ರತನ್‌ ಟಾಟಾ ರೀತಿಯಲ್ಲೇ ಜನಮೆಚ್ಚಿದ ಈ ಟಾಟಾ ಕಾರು

ಟಾಟಾ ಪಂಚ್ 2024ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಕಾರ್ ಆಗಿದೆ. ಇದು ಮಾರುತಿ ಸುಜುಕಿಯ ನಾಲ್ಕು ದಶಕಗಳ ಪ್ರಾಬಲ್ಯವನ್ನು ಕೊನೆಗೊಳಿಸಿತು. ಪಂಚ್ ಭಾರತದ ಮೂರನೇ ಅತಿದೊಡ್ಡ ಕಾರು ತಯಾರಕರ ಎಂಟ್ರಿ ಲೆವೆಲ್ ಎಸ್‍ಯುವಿ ಆಗಿದೆ. 2021ರ ಟಾಟಾ ಪಂಚ್ ಮೈಕ್ರೋ ಎಸ್‍ಯುವಿ ಬಿಡುಗಡೆ ಮಾಡಿತು. ಹ್ಯಾಚ್‌ಬ್ಯಾಕ್ ಬೆಲೆಯಲ್ಲಿ ಅತ್ಯುತ್ತಮ ಸುರಕ್ಷತೆ ಮತ್ತು ಬೆರಳೆಣಿಕೆಯ ವೈಶಿಷ್ಟ್ಯಗಳೊಂದಿಗೆ ಬಂದ ಈ ಕಾರು ಭಾರತೀಯರ ಗಮನ ಸೆಳೆಯಿತು. ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರು ಆದ ನಂತರ, ಪಂಚ್ ಈಗ ಹೊಸ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ.

ಮೊನ್ನೆಯಷ್ಟೆ ಬಿಡುಗಡೆಯಾದ ಹೊಸ ರಿವರ್ಸ್‌ ಗೇರ್‌ ಸ್ಕೂಟರ್ ವಿಶೇಷತೆಗಳು

'ಆಂಪಿಯರ್ ಮ್ಯಾಗ್ನಸ್ ನಿಯೋ' (Ampere Magnus Neo) ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೊನ್ನೆಯಷ್ಟೆ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಬಿಡುಗಡೆ ಮಾಡಿದೆ. ಈ ಹೊಸ ಇವಿ ಸ್ಕೂಟರ್ ರೂ. 79,999 (ಎಕ್ಸ್‌ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯು ಹೊಸ ಮ್ಯಾಗ್ನಸ್ ನಿಯೋವನ್ನು ಪರಿಸರ ಸ್ನೇಹಿ, ಸೊಗಸಾದ ಮತ್ತು ಎಲ್ಲರಿಗೂ ಕೈಗೆಟುಕುವಂತೆ ಮಾಡಲು ವಿನ್ಯಾಸಗೊಳಿಸಲಾಗಿದ್ದು, ಹಣ ಉಳಿತಾಯಕ್ಕೆ ಈ ಸ್ಕೂಟರ್ ಬೆಸ್ಟ್ ಆಯ್ಕೆಯಾಗಿದೆ ಎಂದು ಕಂಪನಿ ಭರವಸೆ ನೀಡಿದೆ.

90ರ ದಶಕದ ನಟಿಗೆ 7 ಕೋಟಿ ಸಂಭಾವನೆ! 57ರ ಬ್ಯೂಟಿಗೆ 6 ಕೋಟಿ ಕಾರು

ದಕ್ಷಿಣ ಭಾರತದ ಸಿನಿಮಾಗಳ ಅಬ್ಬರದಿಂದ ಬಾಲಿವುಡ್ (Bollywood) ಈಗ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆಯಾದರೂ, 90ರ ದಶಕದಲ್ಲಿ ಭಾರತೀಯ ಸಿನಿಮಾ ಎಂದರೆ ಹೊರಗಿನವರಿಗೆ ಕೇವಲ ಬಾಲಿವುಡ್‌ ಮಾತ್ರ ಎನ್ನುವ ಮಟ್ಟಿಗೆ ಇತ್ತು. ಅಂದಿನ ಸಿನಿಮಾ ಜಗತ್ತಿಗೆ ಹೊಸ ಅಂದವನ್ನು ಪರಿಚಯಿಸಿದ್ದ ಅದೆಷ್ಟೋ ನಟಿಯರಲ್ಲಿ ಕೆಲವರು ಮಾತ್ರ ಇಂದಿಗೂ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ. ಇಂದಿಗೂ ಸ್ಟಾರ್‌ ನಟರಂತೆ ದುಬಾರಿ ಸಂಭಾವನೆ ಪಡೆಯುತ್ತಿದ್ದಾರೆ ಎಂದರೆ ಅವರ ಕ್ರೇಜ್ ಅರ್ಥ ಮಾಡಿಕೊಳ್ಳಬಹುದು. ಇತ್ತೀಚೆಗೆ 57ರ ವಯಸ್ಸಿನ 90ರ ದಶಕದ ನಟಿ 6.25 ಕೋಟಿ ರೂ.ಗಳ ಕಾರಿನಲ್ಲಿ ಕಾಣಿಸಿಕೊಂಡು ಅಚ್ಚರಿಗೊಳಿಸಿದ್ದಾರೆ.

