BYD: ಚೀನಾ ಕಂಪನಿಯಿಂದ ರಸ್ತೆ & ನೀರಿನ ಮೇಲೆ ಓಡಾಡುವ ಕಾರು ಅನಾವರಣ..

ಚೀನಾ ಮೂಲದ ಬಿವೈಡಿ (BYD) ಜನಪ್ರಿಯ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾಗಿದೆ. ಜಾಗತಿಕವಾಗಿ ಟೆಸ್ಲಾದೊಂದಿಗೆ ಸ್ಪರ್ಧಿಸುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಸೀಲ್, ಅಟ್ಟೊ 3 ಹಾಗೂ ಇಮ್ಯಾಕ್ 7 ಕಾರುಗಳನ್ನು ಮಾರಾಟಗೊಳಿಸುತ್ತಿದೆ. ನವದೆಹಲಿಯಲ್ಲಿ ಜರುಗುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಹೊಚ್ಚ ಹೊಸ ಯಾಂಗ್ವಾಂಗ್ ಯು8 (YangWang U8) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಹಿರಂಗಗೊಳಿಸಿದೆ. ಬನ್ನಿ.. ಈ ನೂತನ ಕಾರಿನ ಬಗ್ಗೆ ಒಂದಷ್ಟು ವಿವರಗಳನ್ನು ತಿಳಿಯೋಣ.

Auto Expo 2025: ಹೊಸ 'Hyundai Staria' ಭಾರತಕ್ಕೆ ಎಂಟ್ರಿ

ದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 (Auto Expo 2025) ರಲ್ಲಿ ಮೊದಲ ಬಾರಿಗೆ ಹ್ಯುಂಡೈ ಕಂಪನಿಯು ಹ್ಯುಂಡೈ ಸ್ಟಾರಿಯಾ (Hyundai Staria) ವನ್ನು ಭಾರತದಲ್ಲಿ ಪ್ರದರ್ಶಿಸಲಾಗಿದೆ. ಹ್ಯುಂಡೈ ಕಂಪನಿಯು ಭಾರತದಲ್ಲಿ ಸ್ಟಾರಿಯಾ ಎಂಪಿವಿ ಬಿಡುಗಡೆಯನ್ನು ಇನ್ನೂ ದೃಢಪಡಿಸಿಲ್ಲ, ಒಂದು ವೇಳೆ ಬಿಡುಗಡೆಯಾದಲ್ಲಿ ಇದರ ಬೆಲೆಯು ರೂ.65 ಲಕ್ಷಕ್ಕಿಂತ (ಎಕ್ಸ್ ಶೋರೂಂ) ಹೆಚ್ಚಿರುವ ನಿರೀಕ್ಷೆಯಿದೆ. ಪ್ರೀಮಿಯಂ ಒಳಾಂಗಣ ಸೇರಿದಂತೆ 11 ಮಂದಿ ಪ್ರಯಾಣಿಕರಿಗೆ ಆರಾಮವಾದ ಸ್ಥಳಾವಕಾಶ ಕಲ್ಪಿಸುವ ಈ ಕಾರು, ಭಾರತದಲ್ಲಿ ಕಿಯಾ ಕಾರ್ನಿವಲ್‌ಗೆ ಪರ್ಯಾಯ ಆಯ್ಕೆಯಾಗಲಿದೆ.

ಜನಪ್ರಿಯ ಸ್ಕೋಡಾ 7-ಸೀಟರ್ ಎಸ್‍ಯುವಿ ಹೊಸ ನವೀಕರಣಗಳೊಂದಿಗೆ ಅನಾವರಣ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ತನ್ನ ಎರಡನೇ ತಲೆಮಾರಿನ ಸ್ಕೋಡಾ ಕೊಡಿಯಾಕ್ (Skoda Kodiaq)ಎಸ್‍ಯುವಿಯನ್ನು 2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ. ಈ ಹೊಸ ಸ್ಕೋಡಾ ಕೊಡಿಯಾಕ್ ಎಸ್‍ಯುವಿಯು MQB EVO ಆರ್ಕಿಟೆಕ್ಚರ್‌ನ ಫ್ಲಾಟ್ ಫಾರ್ಮ್ ಅನ್ನು ಆಧರಿಸಿದೆ. ಸ್ಕೋಡಾ ಕೊಡಿಯಾಕ್ ಎಸ್‍ಯುವಿಯ ಹಿಂದಿನ ಮಾದರಿಗೆ ಹೋಲಿಸಿದರೆ ಸುಧಾರಿತ ತಂತ್ರಜ್ಞಾನ ಮತ್ತು ಹೊಸ ಫೀಚರ್ಸ್ ಗಳೊಂದಿಗೆ ಬರುತ್ತದೆ.

