊಳಿಸಿತ್ತು. ಫೆಬ್ರವರಿ 13ರಂದು ಈ ಕಾರುಗಳನ್ನು ಅದ್ದೂರಿಯಾಗಿಯೂ ಬಿಡುಗಡೆಗೊಳಿಸಿತ್ತು. ಸದ್ಯ ದೇಶಾದ್ಯಂತ ನೂತನ ಸಫಾರಿ ಸ್ಟೆಲ್ತ್ ಎಡಿಷನ್ ಮಾಡೆಲ್‌ನ ವಿತರಣೆಯನ್ನು ಕಂಪನಿಯು ಶುರು ಮಾಡಿದೆ ಎಂದು ವರದಿಯಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
Advertisement

ZELIO E: ಅಗ್ಗದ ಹೊಸ ಸ್ಕೂಟರ್ ಬಿಡುಗಡೆ: ಖರ್ಚಿಲ್ಲದೆ ಓಡಾಡಿ

ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ZELIO E ಮೊಬಿಲಿಟಿ, ತನ್ನ ಇತ್ತೀಚಿನ ಮಾದರಿ ಲಿಟಲ್ ಗ್ರೇಸಿಯನ್ನು ಅನಾವರಣಗೊಳಿಸಿದೆ. ಇದು 10-18 ವರ್ಷ ವಯಸ್ಸಿನ ಕಿರಿಯ ಸವಾರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕಡಿಮೆ-ವೇಗದ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಈ ಹೊಸ ಕೊಡುಗೆಯು ಕಂಪನಿಯ ಪೋರ್ಟ್‌ಫೋಲಿಯೊಗೆ ಗಮನಾರ್ಹ ಸೇರ್ಪಡೆಯಾಗಿದ್ದು, ಲಿಟಲ್ ಗ್ರೇಸಿ ಸ್ಕೂಟರ್‌ಗೆ ಚಾಲನಾ ಪರವಾನಗಿ ಅಗತ್ಯವಿಲ್ಲ. ವಿಶ್ವಾಸಾರ್ಹ, ಪರಿಸರ ಸ್ನೇಹಿ ಮತ್ತು ಅನುಕೂಲಕರ ಸಾರಿಗೆ ವಿಧಾನವನ್ನು ಬಯಸುವ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಇದು ಸೂಕ್ತ ಆಯ್ಕೆಯಾಗಿದೆ ಎಂದು ಕಂಪನಿ ಹೇಳಿದೆ.

ಮೊಬೈಲ್ ದರಕ್ಕೆ ಹೊಸ ಸ್ಕೂಟರ್‌ಗಳು.. ಜಸ್ಟ್ 49,999.. ಈ ಜನಪ್ರಿಯ..

ನವದೆಹಲಿ ಮೂಲದ ಒಕಾಯಾ ಇವಿ (Okaya EV) ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ನಿಧಾನವಾಗಿ ಅಂಬೆಗಾಲು ಇಡುತ್ತಿದೆ. ಸದ್ಯ ಇದೇ ಕಂಪನಿಗೆ ಒಪಿಜಿ ಮೊಬಿಲಿಟಿ (OPG Mobility) ಎಂದು ಮರು ನಾಮಕರಣ ಮಾಡಲಾಗಿದೆ. ಈ ಕಂಪನಿ ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡುರುವ ವಿವಿಧ ಇ-ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಬದಲಾಗುತ್ತಿರುವ ಮಾರುಕಟ್ಟೆ ಕಾರ್ಯತಂತ್ರಗಳಿಗೆ ಅನುಗುಣವಾಗಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಸೆಳೆಯಲು ಕೂಡ ಒಪಿಜಿ ಮೊಬಿಲಿಟಿ ಮುಂದಾಗಿದ್ದು, 'ಫೆರಾಟೊ' ಸೀರೀಸ್‌ನ ಎಲ್ಲ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯನ್ನು ದೊಡ್ಡ ಮಟ್ಟದಲ್ಲಿ ಇಳಿಕೆ ಮಾಡಿದೆ.

