Hyundai: ಹೈ-ಪರ್ಫಾಮೆನ್ಸ್ ಪವರ್‌ಫುಲ್ ಹ್ಯುಂಡೈ ಕಾರು ಬಿಡುಗಡೆ

ಜನಪ್ರಿಯ ಕಾರು ತಯಾರಕ ಕಂಪನಿಯಾಗಿರುವ ಹುಂಡೈ, ಇಂದು ತನ್ನ ಹೊಸ ಹುಂಡೈ ವೆರ್ನಾ (Hyundai VERNA) ಬಿಡುಗಡೆ ಮಾಡಿದೆ. ನಿಜವಾದ ಕಾರು ಹೇಗಿರಬೇಕು ಎಂಬುದರ ಸಾರವನ್ನು ಹೊಸ 'ಹುಂಡೈ ವರ್ನಾ' ಪ್ರತಿನಿಧಿಸುತ್ತದೆ. ಸ್ಥಿರತೆ, ಗುಣಮಟ್ಟ ಮತ್ತು ಪ್ರೀಮಿಯಂ ವಿಷಯದಲ್ಲಿ ಯಾವುದೇ ರಾಜಿಯಿಲ್ಲದೆ ನಿರ್ಮಾಣಗೊಂಡಿದೆ. ದಿಟ್ಟ ವಿನ್ಯಾಸ, ಸುಧಾರಿತ ಸುರಕ್ಷತೆ ಮತ್ತು ಉಲ್ಲಾಸಕರ ಪರ್ಫಾಮೆನ್ಸ್‌ನೊಂದಿಗೆ ಹೊಸ ಹುಂಡೈ ವರ್ನಾ ಭಾರತೀಯ ಗ್ರಾಹಕರಿಗೆ ವಿಶ್ವ ದರ್ಜೆಯ ತಂತ್ರಜ್ಞಾನ ಮತ್ತು ಸಾಟಿಯಿಲ್ಲದ ಮೌಲ್ಯವನ್ನು ನೀಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

ಅತ್ಯಂತ ಅಗ್ಗದ AMT ಕಾರುಗಳು: 25 ಕಿಮೀ ಮೈಲೇಜ್, ಬಲಿಷ್ಠ ಎಂಜಿನ್

ನೀವು ಹೊಸ ಕಾರನ್ನು ಖರೀದಿಸಲು ನಿರ್ಧರಿಸಿದಾಗ ಅತ್ಯಂತ ಮುಖ್ಯವಾಗಿ ಪರಿಗಣಿಸುವ ಅಂಶವೆಂದರೆ ಟ್ರಾನ್ಸ್ಮಿಷನ್ ಆಯ್ಕೆ. ಕಾರುಗಳ ಜಗತ್ತಿನಲ್ಲಿ ನೀವು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಆಯ್ಕೆಗಳನ್ನು ಒಳಗೊಂಡಂತೆ ವಿವಿಧ ರೀತಿಯ ಟ್ರಾನ್ಸ್‌ಮಿಷನ್‌ ಆಯ್ಕೆಗಳನ್ನು ನೋಡುತ್ತೀರ. ಮ್ಯಾನುವಲ್ (MT) ಟ್ರಾನ್ಸ್‌ಮಿಷನ್‌ಗಳು ಹಿಂದೆ ಜನಪ್ರಿಯವಾಗಿದ್ದರೂ, ಜನರು ಈಗ ಆಟೋಮೇಟೆಡ್ (AMT) ಟ್ರಾನ್ಸ್‌ಮಿಷನ್‌ಗಳನ್ನು ಹೆಚ್ಚಾಗಿ ಬಯಸುತ್ತಾರೆ. ಇದಕ್ಕೆ ಕಾರಣ ಮೆಟ್ರೋ ನಗರಗಳಲ್ಲಿ, ಟ್ರಾಫಿಕ್ ಜಾಮ್‌ಗಳಲ್ಲಿ ಸಿಲುಕಿಕೊಂಡಾಗ AMT ಟ್ರಾನ್ಸ್‌ಮಿಷನ್ ತುಂಬಾ ಉಪಯುಕ್ತವಾಗಿರುತ್ತದೆ, ಇದು ಚಾಲಕರಿಗೆ ವರದಾನವೆಂದು ಹೇಳಬಹುದು.

ಬಡವರ ಸ್ಕೂಟರ್‌ಗಳಿವು.. 53 ಕಿ.ಮೀ ವರೆಗೆ ಮೈಲೇಜ್.. ರೂ.72,000..

