Bajaj: ಬಜಾಜ್‌ನಿಂದ ಹೊಸ ಸ್ಟೈಲಿಷ್ ಮೋಟಾರ್ ಸೈಕಲ್ ಕಡಿಮೆ ಬೆಲೆಯಲ್ಲಿ

ಬಜಾಜ್ (Bajaj) ಕಂಪನಿಯು ತನ್ನ ಬಹುನಿರೀಕ್ಷಿತ ಹೊಸ ಮೋಟಾರ್‌ಸೈಕಲ್ ಅನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಇದು ತನ್ನ ಜನಪ್ರಿಯ RS ಶ್ರೇಣಿಯ ಮೋಟಾರ್‌ಸೈಕಲ್ ಆಗಿರುವ ಸಾಧ್ಯತೆಯಿದೆ. ಇತ್ತೀಚೆಗೆ ಕಂಪನಿಯು ಇದರ ಹೊಸ ಮಸುಕಿನ ಟೀಸರ್‌ನ ಜಲಕ್ ನೀಡಿದ್ದು, ಇದರಲ್ಲಿ "ಅಭಿನಂದನೆಗಳು ಮ್ಯಾನಿಯಾಕ್ಸ್! ನಾವು ಬಹುತೇಕ ತಲುಪಿದ್ದೇವೆ! 0X-01-2025!" ಎಂಬ ಶೀರ್ಷಿಕೆಯನ್ನು ಕೊಟ್ಟಿದೆ. ಈ ಮೂಲಕ ಮೋಟಾರ್‌ಸೈಕಲ್ ಈ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಜನವರಿ 6 ರಿಂದ 9 ರ ನಡುವೆ ಬರುವ ಈ ದೊಡ್ಡ ಟೀಸರ್ ಬರುವ ಸಾಧ್ಯತೆಯಿದೆ.

Akash Ambani: ಐಷಾರಾಮಿ ಬುಲೆಟ್ ಪ್ರೂಫ್ ಕಾರು ಖರೀದಿಸಿದ..

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani), ಹಿರಿಯ ಪುತ್ರ ಆಕಾಶ್ ಅಂಬಾನಿ (Akash Ambani) ಕೂಡ ತಮ್ಮ ಕುಟುಂಬದ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೂ ಕಾರುಗಳ ಮೇಲೆ ವಿಶೇಷವಾದ ಪ್ರೀತಿಯಿದ್ದು, ಹಲವು ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಇತ್ತೀಚೆಗೆ ಅವರು, ಹೊಚ್ಚ ಹೊಸ ಬುಲೆಟ್ ಪ್ರೂಫ್ ಮರ್ಸಿಡಿಸ್ ಎಸ್680 ಗಾರ್ಡ್‌ (Mercedes S680 Guard) ಕಾರನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ನೂತನ ಕಾರಿನಲ್ಲಿ ಅವರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಮಾರುತಿ ಸುಜುಕಿಯಿಂದ ಬಿಡುಗಡೆಯಾಗಲಿರುವ ಕಾರುಗಳಿವು

ಹೊಸ ವರ್ಷದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಹೊಸ ಕಾರುಗಳು ಬಿಡುಗಡೆಯಾಗಲು ಸಜ್ಜಾಗುತ್ತಿದೆ. ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಈ ವರ್ಷದಲ್ಲಿ ಹಲವಾರು ಹೊಸ ಕಾರುಗಳನ್ನು ತರುತ್ತಿದೆ. ಇದರಲ್ಲಿ ಹಲವಾರು ಹೊಸ ಮಾದರಿಗಳು ಮತ್ತು ಫೇಸ್‌ಲಿಫ್ಟ್‌ಗಳನ್ನು ಪರಿಚಯಿಸಲು ಸಜ್ಜಾಗಿದೆ. ಹೆಚ್ಚು ಬಹುನಿರೀಕ್ಷಿತವಾಗಿ ಕಾರು ಪ್ರಿಯರು ಕಾಯುತ್ತಿರುವುದು ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರ್ ಕಾಗಿ ಆಗಿದೆ. ಮುಂದಿನ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸರಿಯಾಗಿ ಸಿಕ್ಕಿಬಿದ್ದ ಸ್ಮಗ್ಲರ್