ಹೊಸ 'ಯಮಹಾ ಎಫ್‌ಝಡ್‌-ಎಸ್' ಹೈಬ್ರಿಡ್ ಬೈಕ್ ಕುರಿತ ಪ್ರಮುಖಾಂಶಗಳಿವು..

ಜಪಾನ್ ಮೂಲದ ಯಮಹಾ (Yamaha) ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಇತ್ತೀಚೆಗೆ ನೂತನ ಎಫ್‌ಝಡ್‌-ಎಸ್ ಫೈ ಹೈಬ್ರಿಡ್ (FZ-S Fi Hybrid) ಬೈಕ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಬಜೆಟ್ ಬೆಲೆಯಲ್ಲಿಯೂ ಸಿಗುತ್ತದೆ. ನಾವಿಲ್ಲಿ ಈ ಮೋಟಾರ್‌ಸೈಕಲ್‌ನ ಎಕ್ಸ್-ಶೋರೂಂ ದರ ಹಾಗೂ ವಿಶೇಷತೆಗಳನ್ನು ಒಳಗೊಂಡಂತೆ ಪ್ರಮುಖಾಂಶಗಳನ್ನು ತಿಳಿಸಿಕೊಟ್ಟಿದ್ದೇವೆ.

181 ಕಿ.ಮೀ ರೇಂಜ್.. ಹೊಸ 'Simple OneS' ಇ-ಸ್ಕೂಟರ್ ಬಿಡುಗಡೆ..

ಬೆಂಗಳೂರು ಮೂಲದ ಸಿಂಪಲ್ ಎನರ್ಜಿ (Simple Energy) ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಿಂಪಲ್ ಒನ್ (Simple One) ಹೆಸರಿನ ಇ-ಸ್ಕೂಟರ್‌ನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇದು ಹೆಚ್ಚು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವುದರಿಂದ ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಕಂಪನಿಯು ಹೊಚ್ಚ ಹೊಸ 'ಒನ್ಎಸ್' ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆಗೊಳಿಸಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಗ್ರಾಮ & ಪಟ್ಟಣಗಳಿಗೆ ಈ ಎಲೆಕ್ಟ್ರಿಕ್ ಟೂ-ವೀಲರ್‌ಗಳು ಬೆಸ್ಟ್..

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು (Electric Two Wheelers) ವಾಹನಗಳು ನಿಧಾನವಾಗಿ ಪಾರುಪತ್ಯ ಮೆರೆಯುವುದಕ್ಕೆ ಶುರು ಮಾಡಿವೆ. ಗ್ರಾಹಕರು ಕೂಡ ದಿನನಿತ್ಯದ ಬಳಕೆಗಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದರಲ್ಲೂ ಎಲೆಕ್ಟ್ರಿಕ್ ಮೊಪೆಡ್ ಹಾಗೂ ಸ್ಕೂಟರ್‌ಗಳನ್ನು ಎಲ್ಲ ವಯೋಮಾನದ ಜನರು, ಹಳ್ಳಿ ಹಾಗೂ ಪಟ್ಟಣಗಳೆಂಬ ಭೇದಭಾವವಿಲ್ಲದೆ ಸುಲಭವಾಗಿ ಬಳಕೆ ಮಾಡಬಹುದು. ನೀವು ಹೊಚ್ಚ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನವೊಂದನ್ನು ಖರೀದಿ ಮಾಡಲು ಯೋಚಿಸಿದ್ದೀರಾ.. ಹಾಗಾದರೆ ಕಡಿಮೆ ಬೆಲೆಗೆ ದೊರೆಯುವ ಹೋಂಡಾ ಕ್ಯೂಸಿ1, ಕೈನೆಟಿಕ್ ಇ-ಲೂನಾ, ಹೀರೋ ವಿಡಾ ವಿ2, ಟಿವಿಎಸ್ ಐಕ್ಯೂಬ್, ಬಜಾಜ್ ಚೇತಕ್ ಹಾಗೂ ಎಥರ್ 450ಎಸ್ ಮಾಡೆಲ್‌ಗಳು ಹೆಚ್ಚು ಸೂಕ್ತವಾಗಲಿವೆ.