ಟಿವಿಎಸ್ ಜುಪಿಟರ್ 110 (TVS Jupiter 110) ನಂಬಿಕಾರ್ಹ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಇದಕ್ಕೆ ಹೀರೋ ಜೂಮ್ 110 (Hero Xoom 110) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಈ ಸ್ಕೂಟರ್‌ಗಳು ಒಂದಕ್ಕಿಂತ ಒಂದು ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿವೆ. ನಾವಿಲ್ಲಿ ಈ ಸ್ಕೂಟರ್‌ಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Steelbird: ಸ್ವದೇಶಿ ಕಂಪನಿಯಿಂದ ಅಂತರಾಷ್ಟ್ರೀಯ ಗುಣಮಟ್ಟದ ಹೆಲ್ಮೆಟ್

ಕಡಿಮೆ ಬೆಲೆಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಹೆಲ್ಮೆಟ್‌ಗಳನ್ನು ನೀಡುತ್ತಿರುವ ಪ್ರಮುಖ ಸ್ವದೇಶಿ ಹೆಲ್ಮೆಟ್ ಬ್ರ್ಯಾಂಡ್ ಆಗಿರುವ ಸ್ಟೀಲ್‌ಬರ್ಡ್ (Steelbird), ಮೊನ್ನೆಯಷ್ಟೆ ತನ್ನ ನವೀನ ಸಂಖ್ಯಾಶಾಸ್ತ್ರ ಸರಣಿಯ (Numerology Series) ಹೆಲ್ಮೆಟ್ ಬಿಡುಗಡೆ ಮಾಡಿದೆ. ಇದು ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರಗಳಲ್ಲಿ ಲಭ್ಯವಿದೆ, ಸ್ಟೀಲ್‌ಬರ್ಡ್‌ನ ರಾಷ್ಟ್ರವ್ಯಾಪಿ ಡೀಲರ್ ನೆಟ್‌ವರ್ಕ್ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ರೂ.2249 ರ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು. ಸಂಖ್ಯೆಗಳ ಮಹತ್ವ ಮತ್ತು ವೈಯಕ್ತಿಕ ಗುರುತನ್ನು ನಂಬುವ ಸವಾರರಿಗೆ ವಿಶಿಷ್ಟ ಹೆಲ್ಮೆಟ್ ಒಂದೊಳ್ಳೆ ಆಯ್ಕೆಯಾಗಲಿದೆ.
Advertisement

Maruti: 23 ಕಿ.ಮೀ ಮೈಲೇಜ್.. 8-ಸೀಟರ್.. ಆದ್ರೂ ಈ ಆನೆ ಗಾತ್ರದ..

ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto) ಪ್ರಮುಖ ಎಂಪಿವಿಯಾಗಿದೆ. ಆದರೆ, ಈ ಕಾರಿನ ಮಾರಾಟದಲ್ಲಿ ಹಾವು - ಏಣಿ ಆಟ ಸಾಗುತ್ತಿದೆ. ಕಳೆದ ತಿಂಗಳು (ಫೆಬ್ರವರಿ - 2026) ಬರೀ 143 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗದೆ. 2025ರ ಇದೇ ಅವಧಿಯಲ್ಲಿ 380 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ -62% ಇಳಿಮುಖವಾಗಿದೆ.

Toyota: ಸಿದ್ಧರಾಗಿ.. ಅತಿ ಶೀಘ್ರದಲ್ಲೇ 3 ಹೊಸ ಟೊಯೊಟಾ ಕಾರುಗಳು..

ಟೊಯೊಟಾ (Toyota) ಜನಮೆಚ್ಚಿದ ವಾಹನ ತಯಾರಕ ಕಂಪನಿಯಾಗಿ ಎಂದೇ ಮನೆ ಮಾತಾಗಿದೆ. ಈ 2026 ಕಂಪನಿಗೆ ಬಹುಮುಖ್ಯ ವರ್ಷವಾಗಿದ್ದು, 3 ನವೀನ ಕಾರುಗಳನ್ನು ಪರಿಚಯಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅತಿ ಶೀಘ್ರದಲ್ಲೇ ಅರ್ಬನ್ ಕ್ರೂಸರ್ ಎಬೆಲ್ಲಾ, ಹೊಸ ತಲೆಮಾರಿನ ಅರ್ಬನ್ ಕ್ರೂಸರ್ ಹೈರೈಡರ್ & ಫಾರ್ಚೂನರ್ ಎಸ್‌ಯುವಿಗಳನ್ನು ಮಾರಾಟಕ್ಕೆ ತರಲಿದೆ. ಬನ್ನಿ.. ಇವುಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ತುಂಬಾ ಚೆನ್ನಾಗಿವೆ.. ಅಗ್ಗದ ಬೈಕ್‌ಗಳಿವು.. 65 ಕಿ.ಮೀ ವರೆಗೆ..

ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್ (Honda Shine 125 Limited Edition) ಪ್ರಖ್ಯಾತ ಬೈಕ್ ಆಗಿದೆ. ಇದಕ್ಕೆ ಹೀರೋ ಗ್ಲಾಮರ್ ಎಕ್ಸ್ 125 (Hero Glamour X 125) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಇವೆರೆಡು ಮೋಟಾರ್‌ಸೈಕಲ್‌ಗಳು ಒಂದಕ್ಕಿಂತ ಒಂದು ಅದ್ಬುತವಾಗಿವೆ. ಜೊತೆಗೆ ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿವೆ. ನಾವಿಲ್ಲಿ ಈ ಬೈಕ್‌ಗಳ ಬೆಲೆ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Best Diesel Cars: ಪವರ್‌ಫುಲ್ ಡೀಸೆಲ್ ಕಾರುಗಳ ಪಟ್ಟಿ

ದೀರ್ಘ ದೂರ ಚಾಲನೆ ಮಾಡುವ ಅಥವಾ ಬಲವಾದ ಪುಲ್ಲಿಂಗ್ ಪವರ್ ಹೊಂದಿರುವ ಎಸ್‌ಯುವಿಗಳನ್ನು ಇಷ್ಟಪಡುವ ಖರೀದಿದಾರರಲ್ಲಿ, ಡೀಸೆಲ್ ವಾಹನಗಳು ಇನ್ನೂ ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಇವು ಹೆದ್ದಾರಿಗಳಲ್ಲಿ ಉತ್ತಮ ಇಂಧನ ದಕ್ಷತೆ ಮತ್ತು ಪೆಟ್ರೋಲ್ ಎಂಜಿನ್‌ಗಳಿಗೆ ಹೋಲಿಸಿದರೆ ಹೆಚ್ಚಿನ ಟಾರ್ಕ್ ಉತ್ಪಾದಿಸುತ್ತವೆ. ಆದರೆ ಸದ್ಯ ಆಟೋ ಉದ್ಯಮವು ವಿದ್ಯುದೀಕರಣದತ್ತ ಸಾಗುತ್ತಿರುವುದರಿಂದ, ಮುಂಬರುವ ವರ್ಷಗಳಲ್ಲಿ ಡೀಸೆಲ್ ಕಾರುಗಳ ಸಂಖ್ಯೆ ಕ್ರಮೇಣ ಕಡಿಮೆಯಾಗಬಹುದು. ಹಾಗಾಗಿ ಡೀಸೆಲ್ ಕಾರುಗಳನ್ನು ಹುಡುಕುವವರಲ್ಲಿ ನೀವು ಒಬ್ಬರಾಗಿದ್ದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಗುವ ಬೆಸ್ಟ್ ಡೀಸೆಲ್ ಕಾರುಗಳ (Best Diesel Cars) ಪಟ್ಟಿ ಇಲ್ಲಿದೆ.
Advertisement

Toyota: ಪ್ರತಿದಿನ 310 ಕಾರುಗಳು ಸೇಲ್ಸ್, ಈ ಜನಪ್ರಿಯ ಟೊಯೊಟಾ..

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಪ್ರಖ್ಯಾತ ಎಂಪಿವಿಯಾಗಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಸಹ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಫೆಬ್ರವರಿ - 2026) ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಸರಿ ಸುಮಾರು 8,703 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. ಅಂದರೆ ಪ್ರತಿದಿನ 310 ಕಾರುಗಳನ್ನು ಮಾರಲಾಗಿದೆ. 2025ರ ಇದೇ ಅವಧಿಯಲ್ಲಿ 8,449 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 3% ಬೆಳವಣಿಗೆಯಾಗಿದೆ.

ನೀವು ಗಿಫ್ಟ್ ಕೊಡಬೇಕೇ.. ಮಹಿಳೆಯರಿಗೆ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು..

ಪ್ರತಿ ವರ್ಷ ಮಾರ್ಚ್ 8ರಂದು ವಿಶ್ವ ಮಹಿಳಾ ದಿನ (International Women's Day) ಆಚರಿಸಲಾಗುತ್ತದೆ. ಈ ದಿನ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಕ್ಷೇತ್ರದ ಮಹಿಳಾ ಸಾಧಕರನ್ನು ಗುರುತಿಸಿ, ಸನ್ಮಾನಿಸಲಾಗುತ್ತದೆ. ಜೊತೆಗೆ ಮಹಿಳಾ ಹಕ್ಕುಗಳು ಮತ್ತು ಸಮಾನತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಇಂದು ನಿಮ್ಮ ಮಡದಿ ಅಥವಾ ಸಹೋದರಿಗೆ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ವೊಂದನ್ನು ಗಿಫ್ಟ್ ನೀಡಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, ಟಿವಿಎಸ್ ಐಕ್ಯೂಬ್, ಎಥರ್ ರಿಜ್ಟಾ, ಹೀರೋ ವಿಡಾ ವಿಎಕ್ಸ್2, ಟಿವಿಎಸ್ ಆರ್ಬಿಟರ್ ಹಾಗೂ ಯಮಹಾ ಇಸಿ-06ಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ.. ಇವುಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ತೀರಾ ಕಮ್ಮಿ ಬೆಲೆಗೆ ಮೊನ್ನೆಯಷ್ಟೆ ಹೊಸ ಸ್ಕೂಟರ್ ಬಿಡುಗಡೆ