Tata Sierra: ಲಕ್ಷುರಿ ಫೀಚರ್ಸ್.. ಮತ್ತೆ ಮಾರಾಟಕ್ಕೆ ಬರಲು..

ಭಾರತದ ರಸ್ತೆಯಲ್ಲಿ ವರ್ಷಗಳ ಹಿಂದೆ, ಟಾಟಾ ಸಿಯೆರಾ (Tata Sierra) ಪ್ರಮುಖ ಕಾರಾಗಿ ಹೊರಹೊಮ್ಮಿತ್ತು. ಆದರೆ, ವಿವಿಧ ಕಾರಣಗಳಿಗೆ 2000ರಲ್ಲಿ ಈ ಕಾರಿನ ಮಾರಾಟವನ್ನು ನಿಲ್ಲಿಸಲಾಗಿತ್ತು. ಸದ್ಯ, ನೂತನ ಸಿಯೆರಾ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಕಂಪನಿಯು ಕೂಡ ಸಿದ್ದತೆಯನ್ನು ನಡೆಸುತ್ತಿದೆ. ನವದೆಹಲಿಯಲ್ಲಿ ನಿನ್ನೆ ನಡೆದ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಉತ್ಪಾದನೆಗೆ ಸಿದ್ಧಗೊಂಡಿರುವ ಸಿಯೆರಾ ಕಾರನ್ನು ಬಹಿರಂಗಪಡಿಸಲಾಗಿತ್ತು. ಈ ಕಾರನ್ನು ಮೊದಲಿಗೆ ಕಂಪನಿಯು ಎಲೆಕ್ಟ್ರಿಕ್ ರೂಪದಲ್ಲಿ ಪರಿಚಯಿಸಲು ಉದ್ದೇಶಿಸಿದೆ. ಆ ನಂತರದ ದಿನಗಳಲ್ಲಿ ಇಂಧನ ಚಾಲಿತ ಆಯ್ಕೆಯಲ್ಲಿಯೂ ಬಿಡುಗಡೆಗೊಳಿಸಲಿದೆ ಎಂದು ತಿಳಿದುಬಂದಿದೆ.
Advertisement

ರಸ್ತೆ ಮೇಲಿನ ಅರಮನೆಯಂತಿರುವ ಹೊಸ ಎಂಜಿ ಕಾರು ಅನಾವರಣ

ಜನಪ್ರಿಯ ವಾಹನ ತಯಾರಕ ಕಂಪನಿಯಾದ JSW ಎಂಜಿ ಮೋಟಾರ್ (MG Motor) ತನ್ನ ಪ್ರೀಮಿಯಂ ಎಲೆಕ್ಟ್ರಿಕ್ ಕಾರು ಸರಣಿಗಾಗಿ ತನ್ನ ಎರಡನೇ ಮಾದರಿಯನ್ನು 2025ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ. ಈ ಎಂಜಿ M9 ಎಂಪಿವಿಯು ಪ್ರೀಮಿಯಂ ಸೆಲೆಕ್ಟ್ ಡೀಲರ್‌ಶಿಪ್ ನೆಟ್‌ವರ್ಕ್‌ನಲ್ಲಿ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರನ್ನು ಪ್ರದರ್ಶಿಸಲಾಗಿದೆ. 2025ರ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಎಂಜಿ M9 (MG M9) ಪ್ರೀಮಿಯಂ ಎಂಪಿವಿ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಕಾರ್ನಿವಲ್ ಮತ್ತು ಟೊಯೋಟಾ ವೆಲ್‌ಫೈರ್‌ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಬಡವರ ಕನಸು ನನಸು: ಸಣ್ಣ ಎಲೆಕ್ಟ್ರಿಕ್ ಕಾರು ಪ್ರದರ್ಶನ, ಪಕ್ಕದ..

ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಭಾರತದ ಕಾರು ಮಾರುಕಟ್ಟೆಯಲ್ಲಿ ತನ್ನದೆಯಾದ ಛಾಪನ್ನು ಮೂಡಿಸಲು ಮುಂದಾಗಿದೆ. ಸದ್ಯ, ನವದೆಹಲಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿಯುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಹೊಚ್ಚ ಹೊಸ 'ವಿಎಫ್3' ಎಲೆಕ್ಟ್ರಿಕ್ ಕಾರನ್ನು ಪ್ರದರ್ಶನ ಮಾಡಿದೆ. ಬನ್ನಿ.. ಈ ನೂತನ ಕಾರು ಹೇಗಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರವನ್ನು ತಿಳಿಯೋಣ.

