TVS Jupiter CNG: ಜುಪಿಟರ್ CNG ಸ್ಕೂಟರ್ ವಿಶೇಷತೆಗಳು

ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ಜುಪಿಟರ್ ಸಿಎನ್‌ಜಿ ಸ್ಕೂಟರ್ (TVS Jupiter CNG Scooter) ಅನ್ನು ಟಿವಿಎಸ್ ಮೋಟಾರ್‌ ಕಂಪನಿಯು ಕೊನೆಗೂ ಅನಾವರಣಗೊಳಿಸಿದೆ. ದೆಹಲಿಯಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋ 2025 (Auto Expo 2025) ರಲ್ಲಿ ಟಿವಿಎಸ್ ಕಂಪನಿಯು ಅಧಿಕೃತವಾಗಿ ಪ್ರದರ್ಶನಕ್ಕೆ ಇಟ್ಟಿದೆ. ಜುಪಿಟರ್ ಸಿಎನ್‌ಜಿ ಮಾದರಿಯು ಪೆಟ್ರೋಲ್ ಚಾಲಿತ ಜುಪಿಟರ್ 125 ಸ್ಕೂಟರ್‌ನಂತೆಯೇ ಇದೆ. ಆದರೆ ಪೆಟ್ರೋಲ್‌ ಟ್ಯಾಂಕ್‌ ಜಾಗದಲ್ಲಿ ಸಿಎನ್‌ಜಿ ಟ್ಯಾಂಕ್ ಅಳವಡಿಕೆಗೆ ಮಾತ್ರ ಕೆಲ ಬದಲಾವಣೆಗಳನ್ನು ಮಾಡಲಾಗಿದ್ದು, ಉಳಿದಂತೆ ವಿನ್ಯಾಸ, ವೈಶಿಷ್ಟ್ಯ, ಡಿಸೈನ್ ಎಲ್ಲವೂ ಹಾಗೆಯೇ ಇದೆ.

ಟಾಟಾಗೆ ನಡುಕ ಹುಟ್ಟಿಸಿದ ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರು ಹೇಗಿದೆ?

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಪಂಚದ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳ ರೀತಿಯಲ್ಲೇ ಭಾರತದಲ್ಲೂ ಐಷಾರಾಮಿ ಕಾರು ಬ್ರಾಂಡ್‌ಗಳು ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ. ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಕಂಪನಿಯು ತಡವಾದರೂ ಇದೀಗ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿ ಎಲೆಕ್ಟ್ರಿಕ್ ವಾಹನ ರಂಗಕ್ಕೆ ಪ್ರವೇಶಿಸಲು ರೆಡಿಯಾಗಿದ್ದಾರೆ. 2025ರ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ ಈ ಹೊಸ ಇ-ವಿಟಾರಾ ಕಾರನ್ನು ಅನಾವರಣಗೊಳಿಸಿದೆ.

ಬಡವರು ಖರೀದಿಸಬಹುದು: ವಿನ್‌ಫಾಸ್ಟ್‌ನಿಂದ ಹಲವು ನೂತನ ಇ-ಸ್ಕೂಟರ್‌ಗಳ..

ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast) ಪ್ರಖ್ಯಾತ ವಾಹನ ತಯಾರಕ ಕಂಪನಿಯಾಗಿದೆ. ಏಷ್ಯಾದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ತನ್ನದೆಯಾದ ಛಾಪನ್ನು ಮೂಡಿಸಿದ್ದು, ಭಾರತಕ್ಕೂ ಬರಲು ಸಕಲ ಸಿದ್ಧತೆಯನ್ನು ನಡೆಸುತ್ತಿದೆ. ಅದರ ಭಾಗವಾಗಿ ನವದೆಹಲಿಯಲ್ಲಿ ಆಯೋಜಿಸಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಹಲವು ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪ್ರದರ್ಶಿಸಿದೆ. ಇದರೊಟ್ಟಿಗೆ ಶ್ರೀಸಾಮಾನ್ಯರಿಗೂ ಹೆಚ್ಚಿನ ಅನುಕೂಲವಾಗಿಸುವ ನಿಟ್ಟಿನಲ್ಲಿ ವಿವಿಧ ಇ-ಸ್ಕೂಟರ್‌ಗಳನ್ನು ಬಹಿರಂಗಗೊಳಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಜಾಗತಿಕ ಮಾರುಕಟ್ಟೆಯಲ್ಲಿಯೂ ಖರೀದಿಗೆ ಲಭ್ಯವಿವೆ. ಇವುಗಳು ದೇಶೀಯ ಗ್ರಾಹಕರಿಗೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವ ನೀರಿಕ್ಷೆಯಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Auto Expo 2025: ಭಾರತಕ್ಕೆ ಯಮಹಾ ಹೊಸ ಬೈಕ್ ಎಂಟ್ರ