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಗಳಲ್ಲಿ ಒಂದಾದ ಜೀಲಿಯೋ ಎಲೆಕ್ಟ್ರಿಕ್ (ZELO Electric), ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹೊಸ ನೈಟ್+ ರಾಣಿ ಎಡಿಷನ್ ಎಂಬ ಹೊಸ ಸ್ಕೂಟರ್ ಬಿಡುಗಡೆ ಮಾಡಿದೆ. ಇದು ಕೈಗೆಟುಕುವ ಬೆಲೆಯಲ್ಲಿ ಪ್ರೀಮಿಯಂ ಫೀಚರ್ಸ್ ಹೊಂದಿರುವ ಸ್ಕೂಟರ್ ಆಗಿದ್ದು, ಹಿಲ್ ಹೋಲ್ಡ್ ಕಂಟ್ರೋಲ್, USB ಚಾರ್ಜಿಂಗ್ ಪೋರ್ಟ್, ಕ್ರೂಸ್ ಕಂಟ್ರೋಲ್, ಫಾಲೋ-ಮಿ-ಹೋಮ್ ಹೆಡ್‌ಲ್ಯಾಂಪ್‌ಗಳಂತಹ ಆಧುನಿಕ ಫೀಚರ್ಸ್ ಹೊಂದಿದೆ. ಈ ಸ್ಕೂಟರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

34 Km ಮೈಲೇಜ್.. ರೂ.4.70 ಲಕ್ಷ, ಆಫೀಸ್‌ಗೆ ಹೋಗೋರಿಗೆ ಫರ್ಫೆಕ್ಟ್..

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಪ್ರಖ್ಯಾತ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದು ಈ 2026ರ ಫೆಬ್ರವರಿಯಲ್ಲಿಯೂ ಮುಂದುವರಿದಿದೆ. ಕೇವಲ 862 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 4,226 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ಶೇಕಡ -80% ಇಳಿಮುಖವಾಗಿದೆ.
Advertisement

Best Selling Cars: ಅತಿ ಹೆಚ್ಚು ಮಾರಾಟವಾದ ಟಾಪ್-5 ಕಾರುಗಳ ಪಟ್ಟಿ!

ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಕಾರು ಮಾರಾಟವನ್ನು ಕಾಣುವ ಟಾಪ್-5 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ದೇಶದಲ್ಲಿ ನಿತ್ಯಾ ಸಾವಿರಾರು ಕಾರುಗಳು ಮಾರಾಟವಾಗುತ್ತಿರುತ್ತವೆ, ಮಾರುತಿಯಿಂದ ಟಾಟಾ ಮೋಟಾರ್ಸ್ ವರೆಗೆ ಹಾಗೂ ಅಗ್ಗದ ಕಾರುಗಳಿಂದ ಐಷಾರಾಮಿ ಕಾರುಗಳವರಗೆ ಎಲ್ಲಾ ರೀತಿಯ ಕಾರುಗಳನ್ನು ಖರೀದಿಸುವ ಗ್ರಾಹರಿದ್ದಾರೆ. ಆದರೆ ದೇಶದಲ್ಲಿ ಅತಿ ಹೆಚ್ಚು ಮಾರಾಟ ಕಾಣುವ ಕಾರುಗಳು (Best Selling Cars) ಯಾವುವು ಎಂಬುದನ್ನು ತಿಳಿಯುವ ಕುತೂಹಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-5 ಕಾರುಗಳ ಪಟ್ಟಿ ಇಲ್ಲಿದೆ.

