Bajaj: ನಿನ್ನೆ ಬಿಡುಗಡೆ.. 89,910 ರೂಪಾಯಿ, ಹೊಸ ಬಜಾಜ್ ಪಲ್ಸರ್..
ಆಟೋಮೊಬೈಲ್ಸ್
- 9 month, 15 days ago
2026ರ ಹೊಸ ಬಜಾಜ್ ಪಲ್ಸರ್ 125 (Bajaj Pulsar 125) ಮೋಟಾರ್ಸೈಕಲ್ ಮಂಗಳವಾರ ಬಿಡುಗಡೆಗೊಂಡಿದೆ. ರೂ.89,910 ರಿಂದ ರೂ.92,046 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಸಿಂಗಲ್ ಸೀಟ್ ಹಾಗೂ ಸ್ಪ್ಲಿಟ್ ಸೀಟ್ ಎಂಬ ರೂಪಾಂತರಗಳೊಂದಿಗೂ ದೊರೆಯುತ್ತದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಬ್ಲ್ಯಾಕ್ ಗ್ರೇ, ಬ್ಲ್ಯಾಕ್ ರೇಸಿಂಗ್ ರೆಡ್, ಬ್ಲ್ಯಾಕ್ ಸಯಾನ್ ಬ್ಲ್ಯೂ ಹಾಗೂ ರೇಸಿಂಗ್ ರೆಡ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. 165 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,320 ಮಿ.ಮೀ ವೀಲ್ಬೇಸ್ನ್ನು ಒಳಗೊಂಡಿದೆ.