Tata: ದುಬಾರಿ ಬೆಲೆ ಎಸ್‌ಯುವಿಗಳಿಗೆ ಸವಾಲು.. ಟಾಟಾದ ಮತ್ತೊಂದು..

ಟಾಟಾ ಮೋಟಾರ್ಸ್ (Tata Motors), ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಟಿಯಾಗೊ ಇವಿ, ಟಿಗೊರ್ ಇವಿ, ಪಂಚ್ ಇವಿ, ನೆಕ್ಸಾನ್ ಇವಿ ಹಾಗೂ ಕರ್ವ್ ಇವಿಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ನವದೆಹಲಿಯ ಭಾರತ್ ಮಂಟಪದಲ್ಲಿ ಅದ್ದೂರಿಯಾಗಿ ಆಯೋಜಿಸಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ-2025 ಕಾರ್ಯಕ್ರಮದಲ್ಲಿ ಕಂಪನಿಯು ಹೊಚ್ಚ ಹೊಸ 'ಅವಿನ್ಯಾ' ಕಾನ್ಸೆಪ್ಟ್ ಕಾರನ್ನು ಪ್ರದರ್ಶಿಸಿದೆ. ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ ಎನ್ನಲಾಗಿದ್ದು, ಹೆಚ್ಚು ಆಕರ್ಷಕವಾಗಿರುವ ವಿನ್ಯಾಸವನ್ನು ಒಳಗೊಂಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Auto Expo 2025: ಜುಪಿಟರ್ CNG ಸ್ಕೂಟರ್ ಅನಾವರಣ

ಟಿವಿಎಸ್ ಮೋಟಾರ್‌ ಕಂಪನಿಯು ಕೊನೆಗೂ ತನ್ನ ಜುಪಿಟರ್ ಸಿಎನ್‌ಜಿ ಸ್ಕೂಟರ್ (TVS Jupiter CNG Scooter) ಅನ್ನು ಆಟೋ ಎಕ್ಸ್‌ಪೋ 2025 (Auto Expo 2025) ರಲ್ಲಿ ಅನಾವರಣಗೊಳಿಸಲಾಗಿದೆ. ಈ ಸ್ಕೂಟರ್ ಅನ್ನು ಕಾನ್ಸೆಪ್ಟ್ ಮಾಡಲ್‌ ಆಗಿ ಪ್ರದರ್ಶಿಸಲಾಗಿದ್ದರೂ, ವಿಶ್ವದ ಮೊದಲ ಸಿಎನ್‌ಜಿ ಸ್ಕೂಟರ್ ಆಗಿದೆ. ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ಈ ಸ್ಕೂಟರ್ ಸದ್ಯ ಎಕ್ಸ್‌ಪೋದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈಗಾಗಲೇ ಸಿಎನ್‌ಜಿ ಮೋಟಾರ್‌ಸೈಕಲ್ ವಿಭಾಗದಲ್ಲಿ ಬಜಾಜ್ ಫ್ರೀಡಂ ಬೈಕ್ ಬಿಡುಗಡೆಯಾಗಿದೆ. ಇದರ ನಂತರ ಸ್ಕೂಟರ್ ವಿಭಾಗದಲ್ಲಿ ಜುಪಿಟರ್ ಎಂಟ್ರಿ ಕೊಟ್ಟಿದೆ.

ಆಟೋ ಎಕ್ಸ್ ಪೋದಲ್ಲಿ ಅನಾವರಣವಾಗಲಿದೆ ಹೊಸ ಯಮಹಾ FZ-X ಹೈಬ್ರಿಡ್ ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಯಮಹಾ ತನ್ನ ಯಮಹಾ FZ-X ಹೈಬ್ರಿಡ್ ಬೈಕ್ ಅನ್ನು 2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿದೆ. ಯಮಹಾ FZ-X ಹೈಬ್ರಿಡ್ ತಂತ್ರಜ್ಞಾನವನ್ನು ಒಳಗೊಂಡಿರುವ ಭಾರತದಲ್ಲಿ ಮೊದಲ 150cc ಪ್ರಯಾಣಿಕ ಬೈಕ್ ಆಗಲಿದೆ. ಈ ನಾವೀನ್ಯತೆಯು ಯಮಹಾ ಅವರ ಫ್ಯಾಸಿನೊ ಮತ್ತು ರೇ ZR ಸ್ಕೂಟರ್‌ಗಳಲ್ಲಿ ಹೈಬ್ರಿಡ್ ಸಿಸ್ಟಮ್‌ಗಳ ಹಿಂದಿನ ಪರಿಚಯವನ್ನು ಅನುಸರಿಸುತ್ತದೆ.

Yamaha Tenere 700: ಯಮಹಾ ಟೆನೆರೆ 700 ಬೈಕ್ ಪ್ರದರ್ಶನ..

ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ-2025ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿ ಯಮಹಾ (Yamaha), ಹೊಚ್ಚ ಹೊಸ ಟೆನೆರೆ 700 (Tenere 700) ಹೆಸರಿನ ಬೈಕ್‌ನ್ನು ಪ್ರದರ್ಶಿಸಿದೆ. ಈ ನೂತನ ಮೋಟಾರ್‌ಸೈಕಲ್, ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದೇ ಬೈಕ್‌ನ್ನು ಮೊದಲ ಬಾರಿಗೆ ಇಟಲಿಯ ಮಿಲನ್‌ನಲ್ಲಿ ಆಯೋಜಿಸಿದ್ದ ಮೋಟಾರ್‌ಸೈಕಲ್ ಶೋನಲ್ಲಿಯೂ ಅನಾವರಣಗೊಳಿಸಲಾಗಿತ್ತು.
Advertisement

ಆಟೋ ಎಕ್ಸ್‌ಪೋ 2025: ಮೂರು ಹೊಸ ಎಲೆಕ್ಟ್ರಿಕ್ ವಾಹನಗಳ ಅನಾವರಣ

ಪ್ರಮುಖ ಎಲೆಕ್ಟ್ರಿಕ್ ವಾಹನ (ಇವಿ) ತಯಾರಕ ಕಂಪನಿಯಾಗಿರುವ ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಇಂದಿನಿಂದ ಪ್ರಾರಂಭವಾಗಲಿರುವ ಆಟೋ ಎಕ್ಸ್‌ಪೋ 2025 (Auto Expo 2025) ರಲ್ಲಿ ಮೂರು ಹೊಸ ವಾಹನಗಳನ್ನು ಪರಿಚಯಿಸಲು ಸಜ್ಜಾಗಿದೆ. ಇವುಗಳಲ್ಲಿ ಹೊಸ ಇ-ಆಟೋ (ಎಲ್ 5 ಎಂ) ಸೇರಿದಂತೆ ಎರಡು ಅತ್ಯಾಧುನಿಕ ಇ-ಸ್ಕೂಟರ್‌ಗಳು ಸೇರಿವೆ. ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ ಮೂರು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಹಿರಂಗಪಡಿಸುವ ಮೂಲಕ ತನ್ನ ಪೋರ್ಟ್‌ಫೋಲಿಯೊವನ್ನು ವಿಸ್ತರಿಸುವ ತನ್ನ ಬದ್ಧತೆಯನ್ನು ಬಲಪಡಿಸುವ ಕಾರ್ಯತಂತ್ರವನ್ನು ಎತ್ತಿ ತೋರಿಸುತ್ತಿರುವುದಾಗಿ ಹೇಳಿದೆ.

Honda: ಸದ್ದಿಲ್ಲದೇ ಜನಪ್ರಿಯ ಹೋಂಡಾ ಎಲಿವೇಟ್ ಕಾರಿನ ಬೆಲೆ ಏರಿಕೆ..

ಹೋಂಡಾ ಎಲಿವೇಟ್ (Honda Elevate) ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ . ದೇಶೀಯ ಮಾರುಕಟ್ಟೆಯಲ್ಲಿ 2023ರ ಸೆಪ್ಟೆಂಬರ್‌ನಲ್ಲಿ ಈ ಕಾರನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಜೊತೆಗೆ ಗ್ರಾಹಕರ ಮೆಚ್ಚಿನ ಕಾರಾಗಿಯೂ ಹೆಸರುವಾಸಿಯಾಗಿದೆ. ಸದ್ಯ ನೂತನ ಎಲಿವೇಟ್ ಎಸ್‌ಯುವಿ ಬೆಲೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

AlphaVector: ಹೊಸ ವೊಲ್ವೆರಿನ್ X 27.5T ಇ-ಬೈಕ್ ಬಿಡುಗಡೆ

ಆಲ್ಫಾವೆಕ್ಟರ್ಸ್ (AlphaVector) ಪ್ರೈವೇಟ್ ಲಿಮಿಟೆಡ್ ಬ್ರ್ಯಾಂಡ್, ತನ್ನ ಅತ್ಯಾಧುನಿಕ ತಂತ್ರಜ್ಞಾನ, ಉನ್ನತ ವಿನ್ಯಾಸದೊಂದಿಗೆ ವೊಲ್ವೆರಿನ್ X 27.5T (Wolverine X 27.5T) ಸಿಂಗಲ್-ಸ್ಪೀಡ್ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ ಮಾಡಿದೆ. ನಗರ ಪ್ರಯಾಣಿಕರು, ಅಡ್ವೆಂಚರ್ ಅನ್ವೇಷಕರು ಮತ್ತು ಪರಿಸರ ಪ್ರಜ್ಞೆಯ ಸವಾರರಿಗಾಗಿ ಹೊಸ ಇ-ಸೈಕಲ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಸುಧಾರಿತ ವೈಶಿಷ್ಟ್ಯಗಳೊಂದಿಗೆ ನಿರ್ಮಾಣಗೊಂಡಿರುವ ವೊಲ್ವೆರಿನ್ X 27.5T ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಪರಿಸರ ಪ್ರೇಮಿಗಳಿಗಳಿಗೆ ಆಲ್ಫಾವೆಕ್ಟರ್ಸ್ ಕಂಪನಿ ಭರವಸೆ ನೀಡಿದೆ.