ಭಾರತದಲ್ಲಿ ಜನರ ಮೇಲೆ ಸಿನಿಮಾಗಳ ಪ್ರಭಾವ ಎಷ್ಟಿರುತ್ತದೆ ಎಂಬುದು ಎಲ್ಲರಿಗು ತಿಳಿದಿರುತ್ತದೆ. ಅದರಲ್ಲೂ ಒಳ್ಳೆಯ ಕೆಲಸಗಳನ್ನು ಪಾಲನೆ ಮಾಡುವವರಿಗಿಂತಲೂ ಅಡ್ಡದಾರಿಯಲ್ಲಿ ನಡೆಯುವ ದೃಶ್ಯಗಳನ್ನೆ ಜನರು ಹೆಚ್ಚಾಗಿ ಪಾಲನೆ ಮಾಡುತ್ತಾರೆ. ಇತ್ತೀಚೆಗೆ ತೆಲುಗಿನಲ್ಲಿ ಬಿಡುಗಡೆಯಾದ ಪುಷ್ಪಾ ಸಿನಿಮಾದಲ್ಲಿ ಸ್ಮಗ್ಲಿಂಗ್ ಮಾಡುವ ದೃಶ್ಯಗಳು ಹೆಚ್ಚಾಗಿರುತ್ತವೆ. ಈ ಸಿನಿಮಾವನ್ನು ಪ್ರೇರಣೆಯಾಗಿ ತೆಗೆದುಕೊಂಡು ಸ್ಮಗ್ಲಿಂಗ್ ಮಾಡಿದ ಹಲವರನ್ನು ಈ ಹಿಂದೆ ಆಂಧ್ರಪ್ರದೇಶದಲ್ಲಿ ಬಂದಿಸಲಾಗಿತ್ತು. ಹಾಗಯೇ ಇತ್ತೀಚೆಗೆ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿಲಾಗಿದೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಕೂಡ ವೈರಲ್ ಆಗಿವೆ. ಬೊಲೆರೊ ಕಾರು ಭಾರತೀಯ ಆಟೋಮೊಬೈಲ್ ಉದ್ಯಮದ ದೈತ್ಯ ಕಂಪನಿಯಿಂದ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಈ ಬೊಲೆರೊ ಕಾರಿನ ಮೇಲ್ಛಾವಣಿಯಡಿ 800 ಮದ್ಯದ ಬಾಟಲಿಗಳನ್ನು ಸಾಗಿಸುತ್ತಿದ್ದ ಕಳ್ಳ ಸಾಗಾಣಿಕೆದಾರರು ಸಿಕ್ಕಿಬಿದ್ದಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ಜನ ಎಷ್ಟು ಸೃಜನಶೀಲರಾಗಿರುತ್ತಾರೆ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ.
Advertisement

ಹೊಸ ಮಾರುತಿ ಡಿಜೈರ್ ಕಾರಿಗೆ ಭಾರೀ ಬೇಡಿಕೆ

ಜನಪ್ರಿಯ ಮತ್ತು ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ತನ್ನ ಹೊಸ ನಾಲ್ಕನೇ ತಲೆಮಾರಿನ ಡಿಜೈರ್ (4th Generation Dzire) ಸೆಡಾನ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.6.79 ಲಕ್ಷವಾಗಿದೆ. ಈ ಹೊಸ ಡಿಜೈರ್ ಕಾರಿಗಾಗಿ ಈಗಾಗಲೇ ಬುಕ್ಕಿಂಗ್ ಪ್ರಾರಂಭವಾಗಿದೆ. ಈ ಡಿಜೈರ್ ಕಾರಿಗೆ ಡಿಜೈರ್ ಓಪನ್ ಬುಕ್ಕಿಂಗ್ ಅನ್ನು ಪಡೆದುಕೊಂಡಿದೆ. ಕಳೆದ ತಿಂಗಳು ಮಾತ್ರ ಮಾರುತಿ ಡಿಜೈರ್ ಕಾರಿನ 10,709 ಯುನಿಟ್‌ಗಳು ಮಾರಾಟವಾಗಿವೆ.

ಮಾರಾಟಕ್ಕೆ ಲಭ್ಯವಿರುವ ಕಡಿಮೆ ಬೆಲೆಯ ಟಾಪ್ 6 ಬೆಸ್ಟ್ ಮೈಲೇಜ್ ಕಾರುಗಳು

ಕಾರುಗಳ ಮೈಲೇಜ್ ಬಗ್ಗೆ ಮಾತನಾಡಿದ್ರೆ ಮೊದಲು ಮಾರುತಿ ಸುಜುಕಿ ಕಾರುಗಳೆ ನೆನಪಾಗುತ್ತವೆ. ಕಂಪನಿಯ ಹೆಚ್ಚಿನ ಕಾರುಗಳು 24 ಕಿ.ಮೀ.ಗಿಂತ ಹೆಚ್ಚು ಮೈಲೇಜ್ ನೀಡುತ್ತವೆ. ಹೆಚ್ಚಿನ ಮಾರುತಿ ಕಾರುಗಳು ಈಗ ಆಟೋ ಐಡಿಲ್ ಸ್ಟಾರ್ಟ್-ಸ್ಟಾಪ್ ಅನ್ನು ಹೊಂದಿರುವ ಕಾರಣ ಇದು ಹೆಚ್ಚಿನ ಮೈಲೇಜ್ ಪಡೆಯಲು ಸಹಕರಿಸುತ್ತದೆ. ಈ ಲೇಖನದಲ್ಲಿ ಮಾರುತಿ ಸುಜುಕಿ ನೀಡುವ ಸ್ಟ್ರಾಂಗ್-ಹೈಬ್ರಿಡ್ ಎಸ್‌ಯುವಿ ಸೇರಿದಂತೆ ಒಂದಷ್ಟು ಬೆಸ್ಟ್ ಮೈಲೇಜ್ ಹ್ಯಾಚ್‌ಬ್ಯಾಕ್‌ಗಳ ಬಗ್ಗೆ ತಿಳಿಸಿದ್ದೇವೆ. ಯಾವ ಮಾರುತಿ ಕಾರು ಹೆಚ್ಚು ಮೈಲೇಜ್ ನೀಡುತ್ತದೆ ಎಂದು ತಿಳಿದುಕೊಳ್ಳಲು ಬಯಸಿದರೆ, ವಿವರವಾದ ಪಟ್ಟಿ ಇಲ್ಲಿದೆ.

