VinFast: ಭಾರತೀಯರಿಗೆ ಬೇಕಾಗಿರೋದು ಇಷ್ಟೇನಾ? 7-ಸೀಟರ್ ಕೊಡಲು ರೆಡಿ

ವಿಯೆಟ್ನಾಂ ಮೂಲದ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ ವಿನ್‌ಫಾಸ್ಟ್ (VinFast), ಭಾರತದಲ್ಲಿ ತನ್ನ ಹೊಸ ಮಾಡಲ್‌ಗಳಾದ ವಿನ್‌ಫಾಸ್ಟ್ VF6 ಮತ್ತು VF7 ಕಾರುಗಳನ್ನು ಭರ್ಜರಿಯಾಗಿ ಮಾರಾಟ ಮಾಡುತ್ತಿದೆ. ದೇಶದಲ್ಲಿ ಈ ಕಾರುಗಳಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಇದೀಗ ಕಂಪನಿಯ ಸಿಇಒ 'ತಪನ್ ಘೋಷ್' ಹೊಸ ಮಾಡಲ್‌ಗಳ ಬಿಡುಗಡೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವಿನ್‌ಫಾಸ್ಟ್ ಇಂಡಿಯಾ ಈ ವರ್ಷ ದೇಶದಲ್ಲಿ ಮೂರು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ, ಅವುಗಳ ಮಾರಾಟ ಮೂಲಸೌಕರ್ಯವನ್ನು ದ್ವಿಗುಣಗೊಳಿಸಲು ಯೋಜಿಸುತ್ತಿದೆ ಎಂದು ಸಿಇಒ ತಪನ್ ಘೋಷ್ ತಿಳಿಸಿದ್ದಾರೆ. ಮುಂಬರಲಿರುವ ಹೊಸ ಕಾರುಗಳನ್ನು ಪ್ರೀಮಿಯಂ ಆಗಿ ವಿನ್ಯಾಸಗೊಳಿಸಲಾಗಿದ್ದು, ಬೆಲೆ ಪ್ರಜ್ಞೆಯ ಭಾರತೀಯ ಗ್ರಾಹಕರಿಗೆ ಬಲವಾದ ಮೌಲ್ಯವನ್ನು ನೀಡುವ ಗುರಿಯನ್ನು ಹೊಂದಿದ್ದೇವೆ. "ನಾವು ಮೊದಲು 7-ಸೀಟರ್ MPV ಅನ್ನು ಬಿಡುಗಡೆ ಮಾಡುವ ಮೂಲಕ ಪ್ರಾರಂಭಿಸುತ್ತೇವೆ. ಇದು ಕುಟುಂಬ ಮತ್ತು ವಾಣಿಜ್ಯ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾದ ಪ್ರೀಮಿಯಂ ಎಲೆಕ್ಟ್ರಿಕ್ ವಿದ್ಯುತ್ MPV ಆಗಿದೆ" ಎಂದು ಘೋಷ್ ಹೇಳಿದ್ದಾರೆ.

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನಿಗೆ ಸಿಕ್ತು ಜನಪ್ರಿಯ ಮಾರುತಿ..

ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 12ಕ್ಕೆ ಭಾನುವಾರ ಅದ್ದೂರಿ ತೆರೆ ಬಿದ್ದಿದೆ. ಗಿಲ್ಲಿ ನಟ (Gilli Nata) ಜಯಶಾಲಿಯಾಗಿದ್ದಾರೆ. ರಕ್ಷಿತಾ ಮೊದಲ ರನ್ನರ್ ಅಪ್ ಆಗಿದ್ದು, ಅಶ್ವಿನಿ ಗೌಡ ಎರಡನೇ ರನ್ನರ್ ಅಪ್ ಆಗಿದ್ದಾರೆ. ಗಿಲ್ಲಿಗೆ ಬಿಗ್ ಬಾಸ್ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ನಗದು ಲಭಿಸಿದೆ. ಇದರೊಂದಿಗೆ ಜನಪ್ರಿಯ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಕಾರು ಸಹ ಬಹುಮಾನವಾಗಿ ಸಿಕ್ಕಿದೆ.