ಯಾವುದೇ ಕಾರು ಬಂದರೂ ಟೊಯೊಟಾ ಇನೋವಾ ಅಲುಗಾಡಿಸಲು ಸಾಧ್ಯವಾಗಿಲ್ಲ!

ಟೊಯೊಟಾ ಇನೋವಾ (Toyota Innova) ಕಾರು ಬಿಡುಗಡೆಯಾದಗಿನಿಂದಲೂ ಬಹುಬೇಡಿಕೆಯ ಎಂಪಿವಿಯಾಗಿದೆ. ಈ ಕಾರಿಗೆ ಸರಿಯಾದ ಪೈಪೋಟಿಗೆ ಯಾವುದು ಇಲ್ಲ ಎಂದು ಹೇಳಬಹುದು. ಟೋಯೊಟಾ ಇನೋವಾ ಲಕ್ಷಾಂತರ ಕಿ.ಮೀ ಚಲಿಸಿದರೂ ಎಂಜಿನ್ ಉತ್ತಮ ಸ್ಥಿತಿಯಲ್ಲಿರುತ್ತದೆ. ಅಲ್ಲದೇ ಟೊಯೊಟಾ ಇನೋವಾ ಉತ್ತಮ ಫ್ಯಾಮಿಲಿ ಕಾರ್ ಆಗಿದೆ. ನಂತರದಲ್ಲಿ ಬಂದ ಇನೋವಾ ಕ್ರಿಸ್ಟಾ ಎಂಪಿವಿ ಕೂಡ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇದರ ನಂತರ ಬಂದ ಮಾದರಿ ಹೈಕ್ರಾಸ್ ಆಗಿದೆ. ಇನ್ನೋವಾ ಹೈಕ್ರಾಸ್ ಕೂಡ ಭರ್ಜರಿ ಮಾರಾಟವಾಗಿ ಹೊಸ ಇತಿಹಾಸ ನಿರ್ಮಿಸುತ್ತಿದೆ.
Advertisement

ಸ್ಟೈಲಿಷ್ ಲುಕ್‌ನ ಹೊಸ ಹೋಂಡಾ ಬ್ಲ್ಯಾಕ್ ಎಡಿಷನ್ ವಿಶೇಷತೆಗಳು

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ ತನ್ನ ಹೋಂಡಾ ಎಲಿವೇಟ್ ಬ್ಲಾಕ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಹೋಂಡಾ ಎಲಿವೇಟ್ ಬ್ಲಾಕ್ ಎಡಿಷನ್ (Honda Elevate Black Edition) ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.15.51 ಲಕ್ಷವಾಗಿದೆ. ಈ ಹೋಂಡಾ ಎಲಿವೇಟ್ (Honda Elevate) ಮಿಡ್ ಸೈಜ್ ಎಸ್‍ಯುವಿಯು ಬ್ಲ್ಯಾಕ್ ಎಡಿಷನ್ ಮತ್ತು ಸಿಗ್ನೇಚರ್ ಬ್ಲ್ಯಾಕ್ ಎಡಿಷನ್ ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ.

Honda: ಹೊಸ ಹೋಂಡಾ ಸ್ಪೋರ್ಟಿ ಸ್ಕೂಟರ್ ಬಿಡುಗಡೆ

ಹೋಂಡಾ (Honda) ಕಂಪನಿಯು ತನ್ನ ಬಹುನಿರೀಕ್ಷಿತ ಹೊಸ 2025ರ ಹೋಂಡಾ ಡಿಯೋ (2025 Honda Dio) ವನ್ನು ಬಿಡುಗಡೆ ಮಾಡಿದೆ. ಈಗ ಹೊಸ ಡಿಯೋ 74,930 ರೂ.ಗಳ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಹಲವು ಹೊಸ ಅಪ್‌ಡೇಟ್‌ಗಳ ಜೊತೆಗೆ ಒಬಿಡಿ 2 ಬಿ ಅನುಸರಣೆ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ. ಹೊಸ ತಂತ್ರಜ್ಞಾನ, ಹಲವು ಫೀಚರ್ಸ್ ಮತ್ತು ವಿವಿಧ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ. ಒಟ್ಟಾರೆ 2025 ಡಿಯೋ ನಾವೀನ್ಯತೆ, ಶೈಲಿ ಮತ್ತು ತಂತ್ರಜ್ಞಾನದ ಪರಿಪೂರ್ಣ ಸಮ್ಮಿಳನವನ್ನು ಪ್ರತಿನಿಧಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು.. 7-ಸೀಟರ್.. ಪ್ರಯಾಣ ಹೆಚ್ಚು..

