Maruti: ಅಗ್ಗದ ಮಾರುತಿ ಪ್ರೀಮಿಯಂ ಕಾರಿಗೆ ಮನಸೋತ ಗ್ರಾಹಕರು

ಮಾರುತಿ ಸುಜುಕಿ (Maruti Suzuki) ಕಾರುಗಳ ಅಬ್ಬರ ಜೋರಾಗಿದೆ, ಸ್ವತಃ ಕಂಪನಿಯೇ ಕಳೆದ ಜನವರಿ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಪ್ರಕಟಿಸಿದೆ. ಎಂದಿನಂತೆ ವ್ಯಾಗನ್ ಆರ್‌ ಕಾರು ಭಾರತದ ಅತಿಹೆಚ್ಚು ಮಾರಾಟವಾದ ಕಾರಾಗಿ ಮತ್ತೊಮ್ಮೆ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಇತ್ತೀಚಿಗೆ ಕಂಪನಿ ನೀಡಿರುವ ಮಾಹಿತಿಯ ಆಧಾರದ ಮೇಲೆ, 2025 ರ ಜನವರಿ ತಿಂಗಳಲ್ಲಿ ಒಟ್ಟು 1,73,599 ಯುನಿಟ್ ಕಾರುಗಳು ಮಾರಾಟವಾಗಿವೆ. ಕಳೆದ ವರ್ಷ (2024) ಜನವರಿಯಲ್ಲಿ ಮಾರಾಟವಾದ 1,66,802 ಕಾರುಗಳಿಗೆ ಹೋಲಿಸಿದರೆ ಶೇಕಡಾ 4 ರಷ್ಟು ಬೆಳವಣಿಗೆಯನ್ನು ಈ ವರ್ಷ ಕಂಪನಿ ಸಾಧಿಸಿದೆ.

33.73 Km ಮೈಲೇಜ್.. 5-ಸೀಟರ್, 6.84 ಲಕ್ಷ.. ಮಾರುತಿಯ..

ಭಾರತದಲ್ಲಿ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ 2024ರ ನವೆಂಬರ್‌ನಲ್ಲಿ ಕಂಪನಿಯೂ ನಾಲ್ಕನೇ ತಲೆಮಾರಿನ ಹೊಸ ಡಿಜೈರ್ (Dzire) ಸೆಡಾನ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಈ ಕಾರಿಗೆ ಗ್ಲೋಬಲ್ ಎನ್‌ಸಿಎಪಿ (Global NCAP) ಸಂಸ್ಥೆ ಅತ್ಯಂತ ಸುರಕ್ಷಿತ ಕಾರೆಂದು ನಿರ್ಣಯಿಸಿ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಕೂಡ ನೀಡಿದೆ. ಸದ್ಯ, ಜನವರಿಯಲ್ಲಿಯೂ ನೂತನ ಡಿಜೈರ್ ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

Ola: ಸಿಂಗಲ್‌ ಚಾರ್ಜ್‌ಗೆ 500 ಕಿ.ಮೀ ಓಡುವ ಓಲಾ ಬೈಕ್ ಬಿಡುಗಡೆ

ಓಲಾ ಎಲೆಕ್ಟ್ರಿಕ್ ಇಂದು ತನ್ನ ರೋಡ್‌ಸ್ಟರ್ ಎಕ್ಸ್ (Roadster X) ಸರಣಿಯನ್ನು ಬಿಡುಗಡೆ ಮಾಡುವುದರೊಂದಿಗೆ ಇವಿ ಮೋಟಾರ್‌ಸೈಕಲ್ ವಿಭಾಗಕ್ಕೆ ಪ್ರವೇಶವನ್ನು ಘೋಷಿಸಿದೆ. ಕಂಪನಿಯ ಸ್ಕೇಲೆಬಲ್ ಮೋಟಾರ್‌ಸೈಕಲ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ, ಹೊಸ ರೋಡ್‌ಸ್ಟರ್ ಎಕ್ಸ್ ಸರಣಿಯನ್ನು ರೋಡ್‌ಸ್ಟರ್ ಎಕ್ಸ್‌ ಹಾಗೂ ರೋಡ್‌ಸ್ಟರ್ ಎಕ್ಸ್‌ ಪ್ಲಸ್ ಎಂಬ ಎರಡು ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಈ ಎರಡೂ ವೇರಿಯೆಂಟ್‌ಗಳು ವಿವಿಧ ಬ್ಯಾಟರಿ ಆಯ್ಕೆಗಳನ್ನು ಸಹ ಹೊಂದಿವೆ.

