ಮುಂಬೈನಲ್ಲಿ ಕಾಣಿಸಿಕೊಂಡ ರಸ್ತೆ ಮೇಲಿನ ಅರಮನೆಯಂತಿರುವ ಹ್ಯುಂಡೈ..

ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ (Hyundai) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ವಿವಿಧ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಇತ್ತೀಚೆಗೆ ಮುಂಬೈನ ರಸ್ತೆಯೊಂದರಲ್ಲಿ ವಿದೇಶಗಳಲ್ಲಿ ಕಂಪನಿಯು ಯಶಸ್ವಿಯಾಗಿ ಮಾರುವ ಸ್ಟಾರಿಯಾ (Staria) ಎಂಪಿವಿ ಕಾಣಿಸಿಕೊಂಡಿದೆ. ಇದು ನೋಡುಗರನ್ನು ಸೆಳೆಯುವಂತಿದೆ. ಬನ್ನಿ.. ಈ ಕಾರು ದೇಶೀಯ ಮಾರಾಟವಾಗುತ್ತದೆಯೇ ಎಂಬಿತ್ಯಾದಿ ವಿವರಗಳನ್ನು ತಿಳಿಯೋಣ.

ಹೊಸ ಮಹಿಂದ್ರಾ ಎಲೆಕ್ಟ್ರಿಕ್ ಕಾರಿನ ಬೆಲೆ ಇಷ್ಟೇನಾ?

ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎರಡೂ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿ ಬಿರುಗಾಳಿಯನ್ನು ಎಬ್ಬಿಸಿದೆ. ಮಹೀಂದ್ರಾ (Mahindra) ಕಂಪನಿಯು XEV 9e ಮತ್ತು BE 6e ಎಂಬ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಮಹೀಂದ್ರಾ XEV 9e (Mahindra XEV 9e) ಎಲೆಕ್ಟ್ರಿಕ್ ಕಾರಿನ ಸಂಪೂರ್ಣ ಲೋಡ್ ಮಾಡಲಾದ ಟಾಪ್ ಎಂಡ್ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.30.50 ಲಕ್ಷವಾಗಿದೆ.

ಈ ಮಹೀಂದ್ರಾ ಕಾರು ತೆಗೆದುಕೊಂಡ ನಂತರ ಯಶ್‌ ಬಾಸ್‌ಗೆ ಅದೃಷ್ಟವೋ..

ರಾಕಿಂಗ್ ಸ್ಟಾರ್ ಯಶ್ (Yash) ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಅವರಿಗೆ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ. ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದ ಕೆಜಿಎಫ್ (KGF) ಸಿನಿಮಾ ಹಿಟ್ ಆದ ಬಳಿಕ, ಯಶ್ ಅವರ ಅದೃಷ್ಟವೇ ಬದಲಾಗಿ ಹೋಯಿತು. ಸದ್ಯ, 'ಟಾಕ್ಸಿಕ್' ಚಿತ್ರದ ಚಿತ್ರದ ಶೂಟಿಂಗ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇಂದು ಅವರು 39ನೇ ವಸಂತಕ್ಕೆ ಕಾಲಿಟ್ಟಿದ್ದು, ಸೋಷಿಯಲ್ ಮಿಡಿಯಾದದಲ್ಲಿ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಸೇಫ್ಟಿಯಲ್ಲಿ ಟಾಟಾಗಿಲ್ಲ ಸಾಟಿ: ಕರ್ವ್‌ಗೆ 5-ಸ್ಟಾರ್

ಭಾರತೀಯ ಕಾರು ಉದ್ಯಮದಲ್ಲಿ ಸುರಕ್ಷಿತ ಕಾರುಗಳಿಗೆ ಜನಪ್ರಿಯತೆ ಪಡೆದಿರುವ ಟಾಟಾ ಮೋಟಾರ್ಸ್, ಕಳೆದ ವರ್ಷ ಕರ್ವ್ ಎಂಬ ಎಸ್‌ಯುವಿ ಕೂಪೆಯನ್ನು ಪರಿಚಯಿಸಿತ್ತು. ಇದಕ್ಕೆ ಎದುರಾಳಿಯಾಗಿ ಸಿಟ್ರನ್ ಬಸಾಲ್ಟ್ ಎಂಟ್ರಿಕೊಟ್ಟು ಎಸ್‌ಯುವಿ ಕೂಪೆ ವಿಭಾಗದಲ್ಲಿ ಪೈಪೋಟಿ ಹೆಚ್ಚಿಸಿತ್ತು. ಎರಡೂ ಕಾರುಗಳು ಬೆಲೆಗೆ ತಕ್ಕಂತೆ ಉತ್ತಮ ಫೀಚರ್ಸ್ ಹಾಗೂ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿವೆ. ಆದ್ರೆ ಕಾರುಗಳ ಸುರಕ್ಷತೆ ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುವುದರಿಂದ, ಎರಡರಲ್ಲಿ ಯಾವ ಕಾರು ಸುರಕ್ಷಿತವಾಗಿದೆ ಎಂಬುದನ್ನು ಇಲ್ಲಿ ನೋಡೋಣ.
Advertisement

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯ ವಿಶೇಷತೆಗಳೇನು?