ಹೊಸ ಕಾರು ಖರೀದಿ ಮಾಡಬೇಕು ಎಂಬುದು ಸಾವಿರಾರು ಜನರ ಕನಸು.. ಆದರೆ ಯಾವ ಕಾರನ್ನು ಮನೆಗೆ ತರಬೇಕು ಎಂಬ ಗೊಂದಲ ಹಲವರಲ್ಲಿ ಇರುತ್ತದೆ. ನಿಮ್ಮ ಕುಟುಂಬಕ್ಕಾಗಿ ಹೊಚ್ಚ ಹೊಸ ಫ್ಯಾಮಿಲಿ ಕಾರನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಟೊಯೋಟಾ ಇನ್ನೋವಾ ಕ್ರಿಸ್ಟಾ (Toyota Innova Crysta), ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto) ಹಾಗೂ ಮಹೀಂದ್ರಾ ಸ್ಕಾರ್ಪಿಯೋ ಎನ್ (Mahindra Scorpio N) ಕಾರುಗಳು ಉತ್ತಮ ಆಯ್ಕೆಯಾಗಲಿವೆ. ಇವು ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಬನ್ನಿ.. ಈ ಕಾರುಗಳ ಬೆಲೆ ಹಾಗೂ ವಿಶೇಷತೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

ಭಾರತದ ಟಾಪ್-3 ಎಲೆಕ್ಟ್ರಿಕ್ ಸ್ಕೂಟರ್‌ಗಳು: ಫುಲ್ ಡಿಮ್ಯಾಂಡ್

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ, ಈ ಹಿಂದೆ ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡು ಜನರಲ್ಲಿ ವಿಶ್ವಾಸ ಕಳೆದುಕೊಂಡಿದ್ದ ಇವಿಗಳು ಈಗ ಮತ್ತೆ ಅಬ್ಬರಿಸುತ್ತಿವೆ. ಸದ್ಯ ದೇಶದಲ್ಲಿ ಬೆಂಕಿ ಅವಘಡಗಳು ಬಹುತೇಕ ನಿಂತಿದೆ. ನಿಧಾನವಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಜನರಲ್ಲಿ ವಿಶ್ವಾಸ ಗಳಿಸುತ್ತಿದ್ದು, ಮಾರಾಟದಲ್ಲಿ ಏರಿಕೆಯಾಗಿದೆ. ದ್ವಿಚಕ್ರ ವಾಹನ ಇವಿ ವಿಭಾಗವು ಗಮನಾರ್ಹವಾಗಿ ಸ್ಪರ್ಧಾತ್ಮಕವಾಗಿ ಬೆಳೆದಿದೆ. ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಬೆಸ್ಟ್‌ ರೇಂಜ್ ನೀಡುವ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳಿವೆ. ಇವು ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ.ಗಿಂತ ಹೆಚ್ಚಿನ ರೇಂಜ್ ನೀಡುತ್ತವೆ.

ಅದ್ಭುತ ಟೊಯೊಟಾ ಕಾರಿಗೆ ಗ್ರಾಹಕರಿಂದ ನಿರೀಕ್ಷಿಸದ ಟ್ವಿಸ್ಟ್...

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ತನ್ನ ಗ್ಲಾಂಝಾ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಮಾರುತಿ ಸುಜುಕಿ ಬಲೆನೊ ಆಧಾರಿತ ಈ ಟೊಯೊಟಾ ಗ್ಲಾಂಝಾ (Toyota Glanza) ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಮಾದರಿ ಇದಾಗಿದೆ. ಜನಪ್ರಿಯ ಟೊಯೊಟಾ ಗ್ಲಾಂಝಾದ ಕಳೆದ ತಿಂಗಳ ಮಾರಾಟ ವರದಿ ಬಹಿರಂಗವಾಗಿದೆ. 2024ರ ಡಿಸೆಂಬರ್ ತಿಂಗಳಿನಲ್ಲಿ ಟೊಯೊಟಾ ಗ್ಲಾಂಝಾ ಮಾದರಿಯ 3,487 ಯುನಿಟ್‌ಗಳು ಮಾರಾಟವಾಗಿವೆ. ಇನ್ನು 2023ರ ಡಿಸೆಂಬರ್ ತಿಂಗಳಿನಲ್ಲಿ ಗ್ಲಾಂಝಾದ 4,088 ಯುನಿಟ್‌ಗಳು ಮಾರಾಟವಾಗಿತ್ತು.

Hero: ಅಗ್ಗದ ದರದ ಹೀರೋ ಡೆಸ್ಟಿನಿ 125 ಸ್ಕೂಟರ್ ಬಿಡುಗಡೆ..

ಹೀರೋ ಮೋಟೋಕಾರ್ಪ್ (Hero MotoCorp), ನಂಬರ್ 1 ದ್ವಿಚಕ್ರ ವಾಹನ (Two-wheeler) ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಬೈಕ್ ಹಾಗೂ ಸ್ಕೂಟರ್‌ಗಳು ಹೆಚ್ಚು ಜನಪ್ರಿಯತೆ ಗಳಿಸಿವೆ. ಸಂಕ್ರಾಂತಿ ಹಬ್ಬದ ದಿನವೇ ಹೀರೋ ಕಂಪನಿಯು ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 2025ರ ಹೊಚ್ಚ ಹೊಸ ಡೆಸ್ಟಿನಿ 125 (Destini 125) ಸ್ಕೂಟರ್‌ನ್ನು ಮಾರಾಟಕ್ಕೆ ತಂದಿದೆ. ಬನ್ನಿ.. ನೂತನ ಸ್ಕೂಟರ್ ಬೆಲೆ, ವಿನ್ಯಾಸ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತಂತೆ ಸಂಪೂರ್ಣವಾದ ವಿವರವನ್ನು ತಿಳಿಯೋಣ.