Expressway: ಕರ್ನಾಟಕದಲ್ಲಿ 3 ಹೊಸ ಎಕ್ಸ್‌ಪ್ರೆಸ್‌ವೇಗಳು..

ಕೇಂದ್ರ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದು, ಭಾರೀ ವೇಗದಲ್ಲಿ ದೇಶದ ನಾನಾ ಭಾಗಗಳಲ್ಲಿ ಎಕ್ಸ್‌ಪ್ರೆಸ್‌ವೇಗಳನ್ನು ಅಭಿವೃದ್ಧಿಪಡಿಸುತ್ತಿದೆ. ಕರ್ನಾಟಕದಲ್ಲಿಯೂ ಹೊಸ ಎಕ್ಸ್‌ಪ್ರೆಸ್‌ವೇಗಳು ಸಿದ್ಧಗೊಳ್ಳುತ್ತಿವೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು, ಅತಿ ಶೀಘ್ರದಲ್ಲಿಯೇ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ವೇ ಹಾಗೂ ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣಕ್ಕೂ ಸಿದ್ಧತೆಗಳು ನಡೆದಿದೆ. ಬನ್ನಿ.. ಈ ನೂತನ ಹೆದ್ದಾರಿಗಳು ಏನೇನು ವಿಶೇಷತೆಗಳನ್ನು ಹೊಂದಿವೆ ಎಂಬುದರ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

ಐಷಾರಾಮಿ ಕಾರು ಖರೀದಿಸಿದ ಜನಪ್ರಿಯ ನಟನ ತಂಗಿ

ಬಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ಎಂದೇ ಫೇಮಸ್ ಆದ ಶ್ರೀದೇವಿ ಇಂದು ಜೀವಂತವಾಗಿಲ್ಲದಿದ್ರೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿದ್ದಾರೆ. ಆಕೆ ಮತ್ತು ಆಕೆಯ ಪತಿ ಬೋನಿ ಕಪೂರ್ ಅವರಿಗೆ 2 ಹೆಣ್ಣು ಮಕ್ಕಳಿದ್ದಾರೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಷಯ. ಅವರೆಂದರೆ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್. ಇವರಿಬ್ಬರೂ ಸದ್ಯ ಸಿನಿಮಾ ರಂಗದಲ್ಲಿ ಮಿಂಚುತಿದ್ದಾರೆ. ಆದ್ರೆ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಅವರ ಮತ್ತೊಬ್ಬ ಮಗಳಿದ್ದಾಳೆ. ಅದು ಯಾರು ಗೊತ್ತಾ? ಅವರು ಈಗ ಸುದ್ದಿಯಲಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Kia Syros: ಮೊದಲ 'ಕಿಯಾ ಸೈರಸ್' ಹೊರಬಂತು

ಕಿಯಾ ಇಂಡಿಯಾ (Kia India) ಭಾರತದಲ್ಲಿ ಸದ್ಯ ಅತಿ ಹೆಚ್ಚು ಕಾರು ಮಾರಾಟ ಮಾಡುವ ಕಂಪನಿಗಳ ಪಟ್ಟಿಯಲ್ಲಿ ಮುಂದುವರಿಯುತ್ತಿದೆ. ಮುಂಬರುವ ದಿನಗಳಲ್ಲಿ ಅಗ್ರಸ್ಥಾನಕ್ಕೇರುವ ಕನಸನ್ನು ಹೊತ್ತಿದ್ದು, ಇದನ್ನು ಸಾಧ್ಯವಾಗಿಸಲು ತನ್ನ ಹೊಸ ಎಸ್‌ಯುವಿಯ ಸಬ್-4 ಮೀಟರ್ ಕಿಯಾ ಸೈರಸ್ (Kia Syros) ಎಸ್‌ಯುವಿಯನ್ನು ತರುತ್ತಿದೆ. ಡಿಸೆಂಬರ್ 2024 ರಲ್ಲಿ ಈ ಕಾರನ್ನು ಬಹಿರಂಗಪಡಿಸಲಾಗಿದ್ದು, ಇಂದಿನಿಂದ ನಡೆಯಲಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 (Bharat Mobility Global Expo 2025) ರಲ್ಲಿ ಮೊದಲ ಬಾರಿಗೆ ಸಾರ್ವಜನಿಕರಿಗಾಗಿ ಪ್ರದರ್ಶನಕ್ಕೆ ಇಡಲಾಗುತ್ತಿದೆ.