Tata Punch Facelift: ಬೇರೆ ಕಂಪನಿಗಳು ಕನಸಲ್ಲೂ ಊಹಿಸಿರಲಿಲ್ಲ

ಭಾರತದಲ್ಲಿ ಸಣ್ಣ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬಹುತೇಕ ಎಲ್ಲಾ ಬ್ರಾಂಡ್‌ಗಳು ಒಂದೊಂದು ಮೈಕ್ರೋ ಎಸ್‌ಯುವಿಗಳನ್ನು ಮರಾಟ ಮಾಡುತ್ತಿವೆ. ಈ ವಿಭಾಗದಲ್ಲಿ ಮೊದಲಿನಿಂದಲ್ಲೂ ಟಾಟಾ ಪಂಚ್ ಉತ್ತಮ ಮಾರಾಟ ಕಾಣುವ ಎಸ್‌ಯುವಿಯಾಗಿ ಹೆಸರು ಮಾಡಿದೆ. ಆದರೆ ಪ್ರತಿಸ್ಪರ್ಧಿಗಳಿಂದ ಪೈಪೋಟಿ ಹೆಚ್ಚಾಗಿರುವ ಕಾರಣ ಟಾಟಾ ಮೋಟಾರ್ಸ್ ಈ ಬಾರಿ ಪಂಚ್‌ಗೆ ಹೊಸ ಫೇಸ್‌ಲಿಫ್ಟ್ (Tata Punch Facelift) ಪರಿಚಯಿಸಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ 2026ರ ಟಾಟಾ ಪಂಚ್ ಫೇಸ್‌ಲಿಫ್ಟ್ ಹಳೆಯ ಮಾಡೆಲ್‌ಗಿಂತ ಗಮನಾರ್ಹವಾದ ಸ್ಟೈಲಿಂಗ್, ಫೀಚರ್ಸ್ ಮತ್ತು ಪವರ್‌ಟ್ರೇನ್ ನವೀಕರಣಗಳನ್ನು ಪಡೆದುಕೊಂಡಿದೆ. ಬನ್ನಿ ಎರಡನ್ನು ಹೋಲಿಕೆ ಮಾಡೋಣ.

Hero: 275 Km ಓಡುತ್ತೆ? ಸದ್ದಿಲ್ಲದೇ ಹೀರೋದಿಂದ ಹೊಸ ಎಲೆಕ್ಟ್ರಿಕ್..

ಹೀರೋ ಮೋಟೋಕಾರ್ಪ್‌ನ ಎಲೆಕ್ಟ್ರಿಕ್ ಮೊಬಿಲಿಟಿ ಬ್ರ್ಯಾಂಡ್ ಆಗಿ 'ವಿಡಾ' ಮನೆ ಮಾತಾಗಿದೆ. ದೇಶೀಯವಾಗಿ ವಿಡಾ ವಿ2 ಹಾಗೂ ವಿಡಾ ವಿಎಕ್ಸ್2 ಹೆಸರಿನ ಇ-ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಇವು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿವೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ 'ಹೀರೋ' ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾರುಕಟ್ಟೆಯನ್ನು ಪ್ರವೇಶಿಸಲು ಸರ್ವ ಸನ್ನದವಾಗಿದೆ. ಭಾರತದಲ್ಲಿ ಮುಂಬರುವ 'ವಿಡಾ ವಿಎಕ್ಸ್‌ಝಡ್' ಇ-ಬೈಕ್ ವಿನ್ಯಾಸಕ್ಕಾಗಿ ಪೇಟೆಂಟ್‌ನ್ನು ಪಡೆದಿದೆ.
Advertisement

ಜನ ಸಾಲು ಕಟ್ಟುವರು.. ರೂ.7 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ 5..

ಭಾರತದ ಕಾರು ಮಾರುಕಟ್ಟೆಯಲ್ಲಿ ಎಸ್‌ಯುವಿಗಳಿಗೆ ಭಾರೀ ಬೇಡಿಕೆಯಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿವೆ. ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ನೀವು ರೂ.7 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಹೊಚ್ಚ ಹೊಸ ಎಸ್‌ಯುವಿಯೊಂದನ್ನು ಖರೀದಿಯಲು ಆಲೋಚಿಸಿದ್ದೀರಾ.. ಹಾಗಾದರೆ, ಟಾಟಾ ಪಂಚ್, ಮಾರುತಿ ಸುಜುಕಿ ಫ್ರಾಂಕ್ಸ್, ಹ್ಯುಂಡೈ ಎಕ್ಸ್‌ಟರ್, ನಿಸ್ಸಾನ್ ಮ್ಯಾಗ್ನೈಟ್ ಹಾಗೂ ರೆನಾಲ್ಟ್ ಕೈಗರ್‌ಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ, ಇವುಗಳ ದರವೆಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Maruti Victoris: ಭಾರತದ ಎಸ್‌ಯುವಿಗೆ ವಿದೇಶದಲ್ಲೂ ಫುಲ್‌ ಡಿಮ್ಯಾಂಡ್