ಆಟೋ ಎಕ್ಸ್‌ಪೋ 2025 (Auto Expo 2025) ರಲ್ಲಿ ಎಲ್ಲಾ ಬ್ರಾಂಡ್‌ಗಳಂತಲ್ಲದೆ ಯಮಹಾ ತನ್ನ ಹೊಸತನವನ್ನು ಮತ್ತೊಮ್ಮೆ ಸಾಭೀತು ಪಡಿಸಿದೆ. Y/AI ಎಂಬ ಫ್ಯೂಚರಿಸ್ಟಿಕ್ ಕಾನ್ಸೆಪ್ಟ್ ಮೋಟಾರ್‌ಸೈಕಲ್ ಅನ್ನು ಪ್ರದರ್ಶನಕ್ಕೆ ಇಟ್ಟು ಎಲ್ಲರ ಗಮನ ಸೆಳೆದಿದೆ. ಇದು ಯಮಹಾದ Y/AI (Yamaha Y/AI) ಆಕರ್ಷಕ ಕಾನ್ಸೆಪ್ಟ್ ಮಾಡಲ್ ಆಗಿದ್ದು, ತಂತ್ರಜ್ಞಾನದ ಉತ್ಸಾಹ ಮತ್ತು ವಿನ್ಯಾಸದ ವಿಕಾಸವನ್ನು ಸಂಯೋಜಿಸುವ ನವೀನ ಯೋಜನೆಯ ಫಲಿತಾಂಶವಾಗಿದೆ. ಇದರ ಡಿಸೈನ್ ಹಾಗೂ ಫೀಚರ್ಸ್ ಸಂಪೂರ್ಣ ಸೈ-ಫೈ ಸಿನಿಮಾಗಳಲ್ಲಿ ಕಾಣುವ ಫ್ಯೂಚರಿಸ್ಟಿಕ್ ಮೋಟಾರ್‌ಸೈಕಲ್‌ನಂತೆ ಇವೆ.
Advertisement

ಹೊಸ ಬಿಎಂಡಬ್ಲ್ಯು ಬೈಕ್ ಬಿಡುಗಡೆ

ಜರ್ಮನಿ ಮೂಲದ ಐಷಾರಾಮಿ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಬಿಎಂಡಬ್ಲ್ಯು ಮೊಟೊರಾಡ್ (BMW Motorrad) ತನ್ನ 2025ರ ಬಿಎಂಡಬ್ಲ್ಯು ಆರ್ 1300 GS ಅಡ್ವೆಂಚರ್ ಬೈಕ್ ಅನ್ನು ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಆರ್ 1300 GS ಅಡ್ವೆಂಚರ್ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.22.95 ಲಕ್ಷವಾಗಿದೆ. ಈ ಅಡ್ಚೆಂಚರ್ ಬೈಕ್ ಅನ್ನು ಇತರ ಬಿಎಂಡಬ್ಲ್ಯು ಬೈಕುಗಳಿಗಿಂತ ಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ಈ ಹೊಸ ಬಿಎಂಡಬ್ಲ್ಯು ಆರ್ 1300 GS ಅಡ್ವೆಂಚರ್ ಬೈಕ್ 30-ಲೀಟರ್ ಫ್ಯೂಯಲ್ ಟ್ಯಾಂಕ್ ಅನ್ನು ಚೆನ್ನಾಗಿ ಸಂಯೋಜಿಸಿದ್ದು, ಇದು ಬಾಕ್ಸಿ ಲುಕ್ ಅನ್ನು ನೀಡುತ್ತದೆ.

