ಭಾರತದಲ್ಲಿ ತಯಾರಿಸಿದ ಈ ಪ್ರಖ್ಯಾತ ಕಾರಿಗೆ ಮನಸೋತ ವಿದೇಶಿ ಗ್ರಾಹಕರು..
ಆಟೋಮೊಬೈಲ್ಸ್
- 1 year, 8 month, 2 days ago
ನಿಸ್ಸಾನ್ ಮೋಟಾರ್ ಇಂಡಿಯಾ (Nissan Motor India), ವಿದೇಶಗಳಿಗೆ ಗೇಮ್ ಚೇಂಜರ್ 'ಮ್ಯಾಗ್ನೈಟ್'ನ ಲೆಫ್ಟ್-ಹ್ಯಾಂಡ್ ಡ್ರೈವ್ (ಎಲ್‌ಎಚ್‌ಡಿ) ಕಾರುಗಳನ್ನು ರಫ್ತು ಮಾಡುವುದಕ್ಕೆ ಶುರು ಮಾಡಿದೆ. ಈ ಜನವರಿಯ ಅಂತ್ಯದಲ್ಲಿ ಚೆನ್ನೈನ ಕಾಮರಾಜರ್ ಬಂದರಿನಿಂದ ಲ್ಯಾಟಿನ್ ಅಮೆರಿಕ (ಎಲ್ಎಟಿಎಎಂ) ಪ್ರಾಂತ್ಯಗಳಿಗೆ ಹೊಸ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯ 2,900 ಎಲ್‌ಎಚ್‌ಡಿ ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ಫೆಬ್ರವರಿಯಲ್ಲಿ ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ಏಷ್ಯಾ ಪೆಸಿಫಿಕ್ ಸೇರಿದಂತೆ ಇತರೆ ಆಯ್ದ ದೇಶಗಳಿಗೆ 7,100 ಯುನಿಟ್ ಮ್ಯಾಗ್ನೈಟ್ ಕಾರುಗಳನ್ನು ರಫ್ತು ಮಾಡಲಾಗುತ್ತಿದೆ. ಮಾಸಾಂತ್ಯದ ವೇಳೆಗೆ ಒಟ್ಟು 10000ಕ್ಕೂ ಹೆಚ್ಚು ಲೆಫ್ಟ್ ಹ್ಯಾಂಡ್ ಡ್ರೈವ್ (ಎಲ್‌ಎಚ್‌ಡಿ) ಮ್ಯಾಗ್ನೈಟ್ ಎಸ್‌ಯುವಿಗಳನ್ನು ನಿಸ್ಸಾನ್ ರಫ್ತು ಮಾಡಲು ಉದ್ದೇಶಿಸಿದೆ.