Nexon: ಯಪ್ಪಾ.. 24.08 ಕಿ.ಮೀ ಮೈಲೇಜ್, 8 ಲಕ್ಷದ ಹೊಸ ಟಾಟಾ..

ಟಾಟಾ ನೆಕ್ಸಾನ್ (Tata Nexon) ಪ್ರಖ್ಯಾತ ಎಸ್‌ಯುವಿಯಾಗಿದೆ. ಈ ಕಾರು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಇತ್ತೀಚೆಗೆ ನವೀಕರಿಸಿಯೂ ನೂತನ ನೆಕ್ಸಾನ್ ಎಸ್‌ಯುವಿ ಬಿಡುಗಡೆಗೊಳಿಸಲಾಗಿತ್ತು. ನೀವು ಹೊಚ್ಚ ಹೊಸ ಕಾರನ್ನು ಖರೀದಿ ಮಾಡಲು ಆಲೋಚಿಸಿದ್ದರೆ.. ಹಾಗಾದರೆ ಟಾಟಾ ನೆಕ್ಸಾನ್ ಉತ್ತಮವಾದ ಆಯ್ಕೆಯಾಗಲಿದೆ. ಆದರೆ, ಈ ಕಾರನ್ನು ತಕ್ಷಣ ಶೋರೂಂಗೆ ಹೋಗಿ ಮನೆಗೆ ತರಲು ಸಾಧ್ಯವಾಗುವುದಿಲ್ಲ.. ಈ ಜನವರಿಯಲ್ಲಿಯೂ ಹೊಸ ನೆಕ್ಸಾನ್ ದೇಶದ ಪ್ರಮುಖ ನಗರಗಳಲ್ಲಿ ಒಂದಷ್ಟು ಕಾಯುವಿಕೆ ಅವಧಿಯನ್ನು ಹೊಂದಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ. ಬೆಂಗಳೂರಿನಲ್ಲಿ ನೂತನ ಟಾಟಾ ನೆಕ್ಸಾನ್ ಎಸ್‌ಯುವಿ, ರೂಪಾಂತರಗಳನ್ನು (ವೇರಿಯೆಂಟ್) ಅವಲಂಭಿಸಿ 15 ದಿನದಿಂದ 1 ತಿಂಗಳಲ್ಲಿ ಗ್ರಾಹಕರಿಗೆ ವಿತರಣೆಯಾಗುತ್ತದೆ. ನವದೆಹಲಿಯಲ್ಲಿ 2 ತಿಂಗಳಲ್ಲಿ ಗ್ರಾಹಕರ ಕೈಸೇರುತ್ತದೆ. ಮುಂಬೈನಲ್ಲಿ 1 ರಿಂದ 1.5 ತಿಂಗಳು ಕಾಯುವಿಕೆ ಅವಧಿಯನ್ನು ಒಳಗೊಂಡಿದೆ. ಹೈದರಾಬಾದ್‌ನಲ್ಲಿ 1 ತಿಂಗಳಲ್ಲಿ ಡೆಲಿವರಿಯಾಗಿ ಬಿಡುತ್ತದೆ.

ಫಾರ್ಚೂನರ್ ಎಸ್‍ಯುವಿಯ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟೊಯೊಟಾ

ಫುಲ್ ಸೈಜ್ ಎಸ್‌ಯುವಿ (Full Size Suv) ವಿಭಾಗದಲ್ಲಿ ದಿಗ್ಗಜ ಟೊಯೊಟಾ ಫಾರ್ಚೂನರ್ ತನ್ನ ಪ್ರಾಬಲ್ಯವನ್ನು ಎಂದಿನಂತೆ ಮುಂದುವರೆಸಿದೆ. ಪ್ರತಿ ತಿಂಗಳಿನಲ್ಲೂ, ಫುಲ್ ಸೈಜ್ ಎಸ್‌ಯುವಿ ವಿಭಾಗದ ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ (Toyota Fortuner) ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿ ಮುಂದುವರೆಯುತ್ತಿದೆ. ಫುಲ್ ಸೈಜ್ ಎಸ್‌ಯುವಿ ವಿಭಾಗದ ಮಾರಾಟದಲ್ಲಿ ಅಗ್ರಸ್ಥ್ನಾನದಲ್ಲಿದ್ದರೂ ಕಳೆದ ವರ್ಷದ ಇದೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಕುಸಿತವನ್ನು ಕಂಡಿದೆ. ಈ ನಡುವೆ ಟೊಯೊಟಾ ಫಾರ್ಚುನರ್‌ನ GR-S ರೂಪಾಂತರದ ಬೆಲೆಯು ರೂ.50,000 ವರೆಗೆ ಹೆಚ್ಚಿಸಲಾಗಿದೆ.
Advertisement

ರಿವರ್ಸ್‌ ಗೇರ್‌ ಸ್ಕೂಟರ್ ಬಿಡುಗಡೆ: 5 ವರ್ಷ ವಾರೆಂಟಿ!

ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕರಾದ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (GEML), ತನ್ನ ಮ್ಯಾಗ್ನಸ್ ಎಲೆಕ್ಟ್ರಿಕ್ ಸ್ಕೂಟರ್‌ನ ವರ್ಧಿತ ರೂಪಾಂತರವಾದ 'ಆಂಪಿಯರ್ ಮ್ಯಾಗ್ನಸ್ ನಿಯೋ' (Ampere Magnus Neo) ವನ್ನು ಪರಿಚಯಿಸಿದೆ. ತನ್ನ ಮ್ಯಾಗ್ನಸ್ ಸರಣಿಯ ಪರಂಪರೆಯನ್ನು ಆಧರಿಸಿ ಹೊಸ ಮ್ಯಾಗ್ನಸ್ ನಿಯೋವನ್ನು ಪರಿಸರ ಸ್ನೇಹಿ, ಸೊಗಸಾದ ಮತ್ತು ಎಲ್ಲರಿಗೂ ಕೈಗೆಟುಕುವಂತೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಹೊಸ ಮ್ಯಾಗ್ನಸ್ ನಿಯೋ ಆಕರ್ಷಕ ಡಿಸೈನ್, ಹೆಚ್ಚಿನ ಪವರ್, ಸುರಕ್ಷತೆ ಮತ್ತು ಹಣ ಉಳಿತಾಯಕ್ಕೆ ಬೆಸ್ಟ್ ಆಯ್ಕೆಯಾಗಿದೆ ಎಂದು ಕಂಪನಿ ಭರವಸೆ ನೀಡಿದೆ.

Maruti Alto: 34 ಕಿ.ಮೀ ಮೈಲೇಜ್, 5-ಸೀಟರ್.. 3.99 ಲಕ್ಷದ ಮಾರುತಿ..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಪ್ರಖ್ಯಾತ ಹ್ಯಾಚ್‌ಬ್ಯಾಕ್ ಆಗಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವುದರಿಂದ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಸಹ ಈ ಕಾರನ್ನು ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. 2023ರಲ್ಲಿ ನಿಧಾನಗತಿಯಲ್ಲಿದ್ದ ಆಲ್ಟೊ ಕಾರಿನ ಮಾರಾಟ ಪ್ರಮಾಣ, 2024ರಲ್ಲಿ ಸುಧಾರಿಸಿದೆ. ಡಿಸೆಂಬರ್‌ನಲ್ಲಿಯೂ ಈ ಕಾರು ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಸಾಮಾನ್ಯರಂತೆ ಬಂದು ಆಟೋ ಓಡಿಸಿದ್ದು ಇವರಾ? ಯಾರೆಂದು ತಿಳಿದು ಅಚ್ಚರಿ

ಭಾರತದ ಪ್ರಮುಖ ಉದ್ಯಮಿಯೊಬ್ಬರು ಇತ್ತೀಚೆಗೆ ಆಟೋ ರಿಕ್ಷಾವನ್ನು ಓಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಇವರು ಅನೇಕ ಫೆರಾರಿ, ಲ್ಯಾಂಬೊರ್ಘಿನಿ ಸೇರಿದಂತೆ ಅಪರೂಪದ ಅಮೇರಿಕನ್, ಯುರೋಪಿಯನ್ ಕಾರುಗಳು ಸೇರಿದಂತೆ ದುಬಾರಿ ಐಷಾರಾಮಿ, ಸೂಪರ್ ಕಾರುಗಳನ್ನು ಹೊಂದಿದ್ದಾರೆ. ಸದಾ ಕೋಟ್ಯಾಂತರ ರೂ. ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವರು ದಿಢೀರ್ ಆಗಿ ಸಾಮಾನ್ಯ ಆಟೋವನ್ನು ಓಡಿಸುತ್ತಾ ಕಾಣಿಸಿಕೊಂಡಿರುವುದು ಹಲವರನ್ನು ಅಚ್ಚರಿಗೊಳಿಸಿದೆ. ಅಷ್ಟಕ್ಕು ಅವರು ಯಾರು? ಆಟೋ ಓಡಿಸಿದ ಹಿಂದಿನ ಕಾರಣವೇನು? ಈ ಕುರಿತ ಎಲ್ಲಾ ಮಾಹಿತಿ ಇಲ್ಲಿದೆ.