ಐಷಾರಾಮಿ ವಾಹನ ತಯಾರಕ ಕಂಪನಿಯಾದ ಜಾಗ್ವಾರ್ ಲ್ಯಾಂಡ್ ರೋವರ್ ತನ್ನ ಐಕಾನಿಕ್ ಡಿಫೆಂಡರ್ ಆಫ್-ರೋಡ್ ಎಸ್‍ಯುವಿಯನ್ನು ಹಲವಾರು ಪ್ರಮುಖ ನವೀಕರಣಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಈ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ (Land Rover Defender) ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.39 ಕೋಟಿಯಾಗಿದೆ. ಹಳೆಯ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು ಡೀಸೆಲ್ ಯುನಿಟ್ ಗಳ ಜೊತೆಗೆ ಹೊಸ V8 ಎಂಜಿನ್‌ ನೊಂದಿಗೆ 2025ರ ಡಿಫೆಂಡರ್ ಎಸ್‍ಯುವಿ ಬಂದಿದೆ. ಈ ಹೊಸ ಡಿಫೆಂಡರ್ ಎಸ್‍ಯುವಿಯು ಡಿಫೆಂಡರ್ 90, ಡಿಫೆಂಡರ್ 110 ಮತ್ತು ಡಿಫೆಂಡರ್ 130 ರೂಪದಲ್ಲಿ ಲಭ್ಯವಿದೆ.

Honda: ಹೊಸ ಹೋಂಡಾ ಆಕ್ಟಿವಾ ಇ & ಕ್ಯೂಸಿ1 ಇ-ಸ್ಕೂಟರ್‌ಗಳ ಬಿಡುಗಡೆ...

ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ನಂಬರ್ 1 ಸ್ಕೂಟರ್ ತಯಾರಕ ಕಂಪನಿಯಾಗಿದೆ. 2024ರ ನವೆಂಬರ್‌ನಲ್ಲಿ ಹೊಚ್ಚ ಹೊಸ ಆಕ್ಟಿವಾ ಇ (Activa e) ಮತ್ತು ಕ್ಯೂಸಿ1 (QC1) ಹೆಸರಿನ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿತ್ತು. ಜನವರಿ 1 ರಿಂದ ಬುಕ್ಕಿಂಗ್ ಕೂಡ ಶುರು ಮಾಡಿದ್ದು, ಆಸಕ್ತ ಗ್ರಾಹಕರು ರೂ.1,000 ಮುಂಗಡ ಮೊತ್ತವನ್ನು ಪಾವತಿಸುವ ಮೂಲಕ ಈ ಸ್ಕೂಟರ್‌ಗಳನ್ನು ಬುಕ್ಕಿಂಗ್ ಮಾಡಬಹುದು.

2025 ರಲ್ಲಿ ಬಿಡುಗಡೆಯಾಗಲಿರುವ ಸ್ಟ್ರಾಂಗ್ ಹೈಬ್ರಿಡ್ ಕಾರುಗಳು

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ಸ್ಟ್ರಾಂಗ್ ಹೈಬ್ರಿಡ್ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ. ಹೆಚ್ಚಿನ ಮೈಲೇಜ್ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ಬರುವ ಈ ಕಾರುಗಳು ಭಾರತದಲ್ಲಿ ಈಗ ಬಹಳ ಜನಪ್ರಿಯವಾಗುತ್ತಿವೆ. ಜನರು ಕೂಡ ಈಗ ಹೆಚ್ಚಿನ ಆಯ್ಕೆಗಳನ್ನು ಹುಡುಕುತ್ತಿರುವ ಕಾರಣ 2025 ರಲ್ಲಿ ಸಾಕಷ್ಟು ಸ್ಟ್ರಾಂಗ್ ಹೈಬ್ರಿಡ್ ಕಾರುಗಳು ಬಿಡುಗಡೆಯಾಗಲಿವೆ. ಈ ವರ್ಷ ಪಾದಾರ್ಪಣೆ ಮಾಡಲಿರುವ ಎಲ್ಲಾ ಸ್ಟ್ರಾಂಗ್ ಹೈಬ್ರಿಡ್ ಕಾರುಗಳ ಪಟ್ಟಿಯನ್ನು ಸಂಗ್ರಹಿಸಿದ್ದೇವೆ. ಹಾಗಾದ್ರೆ ಬನ್ನಿ ಯಾವೆಲ್ಲಾ ಬ್ರಾಂಡ್‌ಗಳು ಹೊಸ ಹೈಬ್ರಿಡ್‌ ಕಾರುಗಳನ್ನು ಬಿಡುಗಡೆ ಮಾಡಲಿದ್ದಾರೆ.