Auto Expo 2025: ಒಂದೇ ಸೂರಿನಡಿ ಎಲ್ಲ ವಾಹನಗಳು..ಇಂದಿನಿಂದ..

ವಾಹನ ಪ್ರಿಯರು ಕಾತರದಿಂದ ಕಾಯುತ್ತಿದ್ದ ಆಟೋ ಎಕ್ಸ್‌ಪೋ ಇಂದಿನಿಂದ ಆರಂಭವಾಗಲಿದ್ದು, ಜನವರಿ 22 ರವರೆಗೆ ನಡೆಯಲಿದೆ. ಈ ಬಾರಿ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ - 2025 (Bharat Mobility Global Expo 2025) ಹೆಸರಿನಲ್ಲಿ ಬೃಹತ್ ವಾಹನಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM), ಈ ಆಟೋ ಎಕ್ಸ್‌ಪೋದ ಸಂಪೂರ್ಣವಾದ ಜವಾಬ್ದಾರಿಯನ್ನು ಹೊತ್ತಿದೆ.

ಪೆಟ್ರೋಲ್, ಎಲೆಕ್ಟ್ರಿಕ್ ಆಯ್ತು ಇನ್ನೂ ಎಥೆನಾಲ್-ಚಾಲಿತ ಬೈಕ್‌ಗಳ ಹವಾ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ 2025ರ ಆಟೋ ಎಕ್ಸ್‌ಪೋದಲ್ಲಿ ಎಲೆಕ್ಟ್ರಿಕ್ ಮತ್ತು ಎಥೆನಾಲ್ ಚಾಲಿತ ವಾಹನಗಳ ಮೇಲೆ ಕೇಂದ್ರೀಕರಿಸಿದೆ. 2025ರ ಹೊಸ ವರ್ಷದ ಬಜಾಜ್ ಕಂಪನಿಯು ಉದ್ಯಮದಲ್ಲಿ ಆವೇಗವನ್ನು ಕಾಪಾಡಿಕೊಳ್ಳಲು ಯೋಜಿಸಿದೆ. ಎಕ್ಸ್‌ಪೋದಲ್ಲಿ, ಬಜಾಜ್ ತನ್ನ ಕೆಲವು ಇತ್ತೀಚಿನ ಆವಿಷ್ಕಾರಗಳನ್ನು ಪರಿಚಯಿಸಲಿದೆ. ಇನ್ನು ಬಜಾಜ್ (Bajaj) ಕಂಪನಿಯು 2025ರ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸುವ ದ್ವಿಚಕ್ರ ವಾಹನಗಳ ಬಗ್ಗೆ ಮಾಹಿತಿ ಇಲ್ಲಿದೆ.
Advertisement

ಪೆಟ್ರೋಲ್‌ ಬೇಕಿಲ್ಲ: ಆಟೋ ಎಕ್ಸ್‌ಪೋದಲ್ಲಿ ಓಲಾ ಎಲೆಕ್ಟ್ರಿಕ್ ಬೈಕ್..

ಬೆಂಗಳೂರು ಮೂಲದ ಓಲಾ ಎಲೆಕ್ಟ್ರಿಕ್ (Ola Electric), ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಇ-ಸ್ಕೂಟರ್ ವಿಭಾಗದಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ಕಂಪನಿಯು, 2025ರ ಆಗಸ್ಟ್ 15ರಂದು ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ರೋಡ್‌ಸ್ಟರ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಈ ಬೈಕ್‌ ರೋಡ್‌ಸ್ಟರ್ ಎಕ್ಸ್ (Roadster X), ರೋಡ್‌ಸ್ಟರ್ (Roadster) ಮತ್ತು ರೋಡ್‌ಸ್ಟರ್ ಪ್ರೊ (Roadster Pro) ಎಂಬ 3 ವಿಧದಲ್ಲಿ ಖರೀದಿ ಲಭ್ಯವಾಗಲಿದೆ. ಆದರೆ, ಈವರೆಗೆ ನೂತನ ಮೋಟಾರ್‌ಸೈಕಲ್‌ನ ವಿತರಣೆಗಳು ಶುರುವಾಗಿಲ್ಲ.