Ultraviolette F77 Superstreet Review: ಅಲ್ಟ್ರಾವೈಲೆಟ್ ಎಫ್77..

ಬೆಂಗಳೂರು (Bangalore) ಮೂಲದ ಅಲ್ಟ್ರಾವೈಲೆಟ್ (Ultraviolette), ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಎಫ್77 ಮ್ಯಾಕ್ 2 (F77 Mach 2) ಇ-ಬೈಕ್‌ನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿತ್ತು. ಇದರ ಅದ್ಬುತವಾದ ನೋಟ, ಹೆಚ್ಚಿನ ರೇಂಜ್ ಹಾಗೂ ಗರಿಷ್ಠ ಟಾರ್ಕ್ ಉತ್ಪಾದನೆಗಳನ್ನು ಖರೀದಿದಾರರನ್ನು ಸೆಳೆದಿತ್ತು. ಇದೀಗ ಮತ್ತಷ್ಟು ಸಂಖ್ಯೆಯಲ್ಲಿ ಗ್ರಾಹಕರನ್ನು ತನ್ನತ್ತ ಆಕರ್ಷಿಸುಲು ಅಲ್ಟ್ರಾವೈಲೆಟ್ ಕಂಪನಿಯು ಎಫ್77 ಸೂಪರ್‌ಸ್ಟ್ರೀಟ್ (F77 Superstreet) ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ್ನು ಪರಿಚಯಿಸಿದೆ.
Advertisement

Tata: ಜಾಸ್ತಿ ಗಟ್ಟಿಮುಟ್ಟು.. ಟಾಟಾದ ಜನಪ್ರಿಯ ಫ್ಯಾಮಿಲಿ..

ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಹಲವು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿರುವ ವಿವಿಧ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಇವುಗಳು ಬಜೆಟ್ ಬೆಲೆಯಲ್ಲಿಯೂ ಖರೀದಿಗೆ ದೊರೆಯುತ್ತವೆ. ಸದ್ಯ, ಕಂಪನಿಯು ಪ್ರಖ್ಯಾತ ಫ್ಯಾಮಿಲಿ ಎಸ್‌ಯುವಿ ಸಫಾರಿ (Safari) ದರವನ್ನು ಸ್ವಲ್ಪ ಮಟ್ಟಿಗೆ ಏರಿಕೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Maruti: ಕಾರು ಖರೀದಿಸುವ ಪ್ಲಾನ್ ಇದೆಯೇ?

ಜನವರಿಯಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ 10 ಕಾರುಗಳಲ್ಲಿ, ಮಾರುತಿ ಸುಜುಕಿ ಇಂಡಿಯಾದ ಆರು ಕಾರುಗಳು, ಟಾಟಾ ಮೋಟಾರ್ಸ್‌ನ ಎರಡು, ಹ್ಯುಂಡೈ ಮೋಟಾರ್ ಮತ್ತು ಮಹೀಂದ್ರಾದ ತಲಾ ಒಂದು ಕಾರುಗಳು ಇವೆ. ಪ್ರತಿ ಬಾರಿಯಂತೆ ಮಾರುತಿ ಸುಜುಕಿ 2025ರ ಜನವರಿ ತಿಂಗಳ ಮಾರಾಟದಲ್ಲಿ ಧೂಳೆಬ್ಬಿಸಿದೆ, ಇದಕ್ಕೆ ಭಾರೀ ಕೊಡುಗೆ ನೀಡಿರುವುದು ಮಾರುತಿ ವ್ಯಾಗನ್‌ಆರ್ (Maruti Suzuki Wagon R). ಈ ಪುಟ್ಟ ಕಾರು ಭರ್ಜರಿ ಮಾರಾಟ ಕಂಡಿದ್ದು, 2025ರ ಜನವರಿ ತಿಂಗಳಲ್ಲಿ ದೇಶದ ಅತೀ ಹೆಚ್ಚು ಮಾರಾಟವಾದ ಕಾರಾಗಿ ದಾಖಲೆ ನಿರ್ಮಿಸಿದೆ.

ಹೊಸ ಓಲಾ ರೋಡ್‌ಸ್ಟರ್ ಎಕ್ಸ್ ಇ-ಬೈಕ್‌ಗೆ ಪ್ರಬಲ ಪ್ರತಿಸ್ಪರ್ಧಿ..