ಈ ಜನಪ್ರಿಯ ಟಾಟಾ ಎಸ್‍ಯುವಿ ಮಾರಾಟದಲ್ಲಿ ದಿಢೀರ್ ಕುಸಿತ: ಕಾರಣವೇನು?

ಭಾರತದಲ್ಲಿ ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಖ್ಯಾತಿಗಳಿಸಿದೆ. ಟಾಟಾ ಕಂಪನಿಯು ತನ್ನ ಹ್ಯಾರಿಯರ್ ಎಸ್‍ಯುವಿಯ ಹೊರಭಾಗ - ಒಳಭಾಗದಲ್ಲಿ ಸಾಕಷ್ಟು ನವೀನ ಬದಲಾವಣೆ ಹಾಗೂ ವೈಶಿಷ್ಟ್ಯಗಳನ್ನು ಪಡೆದಿರುವ ಫೇಸ್‌ಲಿಫ್ಟ್ ಹ್ಯಾರಿಯರ್ (Harrier facelift) ಎಸ್‌ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸಿತು. ಈ ಹ್ಯಾರಿಯರ್ ಎಸ್‍ಯುವಿ ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸುರಕ್ಷತೆ ಮತ್ತು ಅತ್ಯಾಧುನಿಕ ಫಿಚರ್ಸ್ ಗಳನ್ನು ಹೊಂದಿರುವ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಎಸ್‍ಯುವಿಯ ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಯಲ್ಲಿ ಸಂಚಲನವನ್ನು ಸೃಷ್ಟಿಸಿತು.

Actor Ajith: ವಿಡಿಯೋ ನೋಡಿ.. ಖ್ಯಾತ ನಟ ಅಜಿತ್ ಕಾರು ಭೀಕರ ಅಪಘಾತ..

ತಮಿಳಿನ ಖ್ಯಾತ ನಟ ಅಜಿತ್ ಕುಮಾರ್ (Ajith Kumar) ಅವರಿಗೆ ವಾಹನಗಳ ಬಗ್ಗೆ ವಿಶೇಷ ಪ್ರೀತಿಯಿದೆ. ಅವರ ಮನೆಯಲ್ಲಿ ಹಲವು ದುಬಾರಿ ಬೆಲೆಯ ಐಷಾರಾಮಿ ಕಾರು ಹಾಗೂ ಬೈಕ್‌ಗಳ ದೊಡ್ಡ ಸಂಗ್ರಹವೇ ಇದೆ. ಅವರ ವಯಸ್ಸು 53 ಆದರೂ ಯುವಕರನ್ನು ನಾಚಿಸುವನಂತೆ ದೇಶ - ವಿದೇಶಗಳಲ್ಲಿ ನಡೆಯುವ ರೇಸಿಂಗ್ ಪಂದ್ಯಾವಳಿಗಳಲ್ಲಿಯೂ ಭಾಗವಹಿಸುತ್ತಾರೆ. ದುಬೈಯ ಗ್ಯಾಂಡ್ ಪ್ರಿಕ್ಸ್‌ನಲ್ಲಿ ಮಂಗಳವಾರ ರೇಸಿಂಗ್ ಪಂದ್ಯವೊಂದರ ಅಭ್ಯಾಸ ಸಂದರ್ಭದಲ್ಲಿ ಅವರಿದ್ದ ಕಾರು ಅಪಘಾತಕ್ಕೆ ತುತ್ತಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಬಿಡುಗಡೆ

ಐಷಾರಾಮಿ ವಾಹನ ತಯಾರಕ ಕಂಪನಿಯಾದ ಜಾಗ್ವಾರ್ ಲ್ಯಾಂಡ್ ರೋವರ್ ತನ್ನ ಐಕಾನಿಕ್ ಡಿಫೆಂಡರ್ ಆಫ್-ರೋಡ್ ಎಸ್‍ಯುವಿಯನ್ನು ಹಲವಾರು ಪ್ರಮುಖ ನವೀಕರಣಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಈ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ (Land Rover Defender) ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.39 ಕೋಟಿಯಾಗಿದೆ. ಹಳೆಯ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು ಡೀಸೆಲ್ ಯುನಿಟ್ ಗಳ ಜೊತೆಗೆ ಹೊಸ V8 ಎಂಜಿನ್‌ ನೊಂದಿಗೆ 2025ರ ಡಿಫೆಂಡರ್ ಎಸ್‍ಯುವಿ ಬಂದಿದೆ. ಈ ಹೊಸ ಡಿಫೆಂಡರ್ ಎಸ್‍ಯುವಿಯು ಡಿಫೆಂಡರ್ 90, ಡಿಫೆಂಡರ್ 110 ಮತ್ತು ಡಿಫೆಂಡರ್ 130 ರೂಪದಲ್ಲಿ ಲಭ್ಯವಿದೆ.