Auto Expo 2025: ಅಗ್ಗದ 'ಸುಜುಕಿ ಎಥೆನಾಲ್ ಬೈಕ್' ಬಿಡುಗಡೆ

ದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ (Auto Expo 2025) ದಲ್ಲಿ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ತನ್ನ ಜಿಕ್ಸರ್ ಎಸ್‌ಎಫ್ 250 (GIXXER SF 250) ಬೈಕಿನ e85 ಕಂಪ್ಲೈಂಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಜಿಕ್ಸರ್ ಎಸ್‌ಎಫ್ 250 ಫ್ಲೆಕ್ಸ್ ಫ್ಯೂಯಲ್ ಮೋಟಾರ್‌ಸೈಕಲ್, ಪೆಟ್ರೋಲ್ ಮತ್ತು ಎಥೆನಾಲ್ ಮಿಶ್ರಣದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ ಶೇ85 ರಷ್ಟು ಎಥೆನಾಲ್ ಹಾಗೂ ಶೇ15 ರಷ್ಟು ಪೆಟ್ರೋಲ್‌ನಲ್ಲಿ ಮಿಶ್ರಣದಲ್ಲಿ ಚಲಿಸುತ್ತದೆ. ಈ ವಾಹನವನ್ನು ರೂ.2.17 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

ಹಿಂದೂಜಾ ಗ್ರೂಪ್‌ನಿಂದ ಸ್ವಿಚ್ IeV8 ವಾಹನ ಅನಾವರಣ

ಹಿಂದೂಜಾ ಗ್ರೂಪ್‌ನ ಭಾಗವಾಗಿರುವ ಸ್ವಿಚ್ ಮೊಬಿಲಿಟಿ ಲಿಮಿಟೆಡ್, 7.2T ವಿಭಾಗದಲ್ಲಿ ಎಲೆಕ್ಟ್ರಿಕ್ ಲೈಟ್ ವಾಣಿಜ್ಯ ವಾಹನ (electric light commercial vehicle)ವಾದ SWITCH IeV8 ಅನ್ನು ಅನಾವರಣಗೊಳಿಸಿದೆ. ಸುಸ್ಥಿರತೆ ಮತ್ತು ಕಾರ್ಯಾಚರಣೆಯ ದಕ್ಷತೆಗಾಗಿ ವಿನ್ಯಾಸಗೊಳಿಸಲಾದ SWITCH IeV8 ಭಾರತದಲ್ಲಿ ಲಾಜಿಸ್ಟಿಕ್ಸ್ ವಲಯಕ್ಕೆ ಹೇಳಿಮಾಡಿಸಿದ ವಾಹನವಾಗಿದ್ದು, ಸರಕು ಸಾಗಣೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ, ಬಾಳಿಕೆ ಮತ್ತು ಸುಸ್ಥಿರತೆಗಾಗಿ ವಿನ್ಯಾಸಗೊಳಿಸಲಾಗಿದೆ. ಅತ್ಯಾಧುನಿಕ ಸುಧಾರಿತ ಲಿಥಿಯಂ ಬ್ಯಾಟರಿ ಹೊಂದಿರುವ IeV8 ಒಂದೇ ಚಾರ್ಜ್‌ನಲ್ಲಿ 250 ಕಿ.ಮೀ. ಪ್ರಭಾವಶಾಲಿ ಶ್ರೇಣಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.

ಬಡವರ ಮಕ್ಕಳು ಬೆಳಿಬೇಕು.. ಕನ್ನಡದ ಹ್ಯಾಸ ನಟ ಚಿಲ್ಲರ್ ಮಂಜುರಿಂದ..

ಚಿಲ್ಲರ್ ಮಂಜು (Chiller Manju) ಕನ್ನಡದ ಉದಯೋನ್ಮುಖ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಪ್ರತ್ರ್ಯೇಕವಾದ ಅಭಿಮಾನಿ ಬಳಗವು ಇದೆ. ಯುವ ನಟ ಶ್ರೇಯಸ್ ಮಂಜು ನಟನೆಯ 'ದಿಲ್ ದಾರ್' ಸಿನಿಮಾದಲ್ಲಿಯೂ ಅವರು ಅಭಿನಯಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಶೋ ಗಿಚ್ಚಿ ಗಿಲಿಗಿಲಿಯಲ್ಲಿ ಚಿಲ್ಲರ್ ಮಂಜು ಪರ್ಮನೆಂಟ್ ಕಲಾವಿದರಾಗಿದ್ದರು. ಅವರು ತಮ್ಮ ಮನೋಜ್ಞ ಅಭಿನಯದ ಮೂಲಕ ಕಿರುತೆರೆ ವೀಕ್ಷಕರ ಮನ ಗೆಲ್ಲುವಲ್ಲಿಯೂ ಯಶಸ್ವಿಯಾಗಿದ್ದರು. ಸಾಮಾನ್ಯ ಕುಟುಂಬದಿಂದ ಬಂದ ಮಂಜು, ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ.