ಮೊನ್ನೆಯಷ್ಟೆ ಬಿಡುಗಡೆಯಾದ DEFY 22 ಸ್ಕೂಟರ್ ವಿಶೇಷತೆಗಳು

ಜನವರಿ 17, 2025 ರಂದು ಆರಂಭವಾದ ಆಟೋ ಎಕ್ಸ್‌ಪೋದಲ್ಲಿ ನೂರಾರು ಎಲೆಕ್ಟ್ರಿಕ್ ವಾಹನಗಳನ್ನು ಹೊಸ ಬ್ರಾಂಡ್‌ಗಳು ಬಿಡುಗಡೆ ಮಾಡಿವೆ. ಇದರಲ್ಲಿ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿರುವ OPG ಮೊಬಿಲಿಟಿ ಕೂಡ ಒಂದಾಗಿದ್ದು, ತನ್ನ ಬಹುನಿರೀಕ್ಷಿತ ಫೆರಾಟೊ 'DEFY 22' ಸ್ಕೂಟರನ್ನು ರೂ. 99,999 (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಹೊಸ 'DEFY 22' ಅಸಾಧಾರಣ ಶೈಲಿ, ಸಾಟಿಯಿಲ್ಲದ ಪವರ್ ಮತ್ತು ಉನ್ನತ-ಶ್ರೇಣಿಯ ಕಾರ್ಯಕ್ಷಮತೆಯ ಪರಿಪೂರ್ಣ ಮಿಶ್ರಣವಾಗಿದೆ ಎಂದು ಕಂಪನಿ ತಿಳಿಸಿದೆ. ಸ್ಕೂಟರ್ ಮುಖ್ಯಾಂಶಗಳು ಇಲ್ಲಿವೆ.

Tata: ಬಹುನಿರೀಕ್ಷಿತ ಫ್ಲೆಕ್ಸ್ ಫ್ಯುಯೆಲ್ ಟಾಟಾ ಪಂಚ್ ಕಾರು..

ದೇಶದ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ಗುರುತಿಸಿಕೊಂಡಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಕಂಪನಿಯು ಸಿಯೆರಾ, ಹ್ಯಾರಿಯರ್ ಇವಿ ಮತ್ತು ಅವಿನ್ಯಾ ಒಳಗೊಂಡಂತೆ ವಿವಿಧ ಕಾರುಗಳನ್ನು ಬಹಿರಂಗಪಡಿಸಿದೆ. ಇದರೊಟ್ಟಿಗೆ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ ಪರ್ಯಾಯ ಇಂಧನ ಚಾಲಿತ ಫ್ಲೆಕ್ಸ್ ಫ್ಯುಯೆಲ್ (Flex Fuel) 'ಪಂಚ್' ಮೆಕ್ರೋ ಎಸ್‌ಯುವಿಯನ್ನು ಪದರ್ಶನ ಮಾಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Hero Xoom 125: ಅಗ್ಗದ ದರಕ್ಕೆ ಹೀರೋ ಜೂಮ್ 125 ಸ್ಕೂಟರ್ ಮಾರಾಟ..

ಹೀರೋ ಮೋಟೋಕಾರ್ಪ್ (Hero MotoCorp), ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ನವ ದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಶುಕ್ರವಾರ ಕಂಪನಿಯು ಹೊಚ್ಚ ಹೊಸ ಜೂಮ್ 125 ಸ್ಕೂಟರ್‌ನ್ನು ಬಿಡುಗಡೆ ಮಾಡಿದೆ. ಇದು ಅತಿ ಕಡಿಮೆ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಗ್ರಾಹಕರು ಕೂಡ ಈ ಸ್ಕೂಟರ್‌ನ್ನು ಸುಲಭವಾಗಿ ಖರೀದಿ ಮಾಡಬಹುದು. ಬನ್ನಿ.. ಈ ನೂತನ ಸ್ಕೂಟರ್ ಬೆಲೆ (Price), ಕಾರ್ಯಕ್ಷಮತೆ (Performance) ಹಾಗೂ ವೈಶಿಷ್ಟ್ಯಗಳ (Features) ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

Toyota: ಇದೇ ರಸ್ತೆ ಮೇಲಿನ 'ಬಲಭೀಮ'.. ಟೊಯೊಟಾದ ಹೊಸ ಕಾರಿನ ಪರಿಚಯ..

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor), ಪ್ರಖ್ಯಾತ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಗ್ಲ್ಯಾನ್ಜಾ, ಅರ್ಬನ್ ಕ್ರೂಸರ್ ಹೈರೈಡರ್, ಅರ್ಬನ್ ಕ್ರೂಸರ್ ಟೈಸರ್ ಮತ್ತು ಇನ್ನೋವಾ ಸೇರಿದಂತೆ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. 2022ರಲ್ಲಿ ಕಂಪನಿಯು 'ಹಿಲಕ್ಸ್ ಪಿಕ್ಅಪ್ ಟ್ರಕ್'ನ್ನು ಬಿಡುಗಡೆಗೊಳಿಸಿತ್ತು. ಸದ್ಯ ಇದೇ ಕಾರನ್ನು ಮೇಲ್ದರ್ಜೆರಿಸಲಾಗಿದೆ. ನವದೆಹಲಿಯಲ್ಲಿ ಜರುಗುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿಯೂ ಈ ಕಾರಿನ 'ಬ್ಲ್ಯಾಕ್ ಎಡಿಷನ್' ಮಾಡೆಲ್‌ನ್ನು ಅನಾವರಣಗೊಳಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಆಟೋ ಎಕ್ಸ್‌ಪೋದಲ್ಲಿ ಆಕರ್ಷಕ ವಾಹನಗಳ ಪ್ರದರ್ಶನ!