ಮಾರುತಿ ಸುಜುಕಿ (Maruti Suzuki), ಇತ್ತೀಚೆಗೆ ಭಾರತದಲ್ಲಿ ತನ್ನ ಹೊಸ ವಿಕ್ಟೋರಿಸ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದ್ದು, ಉತ್ತಮ ಬೇಡಿಕೆಯೊಂದಿಗೆ ಮಾರಾಟದಲ್ಲಿ ಮುನ್ನುಗ್ಗುತ್ತಿದೆ. ಇದೀಗ ಕಂಪನಿಯು ರಫ್ತು ಕೂಡ ಆರಂಭಿಸಿದ್ದು, ಮುಂದ್ರಾ ಮತ್ತು ಪಿಪಾವಾವ್ ಬಂದರುಗಳಿಂದ 450 ಕ್ಕೂ ಹೆಚ್ಚು ಯುನಿಟ್‌ ಕಾರುಗಳನ್ನು ರವಾನಿಸಿದೆ. ಈ ಕಾರನ್ನು 'ಅಕ್ರಾಸ್' ಹೆಸರಿನಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದು ಎಂದು ಸುಜುಕಿ ತಿಳಿಸಿದೆ. ಈ 450 ಕ್ಕೂ ಹೆಚ್ಚು ಕಾರುಗಳನ್ನು ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ.

TVS: ಬಡವರ ಬಂಡಿಯಿದು.. 76,000ಕ್ಕೆ ಸಿಗುತ್ತೆ.. 100 ರೂಪಾಯಿ..

ಟಿವಿಎಸ್ ಜುಪಿಟರ್ 110 (TVS Jupiter 110) ಪ್ರಮುಖ ಸ್ಕೂಟರ್ ಎಂದೇ ಹೆಸರುವಾಗಿದೆ. ಇದು ದಿನಬಳಕೆಗೆಗೂ ಹೆಚ್ಚು ಸೂಕ್ತವಾಗಿದ್ದು, ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಮೆಚ್ಚಿಕೊಂಡಿದ್ದಾರೆ. ನೀವು ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಜುಪಿಟರ್ 110' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ನೂತನ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

TATA: 600 Km ಓಡುತ್ತೆ! ಅತಿ ಶೀಘ್ರದಲ್ಲೇ ಈ ಹೊಸ ಟಾಟಾ ಕಾರು..

ಟಾಟಾ ಸಫಾರಿ (Tata Safari) ಜನಪ್ರಿಯ ಫ್ಯಾಮಿಲಿ ಎಸ್‌ಯುವಿ ಎಂದೇ ಹೆಸರುವಾಸಿಯಾಗಿದ್ದು, ಪೆಟ್ರೋಲ್/ಡೀಸೆಲ್ ಎಂಜಿನ್ ಆಯ್ಕೆಯಲ್ಲಿಯೂ ಸಿಗುತ್ತದೆ. ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಳೆದ ತಿಂಗಳು (ಡಿಸೆಂಬರ್ - 2025) 1,446 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಡಿಸೆಂಬರ್‌ನಲ್ಲಿ 1,385 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಿಸಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 4% ಪ್ರಗತಿಯಾಗಿದೆ. ಸದ್ಯ 'ಟಾಟಾ' ಇದೇ ಕಾರನ್ನು ಎಲೆಕ್ಟ್ರಿಕ್ ರೂಪದಲ್ಲೂ ಬಿಡುಗಡೆಗೊಳಿಸಲಿದೆ ಎಂದು ವರದಿಯಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Advertisement

Vande Bharat Sleeper: ವಿಮಾನಕ್ಕೆ ಕಮ್ಮಿಯಿಲ್ಲ.. ದೇಶದ ಮೊದಲ..

ಭಾರತದಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್‌ (Vande Bharat Express) ಸೆಮಿ ಹೈಸ್ಪೀಡ್ ರೈಲಾಗಿ ಯಶಸ್ವಿಯಾಗಿ ಸಂಚಾರ ನಡೆಸುತ್ತಿದೆ. ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2019ರ ಫೆಬ್ರವರಿ 15ರಂದು ನವದೆಹಲಿ ಹಾಗೂ ವಾರಣಾಸಿ ನಡುವೆ ಈ ರೈಲಿನ ಮೊದಲ ಸಂಚಾರ ಶುರುವಾಗಿತ್ತು. ಇಂದು ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ದೇಶದ ಪ್ರಪ್ರಥಮ ವಂದೇ ಭಾರತ್ ಸ್ಲೀಪರ್‌ (Vande Bharat Sleeper) ರೈಲಿಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಭವ್ (Ashwini Vaishnaw) ಕೂಡ ಹಾಜರಿದ್ದರು.