Toyota: ಟೊಯೋಟಾ ಹೊಸ 7-ಸೀಟರ್ ಬಿಡುಗಡೆ: 10 ಲಕ್ಷಕ್ಕಿಂತ ಕಮ್ಮಿ ಬೆಲೆ

ಜನಪ್ರಿಯ ಕಾರು ತಯಾರಕ ಕಂಪನಿಯಾಗಿರುವ ಟೊಯೋಟಾ, ತನ್ನ ರುಮಿಯನ್ (Toyota Rumion) ಎಂಪಿವಿಗಾಗಿ ಹೊಸ ಆರಂಭಿಕ ಮಟ್ಟದ 'E' ವೇರಿಯೆಂಟ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ರೂ. 9.56 ಲಕ್ಷ (ಎಕ್ಸ್‌ ಶೋರೂಂ) ಇದೆ. ಇದು ಆರಂಭಿಕ ಬೆಲೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಹಾಗೆಯೇ ಇದು ಬೇಸ್ ವೇರಿಯೆಂಟ್ ಆಗಿರುವುದರಿಂದ ಕೆಲವು ಫೀಚರ್‌ಗಳನ್ನು ಹೊಂದಿರುವುದಿಲ್ಲ. ಒಟ್ಟಾರೆ ಟೊಯೋಟಾ ರುಮಿಯನ್ ಈಗ E, S, G ಮತ್ತು V ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿ ಲಭ್ಯವಿದೆ. ಈ ಹೊಸ ಬೇಸ್ ವೇರಿಯೆಂಟ್ ಕುರಿತ ವಿವರವಾದ ನೋಟ ಇಲ್ಲಿದೆ.

ಬಡವರಿಗೆ ಬೆಸ್ಟ್ ಕಾರಿದು.. ರೂ.3.70 ಲಕ್ಷಕ್ಕೆ ಸಿಗುತ್ತೆ..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಪ್ರಖ್ಯಾತ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಈ ಕಾರು ಎಸ್‌ಯುವಿಗಳ ತೀವ್ರ ಸ್ಪರ್ಧೆಯ ನಡುವೆಯೂ ಉತ್ತಮ ಸಂಖ್ಯೆಯೇ ಮಾರಾಟವಾಗುತ್ತಿದೆ. ಗ್ರಾಹಕರು ಸಹ ಇಷ್ಟಪಟ್ಟು ಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಫೆಬ್ರವರಿ - 2026) ಒಟ್ಟು 9,787 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 8,541 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 15% ಬೆಳವಣಿಗೆಯಾಗಿದೆ.

Mahindra: ಅಭಿಮಾನಿಗಳ ಒತ್ತಡಕ್ಕೆ ಮಣಿದ ಮಹೀಂದ್ರಾ

ಅಂತರಾಷ್ಟ್ರೀಯ ಗುಣಮಟ್ಟದ ಎಲೆಕ್ಟ್ರಿಕ್ ಕಾರುಗಳನ್ನು ನೀಡುವಲ್ಲಿ ಯಶಸ್ವಿಯಾಗಿರುವ ಭಾರತದ ಜನಪ್ರಿಯ ಕಾರು ತಯಾರಕ ಕಂಪನಿ ಮಹೀಂದ್ರಾ, ಕೊನೆಗೂ ಅಭಿಮಾನಿಗಳ ಬೇಡಿಕೆಯನ್ನು ಈಡೇರಿಸಲು ಸಜ್ಜಾಗಿದೆ. ತನ್ನ BE 6 ಎಲೆಕ್ಟ್ರಿಕ್ ಎಸ್‌ಯುವಿ ಯಶಸ್ವಿಯಾಗಿ ಮಾರಾಟ ಕಾಣುತ್ತಿರುವುದು ಎಲ್ಲರಿಗೂ ತಿಳಿದಿದೆ, ಈ ಹಿಂದೆ ಇದರ ಸ್ಪೆಷಲ್ ಎಡಿಷನ್ ಆಗಿ BE 6 ಬ್ಯಾಟ್‌ಮ್ಯಾನ್ ಎಡಿಷನ್ ಬಿಡುಗಡೆ ಮಾಡಲಾಗಿತ್ತು. ಈ ಕಾರನ್ನು ಜನ ಮುಗಿಬಿದ್ದು ಖರೀದಿಸಿದ್ದರು. ಆದರೆ ಸೀಮಿತ ಸಂಖ್ಯೆಯಲ್ಲಿ ಮಾತ್ರ ನಿರ್ಮಿಸಲಾಗಿದ್ದರಿಂದ ಈಗ ಅಭಿಮಾನಿಗಳು ಪಟ್ಟು ಹಿಡಿದು ಮತ್ತೆ ಮಾರಾಟ ಮಾಡಲು ಒತ್ತಾಯಿಸಿದ್ದಾರೆ.
Advertisement