ಮೊಂಟ್ರಾ ಎಲೆಕ್ಟ್ರಿಕ್‌ನಿಂದ ಹೊಸ ಉತ್ಪನ್ನ ಬಿಡುಗಡೆಗೆ ಸಜ್ಜು!

ಮುರುಗಪ್ಪ ಗ್ರೂಪ್‌ನ EV ಬ್ರ್ಯಾಂಡ್ ಮೊಂಟ್ರಾ ಎಲೆಕ್ಟ್ರಿಕ್ ಕಂಪನಿಯು, ಮುಂಬರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ತಮ್ಮ e-SCV ಮತ್ತು ಎಲೆಕ್ಟ್ರಿಕ್ 3W ಸೂಪರ್ ಕಾರ್ಗೋವನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಇ-ಎಸ್‌ಸಿವಿಯ ಅಭಿವೃದ್ಧಿಯು ಚೆನ್ನೈನಲ್ಲಿರುವ ಅತ್ಯಾಧುನಿಕ ಪೊನ್ನೇರಿ ಸ್ಥಾವರದಲ್ಲಿ ವ್ಯಾಪಕವಾದ ಸಂಶೋಧನೆ ಮತ್ತು ಪರೀಕ್ಷೆಯ ಫಲಿತಾಂಶವಾಗಿದೆ. ಬಿಡುಗಡೆಯ ನಂತರ ವಾಹನವು ಭಾರತದ ಮಧ್ಯ-ಮೈಲಿ ಮತ್ತು ಕೊನೆಯ ಮೈಲಿ ಚಲನಶೀಲತೆ ವಲಯಗಳಲ್ಲಿ ಗಮನಾರ್ಹ ಬದಲಾವಣೆಯನ್ನು ತರುವ ನಿರೀಕ್ಷೆಯಿದೆ ಎಂದು ಮೊಂಟ್ರಾ ಎಲೆಕ್ಟ್ರಿಕ್ ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

Renault Duster: ಬ್ಯಾಡ್ ನ್ಯೂಸ್.. ಈ ವರ್ಷ ಲಕ್ಸುರಿ ಫೀಚರ್ಸ್‌ನ..

ಫ್ರಾನ್ಸ್ ಮೂಲದ ರೆನಾಲ್ಟ್ (Renault) ಪ್ರಮುಖ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಕ್ವಿಡ್, ಕಿಗರ್ ಹಾಗೂ ಟ್ರೈಬರ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವುದರಿಂದ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿವೆ. ಕೆಲವೇ ದಿನಗಳ ಹಿಂದೆ, ನೂತನ 'ಡಸ್ಟರ್' ಎಸ್‌ಯುವಿಯನ್ನು ಮತ್ತೆ ಬಿಡುಗಡೆಗೊಳಿಸಲು ಕಂಪನಿಯು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿತ್ತು. ಸದ್ಯ, ಕಾರಿನ ಕುರಿತಂತೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.
Advertisement

ಕಾರಿನಲ್ಲಿದ್ದ ಸೇಫ್ಟಿ ಫೀಚರ್‌ನಿಂದ ಸಿಕ್ಕಿಬಿದ್ದ ಕಳ್ಳರು

ತಂತ್ರಜ್ಞಾನ ಬಹಳ ಮುಂದುವರಿದಿದೆ, ಹಲವು ಕಾರು ಕಂಪನಿಗಳು ತಮ್ಮ ವಾಹನಗಳನ್ನು ಸಂಪರ್ಕಿತ ಕಾರು ವೈಶಿಷ್ಟ್ಯ (connected car features) ಗಳೊಂದಿಗೆ ನೀಡುತ್ತಿದ್ದಾರೆ. ಈ ಅತ್ಯಾಧುನಿಕ ಫೀಚರ್ ಕಾರುಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಈ ವೈಶೀಷ್ಟ್ಯದೊಂದಿಗೆ ಮಾಲೀಕರು ತುಂಬಾ ಸಲೀಸಾಗಿ ತಮ್ಮ ಕಳುವಾದ ವಾಹನವನ್ನು ಪತ್ತೆಹಚ್ಚಬಹುದು. ಇದಕ್ಕೆ ಉದಾಹರಣೆಯೆಂಬಂತೆ ಇತ್ತೀಚೆಗೆ ಕಳುವಾದ ಮಹೀಂದ್ರಾ ಥಾರ್ ರೋಕ್ಸ್ ಅನ್ನು ಮಾಲೀಕರೊಬ್ಬರು 'ಅಡ್ರೆನಾಕ್ಸ್' (Adrenox) ಬಳಸಿ ಪತ್ತೆಹಚ್ಚಿದ್ದಾರೆ. ಅದನ್ನು ಹೇಗೆ ಕಂಡುಕೊಂಡರು ಎಂಬುದನ್ನು ತೋರಿಸುವ ವೀಡಿಯೊವನ್ನು ಕೂಡ ಹಂಚಿಕೊಳ್ಳಲಾಗಿದೆ.

