ವಂದೇ ಭಾರತ್ ಸ್ಲೀಪರ್: ಪರೀಕ್ಷೆ ಜೋರು... 180 ಕಿ.ಮೀ. ವೇಗ

ಕೋಟಾ-ನಾಗ್ಡಾ ವಿಭಾಗದಲ್ಲಿ ನಡೆದ ಪ್ರಾಯೋಗಿಕ ಪರೀಕ್ಷೆಗಳ ಸಮಯದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು 180 ಕಿ.ಮೀ. ವೇಗದಲ್ಲಿ ಚಲಿಸುತ್ತಿರುವುದನ್ನು ತೋರಿಸುವ ಆಕರ್ಷಕ ವೀಡಿಯೊವನ್ನು ರೈಲ್ವೇ ಸಚಿವೆ ಅಶ್ವಿನಿ ವೈಷ್ಣವ್ X (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ರೈಲಿನೊಳಗೆ ಸೆರೆಹಿಡಿಯಲಾದ ದೃಶ್ಯಗಳಲ್ಲಿ ಗಂಟೆಗೆ 182 ಕಿ.ಮೀ. ವೇಗದಲ್ಲಿ ಚಲಿಸುತ್ತಿರುವುದನ್ನು ತೋರಿಸಲಾಗಿದೆ, ಜೊತೆಗೆ ನೀರಿನ ಗ್ಲಾಸ್‌ಗಳು ನೀರನ್ನು ಚಲ್ಲದೆ ಸ್ಥಿರವಾಗಿರುವುದು ರೈಲಿನ ಹೈಲೆಟ್ ಆಗಿದೆ. ರೈಲ್ವೆ ಸುರಕ್ಷತಾ ಆಯುಕ್ತರ ಮೇಲ್ವಿಚಾರಣೆಯಲ್ಲಿ ನಡೆಸಲಾದ ಈ ಪರೀಕ್ಷೆಯು, ರೈಲಿನ ಮುಂದುವರಿದ ಎಂಜಿನಿಯರಿಂಗ್ ಅನ್ನು ಎತ್ತಿ ತೋರಿಸುತ್ತದೆ.

ರೂ.50,000ಕ್ಕಿಂತ ಕಮ್ಮಿ ಸಂಬಳ ಇದ್ಯಾ, ಮೊದಲ ಬಾರಿಗೆ ಹೊಸ ಕಾರು..

ಹೊಸ ಕಾರು ಖರೀದಿಸಬೇಕೆಂಬುದು ಹಲವರ ಬಹುದಿನಗಳ ಕನಸಾಗಿರುತ್ತದೆ. ನಿಮ್ಮ ಸಂಬಳ 50,000 ರೂಪಾಯಿಗಿಂತ ಕಡಿಮೆ ಇದ್ದು, ಮೊದಲ ಬಾರಿಗೆ ನೂತನ ಕಾರೊಂದನ್ನು ಮನೆಗೆ ತರಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಮಾರುತಿ ಸುಜುಕಿ ಎಸ್-ಪ್ರೆಸ್ಸೊ, ಮಾರುತಿ ಸುಜುಕಿ ಸ್ವಿಫ್ಟ್, ರೆನಾಲ್ಟ್ ಟ್ರೈಬರ್, ಟಾಟಾ ಪಂಚ್ ಹಾಗೂ ಟೊಯೊಟಾ ಗ್ಲಾನ್ಜಾಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

Bajaj: ಈಚೆಗೆ ಬಿಡುಗಡೆ.. ಹೊಸ ಬಜಾಜ್ ಪಲ್ಸರ್ ಬೈಕ್ ಆನ್-ರೋಡ್..

ಇತ್ತೀಚೆಗೆ ಹೊಚ್ಚ ಹೊಸ ಬಜಾಜ್ ಪಲ್ಸರ್ 150 (Bajaj Pulsar 150) ಬೈಕ್‌ನ್ನು ಬಿಡುಗಡೆಗೊಳಿಸಲಾಯಿತು. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ರೂ.1.08 ಲಕ್ಷದಿಂದ ರೂ.1.15 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ನೀವು ಹೊಚ್ಚ ಹೊಸ ಮೋಟಾರ್‌ಸೈಕಲ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ 'ಪಲ್ಸರ್ 150' ಅತ್ಯುತ್ತಮವಾದ ಆಯ್ಕೆಯಾಗಲಿದೆ. ಬನ್ನಿ.. ಈ ಬೈಕ್‌ನ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಆಯ್ಕೆಯ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಮೊದಲ LNG ಇಂಧನ ಚಾಲಿತ ಕ್ರಯೋಜೆನಿಕ್ ಟ್ಯಾಂಕರ್‌ಗೆ ಹಸಿರು ನಿಶಾನೆ