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ (Ola Electric), 'ರೋಡ್‌ಸ್ಟರ್ ಎಕ್ಸ್' ಇ-ಮೋಟಾರ್‌ಸೈಕಲ್ ಬಿಡುಗಡೆಯೊಂದಿಗೆ ಹೊಸ ಅಧ್ಯಯನವನ್ನು ಶುರು ಮಾಡಿದೆ. ನೂತನ ಎಲೆಕ್ಟ್ರಿಕ್ ಬೈಕ್ ಸ್ಟ್ಯಾಂಡರ್ಡ್ ರೋಡ್‌ಸ್ಟರ್ ಎಕ್ಸ್ (Roadster X) ಮತ್ತು ರೋಡ್‌ಸ್ಟರ್ ಎಕ್ಸ್ ಪ್ಲಸ್ (Roadster X) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಮಾರಾಟಕ್ಕೆ ಬಂದಿದೆ. ರೋಡ್‌ಸ್ಟರ್ ಎಕ್ಸ್ ರೂ.75,000 ರಿಂದ ರೂ.95,000 ಬೆಲೆಯನ್ನು ಹೊಂದಿದ್ದರೆ, ರೋಡ್‌ಸ್ಟರ್ ಎಕ್ಸ್ ಪ್ಲಸ್ ರೂ.1.05 ಲಕ್ಷದಿಂದ ರೂ.1.55 ಲಕ್ಷ ಎಕ್ಸ್- ಶೋರೂಂ ದರವನ್ನು ಪಡೆದಿದೆ.

ಕೇವಲ ಕೋಡ್ ಷೇರ್ ಮಾಡಿ ರೂ.1,000 ಗಳಿಸಿ

ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಲಯದಲ್ಲಿ ಇತ್ತೀಚೆಗೆ ಹೆಸರು ಗಳಿಸಿದ ಒಕಾಯಾ EV ಕಂಪನಿಯು ಇದೀಗ ಹೆಸರು ಬದಲಿಸಿಕೊಂಡಿದೆ. OPG ಮೊಬಿಲಿಟಿ ಹೆಸರಿನಲ್ಲಿ ಈಗ ಸದ್ದು ಮಾಡುತ್ತಿದೆ. ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸಿದ ಮಾಲೀಕರಿಗಾಗಿ ಪ್ರತ್ಯೇಕವಾಗಿ ಸೈಲೆಂಟ್ ಮೈಲ್ಸ್ ರೆಫರಲ್ ಪ್ರೋಗ್ರಾಂ ಎಂಬ ವಿಶಿಷ್ಟ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ತನ್ನ ಗ್ರಾಹಕರು ಪ್ರತಿ ಯಶಸ್ವಿ ರೆಫರಲ್‌ನಲ್ಲಿ ಕ್ಯಾಶ್‌ಬ್ಯಾಕ್ ಗಳಿಸುವ ಅವಕಾಶವನ್ನು ಕಂಪನಿ ನೀಡುತ್ತದೆ. ಕಂಪನಿಯ ಪ್ರಕಾರ ಇದರಡಿ ರೂ. 1,000 ಗಳಿಸಬಹುದು ಎಂದು ಕಂಪನಿ ಹೇಳಿದೆ.

Bengaluru 2nd Airport: ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..

ಬೆಂಗಳೂರು (Bengaluru) ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಸಿಲಿಕಾನ್ ವ್ಯಾಲಿ ಎಂದು ಹೆಸರುವಾಸಿಯಾಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಮೂಲಕ ದೇಶದ ನಾನಾ ಭಾಗಗಳು ಹಾಗೂ ವಿದೇಶಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಆಡಳಿತರೂಢ ಕಾಂಗ್ರೆಸ್ ಸರ್ಕಾರ ಎರಡನೇ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದೆ. ಈ ನೂತನ ವಿಮಾನ ನಿಲ್ದಾಣ ಎಲ್ಲಿ ಬರುತ್ತದೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಬೆಂಗಳೂರಿನಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣ: ಯಾರೀತ?