ಮಾರುತಿ ಓಮ್ನಿ ಉತ್ತರಾಧಿಕಾರಿಯಾದ ಇಕೋ ವ್ಯಾನ್‌ ಹೊಸ ಮೈಲಿಗಲ್ಲು

ಜನಪ್ರಿಯ ಮತ್ತು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಇಕೋ ವ್ಯಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ಮಾರಾಟ ಮಾಡುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ 2010ರಲ್ಲಿ ಬಿಡುಗಡೆಯಾದ ಈ ಮಾರುತಿ ಸುಜುಕಿ ಇಕೋ (Maruti Suzuki Eeco) ವ್ಯಾನ್ 15 ವರ್ಷಗಳನ್ನು ಪೂರೈಸಿದೆ. 1.2 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ, ಇದು ಮಧ್ಯಮ ವರ್ಗದ ಕುಟುಂಬಗಳಿಗೆ ಪ್ರಾಯೋಗಿಕ ಆಯ್ಕೆಯಾಗಿ ಮಾರಾಟದಲ್ಲಿ ಮುನ್ನುಗುತ್ತಿದೆ. ಈ ವ್ಯ್ತಾನ್ ತನ್ನ ವಿಭಾಗದಲ್ಲಿ ಪ್ರಭಾವಶಾಲಿ 90 ಪ್ರತಿಶತ ಪಾಲನ್ನು ಹೊಂದಿದೆ.

ಪುಟ್ಟ ಕಾರಿನ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಹ್ಯುಂಡೈ

ದಕ್ಷಿಣ ಕೊರಿಯಾದ ಜನಪ್ರಿಯ ಕಾರು ನಿರ್ಮಾಣ ಕಂಪನಿಯಾದ ಹ್ಯುಂಡೈ, ಭಾರತದಲ್ಲಿ ಎಕ್ಸ್‌ಟರ್‌ ಎಂಬ ಮೈಕ್ರೋ ಎಸ್‌ಯುವಿಯೊಂದನ್ನು ಬಿಡುಗಡೆ ಮಾಡಿತ್ತು. ಟಾಟಾ ಪಂಚ್‌ನ ಎದುರಾಳಿಯಾಗಿ ಮಾರುಕಟ್ಟೆಗೆ ಬಂದ ಈ ಎಕ್ಸ್‌ಟರ್‌, ಆನಂತರ ನಡೆದಿದ್ದೆಲ್ಲಾ ಇತಿಹಾಸ. ಈ ಕಾರು ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಪಡೆದಿದ್ದು, ಅತ್ಯುತ್ತಮ ಮಾರಾಟವಾಗುತ್ತಿದೆ. ಈ ಹ್ಸೊಸ ವರ್ಷದಿಂದ ಹ್ಯುಂಡೈ ಎಕ್ಸ್‌ಟರ್ ಕಾರು ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಈ ಹ್ಯುಂಡೈ ಎಕ್ಸ್‌ಟರ್ ಮಾದರಿಯ ಬೆಲೆಯು ರೂ.9,700 ರೂ.ವರೆಗೆ ಹೆಚ್ಚಾಗಿದೆ.

ಹೋಂಡಾ ಆಕ್ಟಿವಾ ಪ್ರತಿಸ್ಪರ್ಧಿ.. ಟಿವಿಎಸ್ ಜುಪಿಟರ್ ಮಾರಾಟದಲ್ಲಿ..

ಟಿವಿಎಸ್ ಮೋಟಾರ್ (TVS Motor) ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿರುವ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಬೈಕ್ ಹಾಗೂ ಸ್ಕೂಟರ್‌ಗಳು ಆಕರ್ಷಕವಾದ ವಿನ್ಯಾಸವನ್ನು ಹೊಂದಿವೆ. ಈ ಕಾರಣಕ್ಕೆ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿವೆ. ಸದ್ಯ, ಟಿವಿಎಸ್ ಕಂಪನಿಯು ಜುಪಿಟರ್ (Jupiter) ಸ್ಕೂಟರ್ ಮಾರಾಟದಲ್ಲಿ ಹೊಸ ಇತಿಹಾಸವನ್ನು ಬರೆದಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

BGMI ಆಟಗಾರರಿಗೆ ಜನವರಿ 16 ರಂದು ಅಚ್ಚರಿಯ ಅಪ್‌ಡೇಟ್‌!

ಕ್ರಾಫ್ಟನ್ ಇಂಡಿಯಾ ಮತ್ತು ಮಹೀಂದ್ರಾ ಕಂಪನಿಯು ಗೇಮಿಂಗ್ ಮತ್ತು ಆಟೋಮೋಟಿವ್ ಪ್ರಪಂಚಗಳ ನಡುವೆ ಸೇತುವೆಯನ್ನು ನಿರ್ಮಿಸಲು ಸಜ್ಜಾಗಿವೆ. ಈ ಎರಡು ಕಂಪನಿಗಳು ಹೊಸ ಪಾಲುದಾರಿಕೆ ಅಡಿಯಲ್ಲಿ ಮಹೀಂದ್ರಾದ ಹೊಸ ಎಲೆಕ್ಟ್ರಿಕ್ ಒರಿಜಿನ್ SUV- BE 6 ಅನ್ನು ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ಗೇಮ್‌ನಲ್ಲಿ ಪರಿಚಯಿಸಲು ಕೈಜೋಡಿಸಿವೆ. ಈ ವಿಶಿಷ್ಟ ಪಾಲುದಾರಿಕೆಯು ಗ್ರಾಹಕರಿಗೆ ತಲ್ಲೀನಗೊಳಿಸುವ ಅನುಭವವನ್ನು ನೀಡುವುದರ ಜೊತೆಗೆ, ಭಾರತದ ಯುವ, ತಂತ್ರಜ್ಞಾನ-ಬುದ್ಧಿವಂತ ಪ್ರೇಕ್ಷಕರ ಆಕಾಂಕ್ಷೆಗಳನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿರುವುದಾಗಿ ಹೇಳಿವೆ.