ನಾಳೆ ಹೊಸ ಹ್ಯುಂಡೈ ಕಾರು ಬಿಡುಗಡೆ

ಹೊಸ ಕ್ರೆಟಾ ಇವಿ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈನ ಪ್ರಮುಖ ಎಲೆಕ್ಟ್ರಿಕ್ ಕಾರಾಗಿದ್ದು, ನಾಳೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಇಂಧನ ಚಾಲಿತ ಕ್ರೆಟಾ ಕಾರಿನ ಅದೇ ಪ್ಲಾಟ್‌ ಫಾರ್ಮ್‌ನಲ್ಲಿ ಇದು ಕೂಡ ನಿರ್ಮಾಣವಾಗಲಿದೆ. ಹೊಸ ಹ್ಯುಂಡೈ ಕ್ರೆಟಾ ಇವಿ ಕಾರು ಭಾರತದ ಎಕ್ಸ್ ಶೋರೂಂ ದರದಂತೆ ರೂ.20 ಲಕ್ಷಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ವೆಚ್ಚವನ್ನು ನಿಯಂತ್ರಣದಲ್ಲಿಡಲು ಸಾಕಷ್ಟು ಒಳಾಂಗಣ ಸ್ವಿಚ್ ಗೇರ್, ಡ್ಯಾಶ್ ಬೋರ್ಡ್ ಮತ್ತು ಕೆಲವು ಬಾಹ್ಯ ಭಾಗಗಳನ್ನು ಸಾಮಾನ್ಯ ಕ್ರೆಟಾದಂತೆಯೇ ಇದರಲ್ಲೂ ಬಳಸಲಾಗಿದೆ. ಹೊಸ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಕೆಳಗಿದೆ.

ಮಹೀಂದ್ರಾ ಕಂಪನಿ ತಾಕತ್ತು.. ಕಲ್ಲುಬಂಡೆಯಂತಿರುವ ಈ ಹೊಸ..

ಮಹೀಂದ್ರಾ & ಮಹೀಂದ್ರಾ (Mahindra & Mahindra) ಸುರಕ್ಷಿತ ಕಾರು ತಯಾರಿಕೆ ಹೆಸರುವಾಸಿಯಾಗಿದೆ. ಕಳೆದ 2024ರ ನವೆಂಬರ್‌ನಲ್ಲಿ ಚೆನ್ನೈನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹೊಚ್ಚ ಹೊಸ 'ಬಿಇ 6' ಹೆಸರಿನ ಎಲೆಕ್ಟ್ರಿಕ್ ಕಾರನ್ನು ಆದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸದ್ಯ ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಭಾರತ್ ಎನ್‌ಸಿಎಪಿ (Bharat NCAP) ನೂತನ 'ಮಹೀಂದ್ರಾ ಬಿಇ 6'ನ್ನು ಅತ್ಯಂತ ಸುರಕ್ಷಿತ ಕಾರೆಂದು ನಿರ್ಣಯಿಸಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಆಟೋ ಎಕ್ಸ್ ಪೋದಲ್ಲಿ ಅನಾವರಣವಾಗಲಿದೆ ಹೊಸ ಕಿಯಾ ಕಾರುಗಳು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ (kia) ತನ್ನ ಸರಣಿಯಲ್ಲಿರುವ ಹೊಸ ಅತ್ಯಾಕರ್ಷಕ ಕಾರುಗಳನ್ನು 2025ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲು ಸಜ್ಜಾಗಿದ. 2025ರ ಆಟೋ ಎಕ್ಸ್‌ಪೋದಲ್ಲಿ ಕಿಯಾ ಪ್ರದರ್ಶಿಸುವ ಮಾದರಿಗಳಲ್ಲಿ ಎರಡೂ ಹೊಸ ಕಾರುಗಳು ಕಿಯಾ ಸೈರಸ್ ಮತ್ತು ಕಿಯಾ ಇವಿ6 ಫೇಸ್‌ಲಿಫ್ಟ್ ಆಗಿದೆ. ಇದರ ಜೊತೆ ಇವಿ9 ಎಲೆಕ್ಟ್ರಿಕ್ ಕಾರ್ ಸೇರಿದಂತೆ ಪ್ರಸ್ತುತ ಮಾರಾಟ ಮಾಡುವ ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ. ಇನ್ನು ಕಿಯಾ ಕಂಪನಿಯ ಆವಿಷ್ಕಾರಗಳ ಸಮಗ್ರ ನೋಟವನ್ನು ನೀಡುತ್ತದೆ.

TVS: ನಾಳೆ ಹೊಚ್ಚ ಹೊಸ ಎಲೆಕ್ಟ್ರಿಕ್ ಟಿವಿಎಸ್ ಜುಪಿಟರ್ & ಸಿಎನ್‌ಜಿ..