Steelbird: ಕಮ್ಮಿ ಬೆಲೆಗೆ ಅಂತರಾಷ್ಟ್ರೀಯ ಗುಣಮಟ್ಟದ ಹೆಲ್ಮೆಟ್

ಸ್ಟೀಲ್‌ಬರ್ಡ್ ಹೆಲ್ಮೆಟ್ಸ್ ತನ್ನ ನವೀನ ಸಂಖ್ಯಾಶಾಸ್ತ್ರ ಸರಣಿಯನ್ನು (Numerology Series) ಬಿಡುಗಡೆ ಮಾಡಿದೆ, ಇದು ಸಂಖ್ಯೆಗಳ ಮಹತ್ವ ಮತ್ತು ವೈಯಕ್ತಿಕ ಗುರುತನ್ನು ನಂಬುವ ಸವಾರರಿಗಾಗಿ ವಿನ್ಯಾಸಗೊಳಿಸಲಾದ ವಿಶಿಷ್ಟ ಹೆಲ್ಮೆಟ್ ಆಗಿದೆ. ಹೊಸ ಹೆಲ್ಮೆಟ್ ಸಿರೀಸ್ ಪ್ರಮಾಣೀಕೃತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಕಸ್ಟಮೈಸ್ ಮಾಡಿದ ವಿನ್ಯಾಸ ಅಂಶಗಳನ್ನು ಹೊಂದಿದೆ. ಸವಾರರಿಗೆ ರಸ್ತೆಯಲ್ಲಿ ಪ್ರತ್ಯೇಕತೆ ಮತ್ತು ವಿಶ್ವಾಸ ಎರಡನ್ನೂ ಪ್ರತಿಬಿಂಬಿಸುವ ಹೆಲ್ಮೆಟ್ ಇದಾಗಿದೆ. ನ್ಯೂಮರಾಲಜಿ ಸಿರೀಸ್ ಒಂದು ವಿಶಿಷ್ಟ ಪರಿಕಲ್ಪನೆಯನ್ನು ಪರಿಚಯಿಸುತ್ತದೆ, ಇಲ್ಲಿ ಸವಾರರು 01 ರಿಂದ 09 ರವರೆಗಿನ ಸಂಖ್ಯೆಯ ಗ್ರಾಫಿಕ್ಸ್‌ಗಳನ್ನು ಹೊಂದಿರುವ ಹೆಲ್ಮೆಟ್‌ಗಳನ್ನು ಆಯ್ಕೆ ಮಾಡಬಹುದು.

ಹೊಸ 5-ಸ್ಟಾರ್ ಕಾರಿದು.. ಮುಗಿಬಿದ್ದ ಗ್ರಾಹಕರು..

ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ವಿಶ್ವಾಸಾರ್ಹ ಎಸ್‌ಯುವಿಯಾಗಿ ಹೊರಹೊಮ್ಮುತ್ತಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಸಹ ನಾ ಮುಂದು - ತಾ ಮುಂದು ಎಂಬಂತೆ ಮುಗಿಬಿದ್ದು ಕೊಂಡುಕೊಳ್ಳತ್ತಿದ್ದಾರೆ. ಈ 2026ರ ಫೆಬ್ರವರಿ ತಿಂಗಳಲ್ಲೂ ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 13,021 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ, ಪ್ರತಿದಿನ 465 ಯುನಿಟ್‌ಗಳು ಮಾರಾಟವಾಗಿವೆ. ಇದೇ ಜನವರಿಯಲ್ಲಿ 15,240 ಯುನಿಟ್‌ಗಳನ್ನು ಮಾರಲಾಗಿದೆ.

ಆಕ್ಟೀವಾ, ಆಕ್ಸಿಸ್‌ಗಿಂತ ಅಗ್ಗದ ಸ್ಕೂಟರ್ ಬಿಡುಗಡೆ

ಭಾರತದ ಉದಯೋನ್ಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್‌ಗಳಲ್ಲಿ ಒಂದಾದ ಜೀಲಿಯೋ ಎಲೆಕ್ಟ್ರಿಕ್ (ZELO Electric), ಕೈಗೆಟುಕುವ ಬೆಲೆಯಲ್ಲಿ ಪ್ರೀಮಿಯಂ ಫೀಚರ್ಸ್ ಹೊಂದಿರುವ ಸ್ಕೂಟರ್‌ಗಳನ್ನು ನೀಡುವಲ್ಲಿ ಜನಪ್ರಿಯತೆ ಪಡೆದಿದೆ. ಈ ಬ್ರ್ಯಾಂಡ್ ಇಂದು ನೈಟ್+ ರಾಣಿ ಎಡಿಷನ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದು ಲಿಮಿಟೆಡ್ ಎಡಿಷನ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ವಿಶೇಷವಾದ ಬೇಬಿ ಪಿಂಕ್ ಬಣ್ಣದಲ್ಲಿ ಲಭ್ಯವಿದೆ. ಕೇವಲ 999 ಯುನಿಟ್‌ ಸ್ಕೂಟರ್‌ಗಳು ಮಾತ್ರ ದೇಶಾದ್ಯಂತ ಖರೀದಿಗೆ ಲಭ್ಯವಿರುತ್ತವೆ ಎಂದು ಜೀಲಿಯೋ ಎಲೆಕ್ಟ್ರಿಕ್ ಪ್ರಕಟಣೆಯಲ್ಲಿ ತಿಳಸಿದೆ.