Tata: ಟಾಟಾದ ಈ ಪ್ರಖ್ಯಾತ ಕಾರಿನ ಬೆಲೆ ಏರಿಕೆ.. ಎಷ್ಟಾಗಿದೆ?

ಟಾಟಾ ಮೋಟಾರ್ಸ್ (Tata Motors), ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿರುವ ಸ್ವದೇಶಿ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ 'ಪಂಚ್' ಜನಪ್ರಿಯ ಮೈಕ್ರೋ ಎಸ್‌ಯುವಿಯಾಗಿದೆ. 2024ರಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಬರೋಬ್ಬರಿ 2,02,031 ಯುನಿಟ್ 'ಪಂಚ್' ಕಾರುಗಳನ್ನು ಗ್ರಾಹಕರು ಖರೀದಿ ಮಾಡಿದ್ದಾರೆ. ಸದ್ಯ, ಈ ಕಾರಿನ ಬೆಲೆ ಒಂದಷ್ಟು ಹೆಚ್ಚಳಗೊಂಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Advertisement

ಐಕಾನಿಕ್ ಕೈನೆಟಿಕ್ ಗ್ರೀನ್ ಕಂಪನಿ ಹೊಸ ಪಾಲುದಾರಿಕೆ

ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿರುವ ಕೈನೆಟಿಕ್ ಗ್ರೀನ್ ಎನರ್ಜಿ ಮತ್ತು ಭಾರತದ ಅತಿದೊಡ್ಡ ಬ್ಯಾಟರಿ-ಆಸ್-ಎ-ಸರ್ವಿಸ್ ಕಂಪನಿಗಳಲ್ಲಿ ಒಂದಾದ ಯುಮಾ ಎನರ್ಜಿ, ಗ್ರಾಹಕರಿಗೆ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಹತ್ತಿರವಾಗಿಸಲು ಪಾಲುದಾರಿಕೆಯನ್ನು ಘೋಷಿಸಿವೆ. ಐಕಾನಿಕ್ ಇ-ಲೂನಾದಿಂದ ಪ್ರಾರಂಭಿಸಿ, ಕಂಪನಿಗಳು ಜಂಟಿಯಾಗಿ 2025 ರಲ್ಲಿ 10,000 ವಾಹನಗಳನ್ನು ನಿಯೋಜಿಸಲಿವೆ. ಹಾಗೆಯೇ ಮುಂದಿನ ನಾಲ್ಕು ವರ್ಷಗಳಲ್ಲಿ 1,00,000 ವಾಹನಗಳಿಗೆ ವಿಸ್ತರಿಸುವ ಯೋಜನೆಯನ್ನು ಘೋಷಿಸಿವೆ. ಇದಕ್ಕಾಗಿ ಯುಮಾ ಎನರ್ಜಿ ಸುಲಭವಾದ ಬ್ಯಾಟರಿ-ವಿನಿಮಯ ಮೂಲಸೌಕರ್ಯವನ್ನು ರಚಿಸುವತ್ತ ಗಮನಹರಿಸಿರುವುದಾಗಿ ಹೇಳಿವೆ.

ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು: ಈ ಮಾರುತಿ ಕಾರಿಗೆ ಮುಗಿಬಿದ್ದ ಜನ

ಭಾರತದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿ ಮಾರುತಿ ಸುಜುಕಿ (Maruti Suzuki) ಗುರುತಿಸಿಕೊಂಡಿದೆ. ನೆಕ್ಸಾ (NEXA) ಹಾಗೂ ಅರೆನಾ (Arena) ಡೀಲರ್‌ಶಿಪ್ ಮೂಲಕ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಪಡೆದಿರುವ ಕಾರುಗಳನ್ನು ಮಾರಾಟಗೊಳಿಸುತ್ತಿದ್ದು, ಗ್ರಾಹಕರು ಕೂಡ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಇತ್ತೀಚೆಗೆ ಮಾರುತಿ ಸುಜುಕಿ ಕಂಪನಿಯು ಡಿಸೆಂಬರ್ ತಿಂಗಳಿನ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಇನ್ನು ಕಳೆದ ತಿಂಗಳಿನಲ್ಲಿ ಸುಜುಕಿ ಸೆಲರಿಯೊದ (Maruti Suzuki Celerio) 748 ಯುನಿಟ್ ಗಳು ಮಾರಾಟವಾಗಿವೆ. ಇನ್ನು ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ 247 ಯುನಿಟ್ ಗಳು ಮಾರಾಟವಾಗಿತ್ತು.