TATA: ಸದ್ದಿಲ್ಲದೇ ಹೊಸ ಟಾಟಾ ಟಿಯಾಗೊ ಎನ್‌ಆರ್‌ಜಿ ಕಾರು ಬಿಡುಗಡೆ..

ಟಾಟಾ ಮೋಟಾರ್ಸ್ (Tata Motors) ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ಇತ್ತೀಚೆಗೆ ನವೀಕರಣಗೊಳಿಸಿದ 2025ರ ಟಿಯಾಗೊ (Tiago) ಹ್ಯಾಚ್‌ಬ್ಯಾಕ್‌ನ್ನು ಬಿಡುಗಡೆಗೊಳಿಸಿತ್ತು. ಆದರೆ, ಇದೇ ಕಾರಿನ 'ಎನ್‌ಆರ್‌ಜಿ ವರ್ಷನ್'ನ್ನು ಮೇಲ್ದರ್ಜೆರಿಸುವ ಕುರಿತಂತೆ ಕಂಪನಿಯು ಯಾವುದೇ ಸುಳಿವನ್ನು ನೀಡಿರಲ್ಲ. ಅಂತಿಮವಾಗಿ ಟಾಟಾ ಕೆಲವೊಂದು ಹೊಸತನಗಳಿಗೆ ಸಾಕ್ಷಿಯಾಗ ಟಿಯಾಗೊ ಎನ್‌ಆರ್‌ಜಿ ಕಾರನ್ನು ಮಾರಾಟಕ್ಕೆ ತಂದಿದೆ. ಸಾಮಾನ್ಯ ಟಿಯಾಗೊಗೆ ಹೋಲಿಕೆ ಮಾಡಿದರೆ, ಇದು ಸ್ವಲ್ಪ ಸ್ಪೋರ್ಟಿಯರ್ ಮಾಡೆಲ್ ಆಗಿದ್ದು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ವಿಶೇಷವಾಗಿ ಎಂತಹ ರಸ್ತೆಯಲ್ಲಿ ಬೇಕಾದರೂ ಸುಲಭವಾಗಿ ಚಲಿಸಬಲ್ಲದು.

Creta: 21 Km ಮೈಲೇಜ್, 5-ಸೀಟರ್.. ಹ್ಯುಂಡೈ ಕ್ರೆಟಾ ಅಂದ್ರೆ...

ಹ್ಯುಂಡೈ ಕ್ರೆಟಾ (Hyundai Creta) ವಿಶ್ವಾಸಾರ್ಹ ಎಸ್‌ಯುವಿಯಾಗಿದೆ. ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಅದಕ್ಕೆ ತಕ್ಕಂತೆ ಈ ಕಾರು ಗ್ರಾಹಕರಿಗೂ ಪಂಚಪ್ರಾಣವಾಗಿದ್ದು, ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಇತ್ತೀಚೆಗೆ, ಪ್ರಮುಖ ವಾಹನ ತಯಾರಕ ಕಂಪನಿಗಳು ಫೆಬ್ರವರಿ ತಿಂಗಳ ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿದ್ದು, ಎಸ್‌ಯುವಿ ವಿಭಾಗದಲ್ಲಿ ಕ್ರೆಟಾ ಭಾರೀ ವೇಗದಲ್ಲಿ ಮುನ್ನುಗ್ಗುತ್ತಿದ್ದು, ಎರಡನೇ ಸ್ಥಾನದಲ್ಲಿದೆ. ಮಾರುತಿ ಸುಜುಕಿ ಫ್ರಾಂಕ್ಸ್ (21,461 ಯುನಿಟ್) ಮೊದಲ ಸ್ಥಾನದಲ್ಲಿದೆ.

TATA: ಟಾಟಾದ ಕರ್ವ್ ಎಸ್‌ಯುವಿ ಬೇಕೆಂದು ಹಠ ಹಿಡಿದ ಗ್ರಾಹಕರು..