Nissan: ಪ್ರೀಮಿಯಂ ಬೈಕ್ ದರಕ್ಕೆ ಹೊಸ ಎಂಪಿವಿ ಬರುತ್ತೆ! 7-ಸೀಟರ್..

ನಿಸ್ಸಾನ್ ಇಂಡಿಯಾ (Nissan India) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯವಾಗಿ 'ಮ್ಯಾಗ್ನೈಟ್' ಎಸ್‌ಯುವಿಯನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇದು ರೂ.5.62 ಲಕ್ಷದಿಂದ ರೂ.10.76 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಸದ್ಯ, ಕಂಪನಿಯು ಮಧ್ಯಮ ವರ್ಗದ ಜನರಿಗೆ ಮತ್ತಷ್ಟು ಹತ್ತಿರವಾಗಲು ಮುಂದಾಗಿದ್ದು, ಹೊಚ್ಚ ಹೊಸ ಕಾರೊಂದನ್ನು ಮಾರಾಟಕ್ಕೆ ತರಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಬಡವರ ಪ್ರೀಮಿಯಂ ಕಾರಿದು.. 5.35 ಲಕ್ಷ ರೂಪಾಯಿ, 20.89 Km ಮೈಲೇಜ್..

ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ಈ ಕಾರಿಗೆ ಫುಲ್ ಡಿಮ್ಯಾಂಡ್ ಇದ್ದು, ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಡಿಸೆಂಬರ್ - 2025) 'ಇಗ್ನಿಸ್' ಭಾರೀ ಸಂಖ್ಯೆ ಮಾರಾಟಗೊಂಡಿದೆ. ಒಟ್ಟು 1,910 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 749 ಯುನಿಟ್‌ಗಳನ್ನು ಮಾರಲಾಗಿದೆ. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 155% ಬೆಳವಣಿಗೆಯಾಗಿದೆ.

Chetak C25 Review: ಹೊಸ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

Bajaj Chetak C25 is a practical, reliable scooter with classic design & modern tech. Ideal for students & delivery workers. Read our review. | ಬಜಾಜ್ ಚೇತಕ್ ಸಿ25 ಒಂದು ಕ್ಲಾಸಿಕ್ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನದೊಂದಿಗೆ ಪ್ರಾಯೋಗಿಕ ಮತ್ತು ವಿಶ್ವಾಸಾರ್ಹ ಸ್ಕೂಟರ್ ಆಗಿದೆ. ವಿದ್ಯಾರ್ಥಿಗಳು ಮತ್ತು ವಿತರಣಾ ಕೆಲಸಗಾರರಿಗೆ ಸೂಕ್ತವಾಗಿದೆ. ನಮ್ಮ ವಿಮರ್ಶೆಯನ್ನು ಓದಿ.
Advertisement

ಹೊಸ ಬಜಾಜ್ ಚೇತಕ್ ಸಿ25 vs ಎಥರ್ ರಿಜ್ಟಾ: ಎರಡು ಅಗ್ಗದ ಸ್ಕೂಟರ್‌..

ಈಚೆಗೆ ನೂತನ ಬಜಾಜ್ ಚೇತಕ್ ಸಿ25 (Bajaj Chetak C25) ಇ-ಸ್ಕೂಟರ್‌ನ್ನು ಮಾರಾಟಕ್ಕೆ ತರಲಾಗಿದೆ. ಇದಕ್ಕೆ ಎಥರ್ ರಿಜ್ಟಾ (Ather Rizta) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚು ಅತ್ಯಾಧುನಿಕವಾಗಿದ್ದು, ನಾನಾ ಬಗೆಯ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿವೆ. ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿವೆ. ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ. ನಾವಿಲ್ಲಿ ಇವೆರೆಡು ಸ್ಕೂಟರ್‌ಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ.

Tata: 70,000 ಆರ್ಡರ್ ಬಾಚಿಕೊಂಡಿದ್ದ ಟಾಟಾ.. ಹೊಸ ಕಾರಿನ ವಿತರಣೆ..