Renault Kwid: ಸಣ್ಣ ಕುಟುಂಬಕ್ಕೆ ಬೆಸ್ಟ್ ಕಾರು: 22 ಕಿ.ಮೀ ಮೈಲೇಜ್

ಭಾರತದಲ್ಲಿ ಸಣ್ಣ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆ ಮಧ್ಯಮ ವರ್ಗದ ಜನರ ಕಾರು ಖರೀದಿ ಕನಸನ್ನು ಈಡೇರಿಸುತ್ತಿದೆ. ಟಾಟಾ ಟಿಯಾಗೋ, ಎಸ್-ಪ್ರೆಸ್ಸೊ, ಮಾರುತಿ ಸುಜುಕಿ ಆಲ್ಟೊ ಕೆ10, ಸದ್ಯ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಬೆಸ್ಟ್ ಕಾರುಗಳಾಗಿದ್ದು, ಉತ್ತಮ ಮಾರಾಟ ಕಾಣುತ್ತಿವೆ. ಇದರ ಜೊತೆಗೆ ಮತ್ತೊಂದು ಪುಟ್ಟ ಫ್ಯಾಮಿಲಿ ಕಾರಿದ್ದು, ಉತ್ತಮ ವಿನ್ಯಾಸದ ಜೊತೆಗೆ ಬೆಸ್ಟ್ ಮೈಲೇಜ್ ಕಾರೆಂದು ಜನಪ್ರಿಯತೆ ಪಡೆದಿದೆ. ಅದೇ 'ರೆನಾಲ್ಟ್ ಕ್ವಿಡ್' ಈ ಮೈಕ್ರೋ ಎಸ್‌ಯುವಿ ಕಾರಿನ ಬೆಲೆ, ವೈಶಿಷ್ಟ್ಯಗಳು, ಮತ್ತು ಎಂಜಿನ್ ವಿವರಗಳನ್ನು ನೋಡೋಣ.

ಬೆಸ್ಟ್ ಡೀಸೆಲ್ ಕಾರು ಹುಡುಕುತ್ತಿದ್ದೀರಾ? ಈ ಹೊಸ ಟಾಟಾ ಕಾರಿದೆ ನೋಡಿ

ಟಾಟಾ ಆಲ್ಟ್ರೋಜ್ (Tata Altroz) ಪ್ರಸ್ತುತ ಭಾರತದಲ್ಲಿ ಬೆಸ್ಟ್ ಡೀಸೆಲ್ ಕಾರುಗಳಲ್ಲಿ ಒಂದಾಗಿದ್ದು, ಟಾಟಾ ಆಲ್ಟ್ರೋಜ್ ಡೀಸೆಲ್ 1.5 ಲೀಟರ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಡೀಸೆಲ್ ವೇರಿಯೆಂಟ್ ಬೆಲೆ ರೂ. 8.70 ಲಕ್ಷದಿಂದ ಪ್ರಾರಂಭವಾಗುತ್ತದೆ. ಹೆಚ್ಚು ಪರ್ಫಾಮೆನ್ಸ್ ಬಯಸುವವರಿಗೆ ಟಾಟಾ ಆಲ್ಟ್ರೋಜ್ ರೇಸರ್ ಆವೃತ್ತಿ ಕೂಡ ಲಭ್ಯವಿದ್ದು, ಇದು ಹೆಚ್ಚು ಶಕ್ತಿಯುತ ಟರ್ಬೋ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಚುವರಿ ಫೀಚರ್‌ಗಳೊಂದಿಗೆ ಬರುತ್ತದೆ. ಸದ್ಯ ಈ ಲೇಖನದಲ್ಲಿ ಕೇವಲ ಆಲ್ಟ್ರೋಜ್ ಡೀಸೆಲ್ ವೇರಿಯೆಂಟ್ ಬಗ್ಗೆ ತಿಳಿಯೋಣ.

ದುಬಾರಿ ಕಾರಿನ ಮಾಲೀಕ ಬಕೆಟ್ ನೀರಿನಿಂದ ಫೇಮಸ್!