ಟಿವಿಎಸ್ ಮೋಟಾರ್ (TVS Motor) ಕಂಪನಿ ಮತ್ತು ಹ್ಯುಂಡೈ ಮೋಟಾರ್ (Hyundai Motor) ಕಂಪನಿ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಸುಧಾರಿತ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು ಮತ್ತು ಮೈಕ್ರೋ ಫೋರ್-ವೀಲರ್‌ಗಳ ಕಾನ್ಸೆಪ್ಟ್ ಮಾಡಲ್‌ಗಳನ್ನು ಅನಾವರಣಗೊಳಿಸಿವೆ. ಈ ಪರಿಕಲ್ಪನೆಯ ಮಾದರಿಗಳು ಸುಸ್ಥಿರ ಚಲನಶೀಲತೆಯ ತುರ್ತು ಅಗತ್ಯವನ್ನು ಪರಿಹರಿಸುತ್ತವೆ. ಇವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾದ ರಸ್ತೆ ಮತ್ತು ನಗರ ಮೂಲಸೌಕರ್ಯದ ವಿಕಸಿಸುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿರುತ್ತವೆ ಎಂದು ಎರಡೂ ಕಂಪನಿಗಳು ಹೇಳಿವೆ.

ಕಷ್ಟದಿಂದ ಮೇಲೆದ್ದ ಗಿಲ್ಲಿ ನಟ: ಹೊಸ ಎಂಜಿ ಕಾರು ಖರೀದಿ..!

ಗಿಲ್ಲಿ ನಟ (Gilli Nata) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ.. ತನ್ನ ಹಾಸ್ಯದ ಮೂಲಕ ಭಾರೀ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಡಿಕೆಡಿ (ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್) ಶೋನಲ್ಲಿ ಭಾಗವಹಿಸಿದ್ದ ಅವರು, ವೇದಿಕೆ ಮೇಲೆ 'ಮಹಾನಟಿ' ಖ್ಯಾತಿಯ ಗಗನಾ ಜೊತೆಗೆ ಮಾಡುತ್ತಿದ್ದ ಕಾಮಿಡಿ ವೀಕ್ಷಕರಿಗೆ ಇಷ್ಟವಾಗಿತ್ತು. ಗಿಲ್ಲಿ ನಟನ ನಿಜವಾದ ಹೆಸರು ನಟರಾಜ್ ಎಂದು.. ಮೂಲತಃ ಮಂಡ್ಯದವರಾಗಿದ್ದು, ಹಾಸ್ಯ ಕಲಾವಿದನಾಗಿ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಶ್ರಮಪಟ್ಟಿದ್ದಾರೆ.

ಜಿಂದಾಲ್ - ಎಂಜಿ ರಣತಂತ್ರ: ವಿಮಾನದಂತಿರುವ ಹೊಸ ಸೈಬರ್‌ಸ್ಟರ್..

ಜಿಂದಾಲ್ ಹಾಗೂ ಎಂಜಿ ಕಂಪನಿಗಳು ವ್ಯಾಪಾರ ಪಾಲುದಾರಿಕೆಯನ್ನು ಹೊಂದಿವೆ. ಅದರ ಭಾಗವಾಗಿ ಭಾರತದ ಮಾರುಕಟ್ಟೆಯಲ್ಲಿ ವಿವಿಧ ಹೊಸ ಕಾರುಗಳು ಹೊರತರುತ್ತಿವೆ. ನವದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಎಂಜಿ ಕಂಪನಿಯು ಹೊಚ್ಚ ಹೊಸ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸೆಡಾನ್‌ನ್ನು ಪ್ರದರ್ಶನ ಮಾಡಿದೆ. ಈ ಕಾರು ಆಕರ್ಷಕವಾಗಿದ್ದು, ಮುಂಬರುವ ತಿಂಗಳಲ್ಲಿ ದೇಶೀಯವಾಗಿಯೂ ಬಿಡುಗಡೆಯಾಗುವ ನಿರೀಕ್ಷೆಯಿದೆ.
Advertisement