New Tata Sumo: 9-ಸೀಟರ್.. ಲಕ್ಸುರಿ ಫೀಚರ್ಸ್, ಅಗ್ಗದ ದರಕ್ಕೆ ಹೊಸ..

ಟಾಟಾ ಮೋಟಾರ್ಸ್ (Tata Motors), ನಂಬಿಕೆಗೆ ಹೆಸರುವಾಸಿಯಾಗಿರುವ ತಯಾರಕ ಕಂಪನಿಯಾಗಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ವರ್ಷಗಳ ಹಿಂದೆ, ಕಂಪನಿ ಮಾರಾಟಗೊಳಿಸುತ್ತಿದ್ದ ಸುಮೋ (Sumo) ಪ್ರಖ್ಯಾತ ಎಂಪಿವಿಯಾಗಿ ಹೊರಹೊಮ್ಮಿತ್ತು. ದಾಖಲೆ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿತ್ತು. ಆದರೆ, ನಾನಾ ಕಾರಣಗಳಿಗೆ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿತು. ಸದ್ಯ, ಇದೇ 'ಟಾಟಾ ಸುಮೋ' ಹೊಸ ರೂಪದಲ್ಲಿ ಮತ್ತೆ ಮಾರಾಟಕ್ಕೆ ಬರಲಿದೆ ಎಂದು ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Maruti: ಆಲ್ಟೋ ಮುಂದೆ ಮಹೀಂದ್ರಾ ಥಾರ್, ಜಿಮ್ನಿ ಡಮ್ಮಿ

ಮಾರುತಿ ಸುಜುಕಿ ನೀಡುತ್ತಿದ್ದ ಬೆಸ್ಟ್ ಕಾರುಗಳಲ್ಲಿ ಆಲ್ಟೋ ಕೂಡ ಒಂದು. ಈ ಸಣ್ಣ ಹ್ಯಾಚ್‌ಬ್ಯಾಕ್ ನೋಡಲು ಪುಟಾಣಿ ಕಾರಿನಂತಿದ್ದರೂ ಐದು ಮಂದಿ ಪ್ರಯಾಣಕ್ಕೆ ಬೆಸ್ಟ್ ಕಾರಾಗಿ ಮಧ್ಯಮ ವರ್ಗದ ಅದೇಷ್ಟೋ ಜನರ ಕಾರು ಖರೀದಿಸುವ ಕನಸನ್ನು ನನಸಾಗಿದೆ. ಇದನ್ನು ದೇಶದಲ್ಲಿ 'ಲಾರ್ಡ್ ಆಲ್ಟೋ' ಎಂದು ಸಹ ಕರೆಯಲಾಗುತ್ತದೆ. ಹೀಗೆ ಏಕೆ ಕರೆಯಲಾಗುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿ ಇತ್ತೀಚಿನ ವಿಡಿಯೋ ಸಾಭೀತು ಪಡಿಸಿದೆ. ಹಿಮಾಚಲ ಪ್ರದೇಶದಲ್ಲಿ ಮಂಜಿನಿಂದ ಕೂಡಿದ್ದ ರಸ್ತೆಯಲ್ಲಿ ಮಾರುತಿ ಆಲ್ಟೋ ತೋರಿದ ಪರ್ಫಾಮೆನ್ಸ್‌ಗೆ ಎಲ್ಲರು ಮೆಚ್ಚಲೇಬೇಕು.

ಕಲ್ಲು ಬಂಡೆಯಂತಿರುವ ಬಲಿಷ್ಠ ಟಾಟಾ ಕಾರಿನ ಮಾರಾಟದಲ್ಲಿ ಕುಸಿತ

ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata motors) ತನ್ನ ಸಫಾರಿ ಎಸ್‍ಯುವಿಯನ್ನು ಹೊಸ ನವೀಕರಣದೊಂದಿಗೆ ಬಿಡುಗಡೆಗೊಳಿಸಿತು ಈ ಜನಪ್ರಿಯ ಟಾಟಾ ಸಫಾರಿ (Tata Safari) ಎಸ್‌ಯುವಿಯ ಫೇಸ್‌ಲಿಫ್ಟೆಡ್ ಆವೃತ್ತಿಯು ಕಳೆದ ವರ್ಷದ ಬಹು ನಿರೀಕ್ಷಿತ ಕಾರುಗಳ ಬಿಡುಗಡೆಯಾದ ಮಾದರಿಗಳಲ್ಲಿ ಒಂದಾಗಿದೆ. ಸುರಕ್ಷತೆ ಮತ್ತು ಅತ್ಯಾಧುನಿಕ ಫಿಚರ್ಸ್ ಗಳನ್ನು ಹೊಂದಿರುವ ಟಾಟಾ ಸಫಾರಿ ಫೇಸ್‌ಲಿಫ್ಟ್ ಎಸ್‍ಯುವಿ ಮಾದರಿಯು ಹೊಸ ನವೀಕರಣಗಳನ್ನು ಪಡೆದುಕೊಂಡು ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಸ್ವೀಕರಿಸಿತು. ಬಳಿಕ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯೊಂದಿಗೆ ಮಾರಾಟವಾಯ್ತು.