ಟಿವಿಎಸ್ ಮೋಟಾರ್ (TVS Motor) ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿರುವ ದ್ವಿಚಕ್ರ ವಾಹನ (Two Wheelers) ತಯಾರಕ ಕಂಪನಿಯಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಬೈಕ್ ಹಾಗೂ ಸ್ಕೂಟರ್‌ಗಳು ಹೆಚ್ಚು ಜನಪ್ರಿಯತೆ ಗಳಿಸಿವೆ. ನಾಳೆ (ಜ.17) ನವದೆಹಲಿಯ ಭಾರತ ಮಂಟಪದಲ್ಲಿ 'ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ (Bharat Mobility global Expo) ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಈ ಸಮಾರಂಭದಲ್ಲಿ ಕಂಪನಿಯು ವಿವಿಧ ನೂತನ ಸ್ಕೂಟರ್‌ಗಳನ್ನು ಪ್ರದರ್ಶಿಸಲು ಸಿದ್ದವಾಗಿದೆ ಎಂದು ವರದಿಯಾಗಿದೆ.

auto expo 2025: ಎಥರ್ ಎಲೆಕ್ಟ್ರಿಕ್ ಬೈಕ್ ಪ್ರದರ್ಶನ?

ಆಟೋ ಉದ್ಯಮಕ್ಕೆ ಅತಿಮುಖ್ಯ ಹಾಗೂ ಬಹುದೊಡ್ಡ ಈವೆಂಟ್ ಆಗಿರುವ 2025ರ ಆಟೋ ಎಕ್ಸ್‌ಪೋ ನಾಳೆಯಿಂದ ದೆಹಲಿಯಲ್ಲಿ ನಡೆಯಲಿದೆ. ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ತಮ್ಮ ಬಹುನಿರೀಕ್ಷಿತ ಮುಂಬರುವ ವಾಹನಗಳನ್ನು ಈ ಎಕ್ಸ್‌ ಪೋದಲ್ಲಿ ಪ್ರದರ್ಶಿಸಲಿದ್ದಾರೆ. ಹಾಗೆಯೇ ಬಿಡುಗಡೆ ಕೂಡ ಮಾಡಲಿದ್ದಾರೆ. ಇನ್ನು ಬೆಂಗಳೂರು ಮೂಲದ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾದ ಎಥೆರ್ ವಿಷಯಕ್ಕೆ ಬಂದರೆ ಗಮನಾರ್ಹ ಯೋಜನೆಗಳನ್ನು ಹೊಂದಿದೆ. ಎಕ್ಸ್ ಪೋದಲ್ಲಿ ಎಥೆರ್ ಏನೆಲ್ಲಾ ಪ್ಲಾನ್‌ಗಳನ್ನು ಹೊಂದಿದೆ. ಯಾವೆಲ್ಲಾ ಹೊಸ ಮಾದರಿಗಳನ್ನು ಅನಾವರಣಗೊಳಿಸಬಹುದು ಎಂಬುದರ ಒಂದು ನೋಟ ಇಲ್ಲಿದೆ.

Waiting Period: 6.66 ಲಕ್ಷ ಬೆಲೆ.. ಈ ಜನಪ್ರಿಯ ಕಾರನ್ನು ತಕ್ಷಣ..

ಭಾರತದ ಕಾರು ಮಾರುಕಟ್ಟೆಯಲ್ಲಿ ಎಸ್‌ಯುವಿಗಳು ದೊಡ್ಡಮಟ್ಟದ ಜನಪ್ರಿಯತೆ ಗಳಿಸಿವೆ. ಅವುಗಳಿಗೆ ಸವಾಲೆಸೆಯುವ ರೀತಿಯಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳು ಕೂಡ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಮಾರುತಿ ಸುಜುಕಿ ಬಲೆನೊ (Maruti Suzuki Baleno), ಟಾಟಾ ಆಲ್ಟ್ರೋಜ್ (Tata Altroz) ಹಾಗೂ ಟೊಯೊಟಾ ಗ್ಲಾನ್ಜಾ (Toyota Glanza) ಮಾಡೆಲ್‌ಗಳು ಅತ್ಯುತ್ತಮ ಹ್ಯಾಚ್‌ಬ್ಯಾಕ್‌ಗಳಾಗಿ ಹೊರಹೊಮ್ಮಿವೆ. ಇವುಗಳು ಈ ಜನವರಿಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಒಂದಷ್ಟು ಕಾಯುವಿಕೆ ಅವಧಿಯನ್ನು (Waiting Period) ಹೊಂದಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹೊಸ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನ ರಿವ್ಯೂ ವಿಡಿಯೋ