Mahindra: ಕೆಲವೇ ಸೆಕೆಂಡುಗಳಲ್ಲಿ ಎಲ್ಲಾ ಕಾರುಗಳು ಮಾರಾಟ

ದೇಶದ ಜನಪ್ರಿಯ ಎಸ್‌ಯುವಿ ತಯಾರಕ ಕಂಪನಿಯಾಗಿರುವ ಮಹೀಂದ್ರಾ, ಇಂದು BE 6 ಬ್ಯಾಟ್‌ಮ್ಯಾನ್ ಎಡಿಷನ್ ಅನ್ನು ಮತ್ತೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದು ವಿಶ್ವದ ಮೊದಲ ಬ್ಯಾಟ್‌ಮ್ಯಾನ್ - ಥೀಮ್ SUV ಆಗಿದ್ದು, ಇದು ತನ್ನ ಮೊದಲ ಬಿಡುಗಡೆಯ ನಂತರ ಅಭಿಮಾನಿಗಳು ಮತ್ತು ಗ್ರಾಹಕರಿಂದ ಅಸಾಧಾರಣ ಬೇಡಿಕೆಯನ್ನು ಪಡೆದಿರುವ ಕಾರಾಗಿ ಜನಪ್ರಿಯತೆ ಪಡೆದಿದೆ. ಈ ಹಿಂದೆ ವಾರ್ನರ್ ಬ್ರದರ್ಸ್ ಡಿಸ್ಕವರಿ ಗ್ಲೋಬಲ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಸಹಯೋಗದೊಂದಿಗೆ ಡಿಸೈನ್ ಮಾಡಲಾದ BE 6 ಬ್ಯಾಟ್‌ಮ್ಯಾನ್ ಎಡಿಷನ್ ಬಿಡುಗಡೆಯಾದಾಗ ಕೇವಲ 135 ಸೆಕೆಂಡುಗಳಲ್ಲಿ 999 ಯುನಿಟ್‌ ಕಾರುಗಳು ಮಾರಾಟವಾಗಿದ್ದವು.
Advertisement

Ather: ರೂ.1.05 ಲಕ್ಷ.. 160 Km ರೇಂಜ್.. ಜನಪ್ರಿಯ ಎಥರ್ ರಿಜ್ಟಾ..

ಎಥರ್ ರಿಜ್ಟಾ (Ather Rizta) ಜನಮೆಚ್ಚಿದ ಎಲೆಕ್ಟ್ರಿಕ್ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಇದು ಅಗ್ಗದ ನಿರ್ವಹಣಾ ವೆಚ್ಚ ಹೊಂದಿದ್ದು, ದೀರ್ಘಕಾಲ ಬಾಳಿಕೆ ಬರುತ್ತದೆ ಎಂಬ ನಂಬಿಕೆಯೂ ಗ್ರಾಹಕರಿಗೆ ಬಂದಿದೆ. ನೀವು ದಿನಬಳಕೆಗಾಗಿ ಹೊಚ್ಚ ಹೊಸ ಇ-ಸ್ಕೂಟರ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ 'ರಿಜ್ಟಾ' ಅತ್ಯುತ್ತಮವಾದ ಆಯ್ಕೆಯಾಗಲಿದೆ. ಬನ್ನಿ, ಈ ನೂತನ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಭರ್ಜರಿ ಒಪ್ಪಂದ ಮಾಡಿಕೊಂಡ ಅಶೋಕ್ ಲೇಲ್ಯಾಂಡ್: ಅದೃಷ್ಟ ಬದಲಿಸುವ ಆಫರ್

ಹಿಂದೂಜಾ ಗ್ರೂಪ್‌ನ ಭಾರತದ ಪ್ರಮುಖ ಕಂಪನಿ ಮತ್ತು ವಾಣಿಜ್ಯ ವಾಹನ ತಯಾರಕರಾದ ಅಶೋಕ್ ಲೇಲ್ಯಾಂಡ್, ಇಂದು ಚೆನ್ನೈ ಸೂಪರ್ ಕಿಂಗ್ಸ್ (CSK) ಜೊತೆ ತಮ್ಮ ಅಧಿಕೃತ ಪ್ರಾಯೋಜಕರಾಗಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಘೋಷಿಸಿದೆ. ಅಶೋಕ್ ಲೇಲ್ಯಾಂಡ್ ಲೋಗೋ ಮುಂಬರುವ ಸೀಸನ್‌ನಲ್ಲಿ CSK ನ ಐಕಾನಿಕ್ ಹಳದಿ ಜೆರ್ಸಿಯ ಮುಂಭಾಗದ ಬಲ ಎದೆಯ ಮೇಲೆ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ಈ ಪಾಲುದಾರಿಕೆಯು ಅಶೋಕ್ ಲೇಲ್ಯಾಂಡ್ ಗ್ರೂಪ್‌ನ ಮತ್ತೊಂದು ಕಂಪನಿಯಾದ ಗಲ್ಫ್ ಆಯಿಲ್‌ನೊಂದಿಗಿನ ಯಶಸ್ವಿ ಸಹಯೋಗದ ಮೇಲೆ ನಿರ್ಮಿಸಲ್ಪಟ್ಟ CSK ಮತ್ತು ಹಿಂದೂಜಾ ಗ್ರೂಪ್ ನಡುವಿನ ದೀರ್ಘಕಾಲದ ಸಂಬಂಧವನ್ನು ಮುಂದುವರೆಸಿದೆ.