ಟಾಟಾ ಕರ್ವ್ (Tata Curvv) ಪ್ರಖ್ಯಾತ ಕೂಪೆ ಎಸ್‌ಯುವಿಯಾಗಿದೆ. ಕಳೆದ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಂದ ಈ ಕಾರು, ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ರಸ್ತೆ ಮೇಲಿನ ಅರಮನೆಯಂತಿರುವ ನೂತನ ಕರ್ವ್ ಎಸ್‌ಯುವಿಯನ್ನು ಗ್ರಾಹಕರು ಸಹ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಇದು ಈ ಕಾರಿನ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತಿದೆ. ಸದ್ಯ, ಫೆಬ್ರವರಿ ತಿಂಗಳ ಕರ್ವ್ ಎಸ್‌ಯುವಿ ಮಾರಾಟದ ಅಂಕಿಅಂಶಗಳ ವರದಿ ಪ್ರಕಟಗೊಂಡಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
Advertisement

150 ಸಿಸಿ ವಿಭಾಗದಲ್ಲಿ ಇದೇ ಮೊದಲು.. 'ಯಮಹಾ ಎಫ್‌ಝಡ್‌-ಎಸ್'..

ಜಪಾನ್ ಮೂಲದ ಯಮಹಾ (Yamaha) ಜನಪ್ರಿಯ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಬೈಕ್ ಹಾಗೂ ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವುಗಳು ಹೆಚ್ಚು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಗ್ರಾಹಕರು ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ ಯಮಹಾ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಟೆಕ್ನಾಲಜಿಯನ್ನು ಒಳಗೊಂಡಿರುವ ಹೊಚ್ಚ ಹೊಸ ಎಫ್‌ಝಡ್‌-ಎಸ್ ಫೈ (FZ-S Fi) ಮೋಟಾರ್‌ಸೈಕಲ್‌ನ್ನು ಮಾರಾಟಕ್ಕೆ ತಂದಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

25.51 Km ಮೈಲೇಜ್.. 8 ಲಕ್ಷ, 5-ಸೀಟರ್.. ಈ ಮಾರುತಿ ಕಾರನ್ನು..

ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಈ ಕಾರು ಹೆಚ್ಚು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಜೊತೆಗೆ ಕೈಗೆಟುಕುವ ಬೆಲೆಯನ್ನು ಹೊಂದಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಇತ್ತೀಚೆಗೆ, ಬಹುತೇಕ ಎಲ್ಲ ವಾಹನ ತಯಾರಕ ಕಂಪನಿಗಳು ಫೆಬ್ರವರಿ ತಿಂಗಳ ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿವೆ. ಅದರಲ್ಲೂ ಎಸ್‌ಯುವಿ ವಿಭಾಗದಲ್ಲಿ ಈ ಮಾರುತಿ ಬ್ರೆಝಾ ಜಾಗ ಸಂಪಾದಿಸಿದ್ದು, ಮೂರನೇ ಸ್ಥಾನದಲ್ಲಿದೆ. ವಿಶೇಷವಾಗಿ ಮಾರುತಿ ಫ್ರಾಂಕ್ಸ್ (21,461 ಯುನಿಟ್) ಮೊದಲ ಸ್ಥಾನದಲ್ಲಿದ್ದರೆ, ಹ್ಯುಂಡೈ ಕ್ರೆಟಾ (16,317 ಯುನಿಟ್) ಎರಡನೇ ಸ್ಥಾನದಲ್ಲಿದೆ.

Hero: ಸದ್ದಿಲ್ಲದೇ ಮೈಲೇಜ್ ಸಾಮ್ರಾಟ್ 'ಸ್ಪ್ಲೆಂಡರ್ ಪ್ಲಸ್'ಗೆ ಹೊಸ..

ಭಾರತದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ದ್ವಿಚಕ್ರ ವಾಹನವಾಗಿ ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ 1994ರಲ್ಲಿ ಮೊದಲ ಬಾರಿಗೆ ಈ ಬೈಕ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಇದು ಅಂದಿನಿಂದ ಇಂದಿನವರೆಗೆ ಮಧ್ಯಮ ವರ್ಗದವರ ನೆಚ್ಚಿನ ಮೋಟಾರ್‌ಸೈಕಲ್ ಎಂದೇ ಹೆಸರುವಾಸಿಯಾಗಿದೆ. ಸದ್ಯ, ಈ 'ಸ್ಪ್ಲೆಂಡರ್ ಪ್ಲಸ್' ಒಂದಷ್ಟು ನವೀಕರಣಗಳನ್ನು ಪಡೆದುಕೊಂಡಿದ್ದು, ಅತಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ವಿಮಾನದಂತೆ ಸೌಕರ್ಯವಿರುವ ಈ ಕಾರಿಗೆ ಫುಲ್ ಡಿಮ್ಯಾಂಡ್..