ಬಿಎಂಡಬ್ಲ್ಯು ಎಕ್ಸ್1 ಲಾಂಗ್ ವೀಲ್‌ಬೇಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಇಂಡಿಯಾ ತನ್ನ ಬಿಎಂಡಬ್ಲ್ಯು ಎಕ್ಸ್1 ಲಾಂಗ್ ವೀಲ್‌ಬೇಸ್ ಆಲ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್1 ಲಾಂಗ್ ವೀಲ್‌ಬೇಸ್ (BMW X1 Long Wheelbase) ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.49 ಲಕ್ಷವಾಗಿದೆ. ಇನ್ನು ಈ ಹೊಸ ಬಿಎಂಡಬ್ಲ್ಯು ಕಾರನ್ನು ಸ್ಥಳೀಯವಾಗಿ ಬಿಎಂಡಬ್ಲ್ಯು ಕಂಪನಿಯ ಚೆನ್ನೈ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಇದು eDrive20L ಡ್ರೈವ್‌ಟ್ರೇನ್‌ನೊಂದಿಗೆ ಬರುತ್ತದೆ ಮತ್ತು ಭಾರತದಾದ್ಯಂತ ಬಿಎಂಡಬ್ಲ್ಯು ಡೀಲರ್‌ಶಿಪ್‌ಗಳಲ್ಲಿ ಬುಕಿಂಗ್‌ಗೆ ಲಭ್ಯವಿದೆ. 2025ರ ದ್ವಿತೀಯಾರ್ಧದಲ್ಲಿ ಈ ಬಿಎಂಡಬ್ಲ್ಯು ಕಾರಿನ ವಿತರಣೆಯು ಪ್ರಾರಂಭವಾಗಲಿದೆ.

2025 ಆಟೋ ಎಕ್ಸ್‌ಪೋದಲ್ಲಿ ಎರಡು ಆಕರ್ಷಕ ಸ್ಕೂಟರ್‌ಗಳ ಅನಾವರಣ

ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕರಾದ ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ ಲಿಮಿಟೆಡ್, ಇಂದು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ತನ್ನ ಉತ್ಪನ್ನ ಪೋರ್ಟ್ಫೋಲಿಯೊಗೆ ಹೊಸ ಸೇರ್ಪಡೆಗಳನ್ನು ಅನಾವರಣಗೊಳಿಸಿದೆ. ಕಂಪನಿಯು ಎಬ್ಲು ಫಿಯೋ Z, ಎಬ್ಲು ಫಿಯೋ DX ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಎಬ್ಲು ಫಿಯೋ Z ಅನ್ನು ಕಡಿಮೆ-ವೇಗದ ಸ್ಕೂಟರ್‌ನಂತೆ ವಿನ್ಯಾಸಗೊಳಿಸಲಾಗಿದ್ದು, ಎಬ್ಲು ಫಿಯೋ DX ಅನ್ನು ಅತ್ಯುತ್ತಮ ಪರ್ಫಾಮೆನ್ಸ್ ಮತ್ತು ಪ್ರತಿ ಚಾರ್ಜ್‌ಗೆ 150 ಕಿ.ಮೀ ರೇಂಜ್ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ಹೊಸ ಬಿಎಂಡಬ್ಲ್ಯು ಎಸ್ 1000 ಆರ್‌ಆರ್‌ ಬೈಕ್ ಅನಾವರಣ

ಜರ್ಮನಿ ಮೂಲದ ಐಷಾರಾಮಿ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಬಿಎಂಡಬ್ಲ್ಯು ಮೊಟೊರಾಡ್ (BMW Motorrad) ತನ್ನ ಬಿಎಂಡಬ್ಲ್ಯು ಎಸ್ 1000 ಆರ್‌ಆರ್‌ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಸ್ 1000 ಆರ್‌ಆರ್‌ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.21.10 ಲಕ್ಷವಾಗಿದೆ. 2024ರ ಅಕ್ಟೋಬರ್ ತಿಂಗಳಿನಲ್ಲಿ ಜಾಗತಿಕವಾಗಿ ಈ ಹೊಸ ಬೈಕ್ ಅನಾವರಣಗೊಂಡಿತು. ಈ ಹೊಸ ಬಿಎಂಡಬ್ಲ್ಯು ಎಸ್ 1000 ಆರ್‌ಆರ್‌ ಬೈಕಿನಲ್ಲಿ 999 cc ಇನ್‌ಲೈನ್-ಫೋರ್ ಎಂಜಿನ್‌ ಅನ್ನು ಮುಂದುವರೆಸಿದೆ.