ಆಟೋ ಎಕ್ಸ್‌ಪೋ 2025: ಆಕರ್ಷಕ ಕಾರನ್ನು ಅನಾವರಣಗೊಳಿಸಿದ ಕಿಯಾ!

ಪ್ರಮುಖ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ, ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 (Bharat Mobility Global Expo 2025) ರಲ್ಲಿ ಹೊಸ EV6 ಅನ್ನು ಅನಾವರಣಗೊಳಿಸಿದೆ. ಹಾಗೆಯೇ ಹೊಸ ಕಿಯಾ EV6 ಬುಕಿಂಗ್‌ಗಳು ಇಂದು ಪ್ರಾರಂಭವಾಗಿವೆ. ಈ ಅತ್ಯಾಧುನಿಕ ಕಾರು, 27 ಸುಧಾರಿತ ಸುರಕ್ಷತೆ ಮತ್ತು ಚಾಲಕ ಸಹಾಯ ವೈಶಿಷ್ಟ್ಯ (Driver assistance features) ಗಳನ್ನು ಒಳಗೊಂಡಿರುವ ADAS 2.0 ಪ್ಯಾಕೇಜ್‌ನೊಂದಿಗೆ ಸಜ್ಜುಗೊಂಡಿದೆ. ಹಿಂದಿನ EV6 ಗೆ ಹೋಲಿಸಿದರೆ ಇದು ಐದು ಹೆಚ್ಚುವರಿ ADAS 2.0 ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ ಸ್ಕೋಡಾ ಎಲೆಕ್ಟ್ರಿಕ್ ಕಾರು ಅನಾವರಣ: ಏನಿದರ ವಿಶೇಷತೆ?

ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ 2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಸ್ಕೋಡಾ ಎಲ್ರೋಕ್ ಎಂಬ ಎಲೆಕ್ಟ್ರಿಕ್ ಕಾರನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರದರ್ಶನವನ್ನು ಮಾಡಿದೆ. ಹೊಸ ಸ್ಕೋಡಾ ಎಲ್ರೋಕ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಜೆಕ್ ರಿಪಬ್ಲಿಕ್‌ನಲ್ಲಿರುವ ಬ್ರ್ಯಾಂಡ್‌ನ ಪ್ರಧಾನ ಕಛೇರಿಯಲ್ಲಿ ತನ್ನ ವಿಶ್ವ ಪ್ರೀಮಿಯರ್ ಅನ್ನು ಹೊಂದಿತ್ತು. ಬ್ರ್ಯಾಂಡ್‌ನ ಜಾಗತಿಕ ಪೋರ್ಟ್‌ಫೋಲಿಯೊದಲ್ಲಿ, ಇದು ಎನ್ಯಾಕ್ iV ಮತ್ತು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಎಪಿಕ್ ಎಲೆಕ್ಟ್ರಿಕ್ ಎಸ್‍ಯುವಿ ನಡುವಿನ ಸ್ಥಾನ ಪಡೆದುಕೊಳ್ಳುತ್ತದೆ.

ಟಾಟಾಗೆ ಶಾಕ್.. ಟೊಯೊಟಾದ ಹೊಸ ಎಲೆಕ್ಟ್ರಿಕ್ ಕಾರು ಅನಾವರಣ..

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor), ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ರಾಜ್ಯದ ಬಿಡದಿಯಲ್ಲಿ ಅತಿದೊಡ್ಡ ಉತ್ಪಾದನಾ ಘಟಕವನ್ನು ಹೊಂದಿದ್ದು, ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಮಾರುತಿ ಸುಜುಕಿ ಹಾಗೂ ಟೊಯೊಟಾ ಕಂಪನಿಗಳು ತಂತ್ರಜ್ಞಾನ ಹಂಚಿಕೆಯಲ್ಲಿ ಪಾಲುದಾರಿಕೆ ಹೊಂದಿರುವುದು ಗೊತ್ತೇ ಇದೆ. ಸದ್ಯ, ನವದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಟೊಯೊಟಾ ಕಂಪನಿ, ಮಾರುತಿ ಸುಜುಕಿ ಇ ವಿಟಾರಾ ಆಧಾರಿತ ನೂತನ 'ಅರ್ಬನ್ ಕ್ರೂಸರ್ ಬಿಇವಿ' ಕಾನ್ಸೆಪ್ಟ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅನಾವರಣಗೊಳಿಸಿದೆ.
Advertisement