ಕಳೆದ ವರ್ಷದ ನವೆಂಬರ್ 25 ರಂದು ಹೊಸ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿತ್ತು. ಡಿಸೆಂಬರ್ 16 ರಂದು ಬುಕ್ಕಿಂಗ್‌ನ್ನು ಶುರು ಮಾಡಲಾಗಿತ್ತು. ಮೊದಲ ದಿನವೇ 70,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಆರ್ಡರ್‌ನ್ನು ಪಡೆದುಕೊಲ್ಲುವಲ್ಲಿಯೂ ಯಶಸ್ವಿಯಾಗಿತ್ತು. ನಿನ್ನೆಯಿಂದ (ಜನವರಿ 15) ಕಂಪನಿಯು ದೇಶಾದ್ಯಂತ 'ಸಿಯೆರಾ' ವಿತರಣೆಯನ್ನು ಪ್ರಾರಂಭಿಸಿದೆ. ಗ್ರಾಹಕರು ಕೂಡ ಸಂಭ್ರಮ - ಸಡಗರದಿಂದಲೇ ನೂತನ ಕಾರನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ.

ಓಲಾ 4680 ಭಾರತ್ ಸೆಲ್‌ಗಳೊಂದಿಗೆ ಶಕ್ತಿ 9.1kWh ಗೆ ಪ್ರಮಾಣೀಕರಣ

ಓಲಾ ಎಲೆಕ್ಟ್ರಿಕ್ ಇಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಪ್ರಮಾಣೀಕರಣ ಮತ್ತು 4680 ಭಾರತ್ ಸೆಲ್‌ನಿಂದ ಚಾಲಿತವಾದ 6kW/9.1 kWh ಬ್ಯಾಟರಿ ಪ್ಯಾಕ್‌ನಲ್ಲಿ ಓಲಾ ಶಕ್ತಿಗಾಗಿ ಪರವಾನಗಿಯನ್ನು ಪಡೆದುಕೊಂಡಿರುವುದಾಗಿ ಘೋಷಿಸಿದೆ. 'ಓಲಾ ಶಕ್ತಿ' ದೇಶದ ಮೊದಲ ವಸತಿ BESS (ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್) ಪರಿಹಾರವಾಗಿದ್ದು, ಇದನ್ನು ಭಾರತದಲ್ಲಿ ವಿನ್ಯಾಸಗೊಳಿಸಿ, ತಯಾರಿಸಲಾಗುತ್ತದೆ. BIS ಪರವಾನಗಿಯನ್ನು IS 16242 (PART1) : 2025/ IEC 62040-1: 2017 ಮಾನದಂಡಕ್ಕೆ ಅನುಗುಣವಾಗಿ ನೀಡಲಾಗಿದೆ, ಇದನ್ನು BIS ಮಾನ್ಯತೆ ಪಡೆದ ಪರೀಕ್ಷಾ ಪ್ರಯೋಗಾಲಯವು ಪರೀಕ್ಷಿಸಿದೆ ಎಂದು ಓಲಾ ಪ್ರಕಟಣೆಯಲ್ಲಿ ತಿಳಿಸಿದೆ.

ಬೈಕ್‌ನಂತೆ 33 ಕಿ.ಮೀ ವರೆಗೆ ಮೈಲೇಜ್: ರೂ.10 ಲಕ್ಷದೊಳಗೆ ಸಿಗುವ..

ಭಾರತದ ವಾಹನ ಮಾರುಕಟ್ಟೆಯಲ್ಲಿ 'ಸಿಎನ್‌ಜಿ' ಕಾರುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಇವು ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿವೆ. ಗ್ರಾಹಕರು ಕೂಡ ಮುಗಿಬಿದ್ದ ಕೊಂಡುಕೊಳ್ಳುತ್ತಿದ್ದಾರೆ. ನೀವು ರೂ.10 ಲಕ್ಷಕ್ಕಿಂತ ಅಗ್ಗದ ಬೆಲೆಗೆ ಹೊಚ್ಚ ಹೊಸ ಸಿಎನ್‌ಜಿ ಕಾರೊಂದನ್ನು ಖರೀದಿಸಲು ಆಲೋಚಿದ್ದೀರಾ.. ಹಾಗಾದರೆ, ಟಾಟಾ ಪಂಚ್, ಮಾರುತಿ ಸುಜುಕಿ ಸ್ವಿಫ್ಟ್, ಹ್ಯುಂಡೈ ಎಕ್ಸ್‌ಟರ್‌, ಟಾಟಾ ನೆಕ್ಸಾನ್ ಹಾಗೂ ಮಾರುತಿ ಸುಜುಕಿ ಫ್ರಾಂಕ್ಸ್ ಮಾಡೆಲ್‌ಗಳು ಬೆಸ್ಟ್ ಚಾಯ್ಸ್ ಆಗಲಿವೆ.
Advertisement

Kia: ಸದ್ದಿಲ್ಲದೆ ಸೈರೋಸ್ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದ ಕಿಯಾ