ಬೆಂಗಳೂರಿನಲ್ಲಿ ಕಳೆದ ವರ್ಷವಿದ್ದ ವಾಹನಗಳ ಸಂಖ್ಯೆ ವರ್ಷ ಕಳೆದಂತೆ ದುಪ್ಪಟ್ಟು ಆಗುತ್ತಿದೆ. ನಗರದ ಪ್ರಮುಖ ರಸ್ತೆಗಳು ಟ್ರಾಫಿಕ್ ಜಾಮ್‌ ನಿಂದ ನಲುಗುತ್ತಿವೆ, ಈ ಹಿಂದೆ ದಂಡ ವಿಧಿಸುವಲ್ಲಿ ಬಿಸಿಯಾಗಿದ್ದ ಟ್ರಾಫಿಕ್ ಪೊಲೀಸರು ಈಗ ಸಂಚಾರ ದಟ್ಟಣೆ ಕಡಿಮೆಯಾದರೆ ಸಾಕು ಎಂದುಕೊಳ್ಳುತ್ತಿದ್ದಾರೆ. ನಗರದ ಬಿಗಿ ರಸ್ತೆಗಳಲ್ಲಿ ಬೇಗನೆ ಗಮ್ಯವನ್ನು ತಲುಪಲು ಯತ್ನಿಸುವ ಹಲವರು ಮನಬಂದತೆ ಸಿಗ್ನಲ್ ಜಂಪ್, ರಾಂಗ್ ರೂಟ್, ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ನಗರದಾದ್ಯಂತ ಕ್ಯಾಮರಾಗಳನ್ನು ಅಳವಡಿಸಿದ್ದರು ಹಲವರು ಇದನ್ನು ಲೆಕ್ಕಿಸದೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ.

Ola Roadster X: ನೂತನ ಓಲಾ ರೋಡ್‌ಸ್ಟರ್ ಎಕ್ಸ್ ಇ-ಬೈಕ್‌ ಬಿಡುಗಡೆ

ಬೆಂಗಳೂರಿನ ಓಲಾ ಎಲೆಕ್ಟ್ರಿಕ್ (Ola Electric), ನಂ.1 ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ (two wheeler) ಕಂಪನಿಯಾಗಿದ್ದು, ಭಾರೀ ಜನಪ್ರಿಯತೆಯನ್ನು ಗಳಿಸಿದೆ. ದೇಶೀಯವಾಗಿ 'ಎಸ್1' ಸೀರೀಸ್ ಇ-ಸ್ಕೂಟರ್‌ಗಳನ್ನು ಮಾರಾಟಗೊಳಿಸುವ ಮೂಲಕ ಅಬ್ಬರಿಸುತ್ತಿದೆ. ಇದೀಗ, ಕಂಪನಿಯು ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾರುಕಟ್ಟೆಯನ್ನು ಅಧಿಕೃತವಾದ ಪ್ರವೇಶಿಸಿದ್ದು, ಹೊಚ್ಚ ಹೊಸ 'ರೋಡ್‌ಸ್ಟರ್ ಎಕ್ಸ್' ಎಲೆಕ್ಟ್ರಿಕ್ ಬೈಕ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಈ ನೂತನ ಇ-ಮೋಟಾರ್‌ಸೈಕಲ್ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Best CNG cars: ಕೇವಲ 9 ಲಕ್ಷದೊಳಗೆ ಸಿಗುವ ಬೆಸ್ಟ್‌ CNG ಕಾರುಗಳು

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ಭಾರತದಲ್ಲಿ ಸಿಎನ್‌ಜಿ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕಾರು ತಯಾರಕರು ಕೂಡ ಬೇಡಿಕೆಯನ್ನು ಆಧರಿಸಿ ಬಹುತೇಕ ಪೆಟ್ರೋಲ್ ಚಾಲಿತ ಮಾದರಿಗಳನ್ನು ಸಿಎನ್‌ಜಿ ಆವೃತ್ತಿಯಲ್ಲೂ ಬಿಡುಗಡೆ ಮಾಡುತ್ತಿದ್ದಾರೆ. ಪೆಟ್ರೋಲ್ ಮಾದರಿಗಳಿಗೆ ಹೋಲಿಸಿದರೆ ಅವುಗಳ ಸಿಎನ್‌ಜಿ ಮಾಡಲ್‌ಗಳು ತುಸು ದುಬಾರಿಯಾಗಿರುತ್ತವೆ. ಆದರೆ ಮೈಲೇಜ್ ಪರವಾಗಿ ಹಾಗೂ ನಿರ್ವಹಣೆ ವಿಚಾರದಲ್ಲಿ ಹಣ ಉಳಿಸಬಹುದು. ನಿಮ್ಮ ಬಜೆಟ್ 9 ಲಕ್ಷ ರೂ.ಗಿಂತ ಕಡಿಮೆ ಇದ್ದರೆ ನೀವು ಸರಿಯಾದ ಲೇಖನ ಓದುತ್ತಿದ್ದೀರಾ. ಬನ್ನಿ ನಿಮ್ಮ ಬಜೆಟ್‌ನಲ್ಲಿ ಬೆಸ್ಟ್‌ ಸಿಎನ್‌ಜಿ ಕಾರು (Best CNG cars) ಗಳನ್ನು ನೋಡೋಣ.
Advertisement

Renault: ಎಲ್ಲ ಕಾರುಗಳ ಮೇಲೆ ದೊಡ್ಡ ರಿಯಾಯಿತಿ ಘೋಷಣೆ, 4.69 ಲಕ್ಷ..