ಆಟೋದಂತಿರುವ ಆಟೋವನ್ನು ಬಿಡುಗಡೆ ಮಾಡಿದ ಗೋದಾವರಿ ಎಲೆಕ್ಟ್ರಿಕ್

ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿರುವ ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್, ಇಂದು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 (Auto expo 2025) ರಲ್ಲಿ ಹೊಸ ಎಬ್ಲು ರೋಝೀ ಇಕೋ (Eblu Rozee ECO) ಎಂಬ ಆಕರ್ಷಕ ತ್ರಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. ಕಂಪನಿಯು ಮಾರುಕಟ್ಟೆಯ ವಿವಿಧ ವಿಭಾಗಗಳಲ್ಲಿ ಸುಸ್ಥಿರ ಚಲನಶೀಲತೆ ಪರಿಹಾರಗಳಿಗೆ ತನ್ನ ನಿರಂತರ ಬದ್ಧತೆಗೆ ಅನುಗುಣವಾಗಿ ಎಬ್ಲು ರೋಜೀ ECO ತ್ರಿಚಕ್ರ ವಾಹನವನ್ನು ಬಿಡುಗಡೆ ಮಾಡಿರುವುದಾಗಿ ಹೇಳಿದೆ. ಈ ಹೊಸ ಎಲೆಕ್ಟ್ರಿಕ್ ತ್ರಿಚಕ್ರ ವಾಹನದ ಬೆಲೆಯು ರೂ. 2,95,999 (ಎಕ್ಸ್-ಶೋರೂಂ) ಇದೆ.

Tata: ಕರ್ನಾಟಕಕ್ಕೆ ರತನ್ ಟಾಟಾ ಕಂಪನಿಯ ಗೌರವ.. 'ಬಂಡೀಪುರ'..

ದಿವಂಗತ ರತನ್ ಟಾಟಾ (Ratan Tata) ಮಾಲೀಕತ್ವದ ಟಾಟಾ ಮೋಟಾರ್ಸ್ (Tata Motors), ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿದೆ. ನವದೆಹಲಿಯಲ್ಲಿ ಅದ್ದೂರಿಯಾಗಿ ಆಯೋಜಿಸಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಕಂಪನಿಯು ಸಿಯೆರಾ ಮತ್ತು ಹ್ಯಾರಿಯರ್ ಇವಿ ಸೇರಿದಂತೆ ವಿವಿಧ ಕಾರುಗಳನ್ನು ಅನಾವರಣಗೊಳಿಸಿದೆ. ಸದ್ಯ ಟಾಟಾ, ಕರ್ನಾಟಕಕ್ಕೆ ಗೌರವ ಸಲ್ಲಿಸಲು ಮುಂದಾಗಿದೆ. 3 ಹೊಸ ಕಾರುಗಳಿಗೆ ರಾಜ್ಯದಲ್ಲಿರುವ ರಾಷ್ಟ್ರೀಯ ಉದ್ಯಾನದ ಹೆಸರನ್ನು ಇಡಲು ತೀರ್ಮಾನ ಮಾಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ದುಡಿಯುವ ವರ್ಗಗಾಗಿ ಟಾಟಾ ಕಂಪನಿಯಿಂದ ಹೊಸ ಕೊಡುಗೆ

ಜನಪ್ರಿಯ ಸ್ವದೇಶೀ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಇತ್ತೀಚೆಗೆ ಪ್ರೈಮಾ G.55S ಟ್ರಕ್ ಅನ್ನು 2025ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ. ಈ ಹೊಸ ಟಾಟಾ ಪ್ರೈಮಾ G.55S (Tata Prima G.55S) ಟ್ರಕ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ವಾಹನದ ರೇಂಜ್ ವಿಷಯದಲ್ಲಿ ಹೊಸ ಎತ್ತರವನ್ನು ಹೊಂದಿಸುತ್ತದೆ. ಇಂಧನ ತುಂಬುವ ಅಗತ್ಯವಿಲ್ಲದೇ 2400 ಕಿಮೀ ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಎಲ್‌ಎನ್‌ಜಿಯ ಏಕೀಕರಣದಿಂದಾಗಿ ಈ ಸರಣಿಯ ಏರಿಕೆಯು ಟಾಟಾ ಪ್ರೈಮಾ ಜಿ.55 ಗಳು ಪರಿಸರಕ್ಕೆ ಹೆಚ್ಚಿನ ತೊಂದರೆಯನ್ನು ಉಂಟುಮಾಡದೆ ಹೆಚ್ಚು ದೂರವನ್ನು ಕ್ರಮಿಸಲು ಸಹಾಯ ಮಾಡುತ್ತದೆ.