Auto Expo 2025: ಅಶೋಕ್‌ ಲೇಲ್ಯಾಂಡ್‌ಗೆ ಸಾಥ್ ಕೊಟ್ಟ HDK

ಭಾರತದ ಪ್ರಮುಖ ವಾಣಿಜ್ಯ ವಾಹನ ತಯಾರಕ ಕಂಪನಿಯಾಗಿರುವ ಅಶೋಕ್ ಲೇಲ್ಯಾಂಡ್ (Ashok Leyland), ದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ (Auto Expo 2025) ದಲ್ಲಿ ಇಂದು 'ಸಾಥಿ' (SAATHI) - ಪ್ರೀಮಿಯಂ ಎಂಟ್ರಿ-ಲೆವೆಲ್ ಲೈಟ್ ಕಮರ್ಷಿಯಲ್ ವೆಹಿಕಲ್ ಅನ್ನು ಅನಾವರಣಗೊಳಿಸಿದೆ. ಕೇಂದ್ರ ಬೃಹತ್ ಕೈಗಾರಿಕೆ ಸಚಿವರಾದ ಎಚ್‌.ಡಿ ಕುಮಾರಸ್ವಾಮಿಯವರ ಸಮ್ಮುಖದಲ್ಲಿ 'ಸಾಥಿ'ಯನ್ನು ಅನಾವರಣಗೊಳಿಸಲಾಯಿತು. ಈ ಹೊಸ ವಾಹನವನ್ನು ಸುಧಾರಿತ ಎಲ್‌ಎನ್‌ಟಿ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

Tata Sierra: ಇತಿಹಾಸ ಬರೆಯಲು ಟಾಟಾ ರೆಡಿ.. ಮತ್ತೆ ಬರುತ್ತೆ ರಸ್ತೆ..

ಟಾಟಾ ಸಿಯೆರಾ (Tata Sierra), ದೇಶೀಯ ಮಾರುಕಟ್ಟೆಯಲ್ಲಿ ದಶಕಗಳ ಹಿಂದೆ, ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿತ್ತು. ಗ್ರಾಹಕರು ಈ ಕಾರನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದರು. ಆದರೆ, 2000ರಲ್ಲಿ ನಾನಾ ಕಾರಣಗಳಿಗೆ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಇದು ಅಂದಿನ ಖರೀದಿದಾರರಿಗೆ ಬೇಸರ ತರಿಸಿತ್ತು.. ಜನ ಮೆಚ್ಚಿದ ಸಿಯೆರಾ ಕಾರನ್ನು ಹೊಸ ರೂಪದಲ್ಲಿ ಮಾರಾಟಕ್ಕೆ ತರಲು ಕಂಪನಿಯು ಭಾರೀ ಸಿದ್ಧತೆ ನಡೆಸುತ್ತಿದೆ ಎಂದು ಈ ಹಿಂದೆ ವರದಿಯಾಗಿತ್ತು. ಅತಿ ಶೀಘ್ರದಲ್ಲಿಯೇ ನೂತನ ಸಿಯೆರಾ ಕಾರು ಬಿಡುಗಡೆಯಾಗುವ ಕಾಲವು ಬಂದು ಬಿಟ್ಟಿದೆ.

ಊರಿಂದ ಊರಿಗೆ ಹೋಗಬಹುದು: ಹೊಸ ಟಾಟಾ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ..

ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ತನ್ನ ಹ್ಯಾರಿಯರ್ ಎಸ್‍ಯುವಿಯನ್ನು ಎಲೆಕ್ಟ್ರಿಕ್ ರೂಪದಲ್ಲಿ ಅನಾವರಣಗೊಳಿಸಿದೆ. 2023ರ ಆಟೋ ಎಕ್ಸ್‌ಪೋದಲ್ಲಿ ಹ್ಯಾರಿಯರ್ ಇವಿ ಕಾನ್ಸೆಪ್ಟ್ ರೂಪದಲ್ಲಿ ಮೊದಲು ಪ್ರದರ್ಶಿಸಿದ ಟಾಟಾ ಮೋಟಾರ್ಸ್ ಈ ಬಾರಿ ಉತ್ಪಾದನಾ ಆವೃತ್ತಿಯಾಗಿ ಪದರ್ಶಸಿದೆ. ಈ ಹೊಸ ಟಾಟಾ ಹ್ಯಾರಿಯರ್ ಇವಿ (Tata Harrier EV) ಎಸ್‍ಯುವಿಯು ಅದರ ICE ಪ್ಲಾಟ್‌ಫಾರ್ಮ್‌ನ ಹೆಚ್ಚು ಮಾರ್ಪಡಿಸಿದ ಆವೃತ್ತಿಯನ್ನು ಆಧರಿಸಿದೆ. ಎಲೆಕ್ಟ್ರಿಕ್ ರೂಪದಲ್ಲೂ ಟಾಟಾ ಹ್ಯಾರಿಯರ್ ಸಂಚಲನವನ್ನು ಸೃಷ್ಟಿಸಲು ಸಜ್ಜಾಗಿದೆ.