ಭಾರತದ ಪ್ರಮುಖ ಕೈಗಾರಿಕಾ, ಎಲೆಕ್ಟ್ರಾನಿಕ್ ಮತ್ತು ವಿಶೇಷ ಅನಿಲ ನಾಯಕರಾದ ಐನಾಕ್ಸ್ ಏರ್ ಪ್ರಾಡಕ್ಟ್ಸ್ (ಐನಾಕ್ಸ್ಎಪಿ), ವಾಣಿಜ್ಯ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿಪಿಐಐಟಿ) ಭಾಗವಾಗಿರುವ ಪೆಟ್ರೋಲಿಯಂ ಮತ್ತು ಸುರಕ್ಷತಾ ಸಂಸ್ಥೆ (ಪಿಇಎಸ್ಒ) ಅನುಮೋದಿಸಿದ ಭಾರತದ ಮೊದಲ ಎಲ್‌ಎನ್‌ಜಿ-ಇಂಧನ ಚಾಲಿತ ಕ್ರಯೋಜೆನಿಕ್ ಟ್ಯಾಂಕರ್ ಅನ್ನು ಉದ್ಘಾಟಿಸಿದೆ. ಪಿಇಎಸ್ಒ ವಡೋದರಾ ವೃತ್ತದ ಸ್ಫೋಟಕಗಳ ಜಂಟಿ ಮುಖ್ಯ ನಿಯಂತ್ರಕರಾದ (Joint Chief Controller of Explosives) ಪಿ.ಸೀನಿರಾಜ್ ಅವರು ಟ್ಯಾಂಕರ್ ಅನ್ನು ಉದ್ಘಾಟಿಸಿದರು.
Advertisement

2025ರಲ್ಲಿ ಮಾರುಕಟ್ಟೆ ಶೇಕ್ ಮಾಡಿದ 5 ಪ್ರಮುಖ ಬೈಕ್‌ಗಳಿವು..

ಭಾರತವು ಅತಿದೊಡ್ಡ ವಾಹನ ಮಾರುಕಟ್ಟೆಯನ್ನು ಹೊಂದಿದೆ. ಈ 2025 ದ್ವಿಚಕ್ರ ವಾಹನ ತಯಾರಕ ಕಂಪನಿಗಳಿಗೆ ಮಹತ್ವದ ವರ್ಷವಿದ್ದು, ಹಲವು ಬೈಕ್‌ಗಳು ಅದ್ದೂರಿಯಾಗಿ ಬಿಡುಗಡೆಗೊಂಡವು. ವಿಶೇಷವಾಗಿ ಹೋಂಡಾ ಶೈನ್ 100 ಡಿಎಕ್ಸ್, ಬಜಾಜ್ ಪಲ್ಸರ್ 150, ಹೋಂಡಾ ಸಿಸಿ125 ಹಾರ್ನೆಟ್, ಯಮಹಾ ಎಕ್ಸ್ಎಸ್ಆರ್ 155 ಹಾಗೂ ಹೀರೋ ಗ್ಲಾಮರ್ ಎಕ್ಸ್ 125ಗಳನ್ನು ಮಾರಾಟಕ್ಕೆ ತರಲಾಗಿತು. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಮಾರುಕಟ್ಟೆ ವಶಪಡಿಸಿಕೊಳ್ಳಲು ಬರುತ್ತಿದೆ ಹೊಸ 2026 ರೆನಾಲ್ಟ್ ಡಸ್ಟರ್

ರೆನಾಲ್ಟ್ ಹೊಸ ನಾಲ್ಕನೇ ತಲೆಮಾರಿನ ಡಸ್ಟರ್ ಅನ್ನು ಭಾರತದಲ್ಲಿ ಜನವರಿ 26, 2026 ರಂದು ಅನಾವರಣಗೊಳಿಸುವುದಾಗಿ ದೃಢಪಡಿಸಿದೆ. ಇದು 2022 ರಲ್ಲಿ ಸ್ಥಗಿತಗೊಳಿಸಿದ ನಂತರ ಐಕಾನಿಕ್ SUV ಯ ಪುನರಾಗಮನವಾಗಿದೆ. CMF-B LS ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಇದು, ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಕಾಂಪ್ಯಾಕ್ಟ್ SUV ಗಳಿಗೆ ಪ್ರತಿಸ್ಪರ್ಧಿಯಾಗಿ ಆಧುನಿಕ ವೈಶಿಷ್ಟ್ಯಗಳೊಂದಿಗೆ ದೃಢವಾದ ವಿನ್ಯಾಸದೊಂದಿಗೆ ಈ ಬಾರಿ ಎಂಟ್ರಿಕೊಡಲು ಸಜ್ಜಾಗುತ್ತಿದೆ. ಶೀಘ್ರದಲ್ಲೆ ಬಿಡುಗಡೆಯಾಗಲಿರುವ ಈ ಹೊಸ ಎಸ್‌ಯುವಿ ಕುರಿತ ಪ್ರಮುಖ ವಿಶೇಷತೆಗಳು ಇಲ್ಲಿವೆ.

kia: ಶುಭ ಶುಕ್ರವಾರದಂದು ಹೊಸ ಕಿಯಾ ಕಾರು ಬಿಡುಗಡೆ..