Karnataka Budget: ಶೀಘ್ರ ವಿಜಯಪುರದಲ್ಲಿ ಏರ್‌ಪೋರ್ಟ್‌ ಶುಭಾರಂಭ..

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah), ತಮ್ಮ 17ನೇ ಬಜೆಟ್‌ನ್ನು ಯಶಸ್ವಿಯಾಗಿ ಮಂಡಿಸಿದ್ದಾರೆ. ಈ ಮೂಲಕ ರಾಜ್ಯದ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ಸಿಎಂ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 2026-27ನೇ ಸಾಲಿನ ರಾಜ್ಯ ಬಜೆಟ್ (Budget) ಗಾತ್ರವು 4.48 ಲಕ್ಷ ಕೋಟಿ ಇದ್ದು, ಸಾರಿಗೆ, ಲೋಕೋಪಯೋಗಿ, ಮೂಲ ಸೌಕರ್ಯ, ಬಂದರು, ಜಲ ಸಾರಿಗೆ ಹಾಗೂ ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ.

Exter: ಪುಟ್ಟ ಫೇಸ್‌ಲಿಫ್ಟ್ ಕಾರು ಬಿಡುಗಡೆಗೆ ಸಜ್ಜು: ಕಮ್ಮಿ ಬೆಲೆ

ಭಾರತದಲ್ಲಿ ಪುಟ್ಟ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಪ್ರಮುಖ ಬ್ರ್ಯಾಂಡ್‌ಗಳು ಹೊಸ ಹ್ಯಾಚ್‌ಬ್ಯಾಕ್‌ಗಳನ್ನು ಪರಿಚಯಿಸಲು ಮುಂದಾಗುತ್ತಿವೆ. ಈಗಾಗಲೇ ಸಬ್-4 ಕಾರುಗಳನ್ನು ಹೊಂದಿರುವ ಬ್ರ್ಯಾಂಡ್‌ಗಳು ಅವುಗಳ ಫೇಸ್‌ಲಿಫ್ಟ್ ಮಾಡಲ್‌ಗಳನ್ನು ಪರಿಚಯಿಸಲು ಸಜ್ಜಾಗುತ್ತಿವೆ. ಇತ್ತೀಚೆಗೆ ತುಂಬಾ ಟ್ರೆಂಡಿಂಗ್‌ನಲ್ಲಿರುವ ಹ್ಯುಂಡೈ ಎಕ್ಸ್ಟರ್ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಫೆಸ್‌ಲಿಫ್ಟ್ ಪಡೆದು ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಈಗಾಗಲೇ ರೋಡ್‌ ಟೆಸ್ಟಿಂಗ್ ಜೋರಾಗಿ ನಡೆಯುತ್ತಿದ್ದು, ಹಲವು ಬಾರಿ ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಮುಂಬರಲಿರುವ ಹ್ಯುಂಡೈ ಎಕ್ಸ್ಟರ್ (Hyundai Exter) ಕಾರಿನ ಮೇಲೆ ಏನೆಲ್ಲಾ ನಿರೀಕ್ಷೆಗಳಿವೆ ನೋಡೋಣ.
Advertisement

Honda: ಯುಗಾದಿಗೆ ಹೊಸ ಕಾರುಗಳನ್ನು ಖರೀದಿಸಬಹುದು..

ಹೋಂಡಾ ಕಾರ್ಸ್ ಇಂಡಿಯಾ (Honda Cars India) ನಂಬಿಕಾರ್ಹ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅಮೇಜ್, ಎಲಿವೇಟ್ ಹಾಗೂ ಸಿಟಿ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವುಗಳ ಖರೀದಿ ಮೇಲೆ ಈ 2026ರ ಮಾರ್ಚ್ ತಿಂಗಳು ದೊಡ್ಡ ಮಟ್ಟದಲ್ಲಿ ರಿಯಾಯಿತಿ ಪ್ರಯೋಜನಗಳನ್ನು ಘೋಷಣೆ ಮಾಡಿದೆ. ಯುಗಾದಿ ಹಬ್ಬಕ್ಕೆ ಹೊಚ್ಚ ಹೊಸ ಕಾರನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದವರಿಗೆ ಹೆಚ್ಚಿನ ಪ್ರಯೋಜನಗಳು ಲಭ್ಯವಾಗಲಿದೆ.