Auto Expo 2025: ಹೊಸ ಸ್ಕೂಟರ್ ಬಿಡುಗಡೆ

ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿರುವ OPG ಮೊಬಿಲಿಟಿ (ಹಿಂದೆ ಒಕಾಯಾ EV ಎಂದು ಕರೆಯಲಾಗುತ್ತಿತ್ತು), ಇಂದು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 (Auto Expo 2025) ರಲ್ಲಿ ಬಹು ನಿರೀಕ್ಷಿತ ಫೆರಾಟೊ 'DEFY 22' ಸ್ಕೂಟರನ್ನು ಬಿಡುಗಡೆ ಮಾಡಿದೆ. ಹೊಸ DEFY 22 ಎಲೆಕ್ಟ್ರಿಕ್ ಸ್ಕೂಟರ್ ಪ್ರೀ-ಬುಕಿಂಗ್‌ಗಳು ಇಂದಿನಿಂದಲೇ (ಜನವರಿ 17, 2025) ಪ್ರಾರಂಭವಾಗಿವೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕಾಂಬಿ ಡಿಸ್ಕ್ ಬ್ರೇಕ್ ಸಿಸ್ಟಮ್ ಅನ್ನು ಹೊಂದಿದ್ದು, ಫುಲ್‌ ಚಾರ್ಜ್‌ನಲ್ಲಿ 80 ಕಿ.ಮೀ ರೇಂಜ್ ಹಾಗೂ 70 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

ಬೆಂಗಳೂರು ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ..

ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ನ್ಯೂಮೆರೋಸ್ ಮೋಟಾರ್ಸ್ (Numeros Motors), 2024ರ ಮಾರ್ಚ್‌ನಲ್ಲಿ ಹೊಚ್ಚ ಹೊಸ ಡಿಪ್ಲೋಸ್ ಪ್ರೊ (Diplos Pro) ಇ-ಸ್ಕೂಟರ್‌ನ್ನು ಮಾರಾಟಕ್ಕೆ ತಂದಿತ್ತು. ಈ ಎಲೆಕ್ಟ್ರಿಕ್ ಸ್ಕೂಟರ್ ವಾಣಿಜ್ಯ ಬಳಕೆಗೆ ಮಾತ್ರ ಯೋಗ್ಯವಾಗಿತ್ತು. ಸದ್ಯ ನವದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಕಂಪನಿಯು ನೂತನ ಡಿಪ್ಲೋಸ್ ಮ್ಯಾಕ್ಸ್ (Diplos Max) ಸ್ಕೂಟರ್‌ನ್ನು ಬಿಡುಗಡೆಗೊಳಿಸಿದೆ. ಇದು ಪ್ರಯಾಣಿಕ ದ್ವಿಚಕ್ರ ವಾಹನವಾಗಿದೆ.

ಮಗನಿಗೆ 2 ಕೋಟಿ ಮೌಲ್ಯದ ಐಷಾರಾಮಿ ಕಾರ್ ಗಿಫ್ಟ್ ನೀಡಿದ ಅಪ್ಪ

ಉಡುಗೊರೆಗಳು ಯಾವಾಗಲೂ ವಿಶೇಷವಾಗಿರುತ್ತವೆ, ಮತ್ತು ಉಡುಗೊರೆ ಪಡೆಯಲು ಎಲ್ಲರು ಇಷ್ಟಪಡುತ್ತಾರೆ. ಪೋಷಕರು ತಮ್ಮ ಮಕ್ಕಳಿಗೆ ದುಬಾರಿ ಕಾರು ಮತ್ತು ಬೈಕ್‌ಗಳನ್ನು ಉಡುಗೊರೆಯಾಗಿ ನೀಡುವ ಚಿತ್ರಗಳು ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇತ್ತೀಚೆಗೆ 19 ವರ್ಷದ ಯುವಕನ ತಂದೆ ಹೊಚ್ಚಹೊಸ ಆಡಿ (Audi) ಕಾರನ್ನು ಉಡುಗೊರೆ ನೀಡುವ ವೀಡಿಯೋ ವೈರಲ್ ಆಗಿದೆ. ತಂದೆ ಉಡುಗೊರೆ ನೀಡಿದ ಕಾರ್ 2 ಕೋಟಿ ಮೌಲ್ಯದ ಆಡಿ ಆರ್ಎಸ್ ಇ-ಟ್ರಾನ್ ಜಿಟಿ ಕಾರ್ ಆಗಿದೆ.