ಹೊಸ ತಲೆಮಾರಿನ ಕಿಯಾ ಸೆಲ್ಟೋಸ್ (Kia Seltos) ಎಸ್‌ಯುವಿ, ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ಕಾರಿನ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಜನವರಿ 2ರಂದು (ಶುಕ್ರವಾರ) ನೂತನ 'ಸೆಲ್ಟೋಸ್'ನ್ನು ಅದ್ದೂರಿಯಾಗಿಯೂ ಮಾರಾಟಕ್ಕೆ ತರಲಾಗುತ್ತದೆ. ಈಚೆಗೆ ಹೈದರಾಬಾದ್‌ನಲ್ಲಿ ಜರುಗಿದ ಸಮಾರಂಭದಲ್ಲಿ ಇದೇ ಕಾರನ್ನು ಪರಿಚಯಿಸಲಾಗಿತ್ತು. ಅಲ್ಲಿ ಬೆಲೆ ಹೊರತುಪಡಿಸಿ, ಉಳಿದೆಲ್ಲ ವಿವರಗಳನ್ನು ಬಹಿರಂಗಪಡಿಸಲಾಯಿತು.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹೀಂದ್ರಾ ಹೊಸ ಎಸ್‌ಯುವಿ

ಆಗಸ್ಟ್ 2025 ರಲ್ಲಿ ಅನಾವರಣಗೊಂಡ ಮಹೀಂದ್ರಾದ ಫ್ರೀಡಂ_ಎನ್‌ಯು (Freedom_NU) ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ 4 - ಮೀಟರ್‌ಗಿಂತ ಕಡಿಮೆ ಇರುವ ಕಾನ್ಸೆಪ್ಟ್ ಮಾಡಲ್ ಮಹೀಂದ್ರಾ ವಿಷನ್.ಎಸ್ (Mahindra Vision.S) ಎಸ್‌ಯುವಿ, ಭಾರತೀಯ ರಸ್ತೆಗಳಲ್ಲಿ ಪರೀಕ್ಷಿಸಲ್ಪಡುತ್ತಿರುವುದು ಕಂಡುಬಂದಿದೆ. 2027 ರ ಆರಂಭದಲ್ಲಿ ಬಿಡುಗಡೆಯಾಗುವ ಗುರಿಯೊಂದಿಗೆ ಉತ್ಪಾದನೆಗೆ ಸಿದ್ಧಗೊಳ್ಳುತ್ತಿದೆ, ಇದು ಶೋರೂಂಗಳನ್ನು ತಲುಪುತ್ತಿರುವ ನಾಲ್ಕು ಕಾನ್ಸೆಪ್ಟ್‌ ಮಾಡಲ್‌ಗಳಲ್ಲಿ (ವಿಷನ್.ಎಸ್, ವಿಷನ್.ಟಿ, ವಿಷನ್.ಎಕ್ಸ್, ವಿಷನ್.ಎಸ್‌ಎಕ್ಸ್‌ಟಿ) ಮೊದಲನೆಯದಾಗಿದೆ. ಈ ಮಾಡಲ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.
Advertisement

Tata: 7-ಸೀಟರ್.. ಅತಿ ಶೀಘ್ರದಲ್ಲೇ ಗಟ್ಟಿಮುಟ್ಟಾದ ಟಾಟಾ ಸಫಾರಿ..

ಟಾಟಾ ಸಫಾರಿ ಪೆಟ್ರೋಲ್ (Tata Safari Petrol) ಎಸ್‌ಯುವಿ, ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಅತಿ ಶೀಘ್ರದಲ್ಲೇ ಈ ಕಾರು ಮಾರಾಟಕ್ಕೂ ಬರಲಿದೆ. ರೂ.16 ಲಕ್ಷದಿಂದ ರೂ.23.13 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಉತ್ತಮವಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗ‌ಳು, 'ಸಫಾರಿ' ಬ್ಯಾಡ್ಜಿಂಗ್, ಫಾಗ್ ಲೈಟ್‌ಗಳು ಎಲ್ಇಡಿ ಟೈಲ್‌ ಲ್ಯಾಂಪ್‌ಗಳನ್ನು ಹೊಂದಿದೆ. 205 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,741 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ.

ಭಾರತ್ ಸೆಲ್ ಚಾಲಿತ ರೋಡ್‌ಸ್ಟರ್ X+ ಬೈಕ್‌ಗೆ ಸರ್ಕಾರಿ ಪ್ರಮಾಣೀಕರಣ

ಓಲಾ ಎಲೆಕ್ಟ್ರಿಕ್ (Ola Electric) ಇಂದು ತನ್ನ ಪ್ರಮುಖ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಆಗಿರುವ 'ರೋಡ್‌ಸ್ಟರ್ X+' (9.1 kWh ಬ್ಯಾಟರಿ), ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 4680 ಭಾರತ್ ಸೆಲ್ ಬ್ಯಾಟರಿ ಪ್ಯಾಕ್‌ ಅನ್ನು ಒಳಗೊಂಡಿದೆ. ಇದನ್ನು 1989 ರ ಕೇಂದ್ರ ಮೋಟಾರ್ ವಾಹನ ನಿಯಮಗಳ (CMVR) ಅಡಿಯಲ್ಲಿ ಸರ್ಕಾರಿ ಪರೀಕ್ಷಾ ಸಂಸ್ಥೆಯಾದ ಮಾನೇಸರ್‌ನ ಇಂಟರ್ ‌ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (iCAT) ಅನುಮೋದಿಸಿದೆ ಎಂದು ಓಲಾ ಎಲೆಕ್ಟ್ರಿಕ್ ಘೋಷಿಸಿದೆ. ಈ ಪ್ರಮಾಣೀಕರಣದೊಂದಿಗೆ, ಓಲಾ ಎಲೆಕ್ಟ್ರಿಕ್ ಈಗ ರೋಡ್‌ಸ್ಟರ್ X+ (9.1kWh) ವಿತರಣೆಯನ್ನು ಪ್ರಾರಂಭಿಸುತ್ತದೆ.