ಅತಿ ಕಡಿಮೆ ಸಮಯದಲ್ಲೇ ಭಾರತದ ಪ್ರಮುಖ ಕಾರು ತಯಾರಕ ಕಂಪನಿಯಾಗಿ ಗುರ್ತಿಸಿಕೊಂಡಿರುವ 'ಕಿಯಾ ಇಂಡಿಯಾ', ತನ್ನ ಹೊಸದಾಗಿ ಬಿಡುಗಡೆ ಮಾಡಿದ್ದ ಸೈರೋಸ್ ಎಸ್‌ಯುವಿಗೆ ಹೊಸ ವೇರಿಯೆಂಟ್‌ನ್ನು ಪರಿಚಯಿಸಿದೆ. ಈ ಹೊಸ ವೇರಿಯೆಂಟ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು, ಶ್ರೇಣಿಯಾದ್ಯಂತ ಒಟ್ಟಾರೆ ಮೌಲ್ಯ ಪ್ರತಿಪಾದನೆಯನ್ನು ನಿಗದಿಪಡಿಸಿರುವುದಾಗಿ ಕಿಯಾ ತಿಳಿಸಿದೆ. ಪೆಟ್ರೋಲ್ ಪವರ್‌ಟ್ರೇನ್ ಬೆಲೆ ರೂ.9,89,000 (ಎಕ್ಸ್ - ಶೋರೂಂ) ಮತ್ತು ಡೀಸೆಲ್ ಬೆಲೆಯು ರೂ.10,63,900 (ಎಕ್ಸ್ - ಶೋರೂಂ) ಇದೆ. ಹೊಸ ವೇರಿಯೆಂಟ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Honda Activa: ಮಧ್ಯಮ ವರ್ಗದವರಿಗೆ ಪರ್ಫೆಕ್ಟ್ ಸ್ಕೂಟರ್‌ಯಿದು..

ಹೋಂಡಾ ಆಕ್ಟಿವಾ 110 (Honda Activa 110) ಪ್ರಮುಖ ಸ್ಕೂಟರ್ ಆಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲೂ ಸುಲಭವಾಗಿ ಬಳಕೆ ಮಾಡಬಹುದು. ನೀವು ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ಆಕ್ಟಿವಾ 110' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಈ ಸ್ಕೂಟರ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

Maruti: ಬರೀ 7ಲಕ್ಷಕ್ಕೆ ಸಿಕ್ಕರೆ ಬಿಡ್ತಾರಾ? ಡೀಲರ್‌ಗಳ ಫೆವರೆಟ್

ವಿಶ್ವದ ಅತಿದೊಡ್ಡ ಕಾರು ಉದ್ಯಮಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವು ಒಂದಾಗಿದ್ದು, ಟಾಪ್-5 ದೇಶಗಳಲ್ಲಿ ಸ್ಥಾನ ದಕ್ಕಿಸಿಕೊಂಡಿದೆ. ನಮ್ಮ ದೇಶದಲ್ಲಿ ಕಾರು ಮಾರಾಟದಿಂದ ಹಿಡಿದು ಮಾರಾಟದ ನಂತರ ಉತ್ತಮ ಸರ್ವಿಸ್ ಒದಗಿಸುವವರೆಗೆ ಮಾರುತಿ ಸುಜುಕಿ ನಂ.1 ಬ್ರಾಂಡ್ ಆಗಿ ಮುಂದುವರಿಯುತ್ತಿದೆ. ಅಗ್ಗದ ಕಾರುಗಳಿಂದ ಹಿಡಿದು ಪ್ರೀಮಿಯಂ ಕಾರುಗಳವರೆಗೆ ದೇಶದ ಪ್ರತಿಯೊಬ್ಬ ಕಾರು ಖರೀದಿದಾರರ ಅದ್ಯತೆಗಳನ್ನು ಪೂರೈಸುತ್ತಿದೆ. ಮುಖ್ಯವಾಗಿ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಕಾರಿನ ಬಗ್ಗೆ ಹೇಳಬೇಕು. ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಡಿಸೈನ್, ಆಕರ್ಷಕ ಫೀಚರ್ಸ ಹಾಗೂ ಅತ್ಯುತ್ತಮ ಮೈಲೇಜ್ ನೀಡುವ ಕಾರು ಇದಾಗಿದೆ.

Tata: 5.59 ಲಕ್ಷ ರೂಪಾಯಿ.. 2026ರ ನೂತನ ಟಾಟಾ ಪಂಚ್ ಕಾರಿನ..