ಎಂಜಿ ವಿಂಡ್ಸರ್ (MG Windsor) ಜನಪ್ರಿಯ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಈ ಕಾರು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನೂತನ ಎಂಜಿ ವಿಂಡ್ಸರ್ ಇವಿ ವಿತರಣೆಯನ್ನು ಶುರು ಮಾಡಲಾಗಿತ್ತು. ಅಂದಿನಿಂದ ಪ್ರತಿ ತಿಂಗಳು ಸರಾಸರಿ 3,000ಕ್ಕೂ ಅಧಿಕ ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಕೂಡ ಮಾಡಲಾಗುತ್ತಿದೆ.

ಊರಿಗೂ ಸೈ.. ಪ್ಯಾಟೆಗೂ ಜೈ.. ಶ್ರೀಸಾಮನ್ಯರ ಬಂಡಿಗಳಿವು..

ಸಾಮಾನ್ಯ ಜನರ ದಿನನಿತ್ಯದ ಬಳಕೆಗಾಗಿ ದ್ವಿಚಕ್ರ ವಾಹನಗಳು ಬೇಕೇ ಬೇಕು. ಅದರಲ್ಲೂ ಬೈಕ್‌ಗಳನ್ನು ಎಲ್ಲ ವಯಸ್ಸಿನ ಪುರುಷ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ನೀವು ಪ್ರತಿದಿನ ಕಚೇರಿ ಹೋಗಲು ಅಥವಾ ಇತರೆ ಕೆಲಸಗಳಿಗಾಗಿ ಹೊಚ್ಚ ಹೊಸ ಮೋಟಾರ್‌ಸೈಕಲ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್, ಹೋಂಡಾ ಎಸ್‌ಪಿ 125, ಟಿವಿಎಸ್ ರೈಡರ್ ಹಾಗೂ ಹೋಂಡಾ ಶೈನ್ ಮಾಡೆಲ್‌ಗಳು ಅತ್ಯುತ್ತಮ ಆಯ್ಕೆಯಾಗಲಿವೆ. ಬನ್ನಿ.. ಈ ನೂತನ ಬೈಕ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

10 ಕೋಟಿಯ ಐಷಾರಾಮಿ 'ರೋಲ್ಸ್ ರಾಯ್ಸ್' ಕಾರು ಖರೀದಿಸಿದ ಡಿ-ಬಾಸ್..

ಊರ್ವಶಿ ರೌಟೇಲಾ (Urvashi Rautela) ಜನಪ್ರಿಯ ನಟಿಯಾಗಿದ್ದು, ತಮ್ಮದೇಯಾದ ಅಭಿಮಾನಿ ಬಗಳವನ್ನು ಹೊಂದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಟನೆಯ 'ಐರಾವತ' ಸಿನಿಮಾದಲ್ಲಿ ನಾಯಕ ನಟಿಯೂ ಆಗಿದ್ದರು. ಊರ್ವಶಿ ರೌಟೇಲಾ ಕನ್ನಡ ಮಾತ್ರವಲ್ಲದೆ, ಹಿಂದಿ, ಬೆಂಗಾಲಿ, ತಮಿಳು ಹಾಗೂ ತೆಲುಗು ಚಿತ್ರದಲ್ಲಿ ಆಕ್ಟ್ ಮಾಡುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ಅಭಿನಯದ ಡಾಕು ಮಹಾರಾಜ್ ಸಿನಿಮಾದಲ್ಲೂ ಊರ್ವಶಿ ರೌಟೇಲಾ ನಟಿಸಿದ್ದು, ಹಾಡೊಂದಕ್ಕೆ ಸಖತ್ ಸ್ಟೆಪ್ಸ್ ಹಾಕಿದ್ದರು. ಅದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ಹಲ್‌ಚಲ್ ಸೃಷ್ಟಿಸಿತ್ತು.