ಕಮ್ಮಿ ಸ್ಯಾಲರಿ ಇದ್ರು ಈ ಬೈಕ್ ತೆಗೆದುಕೊಳ್ಳಬಹುದು.. ರೂ.1.11 ಲಕ್ಷ..

ಹೋಂಡಾ ಯುನಿಕಾರ್ನ್ (Honda Unicorn) ಜನಪ್ರಿಯ ಬೈಕ್ ಎಂದೇ ಹೆಸರುವಾಸಿಯಾಗಿದ್ದು, ಕಡಿಮೆ ಸಂಬಳವಿದ್ದರೂ ಸುಲಭವಾಗಿ ಕೊಂಡುಕೊಳ್ಳಬಹುದು. ನೀವು ಡೈಲಿ ಯೂಸ್‌ಗೆ ಹೊಚ್ಚ ಹೊಸ ಮೋಟಾರ್‌ಸೈಕಲ್‌ವೊಂದನ್ನು ಮನೆಗೆ ತರಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ಯೂನಿಕಾರ್ನ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಬೈಕ್‌ನ ಬೆಲೆ ಎಷ್ಟು.. ಹೇಗೆ ಕಾರ್ಯನಿರ್ವಹಿಸುತ್ತದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಹೊಸ ಕವಾಸಕಿ MY26 Z650RS ಬೈಕ್ ಬಿಡುಗಡೆ: ರಗಡ್ ಲುಕ್

ಇಂಡಿಯಾ ಕವಾಸಕಿ ಮೋಟಾರ್ಸ್ ಪ್ರೈ. ಲಿಮಿಟೆಡ್ (ಐಕೆಎಂ) ಹೊಸ MY26 Z650RS ಬೈಕ್ ಬಿಡುಗಡೆ ಮಾಡಿದೆ. ಹೊಸ MY26 Z650RS ಬೈಕ್ ಹೆಚ್ಚು ತೀಕ್ಷ್ಣವಾದ, ಅಗಲವಾದ ಮತ್ತು ಮಸ್ಕುಲರ್ ಕೂಡಿದ ಸುಗೋಮಿ-ಪ್ರೇರಿತ ಡಿಸೈನ್‌ನೊಂದಿಗೆ ಬರುತ್ತದೆ. Z ಸ್ಟೈಲಿಂಗ್, ವರ್ಧಿತ ದಕ್ಷತಾಶಾಸ್ತ್ರ, ಸುಧಾರಿತ ತಂತ್ರಜ್ಞಾನ ಮತ್ತು ಸಾಬೀತಾಗಿರುವ 649cc ಪ್ಯಾರಲೆಲ್-ಟ್ವಿನ್ ಎಂಜಿನ್‌ನೊಂದಿಗೆ ಈ ಬೈಕ್ ಎದ್ದು ಕಾಣುತ್ತದೆ. ಪ್ರತಿಯೊಂದು ಬೀದಿಯನ್ನು ತಮ್ಮ ಆಟದ ಮೈದಾನವನ್ನಾಗಿ ಮಾಡಲು ಬಯಸುವ ಸವಾರರಿಗಾಗಿ MY26 Z650RS ವಿನ್ಯಾಸಗೊಳಿಸಲಾಗಿದೆ ಎಂದು ಕವಾಸಕಿ ಹೇಳಿದೆ.
Advertisement

ಹೊಸ ಕವಾಸಕಿ MY26 ವಲ್ಕನ್ S ಕ್ರೂಸರ್ ಬಿಡುಗಡೆ: ಬೆಲೆ ಕೇಳಿದ್ರೆ ಶಾಕ್

ಇಂಡಿಯಾ ಕವಾಸಕಿ ಮೋಟಾರ್ಸ್ ಪ್ರೈ. ಲಿಮಿಟೆಡ್ (ಐಕೆಎಂ) ಹೊಸ MY26 ವಲ್ಕನ್ ಎಸ್ (MY26 Vulcan S) ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಹೊಸ MY26 ವಲ್ಕನ್ ಎಸ್ ಕ್ರೂಸರ್ ಆಗಿದ್ದು, ಇದು ತನ್ನ ಸ್ಪೋರ್ಟಿ ಲುಕ್, ಹಗುರ ಮತ್ತು ರೈಡರ್-ಕೇಂದ್ರಿತ ಡಿಸೈನ್‌ನೊಂದಿಗೆ ಆಕ್ರಮಣಕಾರಿ ಡಿಸೈನ್ ಹೊಂದಿದೆ. ಇದು 649 ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್‌ನಿಂದ ನಡೆಸಲ್ಪಡುವ ವಲ್ಕನ್ ಎಸ್ ಸ್ಪೋರ್ಟಿ ಪರ್ಫಾಮೆನ್ಸ್ ಮತ್ತು ದೈನಂದಿನ ಬಳಕೆಯ ವಿಶಿಷ್ಟ ಮಿಶ್ರಣವನ್ನು ನೀಡುತ್ತದೆ ಎಂದು ಕವಾಸಕಿ ಕಂಪನಿ ತಿಳಿಸಿದೆ.