ಕಡಿಮೆ ಬೆಲೆಯ ಸುರಕ್ಷಿತ ಬೈಕ್‌ಗಳು: ಸೇಫ್ಟಿ ಮುಖ್ಯ

ಎಬಿಎಸ್ ಎಂಬ ಸುರಕ್ಷಿತ ಬ್ರೇಕಿಂಗ್ ಸಿಸ್ಟಮ್ ಇತ್ತೀಚಿನ ಪರಿಸ್ಥಿತಿಗಳಿಗೆ ಬಹಳ ಅವಶ್ಯಕ ಸೇಫ್ಟಿ ಫೀಚರ್ ಆಗಿದೆ. ಇಂದಿನ ರಸ್ತೆ ಪರಿಸ್ಥಿತಿಗಳಿಗೆ ಎಬಿಎಸ್ ಹೊಂದಿರುವ ಬೈಕ್‌ಗಳ ಅವಶ್ಯಕತೆ ತುಂಬಾ ಇದೆ. ಪ್ರಸ್ತುತ ಭಾರತದಲ್ಲಿ ಅಗ್ಗದ ಬೆಲೆಗೆ ಎಬಿಎಸ್ ವೈಶಿಷ್ಟ್ಯದೊಂದಿಗೆ ಸುರಕ್ಷಿತ ಬೈಕ್‌ಗಳನ್ನು ಹಲವು ಕಂಪನಿಗಳು ಮಾರಾಟ ಮಾಡುತ್ತಿವೆ. ಇವೆಲ್ಲವು ಡ್ಯುಯಲ್ ಚಾನಲ್ ಎಬಿಎಸ್‌ನೊಂದಿಗೆ ಸವಾರಿಯನ್ನು ಇನ್ನಷ್ಟು ಸುರಕ್ಷಿತಗೊಳಿಸುತ್ತವೆ. ನೀವು ಕೂಡ ಅಗ್ಗದ ಸುರಕ್ಷಿತ ಮೋಟಾರ್‌ಸೈಕಲ್ ಖರೀದಿಸುವ ಯೋಜನೆಯಿದ್ದರೇ ಡ್ಯುಯಲ್-ಚಾನೆಲ್ ಎಬಿಎಸ್ ಜೊತೆಗೆ ಬರುವ ಟಾಪ್-5 ಮೋಟಾರ್ ಸೈಕಲ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಸಂಕ್ರಾಂತಿಗೆ 8 ಅತ್ಯುತ್ತಮ ಶುಭಾಶಯಗಳು ಇಲ್ಲಿವೆ ನೋಡಿ

ಇದು ಸೂರ್ಯನು ತನ್ನ ಪಥ ಬದಲಿಸುವ ಈ ಸಮಯ. ರೈತರ ಮನೆಮನೆಯಲ್ಲೂ ಉತ್ಸಾಹ, ಸಂಭ್ರಮ ಮನೆ ಮಾಡುವ ಹಬ್ಬ ಸಂಕ್ರಾಂತಿ. ರೈತರು ಬೆಳೆಯ ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಮಾಗಿಯ ಚಳಿ ಮಾಯವಾಗಿ ಸೂರ್ಯನ ರಶ್ಮಿ ಭೂಮಿಗೆ ಚುಂಬಿಸುವ ವೇಳೆ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ.

ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಕುಟುಂಬ ಸದಸ್ಯರೆಲ್ಲಾ ಒಂದಾಗಿ ಆಚರಿಸುವುದು ವಾಡಿಕೆ. ಈ ಹಬ್ಬದಂದು ಬಂಧು-ಬಾಂಧವರಿಗೆ, ಸ್ನೇಹಿತರು, ಆಪ್ತರಿಗೆ ಶುಭಾಶಯ ಕೋರಲು ಇಲ್ಲಿದೆ ಕೆಲವು ಸಂದೇಶಗಳು.

Toyota: 28.5 ಕಿ.ಮೀ ಮೈಲೇಜ್.. 5-ಸೀಟರ್, 7 ಲಕ್ಷದ ಈ ಜನಪ್ರಿಯ..

ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ (Toyota Urban Cruiser Taisor) ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಮಾರುತಿ ಸುಜುಕಿ ಹಾಗೂ ಟೊಯೊಟಾ ಕಂಪನಿಗಳು ಪಾಲುದಾರಿಕೆ ಹೊಂದಿದ್ದು, ಅದರ ಭಾಗವಾಗಿ 2024ರ ಏಪ್ರಿಲ್ ತಿಂಗಳಲ್ಲಿ 'ಫ್ರಾಂಕ್ಸ್' ಆಧಾರಿತ ನೂತನ 'ಟೈಸರ್' ಕಾರನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಅಂದಿನಿಂದಲೇ ಈ ಎಸ್‌ಯುವಿಗೆ ಭಾರೀ ಬೇಡಿಕೆ ಸೃಷಿಯಾಗಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತದೆ. ಕಳೆದ ಡಿಸೆಂಬರ್‌ನಲ್ಲಿಯೂ ಹೆಚ್ಚಿನ ಸಂಖ್ಯೆಯ ಗ್ರಾಹಕರು ಈ ಕಾರನ್ನು ಖರೀದಿ ಮಾಡಿದ್ದಾರೆ.