ಆನಂದ್ ಮಹೀಂದ್ರಾ ಕಂಪನಿ ತಾಕತ್ತು.. ಹೊಸ ಮೈಲಿಗಲ್ಲು ನಿರ್ಮಾಣ

ಪ್ರಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಮಾಲೀಕತ್ವದ ಮಹೀಂದ್ರಾ & ಮಹೀಂದ್ರಾ (Mahindra & Mahindra), ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಕಾರುಗಳು ಸುರಕ್ಷತೆಗೆ ಹೆಸರುವಾಸಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಇದೀಗ, ಮಹೀಂದ್ರಾ ಆಫ್-ರೋಡ್ ಎಸ್‌ಯುವಿ 3-ಡೋರ್ 'ಥಾರ್' ಮಾರಾಟದಲ್ಲಿ ಹೊಸ ಇತಿಹಾಸ ಬರೆದಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಸ್ಟಾರ್ ನಟರೇ ಮನಸೋತಿದ್ದ ಕಾರು: ಯುವತಿಯ ಬ್ಯೂಟಿಗೆ ತಕ್ಕಂತೆ ಮಾಡಿಫೈ

ಪ್ರತಿಯೊಬ್ಬರು ಬಾಲ್ಯದಲ್ಲಿ ಅದೆಷ್ಟೋ ಕನಸುಗಳೊಂದಿಗೆ ಬೆಳೆದು ದೊಡ್ಡವರಾದ ಮೇಲೆ ನನಸಾಗಿಸಿಕೊಳ್ಳುವ ಬಯಕೆಯಲ್ಲಿರುತ್ತಾರೆ. ಕಾರುಗಳು, ವಿಮಾನ ಹಾರಾಟ, ಬಂಗಲೆಗಳನ್ನು ಹೊಂದುವ ಹಲವು ಕನಸುಗಳು ನಿಮ್ಮಲ್ಲಿಯೂ ಹಲವರಿಗಿರುತ್ತದೆ. ಅಂತೆಯೇ ಮುಂದೊಂದು ದಿನ ನಮ್ಮ ಕನಸು ನನಸಾದಾಗ ಆ ಖುಷಿ ಕೋಟಿ ಕೊಟ್ಟರು ಸಿಗುವುದಿಲ್ಲ. ಅಂತಹ ಖುಷಿಯನ್ನೆ ಬೆಂಗಳೂರಿನ ಯುವತಿಯೊಬ್ಬರು ತನ್ನದಾಗಿಸಿಕೊಂಡಿದ್ದಾರೆ. ಬಾಲ್ಯದಿಂದಲೂ ಪ್ರೀತಿಸುತ್ತಿದ್ದ ತಮ್ಮ ಕನಸಿನ ಕಾರನ್ನು ಖರೀದಿಸಿ ಫುಲ್ ಖುಷಿಯಲ್ಲಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಫುಲ್ ವೈರಲ್ ಆಗಿದ್ದಾರೆ.

ಬೆಲೆ ಏರಿಕೆ ಪಡೆದುಕೊಂಡ ವಿಮಾನದಂತೆ ಸೌಕರ್ಯವಿರುವ ಎಂಜಿ ಕಾರು

ದೇಶಿಯ ಮಾರುಕಟ್ಟೆಯಲ್ಲಿ ಗ್ಲೋಸ್ಟರ್, ಹೆಕ್ಟರ್ ಪ್ಲಸ್, ಕಾಮೆಟ್ ಇವಿ ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ. ಈ ನಡುವೆ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡ ಎಂಜಿ ತನ್ನ ಎಲೆಕ್ಟ್ರಿಕ್ ಕಾರುಗಳ ಸರಣಿಯನ್ನು ವಿಸ್ತರಿಸಿದೆ. ಇದರ ಭಾಗವಾಗಿ ಎಂಜಿ ಕಂಪನಿಯು ವಿಂಡ್ಸರ್ ಇವಿ ಮಾದರಿಯನ್ನು ಬಿಡುಗಡೆಗೊಳಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿರುಗಾಳಿಯನ್ನು ಎಬ್ಬಿಸಿತು. ಎಂಜಿ ವಿಂಡ್ಸರ್ ಇವಿ ಮಾದರಿಯ ಪರಿಚಯಾತ್ಮಕ ಬೆಲೆಗಳು ಇನ್ನು ಮುಂದೆ ಅನ್ವಯಿಸುವುದಿಲ್ಲವಾದ್ದರಿಂದ ರೂ.50,000 ವರೆಗೆ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ.

Renault: ಸಂಕ್ರಾಂತಿಗೆ ಗುಡ್‌ನ್ಯೂಸ್.. ರೆನಾಲ್ಟ್ ಕಾರುಗಳಿಗೆ..