ವಿಸ್ತೃತ ಖಚಿತ ಬೈ ಬ್ಯಾಕ್ ಪ್ರೋಗ್ರಾಂ ಘೋಷಿಸಿದ ಎಂಜಿ ಮೋಟಾರ್

ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ಇಂದು ತನ್ನ ಗ್ರಾಹಕರಿಗೆ ಎಲೆಕ್ಟ್ರಿಕ್ ವಾಹನ ಮಾಲೀಕತ್ವವನ್ನು ಸುಲಭ ಮತ್ತು ಸುಗಮಗೊಳಿಸುವ ಗುರಿಯನ್ನು ಹೊಂದಿರುವ ಉಪಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್, ಅಸ್ತಿತ್ವದಲ್ಲಿರುವ 3 ವರ್ಷಗಳಿಂದ 5 ವರ್ಷಗಳವರೆಗೆ ಇವಿಗಳಿಗೆ ಖಚಿತವಾದ ಬೈ ಬ್ಯಾಕ್ ಅನ್ನು ನೀಡುವುದಾಗಿ ಹೇಳಿದೆ. ಈ ಕಾರ್ಯಕ್ರಮವು ನಿರ್ದಿಷ್ಟ ಅವಧಿಗಳ ಕೊನೆಯಲ್ಲಿ ಸ್ಥಿರ ಮರುಮಾರಾಟ ಮೌಲ್ಯವನ್ನು ಖಾತರಿಪಡಿಸುವ ಮೂಲಕ ಇವಿ ಬಳಕೆದಾರರ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಕಂಪನಿ ತಿಳಿಸಿದೆ.

ವರ್ಷ ಮುಗಿಯಲು ಕೇವಲ ಎರಡೇ ದಿನ ಬಾಕಿ: 2025ರಲ್ಲಿ ಯಾವ ಬ್ರಾಂಡ್‌ ನಂ.1

ಭಾರತೀಯ ಕಾರು ಉದ್ಯಮವು ವೇಗವಾಗಿ ಬೆಳೆಯುತ್ತಿದ್ದು, ಸ್ವದೇಶಿ ಬ್ರಾಂಡ್‌ಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಭಾರತದಲ್ಲೂ ಕಾರು ಖರೀದಿಸುವವರ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಹೆಚ್ಚಾಗಿದೆ. ವಾಹನ್ ರಿಜಿಸ್ಟ್ರೇಷನ್ ಡೇಟಾ ಪ್ರಕಾರ, ಡಿಸೆಂಬರ್ ನಾಲ್ಕನೇ ವಾರದವರೆಗೆ ಅಂಕಿಅಂಶಗಳ ಪ್ರಕಾರ 2025 ರಲ್ಲಿ ಸ್ವದೇಶಿ ಬ್ರಾಂಡ್ ಆಗಿರುವ ಮಹೀಂದ್ರಾ 2ನೇ ಸ್ಥಾನ ದಕ್ಕಿಸಿಕೊಂಡು ವರ್ಷವನ್ನು ಮುಗಿಸುತ್ತಿದೆ. ಇದೇ ಮೊದಲ ಬಾರಿಗೆ ಟಾಟಾ ಹಾಗೂ ಹ್ಯುಂಡೈ ಬ್ರಾಂಡ್‌ಗಳನ್ನು ಹಿಂದಿಕ್ಕಿ ಮಹೀಂದ್ರಾ ಮೇಲಕ್ಕೇರಿದೆ ಎಂದು ವರದಿಯಾಗಿದೆ. ಪ್ರತಿ ವರ್ಷದಂತೆ ಮೊದಲ ಸ್ಥಾನದಲ್ಲಿ ಮಾರುತಿ ಸುಜುಕಿ ಇದೆ.