ಜನರು ತಮ್ಮ ವಾಹನಗಳನ್ನು ಸದಾ ಹೊಸದಾಗಿ ಕಾಣಲು ಬಯಸುತ್ತಾರೆ. ಇದಕ್ಕಾಗಿ ನಿತ್ಯ ತಮ್ಮ ಕಾರು, ಬೈಕ್‌ಗಳನ್ನು ತೊಳಿಯಲು ಶಾಂಪೂನಂತಹ ವಿವಿಧ ಉತ್ಪನ್ನಗಳನ್ನು ಬಳಸುವುದು ಸಹಜ. ದುಬಾರಿ ಕಾರುಗಳ ಮಾಲೀಕರಾದರೆ ತಮ್ಮ ವಾಹನಗಳನ್ನು ಪ್ರೀಮಿಯಂ ಕಾರ್ ವಾಷ್ ಸೆಂಟರ್‌ಗಳಿಗೆ ಕಳುಹಿಸಿತ್ತಾರೆ. ಇನ್ನೂ ಕೆಲ ದುಬಾರಿ ಕಾರು ಮಾಲೀಕರು ತಮ್ಮ ವಾಹನಗಳನ್ನು ತಾವೇ ಸ್ವಚ್ಚಗೊಳಿಸುತ್ತಾರೆ. ಮೃದುವಾದ ಮೈಕ್ರೋಫೈಬರ್ ಬಟ್ಟೆ ಬಳಸಿ ಮಾತ್ರ ತೊಳಿಯುತ್ತಾರೆ. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ದುಬಾರಿ ಲ್ಯಾಂಬೊರ್ಗಿನಿ ಕಾರನ್ನು ಹಾಳಾದ ಬಟ್ಟೆ ಮತ್ತು ಬಕೆಟ್ ನೀರಿನಿಂದ ಸ್ವಚ್ಛಗೊಳಿಸಲಾಗುತ್ತಿರುವ ವೀಡಿಯೊ ವೈರಲ್ ಆಗಿದೆ.

ಅಗ್ಗದ ಬೆಲೆಯ ಈ ಮಾರುತಿ ಕಾರಿಗೆ ಫುಲ್‌ ಡಿಮ್ಯಾಂಡ್!

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಈ ಮಾರುತಿ ಸುಜುಕಿ ವ್ಯಾಗನ್‍ಆರ್ ಬರೊಬ್ಬರಿ ಎರಡು ದಶಕಗಳಿಂದ ಮಾರಾಟದಲ್ಲಿದೆ. ಮಾರುತಿ ವ್ಯಾಗನ್‍ಆರ್ ಭಾರತದಲ್ಲಿ 25ನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಆಚರಿಸಿತು. ಈ ಜನಪ್ರಿಯ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ ಡಿಸೆಂಬರ್ 1999 ರಲ್ಲಿ ದೇಶದಲ್ಲಿ ಪರಿಚಯಿಸಲಾಯಿತು. ಅಂದಿನಿಂದ, ಇಂದಿನವರೆಗೂ ಹಲವಾರು ನವೀಕರಣಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತ ಮಾರುತಿ ಸುಜುಕಿ ವ್ಯಾಗನ್ಆರ್ ಭಾರತದಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ.

Toyota: 2 ಕುಟುಂಬ ಹೋಗಬಹುದು.. ಬೈಕ್‌ನಂತೆ ಮೈಲೇಜ್‌, ಶೀಘ್ರ..

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor), ನಂಬಿಕೆಗೆ ಹೆಸರುವಾಸಿಯಾಗಿರುವ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಅರ್ಬನ್ ಕ್ರೂಸರ್ ಹೈರೈಡರ್ (Urban Cruiser Hyryder) ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ಟೊಯೊಟಾ ಇದೇ ಕಾರನ್ನು ಹೊಸ ರೂಪದಲ್ಲಿ ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Suzuki: ಹೊಸ ಸುಜುಕಿ ಆಕ್ಸೆಸ್ 125 ಸ್ಕೂಟರ್ ಖರೀದಿಸಬೇಕೇ..

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India), ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ 'ಆಕ್ಸೆಸ್ 125' ಜನಪ್ರಿಯ ಸ್ಕೂಟರ್ ಆಗಿ ಹೊರಹೊಮ್ಮಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ನೀವು ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಖರೀದಿಸಲು ಯೋಚಿಸಿದ್ದೀರಾ.. ಹಾಗಾದರೆ, 'ಸುಜುಕಿ ಆಕ್ಸೆಸ್ 125' ಅತ್ಯುತ್ತಮ ಆಯ್ಕೆಯಾಗಲಿದೆ. ನಾವಿಲ್ಲಿ ಈ ನೂತನ ಸ್ಕೂಟರ್‌ನ ಆನ್ ರೋಡ್ ಬೆಲೆ (On Road Price), ಮೈಲೇಜ್ (Mileage) ಹಾಗೂ ಇಎಂಐ (EMI) ಆಯ್ಕೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.
Advertisement

5-ಸ್ಟಾರ್ ಸೇಫ್ಟಿ ಮಾರುತಿ ಡಿಜೈರ್ ಕಾರಿಗಾಗಿ ಸಾಲುಗಟ್ಟಿದ ಗ್ರಾಹಕರು..