ರೆನಾಲ್ಟ್ ಇಂಡಿಯಾ (Renault India), ದೇಶೀಯ ಮಾರುಕಟ್ಟೆಯಲ್ಲಿ ಕ್ವಿಡ್, ಕಿಗರ್ ಹಾಗೂ ಟ್ರೈಬರ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವುದರಿಂದ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿವೆ. ಸದ್ಯ, ಕಂಪನಿಯು ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯಲು ಈ ಫೆಬ್ರವರಿಯಲ್ಲಿ ಎಲ್ಲ ಕಾರುಗಳ ಖರೀದಿ ಮೇಲೆ ಭಾರೀ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

2025ರ ಮೊದಲ ತಿಂಗಳೇ ಶುಭಾರಂಭ.. ಹೀರೋ ಕಂಪನಿಯನ್ನು ಹಿಂದಿಕ್ಕಿದ..

ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದ್ದು, 2025ರ ಮೊದಲ ತಿಂಗಳೇ ಶುಭಾರಂಭ ಮಾಡಿದೆ. ಈ ಜನವರಿಯಲ್ಲಿ ಸರಿ ಸುಮಾರು 2,000 ಯುನಿಟ್‌ (ದೇಶೀಯ & ರಫ್ತು) ದ್ವಿಚಕ್ರ ವಾಹನಗಳನ್ನು ಹೆಚ್ಚುವರಿಯಾಗಿ ಮಾರಾಟಗೊಳಿಸುವ ಮೂಲಕ ಹೀರೋ ಮೋಟೋಕಾರ್ಪ್ (Hero MotoCorp) ಅನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಎಪ್ರಿಲಿಯಾ ಬೈಕ್ ಜೊತೆ ಮತ್ತೆ ಮೋಡಿ ಮಾಡಿದ ಸ್ಟಾರ್ ನಟ

ಬ್ರಾಂಡ್ ಅಂಬಾಸಿಡರ್ ಜಾನ್ ಅಬ್ರಹಾಂ (ಬಾಲಿವುಡ್ ನಟ) ಅವರೊಂದಿಗೆ ಎಪ್ರಿಲಿಯಾ ಇಂಡಿಯಾದ ಜಾಹೀರಾತು ಅಭಿಯಾನದ ಅದ್ಭುತ ಯಶಸ್ಸನ್ನು ಮುಂದುವರೆಸುತ್ತಾ, ಎಪ್ರಿಲಿಯಾ (Aprilia) ಇಂಡಿಯಾ ತನ್ನ ಬಹುನಿರೀಕ್ಷಿತ ಡಿಜಿಟಲ್ ಜಾಹೀರಾತು ಅಭಿಯಾನದ ಮೂರನೇ ಕಂತಿನ ಬಿಡುಗಡೆಯೊಂದಿಗೆ ಪರ್ಫಾಮೆನ್ಸ್ ಮೋಟಾರ್‌ಸೈಕಲ್ ಜಾಹೀರಾತಿನ ಮಿತಿಗಳನ್ನು ವಿಸ್ತರಿಸಿದೆ. ಈ ಸರಣಿಯ ಮೊದಲ ಎರಡು ಜಾಹೀರಾತುಗಳಾದ 'ಫನ್' ಮತ್ತು 'ಲಸ್ಟ್' ಡಿಜಿಟಲ್ ಮಾಧ್ಯಮಗಳಲ್ಲಿ 76.6 ಮಿಲಿಯನ್‌ಗಿಂತಲೂ ಹೆಚ್ಚು ನೋಡುಗರ ಮನಗೆದ್ದಿದೆ. ಇದು ಎಪ್ರಿಲಿಯಾ ಇಂಡಿಯಾ ವೆಬ್‌ಸೈಟ್ ಟ್ರಾಫಿಕ್‌ಗೆ ಶೇ100 ಕ್ಕಿಂತ ಹೆಚ್ಚು ಏರಿಕೆ ತಂದುಕೊಟ್ಟಿದೆ ಎಂದು ಕಂಪನಿ ಹೇಳಿದೆ.