Hero: ಹೊಚ್ಚ ಹೊಸ ಹೀರೋ ಜೂಮ್ 160 ಸ್ಕೂಟರ್ ಬಿಡುಗಡೆ, ಬೆಲೆ..

ಹೀರೋ ಮೋಟೋಕಾರ್ಪ್ (Hero MotoCorp), ನಂಬರ್ 1 ದ್ವಿಚಕ್ರ ವಾಹನ (Two-Wheeler) ತಯಾರಕ ಕಂಪನಿಯಾಗಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ಸ್ಪ್ಲೆಂಡರ್ ಮಾರಾಟದಿಂದಲೇ ಹೆಚ್ಚು ಜನಪ್ರಿಯತೆ ಗಳಿಸಿರುವ ಕಂಪನಿಯು ನಿಧಾನವಾಗಿ ಸ್ಕೂಟರ್ ವಿಭಾಗದಲ್ಲೂ ತನ್ನದೆಯಾದ ಛಾಪನ್ನು ಮೂಡಿಸುತ್ತಿದೆ. ನವದೆಹಲಿಯಲ್ಲಿ ಜರುಗುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಶುಕ್ರವಾರ ಕಂಪನಿಯು ನೂತನ 'ಜೂಮ್ 160' ಸ್ಕೂಟರ್‌ನ್ನು ಬಿಡುಗಡೆಗೊಳಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಕಡಿಮೆ ಬೆಲೆಯಲ್ಲಿ ಸೂಪರ್ ಬೈಕಿನ ಲುಕ್‌ನ ಹೊಸ ಹೀರೋ ಬೈಕ್ ಬಿಡುಗಡೆ

ಜನಪ್ರಿಯ ಮತ್ತು ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೋಟೋಕಾರ್ಪ್ ತನ್ನ ಹೊಸ ಹೀರೋ ಎಕ್ಸ್‌ಟ್ರೀಮ್ 250ಆರ್ ಬೈಕ್ ಅನ್ನು 2025ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ ಎಕ್ಸ್‌ಟ್ರೀಮ್ 250ಆರ್ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.80 ಲಕ್ಷವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ 250cc ಬೈಕುಗಳ ವಿಭಾಗವಾಗಿ ವೇಗವಾಗಿ ಬೆಳೆಯುತ್ತಿದೆ. ಬ್ರ್ಯಾಂಡ್‌ಗಳು ಈಗ ಪ್ರೀಮಿಯಂ ಬೈಕ್‌ಗಳ ಟ್ರೆಂಡ್‌ನಲ್ಲಿ ಸಿಲುಕಿಕೊಂಡಿವೆ. ಈ ವಿಭಾಗದ ಮೇಲೆ ಕಣ್ಣಿಟ್ಟಿರುವ ಹೀರೋ ಹೀರೋ ಮೋಟೋಕಾರ್ಪ್ ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಿ ಸಂಚಲನವನ್ನು ಸೃಷ್ಟಿಸಲು ರೆಡಿಯಾಗಿದೆ.
Advertisement

Creta EV: ಆಟೋ ಎಕ್ಸ್‌ಪೋದಲ್ಲಿ ಹೊಸ ಹ್ಯುಂಡೈ SUV ಬಿಡುಗಡೆ

ಬಹುನಿರೀಕ್ಷಿತ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು (hyundai creta ev) ಇಂದಿನಿಂದ ಅರಂಭವಾಗಿರುವ ಆಟೋ ಎಕ್ಸ್‌ಪೋ 2025 (Auto Expo 2025) ರಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ತನ್ನ ಇಂಧನ ಚಾಲಿತ ಕ್ರೆಟಾ ಕಾರಿನ ಅದೇ ಪ್ಲಾಟ್‌ ಫಾರ್ಮ್‌ನಲ್ಲಿ ನಿರ್ಮಾಣವಾಗಿದ್ದು, ತನ್ನ ವಿಭಾಗದಲ್ಲಿ ಮಾರುತಿ ಇ ವಿಟಾರಾ ಮತ್ತು ಟಾಟಾ ಕರ್ವ್ ಇವಿಗೆ ಪೈಪೋಟಿ ನೀಡುತ್ತದೆ. ಹೊಸ ಹ್ಯುಂಡೈ ಕ್ರೆಟಾ ಇವಿ ಕಾರು ಭಾರತದ ಎಕ್ಸ್ ಶೋರೂಂ ದರದಂತೆ ರೂ. 17.99 ಲಕ್ಷಕ್ಕೆ ಬಿಡುಗಡೆಯಾಗಿದೆ.