ಮಾರುತಿ ಸುಜುಕಿ ಇಂಡಿಯಾ (Maruti Suzuki India), ನಂಬರ್ 1 ಕಾರು ತಯಾರಕ ಕಂಪನಿಯಾಗಿ ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಎಸ್‌ಯುವಿಗಳು ಭಾರೀ ಜನಪ್ರಿಯತೆ ಹೊಂದಿವೆ. ಅದರ ಹೊರತಾಗಿಯೂ ಕಂಪನಿಯು 2024ರ ನವೆಂಬರ್‌ನಲ್ಲಿ ಹೊಚ್ಚ ಹೊಸ ನಾಲ್ಕನೇ ತಲೆಮಾರಿನ ಡಿಜೈರ್ ಸೆಡಾನ್‌ನ್ನು ಅದ್ದೂರಿಯಾಗಿ ಮಾರಾಟಕ್ಕೆ ತಂದಿತ್ತು. ಇದು ಬಿಡುಗಡೆಗೂ ಮುನ್ನವೇ ಸುರಕ್ಷತೆಗಾಗಿ ಗ್ಲೋಬಲ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿತ್ತು. ಇತ್ತೀಚೆಗೆ ಪ್ರಕಟಗೊಂಡ ಡಿಸೆಂಬರ್ ತಿಂಗಳ ಕಾರು ಮಾರಾಟ ವರದಿಯಲ್ಲಿ ನೂತನ 'ಡಿಜೈರ್' ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ವಿದೇಶಿ ರೈಲುಗಳಿಗೆ ವಂದೇ ಭಾರತ್ ಸೆಡ್ಡು!

ಭಾರತೀಯ ರೈಲ್ವೆಗೆ ಹೊಸ ಅಂದವನ್ನು ತಂದುಕೊಟ್ಟಿರುವ ವಂದೇ ಭಾರತ್ ರೈಲುಗಳು ಜನರ ದೂರದ ಪ್ರಯಾಣವನ್ನು ನೋಡುವ ವಿಧಾನವನ್ನೇ ಬದಲಾಯಿಸಿವೆ. ಇಲ್ಲಿಯವರೆಗೆ ರೈಲ್ವೆ ಇಲಾಖೆ ವಂದೇ ಭಾರತ್ ರೈಲುಗಳಲ್ಲಿ ಚೇರ್ ಕಾರುಗಳನ್ನು ಮಾತ್ರ ಪರಿಚಯಿಸಿದ್ದು, ಹಂತ ಹಂತವಾಗಿ ಹೊಸ ಬದಲಾವಣೆಗಳನ್ನು ತರುತ್ತಿದೆ. ಈ ಬದಲಾವಣೆಯ ಭಾಗವಾಗಿ ಸದ್ಯ ವಂದೇ ಭಾರತ್ ಸ್ಲೀಪರ್ ಕೋಚ್‌ಗಳ ಪರೀಕ್ಷೆಗಳು ವೇಗವನ್ನು ಪಡೆಯುತ್ತಿವೆ. ಇತ್ತೀಚೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

Ather: ಬೆಂಗಳೂರಿನ ಎಥರ್‌ನಿಂದ '450' ಸೀರೀಸ್ ಎಲೆಕ್ಟ್ರಿಕ್..

ಬೆಂಗಳೂರಿನ ಎಥರ್ ಎನರ್ಜಿ (Ather Energy), ವಿಶ್ವಾಸಾರ್ಹ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕವಾಗಿರುವ ವಿವಿಧ ಇ-ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಶನಿವಾರ 2025ರ ಹೊಚ್ಚ ಹೊಸ '450' ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದೆ. ನೂತನ ಮಾಡೆಲ್‌ಗಳು ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಪಡೆದುಕೊಂಡಿಲ್ಲ. ಆದರೂ ಕಾರ್ಯಕ್ಷಮತೆಯಲ್ಲಿ ಸಾಕಷ್ಟು ಸುಧಾರಣೆಯನ್ನು ಕಂಡಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Royal Enfield: ರಾಯಲ್ ಎನ್‌ಫೀಲ್ಡ್ ಅಭಿಮಾನಿಗಳಿಗೆ ಕಹಿಸುದ್ದಿ

ರಾಯಲ್ ಎನ್‌ಫೀಲ್ಡ್ (Royal Enfield) ಕಂಪನಿಯು ಭಾರತದಲ್ಲಿ ಬುಲೆಟ್ 350 ಬೈಕಿನ ಮಿಲಿಟರಿ ಸಿಲ್ವರ್ ವೇರಿಯೆಂಟ್ ಅನ್ನು ಸ್ಥಗಿತಗೊಳಿಸಿದೆ. ಕಳೆದ ವರ್ಷದ (2024) ಆರಂಭದಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ನ ಮಿಲಿಟರಿ ಸಿಲ್ವರ್ ರೂಪಾಂತರವನ್ನು 1.79 ಲಕ್ಷ ರೂ.ಗೆ ಬಿಡುಗಡೆ ಮಾಡಿತ್ತು. ಆಗ ಮಿಲಿಟರಿ ಸಿಲ್ವರ್ ಬ್ಲ್ಯಾಕ್ ಮತ್ತು ಮಿಲಿಟರಿ ಸಿಲ್ವರ್ ರೆಡ್ ಬಣ್ಣಗಳನ್ನು ಪರಿಚಯಿಸಿತ್ತು. ಇದು ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕಿಗಿಂತ 6,000 ರೂ.ಗಳಷ್ಟು ದುಬಾರಿಯಾಗಿತ್ತು. ಆದರೆ ಈಗ ಅದೇ ಮಿಲಿಟರಿ ಸಿಲ್ವರ್ ವೇರಿಯೆಂಟ್ ಅನ್ನು ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ.