ಈಚೆಗೆ 2026ರ ಹೊಸ ಟಾಟಾ ಪಂಚ್ ಫೇಸ್‌ಲಿಫ್ಟ್ (Tata Punch Facelift) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿದೆ. ಇದು ರೂ.5.59 ಲಕ್ಷದಿಂದ ರೂ.9.29 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದ್ದು, ಎಲ್ಲ ವರ್ಗದ ಗ್ರಾಹಕರಿಗೂ ಸುಲಭವಾಗಿ ಕೈಗೆಟುಕುತ್ತದೆ. ನೀವು ನೂತನ ಕಾರನೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಪಂಚ್' ಬೆಸ್ಟ್ ಚಾಯ್ಸ್ ಆಗಲಿದೆ. ನಾವಿಲ್ಲಿ ಈ ಎಸ್‌ಯುವಿಯ ಆನ್-ರೋಡ್ ದರ (On-Road Price) ಹಾಗೂ ಇಎಂಐ (Emi) ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.
Advertisement

Tesla: ಅಮೆರಿಕಾ ಬ್ರಾಂಡ್‌ಗೆ ಮನೆ ದಾರಿ ತೋರಿಸಿದ ಭಾರತ

ಭಾರತದಲ್ಲಿ ತನ್ನ ಕಾರುಗಳನ್ನು ಪರಿಚಯಿಸಲು ತುಂಬಾ ಸಾಹಸ ಮಾಡಿದ್ದ ಅಮೆರಿಕ ಮೂಲದ ಎಲೆಕ್ಟ್ರಿಕ್ ವಾಹನ (ಇವಿ) ತಯಾರಕ ಟೆಸ್ಲಾ (Tesla), ಕೊನೆಗೂ ಭಾರತದಲ್ಲಿ ಯಶಸ್ವಿಯಾಗಿ ತನ್ನ ಕಾರನ್ನು ಬಿಡುಗಡೆ ಮಾಡಿದೆ. ಆದರೆ ಯಾರೂ ಖರೀದಿಸಲು ಆಸಕ್ತಿ ತೋರಿಸುತ್ತಿಲ್ಲ. ಆಟೋ ಉದ್ಯಮದ ದತ್ತಾಂಶಗಳ ಪ್ರಕಾರ, 2025 ರಲ್ಲಿ ಭಾರತದಲ್ಲಿ ತನ್ನ ಏಕೈಕ ಎಲೆಕ್ಟ್ರಿಕ್ ವಾಹನವಾದ 'ಮಾಡೆಲ್ ವೈ' (Model Y) ಎಸ್‌ಯುವಿಯ ಕೇವಲ 225 ಯುನಿಟ್‌ ಕಾರುಗಳನ್ನು ಮಾತ್ರ ಮಾರಾಟ ಮಾಡಲಾಗಿದೆ.

TATA: ಸದ್ದಿಲ್ಲದೇ ಮತ್ತೊಂದು ಹೊಸ ಕಾರಿನ ಬಿಡುಗಡೆಗೆ ಟಾಟಾ ತಯಾರಿ..

2026 'ಟಾಟಾ ಮೋಟಾರ್ಸ್'ಗೆ ಮಹತ್ವದ ವರ್ಷವಾಗಿದೆ. ಈ ಜನವರಿಯಲ್ಲಿ ಸಫಾರಿ ಪೆಟ್ರೋಲ್, ಹ್ಯಾರಿಯರ್ ಪೆಟ್ರೋಲ್ ಹಾಗೂ ಪಂಚ್ ಫೇಸ್‌ಲಿಫ್ಟ್ ಎಸ್‌ಯುವಿಗಳನ್ನು ಮಾರಾಟಕ್ಕೆ ತಂದಿದೆ. ಇದೀಗ, ಮತ್ತೊಂದು ಹೊಸ ಕಾರಿನ ಬಿಡುಗಡೆಗೆ 'ಟಾಟಾ' ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಅತಿ ಶೀಘ್ರದಲ್ಲೇ ಹೊಚ್ಚ ಹೊಸ 'ಸಿಯೆರಾ ಇವಿ'ಯೂ ಬಿಡುಗಡೆಗೊಳ್ಳಲಿದೆ. ನೂತನ ಎಲೆಕ್ಟ್ರಿಕ್ ಎಸ್‌ಯುವಿ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ.