ರೆನಾಲ್ಟ್ ಇಂಡಿಯಾ (Renault India), ಪ್ರಮುಖ ಕಾರು ತಯಾರಕ ಕಂಪನಿಯಾಗಿ ಮನೆ ಮಾತಾಗಿದೆ. ಈ ಜನವರಿಯಲ್ಲಿ ಹಲವು ಕಾರುಗಳ ಖರೀದಿ ಮೇಲೆ ಭಾರೀ ರಿಯಾಯಿತಿ ಘೋಷಿಸಿದೆ. ಇದರಿಂದ ಸಂಕ್ರಾಂತಿಗೆ ಹೊಚ್ಚ ಹೊಸ ಕಾರನ್ನು ಮನೆಗೆ ತರಬೇಕೆಂದು ಯೋಚಿಸಿರುವ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಣಕಾಸು ಪ್ರಯೋಜನದ ಕುರಿತ ವಿವರಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಲಾಗಿದೆ. ಬನ್ನಿ.. ಯಾವ ಕಾರು ಎಷ್ಟು ರಿಯಾಯಿತಿ ಹೊಂದಿದೆ ಎಂಬುದನ್ನು ತಿಳಿಯೋಣ.
Advertisement

ಪಾರ್ಲಿಮೆಂಟ್ ಬಿಟ್ಟು ದುಬಾರಿ ಬೈಕ್‌ನಲ್ಲಿ ರಸ್ತೆಗಿಳಿದ ಜನಪ್ರಿಯ ಸಂಸದ

ಎಲ್ಲರಂತೆಯೇ ಸೆಲೆಬ್ರಿಟಿಗಳು ಕೂಡ ಬೈಕ್ ಸವಾರಿ ಮಾಡುವುದನ್ನು ತುಂಬಾ ಇಷ್ಟಪಡುತ್ತಾರೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಮಾಜಿ ಕ್ರಿಕೆಟ್ ಆಟಗಾರ ಎಂ.ಎಸ್‌ ಧೋನಿ, ಇವರು ಬೈಕ್ ಸವಾರಿ ಮಾಡುತ್ತಾ ಕಾಣಿಸಿಕೊಂಡಿರುವ ಹಲವಾರು ವಿಡಿಯೋಗಳನ್ನು ನೋಡಬಹುದು. ಇವರಂತೆಯೇ ಹಲವಾರು ಜನಪ್ರಿಯ ನಟರು ಮತ್ತು ನಟಿಯರು ಸವಾರಿ ಮಾಡಲು ಇಷ್ಟಪಡುತ್ತಾರೆ. ಆದರೆ ರಾಜಕಾರಣಿಗಳು ಬೈಕ್ ಸವಾರಿ ಮಾಡುವುದನ್ನು ಅಪರೂಪವಾಗಿ ನೋಡುತ್ತೇವೆ. ಇತ್ತೀಚೆಗೆ ಸಂಸದ ಅನುರಾಗ್ ಸಿಂಗ್ ಠಾಕೂರ್ ಹಾರ್ಲೆ ಡೇವಿಡ್‌ಸನ್ ಬೈಕ್ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ಈ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ.

ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿ ಬೆಲೆ ಏರಿಕೆ!

ಹ್ಯುಂಡೈ ಕ್ರೆಟಾ ಹ್ಯುಂಡೈ ಕಂಪನಿಯ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಕ್ರೆಟಾ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲ ಭಾರೀ ಬೇಡೀಕೆಯಿಂದ ಮಾರಾಟವಾಗುವ ಮಾದರಿಯಾಗಿದೆ. ಹ್ಯುಂಡೈ ಕಂಪನಿಯು ಕ್ರೆಟಾ ಎಸ್‍ಯುವಿಯ ಸ್ಪೋರ್ಟಿಯರ್ ಮಾದರಿಯಾದ ಕ್ರೆಟಾ ಎನ್ ಲೈನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಹ್ಯುಂಡೈ ಕಾರುಗಳ ಬೆಲೆಗಳನ್ನು 2025ರ ಜನವರಿ 1 ರಿಂದ ಏರಿಕೆಯಾಗಿದೆ. ಇದರಿಂದ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿ ಕೂಡ ದುಬಾರಿಯಾಗಿದೆ. ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿ N8 ಮತ್ತು N10 ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಮಾರುತಿ ಸುಜುಕಿಯ ಸುದೀರ್ಘ 40 ವರ್ಷಗಳ ದಾಖಲೆ ಉಡೀಸ್..