Yamaha: ಯಮಹಾ RX100 ನೆನಪಿಸಿದ R15: ಯುವಕರು ಮುಗಿಬಿದ್ದು ಖರೀದಿ!

ಯಮಹಾ ಮೋಟಾರ್ ತನ್ನ ಅತ್ಯಂತ ಪ್ರತಿಷ್ಠಿತ ವಾಹನಗಳಲ್ಲಿ ಒಂದಾದ ಯಮಹಾ R15 (Yamaha R15) ಮೋಟಾರ್‌ಸೈಕಲ್‌ನೊಂದಿಗೆ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ. ಈ ಮೋಟಾರ್‌ಸೈಕಲ್‌ನ 1 ಮಿಲಿಯನ್ (ಹತ್ತು ಲಕ್ಷ) ಯೂನಿಟ್‌ ವಾಹನಗಳ ಉತ್ಪಾದನಾ ಮೈಲಿಗಲ್ಲನ್ನು ಪೂರ್ಣಗೊಳಿಸಿದೆ. ಬಿಡುಗಡೆ ಆದಾಗಿನಿಂದಲೂ ಭಾರತೀಯ ಮಾರುಕಟ್ಟೆಯಲ್ಲಿ ಯಮಹಾಗೆ ಉತ್ತಮ ಹೆಸರು ತಂದುಕೊಟ್ಟ ವಾಹನವಾಗಿ R15 ಮುಂದುವರಿದಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಡಿಸೈನ್‌ನಲ್ಲಿ ಮುಂಚೂಣಿಯಲ್ಲಿರುವ ಜೊತೆ ಜೊತೆಗೆ ಯುವ ಭಾರತೀಯ ಮೋಟಾರ್‌ಸೈಕಲ್ ಸವಾರರ ಆಕಾಂಕ್ಷೆಗಳನ್ನು ನೆರವೇರಿಸುವ ಬೆಸ್ಟ್ ಬೈಕ್ ಆಗಿ ಗುರ್ತಿಸಿಕೊಂಡಿದೆ.

Hyundai: 21 ಕಿ.ಮೀ ಮೈಲೇಜ್, 5-ಸೀಟರ್.. ಜನಪ್ರಿಯ ಹ್ಯುಂಡೈ ಕ್ರೆಟಾ..

ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India), ದೇಶೀಯ ಮಾರುಕಟ್ಟೆಯಲ್ಲಿ 'ಕ್ರೆಟಾ' ಎಸ್‌ಯುವಿಯನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಕೈಗಟುಕುವ ಬೆಲೆಯಲ್ಲಿಯೂ ಖರೀದಿಗೆ ಲಭ್ಯವಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ ಈ ಕಾರಿನ ಆ ಬೆಲೆ ಏರಿಕೆಯಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಐರಾವತದಂತಿರುವ ಕಾರು ಖರೀದಿಸಿದ ಖ್ಯಾತ ಕ್ರಿಕೆಟಿಗ..

ಇಶಾನ್ ಕಿಶನ್ (Ishan Kishan), ಜನಪ್ರಿಯ ಕ್ರಿಕೆಟರ್ ಆಗಿದ್ದು, ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ಅವರು, 2021ರಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಾರೆ. ಇಶಾನ್ ಕಿಶನ್ ಅವರಿಗೆ ಕ್ರಿಕೆಟ್‌ನಂತೆ ಕಾರುಗಳ ಮೇಲೆ ವಿಶೇಷವಾದ ಪ್ರೀತಿಯಿದ್ದು, ಹಲವು ದುಬಾರಿ ಬೆಲೆಯ ಐಷಾರಾಮಿ ಸೆಡಾನ್ & ಎಸ್‌ಯುವಿಗಳ ಮಾಲೀಕರು ಆಗಿದ್ದಾರೆ.

ಭಾರತದಲ್ಲಿ ಯಾರಿಗೂ ಬೇಡ.. ಆದ್ರೆ ನಮ್ಮಲ್ಲೇ ತಯಾರಾಗುವ ಇದೇ..

ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಅತ್ಯುತ್ತಮ ಆಫ್-ರೊಡ್ ಎಸ್‌ಯುವಿಯಾಗಿದೆ. ಆದರೂ ದೇಶೀಯ ಮಾರುಕಟ್ಟೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಈ ಕಾರು ಮಾರಾಟವಾಗುತ್ತಿಲ್ಲ.. ವಿದೇಶದಲ್ಲಿ ಮಾತ್ರ ಈ ಮೇಡ್ ಇನ್ ಇಂಡಿಯಾ 'ಜಿಮ್ನಿ'ಗೆ ಭಾರೀ ಬೇಡಿಕೆಯಿದ್ದು, ಅಲ್ಲಿನ ಗ್ರಾಹಕರು ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಜನವರಿ 30ರಂದು ಮಾರುತಿ ಸುಜುಕಿ ಮಾತೃ ಸಂಸ್ಥೆ 'ಸುಜುಕಿ' ಇದೇ 5-ಡೋರ್ ಜಿಮ್ನಿಯನ್ನು ಜಪಾನ್‌ ಮಾರುಕಟ್ಟೆಯಲ್ಲಿ ಜಿಮ್ನಿ ನೊಮೇಡ್ (Jimny Nomade) ಹೆಸರಿನಲ್ಲಿ ಪರಿಚಯಿಸಿದೆ.
Advertisement

Maruti eVitara: ಡೀಲರ್‌ ತಲುಪಿದ ಮೊದಲ ಮಾರುತಿ ಎಲೆಕ್ಟ್ರಿಕ್ ಕಾರು

ಕೊನೆಗೂ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರು ಡೀಲರ್‌ಶಿಪ್‌ಗೆ ಎಂಟ್ರಿಕೊಟ್ಟಿದೆ. ಜನವರಿಯಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋ 2025ರಲ್ಲಿ ಅನಾವರಣಗೊಂಡ ಮಾರುತಿ ಸುಜುಕಿ ಎಲೆಕ್ಟ್ರಿಕ್ ಇ-ವಿಟಾರಾ (Maruti eVitara), ಶೀಘ್ರದಲ್ಲೆ ಬಿಡುಗಡೆಯಾಗಲಿದೆ. ಇದು ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿ ಆಗಿರುವುದರಿಂದ ನೆಕ್ಸಾ ಡೀಲರ್‌ಶಿಪ್‌ನಲ್ಲಿ ಮಾತ್ರ ಮಾರಾಟವಾಗಲಿದೆ. ಇದೀಗ ಬಿಡುಗಡೆ ಮುನ್ನವೆ ದೇಶಾದ್ಯಂತ ಮಾರುತಿ ಸುಜುಕಿ ತನ್ನ ಇ-ವಿಟಾರವನ್ನು ಪ್ರದರ್ಶನಕ್ಕಿಡಲು ಡೀಲರ್‌ಗಳಿಗೆ ಕಳುಹಿಸುತ್ತಿದೆ. ಬೆಂಗಳೂರಿನ ಶೋರೂಂ ಒಂದರಲ್ಲಿ ಹೊಸ ಮಾರುತಿ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಲಾಗಿದೆ. ಸದ್ಯ ಅನೇಕ ಗ್ರಾಹಕರನ್ನು ಈ ಕಾರು ಡೀಲರ್‌ಶಿಪ್‌ಗೆ ಆಕರ್ಷಿಸುತ್ತಿದೆ.

Tata: ಟಾಟಾದ ಹೊಸ ಎಲೆಕ್ಟ್ರಿಕ್ ಕಾರಿನ ರೋಡ್ ಟೆಸ್ಟ್..

ಜನಪ್ರಿಯ ಸ್ವದೇಶಿ ವಾಹನ ತಯಾರಕ ಟಾಟಾ ಮೋಟಾರ್ಸ್ (Tata Motors), ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಇತ್ತಿಚೆಗೆ ನವದೆಹಲಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಉತ್ಪಾದನೆಗೆ ಸಿದ್ಧಗೊಂಡಿರುವ ಹೊಚ್ಚ ಹೊಸ 'ಹ್ಯಾರಿಯರ್ ಇವಿ'ಯನ್ನು ಪ್ರದರ್ಶಿಸಿತ್ತು. ಸದ್ಯ, ಈ ಕಾರು ಪ್ರಾಯೋಗಿಕ ಸಂಚಾರ ನಡೆಸುವಾಗ ಕಂಡುಬಂದಿದ್ದು, ಅದಕ್ಕೆ ಸಂಬಂಧಿಸಿದ ಸ್ಪೈ ಫೋಟೋಗಳು ಆನ್‍‍ಲೈನ್‍‍ನಲ್ಲಿ ಕೂಡ ಸೋರಿಕೆಯಾಗಿವೆ. ಎಲ್ಲವು ಅಂದುಕೊಂಡಂತೆ ನಡೆದರೆ, ಶೀಘ್ರದಲ್ಲೇ ಈ ನೂತನ ಕಾರು ಮಾರಾಟಕ್ಕೂ ಬರಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Mantra: ಸೈಕಲ್ ಬೆಲೆಯಲ್ಲಿ ಸ್ಕೂಟರ್ ಖರೀದಿಸಿ

ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಜನಪ್ರಿಯತೆಯನ್ನು ಗಳಿಸುತ್ತಿವೆ. ಅದರಲ್ಲೂ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಸ್ಕೂಟರ್‌ಗಳು ಲಭ್ಯವಾದರೆ ಇನ್ನೂ ಬೇಡಿಕೆ ಹೆಚ್ಚಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಂತ್ರ (Mantra) ಎಲೆಕ್ಟ್ರಿಕ್ ಕಂಪನಿಯು ವಿಭಿನ್ನ ಬಜೆಟ್ ಮತ್ತು ಅಗತ್ಯಗಳಿಗೆ ಸರಿಹೊಂದುವಂತೆ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ನೀಡುತ್ತಿದೆ. ಕೇವಲ 35,000 ರೂ.ಗಳಿಂದ ಪ್ರಾರಂಭವಾಗುವ ಬೆಸ್ಟ್ ಬಜೆಟ್ ಸ್ಕೂಟರ್‌ಗಳನ್ನು ನಿಡುತ್ತಿದೆ. ಕೇವಲ ರೂ.5,000 ಡೌನ್ ಪೇಮೆಂಟ್ ನೊಂದಿಗೆ ಸ್ಕೂಟರ್ ಅನ್ನು ಮನೆಗೆ ತೆಗೆದುಕೊಂಡು ಹೋಗಬಹುದು ಎಂದು ಕಂಪನಿ ಹೇಳಿದೆ.

Kia: 5-ಸೀಟರ್, ಕೈಗೆಟುಕುವ ಬೆಲೆ.. ಹೊಸ ಕಿಯಾ ಸೈರಸ್ ಎಸ್‌ಯುವಿ..

ಕಿಯಾ ಮೋಟಾರ್ಸ್ (Kia Motors), ಇದೇ ಫೆ.1ರಂದು ಹೊಸ 'ಸೈರಸ್' ಎಸ್‌ಯುವಿಯನ್ನು ಮಾರಾಟಕ್ಕೆ ತಂದಿತ್ತು. ಈ ಕಾರು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಅದಕ್ಕೆ ತಕ್ಕಂತೆ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ನೀವು ನೂತನ ಕಾರನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಕಿಯಾ ಸೈರಸ್ (Kia Syros) ಉತ್ತಮವಾದ ಆಯ್ಕೆಯಾಗಲಿದೆ ಎಂದು ಹೇಳಬಹುದು. ನಾವಿಲ್ಲಿ ಈ ಹೊಸ ಎಸ್‌ಯುವಿಯ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

kia: ಹೊಸ ಕಿಯಾ ಸೈರಸ್‌ಗೆ ಮುಗಿಬಿದ್ದ ಜನ

ದೇಶದ ಪ್ರಮುಖ ಕಾರು ತಯಾರಕ ಕಂಪನಿಯಾದ ಕಿಯಾ (Kia) ಇಂಡಿಯಾ, 2025 ರ ಹೊಸ ವರ್ಷವನ್ನು ಭರ್ಜರಿಯಾಗಿ ಪ್ರಾರಂಭಿಸಿದೆ. ಜನವರಿ 2025 ರಲ್ಲಿ 25,025 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಮಾರಾಟವಾದ 23,769 ಯುನಿಟ್‌ ಕಾರುಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ5 ರಷ್ಟು ವಾರ್ಷಿಕ ಹೆಚ್ಚಳವನ್ನು ದಾಖಲಿಸಿದೆ. ಬ್ರ್ಯಾಂಡ್‌ನ ಹೊಸದಾಗಿ ಬಿಡುಗಡೆಯಾದ ಮಾದರಿ, ಕಿಯಾ ಸೈರಸ್ ತನ್ನ ಮೊದಲ ತಿಂಗಳಲ್ಲಿ 5,546 ಯುನಿಟ್‌ ವಾಹಗಳನ್ನು ಮಾರಾಟ ಕಾಣುವ ಮೂಲಕ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ ಎಂದು ಕಿಯಾ ಮೋಟಾರ್ಸ್ ಹೇಳಿದೆ.