ಉತ್ತಮ ಬುಕಿಂಗ್ಸ್ ಗಳಿಸುತ್ತಿರುವ ಮಹೀಂದ್ರಾ XEV 9S ವಿಶೇಷತೆಗಳು

ಮಹೀಂದ್ರಾ ಕಂಪನಿಯು ಇತ್ತೀಚೆಗೆ XEV 9S ಎಂಬ ಎಲೆಕ್ಟ್ರಿಕ್ 7-ಸೀಟರ್ SUV ಅನ್ನು ಬಿಡುಗಡೆ ಮಾಡಿತ್ತು. ಕಂಪನಿಯ ಪ್ರಕಾರ ಇದು ಭಾರತದ ಮೊದಲ ಸಾಮೂಹಿಕ-ಮಾರುಕಟ್ಟೆ ಎಲೆಕ್ಟ್ರಿಕ್ ಮೂರು-ಸಾಲು SUV ಆಗಿದೆ. ಮೂರು ಸಾಲುಗಳಲ್ಲಿ ಏಳು ಪ್ರಯಾಣಿಕರಿಗೆ ಕೂರಲು ಆಸನಗಳನ್ನು ನೀಡುತ್ತದೆ. ದೊಡ್ಡ ಕುಟುಂಬಕ್ಕೆ ಸಾಕಷ್ಟು ಸ್ಥಳಾವಕಾಶದೊಂದಿಗೆ ಪೂರ್ಣ-ಗಾತ್ರದ SUV ಅನುಭವವನ್ನು ಹುಡುಕುತ್ತಿರುವ ಖರೀದಿದಾರರನ್ನು ಇದು ಆಕರ್ಷಿಸುತ್ತದೆ. ಉತ್ತಮ ರಸ್ತೆ ಉಪಸ್ಥಿತಿ, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯ ಬಗ್ಗೆ ನೀವು ತಿಳಿಯಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.

Toyota: ಈ ಟೊಯೊಟಾ ಕಾರು ಗ್ರಾಹಕರ ಫೆವರೇಟ್‌.. 6.39 ಲಕ್ಷ ರೂಪಾಯಿ..

ಟೊಯೊಟಾ ಗ್ಲಾನ್ಜಾ (Toyota Glanza) ಜನಪ್ರಿಯ ಹ್ಯಾಚ್‌ಬ್ಯಾಕ್‌ ಎಂದೇ ಹೆಸರುವಾಸಿಯಾಗಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿಸುತ್ತಿದ್ದಾರೆ. ಕಳೆದ ತಿಂಗಳು (ಡಿಸೆಂಬರ್ - 2025) 'ಗ್ಲಾನ್ಜಾ' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 6,451 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 3,487 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 85% ಬೆಳವಣಿಗೆಯಾಗಿದೆ.
Advertisement

ಕ್ಯಾರೆನ್ಸ್ ಕ್ಲಾವಿಸ್ ಲೈನ್‌ಅಪ್‌ಗೆ ಹೊಸ ಟ್ರಿಮ್ ಬಿಡುಗಡೆ ಮಾಡಿದ ಕಿಯ

ದೇಶದ ಪ್ರಮುಖ ವಾಹನ ತಯಾರಕರಲ್ಲಿ ಒಂದಾದ ಕಿಯಾ (Kia) ಇಂಡಿಯಾ, ಇಂದು ತನ್ನ ಇಂಧನ ಚಾಲಿತ ಕ್ಯಾರೆನ್ಸ್ ಕ್ಲಾವಿಸ್ (ICE)ಗಾಗಿ ಹೊಸ HTE(EX) ಟ್ರಿಮ್ ಪರಿಚಯಿಸಿದೆ. G1.5 ಪೆಟ್ರೋಲ್ ಬೆಲೆ ರೂ.12,54,900 (ಎಕ್ಸ್-ಶೋರೂಂ), G1.5 ಟರ್ಬೊ-ಪೆಟ್ರೋಲ್ ಬೆಲೆ ರೂ.13,41,900 (ಎಕ್ಸ್-ಶೋರೂಂ) ಮತ್ತು D1.5 ಡೀಸೆಲ್ ಬೆಲೆ ರೂ.14,52,900 (ಎಕ್ಸ್-ಶೋರೂಂ) ಇದೆ. ಹೊಸ ಟ್ರಿಮ್ ಪವರ್‌ಟ್ರೇನ್‌ಗಳಾದ್ಯಂತ ಬಲವಾದ ಮೌಲ್ಯವನ್ನು ನೀಡುತ್ತದೆ. ವ್ಯಾಪಕ ಗ್ರಾಹಕರ ಪ್ರತಿಕ್ರಿಯೆ ಮತ್ತು ವಿಕಸನಗೊಳ್ಳುತ್ತಿರುವ ಮಾರುಕಟ್ಟೆ ಆದ್ಯತೆಗಳಿಗೆ ಪ್ರತಿಕ್ರಿಯೆಯಾಗಿ ಈ ಟ್ರಿಮ್ ಅನ್ನು ಅಭಿವೃದ್ಧಿಪಡಿಸಲಾಗಿದೆ.