ಮಾರುತಿ ಸುಜುಕಿ ಪ್ರಖ್ಯಾತ ಕಾರು ತಯಾರಕ ಕಂಪನಿಯಾಗಿ ಹೆಸರುವಾಸಿಯಾಗಿದೆ. ಪ್ರತಿ ವರ್ಷ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಪ್ರಮುಖ 5 ಕಾರುಗಳ ಪಟ್ಟಿಯಲ್ಲಿ ಕಂಪನಿ ಕಾರುಗಳು ಇದ್ದೇ ಇರುತ್ತವೆ. ಆದರೆ, '2024'ರಲ್ಲಿ ಈ ಮಾರುತಿ ಸುಜುಕಿ ಸೇರಿದಂತೆ ಎಲ್ಲ ಕಂಪನಿ ಕಾರುಗಳನ್ನು ಹಿಂದಿಕ್ಕಿ, ಟಾಟಾದ ಈ ಜನಪ್ರಿಯ 'ಪಂಚ್' ಎಸ್‌ಯುವಿ ನಂಬರ್ 1 ಸ್ಥಾನಕ್ಕೆ ಬಂದಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡಿದ್ದಾರೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿವನ್ನು ತಿಳಿಯೋಣ. ಕಳೆದ ವರ್ಷ (2024) ಟಾಟಾ ಪಂಚ್ (Tata Punch) ಮೈಕ್ರೋ ಎಸ್‌ಯುವಿ ದೊಡ್ಡ ಸಂಖ್ಯೆಯಲ್ಲಿ ಮಾರಲ್ಪಟ್ಟ ಕಾರಾಗಿ ಹೊರಹೊಮ್ಮಿದೆ. ಈ ಮೂಲಕ ಮೊದಲ ಸ್ಥಾನಕ್ಕೂ ಬಂದಿದೆ. ಸರಿ ಸುಮಾರು 2,02,030 ಯುನಿಟ್ ಪಂಚ್ ಕಾರುಗಳು ಮಾರಾಟವಾಗಿವೆ. ಇದರೊಂದಿಗೆ ಮಾರುತಿ ಸುಜುಕಿಯ ಸುದೀರ್ಘ 40 ವರ್ಷಗಳ ದಾಖಲೆಯನ್ನು ಅಳಿಸಿ ಹಾಕಿಸಿದೆ.

ಶೀಘ್ರ ಪ್ರಯಾಣ.. ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ವೇ..

ಕರ್ನಾಟಕದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದ್ದು, ಹೊಸ ಎಕ್ಸ್‌ಪ್ರೆಸ್‌ವೇ ಹಾಗೂ ಎರಡನೇ ವಿಮಾನ ನಿಲ್ದಾಣವನ್ನು ನಿರ್ಮಿಸಲು ಸಿದ್ದತೆಗಳು ನಡೆಯುತ್ತಿದೆ. ನೂತನ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ವೇ (Bengaluru-Mangaluru Expressway) ನಿರ್ಮಾಣಕ್ಕೆ ಕೇಂದ್ರ ಹೆದ್ದಾರಿ ಸಚಿವಾಲಯ ಮುಂದಾಗಿದ್ದು, ಈ ಸಂಬಂಧ ಡಿಪಿಆರ್ ಸಿದ್ದಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ಸದ್ಯ, ಇದೇ ಹೆದ್ದಾರಿ ಹಾದು ಹೋಗುವ ಮಾರ್ಗದ ಭೂಮಿಗೆ ಬಂಗಾರದ ಬೆಲೆ ಬಂದಿದೆ ಎಂದು ವರದಿಯಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಬೆಲೆ ಏರಿಕೆ ಪಡೆದುಕೊಂಡ ಈ ಸಿಟ್ರನ್ ಕಾರು

ಜನಪ್ರಿಯ ವಾಹನ ತಯಾರಕ ಸಂಸ್ಥೆಯಾದ ಫ್ರೆಂಚ್ ಮೂಲದ ಸಿಟ್ರನ್ (Citroen) ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸಿಟ್ರನ್ ಬಸಾಲ್ಟ್ (Citroen Basalt) ಎಸ್‌ಯುವಿ ಕೂಪೆ ಮಾದರಿಯನ್ನು ತಿಂಗಳುಗಳ ಹಿಂದೆ ಬಿಡುಗಡೆಗೊಳಿಸಿದೆ. ಈ ಸಿಟ್ರನ್ ಬಸಾಲ್ಟ್ ಭಾರತೀಯ ಮಾರುಕಟ್ಟೆಗೆ ಕಂಪನಿಯ ಪೋರ್ಟ್‌ಫೋಲಿಯೊದಿಂದ 5ನೇ ಕಾರ್ ಆಗಿದೆ. ಹೊಸ ವರ್ಷದಲ್ಲಿ ಸಿಟ್ರನ್ ಕಂಪನಿಯು ತನ್ನ ಸರಣಿಯಲ್ಲಿರುವ ಕಾರುಗಳ ಬೆಲೆಯನ್ನು ಪರಿಷ್ಕರಿಸಿದ್ದಾರೆ. ಇದರಿಂದ ಹೊಸ ಸಿಟ್ರನ್ ಬಸಾಲ್ಟ್ ಎಸ್‍ಯುವಿಯು ಕೂಡ ದುಬಾರಿಯಾಗಿದೆ.