TVS: ಎಥರ್, ಓಲಾಗೆ ಶುರುವಾಯ್ತು ನಡುಕ.. ಹೊಸ ಟಿವಿಎಸ್ ಐಕ್ಯೂಬ್

ಟಿವಿಎಸ್ ಮೋಟಾರ್ (TVS Motor) ನಂಬಿಕಾರ್ಹ ದ್ವಿಚಕ್ರ ವಾಹನ (Two Wheelers) ತಯಾರಕ ಕಂಪನಿಯಾಗಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯ 'ಐಕ್ಯೂಬ್' ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಹೊರಹೊಮ್ಮಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಶುಕ್ರವಾರ ಕಂಪನಿಯು 2025ರ ಹೊಚ್ಚ ಹೊಸ ಐಕ್ಯೂಬ್ ಎಸ್‌ಟಿ (iQube ST) ಕಾನ್ಸೆಪ್ಟ್ ಇ-ಸ್ಕೂಟರ್‌ನ್ನು ಅನಾವರಣಗೊಳಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

2-seater car: ಅತ್ಯಂತ ಅಗ್ಗದ ಬೆಲೆಯ 2-ಸೀಟರ್ ಕಾರು ಬಿಡುಗಡೆ

ವೇವ್ (Vayve) ಮೊಬಿಲಿಟಿಯು, ಭಾರತದ ಮೊದಲ ಸೋಲಾರ್ ಎಲೆಕ್ಟ್ರಿಕ್ 2-ಸೀಟರ್ (2-seater car) ಕಾರಾದ ಇವಾ (Eva) ವನ್ನು ರೂ. 3.25 ಲಕ್ಷ (ಎಕ್ಸ್-ಶೋರೂಂ) ಪರಿಚಯಾತ್ಮಕ ಬೆಲೆಗೆ ಬಿಡುಗಡೆ ಮಾಡಿದೆ. 9 kWhr, 12 kWhr ಮತ್ತು 18 kWhr ಎಂಬ ಮೂರು ವಿಭಿನ್ನ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಬೆಲೆಗಳು ರೂ. 3.25 ಲಕ್ಷ (ಎಕ್ಸ್-ಶೋರೂಂ) ಆರಂಭವಾಗಿ ರೂ. 5.99 ಲಕ್ಷ (ಎಕ್ಸ್-ಶೋರೂಂ) ವರೆಗೆ ಇದೆ. ಗ್ರಾಹಕರು ಬ್ಯಾಟರಿ ಚಂದಾದಾರಿಕೆ ಆಯ್ಕೆಗಳೊಂದಿಗೆ ಲಭ್ಯವಿರುವ ವೇರಿಯೆಂಟ್ ಅವಲಂಬಿಸಿ ಆಯ್ಕೆ ಮಾಡಬಹುದು ಎಂದು ಕಂಪನಿ ಹೇಳಿದೆ.
Advertisement

ಹೊಸ ಎಂಜಿ ಎಸ್‍ಯುವಿ ಅನಾವರಣ

ಜನಪ್ರಿಯ ವಾಹನ ತಯಾರಕ ಕಂಪನಿಯಾದ JSW ಎಂಜಿ ಮೋಟಾರ್ (MG Motor) ತನ್ನ ಹೊಸ ಫುಲ್ ಸೈಜ್ ಎಸ್‍ಯುವಿಯಾದ ಮೆಜೆಸ್ಟರ್ ಮಾದರಿಯನ್ನು ಅನಾವರಣಗೊಳಿಸಿದೆ. ಇದು ಗ್ಲೋಸ್ಟರ್‌ನ ನವೀಕರಿಸಿದ ಹೆಚ್ಚು ಪ್ರೀಮಿಯಂ ರೂಪಾಂತರವಾಗಿದೆ. ಈ ಹೊಸ ಎಂಜಿ ಮೆಜೆಸ್ಟರ್ ಎಸ್‍ಯುವಿಯು ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗಲು ರೆಡಿಯಾಗಿದೆ. ಈ ಎಂಜಿ ಎಂಜಿ ಎಸ್‍ಯುವಿಯು ವಿನ್ಯಾಸವು ಜಾಗತಿಕವಾಗಿ ಮಾರಾಟವಾದ Maxus D90 ನಿಂದ ಹೆಚ್ಚು ಪ್ರೇರಿತವಾಗಿದೆ ಮತ್ತು ಈ ಎಲೆಕ್ಟ್ರಿಕ್ ಎಸ್‍ಯುವಿಯ ಒಳಭಾಗದಲ್ಲಿ ಹೊಸ ವಿನ್ಯಾಸವನ್ನು ಹೊಂದಿದೆ.

ಎರಡು ಗೇಮ್‌ ಚೇಂಜರ್ ವಾಣಿಜ್ಯ ವಾಹನಗಳ ಬಿಡುಗಡೆ!