Maruti Suzuki: 26.11 ಕಿ.ಮೀ ಮೈಲೇಜ್ ನೀಡುವ ಬೆಸ್ಟ್ 7-ಸೀಟರ್

ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಭಾರತದಲ್ಲಿ ನಂ.1 7-ಸೀಟರ್ ಎಂಪಿವಿ ಆಗಿದ್ದು, ಬೆಲೆಗೆ ತಕ್ಕ ಮೌಲ್ಯವನ್ನು ನೀಡುವ ಕಾರಾಗಿದೆ. ಈ ಕಾರು ಹೆಚ್ಚಾಗಿ ದೊಡ್ಡ ಕುಟುಂಬಗಳ ಫೇವರೆಟ್ ಆಯ್ಕೆಯಾಗಿದ್ದು, ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ಈ ಎಂಪಿವಿ ಅತಿ ಕಡಿಮೆ ಬೆಲೆಯಲ್ಲಿಯೂ ಲಭ್ಯವಿದ್ದು, ಇದರ ಬೆಲೆಗೆ ತಕ್ಕಂತೆ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. 7 ಆಸನಗಳ ಈ ಕಾರಿನಲ್ಲಿ ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣ ಮಾಡಬಹುದು. ಹೊಸ ಮಾರುತಿ ಎರ್ಟಿಗಾ ಬೆಲೆ, ಫೀಚರ್ಸ್, ಎಂಜಿನ್, ಮೈಲೇಜ್ ಕುರಿತ ಮಾಹಿತಿ ಇಲ್ಲಿದೆ. ಮಾರುತಿ ಎರ್ಟಿಗಾ MPV ಕಾರು ಸಾಕಷ್ಟು ಸ್ಥಳಾವಕಾಶ, ಹಗುರವಾದ ಸ್ಟೀರಿಂಗ್, ಮೂರು-ಸಾಲುಗಳ ಸಂರಚನೆ ಮತ್ತು 550-ಲೀಟರ್ ಬೂಟ್ ಸ್ಥಳಾವಕಾಶದಿಂದಾಗಿ ಜನಪ್ರಿಯತೆ ಗಳಿಸಿದೆ. ಇವೆಲ್ಲವೂ ಲಾಭದಾಯಕ ಆರಂಭಿಕ ಬೆಲೆ ರೂ. 8.80-ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಸಿಗುತ್ತವೆ. ಹೌದು, ಬೇಸ್‌ ವೇರಿಯೆಂಟ್ ಈಗ ಕೇವಲ 8.80 ಲಕ್ಷಕ್ಕೆ (ಎಕ್ಸ್‌ ಶೋರೂಂ) ಸಿಗುತ್ತದೆ. ಟಾಪ್ ವೇರಿಯೆಂಟ್ 12.94 (ಎಕ್ಸ್‌ ಶೋರೂಂ) ಲಕ್ಷ ಬೆಲೆಯಿದೆ.
Advertisement

ಬಡವರ ಬಂಡಿಯಿದು.. ಬಿಸಿ ಜಿಲೇಜಿಯಂತೆ ಸೇಲ್ಸ್! ಈ ಜನಪ್ರಿಯ ಬೈಕ್‌ಗೆ..

ಹೋಂಡಾ ಶೈನ್ 100 (Honda Shine) ನಂಬಿಕಾರ್ಹ ಮೋಟಾರ್‌ಸೈಕಲ್‌ ಆಗಿದ್ದು, ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿಸುತ್ತಿದ್ದಾರೆ. ಅದು ಈ ನವೆಂಬರ್ ತಿಂಗಳಲ್ಲೂ ಮುಂದುವರಿದಿದೆ. ಒಟ್ಟು 1,86,490 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 1,45,530 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 28.15% ಪ್ರಗತಿಯಾಗಿದೆ.

ಕರ್ನಾಟಕಕ್ಕೆ 4 ಪ್ರಶಸ್ತಿಗಳು: ಸಚಿವ ನಿತಿನ್ ಗಡ್ಕರಿ ಮೆಚ್ಚುಗೆ

ನವದೆಹಲಿಯಲ್ಲಿ ಮೋಟಾರಿಂಗ್ ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್ಸ್ - 2025 ನ್ನು ಮೋಟಾರಿಂಗ್ ವರ್ಲ್ಡ್ ಮ್ಯಾಗಜಿನ್ ಆಫ್ ಡೆಲ್ಲಿ ಪ್ರೆಸ್ ಗ್ರೂಪ್ ರವರು ಆಯೋಜಿಸಿದ್ದು, ಈ ಪ್ರಶಸ್ತಿ ಸಮಾರಂಭದ ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಭಾಗವಹಿಸಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಹವಾಮಾನ ನೀತಿ ತಜ್ಞರಿಂದ ಪ್ರಶಸ್ತಿಗಳನ್ನು ಆಯ್ಕೆ ಮಾಡಿದ್ದು, ಪ್ರಶಸ್ತಿ ಸಮಾರಂಭದಲ್ಲಿ ಕರ್ನಾಟಕ ರಾಜ್ಯವು ಒಟ್ಟು ನಾಲ್ಕು (4) ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಶಸ್ತಿಗಳ ವಿವರವು ಕೆಳಕಂಡಂತಿದೆ.

ಹೊಸ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ಬಿಡುಗಡೆಗೆ ಸಜ್ಜು

ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ (Maruti Suzuki Brezza Facelift) ಕಾರನ್ನು ಹೊಸ ಅಪ್‌ಡೇಟ್‌ಗಳೊಂದಿಗೆ 2026 ರ ಆರಂಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. 2026 ರ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ಕಾರು ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿ ವಿಕ್ಟೋರಿಸ್‌ನಂತೆಯೇ ಅಂಡರ್‌ಬಾಡಿ ಸಿಎನ್‌ಜಿ ಟ್ಯಾಂಕ್ ಜೊತೆಗೆ ಹಲವಾರು ವಿನ್ಯಾಸ ಬದಲಾವಣೆಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಮುಂಬರುವ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್‌ನ ನಿರೀಕ್ಷಿತ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಎಂಜಿನ್ ವಿಶೇಷಣಗಳನ್ನು ನೋಡೋಣ ಬನ್ನಿ.