ಯುವಕರ ಹೃದಯ ಕದಿಯಲು ಸಜ್ಜಾದ ಹೊಸ ಎಥರ್ 450X ಎಲೆಕ್ಟ್ರಿಕ್..

ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕೇಳಿದಾಗ ಜನರ ಮನಸ್ಸಿಗೆ ಮೊದಲು ಬರುವ ಮೊದಲ ಹೆಸರುಗಳಲ್ಲಿ ಎಥರ್ ಎನರ್ಜಿ ಕೂಡ ಒಂದಾಗಿದೆ. ಬ್ರ್ಯಾಂಡ್‌ನ ಬತ್ತಳಿಕೆಯು ದೈನಂದಿನ ಪ್ರಯಾಣಕ್ಕಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಒಳಗೊಂಡಿದೆ. ಬೆಂಗಳೂರು ಮೂಲದ ಬ್ರ್ಯಾಂಡ್ ಯುವಕರಲ್ಲಿ ಜನಪ್ರಿಯವಾಗಿದ್ದರೂ, ರಿಸ್ಟಾ ಎಂಬ ಹೊಸ ಇವಿಯನ್ನು ಬಿಡುಗಡೆ ಮಾಡುವ ಮೂಲಕ ಕುಟುಂಬಗಳನ್ನು ತಲುಪಲು ಓಲಾಗೆ ಇತ್ತೀಚೆಗೆ ಸವಾಲು ಹಾಕಿದೆ. ಆದರೆ 450 ಸೀರಿಸ್‌ಗಾಗಿ ಹೆಚ್ಚಿನ ಜನರು ಬಯಸುತ್ತಾರೆ ಎಂಬುದು ಸತ್ಯ. ಇದನ್ನು ತಿಳಿದ ಕಂಪನಿಯು ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ 450 ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿತು.

ಹೊಸ ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ಜನರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕೇಳಿದಾಗ ಮನಸ್ಸಿಗೆ ಬರುವ ಮೊದಲ ಹೆಸರುಗಳಲ್ಲಿ ಎಥರ್ ಎನರ್ಜಿ ಕೂಡ ಒಂದಾಗಿದೆ. ಬ್ರ್ಯಾಂಡ್‌ನ ಬತ್ತಳಿಕೆಯು ದೈನಂದಿನ ಪ್ರಯಾಣಕ್ಕಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಒಳಗೊಂಡಿದೆ. ಬೆಂಗಳೂರು ಮೂಲದ ಬ್ರ್ಯಾಂಡ್ ಯುವಕರಲ್ಲಿ ಜನಪ್ರಿಯವಾಗಿದ್ದರೂ, ರಿಸ್ಟಾ ಎಂಬ ಹೊಸ ಇವಿಯನ್ನು ಬಿಡುಗಡೆ ಮಾಡುವ ಮೂಲಕ ಕುಟುಂಬಗಳನ್ನು ತಲುಪಲು ಓಲಾಗೆ ಇತ್ತೀಚೆಗೆ ಸವಾಲು ಹಾಕಿದೆ. ಆದರೆ 450 ಸೀರಿಸ್‌ಗಾಗಿ ಹೆಚ್ಚಿನ ಜನರು ಬಯಸುತ್ತಾರೆ ಎಂಬುದು ಸತ್ಯ. ಇದನ್ನು ತಿಳಿದ ಕಂಪನಿಯು ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ 450 ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿತು.

TATA: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಟಾಟಾದಿಂದ ಬರಲಿವೆ 3..

ಟಾಟಾ ಮೋಟಾರ್ಸ್ (Tata Motors), ಸುರಕ್ಷಿತ ಕಾರು ತಯಾರಿಕೆಯಿಂದಲೇ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಕಾರುಗಳನ್ನು ಮಾರಾಟಗೊಳಿಸುತ್ತಿದೆ. 2025 ಟಾಟಾಗೆ ಮಹತ್ವದ ವರ್ಷವಾಗಿದ್ದು, ವಿವಿಧ ಹೊಚ್ಚ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಿದ್ಧತೆಯನ್ನು ನಡೆಸುತ್ತಿದೆ. ಮುಂಬರುವ ನೂತನ ಕಾರುಗಳು ರೂ.5 ಲಕ್ಷದಿಂದ ರೂ.10 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿರಲಿದ್ದು, ಒಮ್ಮೆ ಮಾರಾಟಕ್ಕೆ ಬಂದ ಮೇಲೆ ಮಧ್ಯಮ ವರ್ಗದ ಜನರ ಆಯ್ಕೆಯ ವಾಹನವಾಗಲಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ದುಬಾರಿ ಕಾರು ಖರೀದಿಸಿದ ಜನಪ್ರಿಯ ನಟ