2025 ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ (Bharat Mobility Global Expo 2025) ದಲ್ಲಿ ಮೋಂಟ್ರಾ ಎಲೆಕ್ಟ್ರಿಕ್ ಕಂಪನಿಯು 'ಇವಿಯೇಟರ್' (ಇಎಸ್‌ಸಿವಿ) ಮತ್ತು ಸೂಪರ್ ಕಾರ್ಗೋ (ಇ 3-ವೀಲರ್) ವಾಹನಗಳನ್ನು ಬಿಡುಗಡೆ ಮಾಡಿದೆ. ಈ ವಾಹನಗಳನ್ನು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಅನಾವರಣಗೊಳಿಸಿದರು. ಈ ವಾಹನವು ದೈನಂದಿನ ವಾಹನ ಬಳಕೆಯನ್ನು ಹೆಚ್ಚಿಸಲು ಕಸ್ಟಮೈಸ್ ಮಾಡಿದ ಚಾರ್ಜಿಂಗ್ ಮತ್ತು ಆಫ್ಟರ್‌ಮಾರ್ಕೆಟ್ ಪರಿಹಾರಗಳಿಗೂ ಹೊಂದಿಕೊಳ್ಳುತ್ತದೆ ಎಂದು ಮೋಂಟ್ರಾ ಎಲೆಕ್ಟ್ರಿಕ್ ಕಂಪನಿ ಹೇಳಿದೆ.

Suzuki Access 125: ಲಕ್ಸುರಿ ಲುಕ್.. 2025ರ ಹೊಸ ಸುಜುಕಿ ಆಕ್ಸೆಸ್..

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India), ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಶುಕ್ರವಾರ ನವೀಕರಿಸಿದ 2025ರ ನೂತನ ಆಕ್ಸೆಸ್ 125 (Access 125) ಸ್ಕೂಟರ್‌ನ್ನು ಬಿಡುಗಡೆಗೊಳಿಸಿದೆ. ನೂತನ ಸ್ಕೂಟರ್ ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗಿದೆ. ಬನ್ನಿ.. ಹೊಸ ಸ್ಕೂಟರ್ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

ಸ್ವದೇಶಿ ಕಾರುಗಳಿಗೆ ನಡುಕ ಹುಟ್ಟಿಸಿದ ಚೀನಾ ಮಾಲೀಕತ್ವದ ಬಿವೈಡಿ

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಬಿವೈಡಿ (BYD) 2025ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ತನ್ನ್ ಹೊಸ ಸೀಲಿಯನ್ 7 ಕಾರನ್ನು ಅನಾವರಣಗೊಳಿಸಿದೆ. ಈ ಹೊಸ ಬಿವೈಡಿ ಸೀಲಿಯನ್ 7 ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹೊಸ ಬಿವೈಡಿ ಎಸ್‍ಯುವಿ ಮಾದರಿಯನ್ನು ಖರೀದಿಸಲು ಬಯಸುವ ಗ್ರಾಹಕರು ರೂ.70,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. 2025ರ ಮಾರ್ಚ್ ತಿಂಗಳಿನಲ್ಲಿ ಈ ಹೊಸ ಬಿವೈಡಿ ಕಾರಿನ ವಿತರಣೆಗಳು ಪ್ರಾರಂಭವಾಗಲಿದೆ.

Auto expo 2025: ಭಾರತಕ್ಕೆ ಹೊಸ ಬ್ರಾಂಡ್ ಎಂಟ್ರಿ

ದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ (Auto expo 2025) ವಿಯೆಟ್ನಂ ಮೂಲದ 'ವಿನ್‌ಫಾಸ್ಟ' (VinFast) ಕಂಪನಿಯು ಭಾರತೀಯ ಮಾರುಕಟ್ಟೆಗೆ ತನ್ನ ಮೊದಲ ಎರಡು ಎಲೆಕ್ಟ್ರಿಕ್ ವಾಹನಗಳನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ವಿನ್‌ಫಾಸ್ಟ್‌ ಕಂಪನಿಯು ಎರಡು ಎಲೆಕ್ಟ್ರಿಕ್ ಪ್ರೀಮಿಯಂ ಎಸ್‌ಯುವಿಗಳಾದ VF 7 ಮತ್ತು VF 6 ವಾಹನಗಳನ್ನು ಅನಾವರಣಗೊಳಿಸಿದೆ. ಈ ಅನಾವರಣವು ಭರವಸೆಯ ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ವಿನ್‌ಫಾಸ್ಟ್‌ಗೆ ಮಹತ್ವದ ಮೈಲಿಗಲ್ಲಾಗಿರುವುದಾಗಿ ಕಂಪನಿ ಹೇಳಿಕೊಂಡಿದೆ.