ಜನ ಮನಸೋತಿರುವ 5 ಕಾಂಪ್ಯಾಕ್ಟ್ ಎಸ್‌ಯುವಿಗಳಿವು.. ಕಾಸು ಕೂಡಿಡಿ..

ಮೈಕ್ರೋ ಎಸ್‌ಯುವಿಗಳು ಸಣ್ಣ ಗಾತ್ರದಲ್ಲಿರುತ್ತವೆ. ಇವುಗಳಲ್ಲಿ ದೂರದ ಊರುಗಳಿಗೆ ಪ್ರಯಾಣಿಸುವುದು ಕೊಂಚ ಮಟ್ಟಿಗೆ ಕಷ್ಟ ಸಾಧ್ಯ.. ಪುಲ್-ಸೈಜ್ ಎಸ್‌ಯುವಿಗಳು ಬಹಳಷ್ಟು ದೊಡ್ಡದಾಗಿರುತ್ತವೆ. ಜೊತೆಗೆ ದುಬಾರಿ ಬೆಲೆಯನ್ನು ಹೊಂದಿರುತ್ತವೆ. ಇದರಿಂದಾಗಿ ಹಲವು ಖರೀದಿದಾರರು ಕಾಂಪ್ಯಾಕ್ಟ್ ಎಸ್‌ಯುವಿಗಳ ಮೊರೆ ಹೋಗುತ್ತಾರೆ. ಈ ಕಾರುಗಳು ಸ್ವಲ್ಪ ವಿಶಾಲವಾಗಿರಲಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಓಡಾಟ ನಡೆಸಬಹುದಾಗಿದೆ. ಅದಕ್ಕೆ ತಕ್ಕಂತೆ ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಲಭ್ಯವಾಗಲಿವೆ.
Advertisement

4680 ಭಾರತ್ ಸೆಲ್ ಚಾಲಿತ ವಾಹನಗಳ ಡೆಲಿವರಿ ವೇಗ ಹೆಚ್ಚಿಸಿದ ಓಲಾ

ಓಲಾ ಎಲೆಕ್ಟ್ರಿಕ್ ಇಂದು ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಕರ್ನಾಟಕದಾದ್ಯಂತ ತನ್ನ 4680 ಭಾರತ್ ಸೆಲ್ ಚಾಲಿತ S1 Pro+ (5.2 kWh) ಎಲೆಕ್ಟ್ರಿಕ್ ವಾಹನಗಳ ಡೆಲಿವರಿಯನ್ನು ಘೋಷಿಸಿದೆ. ಕಂಪನಿಯು ಇಂದು ಕೊಯಮತ್ತೂರು, ಕೊಚ್ಚಿ ಮತ್ತು ಹೈದರಾಬಾದ್‌ಗಳಲ್ಲಿ ಡೆಲಿವರಿ ಪ್ರಾರಂಭಿಸಿದೆ, ಜೊತೆಗೆ ಬೆಂಗಳೂರಿನಲ್ಲಿ ನಿರಂತರ ರ್ಯಾಂಪ್-ಅಪ್ ಅನ್ನು ಪ್ರಾರಂಭಿಸಿದೆ. S1 Pro+ (5.2 kWh) ಕಂಪನಿಯು ಸ್ಥಳೀಯವಾಗಿ ತಯಾರಿಸಿದ 4680 ಭಾರತ್ ಸೆಲ್ ಬ್ಯಾಟರಿ ಪ್ಯಾಕ್‌ನಿಂದ ನಡೆಸಲ್ಪಡುವ ಮೊದಲ ವಾಹನವಾಗಿದ್ದು, ಹೆಚ್ಚಿನ ರೇಂಜ್, ಹೆಚ್ಚಿನ ಪರ್ಫಾಮೆನ್ಸ್ ಮತ್ತು ವರ್ಧಿತ ಸುರಕ್ಷತೆಯನ್ನು ನೀಡುತ್ತದೆ.

Bajaj: 1.08 ಲಕ್ಷ ರೂಪಾಯಿ.. ಹೊಸ ಬಜಾಜ್ ಪಲ್ಸರ್‌ಗೆ 3 ಪರ್ಯಾಯ..

ಇತ್ತೀಚೆಗೆ 2026ರ ಬಜಾಜ್ ಪಲ್ಸರ್ 150 (Bajaj Pulsar 150) ಮೋಟಾರ್‌ಸೈಕಲ್‌ನ್ನು ಮಾರಾಟಕ್ಕೆ ತರಲಾಯಿತು. ಇದು ರೂ.1.08 ಲಕ್ಷದಿಂದ ರೂ.1.15 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಸ್ಪಾರ್ಕ್ಲಿ ಬ್ಲ್ಯಾಕ್ ರೆಡ್, ಸ್ಪಾರ್ಕ್ಲಿ ಬ್ಲ್ಯಾಕ್ ಬ್ಲೂ ಮತ್ತು ಸ್ಪಾರ್ಕ್ಲಿ ಬ್ಲ್ಯಾಕ್ ಸಿಲ್ವರ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 165 ಮೀ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,345 ಮಿಮೀ ವೀಲ್‌ಬೇಸ್‌ನ್ನು ಪಡೆದಿದೆ.

