ಅತಿ ಕಡಿಮೆ ಬೆಲೆ.. 330 ಕಿ.ಮೀವರೆಗೆ ಮೈಲೇಜ್, ಮಧ್ಯಮ ವರ್ಗದವರಿಗೆ..
ಆಟೋಮೊಬೈಲ್ಸ್
- 1 year, 7 month, 8 days ago
ಭಾರತದಲ್ಲಿ ಮಧ್ಯಮ ವರ್ಗದ ಜನರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಬೆಂಗಳೂರು, ನವದೆಹಲಿ ಮತ್ತು ಮುಂಬೈಯಂತಹ ಮಹಾನಗರಗಳಲ್ಲಿ ಕೆಲಸಕ್ಕೆ ಹೋಗಲು ಮೋಟಾರ್‌ಸೈಕಲ್‌ಗಳು ತೀರಾ ಅನಿವಾರ್ಯವಾಗಿವೆ. ನೀವು ದಿನಬಳಕೆಗೆ ಹೊಚ್ಚ ಹೊಸ ಬೈಕ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಬಜಾಜ್ ಫ್ರೀಡಂ, ಟಿವಿಎಸ್ ರೇಡಿಯನ್ ಹಾಗೂ ಹೋಂಡಾ ಶೈನ್ ಮೋಟಾರ್‌ಸೈಕಲ್‌ಗಳು ಉತ್ತಮ ಆಯ್ಕೆಯಾಗಲಿವೆ. ನಾವಿಲ್ಲಿ ಈ ಬೈಕ್‌ಗಳ ವಿಶೇಷತೆ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.