ಮನಸೋತ ಗ್ರಾಹಕರು.. ಆನಂದ್ ಮಹೀಂದ್ರಾ ಕಂಪನಿಯ ಹೊಸ ಎಲೆಕ್ಟ್ರಿಕ್..

ಮಹೀಂದ್ರಾ & ಮಹೀಂದ್ರಾ (Mahindra & Mahindra) ಪ್ರಖ್ಯಾತ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಒಂದೆರಡು ತಿಂಗಳ ಹಿಂದೆ, ವಿದೇಶಿ ಮೂಲದ ಎಲೆಕ್ಟ್ರಿಕ್ ಕಾರುಗಳಿಗೆ ಪ್ರಬಲವಾದ ಸ್ಪರ್ಧೆಯೊಡ್ಡಲು ನೂತನ ಎಕ್ಸ್ಇವಿ 9ಇ (XEV 9e) ಮತ್ತು ಬಿಇ 6 (BE 6) ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಪರಿಚಯಿಸಿತ್ತು. ಈ ಫೆಬ್ರವರಿ ತಿಂಗಳು ಇವೆರೆಡು ಕಾರುಗಳನ್ನು ದೊಡ್ಡ ಸಂಖ್ಯೆಯೂ ಕಂಪನಿಯು ಮಾರಾಟ ಮಾಡಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Skoda: ಸ್ಕೋಡಾ ಕೈಲಾಕ್ ಕಾರಿಗೆ ಮುಗಿಬಿದ್ದ ಗ್ರಾಹಕರು..

ಸ್ಕೋಡಾ ಆಟೋ ಇಂಡಿಯಾ (Skoda Auto India) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಮಾರಾಟಗೊಳಿಸುವ ಕೈಲಾಕ್ (Kylaq) ಪ್ರಮುಖ ಎಸ್‌ಯುವಿಯಾಗಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಇತ್ತೀಚೆಗೆ, ಪ್ರಮುಖ ವಾಹನ ತಯಾರಕ ಕಂಪನಿಗಳು ಈ ಫೆಬ್ರವರಿ ತಿಂಗಳ ಕಾರು ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿವೆ. ಅದರಲ್ಲೂ ಟಾಪ್ 10 ಕಾಂಪ್ಯಾಕ್ಟ್ ಎಸ್‌ಯುವಿಗಳ ಪಟ್ಟಿಯಲ್ಲಿ ಸ್ಕೋಡಾ ಕೈಲಾಕ್ ಸ್ಥಾನ ಪಡೆದಿದ್ದು, ಹತ್ತನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ 21,461 ಯುನಿಟ್ ಮಾರಾಟದೊಂದಿಗೆ ಮಾರುತಿ ಸುಜುಕಿ ಫ್ರಾಂಕ್ಸ್ ಮೊದಲ ಸ್ಥಾನದಲ್ಲಿದೆ.
Advertisement

Bengaluru 2nd Airport: 2ನೇ ಅಂತರರಾಷ್ಟ್ರೀಯ ವಿಮಾನ..

ಬೆಂಗಳೂರು (Bengaluru) ಸಿಲಿಕಾನ್ ಸಿಟಿಯಾಗಿದ್ದು, ಐಟಿ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದೆ. ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಓಡಾಟ ನಡೆಸುವ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ಸದ್ಯ, ನಗರಕ್ಕೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದ ರಾಜ್ಯ ಸರ್ಕಾರ ಕೂಡ ಕಾರ್ಯಪೃವೃತವಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

20 ಕಿ.ಮೀ ಮೈಲೇಜ್.. 5-ಸೀಟರ್.. ಪ್ರಖ್ಯಾತ ನಿಸ್ಸಾನ್ ಮ್ಯಾಗ್ನೈಟ್..

ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಜನಪ್ರಿಯ ಎಸ್‌ಯುವಿಯಾಗಿದೆ. ಈ ಕಾರು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತದೆ. ಗ್ರಾಹಕರು ಕೂಡ ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಫೆಬ್ರವರಿ ತಿಂಗಳು 2,328 ಯುನಿಟ್ 'ನಿಸ್ಸಾನ್ ಮ್ಯಾಗ್ನೈಟ್' ಕಾರುಗಳು ಮಾರಾಟಗೊಂಡಿವೆ. ಸದ್ಯ, ಇದೇ ಕಾರಿನ ಬೆಲೆಯನ್ನು ಮತ್ತೊಮ್ಮೆ ಏರಿಕೆ ಮಾಡಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

226 Km ಮೈಲೇಜ್.. ಹೊಸ TVS Jupiter CNG ಸ್ಕೂಟರ್ ಶೀಘ್ರದಲ್ಲೇ..

ಟಿವಿಎಸ್ ಮೋಟಾರ್ (TVS Motor), ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ವೇಗವಾಗಿ ಮುನ್ನುಗ್ಗುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಮಾರಾಟಗೊಳಿಸುವ ಜೂಪಿಟರ್ (Jupiter) ಜನಪ್ರಿಯ ಸ್ಕೂಟರ್ ಆಗಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಕಂಪನಿಯು ಇದೇ ಸ್ಕೂಟರ್‌ನ್ನು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯಲ್ಲಿ ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಜೂಪಿಟರ್ ಸಿಎನ್‌ಜಿ ಮಾಡೆಲ್‌ನ್ನು ಪ್ರದರ್ಶನ ಮಾಡಲಾಗಿತ್ತು. ಇದು ವಿಶ್ವದ ಮೊದಲ ಸಿಎನ್‌ಜಿ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಈ ಟಿವಿಎಸ್ ಜೂಪಿಟರ್ ಸಿಎನ್‌ಜಿ ಸ್ಕೂಟರ್ ಶೀಘ್ರದಲ್ಲಿಯೇ ಮಾರಾಟಕ್ಕೂ ಬರಲಿದೆ.

34 Km ಮೈಲೇಜ್, 5 ಲಕ್ಷ.. ಡಾಕ್ಟರ್, ಎಂಜಿನಿಯರ್‌ಗಳಿಗೂ ಇಷ್ಟ..

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಡಾಕ್ಟರ್ ಹಾಗೂ ಎಂಜಿನಿಯರ್‌ಗಳು ಸೇರಿದಂತೆ ಎಲ್ಲ ವರ್ಗದ ಜನರು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಇತ್ತೀಚೆಗೆ ಎಲ್ಲ ಕಾರು ತಯಾರಕ ಕಂಪನಿಗಳು ಫೆಬ್ರವರಿ ತಿಂಗಳ ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿವೆ. ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ ಬಳಿಕ, ವ್ಯಾಗನ್ಆರ್ ಎರಡನೇ ಸ್ಥಾನದಲ್ಲಿದೆ.

ದುಬಾರಿ ಬೆಲೆಯ ಸೆಕೆಂಡ್ ಹ್ಯಾಂಡ್ ಕಾರಿನ ಒಡತಿ ಖ್ಯಾತ ನಟಿ ಶ್ರೀಲೀಲಾ..

ಶ್ರೀಲೀಲಾ (Sreeleela) ಜನಪ್ರಿಯ ನಟಿಯಾಗಿದ್ದು, ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕನ್ನಡ ಹಾಗೂ ತೆಲುಗು ಸಿನಿರಂಗದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ. ಶ್ರೀಲೀಲಾ ಸ್ಯಾಂಡಲ್‌ವುಡ್‌ನ ಕಿಸ್ ಹಾಗೂ ಜೇಮ್ಸ್ ಚಿತ್ರಗಳಲ್ಲಿಯೂ ನಟಿಸಿದ್ದು, ಟಾಲಿವುಡ್‌ನ ಚಿತ್ರಾಂಗದ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿರುವ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದರು. ಇತ್ತೀಚೆಗೆ ತೆರೆಕಂಡ ಪುಷ್ಪ-2 ಚಿತ್ರ ಶ್ರೀಲೀಲಾ ಅವರಿಗೆ ದೊಡ್ಡ ಮಟ್ಟದಲ್ಲಿ ಜನಮನ್ನಣೆ ತಂದುಕೊಟ್ಟಿತ್ತು.