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ (Hyundai Creta EV) ಆವೃತ್ತಿಯನ್ನು ಆಟೋ ಎಕ್ಸ್‌ಪೋ 2025 ರಲ್ಲಿ ಬಿಡುಗಡೆಯಾಗುವ ಮುನ್ನ, ಹೊಸ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರನ್ನು ಓಡಿಸುವ ಅವಕಾಶ ನಮಗೆ ಇತ್ತೀಚೆಗೆ ಸಿಕ್ಕಿದೆ. ಕಂಪನಿಯು ಕ್ರೆಟಾವನ್ನು ಎಲೆಕ್ಟ್ರಿಕ್ ಕಾರುಗಳ ಜಗತ್ತಿಗೆ ರಾಜನಾಗಿ ಮಾಡಲು ಹೊರಟಿದೆ. ಅದರ ಇಂಧನ ಚಾಲಿತ ಮಾದರಿಯಂತೆ, ಕ್ರೆಟಾ ಎಲೆಕ್ಟ್ರಿಕ್ ಹಲವಾರು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಉತ್ತಮ ಚಾಲನಾ ಅನುಭವವನ್ನು ಮುಂದುವರಿಸಲು ನಿಮಗೆ ಅನುವು ಮಾಡಿಕೊಡುವ ಆರಾಮದಾಯಕ ಚಾಲನಾ ಅನುಭವವನ್ನು ನೀಡುತ್ತದೆ. ಈ ಅದ್ಬುತ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ರಿವ್ಯೂ ವಿಡಿಯೋ ಇಲ್ಲಿದೆ.
Advertisement

ಆಕರ್ಷಕ ಬೆಲೆಯ ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್ ವಿಶೇಷತೆಗಳೇನು?

ಹೀರೋ ಮೋಟೋಕಾರ್ಪ್ (Hero MotoCorp) ನಂಬರ್ 1 ದ್ವಿಚಕ್ರ ವಾಹನ (Two-Wheeler) ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಹೀರೋ ಕಂಪನಿ ಮಾರಾಟಗೊಳಿಸುವ ಬೈಕ್ ಹಾಗೂ ಸ್ಕೂಟರ್‌ಗಳು ಹೆಚ್ಚು ಜನಪ್ರಿಯತೆ ಗಳಿಸಿವೆ. ಸಂಕ್ರಾಂತಿ ಹಬ್ಬದ ದಿನವೇ ಹೀರೋ ಕಂಪನಿಯು ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 2025ರ ಹೊಚ್ಚ ಹೊಸ ಡೆಸ್ಟಿನಿ 125 (Destini 125) ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಹೀರೋ ಡೆಸ್ಟಿನಿ 125 (Hero Destini 125) ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

2025 Honda Dio: ಹೊಸ 2025 ಹೋಂಡಾ ಡಿಯೋ ಸ್ಕೂಟರ್‌ನಲ್ಲಿ ಟಾಪ್ ಫೀಚರ್

ಹೊಸ ತಂತ್ರಜ್ಞಾನ, ಹಲವು ಫೀಚರ್ಸ್ ಮತ್ತು ವಿವಿಧ ಬಣ್ಣಗಳ ಆಯ್ಕೆಗಳೊಂದಿಗೆ ಹೋಂಡಾ ಕಂಪನಿಯು ತನ್ನ ಬಹುನಿರೀಕ್ಷಿತ ಹೊಸ 2025ರ ಹೋಂಡಾ ಡಿಯೋ (2025 Honda Dio) ವನ್ನು ಮೊನ್ನೆಯಷ್ಟೆ ಬಿಡುಗಡೆ ಮಾಡಿದೆ. ಹೊಸ ಹೋಂಡಾ ಡಿಯೋ STD ಮತ್ತು DLX ಎಂಬ ಎರಡು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಡಿಯೋ STD ಬೆಲೆಯು ರೂ.74,930 (ಎಕ್ಸ್ ಶೋರೂಂ) ಇದ್ದರೇ, ಡಿಯೋ DLX ಬೆಲೆಯು ರೂ.85,648 (ಎಕ್ಸ್ ಶೋರೂಂ) ಇದೆ. ಹೊಸ 2025 ಹೋಂಡಾ ಡಿಯೋ ಸ್ಕೂಟರ್ ಟಾಪ್ ಫೀಚರ್ಸ್ ಇಲ್ಲಿವೆ.