ಮಾಸ್‌ ಲುಕ್‌ನಲ್ಲಿ ಹೊಸ ಹೀರೋ ಅಡ್ವೆಂಚರ್ ಬೈಕ್ ಬಿಡುಗಡೆ

ಜನಪ್ರಿಯ ಮತ್ತು ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೋಟೋಕಾರ್ಪ್ ತನ್ನ ಎಕ್ಸ್‌ಪಲ್ಸ್ 210 ಬೈಕ್ ಅನ್ನು 2025ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ ಎಕ್ಸ್‌ಪಲ್ಸ್ 210 (Hero Xpulse 210) ಅಡ್ವೆಂಚರ್ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.76 ಲಕ್ಷವಾಗಿದೆ. ಈ ಬೆಲೆಯನ್ನು ಹೀರೋ ಎಕ್ಸ್‌ಪಲ್ಸ್ 200 ಗಿಂತ ರೂ.24,000 ದುಬಾರಿಯಾಗಿದೆ. ಆದರೂ ಈ ಬೈಕಿಗೆ ಕೈಗೆಟುಕುವ ಬೆಲೆ ಎಂದು ಹೇಳಬಹುದು.

Auto Expo 2025: ಓಲಾ, ಎಥರ್‌ಗೆ ನಡುಕ ಶುರು

Auto Expo 2025: ಸುಜುಕಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2025 ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ (Bharat Mobility Global Expo 2025) ದಲ್ಲಿ ಇಂದು ಅನಾವರಣಗೊಳಿಸಲಾಗಿದೆ. ಇದು ಕಂಪನಿಯ ಇಂಧನ ಚಾಲಿತ ಮಾದರಿಯಾದ 'ಆಕ್ಸೆಸ್' ಅವೃತ್ತಿಯಾಗಿದ್ದು, ಎಲೆಕ್ಟ್ರಿಕ್ ಅವತಾರದಲ್ಲಿಯೂ ಪರಿಚಯಿಸಲಾಗಿದೆ. ಈ ಸ್ಕೂಟರ್ ಪೆಟ್ರೋಲ್ ಚಾಲಿತ ಆವೃತ್ತಿಯ ಅದೇ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿದೆ. ಹೊಸ ಸುಜುಕಿ ಇ-ಆಕ್ಸೆಸ್ (Suzuki e-Access) ಸ್ಥಿರ ಬ್ಯಾಟರಿಯನ್ನು ಹೊಂದಿದ್ದು, ತೆಗೆದುಹಾಕಬಹುದಾದ ಬ್ಯಾಟರಿಗಳಿಗಿಂತ ಭಿನ್ನವಾಗಿ ಸ್ಕೂಟರ್ ಹೆಚ್ಚು ಅಂಡರ್‌ ಸೀಟ್ ಸ್ಟೋರೇಜ್ ಪಡೆದಿದೆ.

Honda: ಅತಿ ಕಡಿಮೆ ಬೆಲೆಗೆ ಕ್ಯೂಸಿ1 & ಆಕ್ಟಿವಾ ಇ ಎಲೆಕ್ಟ್ರಿಕ್..

ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ಆಕ್ಟಿವಾ ಸ್ಕೂಟರ್ ಮಾರಾಟದಿಂದಲೇ ದೇಶೀಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಶುಕ್ರವಾರ ಹೊಚ್ಚ ಹೊಸ ಕ್ಯೂಸಿ1 ಮತ್ತು ಆಕ್ಟಿವಾ ಇ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದೆ. ಕಳೆದ ನವೆಂಬರ್‌ನಲ್ಲಿಯೇ ಈ ಸ್ಕೂಟರ್‌ಗಳನ್ನು ಅನಾವರಣಗೊಳಿಸಲಾಗಿತ್ತು. ತಿಂಗಳಾರಂಭದಲ್ಲಿ ಬುಕ್ಕಿಂಗ್‌ನ್ನು ಕೂಡ ಶುರು ಮಾಡಿದೆ.

ಮಾರುಕಟ್ಟೆ ಶೇಕ್: ಮೊದಲ ಮಾರುತಿ ಎಲೆಕ್ಟ್ರಿಕ್ ಕಾರು ಅನಾವರಣ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಪಂಚದ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳ ರೀತಿಯಲ್ಲೇ ಭಾರತದಲ್ಲೂ ಐಷಾರಾಮಿ ಕಾರು ಬ್ರಾಂಡ್‌ಗಳು ತಮ್ಮ ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ. ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಕಂಪನಿಯು ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿ ಎಲೆಕ್ಟ್ರಿಕ್ ವಾಹನ ರಂಗಕ್ಕೆ ಪ್ರವೇಶಿಸಲಿದೆ. 2025ರ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ ಈ ಹೊಸ ಇ-ವಿಟಾರಾ ಕಾರನ್ನು ಅನಾವರಣಗೊಳಿಸಿದೆ.