ಕಮ್ಮಿ ಬೆಲೆ... ಇತ್ತೀಚೆಗೆ ಬಿಡುಗಡೆಯಾದ ಹೊಸ ಬಜಾಜ್ ಪಲ್ಸರ್ 150

ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ ಬಜಾಜ್ (Bajaj), ನವೀಕರಿಸಿದ ಬಜಾಜ್ ಪಲ್ಸರ್ 2025 ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ ರೂ. 1.09 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಈ ಬೈಕ್ ತನ್ನ ಎದುರಾಳಿಗಳಿಗಿಂತ ತುಸು ಹಿಂದುಳಿದಿದೆ ಎಂಬ ಕಾರಣಕ್ಕೆ ಈ ಬಾರಿ ರಗಡ್ ಗ್ರಾಫಿಕ್‌ ಲುಕ್‌ನೊಂದಿಗೆ ಪರಿಚಯಿಸಲಾಗಿದೆ. ಈ ಬೈಕ್ ವಿನ್ಯಾಸದ ವಿಷಯದಲ್ಲಿ ಕೆಲವು ಪ್ರಮುಖ ಬದಲಾವಣೆಗಳಿಗೆ ಒಳಗಾಗಿದೆ. ಪ್ರಮುಖ ಅಪ್‌ಡೇಟ್‌ಗಳಿಲ್ಲದೆ ಕೇವಲ ಆಧುನೀಕರಿಸುವ ಮೂಲಕ ಅದರ ಮಸ್ಕುಲರ್ ಲುಕ್‌ ಜೊತೆಗೆ ಹೊಸ ನವೀಕರಣಗಳನ್ನು ಪರಿಚಯಿಸಲಾಗಿದೆ. ಹಾಗಾದ್ರೆ ಏನೆಲ್ಲಾ ಬದಲಾಗಿದೆ ಎಂಬುದರ ವಿವರವಾದ ವಿವರ ಇಲ್ಲಿದೆ.

30 ಕಿ.ಮೀಗೂ ಹೆಚ್ಚು ಮೈಲೇಜ್ ನೀಡುವ 5 ಜನಪ್ರಿಯ ಕಾರುಗಳಿವು..

ಹೊಸ ಕಾರು ಖರೀದಿಸುವವರೂ ಮೈಲೇಜ್‌ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಇದರಿಂದಾಗಿ ದೊಡ್ಡ ಮಟ್ಟದಲ್ಲಿ ಹಣ ಉಳಿಸಲು ಸಾಧ್ಯವಾಗಲಿದೆ. ನೀವು ಗರಿಷ್ಠ ಮೈಲೇಜ್ ನೀಡಬಲ್ಲ ಹೊಚ್ಚ ಹೊಸ ಕಾರೊಂದನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ ಮಾರುತಿ ಸುಜುಕಿ ಆಲ್ಟೊ ಕೆ10, ಮಾರುತಿ ಸುಜುಕಿ ಸೆಲೆರಿಯೊ, ಮಾರುತಿ ಸುಜುಕಿ ಸ್ವಿಫ್ಟ್, ಟೊಯೊಟಾ ಗ್ಲಾನ್ಜಾ ಹಾಗೂ ಮಾರುತಿ ಸುಜುಕಿ ಡಿಜೈರ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.
Advertisement

ಕೇವಲ 5.49 ಲಕ್ಷ ಬೆಲೆಯ ಪ್ರೀಮಿಯಂ ಕಾರು... 27.1 ಕಿ.ಮೀ ಮೈಲೇಜ್

ಹುಂಡೈ ಎಕ್ಸ್‌ಟರ್ (Hyundai Exter) ಒಂದು ಸಣ್ಣ ಕ್ರಾಸ್‌ಒವರ್ ಆಗಿದ್ದು, ಹ್ಯಾಚ್‌ಬ್ಯಾಕ್‌ನ ಬೆಲೆಗೆ ಎಸ್‌ಯುವಿಯ ಡಿಸೈನ್ ಒಳಗೊಂಡಿದೆ. ಇದರ ಎತ್ತರದ ಬಾಕ್ಸಿ ವಿನ್ಯಾಸವು ವಿಶಾಲವಾದ ಕ್ಯಾಬಿನ್ ಮತ್ತು ಬೂಟ್ ಸ್ಪೇಸ್ ಅನ್ನು ನೀಡುತ್ತದೆದೆ. 8 - ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ ಮತ್ತು ಸನ್‌ರೂಫ್ ಅನ್ನು ಒಳಗೊಂಡಿರುವುದು ಇದರ ಹೈಲೆಟ್ ಆಗಿದೆ. ಇದರ ಬೆಲೆಯು ರೂ. 5.49 ಲಕ್ಷದಿಂದ ಪ್ರಾರಂಭವಾಗಿ ಟಾಪ್ ಮಾಡೆಲ್ ರೂ. 9.61 ಲಕ್ಷದವರೆಗೆ (ಎಕ್ಸ್‌ ಶೋರೂಂ ಬೆಲೆಗಳು) ಇದೆ.