Hyundai Creta EV: ಹುಂಡೈ ಕ್ರೆಟಾ ಎಲೆಕ್ಟ್ರಿಕ್ ರಿವ್ಯೂ

ಕಳೆದ ವರ್ಷ ಇದೇ ಸಮಯದಲ್ಲಿ ಹ್ಯುಂಡೈ ಅಂತಿಮವಾಗಿ ಫೇಸ್‌ಲಿಫ್ಟ್ ಕ್ರೆಟಾವನ್ನು ಭಾರತದಲ್ಲಿ ಪರಿಚಯಿಸಿತ್ತು. ಅಂದಿನಿಂದ, ನವೀಕರಿಸಿದ SUV ತನ್ನ ಅತ್ಯುತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಕಳೆದ ವರ್ಷ ಫೇಸ್‌ಲಿಫ್ಟ್ ಬಿಡುಗಡೆ ನಂತರ ಹುಂಡೈ ಭಾರತೀಯ ರಸ್ತೆಗಳಲ್ಲಿ ಕ್ರೆಟಾ ಎಲೆಕ್ಟ್ರಿಕ್ (Hyundai Creta EV) ಆವೃತ್ತಿಯನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡುತ್ತಲೇ ಬಂದಿತ್ತು. ಕೊನೆಗೂ ಹೊಸ ಕ್ರೆಟಾ ಎಲೆಕ್ಟ್ರಿಕ್ ಅನ್ನು ಬಹಿರಂಗಪಡಿಸಿದೆ. ಆದರೆ, ಬಿಡುಗಡೆ ಇನ್ನು ಬಾಕಿ ಇದೆ. ಆಟೋ ಎಕ್ಸ್‌ಪೋ 2025 ರಲ್ಲಿ ಬಿಡುಗಡೆಯಾಗುವ ಮುನ್ನ ಹೊಸ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಅನ್ನು ಓಡಿಸುವ ಅವಕಾಶ ನಮಗೆ ಇತ್ತೀಚೆಗೆ ಸಿಕ್ಕಿದೆ. ಈ ಅದ್ಬುತ ಕಾರಿನ ರಿವ್ಯೂ ಇಲ್ಲಿದೆ.

Skoda Kylaq: ಐದು ಆಸನಗಳು, ಅತಿಕಡಿಮೆ ಬೆಲೆ.. ಸ್ಕೋಡಾ ಕೈಲಾಕ್..

ಸ್ಕೋಡಾ ಕೈಲಾಕ್ (Skoda Kylaq) ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಈ ಕಾರನ್ನು ಡಿಸೆಂಬರ್ 2ರಂದು ಬಿಡುಗಡೆಗೊಳಿಸಲಾಗಿತ್ತು. ಇದರ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳಿಗೆ ಗ್ರಾಹಕರು ಕೂಡ ಮಾರುಹೋಗಿದ್ದರು. ಅದಕ್ಕೆ ತಕ್ಕಂತೆ ಬುಕ್ಕಿಂಗ್ ಆರಂಭಿಸಿದ ಕೇವಲ 10 ದಿನಗಳಲ್ಲಿ 10,000 ಖರೀದಿದಾರರು ಈ ಕಾರನ್ನು ಆರ್ಡರ್ ಮಾಡಿದ್ದರು. ಸದ್ಯ ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಭಾರತ್ ಎನ್‌ಸಿಎಪಿ (Bharat NCAP) ಈ 'ಸ್ಕೋಡಾ ಕೈಲಾಕ್'ನ್ನು ಅತ್ಯಂತ ಸುರಕ್ಷಿತ ಕಾರೆಂದು ನಿರ್ಣಯಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಮೆಚ್ಚಿನ ಫ್ಯಾಮಿಲಿ ಕಾರಿನ ಪ್ರಯಾಣಕ್ಕಾಗಿ ಹೆಚ್ಚು ಖರ್ಚು ಮಾಡಬೇಕು:

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ತನ್ನ ಫಾರ್ಚುನರ್ ನಂತರ, ಇನ್ನೋವಾ ಕ್ರಿಸ್ಟಾ ಎಂಪಿವಿ ಬೆಲೆಗಳನ್ನು ಪರಿಷ್ಕರಿಸಿದೆ. ಇದರ ಪರಿಣಾಮವಾಗಿ ಈ ಟೊಯೊಟಾ ಇನೋವಾ ಕ್ರಿಸ್ಟಾದ ಬೆಲೆಯು ರೂ.27,000 ವರೆಗೆ ಹೆಚ್ಚಿಸಲಾಗಿದೆ. ಈ ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಬಿಡುಗಡೆಯಾದಗಿನಿಂದಲೂ ಬಹುಬೇಡಿಕೆಯ ಎಂಪಿವಿಯಾಗಿದೆ. ಈ ಕಾರಿಗೆ ಸರಿಯಾದ ಪೈಪೋಟಿಗೆ ಯಾವುದು ಇಲ್ಲ ಎಂದು ಹೇಳಬಹುದು. ಟೋಯೊಟಾ ಇನೋವಾ ಲಕ್ಷಾಂತರ ಕಿ.ಮೀ ಚಲಿಸಿದರೂ ಎಂಜಿನ್ ಉತ್ತಮ ಸ್ಥಿತಿಯಲ್ಲಿರುತ್ತದೆ.