ತುಂಬಾ ಚಿಕ್ಕ ಬಂಡವಾಳದ ಮಲಯಾಳಂ ಸಿನಿಮಾಗಳು ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ದಾಖಲೆ ಬರೆಯುತ್ತಿದೆ. ಇತ್ತೀಚಿನ ಕೆಲವು ಮಲಯಾಳಂ ಸಿನಿಮಾಗಳು ನಿರೀಕ್ಷೆಯನ್ನೂ ಮೀರಿ ಲಾಭ ಮಾಡಿವೆ. ಕರ್ನಾಟಕದಲ್ಲೂ ಮಲಯಾಳಂ ಸಿನಿಮಾಗಳು ದೊಡ್ಡ ಕಲೆಕ್ಷನ್ ಮಾಡುತ್ತಿದೆ. ಈ ನಡುವೆ ಮಳೆಯಾಳಂ ಜನಪ್ರಿಯ ನಟ ಹೊಸ ದುಬಾರಿ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ. ಮಾಲಿವುಡ್‌ನಲ್ಲಿ ಚಾಕೊಲೇಟ್ ಹೀರೋ ಎಂಬ ಖ್ಯಾತಿ ಗಳಿಸಿದ ನಟ ಕುಂಚಾಕೊ ಬೋಬನ್ (Kunchacko Boban) ಅವರು ದುಬಾರಿ ಪೋರ್ಷೆ ಕಾರನ್ನು ಖರೀದಿಸಿದ್ದಾರೆ.
Advertisement

Kia: ಭಾರತ ಮಾತ್ರವಲ್ಲ ಅಂತರಾಷ್ಟ್ರೀಯ ಮಾರಾಟದಲ್ಲಿ ಧೂಳೆಬ್ಬಿಸಿದ ಕಿಯಾ

ಕಿಯಾ (Kia) ಕಂಪನಿಯು ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆ ಪಡೆಯುತ್ತಿದೆಯಾದರೂ, ವಿಶ್ವದ ಇತರ ದೇಶಗಳಲ್ಲಿ ಈ ಕೊರಿಯಾ ಬ್ರಾಂಡ್ ಈಗಾಗಲೇ ಚಿರಪರಿಚಿತವಾಗಿದೆ. ಕಿಯಾ 2024 ರಲ್ಲಿ 3,089,457 ವಾಹನಗಳನ್ನು ಜಾಗತಿಕವಾಗಿ ಮಾರಾಟ ಮಾಡಲಾಗಿದೆ ಎಂದು ಹೊಸ ವಾರ್ಷಿಕ ಜಾಗತಿಕ ಮಾರಾಟ ದಾಖಲೆಯನ್ನು ಘೋಷಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 0.1 ರಷ್ಟು ಹೆಚ್ಚಳವನ್ನು ಸಾಧಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಿಯಾ ಮತ್ತೊಮ್ಮೆ ಜಾಗತಿಕ ಬ್ರಾಂಡ್‌ ಆಗಿ ಎಂದು ಗುರ್ತಿಸಿಕೊಂಡಿದೆ.

ಯಮಹಾ ಆರ್‌ಎಕ್ಸ್ 100 ಬೈಕ್‌ನ್ನು ನೆನಪಿಸುತ್ತದೆ ಈ ಮೋಟಾರ್‌ಸೈಕಲ್..

ಭಾರತದ ಯುವಕರಿಗೆ ದಶಕಗಳ ಹಿಂದೆ, ನಿಮ್ಮ ನೆಚ್ಚಿನ ಬೈಕ್ ಯಾವುದೆಂದು ಕೇಳಿದರೆ ತಕ್ಷಣ ಬರುತ್ತಿದ್ದ ಒಂದೇ ಒಂದು ಉತ್ತರ ಯಮಹಾ ಆರ್‌ಎಕ್ಸ್ 100 (Yamaha RX 100) ಎಂದು. ಅಷ್ಟರಮಟ್ಟಿಗೆ ಇದು ಅನೇಕ ಯುವ ಮೋಟಾರ್‌ಸೈಕಲ್ ಪ್ರೇಮಿಗಳ ಹಾಟ್ ಫೆವರೇಟ್ ಆಗಿತ್ತು. 2000ಕ್ಕೂ ಮೊದಲು ದೇಶೀಯ ರಸ್ತೆಯಲ್ಲಿ ಅಬ್ಬರಿಸುತ್ತಿದ್ದ ಈ ಬೈಕ್, ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿತ್ತು. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಯಮಹಾ ಆರ್‌ಎಕ್ಸ್ 100 ಮೋಟಾರ್‌ಸೈಕಲ್ ಮಾರಾಟ ಸ್ಥಗಿತಗೊಳಿಸಿ ವರ್ಷಗಳಾಗಿವೆ. ಆದರೂ ಅಪರೂಪಕ್ಕೆ ಎಂಬಂತೆ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. ನೀವು ಈ ಬೈಕ್‌ನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ.. ಅದೇ ರೀತಿಯ ರೆಟ್ರೋ ಲುಕ್ ಹೊಂದುರುವ ಹಂಗೇರಿ ಮೂಲದ 'ಕೀವೇ ಎಸ್ಆರ್125' ಮೋಟಾರ್‌ಸೈಕಲ್ ಉತ್ತಮ ಆಯ್ಕೆಯಾಗಲಿದೆ. ಬನ್ನಿ.. ಇದರ ವಿಶೇಷತೆಗಳು ಏನೆಂಬುದನ್ನು ತಿಳಿಯೋಣ.

ಹೊಸ ಲೋಗೊದೊಂದಿಗೆ ಎಂಟ್ರಿಕೊಡಲು ಸಜ್ಜಾದ ಒಕಾಯ ಇವಿ: ವಿಶೇಷತೆಗಳೇನು?

ಭಾರತದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಒಕಾಯ ಇವಿ (Okaya EV), ಹೊಸ ವರ್ಷದ ಆರಂಭಕ್ಕೆ ಹೊಸ ಆಲೋಚನೆಯೊಂದಿಗೆ ಮುಮದೆ ಬಂದಿದೆ. ತನ್ನ ದ್ವಿ-ಚಕ್ರ ಮತ್ತು ತ್ರಿ-ಚಕ್ರ ವಾಹನಗಳಿಗೆ ಪ್ರತ್ಯೇಕವಾಗಿ ರಚಿಸಲಾದ ಹೆಸರು ಮತ್ತು ಲೋಗೊವನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಗ್ರಾಹಕರ ವಿಕಾಸದ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಉನ್ನತ ಮಟ್ಟದ ಹೊಸ ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳೊಂದಿಗೆ ಒಕಾಯಾ ಕಂಪನಿಯು ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ಹೊಸ ಅಲ್ಲೆ ಎಬ್ಬಿಸಲು ಸಜ್ಜಾಗಿರುವುದಾಗಿ ತಿಳಿಸಿದೆ.

ರಸ್ತೆಗಳ ರಾಜ ರಾಯಲ್ ಎನ್‌ಫೀಲ್ಡ್ ಪ್ರಾಬಲ್ಯ

ರಾಯಲ್ ಎನ್‌ಫೀಲ್ಡ್ (Royal Enfield) ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದ್ದು, ಇದರ ಬೈಕ್ ಗಳು ದಾಖಲೆಯ ಮಾರಾಟವಾಗುತ್ತಿದೆ. ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್‌ನ ಭರ್ಜರಿ ಮಾರಾಟವನ್ನು ವರದಿ ಮಾಡಿದೆ. 2024ರ ಡಿಸೆಂಬರ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಒಟ್ಟು 79,466 ಬೈಕುಗಳನ್ನು ಮಾರಾಟ ಮಾಡಿವೆ. ಇನ್ನು ಕಳೆದ ವರ್ಷದ ಡಿಸೆಂಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.25 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ 11,575 ಬೈಕುಗಳನ್ನು ರಫ್ತು ಮಾಡಿದೆ.

ಕಾರಿನಲ್ಲಿ ಕವರ್ ಹಾಗೇ ಇದೆಯೇ? ಕಂಪನಿ ಕೂಡ ಹೇಳುವುದಿಲ್ಲ

ಜೀವನದಲ್ಲಿ ಒಮ್ಮೆಯಾದರು ಹೊಸ ಕಾರು ಖರೀದಿಸುವ ಕನಸು ಹಲವರಿಗಿರುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖರೀದಿಸುವ ಕಾರನ್ನು ಜವಾಬ್ದಾರಿಯುತವಾಗಿ ಕಾಪಾಡಿಕೊಳ್ಳುತ್ತೇವೆ. ಇದಕ್ಕಾಗಿ ಕಾರ್ ವಾಷ್ ಮಾಡುವುದು, ಇಂಟೀರಿಯರ್ ಸ್ವಚ್ಚವಾಗಿಡುವಂತಹ ಕೆಲಸಗಳು ಸರ್ವೇ ಸಾಮಾನ್ಯ. ಇದರ ಜೊತೆಗೆ ಹಲವರು ಹೊಸ ಕಾರು ಖರೀದಿಸಿದ ಬಳಿಕ ಶೋರೂಂನಿಂದ ಹೊರಬಂದಾಗ ಸೀಟ್‌ಗಳ ಮೇಲಿನ ಪ್ಲಾಸ್ಟಿಕ್ ಕವರ್‌ಗಳನ್ನು ತೆಗೆಯುವುದಿಲ್ಲ. ಅವುಗಳನ್ನು ತೆಗೆದರೆ ಕೊಳಕಾಗುತ್ತದೆ ಎಂಬ ಭಯದಿಂದ ಅನೇಕರು ಹಾಗೇ ಬಿಟ್ಟಿರುತ್ತಾರೆ. ಆದ್ರೆ ಇವು ನಿಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕರ ಎಂಬುದನ್ನು ಇಲ್ಲಿ ತಿಳಿಸಿದ್ದೇವೆ.